Author: UllalaVani

Kannada News From Coastal Karnataka

UN NETWORKS ಉಳ್ಳಾಲ:  ವೀರರಾಣಿ ಅಬ್ಬಕ್ಕಳ ಉತ್ಸವ ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದ್ದು ಆ ಮೂಲಕ ನೆಲದ ಇತಿಹಾಸ ಚರಿತ್ರೆಯನ್ನು ಅಬ್ಬಕ್ಕಳ ಬದುಕು ಸಾಹಸ ಆಚಾರ ವಿಚಾರ ಯುವಜನತೆಗೆ ತಿಳಿಸುವ ಪ್ರಯತ್ನ ಹಾಗೂ ಯುವಜನತೆಗೆ ಪ್ರೇರಣೆ ಆಗಲಿದೆ. ಉಳ್ಳಾಲದ ಜನತೆ ಅಬ್ಬಕ್ಕ ಉತ್ಸವ ಬೀಚ್ ನಲ್ಲಿ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದು ಅದರಂತೆ ಉಳ್ಳಾಲ ಮೊಗವೀರಪಟ್ಣದ ಸಮುದ್ರ ಕಿನಾರೆಯಲ್ಲಿ ನಡೆಯುತ್ತಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು. ಜಿಲ್ಲಾಡಳಿತ, ದಕ್ಷಿಣ ಕನ್ನಡ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ವೀರ ರಾಣಿ ಅಬ್ಬಕ್ಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.  ಇತಿಹಾಸ ಓದಿದರೆ ಸಾಲದು ಅದನ್ನು ಅರ್ಥೈಸಿಕೊಳ್ಳಬೇಕು. ಅಬ್ಬಕ್ಕಳಂತೆ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಅಬ್ಬಕ್ಕಳಂತೆ ಧೈರ್ಯವಂತ ಮಕ್ಕಳು ಉಳ್ಳಾಲದಲ್ಲಿ ಹುಟ್ಟಿ ಬರಬೇಕು. ಭಾರತೀಯ ಸಂಸ್ಕೃತಿ ಯಂತೆ ಒಂದೆ ತಾಯಿ ಮಕ್ಕಳಂತೆ ನಾವು ಬದುಕಬೇಕಿದೆ. ವೀರರಾಣಿಯ ನಾಯಕತ್ವ, ಸೌಹಾರ್ದತೆ ನಮಗೆ ಮಾದರಿಯಾಗಲಿ. ಅಬ್ಬಕ್ಕ ಉತ್ಸವ ವೇದಿಕೆ…

Read More

UN NETWORKS ಉಳ್ಳಾಲ : ಉಳ್ಳಾಲದ ಅಬ್ಬಕ್ಕ ಉತ್ಸವ ಸಮಿತಿ ಹಲವು ವರ್ಷಗಳಿಂದ ಆಯೋಜಿಸುತ್ತಾ ಬರುತ್ತಿದ್ದ ಅಬ್ಬಕ್ಕ ಉತ್ಸವ ಹಲವು ಆರೋಪಗಳಿಂದ ಈ ಬಾರಿ ಸಮಿತಿ ಕೈತಪ್ಪಿ ಜಿಲ್ಲಾಡಳಿತ ಆಯೋಜಿಸಿದರೂ, ವೀರರಾಣಿ ಅಬ್ಬಕ್ಕಳ ಹೆಸರಿನಲ್ಲಿ ನಡೆದ ಕಾರ್ಯಕ್ರಮ ಹಿಂದಿನಂತೆಯೇ ಪ್ರೇಕ್ಷಕರಿಲ್ಲದೆ ಕಳೆಗುಂದಿತು. ಆದರೆ ಉಳ್ಳಾಲ ಕಡಲತೀರದಲ್ಲಿ ಆಯೋಜಿಸಿದ್ದ ಬೀಚ್ ಉತ್ಸವಕ್ಕೆ ಜನ ಮುಗಿಬಿದ್ದು ಯಶಸ್ವಿಯಾಗಿ ನಡೆಯಿತು. ಉಳ್ಳಾಲ- ಮೊಗವೀರಪಟ್ನ ಕಡಲತೀರದಲ್ಲಿ ಬೃಹತ್ ಆಗಿ ಸಜ್ಜಾದ ವೇದಿಕೆಯನ್ನು ನಿರ್ಮಿಸಲಾಗಿತ್ತು.  ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ವೀಕ್ಷಿಸಲು  ಅಲ್ಲಲ್ಲಿ ತಡೆಗಳನ್ನು ಅಳವಡಿಸಿ ಕುರ್ಚಿಗಳನ್ನು ಹಾಕಲಾಗಿತ್ತು. ಶನಿವಾರ   ಚಾಲನೆಗೊಂಡ ಅಬ್ಬಕ್ಕ ಉತ್ಸವದ ಮೆರವಣಿಗೆಯಲ್ಲಿ ಜನ ಸೇರಿದ್ದರೂ, ಬಳಿಕ ವೇದಿಕೆಯಲ್ಲಿ ನಡೆದ ಕಾರ್ಯಕ್ರಮ ಪ್ರೇಕ್ಷಕರಿಲ್ಲದೆ ಖಾಲಿ ಕುರ್ಚಿಗಳಿಗೆ ನಡೆಯಿತು. ಸಮುದ್ರ ಸುತ್ತಲೂ ಜನ ಸೇರಿದರೂ ವೇದಿಕೆಯ ಕಾರ್ಯಕ್ರಮವನ್ನು ವೀಕ್ಷಿಸಲು ಪ್ರೇಕ್ಷಕರೇ ಇರಲಿಲ್ಲ. ಭಾನುವಾರ ಬೆಳಗ್ಗೆ ನಡೆದ ಆಟೋಟ ಸ್ಪರ್ಧೆ, ಮೀನು ಹಿಡಿಯುವುದು, ದೋಣಿ ಹಿಡಿಯುವ ಸ್ಪರ್ಧೆಗಳಲ್ಲಿ ಸ್ಪರ್ಧಾಳುಗಳು ಸೇರಿದಂತೆ ಸುಡುಬಿಸಿಲಿನಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ಆದರೆ ಕವಿಗೋಷ್ಠಿ…

Read More

UN NETWORKS ಉಳ್ಳಾಲ: ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿಉಳ್ಳಾಲದಲ್ಲಿ ನಡೆಯುತ್ತಿರುವ ವೀರರಾಣಿ ಅಬ್ಬಕ್ಕ ಉತ್ಸವ-2019ಕ್ಕೆ ಜನಪದ ದಿಬ್ಬಣಕ್ಕೆ ಉಳ್ಳಾಲ ಭಾರತ್ ಪ್ರೌಢಶಾಲಾ ವಠಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ದಿಬ್ಬಣದಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದವು. ಬಳಿಕ ಮಾತನಾಡಿದ ಸಚಿವರು ಅಬ್ಬಕ್ಕ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಬಹುದಿನಗಳಿಂದ ಸಿದ್ಧತೆ ನಡೆಸಿದ್ದು ಉತ್ಸವ ಯಶಸ್ವಿಯಾಗಲು ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.ಜನಪದ ದಿಬ್ಬಣದಲ್ಲಿ ವೀರ ರಾಣಿ ಅಬ್ಬಕ್ಕನ ಟ್ಯಾಬ್ಲೋ ಮತ್ತು ಚೆಂಡೆ, ಕೊಡೆ, ಕೀಲುಕುದುರೆ, ದಫ್, ಕೊರಗರ ಗಜ ಕುಣಿತ, ಹಾಲಕ್ಕಿ ಕುಣಿತ, ವೀರಗಾಸೆ, ಪೂಜಾ ಕುಣಿತ, ಕಂಗೀಲು, ಯಕ್ಷಗಾನ ವೇಷ ಪ್ರದರ್ಶನ ಮೂಲಕ ಮೆರವಣಿಗೆ ಸಾಗಿತು.ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ತಹಶೀಲ್ದಾರ್ ಗುರುಪ್ರಸಾದ್ ನೇತೃತ್ವದಲ್ಲಿ ಸಾಗಿತು. ಮೆರವಣಿಗೆ ಉಳ್ಳಾಲ ಬೀಚ್ ತನಕ ಮುಂದುವರಿಯಿತು. ಇದೇ ಮೊದಲ ಬಾರಿಗೆ ಮೊಗವೀರ ಸಮುದಾಯ…

Read More

UN NETWORKS ಉಳ್ಳಾಲ: ಉಳ್ಳಾಲ:ಸಮುದ್ರಪಾಲಾಗುತ್ತಿದ್ದ ಪ್ರವಾಸಿಗನನ್ನು ಸ್ಥಳೀಯ ಜೀವರಕ್ಷಕ ಸದಸ್ಯರು ರಕ್ಷಿಸಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಭಾನುವಾರ ಸಂಜೆ ವೇಳೆ ನಡೆದಿದೆ. ಬೆಂಗಳೂರು ದೇವನಹಳ್ಳಿ ನಿವಾಸಿ ದಿಲೀಪ್ ಎಂಬವರ ಪುತ್ರ ದೀಪು .ಡಿ (28) ರಕ್ಷಿಸಲ್ಪಟ್ಟ ವರು.ಬೆಂಗಳೂರಿನಿಂದ ಆರು ಮಂದಿಯ ತಂಡ ಭಾನುವಾರ ಮಂಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದರು. ತಂಡ ಸಂಜೆ ಹೊತ್ತಿಗೆ ಸೋಮೇಶ್ವರ ಸಮುದ್ರ ಕಿನಾರೆಗೆ ಬಂದಿಳಿದು, ಸಮುದ್ರ ನೀರಿನಲ್ಲಿ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ಅಲೆಯೊಂದಕ್ಕೆ ಸಿಲುಕಿದ ದೀಪು ಸಮುದ್ರ ಪಾಲಾಗುತ್ತಿದ್ದಂತೆ ಸಮುದ್ರ ತೀರದಲ್ಲೇ ಇದ್ದ ಮೂವರು ಜೀವರಕ್ಷಕರು ಕೂಡಲೇ ಸಮುದ್ರಕ್ಕೆ ಧುಮುಕಿ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಯಲ್ಲಿ ಜೀವರಕ್ಷಕರಾದ ಅಶೋಕ್, ಮೋಹನ್ ಮತ್ತು ಶ್ಯಾಂಸುಂದರ್ ಪಾಲ್ಗೊಂಡಿದ್ದರು.

Read More

UN NETWORKS ಕುರ್ನಾಡು : ಬಂಟ್ವಾಳ ತಾಲೂಕಿನ ಕುರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರ ನಾಲ್ಕು ದಶಕಗಳಿಂದ ಸೇವೆ ನೀಡುತ್ತಿದ್ದು ಕಳೆದ ಸಾಲಿನಲ್ಲಿ ನೂತನ ಕಟ್ಟಡ ಮಂಜೂರಾಗಿದ್ದು ಕಾಮಗಾರಿ ಭರದಿಂದ ಸಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಉದ್ಘಾಟನೆ ಭಾಗ್ಯ ಕಾಣಲಿದ್ದು ಆರೋಗ್ಯ ಕೇಂದ್ರಕ್ಕೆ ಬೇಕಾದ ಪರಿಕರ, ಸಾಧನಗಳ ಖರೀದಿ ಸಿದ್ಧತೆ ನಡೆಯುತ್ತಿದೆ. ಆಶಾದಾಯಕ ಅಂಶವೆಂದರೆ ಇಲ್ಲಿ ನಿತ್ಯವೂ ಕನಿಷ್ಠ ನೂರ ಇಪ್ಪತ್ತು ರೋಗಿಗಳು ಹೊರರೋಗಿಗಳಾಗಿ ಸೇವೆ ಪಡೆದು ಹೋಗುತ್ತಿದ್ದಾರೆ. ಹಾಗಿದ್ದರೂ ಜಿಲ್ಲೆಯ ಇತರ ಆಸ್ಪತ್ರೆಗಳಂತೆ ಇಲ್ಲಿಯೂ ಹಲವು ಹುದ್ದೆಗಳು ಭರ್ತಿಯಾಗಬೇಕಿದ್ದು ಇಲ್ಲಿ ಸೇವೆ ನೀಡುವ ಸಿಬ್ಬಂದಿ ಬಹಳ ಉತ್ತಮ ರೀತಿಯಲ್ಲಿ ರೋಗಿಗಳ ಜೊತೆಗೆ ಸ್ಪಂದಿಸುತ್ತಿರುವುದರಿಂದ ಈ ಆರೋಗ್ಯ ಕೇಂದ್ರದ ವ್ಯಾಪ್ತಿಗೊಳಪಟ್ಟ ನರಿಂಗಾನ, ಕೈರಂಗಳ, ಬಾಳೆಪುಣಿ, ಪಜೀರು, ಕುರ್ನಾಡು, ಸಜಿಪ ಪಡು, ಚೇಳೂರು ಗ್ರಾಮವಾಸಿಗಳು ಇಲ್ಲಿಗೆ ಉತ್ತಮ ಸೇವೆ ಪಡೆಯುವ ನಿರೀಕ್ಷೆಯೊಂದಿಗೆ ಬಂದು ಸೇವೆ ಪಡೆದು ಹೋಗುತ್ತಿದ್ದಾರೆ.ಅತ್ಯುತ್ತಮ ಲ್ಯಾಬ್, ಮದ್ದು ಸಂಗ್ರಹಣೆಗೆ ವ್ಯವಸ್ಥೆ ಇದ್ದು, ಸುಮಾರು ಆರು ವರ್ಷದ ಹಿಂದೆ ಇಲ್ಲಿ 24*7 ಸೇವೆ…

Read More

UN NETWORKS ದೇರಳಕಟ್ಟೆ: ಆಹಾರ ಪದ್ಧತಿಯನ್ನು ಸರಿಯಾಗಿ ಪಾಲಿಸಿದರೆ ಮೂತ್ರಪಿಂಡ ವೈಫಲ್ಯದಂತಹ ಸಮಸ್ಯೆಗಳಿಂದ ಪಾರಾಗಲು ಸಾಧ್ಯ ಎಂದು ಎಂದು ಚೆನ್ನೈಯ ಮದ್ರಾಸ್‌ ಮೆಡಿಕಲ್‌ ಮಿಷನ್‌ನ ಇನ್‌ಸ್ಟಿಟ್ಯೂಟ್‌ ಆಫ್‌ ಕಿಡ್ನಿ ಡಿಸೀಸ್‌ ಯೂರಾಲಾಜಿ ಎಂಡ್‌ ಆರ್ಗನ್‌ ಟ್ರಾನ್ಸ್‌ಪ್ಲಾಂಟೇಶನ್‌ನ ಮುಖ್ಯಸ್ಥ ಪ್ರೊ| ಜಾರ್ಜಿ ಅಬ್ರಾಹಂ ಅಭಿಪ್ರಾಯಪಟ್ಟರು. ನಿಟ್ಟೆ ವಿಶ್ವವಿದ್ಯಾನಿಲಯದ ಸೆಂಟರ್‌ ಫಾರ್‌ ಸೈನ್ಸ್‌ ಎಜುಕೇಶನ್‌ ಎಂಡ್‌ ರಿಸರ್ಚ್‌ ಮತ್ತು ಕೆ.ಎಸ್‌. ಹೆಗ್ಡೆ ಮೆಡಿಕಲ್‌ ಅಕಾಡೆಮಿಯ‌ ಆಶ್ರಯದಲ್ಲಿ ಗುರುವಾರ ಕೆ.ಎಸ್‌. ಹೆಗ್ಡೆ ಮೆಡಿಕಲ್‌ ಆಸ್ಪತ್ರೆಯ ಚಿಂತನಾ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ -2019ರಲ್ಲಿ ವಿಶೇಷ ಉಪಾನ್ಯಾಸ ನೀಡಿದರು.ಮೂತ್ರಪಿಂಡ ವೈಫಲ್ಯವಾದರೆ ದೇಹದ ಬೇರೆ ಬೇರೆ ಅವಯವಗಳಿಗೆ ತೊಂದರೆ ಅಧಿಕವಿದ್ದು ಈ ನಿಟ್ಟಿನಲ್ಲಿ ಆಹಾರ ಕ್ರಮಕ್ಕೆ ಒತ್ತು ನೀಡಿದರೆ ಮೂತ್ರಪಿಂಡದಂತಹ ವೈಫಲ್ಯವನ್ನು ತಡೆಯಬಹುದು. ಮುಖ್ಯವಾಗಿ ಉಪ್ಪಿನಂಶ ಕಡಿಮೆ ಮಾಡುವುದರಿಂದ ಮತ್ತು ಅಧಿಕ ನೀರು ಸೇವನೆಯಿಂದ ಆರೋಗ್ಯವನ್ನು ಕಾಪಾಡಬಹುದು ಎಂದ ಅವರು ಮೂತ್ರಪಿಂಡ ವೈಫಲ್ಯದಂತಹ ವಿಷಯದ ಕುರಿತು ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚು ಒತ್ತು ನೀಡುವ ಕಾರ್ಯ ಮಾಡಬೇಕು…

Read More

UN NETWORKS ಉಳ್ಳಾಲ: ಉಳ್ಳಾಲ ನಗರಸಭೆಯಲ್ಲಿ ಕಾಂಗ್ರೆಸ್ ಸೋಲಿಗೆ ಪ್ರತಿಕಾರವಾಗಿ ಸೋತ ವಾರ್ಡ್‍ಗಳ ಅಭಿವೃದ್ಧಿ ಕಾಮಗಾರಿಯನ್ನು ಬೇರೆಡೆ ವರ್ಗಾಯಿಸುವ ಮೂಲಕ ಸಚಿವ ಯು.ಟಿ. ಖಾದರ್ ಅಭಿವೃದ್ಧಿಯಲ್ಲೂ ರಾಜಕೀಯ ನಡೆಸುತ್ತಿದ್ದು, ಮಂಜೂರಾಗಿರುವ ಕಾಮಗಾರಿಗಳನ್ನು ನಿರ್ದೇಶಿತ ಪ್ರದೇಶಗಳಲ್ಲಿ ನಡೆಸದಿದ್ದಲ್ಲಿ ಉಳ್ಳಾಲ ನಗರಸಭೆಯ ಎದುರು ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಎಚ್ಚರಿಸಿದ್ದಾರೆ. ಉಳ್ಳಾಲ ನಗರಸಭಾ ಕ್ಷೇತ್ರದಲ್ಲಿ ನಗರೊತ್ಥಾನದಿಂದ ಕೆರೆಬೈಲ್ ವಾರ್ಡ್‍ನ ಕೆರೆಬೈಲ್ ಅಜ್ಜನಕಟ್ಟೆಯಿಂದ ಕಲ್ಲಾಪು ಸಂಪರ್ಕ ರಸ್ತೆಯ ಅಭಿವೃದ್ಧಿಗೆಂದುಮೀಸಲಿಟ್ಟಿದ್ದ 60 ಲಕ್ಷ ರೂ. ಅನುದಾನವನ್ನು ನಗರಸಭಾ ವ್ಯಾಪ್ತಿಯ ಮಾಸ್ತಿಕಟ್ಟೆ ಜಂಕ್ಷನ್‍ನಿಂದ ಮುಕ್ಕಚ್ಚೇರಿ ರಸ್ತೆ ಅಭಿವೃದ್ಧಿಗೆ ಕಾಮಗಾರಿ ಬದಲಾವಣೆಯನ್ನು ವಿರೋ„ಸಿ ಶುಕ್ರವಾರ ಬಿಜೆಪಿ ಮತ್ತು ಕೆರೆಬೈಲ್ ನಿವಾಸಿಗಳ ಜಂಟಿಯಾಗಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಕೆರೆಬೈಲ್ ವಾರ್ಡ್‍ನಲ್ಲಿ ಬಿಜೆಪಿ ಸದಸ್ಯ ಆಯ್ಕೆಯಾಗಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಇಲ್ಲಿನ ಕಾಮಗಾರಿಗಳನ್ನು ವರ್ಗಾಹಿಸಲಾಗಿದೆ. ಇದೇ ರೀತಿ ಕಾಂಗ್ರೆಸ್ ಸೋತಿರುವ ಇತರ ವಾರ್ಡ್‍ಗಳ ಕಾಮಗಾರಿಗಳನ್ನು ಬದಲಾಯಿಸಿ ಉತ್ತಮ ಸ್ಥಿತಿಯಲ್ಲಿರುವ ರಸ್ತೆಗೆ ಬದಲಾಯಿಸುವ…

Read More

UN NETWORKS ತಲಪಾಡಿ: ಸರಕಾರಿ ಮಟ್ಟದಲ್ಲಿ ನಡೆದ ಸಭೆಯ ನಿಯಮ ಉಲ್ಲಂಘಿಸಿ ಸರಕಾರಿ ದಾಖಲೆಗಳನ್ನು ಕೇಳಿ ವಾಹನ ಸವಾರರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ ತಲಪಾಡಿ ನಿವಾಸಿಗಳು ಶುಕ್ರವಾರ ತಲಪಾಡಿ ಟೋಲ್‍ಗೇಟ್‍ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗಡಿನಾಡು ರಕ್ಷಣಾ ವೇದಿಕೆಯ ಸಿದ್ದೀಕ್ ತಲಪಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಚಿವರು, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಂಸದರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ಥಳೀಯರಿಗೆ ಟೋಲ್‍ಗೇಟ್‍ನಲ್ಲಿ ವಿನಾಯಿತಿ ನೀಡುವ ಬಗ್ಗೆ ಒಪ್ಪಿಗೆ ಸೂಚಿಸಲಾಗಿತ್ತು. ಅದರಂತೆ ಚುನಾವಣಾ ಗುರುತು ಚೀಟಿ ಅಥವಾ ಆಧಾರ್ ಕಾರ್ಡ್ ಪರಿಗಣಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಟೋಲ್‍ಗೇಟ್‍ನಲ್ಲಿ ವಾಹನ ಪರವಾನಗಿ, ಚಾಲನಾ ಪರವಾನಿಗೆ ಕೇಳಿ ಕಿರುಕುಳ ನೀಡಲಾಗುತ್ತಿದೆ. ಅವೆರಡು ದಾಖಲೆಗಳನ್ನು ಕೇಳುವ ಅಧಿಕಾರ ಇರುವುದು ಸಂಬಂಧಪಟ್ಟ ಇಲಾಖೆಗೆ ಮಾತ್ರ. ನಕಲಿ ಆಧಾರ್ ಕಾರ್ಡ್ ಮತ್ತು ಗುರುತು ಚೀಟಿ ತೋರಿಸಿದರೆ ಠಾಣೆಗೆ ದೂರು ಕೊಡಿ. ಆದರೆ ಮುಂದೆ ಇಂತಹ ಪ್ರಕರಣ ನಡೆದರೆ ಆಗುವ ಅನಾಹುತಗಳಿಗೆ ಟೋಲ್‍ಗೇಟ್ ಅಧಿಕಾರಿಗಳೇ ಕಾರಣ ಎಂದು…

Read More

UN NETWORKS ಉಳ್ಳಾಲ : ಸರ್ಕಾರಕ್ಕೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದರೂ‌ ಕೆಲಸ ವಿಳಂಬವಾಗುತ್ತಿರುವ ಸಂದರ್ಭದಲ್ಲೂ ಸಾರ್ವಜನಿಕರ ಮುಂದಿನ ಬೇಡಿಕೆ ಬಗ್ಗೆ ಮುಂದಾಲೋಚನೆಯಿಂದ ಮುಖ್ಯಮಂತ್ರಿಗಳ ಮನವೊಲಿಸಿ ಉಳ್ಳಾಲ ತಾಲೂಕು ಘೋಷಿಸಿರುವ ಸಚಿವ ಯು.ಟಿ.ಖಾದರ್ ಅವರ ಕಾರ್ಯ ಶ್ಲಾಘನೀಯ ಎಂದು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್‌ ರಶೀದ್ ಅಭಿಪ್ರಾಯಪಟ್ಟರು. ಕೇಂದ್ರ ಜುಮ್ಮಾ ಮಸೀದಿ ಹಾಗೂ ದರ್ಗಾ ಸಮಿತಿಯ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಸಯ್ಯಿದ್ ಮದನಿ ದರ್ಗಾ ಮೂಲಕ ಇತಿಹಾಸದ ಪುಟದಲ್ಲಿರುವ ಉಳ್ಳಾಲದ ಸಮುದ್ರ ಕಿನಾರೆಗಳು ಪ್ರವಾಸೋದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ತಹಸೀಲ್ದಾರ್, ಕಂದಾಯಾಧಿಕಾರಿ ಹಾಗೂ ಸರ್ಕಾರಿ ಮಟ್ಟದ ಅಧಿಕಾರಿಗಳ ಭೇಟಿ ಕಾಲಬುಡದಲ್ಲೇ ಸಿಗಲಿದ್ದು ಮುಖ್ಯಮಂತ್ರಿ, ಸಚಿವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಅದೇ ರೀತಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ, ಒಳಚರಂಡಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಪ್ರಯತ್ನಿಸಬೇಕಾಗಿದೆ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಬಾವ ಮುಹಮ್ಮದ್,…

Read More

UN NETWORKS ಉಳ್ಳಾಲ: ಇಂದು ಮತ್ತು ನಾಳೆ ಉಳ್ಳಾಲದ ಕಡಲ ತೀರದಲ್ಲಿ ನಡೆಯಲಿರುವ ವೀರ ರಾಣಿ ಅಬ್ಬಕ್ಕ ಉತ್ಸವದ ಪ್ರಯುಕ್ತ ಉಳ್ಳಾಲ ಅಬ್ಬಕ್ಕ ವೃತ್ತದಿಂದ ಹಮ್ಮಿಕೊಳ್ಳಲಾದ ಹಾಫ್ ಮ್ಯಾರಥಾನ್ ಗೆ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು. ಪುರುಷರು ತೊಕ್ಕೊಟ್ಟು, ಕುತ್ತಾರು, ಅಂಬ್ಲಮೊಗರು, ಎಲ್ಯಾರುಪದವು, ನ್ಯೂಪಡ್ಪು ಮಾರ್ಗವಾಗಿ ಹಾಗೂ ಮಹಿಳೆಯರು ತೊಕ್ಕೊಟ್ಟು-ಕುತ್ತಾರು, ದೇರಳಕಟ್ಟೆ ಅಸೈಗೋಳಿ, ಗಣೇಶ್ ಮಹಲ್ ಆಗಿ ಸಾಗಿ ಮಂಗಳೂರು ವಿ.ವಿ ಕ್ರೀಡಾಂಗಣದಲ್ಲಿ ಸಮಾಪ್ತಿಗೊಳಿಸಿದರು.

Read More