UN NETWORKS
ಕೋಟೆಕಾರು: ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸುವ ಸಂದರ್ಭ ವಿದ್ಯುತ್ ಅವಘಢ ಸಂಭವಿಸಿ ಕಂಬದ ಮೇಲಿನಿಂದ ಕೆಳಗೆ ಬಿದ್ದು ಕಾರ್ಮಿಕರೊಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಮೆಸ್ಕಾಂ ಕೋಟೆಕಾರು ಸೆಕ್ಷನ್ ವ್ಯಾಪ್ತಿಯ ಮಡ್ಯಾರು ಎಂಬಲ್ಲಿ ಸೋಮವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಬಾದಾಮಿ ಪಟ್ಟದಕಲ್ಲು ಅಂಬೇಡ್ಕರ್ ಕಾಲನಿ ನಿವಾಸಿ ರಮೇಶ್ ಛಲವಾದಿ (22) ಮೃತಪಟ್ಟವರು. ಮಂಗಳವಾರ ಸಂಜೆ ವೇಳೆ ಮಡ್ಯಾರು ಸಮೀಪ ನೂತನ ವಿದ್ಯುತ್ ಕಂಬಗಳನ್ನು ಅಳವಡಿಸಿದ ಬಳಿಕ, ಕಂಬಗಳಿಗೆ ಅಡ್ಡ ವೈರ್ ಕಟ್ಟುವ ಸಂದರ್ಭ ವಿದ್ಯುತ್ ಪ್ರವಹಿಸಿ ಕಂಬದ ಮೇಲಿನಿಂದ ಕೆಳಕ್ಕೆ ಬಿದ್ದು ರಮೇಶ್ ಅವರು ಮೃತಪಟ್ಟಿದ್ದಾರೆ. ಘಟನೆಗೆ ಗುತ್ತಿಗೆದಾರ ಬಂಟ್ವಾಳದ ಲೆವಿನ್ ಇಲೆಕ್ಟ್ರಿಕಲ್ ಮತ್ತು ವೀರಾ ಇಲೆಕ್ಟ್ರಿಕಲ್ಸ್ ಹಾಗೂ ಮೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


