Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಪ್ರವಾದಿ ಅವರು ಶಾಂತಿಯನ್ನು ಸಾರಿದವರು. ಆದರೆ ಅವರನ್ನು ನಿಂದಿಸುವ ಮೂಲಕ ಟಿವಿ ನಿರೂಪಕರು ಜೀತ ಪದ್ಧತಿಯನ್ನು ತೋರಿದ್ದಾರೆ ಎಂದು ದರ್ಗಾ ಅಧ್ಯಕ್ಷ ರಶೀದ್ ಹಾಜಿ ಹೇಳಿದರು. ಅವರು ಉಳ್ಳಾಲ ಮುಸ್ಲಿಂ ಜಮಾಅತ್ ವತಿಯಿಂದ ಉಳ್ಳಾಲ ಹಝ್ರತ್ ಶಾಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಪ್ರವಾದಿಯವರು ಸಹನೆಯನ್ನು ಬಯಸಿದವರು. ನಿಂದನೆ ಅವರಿಗಿಷ್ಟವಿಲ್ಲ. ಪ್ರವಾದಿಯವರನ್ನು ನಿಂದಿಸಿದ ಅಜಿತ್ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಆದು ನಮಗೆ ಸಾಕಾಗುವುದಿಲ್ಲ. ಪರಧರ್ಮವನ್ನು ಟೀಕಿಸುವುದನ್ನು ಇಸ್ಲಾಂ ಮಾತ್ರವಲ್ಲ ಸಮಾಜ ಕೂಡಾ ವಿರೋಧಿ ಸುತ್ತದೆ ಎಂದರು.ಎಸ್ ಬಿ ದಾರಿಮಿ ಮಾತನಾಡಿ, ಅಜಿತ್‍ನನ್ನು ಬಂಧಿಸಿದರೆ ರಾಜಕೀಯದವರಿಗೆ ಜಯ ಸಿಗುತ್ತದೆ. ಈಗ ನಡೆಯುತ್ತಿರುವುದು ಅಜಿತ್ ಅವರ ವಿರುದ್ಧ ಹೋರಾಟ ವಲ್ಲ, ಅವರ ಸಿದ್ಧಾಂತದ ವಿರುದ್ಧ ಹೋರಾಟವಾಗಿದೆ. ಭಾರತೀಯ ಮುಸ್ಲಿಮರು ರಾಜಕೀಯ ಇಚ್ಛಾ ಶಕ್ತಿ ಹೊಂದಿದ್ದಾರೆ. ಬಾಂಗ್ ನಲ್ಲಿ ಪ್ರವಾದಿ ಯವರ ಹೆಸರು ಬಳಕೆ ಮಾಡಲಾಗುತ್ತದೆ. ಸರ್ಕಾರಕ್ಕೆ ತಾಕತ್ತಿದ್ದರೆ ಮೊದಲು ಸಂವಿಧಾನ ರಕ್ಷಣೆ ಮಾಡಲಿ. ಅಧಿಕಾರ ಶಾಶ್ವತ ಅಲ್ಲ.…

Read More

UN NETWORKS ತೊಕ್ಕೊಟ್ಟು: ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಕುರ್ನಾಡು ಮಹಾಶಕ್ತಿ ಕೇಂದ್ರ ಆಶ್ರಯದಲ್ಲಿ ಜ. 20ರಂದು ಸಂಜೆ 4.30ಕ್ಕೆ ಚುನಾವಣಾ ಕಾರ್ಯಾಲಯ ಉದ್ಘಾಟನೆ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ ಎಂದು ಕುರ್ನಾಡು ಮಹಾಶಕ್ತಿಕೇಂದ್ರದ ಅಧ್ಯಕ್ಷ ಹಾಗೂ ಹಿರಿಯ ಬಿಜೆಪಿ ಮುಖಂಡ ಟಿ.ಜಿ. ರಾಜಾರಾಂ ಭಟ್ ಹೇಳಿದರು. ತೊಕ್ಕೊಟ್ಟು ಖಾಸಗಿ ಹೊಟೇಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಕಸಭಾ ಕ್ಷೇತ್ರದ ಚುನಾವಣಾ ತಯಾರಿ ದೃಷ್ಟಿಯಿಂದ ಚುನಾವಣಾ ಕಾರ್ಯಾಲಯ ಉದ್ಘಾಟನೆ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ಮುಡಿಪು ಅಮರ್ ದೀಪ ಕಾಂಪ್ಲೆಕ್ಸ್‍ನಲ್ಲಿ ಸಂಜೆ 4.30ಕ್ಕೆ ನಡೆಯಲಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪುತ್ತೂರು ಶಾಸಕ ಸಂಜೀವ ಮಠಂದೂರು, ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಂಗಳೂರು ಲೋಕಸಭಾ ಕ್ಷೇತ್ರ ಸಂಚಾಲಕ ಗೋಪಾಲಕೃಷ್ಣ ಹೇರಳ ಹಾಗೂ ಅಧ್ಯಕ್ಷತೆಯನ್ನು ಸಂತೋಷ್ ಕುಮಾರ್ ರೈ ಬೋಳಿಯಾರ್ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ 4.00ಗಂಟೆಗೆ ತೌಡುಗೋಳಿ ಕ್ರಾಸ್‍ನಿಂದ 4.15ಕ್ಕೆ ಬೋಳಿಯಾರಿನಿಂದ ಬೈಕ್ ರ್ಯಾಲಿ ಆರಂಭವಾಗಿ ಮುಡಿಪುವಿನಲ್ಲಿ…

Read More

UN NETWORKS ಕೊಣಾಜೆ: ದಿನದ ಹಿಂದೆಯಷ್ಟೆ ಬಸ್ಸಿಗೆ ಬಳಿದ ಪೈಂಟ್ ಒಣಗುವ ಮುನ್ನ ಸಂಚಾರಕ್ಕೆ ಬಳಸಿದ ಪರಿಣಾಮ ಪ್ರಯಾಣಿಕರ ಬಟ್ಟೆ, ದೇಹಕ್ಕೆ ಅಂಟಿಕೊಂಡ ಹಿನ್ನೆಲೆಯಲ್ಲಿ ಆಕ್ರೋಶಿತ ಪ್ರಯಾಣಿಕರು ಬಸ್ಸನ್ನು ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ ಪ್ರಕರಣ ನಡೆದಿದೆ. ಮಂಗಳೂರಿನಿಂದ ಹರೇಕಳ ನಡುವೆ ಸಂಚರಿಸುವ ಬಸ್ಸೊಂದರ ಮಾಲೀಕ ಶುಕ್ರವಾರ ಆರ್‍ಟಿಎ ತಪಾಸಣೆ ಇದ್ದ ಹಿನ್ನೆಲೆಯಲ್ಲಿ ನಿರ್ಲಕ್ಷ್ಯದಿಂದ ಗುರುವಾರ ರಾತ್ರಿ ಪೈಂಟ್ ಮಾಡಿಸಿ ಮರುದಿನವೇ ಬಸ್ ಸಂಚಾರಕ್ಕೆ ಬಳಸಿದ್ದು ಅವಾಂತರಕ್ಕೆ ಕಾರಣವಾಗಿದೆ. ಮಂಗಳೂರಿನಿಂದ ಹರೇಕಳಕ್ಕೆ ಹಲವು ಬಸ್ಸುಗಳ ಪರವಾನಗಿ ಇದೆಯಾದರೂ ಈ ರೂಟ್‍ನಲ್ಲಿ ಎರಡು ಬಸ್ಸುಗಳು ಮಾತ್ರ ಸಂಚರಿಸುತ್ತಿವೆ. ಅದರ ವಿರುದ್ಧ ಡಿವೈಎಫ್‍ಐ ಹೋರಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಎಷ್ಟು ಬಸ್ಸುಗಳ ಪರವಾನಿಗೆ ಹರೇಕಳಕ್ಕಿದೆ ಎನ್ನುವ ಮಾಹಿತಿಯೂ ಗ್ರಾಮಸ್ಥರಲ್ಲಿಲ್ಲ. ಗ್ರಾಮಕ್ಕೆ ಬರುವ ಎರಡು ಬಸ್ಸುಗಳ ಪೈಕಿ ಒಂದು ಬಸ್ಸಿಗೆ ಶುಕ್ರವಾರ ಆರ್‍ಟಿಓ ತಪಾಸಣೆ ಇತ್ತು. ಅಲ್ಲಲ್ಲಿ ಪೈಂಟ್ ಎದ್ದುಹೋಗಿದ್ದರಿಂದ ಬಸ್ಸನ್ನು ಮೇಲ್ನೊಟಕ್ಕೆ ಸುಂದರವನ್ನಾಗಿಸಲು ಹೊರಟ ಮಾಲೀಕ ಗುರುವಾರ ರಾತ್ರಿ ಎಲ್ಲ ಟ್ರಿಪ್ ಮುಗಿದ…

Read More

UN NETWORKS ಉಳ್ಳಾಲ: ಫಿಸಿಯೋಥೆಪರಪಿ ಮತ್ತು ವಾಕ್ ಶ್ರವಣ ವಿಭಾಗ ಆಸ್ಪತ್ರೆಯಲ್ಲಿ ಕಾರ್ಯಾಚರಿಸುವ ಪ್ರಮುಖ ವಿಭಾಗಗಳಾಗಿವೆ. ಪರಿಣಾಮಕಾರಿಯಾದ ತರಬೇತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ವಾಕ್ ಶ್ರವಣ ವಿಭಾಗ ಕಳೆದ ಮೂರು ವರ್ಷಗಳಿಂದ ಒಂದನೇ ರ್ಯಾಂಕ್ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ವಿಭಾಗವೂ ಕಾರ್ಯಾಚರಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ನಿಟ್ಟೆ ಸ್ವಾಯುತ್ತೆ ಆಗಲಿರುವ ವಿ.ವಿ ಯ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯ ಇದರ ವಾಕ್ ಶ್ರವಣ ವಿಭಾಗದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ವಿಭಾಗವನ್ನು ಉದ್ಘಾಟಿಸಿದರು. ಈ ಸಂದರ್ಭ ಸಹಕುಲಾಧಿಪತಿಗಳಾದ ಡಾ. ಎಂ.ಶಾಂತರಾಮ ಶೆಟ್ಟಿ, ವಿಶಾಲ್ ಹೆಗ್ಡೆ, ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ, ಸಹಕುಲಪತಿ ಡಾ.ಎಂ ಎಸ್ ಮೂಡಿತ್ತಾಯ, ಕುಲಸಚಿವೆ ಡಾ. ಅಲ್ಕಾ ಕುಲಕರ್ಣಿ, ನಿಟ್ಟೆ ವಾಕ್ ಶ್ರವಣ ಕಾಲೇಜಿನ ನಿರ್ದೇಶಕ ದತ್ತಾತ್ರೇಯ, ಪ್ರಾಂಶುಪಾಲೆ ಶ್ವೇತಾ, ಕ್ಷೇಮ ಡೀನ್ ಡಾ. ಪಿ.ಯಸ್ ಪ್ರಕಾಶ್, ದಂತ ಕಾಲೇಜಿನ ಡೀನ್ ಡಾ. ಯು.ಯಸ್ ಕೃಷ್ಣ ನಾಯಕ್, ಸಹಡೀನ್ ಗಳಾದ ಡಾ.…

Read More

UN NETWORKS ತೊಕ್ಕೊಟ್ಟು: ಎಸೆಸ್ಸೆಫ್ ಉಳ್ಳಾಲ ಡಿವಿಜನ್ ಮತ್ತು ತೊಕ್ಕೊಟ್ಟು ಸೆಕ್ಟರ್‌ನ ಜಂಟಿ ಆಶ್ರಯದಲ್ಲಿ ಕರ್ನಾಟಕ ಮುಸ್ಲಿಮ್ ಜಮಾಅತ್‌ನ ಪಬ್ಲಿಸಿಟಿ ಕನ್ವೆನ್ಷನ್ ಕಾರ್ಯಕ್ರಮವು ತೊಕ್ಕೊಟ್ಟು ತಾಜುಲ್ ಉಲಮಾ ಮಸೀದಿಯಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭ ಮಾತನಾಡಿದ ದ.ಕ.ಜಿಲ್ಲಾ ಎಸೆಸ್ಸೆಫ್ ನಿಕಟಪೂರ್ವ ಅಧ್ಯಕ್ಷ ಸಿರಾಜುದ್ದೀನ್ ಸಖಾಫಿ ಮುಸ್ಲಿಂ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸುನ್ನತ್ ಜಮಾಅತ್‌ನ ಆದರ್ಶದಲ್ಲಿ ನಂಬಿಕೆ ಇರುವ ಎಲ್ಲಾ ಮುಸಲ್ಮಾನರನ್ನು ಸೇರಿಸಿ ರಾಜಕೀಯ ಪಕ್ಷಕ್ಕಿಂತ ಭಿನ್ನವಾಗಿ ಸಮಸ್ಯೆಗಳನ್ನು ಎದುರಿಸಲು ಮತ್ತು ಮುಸ್ಲಿಂ ಸಮುದಾಯದವರಿಗೆ ವಿವಿಧ ಸವಲತ್ತುಗಳನ್ನು ಪಡೆಯಲು ಕರ್ನಾಟಕ ಮುಸ್ಲಿಮ್ ಜಮಾಅತ್ ಪಬ್ಲಿಸಿಟಿ ಕನ್ವೆನ್ಷನ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು. ಸೈಯದ್ ಮದನಿ ಅರಬಿಕ್ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಝಿಯಾದ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು. ಎಸೆಸ್ಸೆಫ್ ಉಳ್ಳಾಲ ಡಿವಿಜನ್ ಅಧ್ಯಕ್ಷ ಖುಬೈಬ್ ತಂಗಳ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಜಲಾಲ್ ತಂಙಳ್ ದುಆ ನೆರವೇರಿಸಿದರು. ಮಂಜನಾಡಿ ಅಲ್ ಮದೀನದ ಜನರಲ್ ಮ್ಯಾನೇಜರ್…

Read More

UN NETWORKS ಉಳ್ಳಾಲ: ಯುನಿವೆಫ್ ಕರ್ನಾಟಕ ನ. 30 ರಿಂದ ಫೆ. 1ರವರೆಗೆ “ಮಾನವ ಸಮಾಜ ಮತ್ತು ಆಧ್ಯಾತ್ಮಿಕತೆ ಪ್ರವಾದಿ ಮುಹಮ್ಮದ್ (ಸ) ರ ದೃಷ್ಟಿಯಲ್ಲಿ” ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಪ್ರಯುಕ್ತ ಉಳ್ಳಾಲದ ನಗರ ಸಭಾ ಮೈದಾನದಲ್ಲಿ ಸೀರತ್ ಸಮಾವೇಶ ಜರಗಿತು. “ವರ್ತಮಾನದ ಮುಸ್ಲಿಮ್ ಸಮುದಾಯ ಮತ್ತು ಪ್ರವಾದಿ ಮುಹಮ್ಮದ್ (ಸ)” ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಿದ ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು “ಆರೋಪದ ಮೇಲೆ ಆರೋಪ ಹೊರಿಸಿ, ಸಮುದಾಯವನ್ನು ರೊಚ್ಚಿಗೆಬ್ಬಿಸಲು ಹಿಟ್ ಆ್ಯಂಡ್ ರನ್ ತಂತ್ರವನ್ನು ಇಸ್ಲಾಮೀ ವಿರೋಧಿ ಶಕ್ತಿಗಳು ಅನುಸರಿಸುತ್ತಾ ಬಂದಿರುವುದು ಫ್ಯಾಸಿಸ್ಟ್ ತಂತ್ರದ ಒಂದು ಭಾಗ ಎಂದು ಹೇಳಿದರು.ರಾಜ್ಯ ಕಾರ್ಯದರ್ಶಿ ಯು.ಕೆ. ಖಾಲಿದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೌಲಾನಾ ಅಬ್ದುರ್ರಹ್ಮಾನ್ ಕಿರಾಅತ್ ಪಠಿಸಿದರು. ಜಿಲ್ಲಾಧ್ಯಕ್ಷ ಮತ್ತು ಸಂಚಾಲಕ ಅಬ್ದುಲ್ಲಾ ಪಾರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸೈಫುದ್ದೀನ್ ವಂದಿಸಿದರು.

Read More

UN NETWORKS ತೊಕ್ಕೊಟ್ಟು: ಪ್ರಾರ್ಥನಾ ಸಭಾಂಗಣದಲ್ಲಿ ವೃದ್ಧರೊಬ್ಬರಿಗೆ ಹಲ್ಲೆ ನಡೆಸಿ ಚಿನ್ನ ದರೋಡೆಗೈದಿರುವ ಘಟನೆ ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಸ್ಮಾರ್ಟ್ ಸಿಟಿ ವಾಣಿಜ್ಯ ಮತ್ತು ವಸತಿ ಸಂಕೀರ್ಣದಲ್ಲಿರುವ ಪ್ರಾರ್ಥನಾ ಮಂದಿರದಲ್ಲಿ ನಡೆದಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೊಕ್ಕೊಟ್ಟು ಜಂಕ್ಷನ್ ನಿವಾಸಿ ಗಂಗಾಧರ್ (66) ಹಲ್ಲೆಗೊಳಗಾದವರು. ಇವರ ಬಳಿಯಿದ್ದ 3 ಪವನ್ ತೂಕದ ಚಿನ್ನದ ಸರ ಕಳವುಗೈಯ್ಯಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಜ.16ರಂದು ಪ್ರಾರ್ಥನಾ ಮಂದಿರ ಇರುವ ಕಟ್ಟಡ ಸಮೀಪವೇ ಗಂಗಾಧರ್ ಅವರ ಮನೆ ಇದೆ. ಇವರ ಮನೆಯ ಗೇಟಿನ ಎದುರುಗಡೆ ಸಂಜೆ ವೇಳೆ ಪ್ರಾರ್ಥನಾ ಮಂದಿರದಿಂದ ಟ್ಯೂಬ್ ಲೈಟ್ ಅನ್ನು ಎಸೆಯಲಾಗಿತ್ತು. ಇದನ್ನು ಪ್ರಶ್ನಿಸಲು ಗಂಗಾಧರ್ ಅವರು ಪ್ರಾರ್ಥನಾ ಮಂದಿರದ ಒಳಗಡೆ ತೆರಳಿದ್ದರು. ಈ ವೇಳೆ ಶೇಖ್ ಬಶೀರ್, ನಾಸಿರ್, ಇಸ್ಮಾಯಿಲ್ ಸಹಿತ 10 ಮಂದಿಯ ತಂಡ ಗಂಗಾಧರ್ ಅವರ ಮೇಲೆ ಏಕಾಏಕಿ ನೆಲ ಒರೆಸುವ ಸಾಮಗ್ರಿ, ರಾಡು, ಹಾಗೂ ಕೈಗಳಿಂದ ಎದೆ, ಸೊಂಟ ಹಾಗೂ…

Read More

UN NETWORKS ತೊಕ್ಕೊಟ್ಟು: ಶಿಕ್ಷಣ ಸಂಸ್ಥೆಯಲ್ಲಿ ಕರುಣೆಯ ಹಾದಿಯ ಜೊತೆಗೆ ಶಿಸ್ತು, ನೈತಿಕ ಬೋಧನೆಯನ್ನು ಬೋಧಿಸಿದ ದೈಹಿಕ ಶಿಕ್ಷಕ ಉರ್ಬಾನ್ ಮಸ್ಕರೇನಸ್ ಅವರ ಕಾರ್ಯವೈಖರಿ ಸ್ಮರಣೀಯ ಎಂದು ಸಂತ ಸೆಬೆಸ್ತಿಯನ್ನರ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಡಾ.ಜೆ. ಬಿ ಸಲ್ದಾನ್ಹ ಅಭಿಪ್ರಾಯಪಟ್ಟರು. ಅವರು ಸಂತ ಸೆಬೆಸ್ತಿಯನ್ನರ ಅನುದಾನಿತ ಪ್ರೌಢಶಾಲೆ ಪೆರ್ಮನ್ನೂರು ಇಲ್ಲಿ ಶಿಕ್ಷ ಣ ಕ್ಷೇತ್ರದಲ್ಲಿ 35 ವರ್ಷಗಳ ಸೇವೆ ಸಲ್ಲಿಸಿ, ವಯೋ ನಿವೃತ್ತಿಯಾದ ದೈಹಿಕ ಶಿಕ್ಷಣ ಶಿಕ್ಷಕ ಉರ್ಬನ್ ಮಸ್ಕರೇನಸ್ ಇವರಿಗೆ ಶಾಲಾ ವತಿಯಿಂದ ಹಮ್ಮಿಕೊಳ್ಳಲಾದ ಗುರುವಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಜೀವನವನ್ನೇ ವಿದ್ಯಾರ್ಥಿಗಳಿಗೆ ಸಮರ್ಪಿತವಾಗಿ ಜೀವಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ.ದೇವರು ಕೊಟ್ಟ ಅಂತ:ಕರಣದ ಮೂಲಕ ನೈತಿಕ ಬೋಧನೆಯ ಜತೆಗೆ ಸತ್ಯದ ದಾರಿಯಲ್ಲಿ ನಡೆದವರು. ವಿದ್ಯಾರ್ಥಿಗಳಿಗೆ ಕರುಣೆ ತೋರಿಸಿ ವೃತ್ತಿ ಜೀವನ ನಡೆಸಿದವರಾಗಿದ್ದಾರೆ ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಕಟಪೂರ್ವ ಪ್ರಾಂಶುಪಾಲ ಫಾ. ಕ್ಲೆಮೆಂಟ್ ಮಸ್ಕರೇನಸ್ ಮಾತನಾಡಿ, ದೈಹಿಕ ಶಿಕ್ಷಕ ಉರ್ಬಾನ್ ಮಸ್ಕರೇನಸ್ ಅವರು ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಪ್ರಾಮಾಣಿಕ ವ್ಯಕ್ತಿ. ಪ್ರಾರ್ಥನಾ ಮನೋಭಾವದಿಂದ ಕೃತಾರ್ಥ…

Read More

UN NETWORKS ಮುಡಿಪು: ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಕುರ್ನಾಡು ಮಹಾಶಕ್ತಿ ಕೇಂದ್ರ ಆಶ್ರಯದಲ್ಲಿ ಜ.20 ರಂದು ಸಂಜೆ 4.30ಕ್ಕೆ ಚುನಾವಣಾ ಕಾರ್ಯಾಲಯ ಉದ್ಘಾಟನೆ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ. ಲೋಕಸಭಾ ಕ್ಷೇತ್ರದ ಚುನಾವಣಾ ತಯಾರಿ ದೃಷ್ಟಿಯಿಂದ ಚುನಾವಣಾ ಕಾರ್ಯಾಲಯ ಉದ್ಘಾಟನೆ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ಮುಡಿಪು ಅಮರ್ ದೀಪ ಕಾಂಪ್ಲೆಕ್ಸ್ ನಲ್ಲಿ ಸಂಜೆ 4.30ಕ್ಕೆ ನಡೆಯಲಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು, ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಂಗಳೂರು ಲೋಕಸಭಾ ಕ್ಷೇತ್ರ ಸಂಚಾಲಕ ಗೋಪಾಲಕೃಷ್ಣ ಹೇರಳ ಹಾಗೂ ಅಧ್ಯಕ್ಷತೆಯನ್ನು ಸಂತೋಷ್ ಕುಮಾರ್ ಬೋಳಿಯಾರ್ ವಹಿಸಲಿದ್ದಾರೆ.ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ 4.00 ಗಂಟೆಗೆ ತೌಡುಗೋಳಿ ಕ್ರಾಸ್ ನಿಂದ , 4.15ಕ್ಕೆ ಬೋಳಿಯಾರಿನಿಂದ ಬೈಕ್ ರ್ಯಾಲಿ ಆರಂಭವಾಗಿ ಮುಡಿಪುವಿನಲ್ಲಿ ಸಮಾಪನೆಗೊಳ್ಳಲಿದೆ.

Read More

UN NETWORKS ಮಂಗಳೂರು: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಗಾಂಜಾ ಮಾರಾಟದ ಆರೋಪಿಯನ್ನು ನಗರದ ಇಕೊನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆ ಪೊಲೀಸರು ತಲಪಾಡಿ ಟೋಲ್ ಗೇಟ್ ಸಮೀಪ ಬಂಧಿಸಿದ್ದಾರೆ. ಮಂಜೇಶ್ವರ ತೂಮಿನಾಡು ನಿವಾಸಿ ಆಸೀಫ್ (33) ಬಂಧಿತ. ಹಲವು ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಠಾಣೆಗಳಲ್ಲಿ ಈತನ ಮೇಲೆ ಪ್ರಕರಣವಿದೆ. ಹೆಚ್ಚು ಕೇರಳ ಭಾಗದಿಂದ ಕರ್ನಾಟಕಕ್ಕೆ ತಂದು ಶಾಲಾ-ಕಾಲೇಜು ಆವರಣಗಳಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Read More