Author: UllalaVani

Kannada News From Coastal Karnataka

ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದ ಏಳು ಗ್ರಾಮ ಪಂಚಾಯಿತಿಗಳ ಏಳು ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಿನ್ಯ ಗ್ರಾಮ ಪಂಚಾಯತ್ 2 ನೇ ವಾರ್ಡ್‌ನಲ್ಲಿ ಬಾಗಿ, ತಲಪಾಡಿ ಗ್ರಾಮ ಪಂಚಾಯತ್‌ನ 5 ನೇ ವಾರ್ಡ್‌ನಲ್ಲಿ ಗೀತಾನಾಯ್ಕ್, ಮುನ್ನೂರು ಗ್ರಾಮ ಪಂಚಾಯತ್ನ 6ನೇ ವಾರ್ಡ್‌ನಲ್ಲಿ ಪುಷ್ಪ, ಬೆಳ್ಮ ಪಂಚಾಯತ್‌ನ 1ನೇ ವಾರ್ಡ್‌ನಲ್ಲಿ ಸುಂದರಿ, ಪಜೀರ್ ಪಂಚಾಯತ್ನ 2ನೇ ವಾರ್ಡ್‌ನಲ್ಲಿ ವಸಂತಿ, ತುಂಬೆ ಪಂಚಾಯತ್‌ನ 1ನೇ ವಾರ್ಡ್‌ನಲ್ಲಿ ಜಯಂತಿ ಕೇಶವ, ಮೇರಮಜಲ್ ಪಂಚಾಯತ್‌ನ 1ನೇ ವಾರ್ಡ್‌ನಲ್ಲಿ ವಿಮಲನಾಯಕ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ

Read More

UN networks ಉಳ್ಳಾಲ:ಸರ್ವೀಸ್ ಬಸ್ಸಿನ ಮೂಲಕ ಮದುವೆಗೆ ತೆರಳುತ್ತಿದ್ದ ಮದುವೆ ಬಸ್ಸನ್ನು ಟೂರಿಸ್ಟ್ ವಾಹನ ಚಾಲಕ‌ಮಾಲೀಕರು ತಡೆ ಹಿಡಿದು ನಿಲ್ಲಿಸಿದ ಘಟನೆ ಸೋಮವಾರದಂದು ತೊಕ್ಕೊಟು ಜಂಕ್ಷನ್ ನಲ್ಲಿ‌ ನಡೆದಿದೆ. ಲಾಕ್ ಡೌನ್ ನಿಂದಾಗಿ ಈಗಾಗಲೇ ಅಪಾರವಾದ ಸಂಕಷ್ಟವನ್ನು ಟೂರಿಸ್ಟ್ ಬಾಲಕರು ಅನುಭವಿಸುತ್ತಿದ್ದು ಈ ಮಧ್ಯೆ ಅಲ್ಲೋಇಲ್ಲೊ ಸಿಗುವ ಮದುವೆ ಟ್ರಿಪಿಗೂ ಸರ್ವೀಸ್ ಬಸ್ಸಿನವರು ಅಡ್ಡಿಪಡಿಸುತ್ತಿದ್ದಾರೆ.‌ ಹೀಗಾದರೆ ನಾವು ಬದುಕುವುದಾದರೂ ಹೇಗೆ ಎಂಬ ಆಕ್ರೋಶವನ್ನು ಟೂರಿಸ್ಟ್ ವಾಹನ ಚಾಲಕ‌ಮಾಲೀಕರು ವ್ಯಕ್ತಪಡಿಸಿದ್ದಾರೆ. ಸ್ಧಳಕ್ಕೆ ಸಂಚಾರಿ ಹಾಗೂ ಉಳ್ಳಾಲ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದಾರೆ.

Read More

UN networks ಉಳ್ಳಾಲ: ಕುಂಪಲ ಬೈಪಾಸ್ ಬಳಿ ಶುಕ್ರವಾರ ಸಂಜೆ ಕಾರು ಅಪಘಾತಕ್ಕೀಡಾಗಿ ರಸ್ತೆ ದಾಟುತ್ತಿದ್ದ ಕುಂಪಲ ಬೈಪಾಸ್ ನಿವಾಸಿ ಅಯಾನ್ (16) ಇಂದು ನಸುಕಿನ ಜಾವ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮನೆ ಎದುರುಗಡೆಯ ರಾ.ಹೆ.66 ನ್ನು ಒಂದೊಮ್ಮೆ ದಾಟಿದ್ದ ಬಾಲಕ ಮತ್ತೊಮ್ಮೆ ದಾಟಲು ಯತ್ನಿಸುವಾಗಲೇ ಅಪಘಾತ ನಡೆದು ವಿಧಿಯ ಕ್ರೂರ ಲೀಲೆಗೆ ಬಲಿಯಾಗಿದ್ದಾನೆ. ಬಶೀರ್ ಅಹ್ಮದ್ ,ರಿಯಾನ ದಂಪತಿ ಪುತ್ರನಾಗಿರುವ ಅಯಾನ್, ಜೆಪ್ಪು ಪ್ರೆಸ್ಟೀಜ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ . ಇನ್ನೋರ್ವ ಪುತ್ರಿ ಹೈಸ್ಕೂಲ್ ವಿದ್ಯಾರ್ಥಿನಿಯಾಗಿದ್ದಾಳೆ. ಸಂಜೆ ವೇಳೆ ಮನೆ ಎದುರುಗಡೆಯ ಅಂಗಡಿಗೆ ತೆರಳಿದ್ದ ರಿಯಾನ್ ಹೆದ್ದಾರಿಯನ್ನು ದಾಟಿ ಸಾಮಾಗ್ರಿಗಳೊಂದಿಗೆ ರಸ್ತೆ ದಾಟಿದ್ದರೂ, ಮತ್ತೆ ಏನನ್ನೋ ಮರೆತು ವಾಪಸ್ಸು ರಸ್ತೆ ದಾಟಲು ಯತ್ನಿಸಿದ್ದ ಸಂದರ್ಭ ಬೀರಿ ಕಡೆಯಿಂದ ಮಂಗಳೂರಿನತ್ತ ಧಾವಿಸುತ್ತಿದ್ದ ನಾಲ್ವರು ಯುವಕರಿದ್ದ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಅಯಾನ್ ರಸ್ತೆಗೆಸೆಯಲ್ಪಟ್ಟು ತಲೆ, ಕಾಲು ಮತ್ತು ಕೈಗಳಿಗೆ ಗಂಭೀರ ಗಾಯವಾಗಿತ್ತು. ನಿಯಂತ್ರಣ…

Read More

ಉಳ್ಳಾಲ: ವಿಶೇಷ ಚೇತನರಿಗೆ ಸರಕಾರಿ ಸವಲತ್ತುಗಳಲ್ಲಿ ಈ ಬಾರಿಯಿಂದ ಶೇ.3 ರಿಂದ ಶೇ.5 ಕ್ಕೆ ಹೆಚ್ಚುವರಿಗೊಳಿಸಲಾಗಿದೆ. ಗ್ರಾ.ಪಂ ಮಟ್ಟದಿಂದಲೇ ಮೀಸಲಾತಿಗಳನ್ನು ಸರಕಾರಿ ಆದೇಶದಂತೆ ಪ್ರಕಟಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್ ಸೆಲ್ವಮಣಿ ಅಭಿಪ್ರಾಯಪಟ್ಟರು. ದೇರಳಕಟ್ಟೆ ಎ.ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಮಕ್ಕಳ ವಿಭಾಗ ಮತ್ತು ಪ್ರಿವೆಂಟಿವ್ ಡೆಂಟಿಸ್ಟ್ರಿ ವಿಭಾಗಗಳ ಆಶ್ರಯದಲ್ಲಿ ನ್ಯೂ ಆಡಿಟೋರಿಯಂನಲ್ಲಿ ಶುಕ್ರವಾರ ನಡೆದ ವಿಶ್ವ ವಿಶೇಷ ಚೇತನರ ದಿನ ಮತ್ತು N-SPECC COVID SAFE PROJECT ಇದರ ಯಶಸ್ವಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ನಿಟ್ಟೆ ಸ್ಪೆಷಲ್ ಚೈಲ್ಡ್ ಕೇರ್ ಸೆಂಟರ್‌( N-SPECC) ಕೊರೊನಾ ಸಂದರ್ಭ ವಿಶೇಷ ಚೇತನ ಮಕ್ಕಳಿಗೆ ಹಮ್ಮಿಕೊಂಡಿರುವ ಕಾರ್ಯ ಗೌರವಿಸುವಂತದ್ದು. ಈ ಕುರಿತು ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇನೆ ಎಂದ ಅವರು ಶಿಕ್ಷಣ ಇಲಾಖೆ ಹಾಗೂ ಜಿ.ಪಂಗೆ ಇದೊಂದು ಉತ್ತಮ ಕಾರ್ಯಕ್ರಮವಾಗಿದೆ.ವಿಶೇಷ ಚೇತನ ಮಕ್ಕಳು ಹುಟ್ಟದಂತೆ ಜೀಡಿಯಾಟ್ರಿಕ್ ಕೇರ್ ಕುರಿತ ಜಾಗೃತಿ ಹೆತ್ತವರಲ್ಲಿ ಮೂಡಿಸಬೇಕಿದೆ. ಈ ಕುರಿತು ವಿಶೇಷ…

Read More

UN networks ಉಳ್ಳಾಲ:ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ ಹೊಡೆದ ಘಟನೆ ರಾ.ಹೆ66 ರ ಕುಂಪಲ ಬೈಪಾಸ್ ಬಳಿ ಶುಕ್ರವಾರ ನಡೆದಿದೆ. ಐಯಾನ್ (16) ಬಾಲಕ ಗಂಭೀರ ಗಾಯಗೊಂಡ ಬಾಲಕ ಬಾಲಕ ಅಂಗಡಿಗೆ ತೆರಳಿ ವಾಪಸ್ಸಾಗುವಾಗ ವೇಳೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಮೊದಲು ಬಾಲಕನಿಗೆ ಡಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಬಾಲಕನ ಮನೆ ಎದುರುಗಡೆಯೇ ಅಪಘಾತ ನಡೆದಿದ್ದು ಗಂಭೀರ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

UN networks ಬೆಂಗಳೂರು: ಜನವರಿ ತಿಂಗಳಲ್ಲಿ ನೈಟ್ ಕಫ್ಯೂ೯ ಜಾರಿಗೊಳಿಸುವಂತಹ ಯಾವುದೇ ಯೋಚನೆ ಸರಕಾರದ ಮುಂದೆ ಇಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಜನವರಿ ತಿಂಗಳಲ್ಲಿ ಕೋವಿಡ್‌ ಎರಡನೇ ಅಲೆಕೋವಿಡ್‌ ನಿಯಂತ್ರಣದ ನಿಟ್ಟಿನಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುತ್ತದೆ ಎಂಬ ಸುದ್ದಿ ಹರಡಿತ್ತು ಈ ಸಂಬಂಧ ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು ಇಂತಹ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದಿದ್ದಾರೆ. ಕೋವಿಡ್‌ ಎರಡಲೇ ಅಲೆ ಜನವರಿ ತಿಂಗಳಲ್ಲಿ ಬರುವ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ಏನೆಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ವರದಿಯನ್ನು ಕೋವಿಡ್‌ ತಾಂತ್ರಿಕ ಸಮಿತಿ ನೀಡಿತ್ತು. ಕೆಲವೊಂದು ಶಿಫಾರಸುಗಳನ್ನು ಸಮಿತಿ ಸರ್ಕಾರಕ್ಕೆ ಸಲ್ಲಿಸಿತ್ತು. ಈ ಸುದ್ದಿಯನ್ನು ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ನಿರಾಕರಣೆ ಮಾಡಿದ್ದರು. ನೈಟ್ ಕರ್ಫ್ಯೂ ಇಲ್ಲದಿದ್ದರೂ ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಕೆಲವೊಂದು ನಿರ್ಬಂಧಗಳನ್ನು ಹೇರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಅಧಿಕೃತ ನಿರ್ಧಾರ ಕೈಗೊಳ್ಳದೆ ಇದ್ದರೂ ಪರಿಶೀಲನೆ ನಡೆಸಿ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ…

Read More

ಉಳ್ಳಾಲ: ಸೋಮೇಶ್ವರ ಗ್ರಾಮದ ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ತುಳು ಭಜನಾ ಸ್ಪರ್ಧೆ ತಂಬೂರಿ-2020 ಡಿ.‌ 6 ಹಾಗೂ 13ರಂದು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು. ಗುರುವಾರ ತೊಕ್ಕೊಟ್ಟಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಪರ್ಧೆಯು ಪುರುಷರು, ಮಹಿಳೆಯರು, ಬಾಲಕರು ಹಾಗೂ ಬಾಲಕಿಯರು ಸೇರಿದಂತೆ ಮೂರು ವಿಭಾಗಗಳಲ್ಲಿನಡೆಯಲಿದ್ದು ಪುರುಷರ ವಿಭಾಗದ ಸ್ಪರ್ಧೆಯು ಡಿ. 6ಕ್ಕೆ ನಡೆಯಲಿದ್ದು, ಮಹಿಳೆಯರು, ಬಾಲಕರು ಹಾಗೂಬಾಲಕಿಯರ ವಿಭಾಗದ ಸ್ಪರ್ಧೆಯು ಡಿ. 13ರಂದು ನಡೆಯಲಿದೆ ಎಂದರು.ಮೂರು ವಿಭಾಗಗಳಿಗೂ ಪ್ರಶಸ್ತಿ ವಿತರಣೆ ಸಮಾರಂಭಡಿ. 13ರಂದು ಸಂಜೆ 6.00ಕ್ಕೆ ನಡೆಯಲಿದ್ದುಪ್ರತಿ ತಂಡಕ್ಕೂ 20ನಿಮಿಷ ಕಾಲಾವಧಿ ವಿಧಿಸಲಾಗಿದೆ.ಮೂರೂ ವಿಭಾಗಕ್ಕೂ ಪ್ರಥಮ, ದ್ವಿತೀಯ,ತೃತೀಯ ನಗದು ಹಾಗೂ ಫಲಕ, ಪ್ರಶಸ್ತಿ ಪತ್ರ ಸೇರಿದಂತೆ ಭಾಗವಹಿಸಿದ ಎಲ್ಲ ತಂಡಗಳಿಗೂಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು. ವೈಯಕ್ತಿಕವಾಗಿ ಹಾರ್ಮೋನಿಯಂ ವಾದಕ, ತಬಲಾ ವಾದಕ ಹಾಗೂ…

Read More

UN networks ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಲಪಾಡಿ ಟೋಲ್‌ಗೇಟ್ ಆರಂಭದಿಂದಲೂ ಸಮಸ್ಯೆಯತಾಣವಾಗಿದ್ದು ಸಮಸ್ಯೆಯ ಪರಿಹಾರಕ್ಕೆ ವಿವಿಧ ಸಂಘಟನೆಗಳಿಂದ ಅನೇಕ‌ ಬಾರಿ ಪ್ರತಿಭಟನೆನಡೆಸಿದ್ದು ಟೋಲ್‌ಗೇಟ್ ಗುತ್ತಿಗೆದಾರರು ಆ ಬಗ್ಗೆ ನಿರ್ಲಕ್ಷಿಸುತ್ತಿದ್ದು ಆ ಕಾರಣದಿಂದ ಕಾರ್ಮಿಕ ಸಂಘಟನೆ ಇಂಟೆಕ್ ನಿಂದ ಡಿ. 12ರಂದು ಪ್ರತಿಭಟನೆ ನಡೆಯಲಿದೆ ಎಂದು ಯೂತ್ ಇಂಟೆಕ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೇಳಿದರು. ತೊಕ್ಕೊಟ್ಟಿನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋರ್ಟ್ಆದೇಶದ ಪ್ರಕಾರ ಪ್ರತಿಯೊಂದು ಟೋಲ್‌ಗೇಟ್ ಸ್ಥಳದಿಂದ 3 ಕಿ.ಮೀ. ತನಕ ಸ್ಥಳೀಯವಾಗಿ ವಾಸಿಸುವಚೀಟಿ ಪರಿಶೀಲಿಸುವುದರೊಂದಿಗೆಜನರ ವಾಹನಕ್ಕೆ ಉಚಿತವಾಗಿ ಪಾಸ್ಕಳುಹಿಸತಕ್ಕದ್ದು. ಆದರೆ ತಲಪಾಡಿ ಟೋಲ್‌ಗೇಟ್ ನಲ್ಲಿ ತಲಪಾಡಿ ಪಂಚಾಯಿತಿಗೆ ಉಚಿತವಾಗಿ ಸೇವೆನೀಡುತ್ತಿದ್ದು ಈ ಸೇವೆಯನ್ನು 3 ಕಿ.ಮೀ. ಒಳಗಿನವರಿಗೆ ನೀಡತಕ್ಕದ್ದು ಎಂದು‌ ಹೇಳಿದರು.ಟೋಲ್ ಗೇಟ್ ಗುತ್ತಿಗೆದಾರರು ವಾಹನ ಚಾಲಕರಿಂದ 24ತಾಸಿನೊಳಗೆ ದುಪ್ಪಟ್ಟು ಹಣಪಡೆಯುತ್ತಿದ್ದು, ಯಾವುದೇ ವ್ಯಕ್ತಿ ಕಾರು ಬಳಸಿ ಹೋಗುವುದು ಹಾಗೂ ಹಿಂದೆ ಬರುವಾಗ ತಲಾ 40ರೂ. ಗಳಂತೆ80ರೂ. ನೀಡಬೇಕಾಗುತ್ತದೆ. ಆದರೆಈಗ ಈ ಟೋಲ್‌ಗೇಟ್…

Read More

UN netowrks ಉಳ್ಳಾಲ: ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೃತದೇಹ ಮುಳುಗುತಜ್ಞರು ಮೇಲಕ್ಕೆತ್ತಿ ದ್ದಾರೆ. ಬೊಕ್ಕಪಟ್ನ ನಿವಾಸಿಗಳಾದಪಾಂಡುರಂಗ ಸುವರ್ಣ, ಪ್ರೀತಂ ಮೃತದೇಹ ಪತ್ತೆಯಾಗಿದೆ. ಇನ್ನು ನಾಪತ್ತೆಯಾದ ನಾಲ್ಕು ಜನರಿಗಾಗಿ ತೀವ್ರ ಶೋಧ ಕಾರ್ಯ ನಡಯುತ್ತಿದೆ. ಸೋಮವಾರ ನಸುಕಿನ ಜಾವ 5 ರ ವೇಳೆಗೆ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ 22 ಮಂದಿಯಿದ್ದ ಬೋಟ್ ತೆರಳಿತ್ತು. ಬೆಳಿಗ್ಗಿನಿಂದ ಸಂಜೆಯವರೆಗೆ ಮೀನುಗಾರಿಕೆ ನಡೆಸಿ, ಇಂದು ಮುಂಜಾನೆ ವಾಪಸ್ಸು ಧಕ್ಕೆ ತಲುಪುವುದಿತ್ತು. ಆದರೆ ಮೀನಿನ ಭಾರ ಅಧಿಕವಾಗಿದ್ದು, ಭಾರೀ ಗಾಳಿ ಬೀಸಿದಾಗ ಒಮ್ಮಿಂದೊಮ್ಮೆಲೇ ದೋಣಿ ಮಗುಚಿ ಬಿದ್ದು 14 ಮಂದಿಯನ್ನು ರಕ್ಷಿಸಲಾಗಿದೆ.

Read More

ಉಳ್ಳಾಲ:ಉಳ್ಳಾಲದಲ್ಲಿ ಸೋಮವಾರರಸ್ತೆ ದಾಟುತ್ತಿದ್ದ ಮಗುವಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃಷ್ಣ(೮) ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು ಆತನ ಸ್ಥಿತಿ ಚಿಂತಾಜನಕವಾಗಿದ್ದು ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ.

Read More