UN NETWORKS
ನರಿಂಗಾನ: ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಬಲೆತ್ತೋಡು ಹಾಗೂ ಸರ್ಕುಡೇಲು ಅಣೆಕಟ್ಟು ದುರಸ್ಥಿಗಾಗಿ ಧನ ಸಹಾಯ ನೀಡಿದ ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಗ್ರಾಮದ ರಸ್ತೆ ನಿರ್ಮಾಣಕ್ಕೆ ಅನುದಾನ ದೊರಕಿಸಿಕೊಟ್ಟ ಗ್ರಾಮ ಪಂಚಾಯಿತಿ ಸದಸ್ಯರನ್ನು ಅಭಿನಂದಿಸುವ ಕಾರ್ಯಕ್ರಮ ಬಲೆತ್ತೋಡಿನ ನಾರಾಯಣ ಶೆಟ್ಟಿ ಅವರ ಮನೆಯಲ್ಲಿ ಭಾನುವಾರ ನಡೆಯಿತು.
ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಮಾತನಾಡಿ ಗ್ರಾಮದಲ್ಲಿ ರಸ್ತೆ, ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಕೊಟ್ಟಾಗ ಜನರು ಆ ಕಾರ್ಯದಲ್ಲಿ ಶ್ರಮಿಸಿದವರನ್ನು ಯಾವತ್ತೂ ಮರೆಯುವುದಿಲ್ಲ. ಆನಿಟ್ಟಿನಲ್ಲಿ ಕೈರಂಗಳ ವ್ಯವಸ್ಯಾಯ ಸೇವಾ ಸಹಕಾರಿ ಸಂಘ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡು ಮಾದರಿಯಾಗಿದೆ. ಹಾಗೆಯೇ ಹಲವು ದಶಕಗಳ ಬೇಡಿಕೆಯಾದ ಗರೋಡಿ ಮರ್ಚೋಡಿ ರಸ್ತೆಯನ್ನು ನಿರ್ಮಿಸುವ ಮೂಲಕ ಪಂಚಾಯಿತಿ ಸದ್ಯೆ ಹರಿಣಾಕ್ಷಿ ಅವರು ಜನಮಾನಸಲದಲಿ ಉಳಿಯಲಿದ್ದಾರೆ ಎಂದು ನುಡಿದರು.ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಸಂಘದ ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಹೇಶ್ ಚೌಟ, ನಿರ್ದೇಶಕರುಗಳಾದ ಡಿ. ಶಂಕರ್ ಭಟ್ ದೋಸೆಮನೆ, ಉಗ್ಗಪ್ಪ ಮಾಣೈ ಹಾಗೂ ಉದಯ ಶಂಕರ ಶೆಟ್ಟಿ ಬಲೆತ್ತೋಡು, ಪ್ರಗತಿಪರ ಕೃಷಿಕ ಎಡಂಬಳೆ ಗೋಪಾಲ ಭಟ್, ನರಿಂಗಾನ ಯುವಕ ಮಂಡಲದ ಮಾಜಿ ಅಧ್ಯಕ್ಷ ನವೀನ್ ಶೆಟ್ಟಿ ಮಂಗಲ್ಪಾಡಿ, ಮಂಗಳೂರು ಕ್ಷೇತ್ರ ರೈತ ಸಂಘ ಅಧ್ಯಕ್ಷ ಪ್ರೇಮಾನಂದ ರೈ ನೆತ್ತಿಲಕೋಡಿ ಹಾಗೂ ಕುರ್ನಾಡು ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಲೋಹಿತ್ ಗಟ್ಟಿ ಕೈರಂಗಳ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಿಂಡಿ ಅಣೆಕಟ್ಟು ದುರಸ್ಥಿಗೆ ಸಂಘದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಅನುದಾನ ನೀಡಿ ಸಹಕರಿಸಿದ ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಸಂಘದ ಪರವಾಗಿ ಅಧ್ಯಕ್ಷ ಮಹೇಶ್ ಚೌಟ ಹಾಗೂ ಗರೋಡಿಯಿಂದ ಮರ್ಚೋಡಿ ಸಂಪರ್ಕಿಸುವ ರಸ್ತೆಗೆ ಪಂಚಾಯಿತಿ ಅನುದಾನದಲ್ಲಿ ರಸ್ತೆ ನಿರ್ಮಿಸಲು ಸಹಕರಿಸಿದ ಗ್ರಾಮ ಪಂಚಾಯಿತಿ ಸದಸ್ಯೆ ಹರಿಣಾಕ್ಷಿ ಕೊರಕಟ್ಟ ಅವರನ್ನು ಸನ್ಮಾನಿಸಲಾಯಿತು. ಶಾಂತಿಪಳಿಕೆ ಶ್ರೀ ಮಿತ್ತಮೊಗರಾಯ ದೈವಸ್ಥಾನದ ಮೊಕ್ತೇಸರ ಬಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಯುವಕ ಮಂಡಲದ ಅಧ್ಯಕ್ಷ ಚಂದ್ರಹಾಸ್ ಸರ್ಕುಡೇಲು ಕಾರ್ಯಕ್ರಮ ನಿರೂಪಿಸಿದರು.


