UN NETWORKS
ತೊಕ್ಕೊಟ್ಟು: ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ತೊಕ್ಕೊಟ್ಟು ಮತ್ತು ಮುಡಿಪುವಿನಲ್ಲಿ ಶಾಖೆಯನ್ನು ಹೊಂದಿರುವ ಅಮ್ಮ ಎಲೆಕ್ಟ್ರಾನಿಕ್ಸ್ ನ ಫರ್ನೀಚರ್ ಮತ್ತು ಎಲೆಕ್ಟ್ರಾನಿಕ್ಸ್ ನ ನೂತನ ವಿಶಾಲ ಮಳಿಗೆ ತೊಕ್ಕೊಟ್ಟು ಮುಖ್ಯ ರಸ್ತೆಯ ಅಮ್ಮ ಎಲೆಕ್ಟ್ರಾನಿಕ್ಸ್ ನ ಹತ್ತಿರವಿರುವ ಸಿಟಿ ಗಾರ್ಡನ್‍ನಲ್ಲಿ ಬುಧವಾರ ಶುಭಾರಂಭಗೊಂಡಿತು.



ನೂತನ ಮಳಿಗೆಗೆ ಮಂಗಳೂರು ಬೋಳೂರಿನಲ್ಲಿರುವ ಶ್ರೀ ಅಮೃತಾನಂದಮಯಿ ಶಾಖಾ ಮಠದ ಶ್ರೀ ಮಂಗಳಾಮೃತ ಚೈತನ್ಯ ಸ್ವಾಮಿನಿ ಉದ್ಘಾಟಿಸಿ ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೆ ಸನ್ಮಾರ್ಗದಲ್ಲಿ ಮುನ್ನಡೆಯುವುದರೊಂದಿಗೆ ಸಮಾಜಕ್ಕೆ ಕೊಡುಗೆಯನ್ನು ನೀಡುವ ಕಾರ್ಯ ಮಾಡಬೇಕು ಈ ನಿಟ್ಟಿನಲ್ಲಿ ಯೋಗೀಶ್ ದಂಪತಿಗಳು ಅಮ್ಮ ಎಲೆಕ್ಟ್ರಾನಿಕ್ಸ್ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುವ ಮೂಲಕ ಯಶಸ್ವಿಯಾಗಿರುವುದು ಶ್ಲಾಘನೀಯ ಎಂದರು.
ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್, ತಲಪಾಡಿ ಸಂತ ಚರ್ಚ್ ಧರ್ಮಗುರು ಎಡ್ವಿನ್ ಮಸ್ಕರೇಂಇಸ್, ಹಿಂದೂಸ್ಥಾನ್ ಬಾವ ಬಿಲ್ಡರ್ಸ್ ಅಬ್ದುಲ್ ಖಾದರ್ ಕೆ. ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಂಸ್ಥೆಯ ಮುಖ್ಯಸ್ಥ ಯೋಗೀಶ್ ವಿ. ಸಾಲ್ಯಾನ್ ಮಾತನಾಡಿ ಕಳೆದ 18 ವರ್ಷದ ಹಿಂದೆ ಉಳ್ಳಾಲದ ತೊಕ್ಕೊಟ್ಟುವಿನಲ್ಲಿ ಆರಂಭಗೊಂಡ ಅಮ್ಮ ಎಲೆಕ್ಟ್ರಾನಿಕ್ಸ್ ಉಳ್ಳಾಲ ಸೇರಿದಂತೆ ಸುತ್ತಮುತ್ತಲಿನ ಗ್ರಾಹಕರ ಬೆಂಬಲದಿಂದ ಹಂತ ಹಂತವಾಗಿ ಅಭಿವೃದ್ಧಿಯನ್ನು ಹೊಂದಿದ್ದು, ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಗಾರ್ಡನ್ ಸಿಟಿಯಲ್ಲಿ ಸುಮಾರು 9,000ಕ್ಕೂ ಹೆಚ್ಚು ಚದರಡಿಯಲ್ಲಿ ವಿಶಾಲವಾದ ಮಳಿಗೆಯಲ್ಲಿ ಗೃಹೋಪಯೋಗಿ ವಸ್ತುಗಳಾದ ಎಲೆಕ್ಟ್ರಾನಿಕ್ಸ್, ಫರ್ನೀಚರ್ ಸೇರಿದಂತೆ ಕಿಚನ್ ಸೆಟ್, ಕಿಚನ್‍ಗೆ ಬೇಕಾದ ಸಾಮಾಗ್ರಿಗಳು, ದೇಶೀಯ ಮತ್ತು ಅಂತರಾಷ್ಟ್ರೀಯ ಬ್ರಾಂಡ್‍ಗಳ ವಿವಿಧ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಆಕರ್ಷಕ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದ್ದು, ಪ್ರತೀ ಖರೀದಿಗೆ ಅದೃಷ್ಟ ಕೂಪನ್ ಲಭ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಮ್ಮ ಎಲೆಕ್ಟ್ರಾನಿಕ್ಸ್ ನ ಅಭಿಷೇಕ್, ಪೂರ್ಣಿಮಾ ಯೋಗಿಶ್ ಸಂಸ್ಥೆಯ ಸಿಬಂಧಿಗಳು, ಗಣ್ಯರು ಉಪಸ್ಥಿತರಿದ್ದರು.
ಅಬ್ಬಕ್ಕ ವಾಹಿನಿಯ ಶಶಿಧರ್ ಪೊಯ್ಯತ್ತಬೈಲ್ ಕಾರ್ಯಕ್ರಮ ನಿರ್ವಹಿಸಿದರು.


