Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಯಾವುದೇ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ದೀರ್ಘ ಇತಿಹಾಸವಿರುವ ಅಳೇಕಲದ ಮದನಿ ವಿದ್ಯಾಸಂಸ್ಥೆಯ ಸಹಸ್ರಾರು ಹಳೆವಿದ್ಯಾರ್ಥಿಗಳು ಒಟ್ಟು ಸೇರಿ ವಿದ್ಯಾಸಂಸ್ಥೆಗೆ ಪೂರಕವಾಗಿ ಬಲಿಷ್ಠವಾದ ಹಳೆವಿದ್ಯಾರ್ಥಿ ಸಂಘ ಹುಟ್ಟುಹಾಕಿದ್ದು ಮಹತ್ತರ ಕೆಲಸ. ನೂತನ ಕಛೇರಿಯ ಮೂಲಕ ಮುಂದಿನ ದಿನಗಳಲ್ಲಿ ಪೂರ್ವ ವಿದ್ಯಾರ್ಥಿಗಳು ಹಾಗೂ ನಿವೃತ್ತ ಶಿಕ್ಷಕರು ಸಂಸ್ಥೆಯ ಸರ್ವತ್ತೋಮುಖ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.ಆವರು ಅಳೇಕಲ ಮದನಿ ವಿದ್ಯಾಸಂಸ್ಥೆಯ ವಠಾರದಲ್ಲಿ ನಡೆದ ಹಳೆ-ವಿದ್ಯಾರ್ಥಿಗಳು ಹಾಗೂ ನಿವೃತ್ತ ಶಿಕ್ಷಕರ ಸಂಘ ಮದನಿ ಅಲುಮ್ನಿ ಅಸೋಸಿಯೇಷನ್ ಇದರ ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಸಂಘದ ಗೌರವ ಸಲಹೆಗಾರ ಹಾಗೂ ನಿವೃತ್ತ ಅಧ್ಯಾಪಕ ಕಮಲಾಕ್ಷ ಮಾತನಾಡಿ ನಾಡಿನ ನಾನಾ ಭಾಗಗಳಲ್ಲಿ ನೆಲೆಸಿರುವ ಈ ಸಂಸ್ಥೆಯ ಪೂರ್ವ ವಿದ್ಯಾರ್ಥಿಗಳ ಕೂಡುವಿಕೆಯಿಂದ ಸಂಘ ಬಲಿಷ್ಠವಾಗಿದ್ದು, ಸಂಘದ ಪರವಾಗಿ ವಿದ್ಯಾ ಸಂಸ್ಥೆಗೆ ಸುಸಜ್ಜಿತ ರಂಗಮಂಟಪದ ಹಾಗೂ ಸುಮಾರು 3000 ಚದರ ಅಡಿ…

Read More

UN NETWORKS ಬೆಂಗಳೂರು: ಬೆಂಗಳೂರು ಶಂಸುಲ್ ಉಲಮಾ ದಾರುಸ್ಸಾಲಾಂ ಅಕಾಡೆಮಿ ವಾದಿತ್ವೈಬಾ ಕಿನ್ಯ ಇದರ ಬೆಂಗಳೂರು ಸಮಿತಿ ವತಿಯಿಂದ ಇತ್ತೀಚೆಗೆ ನಿಧನರಾದ ಅಬ್ದುಲ್ ಜಬ್ಬಾರ್ ಉಸ್ತಾದ್(ನ.ಮ) ಹಾಗೂ ಅತ್ತಿಪಟ್ಟ ಉಸ್ತಾದ್(ನ.ಮ) ಅನುಸ್ಮರಣಾ ಕಾರ್ಯಕ್ರಮ ಜನವರಿ 17 ಗುರುವಾರ ರಾತ್ರಿ 10 ಗಂಟೆಗೆ ಮೆಜೆಸ್ಟಿಕ್ ವಕ್ಕಲ್ ಮಸ್ತಾನ್ ಆಡಿಟೋರಿಯಂ ನಲ್ಲಿ ನಡೆಯಲಿದೆ. ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡೆಮಿ ಇದರ ಅಧ್ಯಕ್ಷರಾದ ಸೆಯ್ಯಿದ್ ಅಮೀರ್ ತಂಗಳ್ ಕಿನ್ಯ ದುವಾ ಆಶೀರ್ವಚನ ನೀಡಲಿದ್ದಾರೆ. ಸಂಸ್ಥೆಯ ಪ್ರಿನ್ಸಿಪಾಲರಾದ ಖಾಸಿಂ ದಾರಿಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಲಮಾ ಉಮರಾ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆಂದು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

Read More

UN NETWORKS ಮಂಗಳೂರು: SKSSF ದೇರಳಕಟ್ಟೆ ಶಾಖೆ ಇದರ ಆಶ್ರಯದಲ್ಲಿ ಜನವರಿ 19 ಶನಿವಾರ ರಾತ್ರಿ 07:00 ಕ್ಕೆ ಶಂಸುಲ್ ಉಲಮಾ ಮೌಲಿದ್ ವಾರ್ಷಿಕ ಹಾಗೂ ಶೈಖುನಾ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ರವರ ಅನುಸ್ಮರಣಾ ಸಂಗಮವು ದೇರಳಕಟ್ಟೆ ಗ್ರೀನ್ ಗ್ರೌಂಡ್ ನಲ್ಲಿ ನಡೆಯಲಿದೆ. ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದರ ಅದ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಣಕ್ಕಾಡ್ ಸಯ್ಯದ್ ಹಾರಿಸಲಿ ಶಿಹಾಬ್ ತಂಗಳ್ ದುಆ ಕ್ಕೆ ನೇತೃತ್ವ ನೀಡಲಿದ್ದು.ಖ್ಯಾತ ಪ್ರಭಾಷಣಗಾರ ಬಹು|ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಮುಖ್ಯ ಪ್ರಭಾಷಣ ಮಾಡಲಿದ್ದು ಕಾರ್ಯಕ್ರಮದಲ್ಲಿ ಹಲವಾರು ಪ್ರಮುಖ ಉಲಮಾಗಳು ನೇತಾರರು ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.

Read More

UN NETWORKS ಉಳ್ಳಾಲ: ಸೂಚನಾ ಫಲಕದಲ್ಲಿ ಹಾಕಿರುವ ಸೂಚನೆಯಂತೆ ವಾಹನ ಸವಾರರು ಹೋದಲ್ಲಿ ಆಸ್ಪತ್ರೆ ಸೇರುವುದು ಖಚಿತ. ಕಳೆದ ಮೂರು ವರ್ಷಗಳಿಂದ ವಾಹನ ಸವಾರರು ಇಂತಹ ಇಕ್ಕಟ್ಟಿಗೆ ಸಿಲುಕುತ್ತಲೇ ಬಂದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯಿಂದಾಗಿ ಯುನಿಟಿ ಸಭಾಂಗಣದ ಎದುರುಗಡೆಯ ರಸ್ತೆಯಲ್ಲಿ ಹಾಕಿರುವ ಮಣ್ಣಿನ ರಾಶಿಯಿಂದಾಗಿ ನಿತ್ಯ ನಿರಂತರ ಅಪಘಾತಗಳು ಸಂಭವಿಸುತ್ತಲೇ ಇದ್ದರೂ ಜಿಲ್ಲಾಡಳಿತವಾಗಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ ಇತ್ತ ಗಮನಹರಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. https://www.youtube.com/watch?v=EeXOecARnTU ಸೋಮವಾರ ತಡರಾತ್ರಿ ಕೇರಳ ಕಡೆಗೆ ತೆರಳುತ್ತಿದ್ದ ಕಾರು ಯುನಿಟಿ ಸಭಾಂಗಣದ ಎದುರುಗಡೆ ರಾ.ಹೆ.ಯಲ್ಲಿ ಹಾಕಲಾಗಿರುವ ಮಣ್ಣಿನ ರಾಶಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗಳಾಗಿರುವ ಕುರಿತು ಯಾವುದೇ ವರದಿಯಿಲ್ಲ. ಇಂತಹ ಅಪಘಾತಗಳು ನಿರಂತರವಾಗಿ ನಡೆಯುತ್ತಲೇ ಬಂದಿರುವ ವಿರುದ್ಧ ಇದೀಗ ಸ್ಥಳೀಯರು ಜನಪ್ರತಿನಿಧಿಗಳು ಹಾಗೂ ಗುತ್ತಿಗೆ ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಎಂಟು ವರ್ಷಗಳಿಂದ ನಡೆಯುತ್ತಲೇ ಇದೆ. ಕಾಮಗಾರಿ ಸಂದರ್ಭ ವಾಹನ ಸವಾರರಿಗೆ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ…

Read More

UN NETWORKS ಮಲಪ್ಪುರಂ : ಪಟ್ಟಿಕ್ಕಾಡ್ ಜಾಮಿಅಃ ನೂರಿಯ್ಯಾ ಅರಬಿಯ್ಯಾ ದ 56 ನೇ ವಾರ್ಷಿಕ ಮತ್ತು 54ನೇ ಸನದುದಾನ ಮಹಾಸಮ್ಮೇಳನ ಭಾಗವಾಗಿ ಜಾಮಿಯಾ ಕನ್ನಡ ಕನ್ನಡ ಸಂಗಮ ಕಾರ್ಯಕ್ರಮ ಫೈಝಾಬಾದ್ ಜಾಮಿಯಾ ಕ್ಯಾಂಪಸ್ಸಿನಲ್ಲಿ ನಡೆಯಿತು. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಯಾ ಪ್ರೊಫೆಸರ್ ಕೆ ಆಲಿಕುಟ್ಟಿ ಮುಸ್ಲಿಯಾರ್ ನೇತೃತ್ವ ವಹಿಸಿದರು . ಕರ್ನಾಟಕ ರಾಜ್ಯ ಫೈಝೀಸ್ ಅಧ್ಯಕ್ಷರಾದ ಉಸ್ಮಾನ್ ಫೈಝಿ ತೋಡಾರು ಉದ್ಘಾಟಿಸಿದರು. ಸಿರಾಜುದ್ದೀನ್ ಫೈಝಿ ಮಾಡನ್ನೂರು , ಶುಹೈಬ್ ಫೈಝಿ ಕೊಳಕೇರಿ ಮುಖ್ಯ ಪ್ರಭಾಷಣ ನಡೆಸಿದರು . ಜಾಮಿಅ ನೂರಿಯ್ಯಾದ ಗುರುವರ್ಯರಾದ ಶೈಖುನಾ ಕೋಟುಮಲ ಮುಹಿಯುದ್ದೀನ್ ಕುಟ್ಟಿ ಉಸ್ತಾದ್, ಚುಂಗತ್ತರ ಸುಲೈಮಾನ್ ಫೈಝಿ, ಮುಹಮ್ಮದ್ ಅಲಿ ಫೈಝಿ ಕೂಮಣ್ಣ, ಲಿಯಾವುದ್ದೀನ್ ಫೈಝಿ, ಹಂಝ ಫೈಝಿ ಅಲ್ ಹೈತಮಿ, ಉಮರ್ ಫೈಝಿ ಮುಡಿಕ್ಕೋಡ್ ಶುಭ ಹಾರೈಸಿದರು. ಫೈಝೀಸ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಕೊಡಗು ಅಧ್ಯಕ್ಷತೆ ವಹಿಸಿದರು. ಶರೀಫ್ ಫೈಝಿ ಕಡಬ, ಸುಲೈಮಾನ್…

Read More

UN NETWORKS ನರಿಂಗಾನ: ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಬಲೆತ್ತೋಡು ಹಾಗೂ ಸರ್ಕುಡೇಲು ಅಣೆಕಟ್ಟು ದುರಸ್ಥಿಗಾಗಿ ಧನ ಸಹಾಯ ನೀಡಿದ ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಗ್ರಾಮದ ರಸ್ತೆ ನಿರ್ಮಾಣಕ್ಕೆ ಅನುದಾನ ದೊರಕಿಸಿಕೊಟ್ಟ ಗ್ರಾಮ ಪಂಚಾಯಿತಿ ಸದಸ್ಯರನ್ನು ಅಭಿನಂದಿಸುವ ಕಾರ್ಯಕ್ರಮ ಬಲೆತ್ತೋಡಿನ ನಾರಾಯಣ ಶೆಟ್ಟಿ ಅವರ ಮನೆಯಲ್ಲಿ ಭಾನುವಾರ ನಡೆಯಿತು. ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಮಾತನಾಡಿ ಗ್ರಾಮದಲ್ಲಿ ರಸ್ತೆ, ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಕೊಟ್ಟಾಗ ಜನರು ಆ ಕಾರ್ಯದಲ್ಲಿ ಶ್ರಮಿಸಿದವರನ್ನು ಯಾವತ್ತೂ ಮರೆಯುವುದಿಲ್ಲ. ಆನಿಟ್ಟಿನಲ್ಲಿ ಕೈರಂಗಳ ವ್ಯವಸ್ಯಾಯ ಸೇವಾ ಸಹಕಾರಿ ಸಂಘ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡು ಮಾದರಿಯಾಗಿದೆ. ಹಾಗೆಯೇ ಹಲವು ದಶಕಗಳ ಬೇಡಿಕೆಯಾದ ಗರೋಡಿ ಮರ್ಚೋಡಿ ರಸ್ತೆಯನ್ನು ನಿರ್ಮಿಸುವ ಮೂಲಕ ಪಂಚಾಯಿತಿ ಸದ್ಯೆ ಹರಿಣಾಕ್ಷಿ ಅವರು ಜನಮಾನಸಲದಲಿ ಉಳಿಯಲಿದ್ದಾರೆ ಎಂದು ನುಡಿದರು.ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಸಂಘದ ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಹೇಶ್ ಚೌಟ, ನಿರ್ದೇಶಕರುಗಳಾದ…

Read More

UN NETWORKS ತೊಕ್ಕೊಟ್ಟು : ತೊಕ್ಕೊಟ್ಟು ಪೆರ್ಮನ್ನೂರು ಸೈಂಟ್ ಸೆಬೆಸ್ಟಿಯನ್ ಧರ್ಮಕೇಂದ್ರದ ವಾರ್ಷಿಕ ಹಬ್ಬದ ತಯಾರಿಯಾಗಿ ಪರಮಪ್ರಸಾದ ಮೆರವಣಿಗೆ ಆಡಂಕುದ್ರುವಿನ ಸಂತ ಸೆಬೆಸ್ಟಿಯನ್ ಸ್ಮಾರಕದಿಂದ ಪೆರ್ಮನ್ನೂರು ಧರ್ಮಕೇಂದ್ರದ ವರೆಗೆ ವಿಜೃಂಭಣೆಯಿಂದ ಭಾನುವಾರ ನಡೆಯಿತು. ಸುಮಾರು 3,000 ಕ್ಕೂ ಅಧಿಕ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು. ಪ್ರಧಾನ ಧರ್ಮಗುರು ಬೊನಿಫಾಸ್ ಪಿಂಟೋ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಚರ್ಚ್   ಪ್ರಧಾನ ಧರ್ಮಗುರು ಜೆ.ಬಿ.ಸಲ್ದಾನ್ಹ, ಸಹಾಯಕ ಧರ್ಮಗುರುಗಳಾದ ಸ್ಟ್ಯಾನಿ ಪಿಂಟೋ, ಲೈಝಿಲ್ ಡಿಸೋಜ, ರೂಪೇಶ್ ಮಾಡ್ತಾ, ವೆಲೇರಿಯನ್ ಪಿಂಟೋ, ಪೀಟರ್ ಸೆರಾವೋ ಉಪಸ್ಥಿತರಿದ್ದರು.

Read More

UN NETWORKS ದೇರಳಕಟ್ಟೆ : ದೇರಳಕಟ್ಟೆ ಎ.ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ನೂತನ ವಿಸ್ತರಿತ ಕಟ್ಟಡವನ್ನು ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು. ಈ ವೇಳೆ ಕುಲಪತಿ ಡಾ| ಸತೀಶ್ ಭಂಡಾರಿ, ಕುಲಸಚಿವೆ ಡಾ| ಅಲ್ಕಾ ಕುಲಕರ್ಣಿ, ಹಣಕಾಸು ವಿಭಾಗ ನಿರ್ದೇಶಕ ರಾಜೇಂದ್ರ, ಕಾಲೇಜು ಪ್ರಾಂಶುಪಾಲ ಡಾ.ಯು,ಎಸ್.ಕೃಷ್ಣ ನಾಯಕ್, ಉಪ್ರಪ್ರಾಂಶುಪಾಲೆ ಡಾ| ಮಿತ್ರಾ ಎನ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.

Read More

UN NETWORKS ಮುಡಿಪು: ಪಂಚಾಯಿತಿ ಜನರ ಸಮಸ್ಯೆ ಪರಿಹರಿಸಿದಾಗ ಗ್ರಾಮಸ್ಥರಿಗೆ ಪಂಚಾಯಿತಿ ಮೇಲೆ ಪ್ರೀತಿ ಇರುವುದು. ಬಿಜೆಪಿ ಆಡಳಿತವಿರುವ ಕುರ್ನಾಡು ಗ್ರಾಮ ಪಂಚಾಯಿತಿನಿಲ್ಲಿ ಅದು ಸಾಧ್ಯವಾಗಿದೆ ಎಂದು ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಟಿ.ಜಿ ರಾಜಾರಾಂ ಭಟ್ ಅಭಿಪ್ರಾಯಪಟ್ಟರು. ಅವರು ಕುರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಗ್ರಾಮ ಅಯೋಧ್ಯೆ ನಗರದ ರಸ್ತೆ ಡಾಮರೀಕರಣಕ್ಕೆ ಸೋಮವಾರ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.ಗ್ರಾಮದ ಅಭಿವೃದ್ಧಿಗೆ ಕುರ್ನಾಡು ಗ್ರಾ.ಪಂ ಆಡಳಿತ ನಿರಂತರ ಶ್ರಮಿಸುತ್ತಿದೆ. ನವಗ್ರಾಮ ಸೈಟುಗಳಲ್ಲಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಿಂದಿನ ಜಿ.ಪಂ ಸದಸ್ಯರು ಹಾಗೂ ಕುರ್ನಾಡು ಪಂ. ಆಡಳಿತ ಸಫಲವಾಗಿದೆ. ಗೇಲ್ ಸಂಸ್ಥೆ ಯಿಂದಲೂ ಪ್ರದೇಶಕ್ಕೆ 20 ಲಕ್ಷ ರೂ.ಗಳಲ್ಲಿ ರಸ್ತೆ ನಿರ್ಮಿಸಿ ಕೊಡುವ ಭರವಸೆ ದೊರೆತಿದೆ ಎಂದರು. ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ಬೋಳಿಯಾರ್ ಮಾತನಾಡಿ, ಪಂಚಾಯಿತಿ ಆಡಳಿತ ಅಭಿವೃದ್ಧಿಯ ಚಿಂತನೆಯಿಂದಾಗಿ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಪರ ಕಾರ್ಯಗಳು ನಡೆದಿವೆ. ನವಗ್ರಾಮ ಅಯೋಧ್ಯೆನಗರದಲ್ಲಿ ಮೂಲಭೂತ ಸೌಕರ್ಯಗಳ ಜೊತೆಗೆ ಶೀಘ್ರದಲ್ಲೇ ದೇವಸ್ಥಾನದ ನಿರ್ಮಾಣವೂ ಆಗಲಿದೆ.…

Read More

UN NETWORKS ಉಳ್ಳಾಲ: ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯನ್ನು ನಿಖರ ಹಾಗೂ ವೈಜ್ಞಾನಿಕವಾಗಿ ನೀಡಿದಾಗ ಮಾತ್ರ ಅದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಮದ್ದಿಗಿಂತ ವೈದ್ಯರ ಮಾತು ಮುಖ್ಯ. ಯುವಜನತೆ ವಿಶ್ವದಲ್ಲೇ ಶ್ರೇಷ್ಟವಾಗಿರುವ ಭಾರತೀಯ ಆಹಾರ ಮತ್ತು ವೈದ್ಯಪದ್ಧತಿಯನ್ನು ಅನುಸರಿಸುವ ಮುಖೇನ ಉತ್ತಮ ಸಮಾಜಕ್ಕಾಗಿ ಶ್ರಮಿಸಬೇಕಾಗಿದೆ ಎಂದು ಮಾಹೆ ವಿವಿಯ ವಿಶ್ರಾಂತ ಕುಲಪತಿ, ಪದ್ಮಭೂಷಣ ಪುರಸ್ಕೃತ ಡಾ.ಬಿ.ಎಂ.ಹೆಗ್ಡೆ ಹೇಳಿದರು. ತಲಪಾಡಿ ದೇವಿನಗರದ ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಪುನರ್ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎಲ್ಲರನ್ನು ಪ್ರೀತಿಸುವುದು, ಯಾರನ್ನೂ ದ್ವೇಷಿಸದಿರುವುದು, ಹಿತ ಮಿತ ಆಹಾರ- ವಿಹಾರ, ಸತ್ಯ ಮತ್ತು ನೈತಿಕತೆ ಆಧರಿತ ಜೀವನಕ್ರಮವನ್ನು ಯುವಮನಸ್ಸುಗಳು ರೂಢಿಸಿಕೊಳ್ಳಬೇಕು. ಪ್ರೀತಿಯಿಂದ ಭಾರತೀಯ ಆಹಾರ ಪದ್ಧತಿಯನ್ನು ಅನುಸರಿಸಿ. ಹಾಟ್ ಡಾಗ್, ಫಿಝಾ ಸಂಸ್ಕೃತಿಗೆ ಮೊರೆ ಹೋಗಿ ಆರೋಗ್ಯ ಕೆಡಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು. ಮಂಗಳೂರಿನ ಪರಿಸರ ಅತ್ಯುತ್ತಮ. ದೇಹದ ಮತ್ತು ವಾತಾವರಣದ ಕಲ್ಮಶಗಳು ಗಾಳಿ ಮೂಲಕ ಸಮುದ್ರ ಸೇರುತ್ತವೆ. ಆ…

Read More