Author: UllalaVani

Kannada News From Coastal Karnataka

ಉಳ್ಳಾಲ : ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಪರ್ಷಿಯನ್ ಬೋಟ್ ಮಗುಚಿ ಆರು ಮಂದಿ ನಾಪತ್ತೆಯಾಗಿರುವ ಘಟನೆ ಉಳ್ಳಾಲ ಸಮುದ್ರತೀರದಿಂದ ಹಲವು ನಾಟಿಕಲ್ ಮೈಲ್ ದೂರದಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ. ಘಟನೆಯಲ್ಲಿ 16 ಮಂದಿ ಮೀನುಗಾರರು ಡೆಂಗೀ( ಸಣ್ಣ ದೋಣಿ) ಮೂಲಕ ರಕ್ಷಣೆಗೆ ಒಳಗಾಗಿದ್ದಾರೆ.ಬೋಳಾರದ ಉದ್ಯಮಿಯೋರ್ವರಿಗೆ ಸೇರಿದ ಶ್ರೀರಕ್ಷಾ ಬೋಟ್ ದುರಂತಕ್ಕೀಡಾಗಿದೆ. ಸೋಮವಾರ ನಸುಕಿನ ಜಾವ 5 ರ ವೇಳೆಗೆ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ 22 ಮಂದಿಯಿದ್ದ ಬೋಟ್ ತೆರಳಿತ್ತು. ಬೆಳಿಗ್ಗಿನಿಂದ ಸಂಜೆಯವರೆಗೆ ಮೀನುಗಾರಿಕೆ ನಡೆಸಿ, ಇಂದು ಮುಂಜಾನೆ ವಾಪಸ್ಸು ಧಕ್ಕೆ ತಲುಪುವುದಿತ್ತು. ಆದರೆ ಸಮಯ ಕಳೆದರೂ ಬೋಟ್ ವಾಪಸ್ಸಾಗದ ಹಿನ್ನೆಲೆಯಲ್ಲಿ ಬೋಟ್ ಮಾಲೀಕರು ವಯರ್ ಲೆಸ್ ಮೂಲಕ ದೋಣಿಯಲ್ಲಿದ್ದವರನ್ನು ಸಂಪರ್ಕಿಸಲು ಯತ್ನಿಸಿದಾಗ ಅಸಾಧ್ಯವಾಗಿತ್ತು. ಇದರಿಂದ ಸಂಶಯಗೊಂಡು ಉಳಿದ ಮೀನುಗಾರಿಕಾ ಬೋಟ್ ನವರನ್ನು ಸಂಪರ್ಕಿಸಿ ಬೋಟ್ ನ್ನು ಹುಡುಕುವಂತೆ ತಿಳಿಸಿದ್ದಾರೆ. ಅದರಂತೆ ಇತರೆ ಮೀನುಗಾರಿಕಾ ಬೋಟ್ ನವರು ಆಳಸಮುದ್ರದಲ್ಲಿ ಹುಡುಕಾಟ ನಡೆಸಿದ್ದಾಗ ಒಂದು ಕಡೆಯಲ್ಲಿ ಖಾಲಿ ಬಲೆ ಮಾತ್ರ ಪತ್ತೆಯಾಗಿತ್ತು. ಅಲ್ಲಿಂದ…

Read More

UN network ಉಳ್ಳಾಲ: ಟ್ಯಾಂಕರ್ ಢಿಕ್ಕಿ ಹೊಡೆದು 5ರ ಹರೆಯದ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಬಳಿಯ ಉಳ್ಳಾಲಬೈಲಿನಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಗಾಯಾಳು ಮಗುವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃಷ್ಣ (5) ಗಾಯಾಳು. ಉತ್ತರಪ್ರದೇಶ ಮೂಲದ ದಂಪತಿ ಪುತ್ರನಾಗಿರುವ ಮಗು ಹೆತ್ತವರ ಜತೆಗೆ ರಸ್ತೆ ದಾಟುವ ಸಂದರ್ಭ ತೊಕ್ಕೊಟ್ಟು ಕಡೆಯಿಂದ ಉಳ್ಳಾಲದತ್ತ ನೀರು ಸರಬರಾಜು ಮಾಡುತ್ತಿದ್ದ ಟ್ಯಾಂಕರ್ ಢಿಕ್ಕಿ ಹೊಡೆದಿದೆ. ಮಗುವಿನ ಹೊಟ್ಟೆ ಹಾಗೂ ಕೈಯ ಮೇಲೆ ಟ್ಯಾಂಕರ್ ಹರಿದಿರುವುದರಿಂದ ಸ್ಥಿತಿ ಗಂಭೀರವಾಗಿದೆ. ನಾಗುರಿ ಸಂಚಾರಿ ಠಾಣಾ ಪೊಲೀಸರು ಟ್ಯಾಂಕರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಹೆತ್ತವರ ಕಣ್ಮುಂದೆಯೇ ಅಪಘಾತ : ಮಗು ಜತೆಗೆ ತಾಯಿ ಹಾಗೂ ಸಂಬಂಧಿಕರು ನಡೆದುಕೊಂಡು ಬರುವ ಸಂದರ್ಭವೇ ಅಪಘಾತ ಸಂಭವಿಸಿದೆ. ಹೆತ್ತವರ ಕಣ್ಮುಂದೆಯೇ ಅಪಘಾತ ಸಂಭವಿಸಿದ್ದು, ಮಗುವಿನ ತಾಯಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಸ್ಥಳೀಯರು ಮಗುವಿಗೆ ನೀರು ನೀಡಿ ಕೂಡಲೇ ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದರು.

Read More

UN networks ಮಂಗಳೂರು: ಗ್ರಾಮ ಪಂಚಾಯತಿ ಚುನಾವಣೆಗೆ ದಿನಾಂಕ ಪ್ರಕಟಗೊಂಡಿದ್ದು ಡಿ.22ಕ್ಕೆ ಮೊದಲ ಹಂತದ ಚುನಾವಣೆ ಹಾಗೂ ಡಿ.27ಕ್ಕೆ ಎರಡನೇ ಹಂತದ ಚುನಾವಣೆ ನಡೆಯಲಿದೆ ರಾಜ್ಯದಲ್ಲಿ ನಡೆಯಲಿದೆ. ಒಟ್ಟು ಎರಡು ಹಂತಗಳಲ್ಲಿ ಚುನಾವಣೆ ನಡೆಸಬೇಕೆಂದು ಚುನಾವಣಾ ಆಯೋಗ ತಿಳಿಸಿದೆ.ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯ ತನಕ ಮನದಾನ ನಡೆಯಲಿದೆ. ರಾಜ್ಯದಲ್ಲಿ 5,762 ಗ್ರಾಮ ಪಂಚಾಯತಿಗಳು ಕಾರ್ಯನಿರ್ವಹಿಸುತ್ತಿದ್ದು ಏಕಕಾಲದಲ್ಲಿ ಚುನಾವಣೆ ನಡೆಯಲಿದೆ.ಡಿ 30 ರಂದು ಮತ ಎಣಿಕೆ ನಡೆಯಲಿದೆ. ನೀತಿಸಂಹಿತೆಯು ಇಂದಿನಿಂದ ಆರಂಭವಾಗಿ ಡಿ.31ರ ವರೆಗೆ ಜಾರಿಯಲ್ಲಿರುತ್ತದೆ ಎಂದು ಚುನಾವಣಾ ಆಯೋಗದ ಆಯುಕ್ತ ಡಾ. ಬಸವರಾಜು ತಿಳಿಸಿದ್ದಾರೆ.

Read More

ಮಂಗಳೂರು: ಲಷ್ಕರ್ ಇ ತೊಯ್ಬಾ ಮತ್ತು ತಾಲಿಬಾನ್ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ರೀತಿಯಲ್ಲಿ ರಸ್ತೆಬದಿ ಗೋಡೆ ಮೇಲೆ ಗೀಚುಬರಹ ಕದ್ರಿಯಲ್ಲಿ ಶುಕ್ರವಾರ ಕಂಡುಬಂದು ಭಾರಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಅದೇ ಬರಹಕ್ಕೆ ಸಡ್ಡು ಹೊಡೆಯುವ ಮತ್ತೊಂದು ಎಡಿಟೆಡ್ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ನಗರದ ಕದ್ರಿಯ ಅಪಾರ್ಟ್ ಮೆಂಟ್ ಒಂದರ ಕಂಪೌಂಡ್ ಮೇಲೆ ಯಾರೋ ಕಿಡಿಗೇಡಿಗಳು ಉಗ್ರ ಸಂಘಟನೆಗಳು ಪರ ಗೋಡೆ ಬರಹವು ಶುಕ್ರವಾರ ಬೆಳಕಿಗೆ ಬಂದಿತ್ತು.ಹ್ಯಾಶ್ ಟ್ಯಾಗ್ ಹಾಕಿ ಲಷ್ಕರ್ ಜಿಂದಾಬಾದ್ ಎಂದು ಬರೆದು ಇಂಗ್ಲಿಷ್ ನಲ್ಲಿ Do not force us to invite Lashkare-Toiba and Taliban to deal with Sanghis and Manvedis’ ಎಂದು ಬರೆದ ಬೆನ್ನಲ್ಲೇ ಇದೀಗ ಅದನ್ನೇ ಹೋಲುವ ಮತ್ತೊಂದು ಎಡಿಟೆಡ್ ಬರಹ ಹರಿದಾಡುತ್ತಿದ್ದು ‘ invite ಯಾರನ್ನು ಬೇಕಾದ್ರೂ ಮಾಡಿ ನಾವೇನು ಅಂಗನವಾಡಿ ಸಜ್ಜಿಗೆ ತಿನ್ನುತ್ತಾ ಕುಳಿತುಕೊಳ್ಳೇವಾ? ಇದು modi fied India # Indian army’…

Read More

ಉಳ್ಳಾಲ: ನೀರಿನ ಟ್ಯಾಂಕ್ ಪರಿಶೀಲನೆಗೆ ತೆರಳಿದ ಕಾರ್ಮಿಕ ಬಹುಮಹಡಿ ಕಟ್ಟಡದ ಮೇಲಿನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪ್ಯಾರೀಸ್ ಜಂಕ್ಷನ್ ನಲ್ಲಿ ಇಂದು ತಡರಾತ್ರಿ ವೇಳೆ ಸಂಭವಿಸಿದೆ. ಚೆಂಬುಗುಡ್ಡೆ ನಿವಾಸಿ ಮುತ್ತು(45) ಸಾವನ್ನಪ್ಪಿದವರು. ಇನ್ ಲ್ಯಾಂಡ್ ಕಟ್ಟಡದಲ್ಲಿ ದುರ್ಘಟನೆ ಸಂಭವಿಸಿದೆ. ನೀರಿನ ಟ್ಯಾಂಕ್ ಪರಿಶೀಲನೆಗೆಂದು ತೆರಳಿದಾಗ ಕಾಲು ಜಾರಿ ಕೆಳಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ: ಕೊರೊನಾ ಸಂಬಂಧ ಆಸ್ಪತ್ರೆಯಲ್ಲಿ ಹಣ ಕೊಡುತ್ತಿರುವುದಾಗಿ ಮಹಿಳೆಯೋರ್ವರನ್ನು ನಂಬಿಸಿ ಯುವಕನೋರ್ವ 60,000 ರೂ ಮೌಲ್ಯದ ಕರಿಮಣಿ ಸರ ಮತ್ತು 20,000 ರೂ . ನಗದು ಪಡೆದು ವಂಚಿಸಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 30-35 ಹರೆಯದ ರಾಕೇಶ್ ಎಂಬ ಹೆಸರಿನಲ್ಲಿ ಯುವಕ ವಂಚಿಸಿದ್ದಾನೆ. ನ.20 ರಂದು ತೊಕ್ಕೊಟ್ಟು ಒಳಪೇಟೆಯ ನ್ಯಾಯಬೆಲೆ ಅಂಗಡಿ ಸಮೀಪ ನಿಂತಿದ್ದ ಮಹಿಳೆಯನ್ನು ತನ್ನನ್ನು ಬ್ಯಾಂಕ್ ಸಿಬ್ಬಂದಿಯೆಂದು ರಾಕೇಶ್ ಪರಿಚಯ ಮಾಡಿಕೊಂಡಿದ್ದ. ಕೊರೊನಾ ಸಂಬಂಧ ಆಸ್ಪತ್ರೆಗಳಲ್ಲಿ ರೂ. 2 ಲಕ್ಷ ಹಣ ನೀಡಲಾಗುತ್ತಿದ್ದು, ಅದನ್ನು ವಾಪಸ್ಸು ಕಟ್ಟಲು ಇರುವುದಿಲ್ಲ. ಈ ದಿನವೇ ಹಣ ಸಿಗುತ್ತದೆ ಎಂದು ನಂಬಿಸಿ ರಿಕ್ಷಾದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ವೈದ್ಯರಿಗೆ ನೀಡಲು ರೂ.20,000 ಹಾಗೂ ಹೆಚ್ಚುವರಿಯಾಗಿ ನೀಡಲು ಮಹಿಳೆ ಬಳಿ ಚಿನ್ನವನ್ನು ಕೇಳಿದ್ದ. ಅದರಂತೆ ಮಹಿಳೆಯು 4 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ನೀಡಿದ್ದಾರೆ. ಅದಕ್ಕೆ ಬದಲಾಗಿ ತನ್ನ ತಾಯಿಯ ಚಿನ್ನದ ಸರ ಇರುವುದಾಗಿ…

Read More

UN netowrks ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಚಾಕಲೇಟ್ ನೀಡಿ ಮಕ್ಕಳ ಅಪಹರಣಾಗುತ್ತಿದೆ ಅನ್ನುವ ಎಚ್ಚರಿಕೆಯ ಸಂದೇಶ ವೈರಲ್ ಆಗುತ್ತಿದ್ದು, ಈ ಕುರಿತು ಮಾಹಿತಿ ನೀಡಿರುವ ಉಳ್ಳಾಲ ಠಾಣಾಧಿಕಾರಿ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಮಕ್ಕಳ ಅಪಹರಣವಾಗಿಲ್ಲ, ಸುಳ್ಳು ಮಾಹಿತಿಯ ಸಂದೇಶ ವೈರಲ್ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.ವರ್ಷದ ಹಿಂದೆ ಇದೇ ರೀತಿಯ ವೈರಲ್ ಸಂದೇಶ ಹೊರಜಿಲ್ಲೆಯೊಂದರಲ್ಲಿ ಹರಿದಾಡಿದ್ದು, ಊರಿನ ಜನ ತಪ್ಪಾಗಿ ಭಾವಿಸಿ ವಿಹಾರಕ್ಕೆ ಬಂದ ಟೆಕ್ಕಿಗಳು ಮಕ್ಕಳಿಗೆ ಚಾಕಲೇಟ್ ನೀಡುವ ಸಂದರ್ಭ ಅವರಿಗೆ ಹಲ್ಲೆ ನಡೆಸಿ ಹೈದರಾಬಾದ್ ಮೂಲದ ಟೆಕ್ಕಿ ಓರ್ವನನ್ನು ಹತ್ಯೆ ನಡೆಸಲಾಗಿತ್ತು. ಈ ನಿಟ್ಟಿನಲ್ಲಿ ಜಾಗೃತೆ ವಹಿಸಿರುವ ಠಾಣಾಧಿಕಾರಿ ಸಂದೀಪ್ ವಾಟ್ಸ್ಯಾಪ್ ಸಂದೇಶದ ಸುಳ್ಳು ಮಾಹಿತಿ. ಮಕ್ಕಳ ಅಪಹರಣದ ಕುರಿತ ಯಾವುದೇ ಪ್ರಕರಣಗಳು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

Read More

UN networks ಉಳ್ಳಾಲ: ಸರ್ವೋಚ್ಛ ನ್ಯಾಯಾಲಯಕ್ಕೆ ಹೋಗಿಯಾದರೂ ಪಾಕಿಸ್ತಾನ ಏಜೆಂಟರಾಗಿರುವ ಕಲ್ಲಡ್ಕ ಭಟ್ ವಿರುದ್ಧ ಎಫ್ ಐಆರ್ ದಾಖಲಿಸುವುದು ಖಚಿತ. ದಾವೆಗೆ ಎಷ್ಟು ಖರ್ಚಾದರೂ ಉಳ್ಳಾಲದ ಜನ ಸಿದ್ಧರಿದ್ದಾರೆ ಎಂದು ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದರು. ಅವರು ಉಳ್ಳಾಲ ಪ್ರದೇಶವನ್ನು ಪಾಕಿಸ್ತಾನ ಎಂದು ಹೇಳಿ ಅವಮಾನಗೊಳಿಸಿದ ದೇಶವಿರೋಧಿ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಮಾಸ್ತಿಕಟ್ಟೆ ಜಂಕ್ಷನ್ ನಲ್ಲಿ ಗುರುವಾರ ಸಂಜೆ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ನಕಲಿ ಜಾತ್ಯಾತೀತ ಮುಖವಾಡದವರ ಪೆÇ್ರೀತ್ಸಾಹ ದಿಂದ ಕಲ್ಲಡ್ಕ ಭಟ್ ನಿರಂತರವಾಗಿ ಅಶಾಂತಿ ಸೃಷ್ಟಿಸುವ ಮಾತುಗಳನ್ನಾಡುತ್ತಿದ್ದಾರೆ. ಉಳ್ಳಾಲ ಪಾಕಿಸ್ತಾನ ಎಂದ ಭಟ್ ವಿರುದ್ಧವೇ ಸ್ವಕ್ಷೇತ್ರದ ಶಾಸಕರಿಗೆ ಪೆÇಲೀಸ್ ಇಲಾಖೆಯಲ್ಲಿ ದೂರು ನೀಡಲು ಅಸಾಧ್ಯವಾಗಿದೆ. ಜಾತ್ಯಾತೀತ ಮುಖವಾಡ ತೋರಿಸಿಕೊಂಡು ಕೋಮುವಾದವನ್ನು ಶಾಸಕರು ವಿರೋಧಿಸುತ್ತಿಲ್ಲ. ಭಟ್ ವಿರುದ್ಧ ಪ್ರಕರಣ ದಾಖಲಿಸದ ಪೆÇಲೀಸರು ಐಪಿಸಿ ಸೆಕ್ಷನ್ ಅನ್ನು ಮತ್ತೆ ಅಧ್ಯಯನ ಮಾಡುವ ಅನಿವಾರ್ಯತೆ ಇದೆ.ಬಾಬರಿ…

Read More

UN networks ಉಳ್ಳಾಲ: ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಲಿದೆ. ಈಗಾಗಲೇ ಪ್ರಭಾಕರ್ ಭಟ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಸ್.ಡಿ.ಪಿ.ಐ ದೂರು ದಾಖಲಿಸಿತ್ತು. ಆದರೆ ಪೊಲೀಸರು ಪ್ರಕರಣವನ್ನು ದಾಖಲಿಸಿರಲಿಲ್ಲ. ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಲಾಗಿದ್ದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿರಲಿಲ್ಲ. ಪೊಲೀಸರ ನಿರ್ಲಕ್ಷ್ಯವನ್ನು ಖಂಡಿಸಿ ಇಂದು ಸಂಜೆ 4.00 ಗಂಟೆಗೆ ಪಕ್ಷದ ವತಿಯಿಂದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಉಳ್ಳಾಲ ವಿಧಾನ ಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬ್ಬಾಸ್ ಕಿನ್ಯ ತಿಳಿಸಿದ್ದಾರೆ. ನವೆಂಬರ್ 1ರಂದು ಕಿನ್ಯದ ಕೇಶವ ಶಿಶು ಮಂದಿರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್, ಉಳ್ಳಾಲವನ್ನು ಪಾಕಿಸ್ತಾನವೆಂದು ಕರೆದಿದ್ದರು. ಬಿಗಿ ಬಂದೋಬಸ್ತ್ಪ್ರತಿಭಟನೆ ಸಂದರ್ಭ ಅಹಿತಕರ ಘಟನೆಗಳು ನಡೆಯಂತೆ ಉಳ್ಳಾಲ ಠಾಣಾ ಎದುರುಗಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Read More

UN networks ಉಳ್ಳಾಲ: ಒಂದೂವರೆ ವರ್ಷದ ಹಿಂದೆ ಹಿಂದೂ ಸಂಘಟನೆಗಳಿಂದ ಪಜೀರು ಗೋವನಿತಾ ಆಶ್ರಮಕ್ಕೆ ಸೇರಿಸಿದ್ದ ವಿಧವೆ ಮಹಿಳೆ ಮತ್ತೆ ಹಳೇಯ ಪ್ರಿಯಕರನ ಜತೆಗೆ ಉಳ್ಳಾಲದಲ್ಲಿ ಪತ್ತೆಯಾಗಿದ್ದಾಳೆ.ಅಡ್ಯಾರುಪದವಿನಲ್ಲಿದ್ದ ವಿಧವೆ ಮಹಿಳೆಗೆ ಎರಡು ವರ್ಷಗಳ ಹಿಂದೆ ಉಳ್ಳಾಲದ ಶೌಕತ್ ಎಂಬಾತನ ಜತೆಗೆ ಪ್ರೇಮವಿತ್ತು. ಒಂದೂವರೆ ವರ್ಷದ ಹಿಂದೆ ಜತೆಯಾಗಿ ವಾಮಂಜೂರಿನಲ್ಲಿದ್ದ ಶೌಕತ್ ಮತ್ತು ಮಹಿಳೆಯನ್ನು ಒಂದೂವರೆ ವರ್ಷದ ಹಿಂದೆ ಹಿಂದೂ ಸಂಘಟಕರು ಬೇರೆ ಮಾಡಿಸಿ, ಪಜೀರು ಗೋವನಿತಾಶ್ರಮಕ್ಕೆ ಒಪ್ಪಿಸಿದ್ದರು. ವಿಧವೆ ಮಹಿಳೆ ಆಶ್ರಮದಲ್ಲಿದ್ದು ಮತ್ತೆ ಶೌಕತ್ ಸಂಪರ್ಕದಲ್ಲಿದ್ದಳು. ನ.2 ರಂದು ಮಹಿಳೆ ಆಶ್ರಮದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಗೋವನಿತಾಶ್ರಮ ಸಮಿತಿ ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ಕೊಣಾಜೆ ಠಾಣಾ ಅಪರಾಧ ವಿಭಾಗದ ಎಸ್. ಐ ಶರಣಪ್ಪ ನೇತೃತ್ವದ ತಂಡ ಮತ್ತೆ ಮಹಿಳೆಯನ್ನು ಶೌಕತ್ ಮನೆಯಲ್ಲೇ ಪತ್ತೆಹಚ್ಚಿದ್ದಾರೆ. ಇಬ್ಬರು ವಯಸ್ಕರಾಗಿದ್ದು, ಸ್ವ ಇಚ್ಛೆಯಿಂದ ತೆರಳಿರುವುದರಿಂದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.ಶೌಕತ್ ವಿವಾಹಿತನಾಗಿದ್ದು, ಓರ್ವ ಮಗಳಿದ್ದಾಳೆ.

Read More