Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಜ.26 ರಿಂದ ಜ.30ರ ವರೆಗೆ ಅಷ್ಟಪವಿತ್ರ  ನಾಗಮಂಡಲೋತ್ಸವ  ವೇದಮೂರ್ತಿ  ಜಗದೀಶ್ ಭಟ್ ಮರಕಡ ಇವರ ಪೌರೋಹಿತ್ಯದಲ್ಲಿ  ನಾಗಪಾತ್ರಿ ಸಗ್ರಿ  ಗೋಪಾಲಕೃಷ್ಣ ಸಾಮಗರ ಮಾರ್ಗದರ್ಶನದೊಂದಿಗೆ ನಡೆಯಲಿದೆ ಎಂದು  ಅಷ್ಟಪವಿತ್ರ  ನಾಗಮಂಡಲೋತ್ಸವ ಸಮಿತಿಯ ಧರ್ಮದರ್ಶಿ ಭಾಸ್ಕರ್ ಐತಾಳ್ ಹೇಳಿದ್ದಾರೆ. ಅವರು ಕ್ಷೇತ್ರದಲ್ಲಿ ಬುಧವಾರ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಮಾಹಿತಿ ನೀಡಿ ಶ್ರೀ ಕ್ಷೇತ್ರದಲ್ಲಿ ಪ್ರತಿ ಶನಿವಾರ ವಿಶೇಷ ನಾಗತಂಬಿಲ, ಪ್ರತೀ ತಿಂಗಳ  ಆಶ್ಲೇಷಾ  ನಕ್ಷತ್ರ  ದಿನ  ಆಶ್ಲೇಷಾ ಬಲಿಪೂಜೆ,  ವರ್ಷಂಪ್ರತಿ ಸಹಸ್ರ ಸೀಯಾಳಾಭಿಷೇಕ, ನಾಗರಪಂಚಮಿ ಉತ್ಸವ, ನವಾರತ್ರಿಯ  ಮೊದಲ ದಿನ ದುರ್ಗಾನಮಸ್ಕಾರ  ಪೂಜೆ, ವರ್ಷಾವಧಿ ಉತ್ಸವದಲ್ಲಿ  ನಾಗದರ್ಶನ ಅನ್ನದಾನಗಳು ಪ್ರಧಾನ ಆಚರಣೆಗಳಾಗಿವೆ. ಮಾತ್ರವಲ್ಲದದೆ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ.  ಕ್ಷೇತ್ರದಲ್ಲಿ ಈ ಹಿಂದೆ ವಿಶೇಷವಾಗಿ ನಾಗ ತನುತರ್ಪಣಾ ಸೇವೆ ಎರಡು ಬಾರಿ ಮಹಾ ಚಂಡಿಕಾಯಾಗ ನಡೆದಿತ್ತು. 2016, ಶ್ರೀ  ಕ್ಷೇತ್ರ ಪುನರುತ್ಥಾನಗೊಂಡು 12 ವರ್ಷಗಳು ಪೂರ್ಣಗೊಂಡಿದೆ. ಅದೇ …

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಜುಬಾ: ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ವಿಮಾನವೊಂದು ಪತನಗೊಂಡಿದ್ದು, 40 ಜನರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಸುಡಾನ್ ಜಬಾದಲ್ಲಿ ಬುಧವಾರ ನಡೆದಿದೆ. ವಿಮಾನ ಪತನಗೊಂಡ ಸ್ಥಳದಲ್ಲಿ 40ಶವಗಳು ಪತ್ತೆಯಾಗಿದ್ದು, ಇನ್ನು ವಿಮಾನದಲ್ಲಿ ಎಷ್ಟು ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನುವ ಬಗ್ಗೆ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ. ಕಾರ್ಗೊ ವಿಮಾನ ರನ್ ವೇ ಯಿಂದ ಹಾರಿದ ಬಳಿಕ 800 ಮೀಟರ್ ದೂರದಲ್ಲೇ ಪತನಗೊಂಡಿದೆ ಎಂದು ವರದಿಯಾಗಿದ್ದು, ವಿಮಾನ ಪತನಕ್ಕೆ ಕಾರಣ ಏನೆಂದು ಇನ್ನಷ್ಟೇ ತಿಳಿದುಬರಬೇಕಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಚಿಕ್ಕಬಳ್ಳಾಪುರ: ದೇಶದ ಸಂಸ್ಕøತಿಯ ಬಗ್ಗೆ ಬಿಜೆಪಿ ಪಕ್ಷದ ನಾಯಕರಿಗೆ ಗೊತ್ತಿಲ್ಲ. ಬಿಜೆಪಿ ಮುಖಂಡರು ದೇಶಭಕ್ತಿಯ ಹೆಸರಿನಲ್ಲಿ ದೇಶ ಮತ್ತು ರಾಜ್ಯವನ್ನು ಒಡೆಯುತ್ತಿದ್ದಾರೆ ಎಂದು ಕರ್ನಾಟಕ ಆರೋಗ್ಯ ಸಚಿವ ಯು.ಟಿ.ಖಾದರ್ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬುಧವಾರ ಮಾತನಾಡಿದ ಅವರು ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೋಮಾಂಸ ಸೇವನೆಯ ಹೇಳಿಕೆಯನ್ನು ಮುಂಬಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯ ಹಿನ್ನಲೆಯಲ್ಲಿ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಕೇಂದ್ರ ಗೃಹಸಚಿವ ರಿಜಿಜು ಗೋಮಾಂಸವನ್ನು ಸೇವಿಸುವುದರ ಬಗ್ಗೆ ಮಾತನಾಡಿದ ಅವರು ಬಿಜೆಪಿ ನಾಯಕರಿಗೆ ಧೈರ್ಯವಿದ್ದರೆ ಸಚಿವ ರಿಜೆಜು ವಿರುದ್ಧ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಬಿಜೆಪಿ ಪಕ್ಷದವರು ಸಿಎಂ ಹೇಳಿಕೆಯನ್ನು ದೊಡ್ಡ ವಿವಾದವನ್ನಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಐದು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಮುಖ ಸೇರಿದಂತೆ ಮೂವರು ಪರಾರಿಯಾಗಿರುವ ಘಟನೆ ತಲಪಾಡಿ ಎಸ್ ಟಿಡಿ ಬೂತಿನ ಹಿಂದುಗಡೆ ನಡೆದಿದೆ. ಉದಯ ದೇವಾಡಿಗ, ಭಾಸ್ಕರ, ಆನಂದ, ಶರೀಫ್, ಶೇಖರ ಎಂಬವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಪ್ರಮುಖ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು, ಚಂದ್ರಹಾಸ ತಲಪಾಡಿ, ರಾಝಿಕ್ ಮಂಜೇಶ್ವರ, ಅಶೋಕ್ ಕೋಟೆಕಾರು ಎಂಬವರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಂದ ರೂ.10,000 ನಗದು ಹಾಗೂ ಆಟಕ್ಕೆ ಬಳಸಲಾದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಸಿಪಿ ಕಲ್ಯಾಣಿ ಶೆಟ್ಟಿ ಅವರ ನಿರ್ದೇಶನದಲ್ಲಿ ಉಳ್ಳಾಲ ಠಾಣಾಧಿಕಾರಿ ಸವಿತೃ ತೇಜ ಮತ್ತು ಎಸ್.ಐ ಭಾರತಿ ಅವರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಾಡೂರು: ನಗರದ ಸಬ್ ಜೈಲಿನಲ್ಲಿ ಖೈದಿಗಳಿಂದ ಹತ್ಯೆಗೀಡಾದ ಹಲವು ಪ್ರಕರಣಗಳ ಆರೋಪಿ ಮಾಡೂರು ಇಸುಬು ಅಂತಿಮ ಸಂಸ್ಕಾರ ಮಾಡೂರಿನ ಮಸೀದಿಯಲ್ಲಿ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ತೊಕ್ಕೊಟ್ಟು, ಬೀರಿ, ಕೋಟೆಕಾರು, ಮಾಡೂರು ಬಳಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಿಗಿಬಂದೋಬಸ್ತನ್ನು ಏರ್ಪಡಿಸಲಾಗಿತ್ತು. ಮಾಡೂರು ನಿವಾಸಿ ಯೂಸುಫ್ ಯಾನೆ ಇಸುಬು (42) ಕುರಿತು ಉಳ್ಳಾಲ ಠಾಣೆಯಲ್ಲಿ ಹಲವು ಪ್ರಕರಣಗಳಿದ್ದು, ಕೆಲವು ವಿಚಾರಣೆ ಹಂತದಲ್ಲಿದ್ದರೆ ಕೆಲವು ಬಿದ್ದು ಹೋಗಿದೆ. ಕಿನ್ಯಾ ನಿವಾಸಿ ಸಹೋದರರಿಬ್ಬರ ಡಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಡೂರು ಯೂಸುಫ್ ಬಳಿಕ ಮತೀಯ ಸಂಘರ್ಷದಲ್ಲಿ ಗುರುತಿಸಿಕೊಂಡಿದ್ದ. ಬಿಜೆಪಿ ಮುಖಂಡ ರೋರ್ವರ ಕೊಲೆ ಯತ್ನ ಪ್ರಕರಣ, ವಿವಾಹಿತೆ ಮುಸ್ಲಿಂ ಮಹಿಳೆಯ ಕೊಲೆ ಪ್ರಕರಣ ಮತ್ತು ಹಫ್ತಾ ಬೆದರಿಕೆ ಕುರಿತು ಹಲವು ಪ್ರಕರಣಗಳು ಈತನ ಮೇಲಿದೆ. ಕೆಲ ಪ್ರಕರಣಗಳಲ್ಲಿ ಈತನೇ ಭಾಗಿಯಾಗಿದ್ದರೆ, ಇನ್ನು ಹಲವು ಪ್ರಕರಣಗಳಲ್ಲಿ ವಿದೇಶದಲ್ಲಿದ್ದುಕೊಂಡು ಬೆಂಬಲ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಮತೀಯ ಗಲಭೆಗೆ ಸಂಬಂಧಿಸಿದಂತೆ ಪ್ರತೀಕಾರಕ್ಕಾಗಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು ಒಳ್ಳೆಯ ಡಾಕ್ಟರ್ ಆಗಲು ಸಾಧ್ಯವಿಲ್ಲ. ಅವರು ಒಳ್ಳೆಯ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಲು ಮಾತ್ರ ಸತ್ಯ. ಕನ್ನಡದಲ್ಲಿ ಯಾರು ಕಲಿಯುತ್ತಾರೆಯೋ ಅವರು ತಮ್ಮ ತಂದೆ ತಾಯಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆಂಗ್ಲ ಭಾಷೆಯಲ್ಲಿ ಶಿಕ್ಷಣ ಪಡೆದವರು ತಮ್ಮ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಎಂದು ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕ ೃತ ಸಾಹಿತಿ ಡಾ. ಕುಂ. ವೀರಭದ್ರಪ್ಪ ಖೇದ ವ್ಯಕ್ತಪಡಿಸಿದರು. ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಹಾಗೂ ಸಾಂಸ್ಕ ೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ವೆಯೊಂದರ ಪ್ರಕಾರ ಪ್ರಾದೇಶಿಕ ಭಾಷೆಗಳಲ್ಲಿ ಕಲಿತವರು, ಗ್ರಾಮೀಣ ಭಾಷೆಯಲ್ಲಿ ಬೆಳೆದವರು, ಕಲೆ ಮೊದಲಾದ ವಿಷಯದಲ್ಲಿ ಶಿಕ್ಷಣ ಪಡೆದವರು ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಹೇಳಿದೆ. ಆದರೆ ಆಂಗ್ಲ ಭಾಷೆಯಲ್ಲಿ ಶಿಕ್ಷಣ ಪಡೆದ ಮಕ್ಕಳ ಪೋಷಕರು ತಮ್ಮ ಸಾವಿನ ನಂತರ ದೇಹವನ್ನು ದಾನ ಮಾಡಲು ಮುಂದಾಗುತ್ತಾರೆ. ಅದಕ್ಕೆ ಬೇಕಾದ ದಾಖಲೆ ಸಿದ್ಧಪಡಿಸಿರುತ್ತಾರೆ.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸುಧಾನ ಪ್ರೌಢಶಾಲೆ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 17ರ ವಯೋಮಿತಿಯ ಬಾಲಕಿಯರ 48-52ಕೆಜಿ ವಿಭಾಗದಲ್ಲಿ ಉಳ್ಳಾಲದ ಭಾರತಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ದಿಯಾ ಡಿ.ಪ್ರಥಮ ಸ್ಥಾನ ಪಡೆದಿದ್ದಾರೆ. ಡಿ. 7ರಿಂದ 11ರ ವರೆಗೆ ಪಂಜಾಬ್‍ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ಉಳ್ಳಾಲದ ದಿನಕರ್ ಡಿ ಹಾಗೂ ಧನಲಕ್ಷ್ಮೀಯವರ ಸುಪುತ್ರಿ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು : ಭಾರತ ಇಂದು ಏಕತೆಯ ದಾರಿಯಲ್ಲಿ ನಡೆಯುತ್ತಿಲ್ಲ. ಮತೀಯ ಗಲಭೆಗಳು, ಅಸ್ಪøಶ್ಯತೆ ಇನ್ನು ಇರುವುದು ನಿಜವಾಗಲೂ ದುರಂತ. ಸ್ವತಂತ್ರ ಹೋರಾಟಗಾರರ ಕನಸು ನನಸಾಗಬೇಕಾದರೆ ಅವರ ವಿಚಾರಗಳನ್ನು ತಿಳಿದು ಮೈಗೂಡಿಸಿಕೊಳ್ಳಬೇಕು ಎಂದು ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಾಸುದೇವ ಉಚ್ಚಿಲ್ ಹೇಳಿದರು. ಅವರು ಜೈ ಹನುಮಾನ್ ಕ್ರೀಡಾಮಂಡಳಿ ಬಟ್ಟೆದಡಿ ಕುತ್ತಾರು ಹಾಗೂ ನೆಹರೂ ಯುವ ಕೇಂದ್ರ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನಾಚರಣೆಯನ್ನು ಉದ್ಘಾಟಿಸಿದರು. ವಲ್ಲಭಬಾಯಿ ಪಟೇಲರು ಕಂಡ ಏಕೀಕರಣದ ಕನಸ್ಸು ಮೆಚ್ಚುವಂತದ್ದು, ಅದು ಕಾರ್ಯರೂಪಕ್ಕೆ ಬಂದಲ್ಲಿ ಭಾರತದ ಅಭಿವೃದ್ಧಿಯನ್ನು ಊಹಿಸಲು ಸಾಧ್ಯವಾಗುತ್ತಿರಲಿಲ್ಲ. ಅದೇ ಕಾರಣಕ್ಕಾಗಿ ಹೈದರಾಬಾದ್, ಕಾಶ್ಮೀರ, ಜುನಾಗಡಕ್ಕೆ ಸೈನ್ಯ ಮೂಲಕ ಯುದ್ಧ ಸಾರಿ ಭಾರತಕ್ಕೆ ಸೇರಿಸಿದರು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಚೂರು ಕಾಲೇಜಿನ ಉಪನ್ಯಾಸಕ ಜೀವನ್ ರಾಜ್ ಕುತ್ತಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೆಹರೂ ಯುವ ಕೇಂದ್ರದ ತಾಲೂಕು ಕೋ-ಆರ್ಡಿನೇಟರ್ ಆದ ರಘುವೀರ್ ಸೂಟರ್‍ಪೇಟೆ, , ಮುನ್ನೂರು ಪಂ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸಬ್ ಜೈಲಿನಲ್ಲಿ ನಡೆದ ಮಾರಾಮಾರಿ ಪ್ರಕರಣ ಹಾಗೂ ಇಬ್ಬರು ಖೈದಿಗಳ ಹತ್ಯೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದ್ದು, ಘಟನೆಗೆ ಕಾರಣರಾದವರನ್ನು ಕಠಿಣ ಸಜೆಗೆ ಒಳಪಡಿಸಬೇಕೆಂದು ಆಗ್ರಹಿಸಿದೆ. ಪ್ರಕರಣ ಸಬ್ ಜೈಲಿನ ಭದ್ರತೆಯ ಲೋಪವನ್ನು ಎತ್ತಿ ತೋರಿಸುತ್ತದೆ. ವಿಚಾರಣಾಧೀನ ಖೈದಿಗಳಿಗೆ ಪೂರ್ಣ ಭದ್ರತೆಯನ್ನು ನೀಡುವುದು ಜೈಲಿನ ಅಧಿಕಾರಿಗಳ ಗುರುತರ ಹೊಣೆಯಾಗಿದೆ. ಆದರೆ ಘಟನೆಯು ಜಿಲ್ಲಾಡಳಿತದ ವೈಫಲ್ಯವನ್ನು ಸೂಚಿಸುತ್ತದೆ. ಘಟನೆಗೆ ಸರಕಾರ ನೇರ ಹೊಣೆ ಎಂದು ಆರೋಪಿಸಿದೆ. ಮೃತರ ಕುಟುಂಬಗಳಿಗೆ ತಲಾ 50 ಲಕ್ಷ ರೂ ಪರಿಹಾರವನ್ನು ಒದಗಿಸಬೇಕೆಂದು ಸಂಘಟನೆ ಆರೋಪಿಸಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಮೂವರು ಹಿಂದೂ ಸಂಘಟನೆ ಬೆಂಬಲಿತ ಪೊಳಲಿ ಅನಂತು, ಉಳ್ಳಾಲದ ನರಸಿಂಹ ಶೆಟ್ಟಿಗಾರ್, ಬಂಟ್ವಾಳದ ಕ್ಯಾಂಡಲ್ ಸಂತು ಮತ್ತು ಮುಸ್ಲಿಂ ವಿವಾಹಿತೆಯ ಕೊಲೆ ಸಹಿತ 30ಕ್ಕೂ ಅಧಿಕ ಪ್ರಕರಣಗಳಲ್ಲಿ ವಿಚಾರಣಾಧೀನ ಖೈದಿಯಾಗಿದ್ದ ಮಾಡೂರು ನಿವಾಸಿ ಇಸುಬು(42) ಸಹಿತ ವೆಲೆನ್ಶಿಯಾದಲ್ಲಿ ಬಿಜೈ ರಾಜಾ ಹತ್ಯೆಗೆ ಪ್ರತೀಕಾರವಾಗಿ ನಡೆದ ಪ್ರಶಾಂತ್ ಯಾನೆ ಪಚ್ಚು ಹತ್ಯೆಯಲ್ಲಿ ಭಾಗಿಯಾಗಿದ್ದ ಗಣೇಶ್ ಶೆಟ್ಟಿ ಎಂಬ ಖೈದಿಗಳನ್ನು ವಿಕ್ಕಿ ಶೆಟ್ಟಿ ತಂಡದ ಸಹಚರರೆನ್ನಲಾದ ಖೈದಿಗಳು ಜೈಲಿನಲ್ಲೇ ಹತ್ಯೆ ನಡೆಸಿದ್ದಾರೆ. ಮುಖ ತೊಳೆಯುವಾಗ ಕೃತ್ಯ ಎಸಗಿದರು : ಜೈಲೊಳಗೆ ಎರಡು ಬಣಗಳಿದ್ದು, ಅದರಲ್ಲಿ ಒಂದು ತಂಡವನ್ನು ಹಳೇ ಜೈಲಿನಲ್ಲಿರಿಸಲಾಗಿದ್ದರೆ, ಇನ್ನೊಂದು ತಂಡ ನೂತನ ಜೈಲಿನಲ್ಲಿದೆ. ಹಳೇ ಜೈಲಿನಲ್ಲಿ ಮಾಡೂರು ಇಸುಬು, ಸಹಿತ ವಳಚ್ಚಿಲ್ ಜಿಯಾ ಕೊಲೆ ಆರೋಪಿಗಳು ಮತ್ತು ಬಾಳಿಗಾ ಶೂಟೌಟ್ ಪ್ರಕರಣದಲ್ಲಿ ಬಂಧಿತ ಝೂಲ್ಫೀಕರ್ ಹಾಗೂ ಹಲವರು ಮುಸ್ಲಿಂ ಖೈದಿಗಳೇ ಜಾಸ್ತಿಯಾಗಿದ್ದು, ಜತೆಗೆ ಗಣೇಶ್ ಶೆಟ್ಟಿ ಕೂಡಾ ಇದ್ದರು. ಇಂದು ಬೆಳಿಗ್ಗೆ ಮಾಡೂರು ಇಸುಬು…

Read More