UN NETWORKS
ಮಲಪ್ಪುರಂ : ಪಟ್ಟಿಕ್ಕಾಡ್ ಜಾಮಿಅಃ ನೂರಿಯ್ಯಾ ಅರಬಿಯ್ಯಾ ದ 56 ನೇ ವಾರ್ಷಿಕ ಮತ್ತು 54ನೇ ಸನದುದಾನ ಮಹಾಸಮ್ಮೇಳನ ಭಾಗವಾಗಿ ಜಾಮಿಯಾ ಕನ್ನಡ ಕನ್ನಡ ಸಂಗಮ ಕಾರ್ಯಕ್ರಮ ಫೈಝಾಬಾದ್ ಜಾಮಿಯಾ ಕ್ಯಾಂಪಸ್ಸಿನಲ್ಲಿ ನಡೆಯಿತು.
ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಯಾ ಪ್ರೊಫೆಸರ್ ಕೆ ಆಲಿಕುಟ್ಟಿ ಮುಸ್ಲಿಯಾರ್ ನೇತೃತ್ವ ವಹಿಸಿದರು . ಕರ್ನಾಟಕ ರಾಜ್ಯ ಫೈಝೀಸ್ ಅಧ್ಯಕ್ಷರಾದ ಉಸ್ಮಾನ್ ಫೈಝಿ ತೋಡಾರು ಉದ್ಘಾಟಿಸಿದರು. ಸಿರಾಜುದ್ದೀನ್ ಫೈಝಿ ಮಾಡನ್ನೂರು , ಶುಹೈಬ್ ಫೈಝಿ ಕೊಳಕೇರಿ ಮುಖ್ಯ ಪ್ರಭಾಷಣ ನಡೆಸಿದರು . ಜಾಮಿಅ ನೂರಿಯ್ಯಾದ ಗುರುವರ್ಯರಾದ ಶೈಖುನಾ ಕೋಟುಮಲ ಮುಹಿಯುದ್ದೀನ್ ಕುಟ್ಟಿ ಉಸ್ತಾದ್, ಚುಂಗತ್ತರ ಸುಲೈಮಾನ್ ಫೈಝಿ, ಮುಹಮ್ಮದ್ ಅಲಿ ಫೈಝಿ ಕೂಮಣ್ಣ, ಲಿಯಾವುದ್ದೀನ್ ಫೈಝಿ, ಹಂಝ ಫೈಝಿ ಅಲ್ ಹೈತಮಿ, ಉಮರ್ ಫೈಝಿ ಮುಡಿಕ್ಕೋಡ್ ಶುಭ ಹಾರೈಸಿದರು. ಫೈಝೀಸ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಕೊಡಗು ಅಧ್ಯಕ್ಷತೆ ವಹಿಸಿದರು. ಶರೀಫ್ ಫೈಝಿ ಕಡಬ, ಸುಲೈಮಾನ್ ಫೈಝಿ ಕಣಿಯೂರು, ಉಮರ್ ಫೈಝಿ ಸಾಲ್ಮರ, ಅಬೂ ಸ್ವಾಲಿಹ್ ಫೈಝಿ ಅಕ್ಕರಂಗಡಿ, ಅಬ್ದುರ್ರಹ್ಮಾನ್ ಫೈಝಿ ಕಜೆಕಾರ್, ಅನ್ಸಾರ್ ಫೈಝಿ ಬುರ್ಹಾನಿ ಕಣ್ಣೂರು, ಅಬ್ದುರ್ರಹ್ಮಾನ್ ದಾಯಿ ಬೆಂಗಳೂರು ಮುಂತಾದವರು ಉಪಸ್ಥಿತರಿದ್ದರು.
ಮಿಸ್ಬಾಹುಲ್ ಜಾಮಿಅ ಕನ್ನಡ ಸಾಹಿತ್ಯ ಸಂಘ ಪ್ರಧಾನ ಕಾರ್ಯದರ್ಶಿ ಹಂಝ ತೋಡಾರು ಸ್ವಾಗತಿಸಿ, ಅಹ್ಮದ್ ನಈಂ ಮುಕ್ವೆ ನಿರೂಪಿಸಿದರು.


