UN NETWORKS
ಬಂಟ್ವಾಳ: ದಾರುಲ್ ಅಶ್-ಅರಿಯ್ಯಾ ಎಜ್ಯುಕೇಶನಲ್ ಸೆಂಟರ್ ಸುರಿಬೈಲಿನಲ್ಲಿ ಪ್ರಾರ್ಥನಾ ಸಂಗಮ ಹಾಗೂ ಬೃಹತ್ ಇಫ್ತಾರ್ ಕೂಟ ಜೂ02ರಂದು ಅದಿತ್ಯವಾರ ಸಂಜೆ 4.30ಕ್ಕೆ ಸುರಿಬೈಲ್ ದಾರುಲ್ ಅಶ್-ಅರಿಯ್ಯಾ ವಠಾರದಲ್ಲಿ ನಡೆಯಲಿದೆ.

ಅಸೈಯ್ಯದ್ ಯು.ಎಸ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವವಹಿಸಲಿದ್ದಾರೆ. ಸಂಸ್ಥೆಯ ಮ್ಯಾನೇಜರ್ ಸಿ.ಎಚ್ ಮುಹಮ್ಮದಾಲಿ ಸಖಾಫಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಸಿ.ಎಚ್ ಯೂಸುಫ್ ಮದನಿ ಮಸ್ಕತ್, ವಾಲೆಮುಂಡೋವು ಉಸ್ತಾದ್, ಬೊಳ್ಮಾರ್ ಉಸ್ತಾದ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಪ್ರಟಕಣೆಯಲ್ಲಿ ತಿಳಿಸಿದೆ.


