Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಉಳ್ಳಾಲ ಹಳೆಕೋಟೆ ಅಲ್ ಕರೀಂ ಜುಮಾ ಮಸೀದಿಯ ಆಶ್ರಯದಲ್ಲಿ ನಾಲ್ಕು ದಿವಸಗಳ ಮತಪ್ರಭಾಷಣದ ಸಮಾರೋಪ ಹಳೆಕೋಟೆ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು. ಸಯ್ಯದ್ ಮದನಿ ದರ್ಗಾದ ಖತೀಬ ಅಝೀಝ್ ಬಾಖವಿ ಕಾರ್ಯಕ್ರಮ ಉದ್ಘಾಟಿಸಿದರು. ಸಯ್ಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಧಾರ್ಮಿಕ ಮತ ಪ್ರಸಂಗವನ್ನು ಕೇಳಿ ತಮ್ಮ ಧಾರ್ಮಿಕತೆಯ ವಿಚಾರಧಾರೆಗಳನ್ನು ಮತ್ತು ಧರ್ಮದೊಂದಿಗಿರುವ ಅಭಿಮಾನವನ್ನು ಇನ್ನಷ್ಟು ಹೆಚ್ಚಿಸಲು ಅವಕಾಶವಾಗಿದೆ. ದಾರಿ ತಪ್ಪಿ ಹೋಗುತ್ತಿರುವ ಯುವಕ ಯುವತಿಯರಿಗೆ ವಿಚಾರವನ್ನು ಮನವರಿಕೆ ಮಾಡಿ ಕೊಡುವಲ್ಲಿ ಈ ಕಾರ್ಯಕ್ರಮ ಸಫಲತೆ ಕಾಣತ್ತಿದೆ. ಇಂತಹ ಉತ್ತಮವಾದ ಕಾರ್ಯ ಮುಂದೆಯೂ ನಿರಂತರವಾಗಿ ನಡೆಯಲಿ ಎಂದು ಹೇಳಿದರು. ಸಯ್ಯದ್ ಮದನಿ ಅರಬಿಕ್ ಕಾಲೇಜು ಪ್ರಾಂಶುಪಾಲ ಉಸ್ಮಾನ್ ಫೈಝಿ ದುಆ ನೆರವೇರಿಸಿದರು. ಹಳೆಕೋಟೆ ಅಲ್ ಕರೀಂ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮೊಹಮ್ಮದ್ ತ್ವಾಹ, ಖತೀಬ ಉಸ್ಮಾನ್ ಸಅದಿ ಅಲ್ ಫಾಲಿಳಿ, ಸಯ್ಯದ್ ಮದನಿ…

Read More

UN NETWORKS ಕುರ್ನಾಡು : ಬಂಟ್ವಾಳ ತಾಲೂಕಿನ ಕುರ್ನಾಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಇನ್ನೋವೇಟಿವ್ ಗ್ರೂಪ್‍ನ ಸಹಭಾಗಿತ್ವದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ನಡೆದ ವಿಶ್ವ ಯುವ ದಿನಾಚರಣೆಯು ಸ್ವಚ್ಛ ಮನೆ ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ಹಾಗೂ ಸ್ವಚ್ಛ ಗ್ರಾಮದೆಡೆಗೆ ವಿದ್ಯಾರ್ಥಿಗಳ ನಡಿಗೆ ಜಾಗೃತಿ ಜಾಥದೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಗಿರಿಧರ್‍ರಾವ್ ನೇತೃತ್ವದಲ್ಲಿ ನಡೆದ ಜಾಗೃತಿ ಜಾಥಕ್ಕೆ ಜಿಲ್ಲಾ ಸ್ವಚ್ಛತಾ ರಾಯಭಾರಿ ಎನ್. ಶೀನ ಶೆಟ್ಟಿ ವಿದ್ಯಾರ್ಥಿನಿಯರೇ ತಯಾರಿಸಿದ ಬಟ್ಟೆ ಚೀಲಗಳನ್ನು ಬಿಡುಗಡೆಗೊಳಿಸಿ ಸ್ವಚ್ಛ ಗ್ರಾಮದೆಡೆಗೆ ವಿದ್ಯಾರ್ಥಿಗಳ ನಡಿಗೆ ಜಾಥಕ್ಕೆ ಚಾಲನೆ ನೀಡಿ ದೇಶದ ಶಕ್ತಿಯಾಗಿರುವ ಯುವ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಂಡು ಸ್ವಯಂ ಪರಿವರ್ತನೆಯೊಂದಿಗೆ ಗ್ರಾಮದ ಸ್ವಚ್ಛತೆ ಹಾಗೂ ಸಮಾಜದ ಪರಿವರ್ತನೆ ಕಾರ್ಯದಲ್ಲಿ ಕ್ರಿಯಾಶೀಲವಾಗಿ ಪಾಲುದಾರರಾಗಿ ಸಾಧಕರಾಗಲು ರಾಷ್ಟ್ರೀಯ ಸೇವಾ ಯೋಜನೆ ಇನ್ನೋವೇಟಿವ್ ಗ್ರೂಪ್ ಚಟುವಟಿಕೆಗಳು ಪೂರಕವಾಗಿದೆ ಎಂದರು. ಜನ ಶಿಕ್ಷಣ ಟ್ರಸ್ಟ್‍ನ ನಿರ್ದೇಶಕರು ಕೃಷ್ಣ ಮೂಲ್ಯ ಸಂಪೂರ್ಣ…

Read More

UN NETWORKS ತಲಪಾಡಿ: ಮಂಗಳೂರು ವಿಶ್ವವಿದ್ಯಾಲಯ ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ನಡೆಸಿದ ಅಂತಿಮ ವರ್ಷದ ಬಿ.ಎಸ್ಸಿ (ಅನಿಮೇಶನ್ ಆ್ಯಂಡ್ ವಿಶುವಲ್ ಎಫೆಕ್ಟ್) ಪರೀಕ್ಷೆಯಲ್ಲಿ ಕಳೆದ ಐದು ವರ್ಷಗಳಂತೆ ಈ ಬಾರಿಯೂ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ರ್ಯಾಂಕ್‍ಗಳು ಮಂಗಳೂರಿನ ತಲಪಾಡಿಯಲ್ಲಿರುವ ಶಾರದಾ ಕಾಲೇಜಿಗೆ ದೊರೆತಿದೆ. ರಾಹುಲ್ ಪಿ. ಶೆಟ್ಟಿ(ಪ್ರಥಮ:3,702 ಅಂಕಗಳು), ಸುಮುಖ ಪಿ. ಭಾಸ್ರಿ(ದ್ವಿತೀಯ: 3,555ಅಂಕಗಳು) ಹಾಗೂ ಡೀನಾ ಪೊನ್ನಮ್ಮ ಕೆ. ಪಿ. (ತೃತೀಯ:3,464ಅಂಕಗಳು) ರ್ಯಾಂಕ್ ಪಡೆದಿರುತ್ತಾರೆ. ಶಾರದಾ ಕಾಲೇಜು ನಿರಂತರವಾಗಿ ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ. ಮೊದಲಾದ ಎಲ್ಲಾ ಕೋರ್ಸುಗಳ ಅಂತಿಮ ವರ್ಷದಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸುತ್ತಿದ್ದು, ದೇಶದ ಮೂಲೆಮೂಲೆಯ ವಿದ್ಯಾರ್ಥಿಗಳನ್ನು ತನ್ನೆಡೆಗೆ ಆಕರ್ಷಿಸಿರುವುದು ಮಾತ್ರವಲ್ಲದೆ, ವೈಶಿಷ್ಟ್ಯಪೂರ್ಣ ಶಿಸ್ತುಬದ್ಧ ಶಿಕ್ಷಣಕ್ಕೆ ಸಾಮಾಜಿಕ ಮನ್ನಣೆಯನ್ನು ಪಡೆದಿದೆ. ರ್ಯಾಂಕ್ ಪುರಸ್ಕೃತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಹಾಗೂ ಆಡಳಿತ ಮಂಡಳಿ, ಆಡಳಿತಾಧಿಕಾರಿ ವಿವೇಕ ತಂತ್ರಿ, ಪ್ರಾಂಶುಪಾಲ “ಅಷ್ಟಾವಧಾನಿ’ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

Read More

UN NETWORKS ಉಳ್ಳಾಲ : ಕಳೆದ ಮೂರು ದಿನಗಳಿಂದ ನಾಪತ್ತೆಯಾದ ವ್ಯಕ್ತಿ ಮೃತದೇಹ ಕೋಟೆಪುರ ಸಮುದ್ರ ತೀರದಲ್ಲಿ ಭಾನುವಾರ ಸಂಜೆ ಪತ್ತೆಯಾಗಿದೆ. ಉಳ್ಳಾಲ ಅರಸುಹಿತ್ಲು ನಿವಾಸಿ ದಿನೇಶ್ ( 45) ಎಂಬವರ ಮೃತದೇಹ ಪತ್ತೆಯಾಗಿದೆ. ಜ.11 ರಂದು ಮುಡಿಪುವಿನಿಂದ ನಾಪತ್ತೆಯಾಗಿದ್ದರು. ಈ ಕುರಿತು ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಂಕ್ರಾಂತಿ ದಿನವಾಗಿದ್ದ ಶುಕ್ರವಾರ ಉಳ್ಳಾಲದ ಅಯ್ಯಪ್ಪ ಮಂದಿರಕ್ಕೆ ಸಿಯಾಳ ನೀಡಿ ಕೆಲಸಕ್ಕೆ ತೆರಳಿದ್ದರು. ಮುಡಿಪು ಇನ್ಫೋಸಿಸ್ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಗಾರ್ಡನ್ ಕೆಲಸ ನಿರ್ವಹಿಸುತ್ತಿದ್ದರು. ಕೆಲಸದಿಂದ ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿದ್ದರು. ಹಲವು ಕಾಲದಿಂದ ಅನಾರೋಗ್ಯದಿಂದ ಇರುವ ಇವರು ಮಾನಸಿಕವಾಗಿ ನೊಂದು ಆತ್ಮಹತ್ಯೆಗೈದಿರುವ ಶಂಕೆ ಇದೆ. ಭಾನುವಾರ ಸಂಜೆ ಕೋಟೆಪುರ ಸಮುದ್ರ ತೀರದ ಫಿಶ್ ಮಿಲ್ ಸಮೀಪ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಟುಂಬಸ್ಥರು ಚಪ್ಪಲಿ, ಅಂಗಿ ಹಾಗೂ ಕೈಯಲ್ಲಿ ಇದ್ದಂತಹ ದಾರವನ್ನು ಗಮನಿಸಿ ಮೃತದೇಹದ ಗುರುತು ಪತ್ತೆಹಚ್ಚಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ಇವರು ಅನಾರೋಗ್ಯದಲ್ಲಿರುವ ತಾಯಿ ಹಾಗೂ ಪತ್ನಿ ಮತ್ತು ಓರ್ವ ಪುತ್ರಿಯನ್ನು…

Read More

UN NETWORKS ಉಳ್ಳಾಲ: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಮಸ್ಜಿದ್‍ನ ಖತೀಬರು, ಮದರಸ ಸದರ್‍ಮುಅಲ್ಲಿಂಗಳಿಗೆ ಹಾಗೂ ಅಧ್ಯಕ್ಷರುಗಳಿಗೆ ವಿಚಾರಗೋಷ್ಠಿಯೊಂದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ವಲಯ, ಉಳ್ಳಾಲ ಕೇಂದ್ರ ಜುಮಾಮಸ್ಜಿದ್‍ಮತ್ತು ಸಯ್ಯದ್ ಮದನಿ ಅರೆಬಿಕ್ ಟ್ರಸ್ಟ್,ಹಾಗೂ ಜಮಿಯತ್ತುಲ್ ಫಲಾಹ್ ಮಂಗಳೂರು ತಾಲೂಕು ಸಮಿತಿಯು ಸಯ್ಯಿದ್‍ಮದನಿ ಸಭಾಂಗಣದಲ್ಲಿ ಜಂಟಿಯಾಗಿ ಆಯೋಜಿಸಿತು. ಉಳ್ಳಾಲ ದರ್ಗಾದ ಅಧ್ಯಕ್ಷರಾದ ಜನಾಬ್ ಹಾಜಿ ಅಬ್ದುಲ್ ರಶೀದ್‍ರವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಜಮೀಯ್ಯತ್ತುಲ್ ಫಲಾಹ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಹಾಜಿ ಶಾಹುಲ್ ಹಮೀದ್‍ರವರು ವಿಷಯ ಮಂಡಿಸಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವಲ್ಲಿ ಸಮುದಾಯದ ಮುಖಂಡರು ಮಾರ್ಗದರ್ಶನ ನೀಡಬೇಕು ಎಂದರು.ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ರವರು ಉದ್ಫಾಟಿಸಿದ ಕಾರ್ಯಕ್ರಮದಲ್ಲಿ ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನ್ ಟ್ರಸ್ಟ್ ನ ಮುಫತ್ತಿಸ್ ಜನಾಬ್ ಸುಲೈಮಾನ್ ಸಖಾಫಿ ದುವಾ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳುರು ಜಮಿಯ್ಯತ್ತುಲ್ ಫಲಾಹ್…

Read More

UN NETWORKS ತೊಕ್ಕೊಟ್ಟು : ದ.ಕ. ಜಿಲ್ಲೆ ಬ್ಯಾಂಕ್‍ಗಳ ತವರೂರು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಒಂದಾಗಿರುವ ವಿಜಯಾ ಬ್ಯಾಂಕ್‍ನ್ನು ಬ್ಯಾಂಕ್ ಆಫ್ ಬರೋಡ ಜತೆ ವಿಲೀನ ಮಾಡುವ ಕೇಂದ್ರ ಸರಕಾರದ ಕ್ರಮ ಖಂಡನೀಯ. ಈ ಕ್ರಮದ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿದೆ. ಅಖಿಲ ಭಾರತ ಕಾಂಗ್ರೆಸ್ ಪಕ್ಷ ಕೂಡಾ ಈ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ. ವಿಜಯಾ ಬ್ಯಾಂಕ್‍ನ್ನು ಬ್ಯಾಂಕ್ ಆಫ್ ಬರೋಡ ಜತೆ ವಿಲೀನ ಮಾಡುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ತೊಕ್ಕೊಟ್ಟು ವಿಜಯಾಬ್ಯಾಂಕ್ ಕಚೇರಿ ಮುಂಭಾಗದಲ್ಲಿ ಭಾರೀ ಪ್ರತಿಭಟನೆ ನಡೆಯಿತು.ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿಯವರ ಅಸೈಗೋಳಿ ಮತ್ತು ಉಪಾಧ್ಯಕ್ಷ ಸುರೇಶ್ ಭಟ್ನಗರ ರವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಕೇಂದ್ರ ಸರಕಾರ ಮತ್ತು ಮೋದಿಯವರ ವಿರುದ್ಧ ಘೋಷಣೆ ಕೂಗಿದರು.ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸುರೇಶ್ ಭಟ್ನಗರ ಮಾತನಾಡಿ ಕೇಂದ್ರ ಸರಕಾರ ಇಂದು ಜನರ ಭಾವನೆಗಳಿಗೆ ಧಕ್ಕೆ ಬರುತ್ತಿದೆ. ಯಾವುದೇ ಕಾರಣಕ್ಕೆ…

Read More

UN NETWORKS ಕೈರಂಗಳ: ಬಂಟ್ವಾಳ ತಾಲೂಕಿನ ಕೈರಂಗಳದ ಶಾರದಾಗಣಪತಿ ವಿದ್ಯಾಕೇಂದ್ರದಲ್ಲಿ ಶಾರದೋತ್ಸವ ನಡೆಯಿತು. ಸಂಸ್ಥೆಯ ಮಾರ್ಗದರ್ಶಕ ಪಿ. ಶಂಕರ ಭಟ್ ಧ್ವಜಾರೋಹಣಗೈದರು.ಶಾರದೋತ್ಸವ ಪ್ರಯುಕ್ತ ನಡೆದ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯ ಬಹುಮಾನ ವಿತರಣೆಯನ್ನು ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯ ನಂದರಾಜ್ ಶೆಟ್ಟಿ ನಡೆಸಿಕೊಟ್ಟರು. ವಾರ್ಷಿಕೋತ್ಸವದಲ್ಲಿ ಟಿ. ಎಸ್. ಉದಯಕುಮಾರ್ ಭಟ್ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಕಡಂದಲೆ ಸುರೇಶ್ ಭಂಡಾರಿ, ಬಾಲಕೃಷ್ಣ ಭಂಡಾರಿ, ಸಂತೋಷ್ ಕುಮಾರ್ ರೈ ಬೋಳಿಯಾರು, ಹೈದರ್ ಕೈರಂಗಳ, ಲೀಲಾವತಿ ಭಾಸ್ಕರ್, ಪಿ. ನಾಗರಾಜ ಭಟ್, ಟಿ. ಕೃಷ್ಣ ಭಟ್, ಬಾಲಕೃಷ್ಣ ರೈ ಮುಂಡಾಜೆ, ಎ. ಮಂಜುನಾಥ ಪೈ, ಎ. ಕಿರಣ್‍ದಾಸ್, ಕರುಣಾಕರ, ಲಕ್ಷ್ಮೀಶ ಕೆ. ಪಿ, ಎಂ. ಸೋಮಶೇಖರ್, ಸಾಗರ್ ಪಿ., ಶಾಲಾ ವಿದ್ಯಾರ್ಥಿ ನಾಯಕ ಪ್ರದೀಪ್ ಕುಮಾರ್, ಯೋಗೇಶ್ವರಿ ಪಿ. ಘೋರೆ, ಶಮನ್ ಎಂ. ಹಾಗೂ ಹೃತಿಕಾ ಉಪಸ್ಥಿತರಿದ್ದರು. ಸಂಸ್ಥೆಯ ಸಂಚಾಲಕ ಟಿ. ಜಿ. ರಾಜಾರಾಮ ಭಟ್ ಸ್ವಾಗತಿಸಿದರು. ಪ್ರಾಸ್ತಾವಿಕ…

Read More

UN NETWORKS ದೇರಳಕಟ್ಟೆ: ವಿದ್ಯಾಲಯ ಎಂಬುದು ಜ್ಞಾನ ಭಂಡಾರ. ಜ್ಞಾನ ಸಂಪಾದನೆಗೆ ಓದಿದಷ್ಟು ಮುಗಿಯದು. ವಿದ್ಯಾಲಯದಲ್ಲಿ ಜ್ಞಾನ ಕೊಡಲು ಕೊಡಲು ಪ್ರಾರ್ಥಿಸಿದರೆ ದೇವಾಲಯದಲ್ಲಿ ನಮ್ಮ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸುತ್ತೇವೆ ಎಂದು ದೇರಳಕಟ್ಟೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಚಂದ್ರಹಾಸ ಅಡ್ಯಂತಾಯ ಹೇಳಿದರು. ದೇರಳಕಟ್ಟೆಯ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ನಡೆದ ಶಾಲಾ ಪ್ರತಿಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೇರಳಕಟ್ಟೆಯ ಶಾಲೆಯನ್ನು ನಿರ್ಮಿಸಲು ಸ್ಥಳದಾನ ಮಾಡಿದ ದಾನಿಗಳನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಸದಾ ಸ್ಮರಣೆಯಲ್ಲಿ ಇಡಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಹೇಳಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್ ಲೋಕೇಶ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯೆ ರಶೀದಾ ಬಾನು, ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ ಕೃಷ್ಣಪ್ಪ ಪೂಜಾರಿ, ಉಪಾಧ್ಯಕ್ಷ ಬಿ.ಎಂ. ಅಬ್ದುಲ್ ಸತ್ತಾರ್,…

Read More

UN NETWORKS ತಲಪಾಡಿ: ನಗರದ ಪ್ರಥಮ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮ ಜ. 13ರಂದು ತಲಪಾಡಿ ದೇವಿನಗರದಲ್ಲಿರುವ ಶಾರದಾ ಆಯುರ್ಧಾಮ ಕ್ಯಾಂಪಸ್‍ನಲ್ಲಿ ನಡೆಯಲಿದೆ ಎಂದು ಶಾರದಾ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಹೇಳಿದರು. ತಲಪಾಡಿ ದೇವಿನಗರದ ಶಾರದಾ ಆಯುರ್ಧಾಮದಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. ಮಾಹೆ ಮಾಜಿ ಉಪಕುಲಪತಿ ಪದ್ಮಭೂಷಣ ಡಾ.ಬಿ.ಎಂ.ಹೆಗ್ಡೆ ಉದ್ಘಾಟಿಸಲಿದ್ದಾರೆ. . ಮಂಗಳೂರು ಕೆಎಂಸಿಯ ಮಾಜಿ ಪ್ರಾಚಾರ್ಯ ಡಾ.ಕೆ.ಆರ್.ಶೆಟ್ಟಿ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಮಾತನಾಡಿ, ಭಾರತೀಯ ವೈದ್ಯಪದ್ಧತಿಯ ಸಮಗ್ರ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಸುಸಜ್ಜಿತ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕೊರತೆ ಇರುವುದನ್ನು ಮನಗಂಡ ತುಳುನಾಡು ಎಜ್ಯುಕೇಶನ್ ಟ್ರಸ್ಟ್ ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ ಎಂದು ವಿವರಿಸಿದರು. ಪ್ರಕೃತಿ ಚಿಕಿತ್ಸೆಯು ಆಧುನಿಕ ವೈದ್ಯವಿಧಾನದ ಹಲವು ದೃಷ್ಟಿಕೋನ ಮತ್ತು ಸಾಂಪ್ರದಾಯಿಕ ಚಿಕಿತ್ಸಾ ಕ್ರಮಗಳನ್ನು ಸೇರಿಸಿಕೊಂಡಿದ್ದು, ಸೂಜಿಚಿಕಿತ್ಸೆಯಿಂದ ಹಿಡಿದು ಗಿಡಮೂಲಿಕೆ, ಪೌಷ್ಟಿಕತೆಯಂಥ ಅಂಶಗಳನ್ನೂ ಸಮಗ್ರವಾಗಿ ಒಳಗೊಂಡಿದೆ.…

Read More

UN NETWORKS ಮಂಜನಾಡಿ: ಮಂಜನಾಡಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಿದೆ. ಹಳೇ ಸಂಪ್ರದಾಯಗಳ ಪ್ರಕಾರ ಕಾರ್ಯಕ್ರಮಗಳು ಮಂಜನಾಡಿಯಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ. ಇದೀಗ ಹಮ್ಮಿಕೊಂಡಿರುವ ಉರೂಸ್ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು. ಅವರು ಮಂಜನಾಡಿಯಲ್ಲಿ ಹಝ್ರತ್‍ಅಸ್ಸಯ್ಯದ್ ಇಸ್ಮಾಯಿಲ್ ಮುಸ್ಲಿಯಾರ್ ರವರ ಹೆಸರಿನಲ್ಲಿ ಆರಂಭಗೊಂಡ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಸ್ಸಯ್ಯದ್ ಮಹಮ್ಮದ್ ಶಮೀಮ್ ತಂಙಳ್ ಅವರು ಪ್ರವಾದಿಯವರ ಮೇಲೆ ನಂಬಿಕೆ ವಿಶ್ವಾಸ ಸದಾ ಇರಬೇಕು. ಔಲಿಯಾಗಳನ್ನು ಗೌರವಿಸುವ ಜತೆಗೆ ಇಸ್ಲಾಂನ ಚೌಕಟ್ಟು ಮೀರದಂತೆ ಕಾರ್ಯಕ್ರಮ ನಡೆಸಬೇಕಾಗಿದೆ. ಧಾರ್ಮಿಕ ಶ್ರದ್ಧೆ, ಭಕ್ತಿ ನಮ್ಮಲ್ಲಿದ್ದರೆ ಇದ್ದರೆ ಮಾತ್ರ ಧರ್ಮದ ಬಗ್ಗೆ ಅರಿವು ಮೂಡಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ವಹಿಸಿದ್ದರು. ಇಸ್ಮಾಯಿಲ್ ಮಿಸ್ಬಾಯಿ ಚೆರ್ಮೋತು, ಮತ್ತು ಅಹ್ಮದ್ ಬಾಖವಿ ಮುಖ್ಯ ಭಾಷಣ ಮಾಡಿದರು. ಜಮಾಅತ್ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ನುಡಿದರು. ಕಾರ್ಯಕ್ರಮದಲ್ಲಿ ಮಹಮ್ಮದ್ ಮಸೂದ್ ಸಅದಿ, ಕರೀಂ ಫೈಝಿ, ಕುಂಞಬಾವಾ…

Read More