UN NETWORKS ಬಾಳೆಪುಣಿ : ಉಳ್ಳಾಲ ಭಾಗದಲ್ಲಿ ಗುರುವಾರ ಸಂಜೆ ಗುಡುಗು, ಗಾಳಿ ಸಹಿತ ಮಳೆಯಾಯಿತು. ಸುಡುಬಿಸಿಲಿನಿಂದ ಕೂಡಿದ್ದ ವಾತಾವರಣ 15 ನಿಮಿಷಗಳ ಕಾಲ ಸುರಿದ ಮಳೆಯಿಂದಾಗಿ ತಂಪಾಯಿತು. ಮುಡಿಪು ಸಮೀಪದ ಬಾಳೆಪುಣಿ ಸರಕಾರಿ ಶಾಲೆಯ ಹೆಂಚುಗಾಳು ಹಾರಿಹೋಗಿ ಅಪಾರ ನಷ್ಟ ಸಂಭವಿಸಿದೆ. ಬಾಳೆಪುಣಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಸುಮಾರು 100 ಕ್ಕೂ ಅಧಿಕ ಹಂಚುಗಳು ಹಾರಿಹೋಗಿ ನಷ್ಟ ಸಂಭವಿಸಿದೆ. ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಮಕ್ಕಳು ಹಾಗೂ ಸಿಬ್ಬಂದಿ ಯಾರೂ ಇರಲಿಲ್ಲ. ಇದರಿಂದಾಗಿ ಸಂಭಾವ್ಯ ಅನಾಹುತ ತಪ್ಪಿದೆ. ಘಟನೆ ಕುರಿತು ಶಾಲಾ ಸಮಿತಿ ಸ್ಥಳೀಯ ಪಂಚಾಯಿತಿ ಗಮನಕ್ಕೆ ತಂದಿದೆ. ತೊಕ್ಕೊಟ್ಟು, ತಲಪಾಡಿ, ಕೋಟೆಕಾರು, ಬೀರಿ, ಉಳ್ಳಾಲ, ಕುತ್ತಾರು, ದೇರಳಕಟ್ಟೆ ಭಾಗದಲ್ಲಿ ಸಂಜೆ ಮಳೆಯಾಯಿತು. ಸಿಡಿಲು ಮತ್ತು ಗಾಳಿಯಿಂದ ಆರಂಭಗೊಂಡ ಮಳೆ 15 ನಿಮಿಷಗಳ ಕಾಲ ಸುರಿಯಿತು. ಅನಿರೀಕ್ಷಿತ ಮಳೆಯಿಂದಾಗಿ ವಾಹನ ಸವಾರರು, ಪಾದಚಾರಿಗಳು ಪರದಾಡಿದರು. ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ, ದೇರಳಕಟ್ಟೆಯಿಂದ ಕುತ್ತಾರು ರಸ್ತೆ ಅಗಲೀಕರಣ ಕಾಮಗಾರಿ…
Author: UllalaVani
UN NETWORKS ಮುಂಬಯಿ: ಸಂಘಸಂಸ್ಥೆಗಳಲ್ಲಿ ವೈಮನಸ್ಸು ಸ್ವಾಭಾವಿಕವಾದುದು. ಆದರೆ ಗೌಪ್ಯತೆ ಪದಾಧಿಕಾರಿಗಳೇ ಬಹಿರಂಗ ಪಡಿಸುವುದರಿಂದ ವ್ಯಕ್ತಿಯವಲ್ಲ ಸಂಸ್ಥೆಯ ಹಿತಕ್ಕೆ ಮಾರಕವಾಗಿರುತ್ತದೆ. ನಾವು ಸದಾ ತಜಾ ಅಲೋಚನೆ ಮಾಡಿ ಮುನ್ನಡೆಯಬೇಕು. ಅದನ್ನು ತಮ್ಮೊಳಗೆ ಪರಿಹಾರ ಮಾಡಿಕೊಳ್ಳಬೇಕು. ಸಂಸ್ಥೆಯೊಳಗಿನ ವೈಮನಸ್ಸನ್ನು ಬುದ್ಧಿಜೀವಿಗಳು ಹೊರಗೆ ತಿಳಿಸಿದಾಗ ಮೂರನೇಯವರೇ ಲಾಭದಾಯಕರಸ್ಥರು ಆಗುವರು. ನಿನ್ನೆ ತನಕ ಬೇವು ತಿಂದು ಬಂದ ನಾವುಗಳು ಇವತ್ತಿನಿಂದ ಬೆಲ್ಲವನ್ನು ಸವಿದು ಹೊಸ ಬದುಕಿನತ್ತ ಸಾಗಬೇಕಾಗಿದೆ. ಸ್ವಾರ್ಥಿಗಳ ಅರ್ಥವಿಲ್ಲದ ಮಾತಿಗೆ ಮೌನವೇ ಉತ್ತರವಾಗಲಿ. ವಾಟ್ಸಾಪ್, ಫೇಸ್‍ಬುಕ್‍ಗಳನ್ನು ಆಯುಧವಾಗಿಸಿ ಬೇಕಾಬಿಟ್ಟಿ ಪ್ರಕಟನೆಗಳನ್ನು ಭಿತ್ತರಿಸುವುದೇ ದೋಡ್ಡ ಅಪರಾಧ ಮತ್ತು ಇದೊಂದು ಅಡ್ಡದಾರಿಯಾಗಿದೆ. ಇದು ಯಾರಿಗೂ ಶೋಭದಾಯಕ ಮಾರ್ಗವಲ್ಲ. ಒಳ್ಳೆ ಮನಸ್ಸಿನಿಂದ ಒಳ್ಳೇ ಕಾರ್ಯಕ್ಕೆ ಒಂದು ನಿರ್ಧಿಷ್ಟ ಉದ್ದೇಶವಿಟ್ಟುಕೊಂಡು ಬಂದವರಾದ ಪತ್ರಕರ್ತರು ಸಮಾಧಾನ ಪ್ರಧಾನರಾಗಬೇಕು. ತಾವು ಸ್ವಇಪ್ಛೆಯಿಂದ ಪತ್ರಕರ್ತ ವೃತ್ತಿ ಆಯ್ಕೆ ಮಾಡಿದವರು. ದೇಶದ ಮನೋಭಾವವನ್ನು ಸೃಷ್ಠಿಸುವ ಹೊಣೆಹೊತ್ತವರು. ತಾವು ಅಪ್ಪಿತಪ್ಪಿ ಬರೆದರೆ ನೀವು ದೇಶದ ಮನಸ್ಥಿತಿ (ಮೂಡ್) ಹಾಳು ಮಾಡಿದಂತೆ. ಆದುದರಿಂದ ಪತ್ರಕರ್ತರು ರಾಷ್ಟ್ರದ ಮನಸ್ಥಿತಿ ಸೃಷ್ಠಿಸುವ…
UN NETWORKS ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು,ಸಂಶೋಧನ ವಿದ್ಯಾರ್ಥಿಗಳು ಮತ್ತು ಭೋದಕ ಸಿಬಂದಿ ನೇತೃತ್ವದಲ್ಲಿ ಕೊಣಾಜೆ, ಪಜೀರು ಮತ್ತು ನರಿಂಗಾನ ಗ್ರಾಮಗಳಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಯಿತು.ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ| ಎ.ಎಂ. ಖಾನ್ ಅಭಿಯಾನಕ್ಕೆ ಚಾಲನೆ ನೀಡಿದರು. ಜಾಗೃತಿ ಮೂಡಿಸುವಲ್ಲಿ ಯಶಸ್ವಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತ ದಾನ ಎಲ್ಲರ ಹಕ್ಕು ಮತ್ತು ಕರ್ತವ್ಯ ಕೂಡ ಎಂಬ ಉದ್ದೇಶದಿಂದ ದ.ಕ. ಜಿಲ್ಲಾ ಪಂಚಾಯತ್ ಮತ್ತು ವಿಶ್ವವಿ ದ್ಯಾನಿಲಯದ ಬೆಂಬಲದೊಂದಿಗೆ ನಡೆದ ಮನೆ ಮನೆ ಅಭಿಯಾನದಲ್ಲಿ ಮೂರು ಗ್ರಾಮದ ಮತದಾರರನ್ನು ಸಂಪ ರ್ಕಿಸಿ ಮತದಾನದ ಮಹತ್ವ ಮತ್ತು ಅಗತ್ಯತೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.ಅಭಿಯಾನಕ್ಕೆ ಗ್ರಾಮ ಪಂಚಾಯತ್ ಪಿಡಿಒ, ಬೂತ್ ಮಟ್ಟದ ಅಧಿಕಾರಿಗಳು ಮತ್ತು ಸಿಬಂದಿ ಸಹ ಕಾರ ಮತ್ತು ಮಾರ್ಗದರ್ಶನ ನೀಡಿದರು. ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ರಾದ ಪ್ರೊ| ಜಯರಾಜ್ ಅಮೀನ್, ಪ್ರೊ|ಪಿ.ಎಲ್.ಧರ್ಮ,ಡಾ|ದಯಾ ನಂದ್ ನಾಯ್ಕ ಮತ್ತು ಡಾ| ರಾಜ್ ಪ್ರವೀಣ್ ಮೊದಲಾದ ವರು ಈ ಅಭಿಯಾನದ ನೇತೃತ್ವ ವಹಿಸಿಕೊಂಡಿದ್ದರು.
UN NETWORKS ತಲಪಾಡಿ: ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಪ್ರಾದೇಶಿಕ ದೃಷ್ಟಿಯಲ್ಲಿ ಚಿಕ್ಕದಾದರೂ ಅದರ ಸಾಹಿತ್ಯಕ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಅದು ಹಿರಿದಾದ ಭಾಷೆಯಾಗಿದ್ದು, ನಮ್ಮ ತುಳು ಭಾಷೆಯನ್ನು ಉಳಿಸುವ ಬೆಳೆಸುವ ಕೆಲಸ ವಿದ್ಯಾರ್ಥಿ ಸಮೂಹದಲ್ಲಿ ನಡೆಯಬೇಕಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಭಿಪ್ರಾಯಪಟ್ಟರು. ತಲಪಾಡಿಯ ಶಾರದಾ ಪ್ರಥಮ ದರ್ಜೆ ಕಾಲೇಜು ಏರ್ಪಡಿಸಿದ ತುಳು ಸಾಂಸ್ಕೃತಿಕ ಪರ್ಬ-ಪಿಂಗಾರವನ್ನು ಉದ್ಘಾಟಿಸಿ ಮಾತನಾಡಿದರು.ತುಳುನಾಡಿನ ಕೋಲ, ಕಂಬಳ, ತಿಂಡಿ ತಿನಿಸುಗಳಾದ ನೀರು ದೋಸೆ, ಪತ್ರೊಡೆ, ಮಸಾಲೆ ದೋಸೆ ಇವೆಲ್ಲವೂ ಈ ಮಣ್ಣಿನ ಸಾಂಸ್ಕೃತಿಕ ಹಿರಿಮೆ. ಈ ಮಣ್ಣಿನ ಅಸಂಖ್ಯಾಕ ವರ್ಗ ತುಳುವಿನಲ್ಲೇ ಸಹಿ ಹಾಕುವ ಕ್ರಮವೂ ಇಲ್ಲಿನ ಜನರ ಭಾಷಾ ಪ್ರೇಮವನ್ನು ಪ್ರತಿನಿಧಿಸುತ್ತದೆ ಎಂದರು. ತುಳುವಿನಲ್ಲೇ ವ್ಯವಹರಿಸಿ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ. ಬಿ. ಪುರಾಣಿಕ್ ಮಾತನಾಡಿ, ಪ್ರಾಚೀನ ಕನ್ನಡ ಶಬ್ದಗಳು ಇಂದಿನ ತುಳು ಭಾಷಾ ಸಮೃದ್ಧಿಗೆ ಕಾರಣವಾಗಿದೆ. ವ್ಯಾವಹಾರಿಕವಾಗಿಯೂ ಕುಟುಂಬದ ಮಧ್ಯೆ ಆಂಗ್ಲ…
UN NETWORKS ಮಂಗಳೂರು: ಲೋಕಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಎ.13ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ನಗರಾದ್ಯಂತ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ವಾಹನ ಪಾರ್ಕಿಂಗ್ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಬಿಗಿ ಬಂದೋಬಸ್ತ್: ಐವರು ಎಸ್ಪಿ/ಡಿಸಿಪಿ, 10 ಡಿವೈಎಸ್ಪಿ/ಎಸಿಪಿ, 36 ಪೊಲೀಸ್ ಇನ್‌ಸ್ಪೆಕ್ಟರ್, 67 ಪಿಎಸ್ಸೈ, 147 ಎಎಸ್ಸೈ, 1,207 ಹೆಡ್ ಕಾನ್‌ಸ್ಟೇಬಲ್/ಪಿ.ಸಿ. ಸೇರಿದಂತೆ ಒಟ್ಟು 1472 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ. ಇದಲ್ಲದೆ 92 ಎಚ್.ಜಿ., 5 ಕೆಎಸ್.ಆರ್.ಪಿ. ತುಕಡಿ, 19 ಸಿ.ಎ.ಆರ್ ತುಕಡಿ ಹಾಗೂ 2 ಸಿ.ಆರ್.ಪಿ.ಎಫ್. ತುಕಡಿಗಳ ಅಧಿಕಾರಿ ಮತ್ತು ಸಿಬ್ಬಂದಿ ಅಂದು ಕರ್ತವ್ಯದಲ್ಲಿರುವರು. ಕಾರ್ಯಕ್ರಮ ನಡೆಯುವ ಸ್ಥಳ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಪ್ರಧಾನಿ ಸಂಚರಿಸುವ ಸ್ಥಳಗಳ ತಪಾಸಣೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಆಯುಕ್ತರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮ…
UN NETWORKS ಕೋಟೆಕಾರ್ : ಎಪ್ರಿಲ್ 13 ಕರಾವಳಿಯ ಜನರಿಗೆ ಹಬ್ಬದ ಸಂಭ್ರಮ. ಜಗತ್ತೇ ಮೆಚ್ಚಿದ ಭಾರತಾಂಬೆಯ ಹೆಮ್ಮೆಯ ಪುತ್ರ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಜಿಲ್ಲೆಗೆ ಆಗಮಿಸಲಿದ್ದಾರೆ. ಸಂಜೆ 3.30 ಕ್ಕೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಜಿ.ಪಂ.ಸದಸ್ಯೆ ಧನಲಕ್ಷೀ ಗಟ್ಟಿ ಹೇಳಿದರು. ಅವರ ನೇತೃತ್ವದಲ್ಲಿ ಕೋಟೆಕಾರ್ ಪಟ್ಟಣ ಪಂ.ಉಪಾಧ್ಯಕ್ಷೆ ಭಾರತಿ ಗಟ್ಟಿ ಮತ್ತಿತರರು ಮನೆ ಮನೆಗೆ ತೆರಳಿ ವಿಶೇಷವಾಗಿ ಮಹಿಳೆಯರಿಗೆ ಅರಶಿನ ಕುಂಕುಮ ಮತ್ತು ಹಸ್ತಕ್ಕೆ ಕಮಲದ ಚಿತ್ರವನ್ನು ಮೆಹಂದಿ ಮೂಲಕ ಬಿಡಿಸಿ ಕಾರ್ಯಕ್ರಮ ದ ಆಮಂತ್ರಣ ಪತ್ರ ನೀಡಿ ಆಹ್ವಾನಿಸಿತು.
UN NETWORKS ಹರೇಕಳ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆ, ರಾಮಕೃಷ್ಣ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲಾ ಹಳೇ ವಿದ್ಯಾರ್ಥಿ ಸಂಘ ಮತ್ತು ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಹರೇಕಳ ಇಲ್ಲಿ ಚಿಣ್ಣರ ಚಿಲುಮೆ ಬೇಸಿಗೆ ಶಿಬಿರದಲ್ಲಿ ಮಾತಾ ಅಮೃತಾನಂದಮಯಿ ಮಠ ಬೋಳೂರು ಇವರ ವತಿಯಿಂದ ಸ್ವಚ್ಛ ಭಾರತ (ಅಮಲ ಭಾರತ) ಕಾರ್ಯಕ್ರಮ ನಡೆಯಿತು. ಇದರ ಸಂಪನ್ಮೂಲ ವ್ಯಕ್ತಿಯಾಗಿ ಪರಿಸರವಾದಿ ಪಿ.ಕೃಷ್ಣಪ್ಪರವರು ಶಿಬಿರಾರ್ಥಿಗಳಿಗೆ ಪರಿಸರ ಮತ್ತು ಸ್ವಚ್ಛತೆಯ ಬಗ್ಗೆ ತರಬೇತಿ ನೀಡುವುದರೊಂದಿಗೆ ಕವನವನ್ನು ವಾಚಿಸಿದರು. ಈ ಸಂದರ್ಭದಲ್ಲಿ ಲಕ್ಷಣಫಲ ವೃಕ್ಷವನ್ನು ಶಾಲಾ ವಠಾರದಲ್ಲಿ ನೆಟ್ಟು ನೀರೆರೆಯಲಾಯಿತು. ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈ ವಹಿಸಿದರು. ಮುಖ್ಯ ಅತಿಥಿಗಳಾಗಿ ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಇದರ ಅಧ್ಯಕ್ಷೆ ಪವಿತ್ರ ಗಣೇಶ್, ಶಾಲಾ ಅಧ್ಯಾಪಕರಾದ ರವಿಶಂಕರ್, ಮೋಹಿನಿ, ಶಿವಕುಮಾರ್, ಸ್ಮಿತಾ ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕರಾದ ತ್ಯಾಗಂ ಹರೇಕಳ ಸ್ವಾಗತಿಸಿದರು.
UN NETWORKS ಉಳ್ಳಾಲ: ದೇರಳಕಟ್ಟೆಯ ಫಾದರ್ ಮುಲರ್ಸ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ವಿಶ್ವ ಹೋಮಿಯೋಪತಿ-2019 ದಿನ ಪ್ರಯುಕ್ತ ಕಾಲ್ನಡಿಗೆ ಜಾಥಾ ಮತ್ತು ಬೀದಿನಾಟಕ ದೇರಳಕಟ್ಟೆ ಮತ್ತು ತೊಕ್ಕೊಟ್ಟು ಬಸ್ಸು ನಿಲ್ದಾಣಗಳಲ್ಲಿ ಬುಧವಾರ ನಡೆಯಿತು. ಜಾಥಾ ನೇತೃತ್ವ ವಹಿಸಿದ್ದ , ಸಮಾಜ ಸೇವಕ ವಿವೇಕ್ ಫೆರ್ನಾಂಡಿಸ್ ಮಾತನಾಡಿ ಆಗಸ್ಟಸ್ ಫಾದರ್ ಮುಲ್ಲರ್ ಸ್ಥಾಪಿಸಿದಂತಹ ಹೋಮಿಯೋಪತಿ ಔಷಧಿ ಪದ್ಧತಿಯನ್ನು 100 ವರ್ಷಗಳ ಇತಿಹಾಸವಿರುವ ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮತ್ತು ದೇರಳಕಟ್ಟೆ ಭಾಗದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಸ್ಥಾಪಿಸಿದೆ. ಹೋಮಿಯೋಪತಿ ದಿನವಾದ ಇಂದು ಕಾಲೇಜಿನ ಮ್ಯಾನೇಜ್ ಮೆಂಟ್, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿಕೊಂಡು ತೊಕ್ಕೊಟ್ಟು, ದೇರಳಕಟ್ಟೆ ಭಾಗದಲ್ಲಿ ಜಾಥಾ ನಡೆಸಲಾಗಿದೆ. ಆಸ್ಪತ್ರೆಯಲ್ಲಿ ಇರುವ ಮಕ್ಕಳ, ಮಹಿಳೆಯರಸಹಿತ ವಿವಿಧ ವಿಭಾಗಗಳಿಂದ ದೊರಕುವ ಸೌಲಭ್ಯಗಳ ಕುರಿತ ಮಾಹಿತಿಯನ್ನು ಬೀದಿ ನಾಟಕದ ಮೂಲಕ ತೋರಿಸಲಾಗಿದೆ . ಯಾವುದೇ ಅಡ್ಡಪರಿಣಾಮವಿಲ್ಲದ ಹೋಮಿಯೋಪತಿ ಔಷಧ ಪದ್ಧತಿಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಅನ್ನುವ ಸಂದೇಶವನ್ನು ಈ ಮೂಲಕ ಸಾರಲಾಗಿದೆ ಎಂದರು.…
UN NETWORKS ಕೊಣಾಜೆ : ಬದುಕಿನಲ್ಲಿ ಬಹುಮುಖ ಆಯ್ಕೆಗಳನ್ನು ನಾವು ರೂಢಿಸಿಕೊಳ್ಳಬೇಕು. ಜೀವನದ ಪ್ರತಿ 10-15 ವರ್ಷಗಳಿಗೊಮ್ಮೆ ನಮ್ಮನ್ನು ನಾವು ಮರು ಅನ್ವೇಷಿಸಬೇಕು. ವೃತ್ತಿ ಜೊತೆ ಜೊತೆಗೆ ನಟನೆಯಂಥಹ ಆಸಕ್ತಿಯ ವಿಚಾರಗಳಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದು ಮಲಯಾಳಂ ಮತ್ತು ಮರಾಠಿ ಚಿತ್ರರಂಗದ ಜನಪ್ರಿಯ ನಿರ್ದೇಶಕ ಪ್ರಕಾಶ್ ಬಾರೆ ಹೇಳಿದ್ದಾರೆ. ಮಂಗಳೂರು ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಮಂಗಳವಾರ ಕೊಣಾಜೆಯ ಮಂಗಳೂರು ವಿ.ವಿ. ಆವರಣದ ಮಂಗಳಾ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ಸಿನಿಮಾ ಉತ್ಸವ `ರಿಪ್ಲೆಕ್ಷನ್ 2019′ ಉದ್ಘಾಟಿಸಿ ಅವರು ಮಾತನಾಡಿದರು. ಇತರ ರಂಗಗಳ ಹಾಗೆ ಸಿನಿಮಾ ರಂಗದಲ್ಲೂ ನ್ಯಾಸಿಸಂ ಪ್ರವೃತ್ತಿ ಇದೆ. ಯಾವುದೇ ಕಲಾ ಪ್ರಕಾರ , ಮನರಂಜನೆಯನ್ನು ಯಾರೋ ಬಂದು ನಮ್ಮ ಮೇಲೆ ಹೇರುವ ಹಾಗಿರಬಾರದು. ನಮ್ಮ ಸ್ವಾತಂತ್ರ್ಯದ, ಆಯ್ಕೆಯ ಸಿನಿಮಾಗಳನ್ನು ನೋಡುವ ಅವಕಾಶ ಇರಬೇಕು. ಸಿನಿಮಾ ಉತ್ಸವಗಳಲ್ಲಿ ಈ ಅವಕಾಶ ದೊರಕುತ್ತದೆ. ಅಂತರ್ಜಾಲ ತಾಣಗಳು ನಮಗೆ ಇಂತಹ ಮುಕ್ತ…
UN NETWORKS ಮುಡಿಪು: ದೇಶದಲ್ಲಿ 12 ಕೋಟಿ ಯುವಕರಿಗೆ ಮುದ್ರಾ ಯೋಜನೆಯಡಿ ಸಾಲ ನೀಡಲಾಗಿದ್ದು, ದ.ಕ. ಜಿಲ್ಲೆಯಲ್ಲಿ 94 ಸಾವಿರ ಯುವಕರಿಗೆ 1,500 ಕೋಟಿ ರೂ. ಸಾಲವನ್ನು ಕೇಂದ್ರ ಸರಕಾರ ನೀಡಿದೆ ಎಂದು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ತಿಳಿಸಿದರು. ಕುರ್ನಾಡು ಮತ್ತು ಕೊಣಾಜೆ ಶಕ್ತಿ ಕೇಂದ್ರದ ಆಶ್ರಯದಲ್ಲಿ ಮುಡಿಪು ಜಂಕ್ಷನ್‍ನಲ್ಲಿ ನಡೆದ ರೋಡ್ ಶೋ ಮತ್ತು ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.ಉಜ್ವಲ ಯೋಜನೆ, 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಆರೋಗ್ಯ ವಿಮೆ, ಆಯುಷ್ಮಾನ್ ಮೋದಿ ಕೇರ್, ಜನಧನ್ ಮೂಲಕ ಜನಪ್ರಿಯ ಯೋಜನೆಗಳನ್ನು ಮೋದಿ ಜಾರಿಗೆ ತಂದರು ಎಂದರು. ದೇಶದ ಸಾಮರ್ಥ್ಯ ಪ್ರದರ್ಶನ ಐದು ವರ್ಷದ ಆಡಳಿತದಲ್ಲಿ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವದೆಲ್ಲೆಡೆ ಪಸರಿಸಿದ್ದಾರೆ. ಯುದ್ಧ ಕೈದಿಯನ್ನು ಪಾಕಿಸ್ಥಾನವು 48 ಗಂಟೆಗಳ ಒಳಗೆ ಭಾರತಕ್ಕೆ ಒಪ್ಪಿಸುವಂತೆ ಮಾಡಿದ್ದಾರೆ ಎಂದರು. ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಶಾಸಕ…

