Author: UllalaVani

Kannada News From Coastal Karnataka

ಪಾವೂರು:ಮಲಾರ್ ನಿವಾಸಿ ಮೋನು ಹತ್ಯೆ ಪ್ರಕರಣದ ಐವರು ಆರೋಪಿಗಳನ್ನು ಪೊಲೀಸರು ವಶಡಿಸಿಕೊಂಡಿದ್ದಾರೆ. ಮಲಾರ್ ನಿವಾಸಿ ಅಜರ್(27), ಅಲ್ತಾಫ್ (24) , ,ಸಜಿಪ ನಿವಾಸಿ ಅಮೀರ್(26) , ಅರ್ಫಾಝ್ (25) ವಶಕ್ಕೆ ಪಡೆದುಕೊಂಡಿರುವ ಆರೋಪಿಗಳು. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಹಂಝ ಪತ್ತೆಗಾಗಿ ಪೊಲೀಸರು ಈಗಾಗಲೇ ಹುಡುಕಾಟ ನಡೆಸುತ್ತಿದ್ದಾರೆ. ಪಾವೂರು ಗ್ರಾಮ ಪಂಚಾಯತ್ ನ ಮಲಾರು ನಿವಾಸಿ ಪಲ್ಲಿಯಾಕ ಯಾನೆ ಮೋನು (70) ಎಂಬವರನ್ನು ಹತ್ಯೆ ನಡೆಸಲಾಗಿತ್ತು. ಅ.29 ರಂದು ಮೋನು ನಾಪತ್ತೆಯಾಗಿದ್ದರು. ಅಂದು ಸಂಬಂಧಿ ಯುವಕನೋರ್ವ ಪಡೆದುಕೊಂಡ ಬಡ್ಡಿಸಾಲದ ಹಣವನ್ನು ಮರುಪಾವತಿಸುವುದಾಗಿ ನಂಬಿಸಿ ರಿಕ್ಷಾದಲ್ಲಿ ಕರೆದೊಯ್ದಿದ್ದನು. ಬೋಳಿಯಾರು ಮೂಲಕ ಮೋನು ಅವರನ್ನು ಕರೆದೊಯ್ದ ಚಾಲಕ, ಅಲ್ಲಿಂದ ಇತರ ನಾಲ್ಕು ಮಂದಿಯ ತಂಡವನ್ನು ಕುಳ್ಳಿರಿಸಿ ನಿರ್ಜನ ಪ್ರದೇಶವಾಗಿರುವ ಇರಾಪದವಿನ ಕಲ್ಲಿನಕೋರೆ ಬಳಿ ಕರೆದೊಯ್ದಿದ್ದಾರೆ. ಅಲ್ಲಿ ಎಲ್ಲರೂ ಸೇರಿ ಮೋನು ಅವರಲ್ಲಿದ್ದ ಬೈರಾಸಿನಿಂದ ಕುತ್ತಿಗೆಯನ್ನು ಬಿಗಿದು ಹತ್ಯೆ ನಡೆಸಿದ್ದರು. ಅಂದು ಅಲ್ಲೇ ಕಲ್ಲಿನ ಕೋರೆಯ ಹಳ್ಳದಲ್ಲಿ ಮೃತದೇಹವನ್ನು ಬಿಟ್ಟು ಬಂದಿದ್ದ ತಂಡ ಮರುದಿನ ಶುಕ್ರವಾರ ಅ.30…

Read More

ಉಳ್ಳಾಲ: ಉಳ್ಳಾಲ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಏರಿದ್ದು, ಕಾಂಗ್ರೆಸ್‍ನ ಚಿತ್ರಕಲಾ ಚಂದ್ರಕಾಂತ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಆಯೂಬ್ ಮಂಚಿಲ ಆಯ್ಕೆಯಾಗಿದ್ದು ಚುನಾವಣೆ ನಡೆದು ಎರಡು ವರ್ಷದ ಬಳಿಕ ನಗರಸಭೆಗೆ ಚುನಾಯಿತ ಆಡಳಿತ ಅಧಿಕಾರಕ್ಕೆ ಬಂದಂತಾಗಿದೆ. ಉಳ್ಳಾಲ ನಗರಸಭೆ ಮತ್ತೆ ಅಧಿಕಾರಕ್ಕೆ ಕಾಂಗ್ರೆಸ್   ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಉಳ್ಳಾಲ ನಗರಸಭೆಯ 31 ಸ್ಥಾನಗಳಲ್ಲಿ  ಕಾಂಗ್ರೆಸ್ 13ಸದಸ್ಯರನ್ನು ಹೊಂದಿದ್ದರೆ, ಬಿಜೆಪಿ 6 , ಎಸ್‍ಡಿಪಿಐ 6,  ಜೆಡಿಎಸ್ 4 ಹಾಗೂ ಪಕ್ಷೇತರ ಇಬ್ಬರು ಸದಸ್ಯರಿದ್ದರು. ಅತೀ ಹೆಚ್ಚು ಸಂಖ್ಯಾಬಲವನ್ನು ಹೊಂದಿದ್ದರು ಕಾಂಗ್ರೆಸ್‍ಗೆ ಅಧಿಕಾರಕ್ಕೇರಲು ಸ್ಪಷ್ಟ ಬಹುಮತವಿರಲಿಲ್ಲ. ಅಧ್ಯಕ್ಷ , ಉಪಾಧ್ಯಕ್ಷ ಗಾದಿಯ ನೇಮಕಾತಿಯ ಮೀಸಲಾತಿ ವಿಚಾರದಲ್ಲಿ ಕಾನೂನು ತೊಡಕು ಉಂಟಾಗಿ ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿ ಆಡಳಿತ ಚುನಾವಣೆ ವಿಳಂಬವಾಗಿತ್ತು. ಎರಡು ವರ್ಷಗಳ ಬಳಿಕ ಮೀಸಲಾತಿ ಪ್ರಕಟಿಸಿದ್ದು, ಕಾಂಗ್ರೆಸ್‍ಗೆ ಪಕ್ಷೇತರ ಅಭ್ಯರ್ಥಿಯೊಬ್ಬರು ಬೆಂಬಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಚಿತ್ರಕಲಾ ಚಂದ್ರಕಾಂತ್‍ಗೆ ಕಾಂಗ್ರೆಸ್‍ನ 13 ಸದಸ್ಯರು ಮತ್ತು…

Read More

UN NEWS NETWORKS ಉಳ್ಳಾಲ : ಕಳೆದ ಎರಡು ವರ್ಷಗಳಿಂದ ನ್ಯಾಯಾಲಯದಲ್ಲಿ ತಡೆಯಿದ್ದ ಹಿನ್ನೆಲೆಯಲ್ಲಿ ಬಾಕಿ ಉಳಿದಿದ್ದ ಉಳ್ಳಾಲ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಇಂದು ನಡೆಯಲಿದ್ದು, ಅಧ್ಯಕ್ಷೆಯಾಗಿ ಕಾಂಗ್ರೆಸ್ ನ ಚಿತ್ರಾ ಚಂದ್ರಕಾಂತ್ ಮತ್ತು ಉಪಾಧ್ಯಕ್ಷರಾಗಿ ಐಯೂಬ್ ಮಂಚಿಲ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. 1.30 ಗೆ ಚುನಾವಣೆ ಫಲಿತಾಂಶ ಹೊರಬಿದ್ದು, ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಎಸ್ ಡಿಪಿಐನಿಂದ ಜರೀನಾ ರವೂಫ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ರಮೀಜ್ ಕೋಡಿ ಮತ್ತು ಜೆಡಿಎಸ್ ನ ಜಬ್ಬಾರ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.ಕಾಂಗ್ರೆಸ್ 13 , ಪಕ್ಷೇತರ 2 , ಹಾಗೂ ಶಾಸಕ ಯು.ಟಿ ಖಾದರ್ ಅವರ ಬೆಂಬಲದಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನ ಕಾಂಗ್ರೆಸ್ ತೆಕ್ಕೆಗೆ ಬರಲಿದೆ ಅನ್ನುವ ಅಭಿಪ್ರಾಯ ಕಾಂಗ್ರೆಸ್ ಪಕ್ಷದ ವಲಯದಲ್ಲಿ ಕೇಳಿಬಂದಿದೆ.

Read More

UN networks ಕೊಣಾಜೆ : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾವೂರು ಗ್ರಾಮದ ಮಲಾರ್ ಅರಸ್ತಾನದ ಪಲ್ಲಿಯಬ್ಬ ಯಾನೆ‌ ಪಲ್ಲಿಯಾಕ (70) ಎಂಬುವರನ್ನು ಗಾಂಜಾ ವ್ಯಸನಿಗಳ‌ ತಂಡವೊಂದು ಕೊಂದು ಇರಾ ಸಮೀಪದ ಗುಡ್ಡವೊಂದರಲ್ಲಿ‌ ಹೂತು ಹಾಕಿದ ಬಗ್ಗೆ ವರದಿಯಾಗಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ. ಪಲ್ಲಿಯಬ್ಬ ಅವರು ಗುರುವಾರ ಸಂಜೆಯಿಂದ ಕಾಣೆಯಾಗಿದ್ದರು. ಮನೆ ಸಮೀಪದ ಇಬ್ಬರು ಯುವಕರು ಹೊರ ಊರಿನ ಕೆಲವು ಮಂದಿಯ ಸಹಕಾರದಿಂದ ಕೊಂದು ಹೂತಿದ್ದರು ಎನ್ನಲಾಗಿದೆ. ಶುಕ್ರವಾರ‌‌ ಮಧ್ಯಾಹ್ನದವರೆಗೂ ಇವರ ಮೊಬೈಲ್ ರಿಂಗ್ ಆಗುತ್ತಿತ್ತು. ಬಳಿಕ‌ ಸ್ವಿಚ್ಡ್ ಆಫ್ ಆಗಿತ್ತು. ಇದರಿಂದ ಸಂಶಯಗೊಂಡ ಪಲ್ಲಿಯಬ್ಬ ಅವರ ಸಂಬಂಧಿಕರು ಊರಿನ ಇಬ್ಬರು ಶಂಕಿತರನ್ನು ವಿಚಾರಿಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ.

Read More

UN NEWS NETWORKS ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಾಲ್ವರ ಖತರ್‍ನಾಕ್ ಗ್ಯಾಂಗ್ ವಾಹನ ಕಳವು ಜಾಲದಲ್ಲಿ ಸಕ್ರಿಯವಾಗಿದೆ. ರಸ್ತೆ ಬದಿಯಲ್ಲಿ ಅಥವಾ ರಸ್ತೆ ಬದಿಯ ಮನೆಗಳಲ್ಲಿ ನಿಲ್ಲಿಸುವ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದೆ. ಕಳವುಗೈದ ವಾಹನಗಳನ್ನು ಕೇರಳಕ್ಕೆ ಕೊಂಡೊಯ್ದು ಮಾರಾಟ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.ಕೆಲ ದಿನಗಳ ಹಿಂದಷ್ಟೇ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಎದುರುಗಡೆ ನಿಲ್ಲಿಸಿದ್ದ ವಾಹನಗಳನ್ನು ಇಬ್ಬರ ತಂಡ ಕಳವು ನಡೆಸಿತ್ತು. ಪ್ರಕರಣ ಸಂಬಂಧ ಸಿಸಿಟಿವಿಯಲ್ಲಿ ದಾಖಲೆಗಳನ್ನು ಸಂಗ್ರಹಿಸಿದ ಉಳ್ಳಾಲ ಪೊಲೀಸರು ತಂಡವನ್ನು ಒಂದು ವಾರದಲ್ಲಿ ಪತ್ತೆಹಚ್ಚುವಲ್ಲಿ ಸಫಲರಾಗಿದ್ದರು. ಮುಖಕ್ಕೆ ಮಾಸ್ಕ್ ಧರಿಸಿದ್ದರೂ ಸಂಶಯದ ಮೇರೆಗೆ ಮನೆಗೆ ನುಗ್ಗಿ ಬಂಧಿಸಿದ್ದರು. ವಿಚಾರಣೆ ವೇಳೆ ಇಬ್ಬರಿಂದ ನಾಲ್ಕು ಬೈಕ್ ಗಳನ್ನು ವಶಪಡಿಸಲಾಗಿತ್ತು. ಘಟನೆ ನಡೆದ ಒಂದೇ ವಾರದಲ್ಲಿ ಇದೀಗ ನಾಲ್ವರ ಖತರ್‍ನಾಕ್ ಗ್ಯಾಂಗ್ ಸಕ್ರಿಯವಾಗಿದೆ. ಕೊಲ್ಯ ಸಂಸ್ಥೆಯೊಂದರಿಂದ ಮೂರು ದಿನಗಳ ಹಿಂದಷ್ಟೇ ಬೈಕ್ ಕಳವು ನಡೆಸಲಾಗಿತ್ತು. ಈ ಕುರಿತು ಸಿಸಿಟಿವಿ ದಾಖಲೆಗಳು ಲಭ್ಯವಾಗಿದ್ದು, ನಾಲ್ವರ ತಂಡ…

Read More

ಉಳ್ಳಾಲ: ಸಮುದ್ರಕ್ಕೆ ಹಾರಿ ಮಹಿಳೆಯೋರ್ವರು ಆತ್ಮಹತ್ಯೆ ನಡೆಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲ ಸಮುದ್ರ ತೀರದಲ್ಲಿ ನಡೆದಿದ್ದು, ಮಧ್ಯಾಹ್ನ ವೇಳೆ ಮೃತದೇಹ ಪತ್ತೆಯಾಗಿದೆ.ಸಂಕೊಳಿಗೆ ನಿವಾಸಿ ಉಷಾ(60) ಆತ್ಮಹತ್ಯೆ ನಡೆಸಿದವರು. ಒಂದು ದಿನದಿಂದ ನಾಪತ್ತೆಯಾಗಿದ್ದ ಉಷಾ ಅವರ ಮೃತದೇಹ ಇಂದು ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಸ್ಥಳೀಯರು ಈ ಕುರಿತು ಉಳ್ಳಾಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಉಳ್ಳಾಲ ಪೊಲೀಸರು ಮೃತದೇಹವನ್ನು ಸ್ಥಳಮಹಜರಿಗೆ ಕಳುಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಷಾ ಅವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಈ ಹಿಂದೆಯೂ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಸ್ಥಳೀಯರ ನೆರವಿನಿಂದ ಬದುಕಿ ಉಳಿದಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

UN networks ಉಳ್ಳಾಲ : ನವದಂಪತಿ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ ಬೆನ್ನಲ್ಲೇ ಎಚ್ಚೆತ್ತ ನವಯುಗ ಸಂಸ್ಥೆ ಕಾಪಿಕಾಡು ಬಳಿ ರಾ.ಹೆ ಯ ಡಿವೈಡರ್ ತೆರವುಗೊಳಿಸಿ ಉಳ್ಳಾಲಕ್ಕೆ ಹೋಗುವ ವಾಹನಗಳಿಗೆ ವ್ಯವಸ್ಥೆ ಮಾಡಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈ ಹಿಂದೆ ಲಾಕ್ ಡೌನ್ ಸಂದರ್ಭ ಜು. 16 ರಂದು ಇದೇ ಡಿವೈಡರ್ ತೆರವುಗೊಳಿಸಿದ್ದರಿಂದ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಅಪಘಾತ ನಡೆದಿತ್ತು. ಇದೀಗ ಮತ್ತೆ ಅಪಾಯವನ್ನು ಆಹ್ವಾನಿಸುವಂತಾಗಿದೆ. ಜು.16 ರಂದು ನಡೆದ ಅಪಘಾತದಲ್ಲಿ ಚೆಂಬುಗುಡ್ಡೆ ನಿವಾಸಿಗಳಾದ ಚರಣ್ ಮತ್ತು ಮಂಜುನಾಥ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಲಿ ಕಾರ್ಮಿಕರಾಗಿದ್ದ ಇಬ್ಬರು ಬೈಕಿನಲ್ಲಿ ತೊಕ್ಕೊಟ್ಟು ಕಡೆಯಿಂದ ತಲಪಾಡಿ ಕಡೆಗೆ ತೆರಳುತ್ತಿದ್ದ ಸಂದರ್ಭ ಮುಂದಿನಿಂದ ಇದ್ದ ಕಾರು ತೆರವುಗೊಳಿಸಿದ ಡಿವೈಡರ್ ಆಗಿ ತಿರುಗಲು ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಕಾರು ಚಾಲಕ ಮಹಮ್ಮದ್ ಅಜ್ಮಲ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು. ವರದಿ ಬೆನ್ನಲ್ಲೇ ಮುಚ್ಚಿದರೂ ಮತ್ತೆ ತೆರವುಗೊಳಿಸಿದರು?’ಅವೈಜ್ಞಾನಿಕ ರಸ್ತೆ ತೆರವು ಶೀರ್ಷಿಕೆಯಡಿ ಕಾಪಿಕಾಡು ಭಾಗದಲ್ಲಿ…

Read More

ಉಳ್ಳಾಲ: ಕಳ್ಳರಿಬ್ಬರು ಬೈಕ್ ಕಳವು ನಡೆಸಿರುವ ಘಟನೆ ಎರಡನೇ ಕೊಲ್ಯ ಗಂಗೂಸ್ ಕಿಚನ್ ಹೋಂ ಟು ಹೋಂ ಫುಡ್ ಡೆಲಿವರಿ ಸಂಸ್ಥೆ ಯಲ್ಲಿ ಮಂಗಳವಾರ ತಡರಾತ್ರಿ 1.48. ರ ವೇಳೆಗೆ ನಡೆದಿದೆ. ಕಳ್ಳರಿಬ್ಬರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಂಸ್ಥೆಗೆ ಸೇರಿದ ಹೀರೋ ಹೋಂಡ ಫ್ಯಾಷನ್ ಪ್ಲಸ್ ಬೈಕನ್ನು ಕಳವು ನಡೆಸಲಾಗಿದೆ. ಸಂಸ್ಥೆ ಹೊರಗಡೆ ನಿಲ್ಲಿಸಲಾದ ಬೈಕನ್ನು ಕಳ್ಳರಿಬ್ಬರು ಬಂದು ಕಳವು ನಡೆಸಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳರಿಬ್ಬರ ಚಹರೆ ಪತ್ತೆಯಾಗಿದ್ದು, ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರಿಗೆ ಕಳ್ಳರಿಬ್ಬರ ಸುಳಿವು ಲಭ್ಯವಾಗಿದ್ದು, ಶೀಘ್ರವೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read More

ContentsKurs dolara 23 listopada w okolicy 4,55 złRynek PolskiKurs sprzedaży RUBCeny paliw na Węgrzech wystrzeliły. Dodatkowe zyski MOL trafią do budżetuWiadomościWszystkie wiadomościRosja: dolary nie dla obywateli Nie mają też możliwości zakupu walut zachodnich w gotówce. W czwartek, 8 grudnia w Sądzie Okręgowym w Poznaniu ruszył proces odwoławczy Marka M., oskarżonego o publiczne nawoływanie do zabójstwa abpa Marka Jędraszewskiego – informuje “Głos Wielkopolski”. Rzeczniczka rosyjskiego MSZ Maria Zacharowa skomentowała wizytę szefa polityki zagranicznej Unii Europejskiej Josepa Borrela w obozie szkoleniowym dla ukraińskich żołnierzy w Polsce. Jej zdaniem militaryzm bierze górę nad wszelkimi próbami dyplomacji. 25 lutego Bank Centralny odnotował rekordowy dzienny…

Read More

СодержаниеДостоинства и недостатки показателя DCF дисконтирования денежных потоковФормула дисконтирования денежных потоковКоэффициент дисконтированияМетоды инвестиционного анализа, использующие дисконтированные денежные потокиДисконтирование денежных потоков Самый главный минус в том, что даже небольшие неточности или ошибка в исходных данных могут привести к большим изменениям в расчёте стоимости бизнеса. Дисконтирование денежного потока позволит посчитать, сколько будет стоить компания в будущем с учётом инфляции, рисков, альтернативных доходов и так далее. Предлагает расчет дисконтированной стоимости долговых ценных бумаг и предоставленных займов (п. 23). Первый денежный поток CF0 не дисконтируется, если это платежи текущего периода или продолжительность периодов на которых вычисляются потоки мала, то есть нет смысла дисконтировать. Касательно…

Read More