UN NETWORKS
ಮುಡಿಪು : ಜೋಗಿ ಸಮಾಜ ಸಂಘ ಮುಡಿಪು ವಲಯ, ಇದರ ಉದ್ಘಾಟನೆಯನ್ನು ವಿಟ್ಲ ಯೋಗೇಶ್ವರ (ಜೋಗಿ) ಮಠಾಧೀಶರಾದ ರಾಜಯೋಗಿ ಸರ್ದಾನಾಥಜೀಯವರು ಇತ್ತೀಚೆಗೆ ಮುಡಿಪು ಆಡಿಟೋರಿಯಂನಲ್ಲಿ ನೆರವೇರಿಸಿ ಆಶೀರ್ವಚನವಿತ್ತರು.

ಸಮಾಜವು ಸಂಘಟಿತವಾಗಿ ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣ ಹೊಂದಬೇಕು ಎಂದು ಅಭಿಪ್ರಾಯಪಟ್ಟರು. ಸಂಘದ ನೂತನ ಅಧ್ಯಕ್ಷರಾಗಿ ಸತೀಶ್ ಕುಮಾರ್ ಬದಿಯಾರ್, ಉಪಾಧ್ಯಕ್ಷರಾಗಿ ಭುಜಂಗ ಕಣಂತೂರು, ಕಾರ್ಯದರ್ಶಿಯಾಗಿ ಜನಾರ್ದನ ಪುರುಷ, ಉಪ ಕಾರ್ಯದರ್ಶಿಗಳಾಗಿ ಭಾಸ್ಕರ ಕೊಪ್ಪಲ ಮತ್ತು ತೀರ್ಥನಾಥ್ ಜೋಗಿ, ಸಂಘಟನಾ ಕಾರ್ಯದರ್ಶಿಯಾಗಿ ಹರೀಶ್ ಕೂಟತ್ತಜೆ, ಕೋಶಾ„ಕಾರಿಯಾಗಿ ಜನಾರ್ದನ ಕಂಬಳಪದವು ಆಯ್ಕೆಯಾದರು. ರುಕ್ಮಯ ಜೋಗಿ ಇವರನ್ನು ಗೌರವ ಅಧ್ಯಕ್ಷರಾಗಿ ಹಾಗೂ ಸಂಜೀವ ಜೋಗಿ ಕೂಟತ್ತಜೆ ಇವರನ್ನು ಮಾರ್ಗದರ್ಶಕರನ್ನಾಗಿ ನೇಮಿಸಲಾಯಿತು.
ಅಧ್ಯಕ್ಷತೆಯನ್ನು ಸತೀಶ್ ಕುಮಾರ್ ಬದಿಯಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಕೋಶಾಧಿಕಾರಿ ಹೆಚ್ ಕೆ. ಪುರುಷೋತ್ತಮ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹರಿನಾಥ್ ಜೋಗಿ, ಪುತ್ತೂರು ಜೋಗಿ ಸಮಾಜ ಸಂಘದ ಅಧ್ಯಕ್ಷ ಮೋನಪ್ಪ ಪುರುಷ ಮತ್ತು ವಿಟ್ಲ ಜೋಗಿ ಸಮಾಜ ಸಂಘದ ಅಧ್ಯಕ್ಷ ನಾಗೇಶ್ ಜೋಗಿ ಪಾಲ್ಗೊಂಡಿದ್ದರು. ಸಮಾಜದ ಹಿರಿಯರಾದ ಗೋಪಾಲ್ ಜೋಗಿ, ಪದ್ಮನಾಭ ಜೋಗಿ, ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಉಪಾಧ್ಯಕ್ಷ ಡಾ| ಪಿ. ಕೇಶವನಾಥ್, ಕಾರ್ಯದರ್ಶಿ ಗಂಗಾಧರ್. ಬಿ, ಸತೀಶ್ ಮಾಲೆಮಾರ್ ವೇದಿಕೆಯಲ್ಲಿದ್ದರು.

ಅನಿತ್ರಷಾ ಬಿ ಪ್ರಾರ್ಥನೆಗೈದರು. ದೀಕ್ಷಿತ್ ಜೋಗಿ ಕಾರ್ಯಕ್ರಮ ನಿರೂಪಿಸಿದರು. ಆನಂದ ಜೋಗಿ ಧನ್ಯವಾದವಿತ್ತರು.


