UN NETWORKS ಕೊಣಾಜೆ: ತುಳು, ಬ್ಯಾರಿ, ಕೊಂಕಣಿ ಭಾಷೆಗಳಿಗೆ ಲಿಪಿ ಇಲ್ಲದಿದ್ದರೂ ಆ ಸಮುದಾಯದ ಜನರ ಸಂಸ್ಕೃತಿ, ಆಚರಣೆ ಆಚಾರ ವಿಚಾರಗಳಿಂದ ಅದು ಶ್ರೀಮಂತವೆನಿಸಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆಯಾಗಿರುವ ಬ್ಯಾರಿ ಭಾಷೆ, ಸಂಸ್ಕೃತಿ ಹಾಗೂ ಸಮುದಾಯದ ಬಗ್ಗೆ ಅಧ್ಯಯನಗಳಿಗೆ ಅವಕಾಶ ದೊರಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯ ಮಂಗಳಾ ಸಭಾಂಗಣದಲ್ಲಿ ಗುರುವಾರ ಬ್ಯಾರಿ ಅಧ್ಯಯನ ಪೀಠದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬ್ಯಾರಿ ಸಂಸ್ಕೃತಿ ವಿಶಿಷ್ಟ್ಯವಾದುದು. ಈ ಸಮುದಾಯದ ಇತಿಹಾಸವನ್ನು ನೋಡಿದರೆ ಶ್ರಮ ಸಂಸ್ಕೃತಿಯೊಂದಿಗೆ ಬೆಳೆದು ಬಂದಿರುವುದನ್ನು ಗಮನಿಸಬಹುದು. ಬ್ಯಾರಿ ಸಮುದಾಯ ಯಾವುದೇ ಕೋಮುವಾದಿ ಸಮುದಾಯವಲ್ಲ, ಶಾಂತಿ, ಸೌಹಾರ್ದತೆಯೊಂದಿಗೆ ಸಮಾಜದ ಎಲ್ಲಾ ಜನರೊಂದಿಗೆ ಬೆರೆತು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಸಮುದಾಯವಾಗಿದೆ ಎಂದರು.ಮಂಗಳೂರು ವಿಶ್ವವಿದ್ಯಾಲಯದಲ್ಲಿ ಈಗಾಗಲೇ ತುಳು ಅಧ್ಯಯನ ಪೀಠ, ಕೊಡವ ಅಧ್ಯಯನ ಪೀಠ, ಕೊಂಕಣಿ ಪೀಠ ಸೇರಿದಂತೆ ಹಲವು ಪೀಠಗಳಿದ್ದು ಇದರೊಂದಿಗೆ ಈ…
Author: UllalaVani
UN NETWORKS ಕಾಪಿಕಾಡ್ : ಭಾರತಕ್ಕೆ ಅದ್ಭುತ ನಾಯಕ ಸಿಕ್ಕಿದ್ದಾರೆ. ಪಾಕಿಸ್ತಾನದ ಕುಕೃತ್ಯಕ್ಕೆ ಅವರದೇ ಭಾಷೆಯಲ್ಲಿ ಉತ್ತರ ನೀಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ತಮ್ಮ ಸರಕಾರದ ಅವಧಿಯಲ್ಲಿ ಆರು ಬಾರಿ ದಾಳಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ 2008ರಲ್ಲಿ ಮುಂಬಯಿ ಮೇಲೆ ಉಗ್ರ ದಾಳಿಯಾಗಿ 165 ಕ್ಕೂ ಹೆಚ್ಚು ನಾಗರಿಕರ ಹತ್ಯೆಯಾಯಿತು. ಆ ಸಂಧರ್ಭದಲ್ಲಿಯೂ ಇದೇ ವಾಯುಸೇನೆ, ಭೂಸೇನೆ, ಇತ್ತು ಆದರೆ ಪಾಕ್ ಮೇಲೆ ಯಾಕೆ ದಾಳಿ ಮಾಡಿಲ್ಲ ಖರ್ಗೆಯವರೇ ಎಂದು ಬಿ.ಜೆ.ಪಿ. ಜಿಲ್ಲಾ ವಕ್ತಾರರಾದ ಹರಿಕೃಷ್ಣ ಬಂಟ್ವಾಳ ಪ್ರಶ್ನಿಸಿದರು.ಬಿ.ಜೆ.ಪಿ. ಮಂಗಳೂರು ಕ್ಷೇತ್ರ ವತಿಯಿಂದ ಕಾಪಿಕಾಡ್ ಕುದ್ಮಲ್ ರಂಗರಾವ್ ಭವನದಲ್ಲಿ ನಡೆದ ಮೇರಾ ಬೂತ್ ಸಬ್ಸೆ ಮಜ್ಬೂತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಕರ್ತರು ತಮ್ಮ ಬೂತನ್ನು ಶಕ್ತಿಶಾಲಿಗೊಳಿಸಿ ಮತ್ತೊಮ್ಮೆ ಮೋದಿಜೀಯವರನ್ನು ಪ್ರಧಾನಿಯಾಗಿಸಲು ಕಾರ್ಯಪ್ರವೃತಗೊಳಿಸಬೇಕು. ಯಾಕೆಂದರೆ ನಮಗೆ ಸುಭದ್ರ ಬಲಿಷ್ಠ ಅಭಿವೃದ್ಧಿಯ ದೇಶ ಬೇಕೆಂದರೆ ಪ್ರಧಾನಿ ಮೋದಿಯವರಿಂದ ಮಾತ್ರ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ರವೀಂದ್ರ…
UN NETWORKS ಕೊಲ್ಯ : ಕೊಲ್ಯ ಶ್ರೀ ದೇವಿ ಮೂಕಾಂಬಿಕಾ ದೇವಸ್ಥಾನದ 31ನೇ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಸ್ವಾಮಿ ರಮಾನಂದಶ್ರಮ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಮಂಗಳೂರು ವಿಮಾನ ನಿಲ್ದಾಣ ಪ್ರಾಕಾರದ ನಿವೃತ್ತ ನಿರ್ದೇಶಕ ಎಂ. ಆರ್ ವಾಸುದೇವ ಸಭೆ ಉದ್ಘಾಟಿಸಿದರು. ನಿವೃತ್ತ ಮುಖ್ಯ ಶಿಕ್ಷಕ ವಿಶ್ವನಾಥ ಕೋಳ್ಯೂರು ಅಧ್ಯಕ್ಷತೆ ವಹಿಸಿದ್ದರು. ಕಿಟ್ಟೆಲ್ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ವಿಠ್ಠಲ. ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಸುನೀಲ್ ಗಟ್ಟಿ ಯುವ ಉದ್ಯಮಿ ಪ್ರಶಾಂತ್ ಗಟ್ಟಿ ರಮಾನಂದ ಸ್ವಾಮೀಜಿ ಮಹಾಸಂಸ್ಥಾನಮ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಾಬಲ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಪದ್ಮಾವತಿ, ಹಳೆ ವಿದ್ಯಾರ್ಥಿಗಳಾದ ವಿಶಾಲಾಕ್ಷಿ ರಾವ್, ನಿಶಿತಾ ಯೋಗೀಶ್, ವಿನಯ ಶೆಟ್ಟಿ ತಲಪಾಡಿ ಹಾಗೂ ಸಂದೀಪ್ ದ್ವಾರಕನಗರ ಉಪಸ್ಥಿತರಿದ್ದರು.ಶಾಲಾ ನಿವೃತ್ತ ಅಧ್ಯಾಪಕ ಸುಂದರ ಭಟ್ ಹಾಗೂ ಧಾರ್ಮಿಕ ಸಾಮಾಜಿಕ ಕಾರ್ಯಕರ್ತ ನಾಗೇಶ ಗಟ್ಟಿ…
UN NETWORKS ಉಳ್ಳಾಲ: ಅಂತರಾಷ್ಟ್ರೀಯ ಖ್ಯಾತಿಯ ಮನಶಕ್ತಿ ತರಬೇತುದಾರ, ಮಂಗಳೂರಿನ ಪ್ರಸಿದ್ಧ ಮನಶಕ್ತಿ ತರಬೇತಿ ಸಂಸ್ಥೆ ಸಾಧನಾ ಅಕಾಡೆಮಿಯ ಆಡಳಿತ ನಿರ್ದೇಶಕ ಹಾಗೂ ಪಿ. ಎ. ಸಮೂಹ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಸರ್ಫ್‍ರಾಝ್‍ಜೆ. ಹಾಶಿಂ ಅವರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಅಪಾರ ಸಾಧನೆಗಾಗಿ “ಭಾರತ್ ಶಿಕ್ಷಾ ರತನ್”ಎಂಬ ಪ್ರಶಸ್ತಿ ನೀಡಿಗೌರವಿಸಲಾಗಿದೆ. ನವದೆಹಲಿಯಲ್ಲಿ ಫೆ. 22ರಂದು ಜರುಗಿದ ಶಿಕ್ಷಣ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಎಂಬ ವಿಷಯದಲ್ಲಿ ಜರುಗಿದ ಸೆಮಿನಾರ್‍ನಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಡಾ. ಸರ್ಫ್‍ರಾಝ್ ಜೆ. ಹಾಶಿಂ ಮನಶಕ್ತಿ ತರಬೇತಿ ನೀಡುವ ಮೂಲಕ ಸಾರ್ವಜನಿಕರಲ್ಲಿ ಸುಪ್ತವಾಗಿರುವ ಅಪಾರ ಸಾಮರ್ಥ್ಯಗಳನ್ನು ಹೊರತಂದು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಅವರ ವೈಯಕ್ತಿಕ ಬೆಳವಣಿಗೆಗೆ ಕೊಡುಗೆ ನೀಡಿರುತ್ತಾರೆ.
UN NETWORKS ಉಳ್ಳಾಲ : ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವದ ಇತಿಹಾಸದಲ್ಲಿಭಿನ್ನ ಕಾರ್ಯಕ್ರಮಗಳು ನಡೆಯುತ್ತಿದ್ದು ಇದೇ ಮೊದಲ ಬಾರಿಗೆ ಅಬ್ಬಕ್ಕಳ ಜೀವನಚರಿತ್ರೆಯನ್ನು ಚಿತ್ರದ ಮೂಲಕ ವ್ಯಾಖ್ಯಾನಿಸುವ ದಾಖಲಾರ್ಹ ಕಾರ್ಯ ಚಿತ್ರಕಲಾ ಶಿಕ್ಷಕರಿಂದಾಗಿದೆ. ಅಬ್ಬಕ್ಕಳ ಜೀವನವನ್ನು ಚಿತ್ರಕಲೆಯ ಮೂಲಕ ವ್ಯಾಖ್ಯಾನಿಸಲು ಹೊರಟಿರುವ ಕಾರ್ಯ ಶ್ಲಾಘನೀಯವಾಗಿದ್ದು ಚಿತ್ರಕಲಾ ಶಿಕ್ಷಕರು ಈ ಕಾರ್ಯಗಾರವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್. ಸೆಲ್ವಮಣಿ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಾ. 2 ಹಾಗೂ 3ರಂದು ಉಳ್ಳಾಲದಲ್ಲಿ ನಡೆಯಲಿರುವ ವೀರರಾಣಿ ಆಬ್ಬಕ್ಕ ಉತ್ಸವ 2018-19ರ ಪ್ರಯುಕ್ತ ಉಳ್ಳಾಲ ಮೊಗವೀರಪಟ್ಣದ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರಿಗಾಗಿ ಮೂರು ದಿನಗಳ ಕಾಲ ನಡೆಯಲಿರುವ ಕಲಾಕೃತಿಗಳ ರಚನಾ ಕಾರ್ಯಗಾರ ಅಬ್ಬಕ್ಕ-ಬಣ್ಣದ ವ್ಯಾಖ್ಯಾನಕ್ಕೆ ಅಬ್ಬಕ್ಕನ ಚಿತ್ರವನ್ನು ಕ್ಯಾನ್ವಾಸ್‍ನಲ್ಲಿ ರಚಿಸುವ ಮೂಲಕ ಅವರು ಕಾರ್ಯಗಾರ ಉದ್ಘಾಟಿಸಿದರು.ಕಾರ್ಯಗಾರದಲ್ಲಿ ಚಿತ್ರಕಲಾ…
UN NETWORKS ಮುಡಿಪು: ಮುಡಿಪಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೇಂಜರ್ಸ್ ಘಟಕದ ಆಶ್ರಯದಲ್ಲಿ ಚಾರಣ ಕಾರ್ಯಕ್ರಮ ಭಾನುವಾರ ನಡೆಯಿತು. ಮಕ್ಕಳಲ್ಲಿ ನಿಸರ್ಗದ ಒಲವು ಮೂಡಿಸಿ, ಸದಾ ಲವಲವಿಕೆಯಿಂದ ಇರುವಂತೆ ಮಾಡುವ ಒಂದು ಕಾರ್ಯಕ್ರಮವಾಗಿದೆ. ರೇಂಜರ್ಸ್‍ಗಳಿಗೆ ಜೀವನ ಶಿಕ್ಷಣ ನೀಡುವುದರ ಜೊತೆಗೆ ಪ್ರಕೃತಿ ಅಧ್ಯಯನವು ವಿಕಾಸಗೊಳ್ಳಲು ನೆರವಾಗುತ್ತದೆ. ಅವರ ಪ್ರತಿಭೆ ಆಸಕ್ತಿಗಳಿಗೆ ಹೊಸ ಹುಮ್ಮಸ್ಸು ನೀಡುವ ಪ್ರಯತ್ನವಾಗಿದೆ. ಪರಸ್ಪರ ಗೀತೆಯನ್ನು ಹೇಳುತ್ತಾ, ಧಣಿದಾಗ ಗುಂಪಿನಲ್ಲಿ ಸೇರಿ ವಿನೋದವಳಿಗಳನ್ನು ನಡೆಸುತ್ತಾ, ಪರಸ್ಪರ ಸಹೋದರಿಯರೊಂದಿಗೆ ನಗುತ್ತಾ ಇತರರನ್ನು ನಗಿಸುತ್ತಾ ಮುಡಿಪು ಗುಡ್ಡೆಯನ್ನು ಏರಿ ಜೋಸೆಫ್ ಅವರ ಚರ್ಚಿನ ವರೆಗೆ ಚಾರಣ ಮಾಡಿದರು. ಅಲ್ಲಿಯ ವಿಶೇಷತೆ, ಪ್ರಕೃತಿ ವೀಕ್ಷಣೆ ಮತ್ತು ಪರಿಸರದ ಪವಾಡಗಳ ಕುರಿತು ಪ್ರೀತಿ ಡಿಸೋಜ ಮತ್ತು ಫೌಸ್ಟಿನ್ ಡಿಸೋಜ ಅವರು ರೇಂಜರ್ಸ್‍ಗಳಿಗೆ ತಿಳಿಸಿದರು. ಸುಮಾರು 15ನಿಮಿಷಗಳ ಕಾಲ ಅಲ್ಲಿನ ಧ್ಯಾನಗೃಹದಲ್ಲಿ ಎಲ್ಲರು ಸೇರಿ ಮನಶಾಂತಿಯ ಅರಿವನ್ನು ಪಡೆದರು. ರೇಂಜರ್ಸ್ ಲೀಡರ್ ಶುಭ.ಕೆ. ಎಚ್ ಕಾರ್ಯಕ್ರಮ ಸಂಯೋಜಿಸಿದರು. ಘಟಕದ 21ರೇಂಜರ್ಸ್‍ಗಳು ಭಾಗವಹಿಸಿದ್ದರು.
UN NETWORKS ಕೋಟೆಕಾರು: ಕೇಂದ್ರ ಸರ್ಕಾರದ ಜನ ಕಲ್ಯಾಣ ಯೋಜನೆಗಳನ್ನು ಮನೆ ಮನೆಗೆ ತಿಳಿಸಿ, ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಬಿ.ಜೆ.ಪಿ. ದೇಶ ವ್ಯಾಪಿ ಕಮಲ ಜ್ಯೋತಿ ಅಭಿಯಾನ ನಡೆಸುತ್ತಿದೆ. ಕೇಂದ್ರ ಸರ್ಕಾರದ ಯೋಜನೆಯ ಪಲಾನುಭವಿಯ ಮನೆಯಲ್ಲಿ ಮಹಿಳಾ ಸದಸ್ಯರು ಸೇರಿ ಹಣತೆ ಬೆಳಗಿಸಿ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವುದು ಮಂಗಳೂರು ಕ್ಷೇತ್ರದಲ್ಲಿ ಅಭಿಯಾನ ಆರಂಭವಾಗಿದ್ದು ಕ್ಷೇತ್ರದಲ್ಲಿ ಸುಮಾರು 60ಬೂತ್‍ಗಳಲ್ಲಿ ಮಾಡಲಾಗಿದೆ. ಕನೀರುತೋಟದ ಮಹಿಳಾ ಸದಸ್ಯರ ಮನೆಯಲ್ಲಿ ಕಮಲ ಜ್ಯೋತಿ ಕಾರ್ಯಕ್ರಮದಲ್ಲಿ ಕ್ಷೇತ್ರದ ಕಮಲ ಜ್ಯೋತಿ ಅಭಿಯಾನದ ಸಂಚಾಲಕಿ ಜಿಲ್ಲಾ ಪಮಚಾಯಿತಿ ಸದಸ್ಯೆ ಧನಲಕ್ಷೀ ಗಟ್ಟಿ ಮಾಹಿತಿ ನೀಡಿದರು.ಬಿ.ಜೆ.ಪಿ. ಮಹಿಳಾ ಪ್ರಮುಖರಾದ ಮಮತಾ ಮೋಹನ್‍ರಾಜ್, ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯೆ ಜಯಶ್ರೀ ಪ್ರಪುಲ್ಲದಾಸ್, ಸೋಮೇಶ್ವರ ಪಂಚಾಯಿತಿ ಸದಸ್ಯೆ ಪ್ರಫುಲ್ಲ, ಸ್ಥಳೀಯರಾದ ವಿಜಯಲಕ್ಷ್ಮಿ ಹಾಗೂ ಗೀತಾ ಉಪಸ್ಥಿತರಿದ್ದರು.
UN NETWORKS ಕೊಲ್ಲರಕೋಡಿ: ದೇರಳಕಟ್ಟೆಯ ಯೇನೆಪೊಯ ನರ್ಸಿಂಗ್ ಕಾಲೇಜಿನ ಮಕ್ಕಳ ಶುಶ್ರುಷಾ ವಿಭಾಗ ಹಾಗೂ ಯೇನೆಪೊಯ ಡೆಂಟಲ್ ಕಾಲೇಜಿನ ಮಕ್ಕಳ ದಂತ ವೈದ್ಯಕೀಯ ವಿಭಾಗ ದ ಜಂಟಿ ಆಶ್ರಯದಲ್ಲಿ ಹಲ್ಲುಗಳ ಆರೈಕೆಯ ಕುರಿತು ಜಾಗೃತಿ ಕಾರ್ಯಕ್ರಮ ಕೊಲ್ಲರಕೋಡಿಯ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆಯಿತು. ಮಕ್ಕಳ ಶುಶ್ರುಷ ವಿಭಾಗದಿಂದ ಡಾ. ಪ್ರಿಯ ರೇಷ್ಮಾ ಅರಾನ್ಹಾ, ಮೆಲ್ಬಾ ಲೋಬೊ ಹಾಗೂ ದಂತ ವೈದ್ಯಕೀಯ ವಿಭಾಗದಿಂದ ಡಾ. ಶ್ರೀವ್ಯಾಸಲೋನಿ ಮಹಾವೀರನ್ ಹಾಗೂ ಡಾ. ರಕ್ಷಾ ಶೆಟ್ಟಿ ಉಪಸ್ಥಿತರಿದ್ದರು. ಮಕ್ಕಳ ಶುಶ್ರುಷಾ ವಿಭಾಗದ ವಿದ್ಯಾರ್ಥಿಗಳು 6, 7 ಹಾಗೂ 8ನೇ ತರಗತಿಯ ಮಕ್ಕಳಿಗೆ ಹಲ್ಲುಗಳ ಆರೈಕೆಯ ಕುರಿತು ಆರೋಗ್ಯ ಮಾಹಿತಿ ನೀಡಿದರು. ದಂತ ವೈದ್ಯಕೀಯ ಸಿಬ್ಬಂದಿಗಳು ದಂತ ತಪಾಸಣೆಗೈದರು. ಸುಮಾರು 96ವಿದ್ಯಾರ್ಥಿಗಳು ಹಾಜರಿದ್ದರು.
UN NETWORKS ತೊಕ್ಕೊಟ್ಟು: ಪುಲ್ವಾಮದಲ್ಲಿ ಉಗ್ರರು ಸಿಆರ್‍ಪಿಎಫ್ ಯೋಧರ ಮೇಲೆ ದಾಳಿ ನಡೆಸಿ 44 ಸೈನಿಕರನ್ನು ಕೊಂದ ಪೈಶಾಚಿಕ ಕೃತ್ಯಕ್ಕೆ ಭಾರತೀಯ ಸೇನೆ ಸರಿಯಾಗಿಯೇ ಪ್ರತಿಕಾರ ತೀರಿಸಿದೆ. ಈ ಸಂಭ್ರಮವನ್ನು ತೊಕ್ಕೊಟಿನಲ್ಲಿ ಬಿ.ಜೆ.ಪಿ.ಮಂಗಳೂರು ಕ್ಷೇತ್ರದ ವತಿಯಿಂದ ಬಸ್ಸು ನಿಲ್ದಾಣದ ಬಳಿ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಸಮರ್ಥ ನಾಯಕತ್ವ ಹಾಗೂ ಸೇನೆಯ ಸಾಮರ್ಥ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಲಾಯಿತು. ಕ್ಷೇತ್ರ ಬಿ.ಜೆ.ಪಿ. ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷರಾದ ಚಂದ್ರಹಾಸ ಉಳ್ಳಾಲ, ಕ್ಷೇತ್ರ ಚುನಾವಣಾ ಸಂಚಾಲಕರಾದ ಚಂದ್ರಶೇಖರ ಉಚ್ಚಿಲ್, ಹಿರಿಯರಾದ ಸೀತರಾಮ ಬಂಗೇರ, ಲಲಿತಾ ಸುಂದರ್, ಸಂಜೀವ ಶೆಟ್ಟಿ ಅಂಬ್ಲಮೊಗರು, ಜಿ.ಪಂ.ಸದಸ್ಯೆ ಧನಲಕ್ಷೀ ಗಟ್ಟಿ, ಕ್ಷೇತ್ರ ಪ್ರ.ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್. ಉಪಾಧ್ಯಕ್ಷ ರಾದ ಯಶವಂತ ಅಮೀನ್, ಪ್ರಕಾಶ್ ಸಿಂಫೋನಿ, ಹರಿಯಪ್ಪ ಸಾಲಿಯಾನ್, ಕಾರ್ಯದರ್ಶಿ ರಾಮಕೃಷ್ಣ ಪಟ್ಟೋರಿ, ಮಾಧ್ಯಮ ಸಂಚಲಾಕರಾದ ಜೀವನ್ ಕುಮಾರ್ ತೊಕ್ಕೊಟು, ಜಿಲ್ಲಾ ಸಾಂಸ್ಕೃತಿಕ ಪ್ರಕೋಷ್ಠದ ಸಹ ಸಂಚಲಕರಾದ ಗಣೇಶ್ ಕಾಪಿಕಾಡ್, ಪ್ರಮುಖರಾದ ಸುರೇಂದ್ರ ಶೆಟ್ಟಿ,…
UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿಯ ಮಂಗಳಾ ಸಭಾಂಗಣದಲ್ಲಿ ಫೆ. 28ರಂದು ಮಧ್ಯಾಹ್ನ 2:30ಕ್ಕೆ ಬ್ಯಾರಿ ಅಧ್ಯಯನ ಪೀಠವನ್ನು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಲಿದ್ದಾರೆ.ಶಾಸಕರಾದ ವೇದವ್ಯಾಸ, ಡಾ.ಭರತ್ ಶೆಟ್ಟಿ, ರಾಜೇಶ್ ನಾಯ್ಕಿ, ಉಮಾನಾಥ ಕೋಟ್ಯಾನ್, ಎಸ್.ಅಂಗಾರ, ಹರೀಶ್ ಪೂಂಜಾ, ಸಂಜೀವ ಮಠಂದೂರು, ಬಿ.ಎಂ.ಫಾರೂಕ್, ಹರೀಶ್‌ಕುಮಾರ್, ಎಸ್.ಎಲ್. ಭೋಜೇಗೌಡ, ಆಯನೂರು ಮಂಜುನಾಥ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಭಾಸ್ಕರ್ ಕೆ., ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕರಂಬಾರು ಮುಹಮ್ಮದ್, ‘ಪ್ರಜಾವಾಣಿ’ ಸಹ ಸಂಪಾದಕ ಬಿ.ಎಂ.ಹನೀಫ್, ಬ್ಯಾರಿ ಸಾಹಿತ್ಯ ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ್ ರೈ, ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಬ್ಯಾರಿ…

