Author: UllalaVani

Kannada News From Coastal Karnataka

UN networks ದೆಹಲಿ: ಕೆಂಪು ಕೋಟೆ ದೆಹಲಿಯಲ್ಲಿ ಕೊರೋನ ಅಟ್ಟಹಾಸ ಮತ್ತೊಮ್ಮೆ ಶುರುವಾಗಿದೆ. ಈಗಾಗಲೇ ಕೊರೋನದಿಂದ ಭಾರಿ ಸಾವು ನೋವು ಪ್ರಕರಣಗಳು ಹೆಚ್ಚಾಗುತ್ತಿದ್ದು ಆತಂಕ ಆರಂಭವಾಗಿದೆ. ಕೆಲ ದಿನಗಳ ಹಿಂದೆ ಸೋಂಕಿನ‌ಪ್ರಮಾಣ ಕಡಿಮೆಯಾಗಿದ್ದು ಎರಡು ಬಾರಿ ಪ್ರಕರಣ ಕಡಿಮೆಯಾಗಿ ಇದೀಗ ಹೆಚ್ಚಾಗುತ್ತಿದ್ದಂತೆ ಜನರಿಗೆ ನಡುಕ ಶುರುವಾಗಿದೆ. ಒಂದೇ ದಿನ 7178 ಪ್ರಕರಣಗಳು ಪತ್ತೆಯಾಗಿವೆ. ದೆಹಲಿಯಲ್ಲಿ ಕೊರೊನಾ ಸೋಂಕು ಆರಂಭವಾದಾಗಿನಿಂದ ಒಂದೇ ದಿನ ಇಷ್ಟೊಂದು ಪ್ರಮಾಣದ ಸೋಂಕಿತರು ಪತ್ತೆಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ 7 ಸಾವಿರ ದಾಟಿದೆ.ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ನಿತ್ಯ 6 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿದ್ದವು. ನವೆಂಬರ್ 4 ರಂದು 6842 ಪ್ರಕರಣಗಳು ಪತ್ತೆಯಾಗಿತ್ತು.ದೆಹಲಿಯಲ್ಲಿ ಈಗ ಒಟ್ಟು 4,23,831 ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ 64 ಮಂದಿ ಸಾವನ್ನಪ್ಪಿದ್ದಾರೆ. ಶೇ.89ರಷ್ಟು ಚೇತರಿಕೆ ಕಂಡಿದ್ದಾರೆ. ಚಳಿಗಾಲದಲ್ಲಿ ವಾಯುಗುಣಮಟ್ಟ ಕುಸಿಯಲಿದ್ದು, ಇದು ಕೊರೊನಾ ಸೋಂಕಿತರಿಗೆ ಮತ್ತಷ್ಟು ಅಪಾಯವನ್ನುಂಟು ಮಾಡಲಿದೆ.ಇದರಿಂದ ಉಸಿರಾಟ ಸಮಸ್ಯೆಯೂ ಹೆಚ್ಚಾಗಲಿದೆ. ದೆಹಲಿ ಭಾರತದ ಕೊರೊನಾ ರಾಜಧಾನಿಯಾಗಲು…

Read More

UN networks ಕೊಣಾಜೆ: ಇಲ್ಲಿನ ಠಾಣಾ ವ್ಯಾಪ್ತಿಯ ಬಗಂಬಿಲ ರಸ್ತೆಯಲ್ಲಿ ಯುವತಿಯ ಸರ ಕಳವು ನಡೆಸಿದ ಆರೋಪಿಯನ್ನು ಮೂರೇ ಗಂಟೆಗಳಲ್ಲಿ ಎಸಿಪಿ ನೇತೃತ್ವದ ಉಳ್ಳಾಲ ಹಾಗೂ ಕೊಣಾಜೆ‌ ಪೊಲೀಸರ ತಂಡ ದೇರಳಕಟ್ಟೆ ಯಿಂದ ಬಂಧಿಸಿದ್ದಾರೆ. ಕೇರಳ ಮೂಲದ ಸುಲ್ತಾನ್ (28) ಬಂಧಿತ. ದೇರಳಕಟ್ಟೆಯಲ್ಲಿರುವ ಹೊಟೇಲೊಂದರಲ್ಲಿ ಕೆಲಸಕ್ಕಿದ್ದ ಈತ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದಾನೆ.ನಿನ್ನೆ ಸಂಜೆ ಕೆಲಸಬಮುಗಿಸಿ ಮನೆವಕಡೆಗೆ ತೆರಳುತ್ತಿದ್ದ ನಿಶಾ ಎಂಬವರ ಕುತ್ತಿಗೆಯಿಂದ ಒಂದು ಪವನ್ ಬೆಲೆಬಾಳುವ ಚಿನ್ನದ ಸರವನ್ನು ಬುಲೆಟ್ ಬೈಕಿನಲ್ಲಿ ಬಂದ ಆರೋಪಿ ಸುಲ್ತಾನ್ ಕಳವು ನಡೆಸಿದ್ದ. ಈತನ ಕಳವು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಅಲ್ಲಲ್ಲಿ ಬಂದೋಬಸ್ತ್ ನಡೆಸಿ ತಪಾಸಣೆ ಆರಂಭಿಸಿದ್ದರು. ಕೊಣಾಜೆ ಠಾಣಾ ಕ್ರೈಂ ತಂಡದ ಸಹಕಾರವನ್ನು ಪಡೆದು ತಪಾಸಣೆ ಆರಂಭಿಸಿದಾಗ ಸಿಸಿಟಿವಿಯಲ್ಲಿ ಸೆರೆಸಿಕ್ಕ ಬುಲೆಟ್ ಮತ್ತು ಆರೋಪಿಯ ಟೀಶಟ್ ೯ ಆಧಾರದಲ್ಲಿ, ಆರೋಪಿ ಬಾರ್ ಒಳಗಡೆ ಪ್ರವೇಶಿಸುತ್ತಿದ್ದಂತೆ ಸೆರೆ ಹಿಡಿದು ಬಂಧಿಸಿದ್ದಾರೆ. ಯುವತಿ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದ ಸಂದರ್ಭದಲ್ಲೇ ಆರೋಪಿಯನ್ನು ಸೆರೆ…

Read More

ಕೋಟೆಕಾರು: ಕಳೆದ ಎರಡು ವರ್ಷಗಳಿಂದ ಅಧ್ಯಕ್ಷರಿಲ್ಲದ ಕೋಟೆಕಾರು ಪಟ್ಟಣ ಪಂಚಾಯತಿಗೆ ಇಂದು ಅಧ್ಯಕ್ಷರ ಭಾಗ್ಯ ದೊರೆತಿದೆ. ಬಿಜೆಪಿಯ ಜಯಶ್ರೀ ಫ್ರಫುಲ್ಲಾ ದಾಸ್ ಇವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಮೀಸಲಾತಿಗೆ ಅನುಸಾರವಾಗಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಇಲ್ಲದೇ ಎರಡು ವರ್ಷಗಳ ಕಾಲ ಉಪಾಧ್ಯಕ್ಷರ ಆಡಳಿತದಲ್ಲಿ ಪಟ್ಟಣ ಪಂಚಾಯಿತಿ ಮುಂದುವರಿದಿತ್ತು. ಭಾರತಿ ರಾಘವ ಗಟ್ಟಿ ಉಪಾಧ್ಯಕ್ಷರಾಗಿದ್ದರು. ಎರಡು ವರ್ಷಗಳ ಹಿಂದೆ ಎಸ್. ಟಿ ಮಹಿಳೆ ಮೀಸಲಾತಿ ಬಂದಿರುವುದರಿಂದ ಬಿಜೆಪಿಯಿಂದ ಅಭ್ಯರ್ಥಿ ಇರಲಿಲ್ಲ. ಆದ್ದರಿಂದ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಾತ್ರ ನಡೆದಿತ್ತು. ಬಿಜೆಪಿ ಬೆಂಬಲಿತ 11, ಕಾಂಗ್ರೆಸ್ -4 ಎಸ್ ಡಿಪಿಐ-1 ಹಾಗೂ ಸಿಪಿಎಂ ನ -1 ಅಭ್ಯರ್ಥಿ ಚುನಾಯಿತರಾಗಿದ್ದರು. ಇದೀಗ ಎರಡೂವರೆ ವರ್ಷಗಳ ಬಳಿಕ ಅಧ್ಯಕ್ಷರ ಆಯ್ಕೆ ನಡೆದರೂ, ಕೇವಲ ಆರು ತಿಂಗಳಿಗೆ ಮಾತ್ರ ಅಧಿಕಾರ ಇದ್ದು, ಬಳಿಕ ಅವಧಿ ಮುಗಿಯಲಿದೆ.ಆಯ್ಕೆ ಪ್ರಕ್ರಿಯೆ ಸಂದರ್ಭ ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕ್ಷೇತ್ರ ಬಿಜೆಪಿ ಮುಖಂಡರುಗಳಾದ ಚಂದ್ರಹಾಸ್ ಪಂಡಿತ್ ಹೌಸ್, ಸಂತೋಷ್ ಬೋಳಿಯಾಋ, ಸತೀಶ್ ಕುಂಪಲ, ರವೀಂದ್ರ…

Read More

ಕುತ್ತಾರು: ಉಪಚುನಾವಣೆ ನಡೆದ ಶಿರಾ ಕ್ಷೇತ್ರದಲ್ಲಿ 25,000 ಮತಗಳ ಅಂತರದಲ್ಲಿ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು. ಕುತ್ತಾರು ಬಾಲಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಆಶ್ರಮದ ಮಕ್ಕಳ ಜೊತೆಗೆ ಹುಟ್ಟು ಹಬ್ಬವನ್ನು ಸರಳವಾಗಿ ಮಂಗಳವಾರ ಆಚರಿಸಿ ಮಾತನಾಡಿದರು. ಜೆ.ಪಿ ನೆಡ್ಡಾ ಅವರ ಸೂಚನೆಯಂತೆ ಮೈಸೂರಿನಿಂದ ಪಕ್ಷ ಸಂಘಟನೆ ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಯಡಿಯೂರಪ್ಪರ ಮಗನಾಗಿರುವುದಕ್ಕೆ ಹೆಮ್ಮೆ ವಿಷಯ.ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರ ಪ್ರೀತಿ ವಿಶ್ವಾಸದೊಂದಿಗೆ ಬೆಳೆಯುತ್ತಾ ಇದ್ದೇವೆ.ಕುತ್ತಾರು ಆಶ್ರಮದ ಸಂಘಟಕರು ಅಪೇಕ್ಷೆ ಪಡೆಯದೆ ಸೇವೆಗೆ ಅಡಚಣೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಆಶ್ರಮಕ್ಕೆ ಎಲ್ಲಾ ರೀತಿಯ ಸಹಕಾರ ಒದಗಿಸಲಾಗುವುದು.ಹುಟ್ಟುಹಬ್ಬ ಆಚರಿಸುವ ಉದ್ದೇಶವಿರಲಿಲ್ಲ, ಆದರೆ ಕಾರ್ಯಕರ್ತರ ಒತ್ತಾಯಕ್ಕೆ ಸರಳವಾಗಿ ಆಶ್ರಮದ ಮಕ್ಕಳ ಜತೆಗೆ ಆಚರಿಸಿದ್ದೇನೆ ಎಂದರು. ಈ ಸಂದರ್ಭ ಆಶ್ರಮ ಸಂಘಟಕ ಅನಂತಕೃಷ್ಣ ಭಟ್, ಬಿಜೆಪಿ ಮುಖಂಡರುಗಳಾದ ಕಿಶೋರ್ ಕುಮಾರ್ ಪುತ್ತೂರು, ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಹಾಸ್ ಪಂಡಿತ್ ಹೌಸ್, ಗೋಪಾಲ್ ಕುತ್ತಾರ್, ರಾಜೀವ್…

Read More

UN network ಕುತ್ತಾರು: ಕುತ್ತಾರು ಬಾಲಸಂರಕ್ಷಣಾ ಕೇಂದ್ರಕ್ಕೆ ದಲ್ಲಿ ಆಶ್ರಮದ ಮಕ್ಕಳ ಜೊತೆಗೆ ಹುಟ್ಟು ಹಬ್ಬವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಮಂಗಳವಾರ ಸರಳವಾಗಿ ಆಚರಿಸಿದರು. ಬೆಳಿಗ್ಗೆ 8.30 ರ ಹೊತ್ತಿಗೆ ಆಗಮಿಸಿದ ಸಂಸದರನ್ನು ಉಳ್ಳಾಲ ವಲಯದ ಬಿಜೆಪಿ ಕಾರ್ಯಕರ್ತರು ಬರಮಾಡಿಕೊಂಡರು. ಮೊದಲಿಗೆ ಗೋಪೂಜೆ ನೆರವೇರಿಸಿ ನಂತರ ಭಾರತಮಾತೆಗೆ ಪುಷ್ಪಾರ್ಚನೆ ಮಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷರು ನಂತರ ಮಕ್ಕಳ ಜತೆಗೆ ಹುಟ್ಟುಹಬ್ಬ ಆಚರಿಸಿದರು.

Read More

ಉಳ್ಳಾಲ :  ಸವಿತಾ ಸಮಾಜ ಉಳ್ಳಾಲ ಇದರ 2020-21 ನೇ ಸಾಲಿನ ಅಧ್ಯಕ್ಷರಾಗಿ ರಮೇಶ್ ಕೆ. ಕುತ್ತಾರ್ ಇವರು  ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ತೊಕ್ಕೊಟ್ಟು ಗಣೇಶಮಂದಿರದಲ್ಲಿ ಇತ್ತೀಚೆಗೆ ನಡೆದ  ವಾರ್ಷಿಕ ಸಭೆ ನಡೆಯಿತು. ಪದಾಧಿಕಾರಿಗಳ ಆಯ್ಕೆಯಲ್ಲಿ  ಗೌರವ ಅಧ್ಯಕ್ಷರಾಗಿ   ಎಸ್. ವಿಶ್ವನಾಥ್ ಭಂಡಾರಿ ಪ್ರಧಾನ ಕಾರ್ಯದರ್ಶಿ ಆಗಿ  ಎ. ಶಶಿಕುಮಾರ್,  ಕೋಶಾಧಿಕಾರಿಯಾಗಿ  ಯತೀಶ್. ಬಿ. ಸಾಲಿಯಾನ್ ಇವರುಗಳನ್ನು ನೇಮಕಮಾಡಲಾಯಿತು.  ಸಮಾಜದ ಹಿರಿಯರಾದ ಮತ್ತು ಸರಕಾರದ ಕಾರ್ಮಿಕ ಶ್ರಮ ಸಮ್ಮಾನ 2020ರ  ವಿಶೇಷ ಪ್ರಶಸ್ತಿ ಪಡೆದ  ಎಸ್. ವಿಶ್ವನಾಥ್ ಭಂಡಾರಿಯವರನ್ನು ಉಳ್ಳಾಲ ಸವಿತಾ ಸಮಾಜ ಪರವಾಗಿ ಸಮ್ಮಾನಿಸಲಾಯಿತು. 

Read More

ಉಳ್ಳಾಲ: ಉಳ್ಳಾಲ ಬ್ಲಾಕ್ ಯುವ ಇಂಟಕ್ ಅಧ್ಯಕ್ಷರಾಗಿ ವಿಶಾಲ್ ಕೊಲ್ಯ ಇವರನ್ನು ಆಯ್ಕೆ ಮಾಡಲಾಗಿದೆ. ಇಂಟಕ್ ರಾಜ್ಯಾಧ್ಯಕ್ಷ  ವರುಣ್ ಕುಮಾರ್ ಎಸ್.ಕೆ  ನೇಮಕ ಮಾಡಿರುವ ಪತ್ರವನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಇತ್ತೀಚೆಗೆ ಹಸ್ತಾಂತರಿಸಿದರು. 

Read More

UN NETWORK ಉಳ್ಳಾಲ : ಉಳ್ಳಾಲಕ್ಕೆ ಹೋಗಲು ಪಾಸ್ ಪೋಟ್ ಕಡ್ಡಾಯ, ವಿಮಾನ ಕೂಡ ರೆಡಿಯಾಗಿದೆ… , ನೇತ್ರಾವತಿ ಬ್ರಿಡ್ಜ್ ನಲ್ಲಿ ಪಾಸ್‍ಪೋರ್ಟ್ ಚೆಕಿಂಗ್ ಸೆಂಟರ್ ಆರಂಭವಾಗಿದೆ. .. ಹೀಗೆ ಕಿನ್ಯಾ ಕೇಶವ ಶಿಶುಮಂದಿರದಲ್ಲಿ ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹೇಳಿಕೆಯನ್ನು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಉಳ್ಳಾಲಕ್ಕೆ ಹೋಗುವ ಸಿಟಿ ಬಸ್‍ಗೆ ಸ್ಟೇಟ್ ಬ್ಯಾಂಕ್ ಟು ಪಾಕಿಸ್ತಾನ್, ಶಾಸಕ ಯು.ಟಿ ಖಾದರ್ ಮತ್ತು ಕಲ್ಲಡ್ಕ ಭಟ್ ಜತೆಯಾಗಿ ಮಾತನಾಡುತ್ತಿರುವುದು ` ಪಾಕಿಸ್ತಾನದ ಪ್ರಧಾನಿ ಜತೆಗೆ ಓಮ್ನಿಸ್ತಾನದ ಪ್ರಧಾನಿಯ ಮಾತುಕತೆ ‘ ಪಾಸ್ ಪೋರ್ಟ್ ಚೆಕಿಂಗ್ ಸೆಂಟರ್ ಹೀಗೆ ವಿವಿಧ ರೀತಿಯಲ್ಲಿ ಕಲ್ಲಡ್ಕ ಭಟ್ ಹೇಳಿಕೆ ಟ್ರೋಲ್ ಆಗಿ ತಿರುಗಾಡುತ್ತಿದೆ. ಭಟ್ ಅವರ ಹೇಳಿಕೆಗಳು ಬಿಸಿ ವಾತಾವರಣಕ್ಕೆ ಕಾರಣವಾಗುತ್ತಿದ್ದರೂ, ಟ್ರೋಲಿಗರು ವಿಚಾರವನ್ನು ಹಾಸ್ಯಾಸ್ಪದವಾಗಿ ಸ್ವೀಕರಿಸಿದ್ದಾರೆ.

Read More

ಉಳ್ಳಾಲ : ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪಾಕಿಸ್ತಾನವಾಗಿದೆ ಎಂಬ ಆರ್.ಎಸ್.ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಯನ್ನು ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಖಂಡಿಸಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮುಚ್ಚಲು ಇಂತಹ ಹೇಳಿಕೆಯನ್ನು ನೀಡಲಾಗುತ್ತಿದೆ. ಇದು ಫ್ಯಾಸಿಸ್ಟ್ ಶಕ್ತಿಗಳು ಹಿಂದಿನಿಂದಲೂ ಅನುಸರಿಸಿಕೊಂಡು ಬಂದ ತಂತ್ರವಾಗಿದ್ದು ಅಭಿವೃದ್ಧಿಯ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲದಿದ್ದಾಗ ಧರ್ಮ ಸಂಘರ್ಷದ ಮಾತುಗಳನ್ನಾಡಿ ಜನರ ಗಮನ ಬೇರೆಡೆ ತಿರುಗಿಸುವ ತಂತ್ರವನ್ನು ಭಟ್ ನಿರ್ವಹಿಸಿದ್ದಾರೆ. ಉಳ್ಳಾಲ ತಾಲೂಕಿನಲ್ಲಿ ಕೋವಿಡ್ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳ ಲೂಟಿ ಮಿತಿಮೀರಿದೆ. ಅದೇ ರೀತಿ ಯುವಜನರ ನಿರುದ್ಯೋಗದ ಪ್ರಮಾಣದಲ್ಲೂ ಏರಿಕೆಯಾಗಿದೆ. ಇಂತಹ ನೈಜ ವಿಷಯಗಳ ಬಗ್ಗೆ ಮಾತನಾಡುವುದು ಬಿಟ್ಟು ಪ್ರಭಾಕರ ಭಟ್ ಅಬ್ಬಕ್ಕ ಆಳಿದ ನಾಡನ್ನು ಪಾಕಿಸ್ತಾನ ಎಂದು ಕರೆಯುವ ಮೂಲಕ ತಾಲೂಕನ್ನು ಅವಮಾನಿಸಿದ್ದು ಇವರ ಈ ಹೇಳಿಕೆಯನ್ನು ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಖಂಡಿಸುತ್ತದೆ ಎಂದು ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್…

Read More

ಉಳ್ಳಾಲ: ಮಂಗಳೂರಿನ ಉಳ್ಳಾಲಕ್ಕೆ ಹೋದರೆ ಪಾಕಿಸ್ತಾನವನ್ನು ನೋಡಿದಂಗೆ ಆಗುತ್ತದೆ. ಉಳ್ಳಾಲ ಪಾಕಿಸ್ತಾನವೇ ಅಲ್ವಾ..? ಅದು ಬೇರೆ ಆಗೋಕೆ ಸಾಧ್ಯ ಇದೆಯಾ..? ಅನೇಕ ಕಡೆ ಪಾಕಿಸ್ತಾನ ನಿರ್ಮಾಣ ಆಗಿದೆ, ಆಗುತ್ತಿವೆ ಎನ್ನುವ ಮೂಲಕ ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ವಿವಾದ ಸೃಷ್ಟಿಸಿದ್ದಾರೆ. ತಲಪಾಡಿ ಬಳಿಯ ಕಿನ್ಯಾದಲ್ಲಿ ನಡೆದ ಕಾರ್ಯಕ್ರಮದರಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಒಂದೇ ಮಗುವಿದ್ದಾಗ ಆ ಮಗುವಿಗೆ ಅಣ್ಣ, ತಮ್ಮ, ಅಕ್ಕ, ತಂಗಿ ಯಾರೂ ಇರಲ್ಲ. ಆ ಮಗು ಸ್ವಾರ್ಥಿಯಾಗುತ್ತದೆ. ಮನೆಯಲ್ಲಿ ಮಕ್ಕಳು ಹೆಚ್ಚಿದಷ್ಟು ಆನಂದ, ಖುಷಿ ಹೆಚ್ಚಾಗಿರುತ್ತದೆ. ಇದೀಗ ಹಿಂದೂ ಸಮಾಜದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಕಿನ್ಯಾದಲ್ಲಿ ಕೇಳಿ, ಸುತ್ತಲೂ ಯಾರಿದ್ದಾರೆ ಅಂತ.. ಪ್ರಶ್ನೆ ಮಾಡಿದ್ರು. ಅಲ್ಲದೇ ಉಳ್ಳಾಲದ ಬಗ್ಗೆ ನಾನೇನು ಹೇಳಬೇಕಾಗಿಲ್ಲ. ಅಲ್ಲಿ ಹೋದರೆ ಪಾಕಿಸ್ತಾನವನ್ನು ನೋಡಿದಂತೆ ಆಗುತ್ತದೆ. ಹಿಂದುಗಳ ಸಂಖ್ಯೆ ಕಡಿನೆಯಾದರೆ ಆಗ ನಮ್ಮ ದೇವಸ್ಥಾನವನ್ನು ಉಳಿಸುವವರು ಯಾರು..? ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸುವವರು ಯಾರು..? ಪಾಕಿಸ್ತಾನ ಯಾಕಾಯಿತು..? ನಮ್ಮವರ ಸಂಖ್ಯೆ ಕಡಿಮೆ…

Read More