ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಜನಾಡಿ: ಮಾನವ ಮೊದಲು ತನ್ನ ಆತ್ಮವನ್ನು ಶುದ್ದಿ ಮಾಡಿಕೊಳ್ಳಬೇಕು.ಹೃದಯ ಶುದ್ದಿ ಇಲ್ಲದಿದ್ದರೆ ಅಭಿವೃದ್ಧಿ ಕುಂಠಿತವಾಗಬಹುದು. ಮನುಷ್ಯನ ಅಂತರಾಳದಲ್ಲಿರುವ ವಿಚಾರಗಳನ್ನು ಹೊರ ಹಾಕುವುದು ನಾಲಿಗೆ. ನಾಲಿಗೆ ಎನ್ನುವ ಒಂದು ಅಂಗ ಮಾನವನಿಗೆ ಇಲ್ಲದಿದ್ದರೆ ಮಾನವ ಸಮೂಹ ಈ ಹಂತಕ್ಕೆ ಬೆಳೆದು ಬರುತ್ತಿರಲಿಲ್ಲ ಎಂದು ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ನುಡಿದರು. ಅವರು ಅಲ್ ಮದೀನ ಯತೀಂಖಾನ ಮಂಜನಾಡಿಯಲ್ಲಿ ಕರ್ನಾಟಕ ರಾಜ್ಯ ಎಸ್‍ಎಸ್‍ಎಫ್ ವತಿಯಿಂದ ಮೂರು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಪ್ರತಿಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಘಟನೆಗಳು ನಡೆದು ಹೋಗುವುದು ಮಾನವನಿಂದ ಬಿತ್ತರವಾಗುವ ಮಾತಿನಿಂದ.ಆದ್ದರಿಂದ ಮಾತನಾಡುವ ಸಂದರ್ಭ ಆಲೋಚಿಸಿ ಮಾತನಾಡಬೇಕು ಜತೆಗೆ ಹೃದಯವನ್ನು ಶುದ್ಧಿ ಮಾಡಿಕೊಳ್ಳಬೇಕು.ಹೃದಯ ಶುದ್ಧಿ ಮಾಡಿಕೊಳ್ಳದೇ ಯಾವುದೇ ಕಾರ್ಯ ಮಾಡಿದರೂ ಪ್ರಯೋಜನ ಸಿಗದು ಎಂದು ಸಲಹೆ ನೀಡಿದರು. ಹುಸೈನ್ ಸಅದಿ ಮುಖ್ಯ ಭಾಷಣ ಮಾಡಿದರು.ಮಾಣಿ ಉಸ್ತಾದ್, ಇಸ್ಮಾಯಿಲ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸ್ಸಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಮೈಸೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನ.2ರಿಂದ 6ರವರೆಗೆ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಹಾಕಿ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೊದಲ ಕ್ವಾರ್ಟರ್ ¥sóÉೈನಲ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಹೈದರಾಬಾದಿನ ಒಸ್ಮಾನಿಯ ವಿ.ವಿ. ಎದುರು 8-0 ಗೋಲು ಅಂತರಗಳಿಂದ ಜಯಿಸಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದುಕೊಂಡಿತು. ಬಳಿಕ ನಡೆದ ಲೀಗ್ ಪಂದ್ಯಾವಳಿಗಳಲ್ಲಿ ಚಿದಂಬರಂನ ಅಣ್ಣಾಮಲೈ ವಿ.ವಿ. ತಂಡವನ್ನು 6-1 ಗೋಲುಗಳಿಂದ, ಕೇರಳದ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ವಿರುದ್ಧ 5-0 ಗೋಲುಗಳಿಂದ ಮತ್ತು ಕೊನೆಯ ಲೀಗ್ ಪಂದ್ಯದಲ್ಲಿ ಅತಿಥೇಯ ಮೈಸೂರು ವಿಶ್ವವಿದ್ಯಾನಿಲಯ ತಂಡವನ್ನು 2-1 ಗೋಲುಗಳಿಂದ ಮಣಿಸಿ ಭರ್ಜರಿ ಜಯಗಳಿಸಿದೆ. ತಂಡದಲ್ಲಿ ಭಾಗ್ಯಶ್ರೀ ಸಿಎಂ, ವಿಶ್ಮ ಎ.ಎ., ನಿಶಾ ಎನ್.ಎನ್. ಹಿಮಾ ಜಾರ್ಜ್ ಚೈತ್ರಾ ಕೆ.ಜೆ. ಕಾವೇರಮ್ಮ ಎ.ಹೆಚ್, ಪೂಜಾ ಎಂ.ಡಿ. ಸ್ವಪ್ನ ಎನ್.ಆರ್, ನಿಶಾ ಪಿ.ಸಿ. ರೇಶ್ಮಾ ಬಿ.ಬಿ. ಲಿಪಿತಾ ಡಿ.ಎಂ, ಯಕ್ಷಿತಾ ವಿ.ಆರ್, ಸಂಗೀತಾ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ರಾಜಕೀಯ ನಾಯಕರು ಕೋಟ್ಯಂತರ ಹಣವನ್ನು ಕೊಳ್ಳೆ ಹೊಡೆಯುವ ಸಲುವಾಗಿಯೇ ಎತ್ತಿನಹೊಳೆ ಯೋಜನೆಯನ್ನು ರೂಪಿಸಿದ್ದು, ಇದರಿಂದ ಕರಾವಳಿ ಜನರೊಂದಿಗೆ ಕೋಲಾರದ ಜನೆತಯೂ ವಂಚನೆಗೊಳಗಾಗಲಿದ್ದಾರೆ ಎಂದು ಸಂಘಟನೆ ಸಲಹೆಗಾರ ರಹೀಂ ಉಚ್ಚಿಲ್ ಹೇಳಿದ್ದಾರೆ. ಅವರು ಉಳ್ಳಾಲ ಸೈಯ್ಯದ್ ಮದನಿ ಸುನ್ನಿ ಸೆಂಟ್ರಲ್ ಕಮಿಟಿ ಇದರ ವತಿಯಿಂದ ಎತ್ತಿನಹೊಳೆ ಯೋಜನೆಯನ್ನು ಕೈಬಿಡಲು ಆಗ್ರಹಿಸಿ ಶುಕ್ರವಾರ ಉಳ್ಳಾಲದ ಮಾಸ್ತಿಕಟ್ಟೆಯಿಂದ- ತೊಕ್ಕೊಟ್ಟು ಬಸ್ ನಿಲ್ದಾಣದವರೆಗೆ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ಮಸೀದಿಯೊಳಗೆ ಕುಳಿತು ಧಾರ್ಮಿಕ ನಿಷ್ಠೆಯನ್ನು ಮಾತ್ರ ಪ್ರದರ್ಶಿಸದ ಸೆಂಟ್ರಲ್ ಕಮಿಟಿಯವರು ಸಾಮಾಜಿಕವಾಗಿ ಜನರ ಪರ ಹೋರಾಟಕ್ಕೆ ಮುಂದಾಗಿರುವುದು ಶ್ಲಾಘನೀಯ. ಪ್ರಕೃತಿ ಸೃಷ್ಟಿಯನ್ನು ಬದಲಿಸುವುದು ಇಸ್ಲಾಂ ವಿರೋಧಿ ನೀತಿ. ಸೃಷ್ಟಿ ವಿರೋಧದ ಯೋಜನೆಯನ್ನು ಮುಂದುವರಿಸದೆ ಎರಡು ಭಾಗದ ಜನರ ಹಿತಕ್ಕೆ ಸ್ಪಂಧಿಸುವ ಯೋಚನೆಯನ್ನು ಸರಕಾರ ಮಾಡಬೇಕಿದೆ. ಇಲ್ಲದಿದ್ದಲ್ಲಿ ಮುಂದೆ ತೀವ್ರ ಹೋರಾಟವನ್ನು ಎದುರಿಸಬೇಕಾದೀತು ಎಂದರು. ಇನ್ನೋರ್ವ ಸಲಹೆಗಾರ ಹೈದರ್ ಪರ್ತಿಪ್ಪಾಡಿಯವರು ಮಾತನಾಡಿ ಜಿಲ್ಲೆಯ ಜನರ ಜೀವನದಿ ನೇತ್ರಾವತಿಗೆ ಉಗಮವಾಗುವ ಸ್ಥಳಕ್ಕೆ ಅಡ್ಡಕಟ್ಟುವುದು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಚ್ಚಿಲ: ಲಾರಿ ಮತ್ತು ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಉಚ್ಚಿಲಗುಡ್ಡೆ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಮೂಲತ: ಗುರುಪುರ ಪರಾರಿ ನಿವಾಸಿ ತಲಪಾಡಿ ಕೆ.ಸಿ.ರೋಡ್‍ನಲ್ಲಿ ವಾಸವಾಗಿರುವ ಮಹಮ್ಮದ್ ರಫೀಕ್(45) ಎಂಬವರಾಗಿದ್ದು, ಕೆ.ಸಿ.ರೋಡ್‍ನಿಂದ ಸೋಮೇಶ್ವರ ಕಡೆಗೆ ರಿಕ್ಷಾ ಬಾಡಿಗೆಗೆಂದು ಹೋಗುತ್ತಿದ್ದಾಗ ಘಟನೆ ನಡೆದಿದೆ. ಘಟನೆಯ ವಿವರ : ಮಹಮ್ಮದ್ ರಫೀಕ್ ಸೋಮೇಶ್ವರ ರೈಲ್ವೇ ನಿಲ್ದಾಣದ ರಿಕ್ಷಾ ಪಾರ್ಕ್‍ನಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಶುಕ್ರವಾರ ಬೆಳಗ್ಗೆ 4.30ರ ಸುಮಾರಿಗೆ ರಿಕ್ಷಾ ಬಾಡಿಗೆಗೆ ನಿಲ್ಲಿಸಲು ಸೋಮೇಶ್ವರ ಕಡೆಗೆ ಹೋಗುತ್ತಿದ್ದಾಗ ಉಚ್ಚಿಲ ಗುಡ್ಡೆ ಬಳಿ ಮಂಗಳೂರಿನಿಂದ ಕೇರಳ ಕಡೆಗೆ ಮೀನು ಸಾಗಿಸುತ್ತಿದ್ದ ಲಾರಿ ಬಡಿದಿದ್ದು, ರಿಕ್ಷಾ ಚಲಾಯಿಸುತ್ತಿದ್ದ ರಫೀಕ್ ಸ್ಥಳದಲ್ಲೇ ಮೃತಪಟ್ಟಿದ್ದ ಎನ್ನಲಾಗಿದೆ. ಮನೆಯ ಆಧಾರ ಸ್ತಂಭವಾಗಿದ್ದರು : ಮಹಮ್ಮದ್ ರಫೀಕ್ ಪತ್ನಿ , ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದು, ಮನೆಯ ಆಧಾರ ಸ್ತಂಭವಾಗಿದ್ದರು. ಮೂಲತ: ಗುರುಪುರ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ಬಿಜೆಪಿಯ ಐದು ವರ್ಷದ ಆಡಳಿತಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷ ಅದರಲ್ಲೂ ಸಿದ್ಧರಾಮಯ್ಯ ಅವರ ಸರಕಾರ ಆಡಳಿತಕ್ಕೆ ಬಂದರೆ ಕೋಮು ಸೌಹಾರ್ದ ಉಳಿಯಲು ಸಾಧ್ಯ ಎಂದು ಭಾವಿಸಿದ್ದ ಜನರಿಗೆ, ಸಿದ್ಧರಾಮಯ್ಯ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ಮರುದಿನದಿಂದಲೇ ಕೋಮು ಸಂಘರ್ಷ ಪ್ರಾರಂಭಗೊಂಡಿದ್ದು, ಇದರೊಂದಿಗೆ ಮೂಲಭೂತ ಸೌಕರ್ಯ ಸೇರಿದಂತೆ ಕಾರ್ಮಿಕರ ಸಮಸ್ಯೆಗೆ ರಾಜ್ಯದ ಕಾಂಗ್ರೆಸ್ ಸರಕಾರ ಸ್ಪಂದಿಸುತ್ತಿಲ್ಲ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಬಸ್ ನಿಲ್ದಾಣ ಬಳಿಯ ನಾಡಕಚೇರಿ ಎದುರು ಜಿಲ್ಲೆಯ ಅಬಿವೃದ್ಧಿ ಹಾಗೂ ಜನತೆಯ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಸಿಪಿಐಎಂನಿಂದ ನಡೆದ ಸಾಮೂಹಿಕ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಆಡಳಿತದಲ್ಲಿದ್ದ ರೈತ ಕಾರ್ಮಿಕ ವಿರೋಧಿ ಬಿಜೆಪಿ ಸರಕಾರಕ್ಕೆ ಪರ್ಯಾಯವಾಗಿ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಅದರಲ್ಲೂ ಅಹಿಂದದ ಮೂಲಕ ರಾಜ್ಯದಾದ್ಯಂತ ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಹಿತ ಕಾಯುವ ಭರವಸೆ ನೀಡಿದ ಸಿದ್ಧರಾಮಯ್ಯ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟು ಚೆಂಬುಗುಡ್ಡೆ ಬಳಿ ಕಾರಿಗೆ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು ದೇರಳಕಟ್ಟೆಯ ಆಸ್ಪತ್ರೆ ದಾಖಲಿಸಲಾಗಿದೆ. ಪಂಡಿತ್‍ಹೌಸ್ ನಿವಾಸಿ ಯತಿನ್(18) ಎಂಬವರೇ ಗಂಭೀರ ಗಾಯಗೊಂಡು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿದ್ದು, ಯತಿನ್ ಪಂಡಿತ್‍ಹೌಸ್ ಕಡೆಯಿಂದ ತನ್ನ ಸ್ನೇಹಿತನ ಬೈಕ್‍ನಲ್ಲಿ ತೊಕ್ಕೊಟ್ಟು ಕಡೆ ಹೋಗುತ್ತಿದ್ದಾಗ ತೊಕ್ಕೊಟ್ಟಿನಿಂದ ದೇರಳಕಟ್ಟೆ ಕಡೆ ಹೋಗುವ ಕಾರಿಗೆ ಡಿಕ್ಕಿ ಹೊಡೆದಿದ್ದು, ಅಫಘಾತದಲ್ಲಿ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರನ್ನು ಚಲಾಯಿಸುತ್ತಿದ್ದ ವೈದ್ಯೆಗೆ ತಲೆಗೆ ಗಾಯವಾಗಿದೆ. ಬೈಕ್‍ನ ಟ್ಯಂಕ್ ಮತ್ತು ಎದುರಿನ ಚಕ್ರ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ರಸ್ತೆಯಲ್ಲಿ ಪೆಟ್ರೋಲ್ ಹರಿದು ಸಂಚಾರಕ್ಕೆ ತಡೆಯಾಯಿತು. ಸ್ಥಳಕ್ಕೆ ಉಳ್ಳಾಲ ಪೆÇಲೀಸರು ಆಗಮಿಸಿದ್ದು, ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ನರಿಂಗಾನ ಗ್ರಾಮದ ಕಂಬ್ಲ ಎಂಬಲ್ಲಿ ಕುಲಾಲ ಸಮುದಾಯದ ಬಂಜನ್ ಕುಟುಂಬಸ್ಥರ ಸೇವೆಯಾಗಿ ನರಿಂಗಾನದ ಶ್ರೀ ಮಲರಾಯ ಬಂಟ ಪಿಲಿಚಾಮುಂಡಿ ದೈವಗಳಿಗೆ ಜನವರಿಯಲ್ಲಿ ಸಮರ್ಪಣೆಯಾಗಲಿರುವ ಧರ್ಮ ನೇಮದ ಸಿದ್ಧತಾ ಸಭೆ ಕಂಬ್ಲ ತರವಾಡು ಮನೆಯಲ್ಲಿ ನಡೆಯಿತು. ವೇದಮೂರ್ತಿ ಮುನ್ನೂರು ಎಂ.ಎಸ್ ತಂತ್ರಿಯವರ ಮಾರ್ಗದರ್ಶನದಲ್ಲಿ ಬೊಳ್ಮಾರ್ ಗುತ್ತು ಶಶಿಧರ ಭಟ್ ಹಾಗೂ ಅಖಿಲೇಶ್ ಆಚಾರ್ಯ ಅವರ ಪೌರೋಹಿತ್ಯದಲ್ಲಿ ನಡೆಯಲಿರುವ ಧರ್ಮನೇಮವು ಜ.22 ರಿಂದ 30ರವರೆಗೆ ನಡೆಯಲಿದೆ. ಧರ್ಮನೇಮದ ಅಂಗವಾಗಿ ನಾಗದೇವರಿಗೆ ವಿಶೇಷ ತನುತರ್ಪಣ ಸೇವೆ ಹಾಗೂ ಇತರ ಧಾರ್ಮಿಕ ವಿಧಿ ವಿಧಾನಗಳ ಬಳಿಕ ಧರ್ಮ ದೈವಗಳಿಗೆ ಧರ್ಮನೇಮ ಹಾಗೂ ಕುಟುಂಬದ ದೈವಗಳಿಗೆ ಕೋಲೋತ್ಸವ ನಡೆಯಲಿದೆ ಎಂದು ಚಂದ್ರಶೇಖರ ಜಲ್ಲಿ ಮಾಹಿತಿ ನೀಡಿದರು. ಸಭೆಯಲ್ಲಿ ಶಂಕರ್ ಭಟ್ ದೋಸೆಮನೆ, ಸದಾಶಿವ ಭಟ್ ಜಲ್ಲಿ, ನಾರಾಯಣ ಭಟ್ ಬಡಕಾಯಿ, ನರಿಂಗಾನ ದೇವಸ್ಥಾನದ ಆಡಳಿತ ಮೊಕ್ತೇಸರ ಶೈಲೇಂದ್ರ ಭರತ್ ನಾಯ್ಕ್, ವಿಠಲ ಆಳ್ವ ಭಂಡಾರಮನೆ, ಲಕ್ಷ್ಮಣ ಕಣಂತೂರು, ಗಂಗಯ್ಯ ನಲಿಕೆ ಕನ್ಯಾನ,…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಯೇನೆಪೊಯ: ಬಡವರಿಗೆ ಚಿಕಿತ್ಸೆ, ಬಡಮಕ್ಕಳಿಗೆ ಶೈಕ್ಷಣಿಕ ನೆರವು, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಮಕ್ಕಳ ಮದುವೆಗೆ ನೆರವು ನೀಡುತ್ತಾ ಬರಲಾಗಿದ್ದು ಸಮಾಜ ಸೇವೆಗೆ ಇನ್ನಷ್ಟು ಬಲ ತುಂಬುವ ನಿಟ್ಟಿನಲ್ಲಿ ರಕ್ತದಾನಿಗಳ ಸಂಘ ಅಸ್ತಿತ್ವಕ್ಕೆ ತರಲಾಗಿದೆ ಎಂದು ಬ್ಯಾರೀಸ್ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಪ್ರೊ.ಮುಸ್ತಫಾ ಬಸ್ತಿಕೋಡಿ ಹೇಳಿದರು. ಇನೋಳಿ ಬಿಐಟಿ ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನದ ಉದ್ದೇಶದಿಂದ ಬುಧವಾರ ಯೇನೆಪೊಯ ಆಸ್ಪತ್ರೆ ಸಹಕಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಹಾಗೂ ಬಿಐಟಿ ಲೈಫ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ನೇಹಿತರು, ಸಂಬಂಧಿಕರು ಅಥವಾ ಇತರರಿಗೆ ರಕ್ತ ಅಗತ್ಯವಿರುವ ಸಂದರ್ಭ ಯಾರನ್ನೋ ಅವಲಂಭಿಸಲಾಗುತ್ತಿದೆ. ಕೆಲವೊಮ್ಮೆ ರಕ್ತ ಸಿಗದೆ ಪ್ರಾಣಹಾನಿಯೂ ಸಂಭವಿಸುತ್ತಿದ್ದು ಇದನ್ನು ಮನಗಂಡು ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ರಕ್ತದಾನ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಿದರು. ಮಾಹಿತಿ ತಂತ್ರಜ್ಞಾನ ವಿಭಾಗ ಮುಖ್ಯಸ್ಥ ಪ್ರೊ.ಶೇಖ್ ಮೊಯಿದ್ದೀನ್ ಮಾತನಾಡಿ, ಕಾಲೇಜಿನಲ್ಲಿ ಸಾವಿರದಷ್ಟು ವಿದ್ಯಾರ್ಥಿಗಳಿದ್ದು ರಕ್ತದಾನ ಮಾಡುವ ಉದ್ದೇಶದಿಂದಲೇ ಬಿಐಟಿ ಲೈಫ್ ಅಸ್ತಿತ್ವಕ್ಕೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಕೊಣಾಜೆ ಪದವಿನ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಹಾಗೂ ಮೇಲ್ಛಾವಣಿಯು ಕುಸಿಯುವ ಹಂತದಲ್ಲಿ ಶಾಲೆಯನ್ನು ಸುಮಾರು 13 ಲಕ್ಷ ರೂ ವೆಚ್ಚದಲ್ಲಿ ನವೀಕರಣಗೊಳಿಸುವ ಯೋಜನೆಯನ್ನು ಲಯನ್ಸ್ ಜಿಲ್ಲೆ 317-ಡಿ, ಜಿಲ್ಲಾ ಲಯನೆಸ್ ಕ್ಲಬ್ ಹಮ್ಮಿಕೊಂಡಿದ್ದು ನವೀಕರಣ ಕಾಮಗಾರಿಗೆ ಬುಧವಾರ ಚಾಲನೆ ನೀಡಲಾಯಿತು. ಜಿಲ್ಲಾ ಲಯನೆಸ್ ಅಧ್ಯಕ್ಷೆ ಅರುಣಾ ಸೋಮಶೇಖರ್ ಅವರ ನೇತೃತ್ವದಲ್ಲಿ ಈ ಯೋಜನೆಯನ್ನು ರೂಪಿಸಲಾಗಿದ್ದು, ಸ್ಥಳೀಯ ಅರ್ಚಕರಾದ ಸುದರ್ಶನ ಭಟ್ ಅವರು ಕಾಮಗಾರಿಗೆ ಚಾಲನೆ ನೀಡಿದರು. ಜಿಲ್ಲಾ ಲಯನೆಸ್ ಅಧ್ಯಕ್ಷೆ ಅರುಣಾ ಸೋಮಶೇಖರ್ ಮಾತನಾಡಿ, ಶಾಲೆ ಎನ್ನುವುದು ವಿದ್ಯಾ ದೇಗುಲವಾಗಿದ್ದು ಕೊಣಾಜೆ ಶಾಲೆಯ ದುಸ್ಥಿತಿಯಿಂದ ವಿದ್ಯಾರ್ಥಿಗಳು ಬಹಳಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇದನ್ನು ಮನಗಂಡು ಶಾಲೆಗೆ ಲಯನೆಸ್ ಕ್ಲಬ್ ವತಿಯಿಂದ ನವೀಕರಣಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದಕ್ಕೆ ಊರವರ ಮತ್ತು ಹಳೆವಿದ್ಯಾರ್ಥಿಗಳು ಕೂಡಾ ಕೈ ಜೋಡಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸೋಮಶೇಖರ್, ಜಿಲ್ಲಾ ಲಯನೆಸ್ ಸಲಹೆಗಾರರಾದ ವಿಜಯಲಕ್ಷ್ಮೀ ಪಿ.ರೈ, ಪ್ರಾಜೆಕ್ಟ್ ಕಾರ್ಡಿನೇಟರ್ ವಿನುತಾ ಕಾಜವ,…
ವರದಿ: ಬಶೀರ್ ಕಲ್ಕಟ್ಟ ಉಳ್ಳಾಲ: ಎಸ್‍ಎಸ್‍ಎಫ್ ತೊಕ್ಕೊಟ್ಟು ಸೆಕ್ಟರ್ ರಿಲೀಪ್ ಸರ್ವಿಸ್ ಇದರ ಆಶ್ರಯದಲ್ಲಿ ಮದುವೆಗೆ ಧನಸಹಾಯ ಒದಗಿಸುವ ಚೆಕ್ ಬಿಡುಗಡೆ ಕಾರ್ಯಕ್ರಮ ಎನೆಪೋಯ ಆಸ್ಪತ್ರೆಯ ಕ್ಯಾಂಪಸ್ ಬಳಿ ಮಂಗಳವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ಎಸ್‍ಎಫ್ ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ವಹಿಸಿದ್ದರು. ಅಲ್ ಕೋಬರ್ ಕೆಸಿಎಫ್ ಸದಸ್ಯ ಪಿ.ಕೆ. ಅಬ್ದುಲ್ ರವೂಫ್ ಸಅದಿ ಚೆಕ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಎಸ್‍ಎಸ್‍ಎಫ್ ಜಿಲ್ಲಾ ಕೋಶಾಧಿಕಾರಿಅಲ್ತಾಪ್ ಕುಂಪಲ, ಶಮೀರ್ ಸೇವಂತಿಗುಡ್ಡೆ ಬಾತಿಷ ಮಂಚಿಲ ಉಪಸ್ಥಿತರಿದ್ದರು.

