UN NETWORKS ಮುಡಿಪು : ಮಂಗಳೂರು ವಿಧಾನ ಸಭಾ ಕ್ಷೇತ್ರ ನೂತನ ತಾಲೂಕು ಎಂದು ಘೋಷಣೆ ಆಗಿರುವುದರಿಂದ ಈ ವ್ಯಾಪ್ತಿಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ನಡೆಸಲು ವಿಶಾಲವಾದ ಕ್ರೀಡಾಂಗಣ ಎಲ್ಲೂ ಲಭ್ಯತೆ ಇಲ್ಲದೆ ಇರುವುದರಿಂದ ಕುರ್ನಾಡು ಬಾಳೆಪುಣಿ ಹೃದಯ ಭಾಗದಲ್ಲಿರುವ ಮುಡಿಪಿನ ರಾಜೀವಗಾಂಧಿ ಕ್ರೀಡಾಂಗಣವನ್ನು ತಾಲೂಕು ಕ್ರೀಡಾಂಗಣವಾಗಿ ಉನ್ನತಿಗೇರಿಸಲು ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು. ಶಾಸಕ ಯು.ಟಿ. ಖಾದರ್ ಅವರು ಗ್ರಾಮವಿಕಾಸ ಯೋಜನೆಯಡಿ ಮೀಸಲಿಟ್ಟ 12ಲಕ್ಷ ರೂ. ಹಾಗೂ ಒಟ್ಟು ಸೇರಿಸಿ ಹದಿನೈದು ಲಕ್ಷ ರೂ. ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಅವರು ಜಿಲ್ಲಾ ಪಂಚಾಯಿತಿ ಅನುದಾನ 3ಲಕ್ಷ ರೂ. ಒಟ್ಟು ಹದಿನೈದು ಲಕ್ಷ ರೂ. ಗಳಲ್ಲಿ ನಡೆಯಲಿರುವ ಮುಡಿಪಿನ ರಾಜೀವಗಾಂಧಿ ಕ್ರೀಡಾಂಗಣದ ತಾತ್ಕಾಲಿಕ ಅಭಿವೃದ್ಧಿ ಕಾಮಗಾರಿಗೆ ಅವರು ಮಂಗಳವಾರ ಶಿಲನ್ಯಾಸಗೈದು ಮಾತನಾಡಿದರು.ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕ್ರೀಡಾಂಗಣಕ್ಕೆ ಸೀಮಿತವಾಗಿ ಐದು ಎಕರೆಯಷ್ಟು ಸರಕಾರಿ ಸ್ಥಳ ಎಲ್ಲೂ ಲಭ್ಯ ಇಲ್ಲದಿರುವುದರಿಂದ ಮುಡಿಪಿನ…
Author: UllalaVani
UN NETWORKS ಉಳ್ಳಾಲ: ಚೆಂಬುಗುಡ್ಡೆ ರುದ್ರಭೂಮಿ ಸಮೀಪದ ದಿ.ಶೋಭಾ ಎಂಬವರ ಮನೆಯು ಬೆಂಕಿಗಾಹುತಿಯಾದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಶೋಭ ಅವರ ಪುತ್ರಿ ಅಂಕಿತರವರು ಮನೆಯಲ್ಲಿ ಇರದ ಸಂದರ್ಭದಲ್ಲಿ ಮನೆಗೆ ಬೆಂಕಿ ಹತ್ತಿಕೊಂಡಿದ್ದು, ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಸಿದ್ದರು. ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಅನಾಹುತ ಸಂಭವಿಸರಬಹುದು ಎಂದು ಅಂದಾಜಿಸಲಾಗಿದೆ. ಶೋಭ ಅವರು ಕಳೆದ ಕೆಲವು ವರ್ಷದ ಹಿಂದೆ ನಿಧನರಾಗಿದ್ದು ಇಬ್ಬರು ಪುತ್ರಿಯರು ಈ ಮನೆಯಲ್ಲಿ ವಾಸಿಸುತ್ತಿದ್ದರು. ಕಡುಬಡತನದಲ್ಲಿದ್ದ ಕುಟುಂಬ ಇದೀಗ ಮನೆಯನ್ನೂ ಕಳೆದುಕೊಂಡು ಕಂಗಾಲಾಗಿದ್ದಾರೆ. ನಗರಸಭಾ ಸದಸ್ಯರಾದ ಬಾಝಿಲ್ ಡಿಸೋಜ ಹಾಗೂ ಶಶಿಕಲಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
UN NETWORKS ಮುಡಿಪು : ಇನ್ಪೋಸಿಸ್ ಸೇರಿದಂತೆ ಕೈಗಾರಿಕಾ ವಲಯವನ್ನು ಸಂಪರ್ಕಿಸುವ ಮುಡಿಪು ಜಂಕ್ಷನ್ ಮಾದರಿ ಜಂಕ್ಷನ್ ಆಗಿ ಅಭಿವೃದ್ದಿಗೊಳಿಸಲು ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.ಮುಡಿಪು ಸಾಂಬಾರ್ ತೋಟದಿಂದ ಮುಡಿಪು ಕಾಯರ್ ಗೋಳಿವರೆಗೆ ಇನ್ ಫೋಸಿಸ್ ಹಾಗೂ ಲೋಕೋಪಯೋಗಿ ಇಲಾಖೆ ಜಂಟಿ ಆಶ್ರಯದಲ್ಲಿ ಏಳೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ದ್ವಿಪಥ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಉಳ್ಳಾಲ ತಾಲೂಕು ಆಗಿ ಘೋಷಣೆಯಾದ ಹಿನ್ನಲೆಯಲ್ಲಿ ಮಂಗಳೂರು ಕ್ಷೇತ್ರ ಅಭಿವೃದ್ದಿಗೆ ಇನ್ನಷ್ಟು ಚಾಲನೆ ದೊರಕಿದ್ದು, ಈಗಾಗಲೇ ದೇರಳಕಟ್ಟೆಯಿಂದ ತೊಕ್ಕೊಟ್ಟುವರೆಗೆ 30 ಕೋಟಿ ರೂ. ವೆಚ್ಚದಲ್ಲಿ ರಸ್ತೆ ದ್ವಿಪಥ ಕಾಮಗಾರಿ ಅಭಿವೃದ್ದಿಯಲ್ಲಿದೆ. ಸೋಮೇಶ್ವರ ಮಾಡೂರು ರಸ್ತೆಯಾಗಿ ಮೆಲ್ಕಾರ್ ಸಂಪರ್ಕಿಸುವ ಲಿಂಕ್ ರಸ್ತೆ ಹೆದ್ದಾರಿ ಕಾಮಗಾರಿಯಡಿ ನಡೆಯಲಿದ್ದು, ಈ ರಸ್ತೆಯನ್ನು ಹೊರತುಪಡಿಸಿ ಉಳಿದ ಮುಖ್ಯರಸ್ತೆಗಳನ್ನು ಮೇಲ್ದರ್ಜೆಗೆ ರಿಸುವ ನಿಟ್ಟಿನಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು. ಇನ್ಫೋಸಿಸ್ ಮಾದರಿ ಕಾರ್ಯ : ಯಾವುದೇ ಪ್ರದೇಶದ ಅಭಿವೃದ್ದಿಯಲ್ಲಿ ಖಾಸಗಿ…
UN NETWORKS ತೊಕ್ಕೊಟ್ಟು: ಧಾರ್ಮಿಕ, ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಉಳ್ಳಾಲ ಕ್ಷೇತ್ರಕ್ಕೆ ಅರ್ಹತೆಯ ತಾಲೂಕು ಭಾಗ್ಯವನ್ನು ಒದಗಿಸಿದ ಸಚಿವ ಯು.ಟಿ.ಖಾದರ್ ಅವರನ್ನು ಕ್ಷೇತ್ರದ ಜನತೆ ಅಭಿನಂದಿಸುವುದು ಧರ್ಮ. ಈ ನಿಟ್ಟಿನಲ್ಲಿ ಎಲ್ಲರನ್ನು ಸೇರಿಸಿಕೊಂಡು ಅಸೈಗೋಳಿ ಮೈದಾನದಲ್ಲಿ ಮಾ. 7 ರಂದು ಬೃಹತ್ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಪ್ರಾಂಶುಪಾಲ ರವೀಂದ್ರ ರೈ ಹರೇಕಳ ಹೇಳಿದರು. ತೊಕ್ಕೊಟ್ಟುವಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ತಾಲೂಕಿಗೆ ಅರ್ಹತೆಯ ಜಾಗ ಉಳ್ಳಾಲ ಆಗಿದೆ. ತಾಲೂಕು ಘೋಷಣೆ ಮಾಡುವುದು ಸುಲಭದ ಮಾತಲ್ಲ. ಆದರೆ ಕ್ಷೇತ್ರದ ಶಾಸಕರು ರಸ್ತೆ ಅಭಿವೃದ್ಧಿಯಿಂದ ಹಿಡಿದು ಮೂಲಭೂತ ಸೌಕರ್ಯಗಳನ್ನು ಕ್ಷೇತ್ರದ ಜನಸಾಮಾನ್ಯರಿಗೆ ಒದಗಿಸುವಲ್ಲಿ ಸಫಲರಾಗಿದ್ದಾರೆ. ಹಾಗೆಯೇ ವೈದ್ಯಕೀಯ, ಇಂಜಿನಿಯರಿಂಗ್ ಉನ್ನತ ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಂತಹ ಕ್ಷೇತ್ರ ದೇಶದಲ್ಲೇ ಗುರುತಿಸಲ್ಪಟ್ಟಿದೆ. ಸಚಿವರ ಶ್ರಮದಿಂದ ಇದೀಗ ತಾಲೂಕು ರಚನೆಯ ಘೋಷಣೆಯಾಗಿದೆ. ಇದು ಊರಿಗೆ ಆಗುವಂತಹ ಒಳ್ಳೆಯ ಕೆಲಸ . ಈ ನಿಟ್ಟಿನಲ್ಲಿ ಸಚಿವರಿಗೆ ನಡೆಯುವಂತಹ ಅಭಿನಂದನಾ ಕಾರ್ಯಕ್ರಮದಲ್ಲಿ…
UN NETWORKS ಉಳ್ಳಾಲ: ದೇಶದೆಲ್ಲೆಡೆ ಪ್ರತಿಯೊಂದು ಶಿವನ ದೇಗುಲಗಳಲ್ಲಿ ಶಿವರಾತ್ರಿಯಂದು ಜನರು ಶ್ರದ್ದಾ ಭಕ್ತಿಗಳಲ್ಲಿ ಪಾಲ್ಗೊಳ್ಳುತಿರುವುದರಿಂದ ಆದ್ಯಾತ್ಮದ ಜಾಗೃತಿಯಾದ ಹಾಗೆ, ಶಿವರಾತ್ರಿಗೆ ಜಾಗರಣೆ ಮಾಡುವುದರ ಜೊತೆಯಲ್ಲಿ ದೇಶದ ಕಂಠಕ ದೂರವಾಗಲು ಭಾರತೀಯರು ಜಾಗೃತವಾಗಿರಬೇಕು ಎಂದು ಬಿಜೆಪಿ ಮಂಗಳೂರು ಕ್ಷೇತ್ರಾದ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಭಿಪ್ರಾಯಪಟ್ಟರು. ಅವರು ಕುಂಪಲ ಶ್ರೀ ದುರ್ಗಾ ಪರಮೇಶ್ವರ ಕ್ಷೇತ್ರದ ಶಿವರಾತ್ರಿ ಜಾತ್ರಾ ಮಹೋತ್ಸವ, ಕುಂಪಲ ರಥೋತ್ಸವದ ಮೂರು ದಿನಗಳ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ವಹಿಸಿದ್ದರು. ವಿಶ್ವಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಧಾರ್ಮಿಕ ಉಪನ್ಯಾಸ ನೀಡಿದರು.ಮುಖ್ಯ ಅತಿಥಿಗಳಾಗಿ ಯುವ ಮರಾಠ ದಕ್ಷಿಣ ವಲಯದ ಗೌರವಾಧ್ಯಕ್ಷ ವೆಂಕಟಗಿರೀಶ್, ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಟಾನದ ಅದ್ಯಕ್ಷ ರಾಕೇಶ್ ಬೈಪಾಸ್, ಹಿಂದೂ ಜಾಗರಣ ವೇದಿಕೆ ಪ್ರಖಂಡ ಸಂಚಾಲಕ ಜಯಪ್ರಕಾಶ್ ಕುಂಪಲ, ತೊಕ್ಕೊಟ್ಟು ಹಿಂದೂ ಯುವ ಸೇನಾ ಅದ್ಯಕ್ಷ ದೀಕ್ಷಿತ್ ಪೂಜಾರಿ,…
UN NETWORKS ಪಾತೂರು: ಪಾತೂರು ಶ್ರೀ ಸೂರ್ಯೇಶ್ವರ ದೇಗುಲದಲ್ಲಿ ಶಿವರಾತ್ರಿ ಮಹೋತ್ಸವ, ಸೂರ್ಯೇಶ್ವರ ಕಲಾವೃಂದದ ವಾರ್ಷಿಕೋತ್ಸವ ಸುವರ್ಣ ಸಂಭ್ರಮ, ಸ್ಮರಣ ಸಂಚಿಕೆ ಮುಖಪುಟ ಅನಾವರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸೋಮವಾರ ನಡೆಯಿತು. ಕುಂಟುಕುಡೇಲು ಬ್ರಹ್ಮಶ್ರೀ ರಘುರಾಮ ತಂತ್ರಿಗಳ ನೇತ್ವತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ ಪೂಜಾ ವಿಧಿವಿದಾನಗಳು ನಡೆದವು. ಇದೇ ಸಂದರ್ಭದಲ್ಲಿ ಸೂರ್ಯೇಶ್ವರ ಕಲಾವೃಂದದ ಸುವರ್ಣ ಮಹೋತ್ಸವದ ಅಂಗವಾಗಿ ಧಾರ್ಮಿಕ ಸಭೆ ನಡೆಯಿತು. ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಪಾತೂರು ಸೂರ್ಯೇಶ್ವರ ಮತ್ತು ಬಜಿಲಾಡಿ ಮಹಿಷಮರ್ಧಿನಿ ಕ್ಷೇತ್ರದ ಮೊಕ್ತೇಸರರಾದ ಬಾಕ್ರಬೈಲ್ ಮಂಜುನಾಥ ಶೆಟ್ಟಿ ಅವರು ಉದ್ಘಾಟಿಸಿದರು.ಹಿರಿಯ ಸಾಹಿತಿಗಳಾದ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರು ಸ್ಮರಣ ಸಂಚಿಕೆಯ ಮುಖಪುಟ ಅನಾವರಣಗೊಳಿಸಿ ಮಾತನಾಡಿ, ಸಂಘ ಸಂಸ್ಥೆಗಳು ಹಲವಾರು ಇರುತ್ತವೆ. ಆದರೆ 50 ವರ್ಷ ಪೂರೈಸಿದ ಸಂಘ ಸಂಸ್ಥೆಗಳು ಇರುವುದು ಬಹಳ ಕಡಿಮೆ. ಸೂರ್ಯೇಶ್ವರ ಕಲಾವೃಂದವು 50 ವರ್ಷವನ್ನು ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಸಂಘ ಸಂಸ್ಥೆಗಳ ಅಗತ್ಯತೆ ಇದ್ದು ಧರ್ಮಜಾಗೃತಿಯ ಜೊತೆಗೆ ಸಾಮಾಜಿಕ…
UN NETWORKS ದೇರಳಕಟ್ಟೆ : ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯ ಆರೋಗ್ಯ ರಕ್ಷಣೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿದ್ದು ವಿದ್ಯಾರ್ಥಿಗಳು ದೈಹಿಕವಾಗಿ ಆರೋಗ್ಯವಂತರಾಗಿರಲು ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು. ದೇರಳಕಟ್ಟೆ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ವತಿಯಿಂದ ದಕ್ಷಿಣ ಭಾರತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಅಂತರ್ ಕಾಲೇಜು ಮಟ್ಟದ 9ನೇ ವರ್ಷದ ಕ್ರೀಡಾಕೂಟ “ನಿಟ್ಟೆ ಅಕೊಲೇಡ್ಸ್”-2019ನ್ನು ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿ ಸಭಾಂಗಣದಲ್ಲಿ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಅವಕಾಶ ಹಾಗೂ ಸಮಯ ಸಿಕ್ಕಾಗ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕು. ಈ ವರ್ಷದ ಕ್ರೀಡಾಕೂಟದಲ್ಲಿ 20ತಂಡಗಳು ಭಾಗವಹಿಸುತ್ತಿದೆ. ಗೆಲುವು ಮತ್ತು ಸೋಲು ಕ್ರೀಡೆಯ ಒಂದು ಭಾಗ. ಕೂಟದಲ್ಲಿ ಭಾಗವಹಿಸುವವರು ಕ್ರೀಡಾಸ್ಪೂರ್ತಿ ಹೊಂದಿರುವುದು ಮುಖ್ಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ದೇರಳಕಟ್ಟೆಯ ಎ.ಬಿ. ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ದಂತ ಕಾಲೇಜಿನ ಡೀನ್ ಡಾ.ಪಿ.ಎಸ್. ಪ್ರಕಾಶ್ ಮಾತನಾಡಿ ದಕ್ಷಿಣ ಭಾರತ…
UN NETWORKS ಉಳ್ಳಾಲ: ಹಜ್ ಮತ್ತು ಉಮ್ರಾದಲ್ಲಿ ಹೆಸರುವಾಸಿಯಾದ ಫಾಹೀಮ ಇಂಟರ್ನ್ಯಾಶನಲ್ ಇದರ ದೇರಳಕಟ್ಟೆಯ ಮುಖ್ಯ ಕಚೇರಿಗೆ ಇಂಡಿಯಾ ಗ್ರಾಂಡ್ ಮುಫ್ತಿ ಎ.ಪಿ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್ ಕಾಂದಪುರಂ ಭೇಟಿ ನೀಡಿದರು. ಫಾಹೀಮ ಇಂಟರ್ ನ್ಯಾಶನಲ್ ಸಂಸ್ಥೆ ಯ ನಿರ್ದೇಶಕ ಅಬ್ದುಲ್ ಮೆಹಸೂಕ್, ಅಮೀರ್ ಇಲ್ಯಾಸ್ ಸಖಾಫಿ, ಹಕೀಂ ಡ್ಯಾನಿಸ್, ಹನೀಫ್ ಬದ್ಯಾರ್, ಸುಹೈಲ್ ಎಸ್.ಎಂ ಅಶ್ರಫ್ ಎಚ್.ಎಚ್ ಜಾಸ್ಮೀನ್ ಟ್ರಾವೆಲ್ಸ್ ನ ಮಾಲಕ ಇಸ್ಮಾಯಿಲ್ ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ಕಡಲ ತಟ ಹಾಗೂ ಎತ್ತರದ ಬಂಡೆ ಮೇಲೆ ಇರುವ ಅಪರೂಪದ ದೇವಸ್ಥಾನವಾಗಿರುವ ಪುಣ್ಯಕ್ಷೇತ್ರ ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನಕ್ಕೆ ಈ ಬಾರಿಯ ಮಹಾಶಿವರಾತ್ರಿಗೆ ಭಕ್ತರ ಅಭಿಪ್ರಾಯದಂತೆ ಕಳೆದ ಐವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರ ದರ್ಶನ ಪಡೆದು ಕೃತಾರ್ಥರಾದರು. ಶಿವನ ಆರಾಧನೆಗೆ ಶಿವರಾತ್ರಿ ಪ್ರಾಶಸ್ತ್ಯ ಸಮಯವೂ ಆಗಿರುವುದರಿಂದ ಪಾಪಕರ್ಮಗಳನ್ನು ತೊಳೆದುಕೊಳ್ಳುವ ಸಲುವಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದರ್ಶನ ಪಡೆಯುವುದು ವಾಡಿಕೆ. ಮಹಾ ಶಿವರಾತ್ರಿ ಮಾಘ ಮಾಸ ಹಾಗೂ ಸೋಮವಾರದ ದಿನ ಶಿವರಾತ್ರಿ ಬಂದಿರುವುದು ಎಲ್ಲ ಶಿವನ ಭಕ್ತರನ್ನು ಧನ್ಯಗೊಳಿಸಿದೆ. ಈ ದಿನ ತನ್ನನ್ನು ಪೂಜಿಸುವ ಭಕ್ತರಿಗೆ ಶಿವ ವಿಶೇಷವಾದ ಅನುಗ್ರಹ ನೀಡುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಪುರಾಣ ಕಥೆಗಳು ಸಾರುವಂತೆ ಶಿವಪಾರ್ವತಿ ವಿವಾಹ ದಿನ, ಸಮುದ್ರ ಮಂಥನದಿಂದ ವಿಷ ಕುಡಿದ ಶಿವನ ಗಂಟಲಿನಿಂದ ವಿಷ ಕೆಳಗಿಳಿಯದಂತೆ ಪಾರ್ವತಿ ಗಂಟಲಲ್ಲಿ…
UN NETWORKS ಉಳ್ಳಾಲ: ದೇಶಕ್ಕಾಗಿ ಬಲಿದಾನಗೈದ ಅಬ್ಬಕ್ಳಳ ನೆನಪನ್ನು ಸದಾ ಕಾಲ ಸ್ಮರಿಸಿಕೊಳ್ಳುವಂತೆ ಐನೂರು ವರ್ಷ ಕಳೆದರೂ ಅವಳ ನೆನೆಪು ಅಬ್ಬಕ್ಕ ಉತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ತರಂಗ ವಾರಪ್ರತಿಕೆಯ ಸಂಪಾದಕಿ ಡಾ. ಸಂಧ್ಯಾ ಎಸ್. ಪೈ ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಉಳ್ಳಾಲ ಮೊಗವೀರಪಟ್ಣದ ಸಮುದ್ರತಟದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ-2019ರ ಪ್ರಯುಕ್ತ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ನಡೆದ ಅಬ್ಬಕ್ಕ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಅಬ್ಬಕ್ಕ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ಅಬ್ಬಕ್ಕಳಿಗೂ ಜಿಎಸ್‍ಬಿ ಸಮುದಾಯಕ್ಕೂ ಒಂದು ಒಳ್ಳೆಯ ನಂಟಿದೆ. ಯಾಕೆಂದರೆ ಐನೂರು ವರ್ಷಗಳ ಹಿಂದೆ ಗೋವಾದಲ್ಲಿ ಜಿಎಸ್‍ಬಿ ಸಮುದಾಯ ಕೃಷಿ ಬೇಸಾಯ ಜೀವನ ಮಾಡಿಕೊಂಡು ಸುಂದರ ಜೀವನ ನಡೆಸುತ್ತಿದ್ದರು. ಪೋರ್ಚುಗೀಸರು ಗೋವಾಕ್ಕೆ ಕಾಲಿಟ್ಟ ನಂತರ ಹಲವು ವರ್ಷ ಸುಮ್ಮನಿದ್ದರು. ಬಳಿಕ ಅವರ…

