ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ತ್ಯಾಗ ಬಲಿದಾನದ ಸಂಕೇತವಾಗಿ ಪ್ರತಿಯೊಬ್ಬ ಮುಸಲ್ಮಾನನು ಪ್ರಾಣಿಬಲಿಯೊಂದಿಗೆ ಆಚರಿಸುವ ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳಾಲ ಸೈಯ್ಯಿದ್ ಮದನಿ ದರ್ಗಾದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹಾಗೂ ದರ್ಗಾ ಅಧ್ಯಕ್ಷ ಯು.ಯಸ್.ಹಂಝ್ ಇವರ ಉಪಸ್ಥಿತಿಯಲ್ಲಿ ನಡೆಯಿತು. ಈ ವೇಳೆ ಹಬ್ಬದ ಶುಭಹಾರೈಸಿದ ಸಚಿವರು ಪವಿತ್ರವಾದ ಹಬ್ಬವನ್ನು ಸಂತೋಷದಿಂದ ಎಲ್ಲರೂ ಆಚರಿಸಿದ್ದಾರೆ. ತ್ಯಾಗ, ಬಲಿದಾನ, ಸಹೋದರತೆ, ಏಕತೆಂiÀi ಸಂದೇಶವನ್ನು ಪಾಲಿಸುವ ಮೂಲಕ ಅಲ್ಲಹುವಿನ ಪ್ರೀತಿಗೆ ಎಲ್ಲರೂ ಪಾತ್ರರಾಗಬೇಕು. ತಮ್ಮ ವ್ಯಕ್ತಿತ್ವದಲ್ಲೂ ಅದನ್ನು ಮೈಗೂಡಿಸಿಕೊಳ್ಳಬೇಕು. ಶಾಂತಿಯುತ ಸಮಾಜ ಬಲಿಷ್ಠ ಭಾರತ ಕಟ್ಟುವ ನಿಟ್ಟಿನಲ್ಲಿ ಎಲ್ಲರೂ ಹಬ್ಬವನ್ನು ಶಾಂತಿಯಿಂದ ಆಚರಿಸಬೇಕಿದೆ. ಹಿರಿಯರ ಮತ್ತು ಉಲೇಮಾಗಳ ತ್ಯಾಗಮಯ ಜೀವನದ ಆದರ್ಶಗಳನ್ನು ಪಾಲಿಸಿ ಜೀವನ ನಿರ್ವಹಿಸಬೇಕಿದೆ ಎಂದ ಅವರು ಸದ್ಯ ಸಮಾಜದಲ್ಲಿ ಭ್ರಷ್ಟಾಚಾರ ದೊಡ್ಡ ಸಮಸ್ಯೆಯಲ್ಲ, ಯಾರಲ್ಲೂ ವಿಶ್ವಾಸ ಇಲ್ಲದೇ ಇರುವುದು ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ವಿಶ್ವಾಸವನ್ನು ಬೆಳೆಸುವ ಕಾರ್ಯ ಹಬ್ಬದ ಆಚರಣೆಗಳಿಂದ ಆಗಬೇಕಿದೆ ಎಂದರು.…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಎಲ್ಲಾ ರೀತಿಯ ಶಿಫಾರಸ್ಸು ಮಾಡುವುದಾಗಿ ರಾಜ್ಯ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ. ಅವರು ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಬುಧವಾರ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ನೂತನವಾಗಿ ಆಯ್ಕೆಯಾದ ಪ್ರೊ.ಜೋಗನ್ ಶಂಕರ್ ಇವರಿಗೆ ಅಭಿನಂದನೆ ನೆರವೇರಿಸಿ ಮಾತನಾಡಿದರು. ಸಾಮಾಜಿಕ ನ್ಯಾಯದ ಚಿಂತನೆ ನಡೆಸಿ ಮಾನವತಾವಾದಿಯನ್ನು ಬೋಧಿಸಿದ ಡಾ.ಅಂಬೇಡ್ಕರ್ ಅವರ ಹೆಸರಿನ ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಎಲ್ಲಾ ರೀತಿಯ ಅನುದಾನವನ್ನು ಒದಗಿಸಿಕೊಡಲು ಸರಕಾರದೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವುದಾಗಿ ಹೇಳಿದ ಅವರು ದೇಶ ನೈಸರ್ಗಿಕ ಸಂಪನ್ಮೂಲ, ಮಾನವೀಯ ಸಂಪನ್ಮೂಲ ಮತ್ತು ಜನಸಂಖ್ಯೆಯಲ್ಲಿ ಶ್ರೀಮಂತವಾಗಿದ್ದರೂ, ಅಸಮಾನತೆ, ಅಸ್ಪøಶ್ಯತೆ ಹಾಗೂ ಅನಕ್ಷರತೆಯಿಂದ ಅಭಿವೃದ್ಧಿಯಾಗಿಲ್ಲ. ಬಡತನವನ್ನಾದರೂ ಸಹಿಬಹುದು ಆದರೆ ಜಾತೀಯತೆಯನ್ನು ಸಹಿಸಲು ಅಸಾಧ್ಯ. ಅಸಮಾನತೆ, ಕ್ರೌರ್ಯದ ದೇವದಾಸಿ ಪದ್ಧತಿಗಳ ಬಗ್ಗೆ ಅಧ್ಯಯನ ನಡೆಸಿ ಅದರಲ್ಲಿ ಶೋಷಣೆಗೊಳಗಾದವರನ್ನು ಪುನರ್ವಸತಿ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವಂತಹ ಪ್ರಯತ್ನವನ್ನು ಕೈಗೊಂಡಿರುವ ಪ್ರೊ.ಜೋಗನ್ ಶಂಕರ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ಫಲಾಹ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ `ಉಚಿತ ಸೈಕಲ್ ವಿತರಣೆ’ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ವಿಶೇಷ ಮಾರ್ಗದರ್ಶನ ಕಾರ್ಯಾಗಾರ’ ನಡೆಯಿತು. ತಲಪಾಡಿ ಗ್ರಾಮ ಪಂಚಾಯತ್‍ನ ಉಪಾಧ್ಯಕ್ಷೆ ಜಯಲಕ್ಷ್ಮೀ ಸೀತಾರಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಸರಕಾರದ ಸವಲತ್ತನ್ನು ಸದ್ವಿನಿಯೋಗಿಸುವ ಮೂಲಕ ಮಕ್ಕಳ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಪ್ರಗತಿಯಾಗಲಿ ಎಂದು ಪೋಷಕರಿಗೆ ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎಸ್ .ಅಬ್ದುಲ್ ಖಾದರ್ ಕಡಬ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರದ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹಿರಾ: ಬೆಸೆಂಟ್ ಮಹಿಳಾ ಕಾಲೇಜಿನ ವತಿಯಿಂದ ನಡೆದ ‘ಬಿಕ್ವೆಸ್ಟ್ 2015’ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಹಿರಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಾದ ಸನಾ ಸಿರಾಜ್, ಆಫಿಯಾ, ಹಾಲ ತಮೀಝ, ಮಿಸ್ಬಾ, ಸುಮಯ್ಯ ಮತ್ತು ರಫಿಝ, ಆಯಿಷ ಲಮ್ಯ ಅಲ್ತಾಪ್, ಐಸ್ ಬ್ರೇಕರ್ಸ್‍ನಲ್ಲಿ ಪ್ರಥಮ, ಹಾಲ ತಮೀಝ , ಹಲೀಮ ಶೀರೀನ್, ಫರ್ಝುನ್ ಸಮಾ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದಿದ್ದು, ಮಂಗಳೂರು ರೋಶನಿ ನಿಲಯ ಕಾಲೇಜಿನಿಂದ ನಡೆಸಲಾದ ‘ಎಕ್ಸ್ ಪ್ರೆಶನ್ಸ್ 2015’ ಅಂತರ್ ಕಾಲೇಜು ಸ್ಪರ್ಧೆಯ ‘ದಿಯಾ ಪೈಂಟಿಂಗ್’ನಲ್ಲಿ ಸಮೀಹ ಫಾತಿಮಾದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಅಝಾದ್ ನಗರದ ಅಲ್ ಮಸ್ಚಿದುಲ್ ಫಾರುಕ್ ಮತ್ತು ಅನ್ವರುಲ್ ಉಲೂಂ ಮದ್ರಸದ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಬಾವ ಅಹಮ್ಮದ್ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮದರಸದ ಹಾಲ್‍ನಲ್ಲಿ ಅಬ್ದುಲ್ ಬಾಶಿತ್ ಮದನಿ(ಇಮಾಮ್)ರವರ ದುವಾದೊಂದಿಗೆ ಜರಗಿತು. 2015-16ನೇ ಸಾಲಿನ ಅಧ್ಯಕ್ಷರಾಗಿ ಬಾವಾ ಅಹಮದ್, ಉಪಾಧ್ಯಕ್ಷರಾಗಿ ಅಹಮದ್ ರಫೀಕ್ ಆರ್. ಆರ್., ಕಾರ್ಯದರ್ಶಿಯಾಗಿ ಮೊೈದಿನಬ್ಬ, ಕೋಶಾಧಿಕಾರಿಯಾಗಿ ಮಹಮ್ಮದ್, ಜೊತೆ ಕಾರ್ಯದರ್ಶಿಯಾಗಿ ಮಹಮ್ಮದ್ ಜಿ ಹಾಗೂ ಅಬ್ದುಲ್ ಅಜೀಜ್, ಫಾರುಕ್ ಬಾವ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಮೇಲ್ಸೇತುವೆಯಿಂದ ಅಬ್ಬಕ್ಕ ಸರ್ಕಲ್ ತನಕದ 10ಕೋಟಿ ರೂ. ಮೊತ್ತದ ಯೋಜನೆಯ ಮೊದಲ ಹಂತದ ಕಾಮಗಾರಿಯ ರಸ್ತೆಯನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ರಸ್ತೆ ನಿರ್ಮಾಣ ಕಾಲದಲ್ಲಿ ಎಲ್ಲರ ಸಹಕಾರ ಲಭ್ಯವಾಗಿದೆ. ಈ ರಸ್ತೆಯನ್ನು ಜಿಲ್ಲೆಯಲ್ಲಿಯೇ ಮಾದರಿ ರಸ್ತೆಯನ್ನಾಗಿ ಮಾಡುವ ಯೋಜನೆ ಇದೆ. ಅಬ್ಬಕ್ಕ ಸರ್ಕಲ್‍ನಿಂದ ಮುಕ್ಕಚ್ಚೇರಿಯಾಗಿ ಸೋಮೇಶ್ವರ ಸಂಪರ್ಕಿಸುವ ಹಾಗೂ ಅಬ್ಬಕ್ಕ ಸರ್ಕಲ್‍ನಿಂದ ಕೋಡಿಗೆ ಸಂಪರ್ಕಿಸುವ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ಡಾಮರೀಕರಣ ಮಾಡಲಿದ್ದೇವೆ ಎಂದರು. ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಉಳ್ಳಾಲ ನಗರ ಸಭೆ ಅಧ್ಯಕ್ಷೆ ಗಿರಿಜಾ ಎಂ.ಬಾೈ, ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಮುಕ್ಕಚ್ಚೇರಿ, ನಗರ ಸಭೆ ಸದಸ್ಯ ಫಾರೂಕ್ ಉಳ್ಳಾಲ್, ಉಸ್ಮಾನ್ ಕಲ್ಲಾಪು, ಮೊಹಮ್ಮದ್ ಮುಸ್ತಫಾ, ಸಲೀಂ, ಆಸಿಫ್ ಉಳ್ಳಾಲ, ಅಬ್ದುಲ್ ಅಜೀಝ್ ಹಕ್, ಅಹ್ಮದ್ ಬಾವಾ ಕೊಟ್ಟಾರ, ತಾಲೂಕು ಪಂಚಾಯತ್ ಸದಸ್ಯ ಮೊಹಮ್ಮದ್ ಮೋನು, ಗುತ್ತಿಗೆದಾರ ಸುಧಾಕರ್ ಪೂಂಜಾ ಉಪಸ್ಥಿತರಿದ್ದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದೇ ಇರುವುದರಿಂದ ರಕ್ತದಾನದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಇನ್ನೂ ಕೂಡ ವ್ಯಾಪಕವಾಗಿ ನಡೆಯಬೇಕಾಗಿದೆ. ಅಪಘಾತ, ಹೆರಿಗೆಯ ಸಂದರ್ಭದಲ್ಲಿ ಬ್ಲಡ್ ಕ್ಯಾನ್ಸರ್, ಡೆಂಗ್ಯೂ ಮತ್ತು ಇನ್ನಿತರ ತುರ್ತು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದೆ ಎಂದು ಎಸ್‍ಡಿಪಿಐ ಮಂಗಳೂರು ವಿಧಾನಸಭಾ ಸದಸ್ಯ ಹಾರೀಸ್ ಮಲಾರ್ ಹೇಳಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲ ವಲಂiÀi ಹಾಗೂ ಕೆ. ಎಂ. ಸಿ ಆಸ್ಪತ್ರೆ ಮಂಗಳೂರು ಜಂಟಿ ಆಶ್ರಯದಲ್ಲಿ ಹಳೆಕೋಟೆಯ ಸೈಯದ್ ಮದನಿ ಪ್ರೌಢಶಾಲೆಯಲ್ಲಿ ನಡೆದ ಸಾರ್ವಜನಿಕ ರಕ್ತದಾನದ ಶಿಬಿರದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಸ್ಜೀದುಲ್ ಅಲ್ ಕರೀಂ ಹಳೆಕೋಟೆ ಖತೀಬರಾದ ಉಸ್ಮಾನ್ ಸಅದಿ ದು:ಆ ನೆರವೇರಿಸಿದರು. ಪಿಎಫ್‍ಐ ಹಳೆಕೋಟೆ ಘಟಕಾಧ್ಯಕ್ಷ ಪೈರೋಝ್ ಉಳ್ಳಾಲ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಸಿ. ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಾ. ಅಕ್ಷಯ್ ಕಾಂiÀರ್iಕ್ರಮ ಉದ್ಘಾಟಿಸಿದರು. ಎಸ್.ಐ.ಓ. ಉಳ್ಳಾ¯ ಸೆಕ್ಟರ್ ಅಧ್ಯಕ್ಷ ಡಾ. ಝೈನುದೀನ್ ಅಳೇಕಲ,…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಅನುದಾನಿತ ಮದನಿ ಪ್ರೌಢಶಾಲೆ ಅಳೇಕಲ ಉಳ್ಳಾಲ ಇಲ್ಲಿಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಂಸ್ಥೆಯ ಉಪಾಧ್ಯಕ್ಷ ಇಬ್ರಾಹಿಂ ಕಾಸಿಂ, ಉಳ್ಳಾಲ ಪುರಸಭಾ ಅಧ್ಯಕ್ಷೆ ಗಿರಿಜಾ ಬಾೈ ಸೈಕಲ್ ವಿತರಿಸಿದರು. ಶಾಲೆಯ ಸಂಚಾಲಕ ಯು.ಕೆ. ಇಬ್ರಾಹಿಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭಾ ಉಪಾಧ್ಯಕ್ಷೆ ರಜಿಯಾ ಇಬ್ರಾಹಿಂ, ಮದನಿ ಎಜ್ಯುಕೇಶನಲ್ ಎಸೋಸಿಯೇಶನ್ ಜೊತೆ ಕಾರ್ಯದರ್ಶಿ ಎ.ಎ. ಖಾದರ್, ಸಮಿತಿ ಸದಸ್ಯರಾದ ಯು.ಎ. ಇಸ್ಮಾಯಿಲ್, ಮದನಿ ಪದವಿ ಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲ ಬಿ. ಮೂಸಾ, ಪ್ರಾಥಮಿಕ ಶಾಲೆಯ ಸಂಚಾಲಕ ಇಬ್ರಾಹಿಂ ಅಲಿಯಬ್ಬ, ಪ್ರಾಥಮಿಕ ವಿಭಾಗದ ಸಹ ಶಿಕ್ಷಕಿ ಮೀರಾ ಜೆ. ಉಪಸ್ಥಿತರಿದ್ದರು. ಸಹ ಶಿಕ್ಷಕ ಇಬ್ರಾಹಿಂ ಪಿ. ಸ್ವಾಗತಿಸಿದರು. ದೈಹಿಕ ಶಿಕ್ಷಕ ಲೋಕನಾಥ ರೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ದೇವಪ್ಪ ಶೆಟ್ಟಿ ವಂದಿಸಿದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಎಲಿಮಲೆ: ದೇರಳಕಟ್ಟೆಯ ನಿಟ್ಟೆ ವಿಶ್ವ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ತೇಜಸ್ವಿನಿ ಆಸ್ಪತ್ರೆ ರಕ್ತನಿಧಿ ಮಂಗಳೂರು ಇವರ ಸಹಕಾರದೊಂದಿಗೆ ಮುಳ್ಳೇರಿಯಾ ಹವ್ಯಕ ಮಂಡಲ ಗುತ್ತಿಗಾರು ವಲಯ ಪರಿಷತ್ ನೆಲ್ಲೂರು ಕೆಮ್ರಾಜೆ ಫ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ. ಮಿತ್ತ ಮಂಡಳಿ ಎಲಿಮಲೆ, ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆ ಇದರ ಆಶ್ರಯದಲ್ಲಿ ರಕ್ತದಾನ ಶಿಬಿರ ಎಲಿಮಲೆಯ ಜ್ಞಾನದೀಪ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಞಾನದೀಪ ಶಾಲೆಯ ಅಧ್ಯಕ್ಷ ಚಂದ್ರಶೇಖರ ತಳೂರು ಉದ್ಘಾಟಿಸಿದರು. ಈ ಸಂದರ್ಭ ನೆಲ್ಲೂರು ಕೆಮ್ರಾಜಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಗುಡ್ಡದ ಮನೆ, ಗುತ್ತಿಗಾರು ವಲಯ ಹವ್ಯಕ ಪರಿಷತ್ ಇದರ ಆರೋಗ್ಯ ಸಂಚಾಲಕ ರಮೇಶ್ ದೇಲಂಪಾಡಿ ಮತ್ತು ನಿಟ್ಟೆ ವಿಶ್ವ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆಯ ಸಂಘಟನಾಧಿಕಾರಿ ಡಾ. ಮುರಲೀ ಮೋಹನ್ ಚೂಂತಾರು ಉಪಸ್ಥಿತಿರಿದ್ದರು. ಸುಮಾರು 50 ಮಂದಿ ರಕ್ತದಾನ ಮಾಡಿದರು. ಸುಬ್ರಮ್ಮಣ್ಯ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬಂಟ್ವಾಳ: ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕತ್ತಿಯಿಂದ ಕಡಿದು ಮಂಚಿ ಪಂಚಾಯಿತಿ ಸದಸ್ಯ ಆತ್ಮಹತ್ಯೆ ಗೈದಿರುವ ಹೃದಯಾ ವಿದ್ರಾವಕ ಘಟನೆ ಇರಾ ಸಮೀಪದ ಮಂಚಿ ಎಂಬಲ್ಲಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮಂಚಿ ಪಂಚಾಯತ್ ಸದಸ್ಯ ಪದ್ಮನಾಭ ಆತನ ಪತ್ನಿ ಹಾಗೂ ಮಕ್ಕಳಾದ ಪೂರ್ವಿ ಮತ್ತು ಪೃಥ್ವಿ ಇವರನ್ನು ಕತ್ತಿಯಿಂದ ಕಡಿದು ತಾನು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಇವರ ಮನೆ ಸಮೀಪ ಪಿಕಪ್ ವಾಹನದಲ್ಲಿ ಬಂದವರು ಘಟನೆಯನ್ನು ಬೆಳಕಿಗೆ ತಂದಿದ್ದಾರೆ. ಮಧ್ಯರಾತ್ರಿಯಲ್ಲಿ ಪದ್ಮನಾಭ ಕೃತ್ಯ ಎಸಗಿರುವುದಾಗಿ ಶಂಕಿಸಲಾಗಿದೆ. ಮಾಟ ಮಂತ್ರದ ಅಭ್ಯಾಸ: ಎಂದಿನಂತೆ ಮನೆಯಲ್ಲಿ ಪದ್ಮನಾಭ ಅವರ ತಾಯಿ ಹಾಗೂ ಪಕ್ಕದ ಮನೆಯ ಹುಡುಗಿಯೋರ್ವಳು ಇರುತ್ತಿದ್ದರು. ಮಂಗಳವಾರ ಸಂಜೆ ಮನೆಯಲ್ಲಿ ಸಮಸ್ಯೆಯಿದ್ದು ಅದಕ್ಕಾಗಿ ಮೂಳಿಗೆಯೊಂದನ್ನು ಮಾಡಲಿದ್ದೇನೆ ನೀವಿಬ್ಬರು ಇಂದು ಸಹೋದರನ ಮನೆಗೆ ಹೋಗಿ ಎಂದು ತಿಳಿಸಿದ್ದನು ಎಂದು ಕುಟುಂಬ ಮೂಲಗಳು ತಿಳಿಸಿವೆ. ಕೆಲವು ದಿನಗಳಿಂದ ಮಾನಸಿಕವಾಗಿ ನೊಂದಿದ್ದ ಪದ್ಮನಾಭ ಮನೆಯಲ್ಲಿ ಸಮಸ್ಯೆ ಇರುವುದಾಗಿ ಹಲವರಲ್ಲಿ ಹೇಳಿಕೊಂಡಿದ್ದನು ಎಂದು…

