UN NETWORKS ಕೊಣಾಜೆ: ಕುಡಿಯುವ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಲು ಆಗ್ರಹಿಸಿ ಪೋಡಾರ್ ಗ್ರಾಮಸ್ಥರು ಪಾವೂರು ಗ್ರಾಪಂ ಕಚೇರಿ ಎದುರು ಧರಣಿ ಕುಳಿತಿದ್ದಾರೆ. ಇಂದು ಬೆಳಗ್ಗೆ 7:30ರಿಂದ ಗ್ರಾಪಂ ಕಚೇರಿ ಎದುರು ಜಮಾಯಿಸಿರುವ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾಪಂ ನಿರ್ಲಕ್ಷ ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.ಗ್ರಾಪಂ ಅಧ್ಯಕ್ಷರು ಆಗಮಿಸುವವರೆಗೆ ಪಂಚಾಯತ್ ಕಚೇರಿ ಬಾಗಿಲು ತೆರೆಯಲು ಅವಕಾಶ ನೀಡೆವು ಎಂದು ಧರಣಿನಿರತರು ಪಟ್ಟು ಹಿಡಿದು ಕುಳಿತಿದ್ದಾರೆ.
Author: UllalaVani
UN NETWORKS ತೊಕ್ಕೊಟ್ಟು: ಕಾಶ್ಮೀರದ ಪುಲ್ವಾನಾದಲ್ಲಿ ನಡೆದ ಉಗ್ರದಾಳಿಗೆ ಪ್ರತಿಯಾಗಿ ಭಾರತೀಯ ವೀರ ಯೋಧರು ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ನಾಶಗೊಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ನಲ್ಲಿ ವಿಜಯೋತ್ಸವ ನಡೆಯಿತು. ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಮಾತನಾಡಿ, ನಮ್ಮ ದೇಶದ ವೀರಯೋಧರು ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಹತ್ಯೆಗೈದಿದ್ದು ನಿಜಕ್ಕೂ ಹೆಮ್ಮೆಯ ವಿಚಾರ. ದೇಶದ ವಿಚಾರ ಬಂದಾಗ ಕಾಂಗ್ರೆಸ್ ಪಕ್ಷಾತೀತವಾಗಿ ಬೆಂಬಲ ನೀಡಲಿದ್ದು ಯೋಧರಿಗೆ ಧೈರ್ಯ ತುಂಬಲಿದೆ ಎಂದು ಹೇಳಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮುಸ್ತಫಾ ಮಲಾರ್, ಸುರೇಶ್ ಭಟ್ನಗರ, ಮಾಜಿ ಕೌನ್ಸಿಲರ್ ಗಳಾದ ಉಸ್ಮಾನ್ ಕಲ್ಲಾಪು, ಮುಸ್ತಫಾ ಅಬ್ದುಲ್ಲಾ, ಮುಖಂಡರಾದ ಶ್ರೀನಿವಾಸ್ ಶೆಟ್ಟಿ ಪುಲ್ಲು, ಉಮ್ಮರ್ ಪಜೀರ್, ದಿನೇಶ್ ಕುಂಪಲ, ಬಾಝಿಲ್ ಡಿಸೋಜ, ರಫೀಕ್ ಅಂಬ್ಲಮೊಗರು, ಬಶೀರ್ ಉಂಬುದ, ಪದ್ಮನಾಭ ಗಟ್ಟಿ, ಅಬ್ದುಲ್ ರಹ್ಮಾನ್ ಕುತ್ತಾರ್ ಇನ್ನಿತರರು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ರಾಜ್ಯದಲ್ಲೇ ಆಕರ್ಷಣೀಯ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಸೋಮನಾಥೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು, ಆರ್ಥಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪೂರೈಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು. ಅವರು ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಭಾನುವಾರ ನಡೆದ ಸ್ವಚ್ಛ ಪರಿಸರ ಸ್ವಚ್ಛ ಮಂದಿರ ಕಲ್ಪನೆಯಡಿ ವಿದ್ಯಾರ್ಥಿಗಳ ಸಮೂಹ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಡಲತಡಿಯಲ್ಲಿರುವ ಶ್ರೀ ಕ್ಷೇತ್ರದ ರಾಜ್ಯದಲ್ಲೇ ಪ್ರೇಕ್ಷಣೀಯ ಸ್ಥಳ ಅನಿಸಿಕೊಂಡಿದೆ. ಆರ್ಥಿಕತೆಯ ಹಿನ್ನೆಡೆಯಿಂದಾಗಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ ಅನ್ನುವುದು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಗೊತ್ತಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಸಿಗುವ ಎಲ್ಲಾ ರೀತಿಯ ಸಹಕಾರವನ್ನು ಪೂರೈಸಲು ಬದ್ಧ. ರಾಜ್ಯದಲ್ಲಿ ಜಿಲ್ಲೆಯ ಸ್ಕೌಟ್ಸ್ ಆಂಡ್ ಗೈಡ್ಸ್ ಮೊದಲ ಸ್ಥಾನದಲ್ಲಿವೆ. ಅದರ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿರುವುದು ಶ್ಲಾಘನೀಯ ಎಂದರು. ಈ ಸಂದರ್ಭ ಜಿಲ್ಲಾಧಿಕಾರಿಗಳನ್ನು ಹಾಗೂ ಜಿಲ್ಲಾ ಪಂಚಾಯಿತಿ…
UN NETWORKS ಉಳ್ಳಾಲ: ವರ್ಷಗಳಿಂದ ಸಮಸ್ಯೆಯ ಕೂಪದಲ್ಲಿ ನಡೆಯುತ್ತಿದ್ದ ವೀರರಾಣಿ ಅಬ್ಬಕ್ಕ ಉತ್ಸವ ಈ ಬಾರಿ ಕಡಲತೀರದಲ್ಲಿ ಅದ್ಧೂರಿಯಾಗಿ ಜಿಲ್ಲಾಡಳಿತ ನೇತೃತ್ವದಲ್ಲಿ ನಡೆಯಲಿದೆ. ಜನ ತಮ್ಮೆಲ್ಲರ ಉತ್ಸವ ಎಂದು ಮನಗಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು. ಅವರು ದ.ಕ ಜಿಲ್ಲಾಡಳಿತ ಮತ್ತು ಉಳ್ಳಾಲ ನಗರಸಭೆ ಇದರ ವತಿಯಿಂದ ವೀರರಾಣಿ ಅಬ್ಬಕ್ಕ ಉತ್ಸವದ ಅಂಗವಾಗಿ ಉಳ್ಳಾಲ ಬೀಚ್ ನಲ್ಲಿ ಭಾನುವಾರ ನಡೆದ ಬೀಚ್ ಸ್ವಚ್ಛತಾ ಅಭಿಯಾನ ಮತ್ತು ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅ¨ಕ್ಕ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದರು. ಮಾ.2 ಮತ್ತು 3 ಉಳ್ಳಾಲ ನಗರಕ್ಕೆ ವಿಶೇಷ ದಿನ. ಪ್ರಥಮಬಾರಿಯಾಗಿ ಕಡಲತೀರದಲ್ಲಿ ನಡೆಯುತ್ತಿರುವ ವೀರರಾಣಿ ಅಬ್ಬಕ್ಕ ಉತ್ಸವದ ಜವಾಬ್ದಾರಿಯನ್ನು ಜಿಲ್ಲಾಡಳಿತ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಸುದೀರ್ಘ ವಾಗಿ ಜಿಲ್ಲಾಡಳಿತ ವ್ಯವಸ್ಥೆಯನ್ನು ನಡೆಸುತ್ತಾ ಬಂದಿದೆ. ಈಗಾಗಲೇ ಉಳ್ಳಾಲ, ಸೋಮೇಶ್ವರ ಸೇರಿದಂತೆ ಜಿಲ್ಲೆಯ ವಿವಿಧ ಸಮುದ್ರ ತೀರಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಈ…
UN NETWORKS ತೊಕ್ಕೊಟ್ಟು : ಆಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಕೆಲಸವನ್ನು ಪಡೆಯುವುದರ ಜೊತೆಗೆ ಯಶಸ್ವಿ ಜೀವನ ರೂಪಿಸಲು ಸಾಧ್ಯ ಎಂದು ಅಂತರಾಷ್ಟ್ರೀಯ ಕಬ್ಬಡ್ಡಿ ಪಟು ಸಚಿನ್ ಸುವರ್ಣ ಅಭಿಪ್ರಾಯಪಟ್ಟರು. ಅವರು ಬ್ರಹ್ಮಶ್ರೀ ಬಿಲ್ಲವ ವೇದಿಕೆ ಉಳ್ಳಾಲ ವಿಧಾನಸಭಾ ಕ್ಷೇತ್ರ ತೊಕ್ಕೊಟ್ಟು ಇವರ ಆಶ್ರಯದಲ್ಲಿ ಚೆಂಬುಗುಡ್ಡೆ ಮಂಗಳೂರು ವನ್ ಕಾಲೇಜು ಮೈದಾನದಲ್ಲಿ ಬಿಲ್ಲವ ಸಮಾಜ ಬಾಂಧವರಿಗಾಗಿ ನಡೆದ 16 ನೇ ವರ್ಷದ ಕೋಟಿ ಚೆನ್ನಯ ಕ್ರೀಡಾಕೂಟ- 2019 ಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಆಟದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಉಳ್ಳಾಲ ವ್ಯಾಪ್ತಿಯಲ್ಲಿ ಹಲವು ಕಬಡ್ಡಿ ಪಟುಗಳು ಇದ್ದು, ಅವರಿಗೆ ಬೆಳೆಯಲು ಸಂಘಟನೆಗಳಿಂದ ಪ್ರೋತ್ಸಾಹ ಅಗತ್ಯ. ಕಬ್ಬಡ್ಡಿ ಕ್ಷೇತ್ರ ತನ್ನನ್ನು ಉತ್ತಮ ಉದ್ಯೋಗದಲ್ಲಿರುವಂತೆ ಮಾಡಿತು. ಹೀಗೆ ಇತರೆ ಆಟದಲ್ಲಿ ಸಾಧಿಸಿದಲ್ಲಿ ಕೆಲಸ ಸಿಗುವುದರ ಜತೆಗೆ ಉತ್ತಮ ಜೀವನ ರೂಪಿಸಲು ಸಾಧ್ಯ ಎಂದರು. ಬಬ್ಬುಕಟ್ಟೆ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಹಾಗೂ ಲೇಖಕಿ ವಿಜಯಲಕ್ಷ್ಮಿ ಕಟೀಲು ಮಾತನಾಡಿ, ಪ್ರಸ್ತುತ ಜನ ಜಾತಿ ಹೇಳಲು…
UN NETWORKS ಉಳ್ಳಾಲ: ಹಿಂದಿನ ಕಾಲದಲ್ಲಿ ಧಾರ್ಮಿಕ ಭಾಷಣ ಕೇಳಿದ ಅದೆಷ್ಟೋ ಜನರು ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡಿದ್ದಾರೆ, ಭಾಷಣದ ತೀವೃತೆಗೆ ಹೆದರಿ ಸಾವೀಗೀಡಾದ ಪ್ರಸಂಗವೂ ಇದೆ, ಆದರೆ ಇಂದು ನಮ್ಮಲ್ಲಿನ ಧಾರ್ಮಿಕ ಕೊರತೆಯಿಂದ ಯಾವುದೇ ಭಾಷಣಗಳು ಪ್ರಭಾವ ಬೀರುತ್ತಿಲ್ಲ ಎಂದು ಅರೆಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರ್ ಅಭಿಪ್ರಾಯಪಟ್ಟರು. ಕೇಂದ್ರ ಜುಮಾ ಮಸೀದಿ ಮತ್ತು ಹಝ್ರತ್ ಸಯ್ಯದ್ ಮದನಿ ದರ್ಗಾ ಸಮಿತಿಯಿಂದ ಭಾನುವಾರ ದರ್ಗಾ ವಠಾರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಅಭಿನಂದನೆ, ದರ್ಗಾ ಸಂದರ್ಶನಾರ್ಥಿಗಳ ಮಾಹಿತಿ ಕೇಂದ್ರ ಉದ್ಘಾಟನೆ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾಹಿತಿ ಕೇಂದ್ರ ಉದ್ಘಾಟಿಸಿ, ಉಳ್ಳಾಲ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು, ಪ್ರವಾಸೋದ್ಯಮ ಕೇಂದ್ರವಾಗಿ ಮಾರ್ಪಡುತ್ತಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಕೇಂದ್ರ ನಿಜಕ್ಕೂ ಪ್ರಯೋಜನಕಾರಿ ಎಂದು ಹೇಳಿದರು. ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ…
UN NETWORKS ಕೊಣಾಜೆ : 2011ರ ಭಾಷಾಗಣತಿಯ ಪ್ರಕಾರ ಭಾಷೆಗಳನ್ನಾಡುವ ಜನರ ಏರಿಕೆಯಲ್ಲಿ ಹಿಂದಿಯಲ್ಲಿ ಶೇ.43, ತೆಲುಗು, ತಮಿಳು ಭಾಷೆ ಶೇ. 9 ಬೆಳವಣಿಗೆಯನ್ನು ಕಂಡಿದ್ದು ಕನ್ನಡ ಶೇ.3.1 ಬೆಳವಣಿಗೆಯನ್ನು ಹೊಂದಿದ್ದು ಇದು ದೇಶದಲ್ಲೇ ಕನಿಷ್ಟವಾಗಿದೆ. ಇದು ಅಪಾಯಕಾರಿ ಕುಸಿತ. ಕನ್ನಡದ ಹೆಚ್ಚಿನ ಬಳಕೆ ಮತ್ತು ಕನ್ನಡದೊಳಗಿನ ಶಕ್ತಿಯನ್ನು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನೆಲೆಗೆ ತರುವ ಮೂಲಕ ನಾವು ಈ ಆತಂಕದಿಂದ ಪಾರಾಗಬೇಕಿದೆ ಎಂದು ದೆಹಲಿಯ ಜೆಎನ್‍ಯು ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು. ಅವರು ಭಾನುವಾರ ಮಂಗಳ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ, ಅಧ್ಯಾಪಕರ ಮತ್ತು ಸಿಬ್ಬಂದಿಗಳ ಒಕ್ಕೂಟ ಗಿಳಿವಿಂಡು ಇದರ ಮೂರನೇ ಸಮಾವೇಶದಲ್ಲಿ ಉನ್ನತ ಶಿಕ್ಷಣ ಮತ್ತು ಕನ್ನಡ ಎಂಬ ವಿಷಯದಲ್ಲಿ ವಿಶೇಷೋಪನ್ಯಾಸ ನೀಡಿದರು.ಉನ್ನತ ಶಿಕ್ಷಣದಲ್ಲಿ ಭಾಷೆ ಮತ್ತು ಮಾನವಿಕ ವಿಭಾಗಗಳನ್ನು ಅನುತ್ಪಾದಕ ಎಂಬಂತೆ ನೋಡುವ ಕ್ರಮ ಸರಿಯಲ್ಲ. ಇವು ಸಮಾಜದ ಬದುಕನ್ನು ರೂಪಿಸುವ ವೈಚಾರಿಕ ನೆಲೆಯನ್ನು…
UN NETWORKS ಕೊಣಾಜೆ : ಕೇಂದ್ರ ಸರ್ಕಾರ ಮಂಗಳೂರಿಗೆ ಐಟಿ ಪಾರ್ಕ್ ಮಂಜೂರುಗೊಳಿಸಿದ್ದು ಸರ್ಕಾರ ಜಮೀನು ಕೊಟ್ಟರೆ ಕೊಣಾಜೆಯಲ್ಲಿ ನಿರ್ಮಾಣವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಮಂಗಳೂರು ಕ್ಷೇತ್ರ ಬಿಜೆಪಿ ಕೊಣಾಜೆ ಮಹಾಶಕ್ತಿ ಕೇಂದ್ರದ ಕಚೇರಿ ಉದ್ಘಾಟನೆ ಹಾಗೂ ಅಸೈಗೋಳಿಯಲ್ಲಿ ನಡೆದ ಜನಬೆಂಬಲ ಯಾತ್ರೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಖಾದರ್ ಆರೋಗ್ಯ ಸಚಿವರಾಗಿದ್ದ ಸಂದರ್ಭ ಘೋಷಿಸಿದ್ದ ಬಡವರಿಗೆ ಹಲ್ಲು ಮತ್ತು ಕನ್ನಡಕ ಇದುವರೆಗೂ ಬಂದಿಲ್ಲ. ಆದರೆ ಅವರ ಮನೆಯಲ್ಲಿ ಚಿನ್ನದ ಹಲ್ಲು ಹಾಗೂ ಕನ್ನಡಕ ಬಂದಿದೆ. ಆಹಾರ ಸಚಿವರಾಗಿದ್ದ ಸಂದರ್ಭ ಘೋಷಿಸಿದ್ದ ಅನಿಲ ಯೋಜನೆ ಕೇಂದ್ರ ಸರ್ಕಾರ ನೀಡಿದೆಯೇ ಹೊರತು ರಾಜ್ಯದಿಂದ ಬಂದಿಲ್ಲ ಎಂದು ಟೀಕಿಸಿದರು. ಕಾರ್ಯಕ್ರಮದಲ್ಲಿ 14 ಹಿರಿಯ ಕಾರ್ಯಕರ್ತರಾದ ಇವರನ್ನು ಸನ್ಮಾನಿಸಲಾಯಿತು. ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ಜಯರಾಮ ಶೆಟ್ಟಿ, ಸತೀಶ್ ಕುಂಪಲ, ಸುರೇಶ್ ಶೆಟ್ಟಿ ಅಂಬ್ಲಮೊಗರು, ರಾಧಾಕೃಷ್ಣ ರೈ ಬೂಡಿಯಾರ್, ಚಂದ್ರಶೇಖರ ಉಚ್ಚಿಲ್, ಸತೀಶ್ ಆಚಾರ್ಯ ಬೋಳಿಯಾರ್, ಚಂದ್ರಹಾಸ ಅಡ್ಯಂತಾಯ,…
UN NETWORKS ಉಳ್ಳಾಲ: ಅರೆಹೊಟ್ಟೆ ಆಹಾರ ಸೇವನೆ ಕುರ್‍ಆನ್ ಆದೇಶವಾಗಿದ್ದರೂ, ನಾವಿಂದು ರುಚಿ ಮತ್ತು ಹೊಸ ಹೆಸರಿನ ಆಹಾರಕ್ಕೆ ಮಾರುಹೋಗಿ ಅಗತ್ಯಕ್ಕಿಂತ ಅಧಿಕ ಆಹಾರ ಸೇವನೆ ಮೂಲಕ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದ್ದೇವೆ ಎಂದು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು. ಕೇಂದ್ರ ಜುಮಾ ಮಸೀದಿ ಮತ್ತು ಹಖ್ರತ್ ಸಯ್ಯಿದ್ ಮದನಿ ದರ್ಗಾ ಸಮಿತಿಯಿಂದ ದೇರಳಕಟ್ಟೆ ಕಣಚೂರು ವೈದ್ಯಕೀಯ ಕಾಲೇಜಿನ ಸಹಕಾರದಲ್ಲಿ ಭಾನುವಾರ ದರ್ಗಾ ವಠಾರದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿನ ಆಧುನಿಕ ಆಹಾರ ಪದ್ಧತಿಯಿಂದಾಗಿ ಕಾಯಿಲೆ ಹೆಚ್ಚಾಗುತ್ತಿದ್ದು, ಅದೇ ರೀತಿ ಆಸ್ಪತ್ರೆಗಳೂ ಹೆಚ್ಚಾಗಿವೆ. ಉಳ್ಳಾಲ ವ್ಯಾಪ್ತಿಯಲ್ಲೇ ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಆದರೂ ಕಾಯಿಲೆ ಬಂದಾಗ ಸರ್ಕಾರಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳನ್ನು ಕಡೆಗಣಿಸಿ ಚಿಕಿತ್ಸೆಗಾಗಿ ಅರ್ಜಿ ಹಿಡಿದು ಬೇಡುವುದನ್ನು ಕಾಣುತ್ತಿದ್ದೇವೆ ಎಂದು ಹೇಳಿದರು. ಕಣಚೂರು ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಉದ್ಘಾಟಿಸಿದರು. ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್ ದುವಾ ಮಾಡಿದರು.…
UN NETWORKS ಉಳ್ಳಾಲ: ಮಕ್ಕಳಿಗೆ ತಿನ್ನಲು, ಬಟ್ಟೆ ತೊಡಲು ಕಲಿಸುವ, ಶಿಕ್ಷಣ ಒದಗಿಸುವ ಕರ್ತವ್ಯ ಪೋಷಕರದ್ದಾಗಿದೆ. ಧಾರ್ಮಿಕ ಅರಿವು ಕೊರತೆ ಇರುವ ಮಕ್ಕಳನ್ನು ಧಾರ್ಮಿಕ ಕ್ಷೇತ್ರಗಳಿಗೆ ಕರಕೊಂಡು ಹೋಗುವುದು ಸರಿಯಲ್ಲ. ತಂದೆ ತಾಯಿ ಸರಿಯಾಗಿ ಇದ್ದರೆ ಮಕ್ಕಳು ಸರಿಯಾಗಿ ದ್ದು ಒಳ್ಳೆಯ ದಾರಿ ಹಿಡಿಯುತ್ತಾರೆ. ಪೋಷಕರ ಕಾರ್ಯ ಚಟುವಟಿಕೆ ಗೆ ಅನುಗುಣವಾಗಿ ಮಕ್ಕಳು ಇರುತ್ತಾರೆ. ಆದ್ದರಿಂದ ಮಕ್ಕಳಿಗೆ ಒಳ್ಳೆಯ ಶಬ್ದಗಳನ್ನು ಕೇಳಿಸಬೇಕು, ಉತ್ತಮ ಶಿಕ್ಷಣ ನೀಡಬೇಕು ಎಂದು ಬೇಕಲ ಇಬ್ರಾಹಿಂ ಮುಸ್ಲಿಯಾರ್ ಹೇಳಿದರು. ಅವರು ಕಿನ್ಯದಲ್ಲಿ ಹಝ್ರತ್ ವಲಿಯುಲ್ಲಾಹಿ ಹುಸೈನ್ ಮುಸ್ಲಿಯಾರ್ ರವರ ಹೆಸರಿನ ಲ್ಲಿ ನಡೆಯುವ ಕೂಟು ಝಿಯಾರತ್ ಕಾರ್ಯಕ್ರಮದಲ್ಲಿ ದುವಾ ಆಶೀರ್ವಚನ ನೀಡಿ ಮಾತನಾಡಿದರು.ಮುಖ್ಯ ಭಾಷಣ ಮಾಡಿದ ಮೊಯ್ಯದ್ದೀನ್ ಅಝ್‍ಅರಿ ಅವರು, ನಾವು ಪರಿಶುದ್ದವಾಗಿದ್ಧರೆ ನಮ್ಮ ಮಕ್ಕಳು ಪರಿಶುಧ್ಧರಾಗುತ್ತಾರೆ. ತಾಯಿಯ ಗರ್ಭ ದಲಿ ಮಗು ಇರುವ ಸಂದರ್ಭದಲ್ಲಿ ಜೀವನ ಬೇರೆ ಯೇ ಇರುತ್ತದೆ. ಈ ವೇಳೆ ಪಾಪದ ಲೆಕ್ಕಾಚಾರ ಮಗುವಿಗೆ ಇರುವುದಿಲ್ಲ. ಮಕ್ಕಳನ್ನು ಬೆಳೆಸುವುದು ಮುಖ್ಯವಲ್ಲ ಅವರಿಗೆ ಶಿಕ್ಷಣ…

