Author: UllalaVani

Kannada News From Coastal Karnataka

UN NETWORKS ಮಂಗಳೂರು: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಗಾಂಜಾ ಮಾರಾಟದ ಆರೋಪಿಯನ್ನು ನಗರದ ಇಕೊನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆ ಪೊಲೀಸರು ತಲಪಾಡಿ ಟೋಲ್ ಗೇಟ್ ಸಮೀಪ ಬಂಧಿಸಿದ್ದಾರೆ. ಮಂಜೇಶ್ವರ ತೂಮಿನಾಡು ನಿವಾಸಿ ಆಸೀಫ್ (33) ಬಂಧಿತ. ಹಲವು ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಠಾಣೆಗಳಲ್ಲಿ ಈತನ ಮೇಲೆ ಪ್ರಕರಣವಿದೆ. ಹೆಚ್ಚು ಕೇರಳ ಭಾಗದಿಂದ ಕರ್ನಾಟಕಕ್ಕೆ ತಂದು ಶಾಲಾ-ಕಾಲೇಜು ಆವರಣಗಳಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Read More

UN NETWORKS ಬೆಂಗಳೂರು: ಸಮಸ್ತ ಕರ್ನಾಟಕ ಅಧ್ಯಕ್ಷರಾದ ಸೆಯ್ಯಿದ್ ಏನ್ ಪಿ ಎಮ್ ಝೈನಲ್ ಆಬಿದೀನ್ ತಂಗಳ್ ರವರು ಅಬ್ದುಲ್ ನಾಸಿರ್ ಮ್ಹದನಿಯವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅಬೂಬಕ್ಕರ್ ಉಸ್ತಾದ್, ಮಿಸ್ಬಾಹುಲ್ ಹುದಾ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಮೊಹಮ್ಮದ್ ಹಾಜಿ, ಜಾಬಿರ್ ಹಾಜಿ ಪಲ್ಲಂಕೋಡ್, ಇಸ್ಮಾಯಿಲ್ ಲಿಂರ ಸಾಫ್ಟ್ ಟೆಕ್, ಹನೀಫ್, ಅಬ್ದುಲ್ ಸಮದ್ ದಾರಾನಿ ಉಪಸ್ಥಿತರಿದ್ದರು.

Read More

UN NETWORKS ಬೆಂಗಳೂರು : ಮಿಸ್ಬಾಹುಲ್ ಹುದಾ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಮೀಲಾದ್ ಮೆಹಫಿಲ್ 2019 ಕಾರ್ಯಕ್ರಮ ಎಮ್ ಇ ಸಿ ಟಿ ಕಾಂಪ್ಲೆಕ್ಸ್ ನಲ್ಲಿ ಭಾನುವಾರ ನಡೆಯಿತು. ಅಬೂಬಕ್ಕರ್ ಉಸ್ತಾದ್ ಎಂಎಫ್ ವಿ ದುವಾ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ದಕ್ಷಿಣ ಕನ್ನಡ ಇದರ ಅಧ್ಯಕ್ಷ ಎನ್.ಪಿ.ಎಮ್ ಝೈನುಲ್ ಆಬಿದೀನ್ ತಂಙಳ್ ಉದ್ಘಾಟಿಸಿದರು. ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಪ್ರಿನ್ಸಿಪಾಲ್ ನ್ಯಾಯವಾದಿ ಹನೀಫ್ ಹುದವಿ ಮುಖ್ಯ ಪ್ರಭಾಷಣಗೈದರು .ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮುಹಮ್ಮದ್ ಹಾಜಿ ನಿರ್ವಹಿಸಿದರು.ವೇದಿಕೆಯಲ್ಲಿ ಅಬ್ದುಲ್ ಸಮದ್ ದಾರಾನಿ, ಅಸ್ಲಂ ಫೈಝಿ, ಅಲಿ ದಾರಿಮಿ ,ಜುನೈದ್ ಬೆಂಗಳೂರು, ಜಾಬಿರ್ ಹಾಜಿ, ಇಬ್ರಾಹಿಂ ಹಾಜಿ ಕತ್ತರ್, ಮುಷ್ತಾಖ್ ಹುದವಿ, ಶಹಜಲ್ ಹುದವಿ ಸುಲೈಮಾನ್ ಹಾಜಿ, ಮುಹಮ್ಮದ್ ಟಿ ಕೆ , ಖಾಸಿಂ ಹಾಜಿ, ಅಯ್ಯೂಬ್ ಟಿ ಕೆ,ಸಲಾಂ, ಅಝೀಝ್, ಮೊಯ್ದೀನ್ ಇನ್ನಿತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ನೂರುಲ್ ಹುದಾ ಮದ್ರಸ…

Read More

UN NETWORKS ತಲಪಾಡಿ:ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಅಂತರಶಾಲಾ ಕಾಲೇಜು ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ತಲಪಾಡಿ ಕೆ.ಸಿ.ರೋಡ್‌ನ ಫಲಾಹ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪಂದ್ಯಾವಳಿಯ ವಿವಿಧ ವಿಭಾಗಗಳಲ್ಲಿ ಹಲವು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಶಾಲೆಯ ಏಳನೇಯ ತರಗತಿ ವಿದ್ಯಾರ್ಥಿ ಅಬ್ದುಲ್ ಸಯೀಮ್ (ಕಟಾ 1 ಬೆಳ್ಳಿ, ಕುಮಿಟೆ 1 ಚಿನ್ನ), ಮುಹಮ್ಮದ್ ಇಸ್ಮಾಯೀಲ್ ಫಝಲ್ (ಕಟಾ 1 ಕಂಚು), ಎರಡನೇ ತರಗತಿಯ ಫಾತಿಮಾ ತುಹ್ಫ (ಕುಮಿಟೆ 1 ಬೆಳ್ಳಿ, ಕಟಾ 1 ಕಂಚು) ಹಾಗೂ ನಾಲ್ಕನೇ ತರಗತಿಯ ಮುಹಮ್ಮದ್ ಫೌಝಾನ್ (ಕಟಾ 1 ಕಂಚು) ಪದಕಗಳನ್ನು ಗೆದ್ದುಕೊಂಡಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್ ತಿಳಿಸಿದ್ದಾರೆ.

Read More

UN NETWORKS ಉಳ್ಳಾಲ: ಹಿರಾ ಮಹಿಳಾ ಕಾಲೇಜು, ಬಬ್ಬುಕಟ್ಟೆ ಇದರ ವತಿಯಿಂದ ಮೌಲ್ಯ ಶಿಕ್ಷಣ ವಿಭಾಗದಿಂದ ಶವಸಂಸ್ಕಾರ ( ಮಯ್ಯತ್) ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮ ಹಿರಾ ಸಭಾಂಗಣದಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಯಾಗಿ ಶಾಂತಿ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿ ಹಾಗೂ ಅನುಪಮ ಮಹಿಳಾ ಮಾಸಿಕದ ಸಂಪಾದಕ ಮಂಡಳಿಯ ಸದಸ್ಯೆ ಸಾಜಿದಾ ಮೂಮಿನ್ ಇವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಉತ್ತಮ ಮಾಹಿತಿಯನ್ನು ನೀಡಿದರು. ಶವ ಸಂಸ್ಕಾರವು ಪ್ರತಿಯೊಬ್ಬ ಸತ್ಯವಿಶ್ವಾಸಿಯ ಕಡ್ಡಾಯ ಕರ್ಮವಾಗಿದೆ. ಅದರಲ್ಲಿ ಉತ್ತಮ ರೀತಿಯಲ್ಲಿ ಪಾಲ್ಗೊಂಡು ಪ್ರತಿಫಲವನ್ನು ಗಳಿಸಲು ಶ್ರಮಿಸಬೇಕು. ಇದನ್ನು ಪ್ರತಿಯೊಬ್ಬರು ಕಲಿಯಲು ಪ್ರಯತ್ನಿಸಬೇಕು ಎಂದು ಉಪದೇಶಿಸಿದರು. ಕಾರ್ಯಕ್ರಮದಲ್ಲಿ ಹಿರಾ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಭಾರತಿ ಎಂ.ಆರ್. ಹಾಗೂ ಮೌಲ್ಯ ಶಿಕ್ಷಣ ವಿಭಾಗದ ಮುಖ್ಯಸ್ಥೆ ಸಿಹಾನ ಬಿ.ಎಂ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಫಾತಿಮತ್ ಝವೀದ ಮತ್ತು ಶರೀಫ ಅಫ್ರ ಕಿರಾತ್ ಪಠಿಸಿದರು. ವಿದ್ಯಾರ್ಥಿನಿ ಫಾತಿಮತ್ ರಹೀಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Read More

UN NETWORKS ದೇರಳಕಟ್ಟೆ: ಕಾವೂರಿನ ಯಶ ಟ್ರಸ್ಟ್, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ ಘಟಕ ಮತ್ತು ರೋವರ್ಸ್ ದಳದ ಸಹಯೋಗದೊಂದಿಗೆ ಕಾಲೇಜಿನ ಆವರಣದಲ್ಲಿ ಆಟಿಸಂ ಮಕ್ಕಳ ಕ್ರೀಡಾ ಕೂಟವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಯೆನೆಪೋಯ ದಂತ ವ್ಯೆದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲೆ ಡಾ| ಶ್ಯಾಮ್ ಎಸ್. ಭಟ್ ಮುಖ್ಯ ಅತಿಥಿಯಾಗಿದ್ದರು. ಆಡಳಿತ ಟ್ರಸ್ಟ್ ನ ದುರ್ಗಾಲಕ್ಷ್ಮಿ ಹಾಗೂ ಸುನಿಲ್, ಕಾಲೇಜಿನ ಪ್ರಾಂಶುಪಾಲ ಡಾ. ತಾರಾ ರಾವ್, ಸುಧೀರ್ ಸಂಯೋಜನಾಧಿಕಾರಿ, ರೇಖಾ, ಆಟಿಸ್‍ಂ ಮಕ್ಕಳ ಪೋಷಕರು ಮೊದಲಾದವರು ಉಪಸ್ಥಿತರಿದ್ದರು.

Read More

UN NETWORKS ಕೊಣಾಜೆ: ಧಾರ್ಮಿಕ ಕೇಂದ್ರಗಳನ್ನು ಪ್ರವಾಸೋದ್ಯಾಮ ಇಲಾಖೆಯಡಿ ಸಂಪರ್ಕ ಕಲ್ಪಿಸಿ ಪ್ರವಾಸೋದ್ಯಾಮ ಇಲಾಖೆಯಡಿ ಬರುವ ಅನುದಾನಗಳನ್ನು ಬಳಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು. ಕೊಣಾಜೆಯ ಶ್ರೀ ಉಳ್ಳಾಲ್ತಿ ಕ್ಷೇತ್ರವನ್ನು ಸಂಪರ್ಕಕ್ಕೆ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟು ರಸ್ತೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.ಈಗಾಗಲೇ ಮಂಗಳೂರು ವಿವಿ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಶೇ. 80 ಕಾಮಗಾರಿಗಳು ಪೂರ್ಣಗೊಂಡಿದೆ. ಉಳಿದಂತೆ ಧಾರ್ಮಿಕ ಪ್ರವಾಸೋಧ್ಯಾಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಪ್ರವಾಸೋಧ್ಯಾಮ ಇಲಾಖೆಯಡಿ ಸಂಪರ್ಕ ಕಲ್ಪಿಸುವ ಕಾರ್ಯ ನಡೆಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಸಾದ್ ರೈ ಕಲ್ಲಿಮಾರ್, ಉಳ್ಲಾಲ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಬ್ಲಾಕ್ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೋಡಿಜಾಲ್, ಕ್ಷೇತ್ರದ ಅರ್ಚಕರಾದ…

Read More

UN NETWORKS ಕಲ್ಲಾಪು: ಕಾರು ಢಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿರುವ ಘಟನೆ ರಾ.ಹೆ.66ರ ಕಲ್ಲಾಪು ಸಮೀಪ ಇಂದು ನಸುಕಿನ ಜಾವ ಸಂಭವಿಸಿದೆ.ಉಳ್ಳಾಲ ಹೊಯ್ಗೆ ನಿವಾಸಿ ಡೋರತ್ ಪೌಲ್ ಎಂಬವರ ಪತ್ನಿ ಫ್ಲೋರಿನ್ ಡಿಸೋಜ(48) ಮೃತರು. ದೇರಳಕಟ್ಟೆ ಶಾಗಿಲ್ ವಾಚ್ ಕಂಪೆನಿಯಲ್ಲಿ ಉದ್ಯೋಗಿ ಆಗಿರುವ ಇವರು ಕೆಲಸಕ್ಕೆಂದು ತೆರಳುವ ಸಂದರ್ಭ ಘಟನೆ ಸಂಭವಿಸಿದೆ. ಕಲ್ಲಾಪು ಸಮೀಪ ಹೆದ್ದಾರಿ ದಾಟುವ ಸಂದರ್ಭ ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ತಲೆಗೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಢಿಕ್ಕಿ ಹೊಡೆದ ಕಾರು ಚಾಲಕ ನೇರವಾಗಿ ಕಾರನ್ನು ಮಂಗಳೂರು ಗರೋಡಿಯಲ್ಲಿರುವ ಸಂಚಾರಿ ಠಾಣೆಗೆ ಕೊಂಡೊಯ್ದು ಇರಿಸಿದ್ದಾರೆ. ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತರು ಪತಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Read More

UN NETWORKS ಉಳ್ಳಾಲ: ಯುವತಿಯೋರ್ವಳು ಮೊಬೈಲಿನಲ್ಲಿ ಸಂಭಾಷಣೆ ನಡೆಸುತ್ತಾ, ಕಣ್ಣೀರಿಡುತ್ತಾ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಘಟನೆ ಬುಧವಾರ ತಡರಾತ್ರಿ ವೇಳೆ ಸಂಭವಿಸಿದೆ. ತೊಕ್ಕೊಟ್ಟುವಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬೈಕ್ ಸವಾರರಿಬ್ಬರು ನೇತ್ರಾವತಿ ಸೇತುವೆಯಲ್ಲಿ ಒಂಟಿ ಯುವತಿ ಅಳುತ್ತಾ ಇರುವುದನ್ನು ಗಮನಿಸಿ ಬೈಕನ್ನು ನಿಲ್ಲಿಸಿದ್ದರು. ಇದೇ ವೇಳೆ ಯುವತಿ ಜತೆಗೆ ` ಏನಾದ್ರೂ ಸಹಾಯ ಮಾಡಬೇಕಾ’ ಎಂದು ಕೇಳುವಷ್ಟರಲ್ಲಿ ಮೊಬೈಲಿನಲ್ಲಿ ಅಳುತ್ತಲೇ ಸಂಭಾಷಣೆ ನಡೆಸುತ್ತಿದ್ದ ಯುವತಿ ಏಕಾಏಕಿ ನದಿಗೆ ಹಾರಿ ಆತ್ಮಹತ್ಯೆ ನಡೆಸಿದ್ದಾರೆ. ಕತ್ತಲು ಆವರಿಸಿದ್ದರಿಂದಾಗಿ ನದಿಗೆ ಹಾರುವ ಧೈರ್ಯ ಆಗಲಿಲ್ಲ ಎಂದು ಬೈಕ್ ಸವಾರರು ತಿಳಿಸಿದ್ದಾರೆ. ಸುಮಾರು 22ರ ಹರೆಯದ ಯುವತಿ ಆಕೆಯಾಗಿದ್ದು, ಹೆಗಲಿನಲ್ಲಿ ಬ್ಯಾಗ್ ಮತ್ತು ಯೂನಿಫಾರಂ ಧರಿಸಿದ್ದ ರೀತಿಯಲ್ಲಿ ಕಂಡುಬಂದಿದ್ದರು. ಕೆಲಸದ ಯೂನಿಫಾರಂ ಅಥವಾ ಕಾಲೇಜು ವಿದ್ಯಾರ್ಥಿನಿಯಾಗಿದ್ದಳೋ? ಎಂಬುದು ಸ್ಪಷ್ಟವಾಗಿಲ್ಲ ಎಂದು ಬೈಕ್ ಸವಾರರು ತಿಳಿಸಿದ್ದಾರೆ. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

Read More

UN NETWORKS ಬಾಳೆಪುಣಿ: ವಿಕಲಚೇತನರು ಮನೆ ನಿರ್ಮಾಣ ಬೇಡಿಕೆ ಮುಂದಿಟ್ಟುಕೊಂಡು ಪಂಚಾಯಿತಿಗೆ ಹೋಗಬೇಕಿಲ್ಲ, ಜಿಲ್ಲಾಧಿಕಾರಿ ಮುಖಾಂತರ ಪಟ್ಟಿ ತರಿಸಿ ಮನೆ ನಿರ್ಮಿಸಿಕೊಡುವ ಯೋಜನೆ ಸರ್ಕಾರ ಹಮ್ಮಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಜಿಲ್ಲಾ ಪಂಚಾಯಿತಿ, ಬಂಟ್ವಾಳ ತಾಲೂಕು ಪಂಚಾಯಿತಿ, ಪಜೀರು, ಕುರ್ನಾಡು, ಇರಾ, ಬಾಳೆಪುಣಿ, ನರಿಂಗಾನ, ಸಜೀಪಪಡು ಗ್ರಾಮ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಭಾಗಿತ್ವದಲ್ಲಿ ಬಾಳೆಪುಣಿ ಶಾಲಾ ವಠಾರದಲ್ಲಿ ಬುಧವಾರ ನಡೆದ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಗುರುತು ಚೀಟಿ ನೀಡುವ ವಿಕಲಚೇತನರ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಆರೋಗ್ಯವಂತ ಸಮಾಜ ನಿರ್ಮಾಣ ಆಗಬೇಕಾದರೆ ಪ್ರತಿ ಮನೆಯಲ್ಲಿ ಇರುವವರು ಆರೋಗ್ಯವಂತರಾಗಿರಬೇಕಿದೆ. ಇನ್ನೊಬ್ಬರ ಕಾಯಿಲೆ ಕಂಡು ಮರುಕಪಡುವ ಸಂದರ್ಭ ಮುಂದೆ ನಮಗೂ ಕಾಯಿಲೆ ಬರಬಾರದು ಎನ್ನುವ ಚಿಂತನೆ ಅಗತ್ಯ ಎಂದು ಹೇಳಿದರು.ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎಂ.…

Read More