Author: UllalaVani

Kannada News From Coastal Karnataka

ContentsHelp and supportEnter your text hereACCESSORIESInterview: ITV offers insights into the future of travelWhen will I get my CAS number? If you enter the UK before the start date of your 90-day temporary travel vignette using the eGates, you will enter the UK as a visitor. You will not be able to enrol onto your course as a visitor and will be required to leave the Common Travel Area and re-enter the UK after your Student visa is valid in order to ‘activate’ your Student visa. The amount of money the sponsor is giving to you or a statement that…

Read More

UN NETWORKS ಕೈರಂಗಳ : “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ’ ಚಲನ ಚಿತ್ರದ ಪ್ರಮುಖ ಕಥಾಭಾಗ ಚಿತ್ರೀಕರಣಗೊಂಡಿದ್ದ ಬಂಟ್ವಾಳ ತಾ| ಕೈರಂಗಳ ಗ್ರಾಮದ ದುಗ್ಗಜ್ಜರಕಟ್ಟೆಯ ಖಾಸಗಿ ಅನುದಾನಿತ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಆಂಗ್ಲ ಮಾಧ್ಯಮವೂ ಆರಂಭಗೊಂಡಿದೆ. ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣದ ಅಧಿಕೃತ ಉದ್ಘಾಟನೆ ಸೆ. 15ರಂದು ನಡೆಯಲಿದ್ದು, ಜತೆಗೆ ಹಳೆ ವಿದ್ಯಾರ್ಥಿಗಳ ಸಂಗಮ, ಚಿತ್ರ ನಿರ್ಮಾಪಕ ರಿಷಭ್‌ ಶೆಟ್ಟಿ ಅವರಿಗೆ ಸಮ್ಮಾನ ನಡೆಯಲಿದೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನೆಮಾದ ಯಶಸ್ಸಿನ ಬಳಿಕ ರಿಷಭ್‌ ಶೆಟ್ಟಿ ಮತ್ತು ತಂಡ ಶಾಲೆ ಅಭಿವೃದ್ಧಿಗೆ ಕೊಡುಗೆ ನೀಡುತ್ತಾ ಬಂದಿದ್ದರು. ಶಾಲೆಯ ಶಿಥಿಲ ಛಾವಣಿ ಮರು ನಿರ್ಮಾಣ, ಗೋಡೆಗಳಲ್ಲಿ ಬಣ್ಣದ ಚಿತ್ತಾರ ಮೂಡಿಸಲಾಗಿತ್ತು. ಬಳಿಕ ವಿದ್ಯಾರ್ಥಿಗಳ ಕೊರತೆ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಕನ್ನಡದೊಂದಿಗೆ ಆಂಗ್ಲ ಮಾಧ್ಯಮ ಆರಂಭಕ್ಕೆ ಪ್ರೋತ್ಸಾಹ ನೀಡಿದ್ದರು. ವಿದ್ಯೋದಯ ಪ್ರೈಮರಿ ಶಾಲೆಆಂಗ್ಲ ಮಾಧ್ಯಮ ವಿಭಾಗಕ್ಕೆ ವಿದ್ಯೋದಯ ಪ್ರೈಮರಿ ಶಾಲೆ…

Read More

UN NETWORKS ಉಳ್ಳಾಲ : ವಿಶ್ವಕ್ಕೆ ಮಾನವ ಧರ್ಮವನ್ನು ತೋರಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರ ಆದರ್ಶಗಳನ್ನು ಸ್ಮರಿಸುತ್ತಾ ಯುವಪೀಳಿಗೆಯನ್ನು ಬೆಳೆಯುವಂತೆ ಮಾಡಿದಾಗ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಗುತ್ತಿಗೆದಾರ ಶಿವಾನಂದ ಕಾಚಾರ್ ಅಭಿಪ್ರಾಯ ಪಟ್ಟರು. ಸೋಮೇಶ್ವರ ಕೊಲ್ಯದ ಬ್ರಹ್ಮಶ್ರೀ ನಾರಾಯಣಗುರು ಧ್ಯಾನ ಮಂದಿರ ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 165ನೇ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಮಾನವರು ಸಮಾನರಾಗಿ ಸಹೋದರತೆಯಿಂದ ಬಾಳುವ ಸಿದ್ದಾಂತವನ್ನು ಕಾಪಾಡಿಕೊಂಡು ಬರಬೇಕು. ಬ್ರಹ್ಮಶ್ರೀಗಳು ಸಮಾಜಕ್ಕೆ ಅದನ್ನೆ ಬೋ„ಸಿದರೂ ಸದ್ಯ ಯುವಕರ ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಯುವಕರನ್ನು ಬ್ರಹ್ಮಶ್ರೀ ಗುರುಗಳ ಆದರ್ಶಗಳನ್ನು ಪಾಲಿಸುತ್ತಾ ಸರಿದಾರಿಗೆ ತರುವ ಪ್ರಯತ್ನವನ್ನು ಮಾಡಬೇಕಿದೆ ಎಂದರು. ಪೆರ್ಮನ್ನೂರು ಸಂತ ಸೆಬಾಸ್ತಿಯನ್ನರ ಧರ್ಮಕೇಂದ್ರದ ಧರ್ಮಗುರು ಡಾ| ಜೆ.ಬಿ ಸಲ್ದಾನ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ…

Read More

UN NETWORKS ಕೊಣಾಜೆ : ಭಾರತದಲ್ಲಿ ಪಶ್ಚಿಮ ಬಂಗಾಳ ಹೊರತುಪಡಿಸಿದರೆ ಕರಾವಳಿ ಭಾಗದಲ್ಲಿ ಮಾತ್ರ ದೈವ ದೇವರ ಆರಾಧನೆ ಹೆಚ್ಚಾಗಿ ನಡೆಯುತ್ತಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾದ ಆರಾಧನೆ ಇರುವುದರಿಂದ ಕರಾವಳಿಯನ್ನು ಪ್ರತಿನಿಧಿಸುವ ಮಂಗಳೂರು ವಿಶ್ವವಿದ್ಯಾಲಯದಲ್ಲಿ ದೇವತಾ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್, ಆರ್. ಶೆಟ್ಟಿ ಅಭಿಪ್ರಾಯಪಟ್ಟರು.ಮಂಗಳಾ ಆಡಿಟೋರಿಯಂನಲ್ಲಿ ಗುರುವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ 40ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ದಕ್ಷಿಣ ಕನ್ನಡದ ಜನತೆ ಭಕ್ತಿ ಆರಾಧನೆಯಲ್ಲಿ ಹೆಚ್ಚಾಗಿ ನಂಬಿಕೆ ಇಟ್ಟವರು. ಹಾಗಾಗಿ ಮಂಗಳೂರು ವಿವಿಯಲ್ಲಿ ದೇವತಾ ಅಧ್ಯಯನ ಪೀಠ ಸ್ಥಾಪಿಸುವುದರಿಂದ ನಮ್ಮ ಸಂಸ್ಕೃತಿ, ಪರಂಪರೆ, ಸಂಪ್ರದಾಯ, ಆಚರಣೆಗಳ ಅಧ್ಯಯನ ಕೈಗೊಳ್ಳಲು ಸಾಧ್ಯ ಎಂದು ನುಡಿದರು. ಒರಿಸ್ಸಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಪತಿ ಪ್ರೊ.ಪಿ.ವಿ. ಕೃಷ್ಣ ಭಟ್ ಮಾತನಾಡಿ ಭಾರತೀಯ ಶಿಕ್ಷಣ ಕ್ರಮದಲ್ಲಿ ಬಹಳಷ್ಟು ಬದಲಾವಣೆ ಆಗಬೇಕಿದೆ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ಶ್ರೀಮಂತ ಸಾಂಪ್ರದಾಯಿಕ ಶಿಕ್ಷಣ ಕ್ರಮವನ್ನು ಯುವ…

Read More

UN NETWORKS ಕೊಣಾಜೆ : ಮಂಗಳೂರು ವಿ.ವಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ 40 ನೇ ಸಂಸ್ಥಾಪನಾ ದಿನಾಚರಣೆಗೆ ವಿಶ್ರಾಂತ ಉಪಕುಲಪತಿ ಪ್ರೊ.ಕೆ ಬೈರಪ್ಪ ಅವರನ್ನು ಆಹ್ವಾನಿಸಿರುವುದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಕೊಣಾಜೆ ಕಾರ್ಯಕ್ರಮ ನಡೆಯುವ ಮಂಗಳ ಸಭಾಂಗಣದ ಹೊರಗಡೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. 2014 ರಿಂದ ಮಂಗಳೂರು ವಿ.ವಿ ಯ ಉಪಕುಲಪತಿಗಳಾಗಿದ್ದ ಪ್ರೊ.ಕೆ ಬೈರಪ್ಪ ಅವರು ಸೋಲಾರ್ ದೀಪ ಹಗರಣ, ವಿದೇಶಿ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣ ಸಹಿತ ಹಲವು ಹಗರಣಗಳನ್ನು ನಡೆಸಿದ್ದಾರೆಂದು ಎಬಿವಿಪಿ ಆರೋಪಿಸಿತ್ತು. ಈ ಕುರಿತು ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ದೂರು ನೀಡಿದೆ. ತನಿಖೆ ನಡೆಸುವ ವಿಶ್ವಾಸವನ್ನು ರಾಜ್ಯಪಾಲರು ವ್ಯಕ್ತಪಡಿಸಿದ್ದರು. ಈ ನಡುವೆ ತನಿಖೆ ಸಂದರ್ಭದಲ್ಲೇ ಮತ್ತೆ ವಿಶ್ರಾಂತ ಉಪಕುಲಪತಿ ಪ್ರೊ.ಕೆ ಬೈರಪ್ಪ ಅವರನ್ನು ವಿ.ವಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿರುವುದು ಖಂಡನೀಯ . ಇದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿದ್ದ ಮಂಗಳ ಸಭಾಂಗಣದ ಆವರಣ ಒಳಗೆ ನುಗ್ಗಲು ಪ್ರಯತ್ನಿಸಿದರೂ, ಪೊಲೀಸರು ತಡೆದಿದ್ದಾರೆ. ಅಲ್ಲದೆ ಅತಿಥಿಯಾಗಿದ್ದ…

Read More

UN NETWORKS ಉಳ್ಳಾಲ : ನಾವು ಪ್ರಕೃತಿ ಮತ್ತು ಸಂಸ್ಕೃತಿಗೆ ಹತ್ತಿರವಾಗ ಬೇಕಿದೆ. ಪ್ರಕೃತಿಯಿಂದ ದೂರ ಸರಿದಿರುವುದೇ ಇಂದಿನ ಸಮಸ್ಯೆಗಳಿಗೆ ಕಾರಣವಾಗಿದೆ., ಘನತ್ಯಾಜ್ಯ ಮತ್ತು ಸ್ವಚ್ಚತೆಗೆ ಆದ್ಯತೆ ನೀಡುವ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಉಚ್ಚಿಲ ಬೋವಿ ಸಂಸ್ಥೆಗಳ ಶತಮಾನೋತ್ಸವ ಆಚರಣೆಯ ಸರಣಿ ಕಾರ್ಯಕ್ರಮವಾಗಿ ಜಿಲ್ಲಾಡಳಿತ, ಮಾತಾ ಅಮೃತಾನಂದಮಯಿ ಮಠ ,ಸೋಮೇಶ್ವರ ಪಟ್ಟಣ ಪಂಚಾಯತ್, ಎಂ.ಆರ್.ಪಿ.ಎಲ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸೋಮೇಶ್ವರ ಉಚ್ಚಿಲ ಹಾಗೂ ರಾಷ್ಟ್ರೀಯ ಹೆದ್ದಾರಿಯ ಪರಿಸರದಲ್ಲಿ ಬೃಹತ್ ಪ್ರಮಾಣದ ತ್ಯಾಜ್ಯ ಕಂಡುಬಂದಿರುವ ಹಿನ್ನೆಲೆಯಲ್ಲಿ ಸ್ವಚ್ಚತಾ ಕಾರ್ಯ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಡೆಂಗ್ಯೂ ಹಾಗೂ ಸ್ವಚ್ಚತೆ ಬಗ್ಗೆ ಮುದ್ರಿಸಲಾದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಮಂಗಳೂರು ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥೆ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಭಾಗವಹಿಸಿ ಆಶೀರ್ವಚನ ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ.ಎಸ್.ಯಡಪಡಿತ್ತಾಯ ಬೃಹತ್ ಸ್ವಚ್ಚತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ ಕಂಡ ಕಂಡಲ್ಲಿ ಉಗುಳುವ ಪ್ರವೃತ್ತಿ ನಿಲ್ಲಬೇಕು, ಮಾತಾ ಅಮೃತಾನಂದಮಯಿ…

Read More

UN NETWORKS ಉಳ್ಳಾಲ : ಕಳೆದ ಒಂದು ವರ್ಷದಿಂದ ಉಳ್ಳಾಲ ನಗರಸಭೆಯಲ್ಲಿ ಚುನಾಯಿತ ಆಡಳಿತ ಬರದೆ ಕೆಲವೇ ಸ್ಥಾಪಿತ ಹಿತಾಸಕ್ತಿಗಳ ಅಣತಿಯಂತೆ ಉಳ್ಳಾಲದ ಆಡಳಿತ ನಡೆಯುತ್ತಿದ್ದು ಅಭಿವೃದ್ಧಿ ಕಾರ್ಯ ಕುಂಠಿತಗೊಂಡು ಉಳ್ಳಾಲದಲ್ಲಿ ಸಂವಿಧಾನಕ್ಕೂ ಬೆಲೆಯಿಲ್ಲ ಜನಪ್ರತಿನಿಧಿಗಳಿಗೂ ಬೆಲೆಯಿಲ್ಲದಂತಾಗಿದೆ ಉಳ್ಳಾಲದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮತ್ತು ಉಳ್ಳಾಲ ನಗರಸಭಾ ಅನ್ಯಾಯದ ವಿರುದ್ಧ ಬೃಹತ್ ಪ್ರತಿಭಟನಾ ಸಭೆಯನ್ನು ಸೆ. 11ರ ಬುಧವಾರ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಂಡಿದ್ದು ಪ್ರತಿಭಟನೆಯಲ್ಲಿ ಪಕ್ಷ ಬೇಧ ಮರೆತು ಎಲ್ಲಾ ಸಂಘಟನೆಗಳು ಸಂಘ ಸಂಸ್ಥೆಗಳು ಒಟ್ಟು ಸೇರಿ ನಾಗರಿಕ ಹಿತರಕ್ಷಣಾ ಸಮಿತಿ ರಚಿಸಿ ಹೋರಾಟ ನಡೆಸಲಿದ್ದಾರೆ ಎಂದು ಸಮಿತಿ ಕಾರ್ಯದರ್ಶಿ ಝಾಕಿರ್ ಉಳ್ಳಾಲ್ ತಿಳಿಸಿದರು. ತೊಕ್ಕೊಟ್ಟಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉಳ್ಳಾಲ ಪಂಚಾಯತ್, ಪುರಸಭೆ, ನಗರಪಂಚಾಯತ್ ಆಗಿ ಇದೀಗ ನಗರಸಭೆಯಾಗಿ ಮೇಲ್ದರ್ಜೆಗೇರಿದರೂ ಪರಿವರ್ತನೆ ಹೆಸರಿಗೆ ಮಾತ್ರ ಸೀಮಿತವಾಗಿದ್ದು, ನಗರಸಭೆಯಲ್ಲಿ ಸಿಗುವ ಮೂಲಭೂತ ಸೌಕರ್ಯಗಳಾದ ದಾರಿದೀಪ, ಒಳಚರಂಡಿ, ಶುದ್ಧ ಕುಡಿಯುವ ನೀರು, ರಸ್ತೆ,…

Read More

UN NETWORKS ಕೊಣಾಜೆ : ಹರೇಕಳ ಗ್ರಾಮದ ಮಲಾರ್ ಮುಹಿಯ್ಯದ್ದೀನ್ ಜುಮಾ ಮಸೀದಿ, ನೂರುಲ್ ಇಸ್ಲಾಂ ಮದರಸದ ಹಳೆ ವಿದ್ಯಾರ್ಥಿ ಸಂಘ ಮತ್ತು ಎಂಇಎಸ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಲಾರ್ ಜಮಾಅತಿನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ 2019ನೇ ಸಾಲಿನ ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೊಹಮ್ಮದ್ ಸಂಶೀರ್ ಹಾಗೂ ದೇರಳಕಟ್ಟೆ ರೇಂಜ್ ಎಸ್‍ಕೆಎಸ್‍ಬಿವಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಎನ್.ಐ.ಎಂ.ವಿದ್ಯಾರ್ಥಿ ಹೈದರ್ ಅಲಿ ಹುಸೈನ್ ಇವರನ್ನು ನೂರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಮಸೀದಿಯ ಅಧ್ಯಕ್ಷ ಎಸ್.ಎಂ.ಆಸೀಫ್ ಇಕ್ಬಾಲ್ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಉಸ್ತಾದ್ ಮುಹಮ್ಮದ್ ಹನೀಫ್ ಫೈಝಿ, ಉಪಾಧ್ಯಕ್ಷ ಮೊಹಮ್ಮದ್ ಮುಸ್ತಫಾ ಮಲಾರ್, ಮುಅಲ್ಲಿಂ ಉಸ್ತಾದ್ ಅಬ್ದುಲ್ ಹಕೀಮ್, ಸ್ಥಳೀಯ ಉಸ್ತಾದ್ ಹೈದರ್ ಹಿಮಮಿ, ಮಾಜಿ ಅಧ್ಯಕ್ಷ ಮೊಹಮ್ಮದ್ ಮಾಸ್ಟರ್, ಮಾಜಿ ಕಾರ್ಯದರ್ಶಿ ಮಜೀದ್ ಮಾಸ್ಟರ್ ಮುಖ್ಯ ಅತಿಥಿಗಳಾಗಿದ್ದರು. ಝಾಹಿದ್ ಮಲಾರ್ ಸನ್ಮಾನಿತರನ್ನು ಪರಿಚಯಿಸಿದರು. ನಿಯಾಫ್ ಮಲಾರ್ ವಂದಿಸಿದರು. ಸದರ್ ಮುಅಲ್ಲಿಂ ಇರ್ಫಾನ್ ಮೌಲಾವಿ ಕಲಾಯಿ ಕಾರ್ಯಕ್ರಮ ನಿರೂಪಿಸಿದರು.

Read More

UN NETWORKS ಸರ್ವರಿಗೂ ಪ್ರೀತಿಗೆ ಪಾತ್ರವಾಗಿರುವ ಕ್ಷೇತ್ರದ ಮೂಲಕ ಪ್ರದೇಶದಲ್ಲಿ ಸೌಹಾರ್ದತೆ ನೆಲೆಸಲು ಸಾಧ್ಯವಾಗಿದೆ, ಮುಂದಿನ ದಿನಗಳಲ್ಲಿ ಗ್ರಾಮ ಅತ್ಯಂತ ಅಭಿವೃದ್ಧಿ ಹೊಂದಿದ ಪ್ರದೇಶವಾಗಲಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು. ಹತ್ತು ಲಕ್ಷ ಅನುದಾನದಲ್ಲಿ ಅಂಬ್ಲಮೊಗರು ಗ್ರಾಮದ ಎಲಿಯಾರ್ ಹೋಲಿ ಕ್ರಾಸ್ ಚರ್ಚ್ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಭಾನುವಾರ ಶಿಲಾನ್ಯಾಸಗೈದು ಮಾತನಾಡಿದರು. ಯಾವುದೇ ಗ್ರಾಮದ ಅಭಿವೃದ್ಧಿ ಜನಪ್ರತಿನಿಧಿಗಳ ಜವಾಬ್ದಾರಿ, ಶೀಘ್ರ ಅಡ್ಯಾರ್ ಸೇತುವೆ ನಿರ್ಮಾಣವಾಗಲಿದ್ದು ನಗರಕ್ಕೆ ಹತ್ತಿರವಾಗಲಿದೆ. ಉಳ್ಳಾಲ ತಾಲೂಕು ಆಗಿ ಘೋಷಣೆ ಆಗಿರುವುದರಿಂದ ಎಲ್ಲಾ ಇಲಾಖೆಗಳು ಬರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದರು. ಎಲಿಯಾರ್ ಹೋಲಿ ಕ್ರಾಸ್ ಚರ್ಚ್ ನ ಧರ್ಮಗುರು ಗಿಲ್ಬರ್ಟ್ ಡಿಸೋಜ ಅಧ್ಯಕ್ಷ ವಹಿಸಿದ್ದರು. ಅಂಬ್ಲಮೊಗರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ರಫೀಕ್, ಉಪಾಧ್ಯಕ್ಷೆ ಯಶೋಧ, ಸದಸ್ಯರಾದ ಮನೋಹರ್ ಪೂಜಾರಿ, ಜ್ಯೋತಿ ಪಾಯಸ್, ತಾಲೂಕು ಪಂಚಾಯಿತಿ ಸದಸ್ಯೆ ಶಶಿಪ್ರಭಾ ಶೆಟ್ಟಿ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಓಝ್ವಲ್ಡ್ ರೋಸ್ ಇನ್ನಿತರರು ಉಪಸ್ಥಿತರಿದ್ದರು. `ಕ್ಷೇತ್ರದ ಎಲ್ಲಾ ಚರ್ಚ್…

Read More

UN NETWORKS ಉಳ್ಳಾಲ : ಮಂಗಳೂರು ಕ್ಷೇತ್ರದಲ್ಲಿ ಭರಪೂರ ಅಭಿವೃದ್ಧಿ ಆಗಿದ್ದು ಕ್ಷೇತ್ರ ವ್ಯಾಪಿ ಚತುಷ್ಪಥ ರಸ್ತೆಯಿಂದ ಗ್ರಾಮೀಣ ಭಾಗವೂ ಈಗ ನಗರಕ್ಕೆ ಸಮನಾಗಿ ಅಲ್ಲದಿದ್ದರೂ ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ಧಿ ಕಾಣಲಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಮಂಗಳೂರು ವಿಧಾನ ಸಭಾ ಕ್ಷೇತ್ರದ ನರಿಂಗಾನ ಗ್ರಾಮ ಪಂಚಾಯಿತಿ ಕಚೇರಿ, ತೌಡುಗೋಳಿ ಕ್ರಾಸ್‍ನಿಂದ ಮುಡಿಪು ಜಂಕ್ಷನ್‍ತನಕ ನಡೆಯುವ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು.ಮಂಗಳೂರು ಕ್ಷೇತ್ರದಲ್ಲಿ ಈಗಾಗಲೇ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿದೆ. ಜನಸಾಮಾನ್ಯರಿಗೆ ಉತ್ತಮ ರಸ್ತೆ ವ್ಯವಸ್ಥೆ ಮಾಡಿಕೊಡುವುದು ನನ್ನ ಪ್ರಮುಖ ಗುರಿ. ಅದರಲ್ಲಿ ತೊಕ್ಕೊಟ್ಟು ಜಂಕ್ಷನ್‍ನಿಂದ ನಾಟೆಕಲ್ ಜಂಕ್ಷನ್ ತನಕ ಚತುಷ್ಪಥ ರಸ್ತೆಗೆ ಕೇಂದ್ರದ ಎನ್ ಎಚ್‍ನವರಲ್ಲಿ ಕೇಳಿಕೊಂಡಾಗ ಸಹಕಾರ ಸಿಗಲಿಲ್ಲ. ನನ್ನ ಕ್ಷೇತ್ರದಲ್ಲಿ ಸದ್ಯ 30ಕೋಟಿ ರೂ. ಗಳ ಯೋಜನೆ ಹಾಕಿಕೊಂಡಿದ್ದು ಅದರಲ್ಲಿ ದೇರಳಕಟ್ಟೆ ಜಂಕ್ಷನ್‍ನಿಂದ ಕುತ್ತಾರು ಜಂಕ್ಷನ್ ತನಕ ಈಗಾಗಲೇ 12ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಆಗಿದೆ. ಕುತ್ತಾರು ಜಂಕ್ಷನ್‍ನಿಂದ…

Read More