ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ರಾಜರು ,ಚಕ್ರವರ್ತಿಗಳ ಬಗ್ಗೆ ಕಪೋಲ ಕಲ್ಪಿತ ಚರಿತ್ರೆಗಳನ್ನು ಕಟ್ಟುವ ಕೆಲಸ ಬ್ರಿಟೀಷರ ವಸಾಹತುಷಾಹಿ ಯುಗದಿಂದಲೇ ನಡೆಯುತ್ತಾ ಬಂದಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ಬಿ ಶಿವರಾಂ ಶೆಟ್ಟಿ ಅವರು ಅಭಿಪ್ರಾಯಪಟ್ಟರು. ಅವರು ಉಳ್ಳಾಲದ ಟಿಪ್ಪು ಸುಲ್ತಾನ್ ಪದವಿಪೂರ್ವಕಾಲೇಜಿನಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‍ಎಫ್‍ಐ)ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ನಡೆದ “ವಿಚಾರ ಸಂಕೀರಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ವಸಾಹತುಷಾಹಿ ಚರಿತ್ರೆಗಾರರು ಯಾವದೇ ಸಮಾಜಮುಖಿ ಕಥೆಗಳನ್ನು ವೈಭವೀಕರಿಸಿಲ್ಲ,ಬದಲಾಗಿ ಕೇವಲ ರಾಜರು ,ಸಾಮ್ರಾಟರ ಬಗ್ಗೆನೆ ಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.ಇಂದಿನ ಯುವ ವಿದ್ಯಾರ್ಥಿಗಳು ಚರಿತ್ರೆಗಾರರು ಬರೀ ರಾಜರು ಸಾಮ್ರಾಟರ ಬಗ್ಗೆನೆ ಯಾಕೆ ಉಲ್ಲೇಖಿಸಿದ್ದಾರೆ ಎಂಬುದರ ಬಗ್ಗೆ ಸೂಕ್ಷ್ಮ ಅಧ್ಯಯನ ನಡೆಸಬೇಕು .ವಿದ್ಯಾರ್ಥಿಗಳು ಯಾರೋ ನೀಡಿದ ವಿಚಾರಧಾರೆಗಳನ್ನು ಅನುಕರಿಸದೆ ಸ್ವತಂತ್ರವಾಗಿ ವಿಮರ್ಶಿಸಿ ತಮ್ಮತನವನ್ನು ಧರಡೀಕರಿಸಬೇಕು ಎಂದು ಕರೆ ನೀಡಿದರು. ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಬ್ರಿಟೀಷರು ವಿರುಧ್ಧ ಹೋರಾಡಿ ದೇಶದ ಐಕ್ಯತೆಗೆ ಕಾರಣನಾದ ಟಿಪ್ಪುವಿನ ಹೆಸರನ್ನು ಇಂದು ಕೋಮುವಾದಿಗಳು…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ತನ್ನ ಆಟೋದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋದ ನಗದು ರೂಪಾಯಿ ಮೂವತ್ತು ಸಾವಿರ ವನ್ನು ಆಟೋ ಚಾಲಕರಾದ ಅಬ್ದುಲ್ ರಹ್ಮಾನ್ ಹಳೆಕೋಟೆ ಇವರು ಅದನ್ನು ಸಂಬಂಧಿಸಿದ ಪ್ರಯಾಣಿಕರಿಗೆ ಅವರ ವಿಳಾಸವನ್ನು ಪತ್ತೆ ಹಚ್ಚಿ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿ ತನ್ನ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಈ ಆಟೋ ಚಾಲಕ ಅಬ್ದುಲ್ ರಹ್ಮಾನ್ ಹಳೆಕೋಟೆ ಇವರು ತೊಕ್ಕೋಟು ಒಳಪೇಟೆ ಅಟೋ ಚಾಲಕ ಮತ್ತು ಮಾಲಕ ಸಂಘದ ಗೌರವಾಧ್ಯಕ್ಷರೂ, ಹಳೆಕೋಟೆ ಟೆಸ್ಟ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಇದರ ಅಧ್ಯಕ್ಷರಾಗಿದ್ದಾರೆ. ಇಂಥ ನಿಷ್ಠಾವಂತ ಪ್ರಾಮಾಣಿಕ ಅಟೋ ಚಾಲಕರಾದ ಅಬ್ದುಲ್ ರಹ್ಮಾನ್ ಹಳೆಕೋಟೆ ಇವರಿಗೆ ಹಳೆಕೋಟೆ ಜನತೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಡಿಕೇರಿ : ನ್ಯೂಸ್ ಕನ್ನಡ ನೆಟ್ ವರ್ಕ್: ಟಿಪ್ಪು ಜಯಂತಿ ವಿಷಯದಲ್ಲಿ ನಿನ್ನೆ ಕೊಡಗು ಜಿಲ್ಲೆಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಇಂದು ಕೂಡ ಉದ್ವಿಗ್ನ ವಾತಾವರಣ ಮುಂದುವರಿದಿದೆ. ಗೋಣಿ ಕೊಪ್ಪದಲ್ಲಿ ನಿನ್ನೆ ರಾತ್ರಿ ದುಷ್ಕರ್ಮಿಗಳು ಕಾರೊಂದಕ್ಕೆ ಬೆಂಕಿ ಹಚ್ಚಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಹೋಟೆಲೊಂದರ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ. ಜಿಲ್ಲೆಯಲ್ಲಿ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಡಿಕೇರಿಯಲ್ಲಿ ಪೆÇಲೀಸರು ಇಂದು ಕೂಡ ಗಸ್ತು ತಿರುಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಗರದಲಿಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ನಿನ್ನೆ ಘರ್ಷಣೆಯ ವೇಳೆ ಸಾವನ್ನಪ್ಪಿರುವ ವಿಎಚ್ ಪಿ ಮುಖಂಡ ಕುಟ್ಟಪ್ಪ ಎಂಬವರ ಮನೆಗೆ ಇಂದು ಕೆಲವು ಬಿಜೆಪಿ ಮುಖಂಡರು ಭೇಟಿ ನೀಡುವ ಸಾಧ್ಯತೆಯಿರುವುದರಿಂದ ಮಡಿಕೇರಿಯಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿದೆ. ನಗರದಲ್ಲಿ ಇಂದು ಕೂಡ ಸರಕಾರಿ…
ಬಹರೇನ್, ಗುರುಸೇವ ಸಮಿತಿ ಬಹರೇನ್ ಬಿಲ್ಲವಾಸ್ ತಾ.೨೯.೧೦.೨೦೧೫ ರಂದು ಇಂಡಿಯನ್ ಕ್ಲಬ್ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲ್ಪಟ್ಟಿದ್ದ ” ತೆಲಿಕೆ ನಲಿಕೆ ” ಹಾಸ್ಯ ಕಾರ್ಯಕ್ರಮ ಅದ್ಭುತ ಯಶಸ್ಸು ಕಂಡು ಹೊಸ ದಾಖಲೆಯನ್ನು ನಿರ್ಮಿಸಿತು, ಸುಮಾರು ೨೦೦೦ ಪ್ರೇಕ್ಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ತಾಯಿನಾಡಿನಿಂದ ಬಂದಂತಹ ಹಾಸ್ಯ ಕಲಾವಿದರುಗಳಾದ ದೇವದಾಸ್ ಕಾಪಿಕಾಡ್, ನವೀನ ಡಿ ಪಡಿಲ್, ಬೋಜರಾಜ ವಾಮಂಜೂರು ಇವರ ಹಾಸ್ಯ ಪ್ರಹಸನಗಳು ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೆಲಾಡಿಸುವಂತೆ ಮಾಡಿತು. ತುಳು ಸೂಪರ್ ಸ್ಟಾರ್ ಅರ್ಜುನ್ ಕಾಪಿಕಾಡ್ ಹಾಗು ಚಂಡಿ ಕೋರಿ ತುಳು ಚಲನ ಚಿತ್ರದ ನಾಯಕಿ ಕರಿಷ್ಮ ಅಮಿನ್ ವೇದಿಕೆಯಲ್ಲಿ ತಮ್ಮ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಸ್ಥಳೀಯ ನೃತ್ಯ ಕಲಾವಿದರಿಂದ ಮೂಡಿಬಂದಂತಹ ನೃತ್ಯ ಪ್ರದರ್ಶನ ನೋಡುಗರನ್ನು ಮಂತ್ಹ್ರಮುಗ್ದರನ್ನಗಿಸಿತು. ಈ ನೃತ್ಯ ಸಂಯೋಜನೆಯನ್ನು ನಮಿತ ಸಾಲ್ಯಾನ್ ನಿರ್ವಹಿಸಿದ್ದರು. ಮನೋರಂಜನ ಕಾರ್ಯದರ್ಶಿ ಶ್ರೀ ಶ್ರೀಧರ್ ಅಮಿನ್ ಅವರ ಸ್ವಾಗತ ಭಾಷಣ ದಿಂದ ಪ್ರಾರಂಭಗೊಂಡು ಶ್ರೀಮತಿ ಪ್ರತಿಮರಾಜ್ ಅವರ ಸಂಕ್ಷಿಪ್ತ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟಿನ ಭಗತ್ ಸೇವಾ ಸಿಂಗ್ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ತೊಕ್ಕೊಟ್ಟು ಒಳಪೇಟೆಯ ಡಾ. ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ನಡೆದ ಗೂಡುದೀಪ ಸಂಗಮ-ದೀಪಾವಳಿ ಸಂಭ್ರಮ ಕಾರ್ಯಕ್ರಮ ಸೇರಿದ ಸಾವಿರಾರು ಕಲಾರಸಿಕರ ಮನ ತಣಿಸಿತು. ಆಧುನಿಕ ಹಾಗೂ ಸಾಂಪ್ರದಾಯಿಕ ವಿಭಾಗದಲ್ಲಿ ನೂರಕ್ಕೂ ಮಿಕ್ಕಿ ಗೂಡುದೀಪಗಳು ಸ್ಪರ್ಧಿಸಿದ್ದವು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಿನ್ಯಾ : ಟೆಂಪೋ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕಿನಲ್ಲಿದ್ದ ಸಹಸವಾರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಿನ್ಯಾ ಸಮೀಪ ಸೋಮವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಸೋಮೇಶ್ವರ ಉಚ್ಚಿಲದ ಅಜ್ಜಿನಡ್ಕ ನಿವಾಸಿ ಅಬೂಬಕರ್ ಎಂಬವರ ಪುತ್ರ ಇಬ್ರಾಹಿಂ ಖಲೀಲ್ (15) ಮೃತ ಬಾಲಕ. ಬೈಕ್ ಚಲಾಯಿಸುತ್ತಿದ್ದ ಸಂಬಂಧಿ ಸೊಹೈಲ್ ಸಾದಿಕ್ ಗಾಯಗೊಂಡು ತೊಕ್ಕೊಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇರಳಕ್ಟಟ್ಟೆಯ ಆಸ್ಪತ್ರೆಯಲ್ಲಿ ಅನಾರೋಗ್ಯಕ್ಕೀಡಾಗಿ ದಾಖಲಾಗಿದ್ದ ತಂದೆ ಅಬೂಬಕರ್ ಅವರನ್ನು ನೋಡಲೆಂದು ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಉಚ್ಚಿಲ ಕಡೆಯಿಂದ ದೇರಳಕಟ್ಟೆಗೆ ತೆರಳುವ ಸಂದರ್ಭ ಎದುರಿನಿಂದ ನಾಟೆಕಲ್ ಕಡೆಯಿಂದ ತಲಪಾಡಿಗೆ ತೆರಳುತ್ತಿದ್ದ ಟೆಂಪೋ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ರಸ್ತೆಗೆಸೆಯಲ್ಪಟ್ಟ ಇಬ್ರಾಹಿಂ ಖಲೀಲ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಿನ್ಯಾ ಫಲಾಹ್ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯಾಗಿದ್ದ ಈತ ಪ್ರತಿಭಾವಂತನಾಗಿದ್ದ. ಮೃತ ಖಲೀಲ್ ತಂದೆ ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾನೆ. ಉಳ್ಳಾಲ ಠಾಣೆಯಲ್ಲಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ತಾಯಿ ಮಡಿಲು ಸಂಸ್ಕಾರದ ಕೇಂದ್ರಗಳಾಗಬೇಕು. ಅವರು ಯುವಪೀಳಿಗೆಯಲ್ಲಿ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಅರಿವು ಮೂಡಿಸಿದಾಗ ಸಂಸ್ಕಾರಯುತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಕೇಮಾರು ಶ್ರೀ ಸಾಂದೀಪನಿ ಮಠದ ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಹೇಳಿದರು. ಅವರು ತೊಕ್ಕೊಟ್ಟಿನ ಭಗತ್ ಸೇವಾ ಸಿಂಗ್ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ತೊಕ್ಕೊಟ್ಟು ಒಳಪೇಟೆಯ ಡಾ. ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ಭಾನುವಾರ ನಡೆದ ಗೂಡುದೀಪ ಸಂಗಮ-ದೀಪಾವಳಿ ಸಂಭ್ರಮ -2015 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಸ್ಕøತಿ ವಿಕೃತಿಯಲ್ಲಿ ಮರೆಯಾಗುತ್ತಿದೆ. ಸನ್ಮಾನ ಪ್ರಶಸ್ತಿಗಳು ಮಾರಾಟದ ವಸ್ತುಗಳಾಗಿವೆ. ಪ್ರಶಸ್ತಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಅರ್ಹತೆಯುಳ್ಳ ವ್ಯಕ್ತಿಗೆ ಸಾಧನಾ ಪ್ರಶಸ್ತಿಯನ್ನು ನೀಡಿರುವುದು ಶ್ಲಾಘನೀಯ. ಮದ್ಯ ಸಮಾಜದಲ್ಲಿ ಬದುಕುತ್ತಿರುವ ಎಲ್ಲರೂ ಉತ್ಸವದ ದಿನಗಳಂದು ಮದ್ಯ ಸೇವಿಸದೆ ಇರುವುದರಿಂದ ಹಬ್ಬಗಳ ಮಹತ್ವವನ್ನು ಉಳಿಸುವ ಕಾರ್ಯ ನಡೆಸಬೇಕು. ಮಹಿಳೆಯರು ಮದ್ಯ ಸಂಸ್ಕøತಿಯತ್ತ ವಾಲದೇ, ಸಂಸ್ಕಾರದ ಕೇಂದ್ರಗಳಾಗಬೇಕಿದೆ. ಮಕ್ಕಳಿಗೆ ಸಂಸ್ಕಾರಯುಕ್ತ ವಿದ್ಯೆಯನ್ನು ಕೊಡುವ ಪ್ರಯತ್ನ ತಾಯಂದಿರಿಂದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟು ಹೈಟೆಕ್ ಬಸ್ಸು ನಿಲ್ದಾಣದ ನೀಲಿನಕಾಶೆ ಸಿದ್ಧವಾಗಿದ್ದು, ಎರಡು ಬಾರಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಅಧಿಕೃತವಾಗಿ ಅನುದಾನ ಬಿಡುಗಡೆ ಮಾಡುವಂತೆ ಮಾಡಿ ಜಿಲ್ಲೆಯಲ್ಲಿ ಮಾದರಿ ಬಸ್ ನಿಲ್ದಾಣವನ್ನು ರೂಪಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ವಿಶೇಷ ಅನುದಾನದಲ್ಲಿ ಹಮ್ಮಿಕೊಳ್ಳಲಾದ ತೊಕ್ಕೊಟ್ಟು ಬಸ್ ನಿಲ್ದಾಣದ ಕಾಂಕ್ರೀಟಿಕರಣ ಕಾಮಗಾರಿಗೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಉಳ್ಳಾಲ ನಗರಸಭೆ ಮೇಲ್ದರ್ಜೆಗೆ ಏರಿಸಿದ ಬಳಿಕ ಹಂತಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ತೊಕ್ಕೊಟ್ಟು ಜಂಕ್ಷನ್ನಿನಿಂದ ಅಬ್ಬಕ್ಕ ಸರ್ಕಲ್ ವರೆಗಿನ ರಸ್ತೆ ಕಾಂಕ್ರೀಟಿಕರಣದ ಕಾಮಗಾರಿ ರೂ.10 ಕೋಟಿ ಅನುದಾನದಲ್ಲಿ ನಡೆಸಲಾಗಿದ್ದು, ಈಗಾಗಲೇ ಭಾಗಶ: ಪೂರ್ಣಗೊಂಡಿದೆ. ದೇಶದಲ್ಲೇ ಪ್ರಥಮ ಬಾರಿ ನಡೆಸಲಾಗುತ್ತಿರುವ ಉಳ್ಳಾಲದ ಕಡಲ್ಕೊರೆತ ಕಾಮಗಾರಿಗೆ ರೂ.235 ಕೋಟಿ ಅನುದಾನ ಮಂಜೂರಾಗಿದ್ದು, ಅದರಲ್ಲಿ 35 ಕೋಟಿಯ ಕಾಮಗಾರಿ ನಡೆಸಲಾಗಿದೆ. ಮಾದರಿ ಆಸ್ಪತ್ರೆ, ಹೈಟೆಕ್ ಮೀನು ಮಾರುಕಟ್ಟೆ, ಮೀನುಗಾರರಿಗೆ ಜಟ್ಟಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಅಂಬಿಕಾರೋಡ್: ಬಂಟರ ಸಂಘ ಕೋಟೆಕಾರು ಗ್ರಾಮ ಸಮಿತಿ ವತಿಯಿಂದ ಇಂದು ಸಂಜೆ 4.30 ಕ್ಕೆ ಕಾಪಿಕಾಡಿನ ಅಂಬಿಕಾರೋಡು ಗಟ್ಟಿ ಸಮಾಜಭವನದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಉಳಿಪ್ಪಾಡಿಗುತ್ತು ಸುಬ್ಬಯ್ಯ ಮಾರ್ಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಂಟರ ಸಂಘ ಕೋಟೆಕಾರು ಗ್ರಾಮ ಸಮಿತಿ ಅಧ್ಯಕ್ಷ ರವಿರಾಜ್ ರೈ ಸಾಂತ್ಯಗುತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬಂಟರ ಸಂಘ ಉಳ್ಳಾಲ ವಲಯ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಉದ್ಯಮಿ ಮತ್ತು ಬಿಜೆಪಿ. ಯುವಮೋರ್ಚಾ ಕೊಣಾಜೆ ಗ್ರಾಮ ಅಧ್ಯಕ್ಷ ಸುದರ್ಶನ್ ಶೆಟ್ಟಿ ನೆತ್ತಿಲಬಾಳಿಕೆ ದಡಸು, ರಾಜೇಶ್ ರೈ.ಕೋಟೆಕಾರ್ ಗುತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ಮೋಹನ್ ದಾಸ್‍ರವರು ಸ್ಪರ್ಧಾತ್ಮಕ ಜಗತ್ತಿನ ತಯಾರಿಯಲ್ಲಿ ವಿದ್ಯಾರ್ಥಿಗಳ ಮತ್ತು ಪೋಷಕರ ಪಾತ್ರ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದು ಬಳಿಕ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಪ್ರತಿಕಾ ಪ್ರಕಟನೆ ತಿಳಿಸಿದೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಕಳೆದ ವಾರ ನಗರ ಸಬ್ ಜೈಲಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಅಧೀಕ್ಷಕ ಸೇರಿ ಮೂವರು ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ. ಜೈಲಿನ ಅಧೀಕ್ಷಕ ಓಬಳೇಶ್ವರ ಸೇರಿದಂತೆ ನಾಲ್ವರನ್ನು ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪದಡಿಯಲ್ಲಿ ಅಮಾನತುಗೊಳಿಸುವಂತೆ ಮಂಗಳೂರು ಪೊಲೀಸ್ ಆಯುಕ್ತ ಎಸ್.ಮುರುಗನ್ ಶಿಫಾರಸು ಮಾಡಿದ್ದರು. ಈ ಹಿನ್ನಲೆಯಲ್ಲಿ ಇಂದು ಬಂದೀಖಾನೆ ಇಲಾಖೆ ಎಡಿಜಿಪಿ ಕಮಲ್ ಪಂತ್ ನಾಲ್ವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ನವೆಂಬರ್ 2 ರಂದು ವಿಚಾರಣಾಧೀನ ಕೈದಿಗಳ ಎರಡು ತಂಡಗಳ ನಡುವೆ ನಡೆದ ಮಾರಾಮಾರಿಯಲ್ಲಿ ಭೂಗತ ಪಾತಕಿ ದಾವೂದ್ ಸಹಚರ ಎನ್ನಲಾದ ಮಾಡೂರು ಇಸುಬು ಹಾಗೂ ಅವನ ಸಹಚರ ಗಣೇಶ್ ಶೆಟ್ಟಿ ಕೊಲೆಯಾಗಿತ್ತು. ಇವರ ಜೊತೆ ೭ಮಂದಿ ಗೈದಿಗಳು ಹಾಗೂ ಜೈಲು ಸುಪರಿಂಟೆಂಡೆಂಟ್ ಗಾಯಗೊಂಡಿದ್ದರು. ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರ ಆಕಾಶ್ ಭವನ ಶರಣ್ ಹಾಗೂ ಆತನ ತಂಡ ಈ ಕೊಲೆ ಮಾಡಿದ್ದರು. ಕೈದಿಗಳ ಹತ್ಯೆಯ ನಂತರ ಜೈಲಿನೊಳಗೆ ನಡೆದ ತಪಾಸಣೆಯಲ್ಲಿ…

