Author: UllalaVani

Kannada News From Coastal Karnataka

ಬೆಂಗಳೂರು: ಯುವತಿಯೊಬ್ಬಳ ಮೇಲೆ ನಾಲ್ವರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಬುಧವಾರ ರಾತ್ರಿ ಸುಮಾರು 10 ಗಂಟೆಗೆ ಟೆನ್ನಿಸ್ ಸ್ಟೇಡಿಯಂ ಕಡೆ ನಡೆದು ಬರುತ್ತಿದ್ದ ಯುವತಿಯ ಮೇಲೆ ನಾಲ್ವರು ಕಾಮುಕರು ಸೇರಿ ಗ್ಯಾಂಗ್‍ರೇಪ್ ನಡೆಸಿದ್ದಾರೆ. ತೋಟಗಾರಿಕೆ ಇಲಾಖೆಯ ಇಬ್ಬರು ಸಿಬ್ಬಂದಿ ಸೇರಿ ನಾಲ್ವರು ಅತ್ಯಾಚಾರ ಎಸಗಿರುವುದಾಗಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಯುವತಿ ನೀಡಿದ ದೂರಿನ ಆಧಾರದ ಮೇರೆಗೆ ಇಬ್ಬರು ಕಾಮುಕ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಮತ್ತಿಬ್ಬರು ಪರಾರಿಯಾಗಿದ್ದು ಅವರ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

Read More

ಬೆಂಗಳೂರು: ಖ್ಯಾತ ಹಿರಿಯ ಸಾಹಿತಿ ಜ್ಷಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. `ಕೆಂಪೇಗೌಡರ ವಿಚಾರದಲ್ಲಿ ಕನ್ನಡಿಗರ ಸ್ವಾಭಿಮಾನ ಕೆಣಕಿದರೆ ಕಲ್ಬುರ್ಗಿ ಅವರನ್ನು ಹತ್ಯೆ ಮಾಡಿದ ರೀತಿಯಲ್ಲಿ ನಿಮ್ಮನ್ನು ಹತ್ಯೆ ಮಾಡಲಾಗುತ್ತದೆ’ ಎಂಬ ಬೆದರಿಕೆಯ ಸಂದೇಶವನ್ನು ‘ಇನ್‍ಟಾಲರಂಟ್ ಚಂದ್ರ’ ಹೆಸರಿನ ನಕಲಿ ಟ್ವಿಟರ್ ಖಾತೆಯಿಂದ ಟ್ವಿಟ್ ಮಾಡಲಾಗಿದೆ. ಗಿರೀಶ್ ಕಾರ್ನಾಡ್ ಅವರು ಕೆಂಪೇಗೌಡರು ಸ್ವಾತಂತ್ರ ಸೇನಾನಿ ಅಲ್ಲ, ಹೀಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರ ಈ ಹೇಳಿಕೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ತಮ್ಮ ಹೇಳಿಕೆಗೆ ಕಾರ್ನಾಡ್ ಕ್ಷಮೆಯಾಚಿಸಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನಸಭಾ ಕ್ಷೇತ್ರ ತೊಕ್ಕೊಟ್ಟು ಒಳಪೇಟೆ ಇದರ 27ನೇ ಸ್ಥಾನೀಯ ಸಮಿತಿಯ ಪದಾಧಿಕಾರಿಗಳ ಆಯ್ಕೆ ತೊಕ್ಕೊಟ್ಟು ಒಳಪೇಟೆ ಸುವರ್ಣ ಕಾಂಪ್ಲೆಕ್ಸ್‍ನಲ್ಲಿ ಇತ್ತೀಚೆಗೆ ನಡೆಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಶರತ್ ತೊಕ್ಕೊಟ್ಟು ಹಾಗೂ ಉಪಾಧ್ಯಕ್ಷರಾಗಿ ದೀಪಕ್ ವಾಸುಕೀನಗರ ಮತ್ತು ಕುಮಾರಿ ಉಷಾರಾಣಿ, ಪ್ರ.ಕಾರ್ಯದರ್ಶಿಯಾಗಿ ಪ್ರವೀಣ್ ತೊಕ್ಕೊಟ್ಟು ಹಾಗೂ ಜೊತೆ ಕಾರ್ಯದರ್ಶಿಯಾಗಿ ಉಮೇಶ್ ತೊಕ್ಕೊಟ್ಟು ಮತ್ತು ಹರಿಶ್ಚಂದ್ರ ತೊಕ್ಕೊಟ್ಟು ಆಯ್ಕೆಯಾದರು. ಉಳ್ಳಾಲ ಗ್ರಾಮದ ಅಧ್ಯಕ್ಷ ಗಣೇಶ್ ಕಾಪಿಕಾಡ್, ಕ್ಷೇತ್ರ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಕ್ಷೇತ್ರ ಉಸ್ತುವಾರಿಗಳಾದ ರಾಘವ ಉಚ್ಚಿಲ್, ಮೋಹನ್ ರಾಜ್ ಕನೀರ್ ತೋಟ, ಕೌನ್ಸಿಲರ್ ಶಶಿಕಲಾ ಎ ಶೆಟ್ಟಿ, ಕುಮಾರಿ ಗೀತಾ ಬ್ಯಾ, ಯೋಗೀಶ್ ಹಾಗೂ ಗ್ರಾಮ ಕಾರ್ಯದರ್ಶಿ ಆನಂದ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಾವೂರು: ಅಕ್ರಮ, ಅವ್ಯಾಹತ ಮರಳುಗಾರಿಕೆ ವಿರುದ್ಧ ಪಾವೂರು ಗ್ರಾಮಸ್ಥರು ನಡೆಸುತ್ತಿದ್ದ ಹೋರಾಟ ಪರಿಗಣಿಸಿ ಗ್ರಾಮ ಪಂಚಾಯಿತಿ ಮರಳುಗಾರಿಕೆಗೆ ನಿಷೇಧ ಹೇರಿ ಎಚ್ಚರಿಕೆ ಫಲಕ ಅಳವಡಿಸಿದ್ದು ಇದೇ ಸಂದರ್ಭ ಮರಳು ಮಾಲೀಕರು ನದಿಯಲ್ಲಿ ಗುರುತಿಗಾಗಿ ಅಳವಡಿಸಿದ್ದ ಕಂಬಗಳನ್ನು ಗ್ರಾಮಸ್ಥರು ಕಿತ್ತೆಸಿದಿದ್ದಾರೆ. ಕಳೆದ ಹಲವು ವರ್ಷಗಳಿಂದ ಪಾವೂರು ಗ್ರಾಮ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆಯೇ ಇನೋಳಿ ನಾಟ್ರಕೋಡಿ, ಪಾವೂರು ಗಾಡಿಗದ್ದೆ ಮತ್ತು ಉಳಿಯದಲ್ಲಿ ಅವ್ಯಾವಹತವಾಗಿ ಮರಳುಗಾರಿಕೆ ನಡೆಯುತ್ತಿತ್ತು. ಇದರ ಪರಿಣಾಮವಾಗಿ ಸ್ಥಳೀಯ ಪ್ರದೇಶದಲ್ಲಿ ಉಪ್ಪು ನೀರು ಬಂದಿದ್ದು ಪಂಚಾಯಿತಿಯ ತೆರೆದ ಬಾವಿ ಮತ್ತು ಕೃಷಿ ಪ್ರದೇಶಕ್ಕೂ ಉಪ್ಪು ನೀರು ಬಂತು ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದರು. ಇನ್ನೊಂದೆಡೆ ಉಳಿಯ ಎನ್ನುವ ದ್ವೀಪವೇ ಅಪಾಯಕ್ಕೆ ಸಿಲುಕಿತ್ತು. ಇದರ ವಿರುದ್ಧ ಗ್ರಾಮಸ್ಥರು ಹೋರಾಟ ನಡೆಸಿದ್ದು ಪಾವೂರು ಗ್ರಾಮ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ನಿಷೇಧ ಹೇರಿದ್ದ ಜಿಲ್ಲಾಡಳಿತ ಪಂಚಾಯಿತಿಗೆ ಸಂಪೂರ್ಣ ಅಧಿಕಾರ ನೀಡಿತ್ತು. ಅಕ್ರಮ ಮರಳುಗಾರಿಕೆಯಿಂದ ಆಗುತ್ತಿದ್ದ ಅನಾಹುತದ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ನಿರಂತರ ವರದಿ ಪ್ರಕಟಿಸಲಾಗಿತ್ತು.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಬಂದ್ ಗಾಳಿಸುದ್ಧಿ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ನಾಳೆ ಯಾವುದೇ ಸಾರ್ವಜನಿಕ ಸಭೆಗಳನ್ನು ನಡೆಸದಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆದೇಶಿಸಿದ್ದಾರೆ. ಸಭೆಗಳಿಗೆ ಈಗಾಗಲೇ ಕೊಟ್ಟಿರುವ ಅನುಮತಿಗಳನ್ನು ಹಿಂಪಡೆಯಲಾಗುವುದು. ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದು, ಬಾರ್ ಹಾಗೂ ವೈನ್ ಶಾಪ್‍ಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಎಲ್ಲಾ ಸರಕಾರಿ ನೌಕರರು ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ತಾಲೂಕು ಕಚೇರಿಗಳಲ್ಲಿ ಕಾನೂನು ಕಾಪಾಡುವಂತೆ ಆಯಾಯ ತಹಶೀಲ್ದಾರರಿಗೆ ಆದೇಶಿಸಲಾಗಿದೆ. ಸಭೆಯಲ್ಲಿ ಪೊಲೀಸ್ ಕಮೀಷನರ್ ಎಸ್.ಮುರುಗನ್, ಎಸ್.ಪಿ ಶರಣಪ್ಪ, ಎಡಿಸಿ ಕುಮಾರ್, ಡಿಸಿಪಿ ಶಾಂತರಾಜು, ಎಂ.ಸಿ.ಸಿ ಕಮೀಷನರ್ ಡಾ.ಗೋಪಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಮಂಗಳೂರು: ಮಡಿಕೇರಿ ಗಲಭೆಯಲ್ಲಿ ವಿಶ್ವಹಿಂದು ಪರಿಷತ್ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ ಹತ್ಯೆ ಮತ್ತು ಟಿಪ್ಪು ಜಯಂತಿ ವಿರೋಧಿಸಿ ಬಜರಂಗದಳ ಕರೆ ನೀಡಿದ್ದ ರಾಜ್ಯ ಬಂದ್‍ನ್ನು ಹಿಂತೆಗೆದುಕೊಂಡಿದ್ದು, ಬದಲಾಗಿ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸುವುದಾಗಿ ಬಜರಂಗದಳ ತಿಳಿಸಿದೆ. ರಾಜ್ಯಾದ್ಯಂತ ಜಿಲ್ಲಾ ಹಾಗೂ ತಾಲೂಕು ಕಚೇರಿಗಳ ಎದುರುಗಡೆ ಪ್ರತಿಭಟನೆ ನಡೆಸಲು ವಿ.ಹಿಂ.ಪ ಮತ್ತು ಬಜರಂಗದಳದ ಮುಖಂಡರಾದ ಜಗದೀಶ್ ಶೇಣವ ಮತ್ತು ಶರಣ್ ಪಂಪ್ ವೆಲ್ ಕರೆ ನೀಡಿದ್ದಾರೆ. ಪ್ರತಿಭಟನಾ ರ್ಯಾಲಿ 11 ರಿಂದ 12ರವರೆಗೆ ನಡೆಯಲಿದ್ದು, ಈ ವೇಳೆ ರಸ್ತೆ ತಡೆಯನ್ನು ಹಮ್ಮಿಕೊಳ್ಳಲಾಗಿದೆ. ಕರಾವಳಿಯ ಎರಡು ಜಿಲ್ಲೆಗಳ ಸಂಘದ ಪ್ರಮುಖರು ಸಂಘ ನಿಕೇತನದಲ್ಲಿ ಸಭೆ ನಡೆಸಿ ಪ್ರತಿಭಟನೆಯ ಪೂರ್ವಸಿದ್ಧತೆಗಳನ್ನು ನಡೆಸಿದ್ದಾರೆ. ಪ್ರಸ್ತುತ ಸ್ಥಿತಿಗೆ ಸರಕಾರವೇ ನೇರ ಹೊಣೆ. ಅಲ್ಪಸಂಖ್ಯಾತರ ಓಲೈಕೆಯಲ್ಲಿರುವ ಮುಖ್ಯಮಂತ್ರಿಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಅಮಾಯಕ ಪ್ರಶಾಂತ್ ಪೂಜಾರಿ ಮತ್ತು ಕುಟ್ಟಪ್ಪ ಅವರ ಬಲಿದಾನವಾಗಿದೆ. ಕೂಡಲೇ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಬಜರಂಗದಳ ಮುಖಂಡ ಶರಣ್ ಪಂಪ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರ “ಸಂಸ್ಥಾಪನಾ ದಿನಾಚಾರಣೆಯನ್ನು ಸೈಕಲ್ ಜಾಥಾದ ಮುಖಾಂತರ ಶನಿವಾರ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಸೈಕಲ್ ಜಾಥಾವನ್ನು ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈಯವರು ಉದ್ಘಾಟಿಸಿ ಸಂಸ್ಥಾಪನಾ ದಿನಾಚರಣೆಯಾದ ಇಂದು ಸ್ಕೌಟ್ಸ್ ಚಳುವಳಿಯ ಮುಖ್ಯ ಧ್ಯೇಯವಾದ ಸೇವೆ, ನಿಷ್ಠೆ, ಒಗ್ಗಟ್ಟು ಮುಂತಾದ ಗಣಗಳನ್ನು ಪ್ರತಿಯೊಬ್ಬರು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಭವ್ಯ ಪ್ರಜೆಯಾಗಿ ಬಾಳಬೇಕು ಎಂದರು. ಸೈಕಲ್ ಜಾಥಾವು ಹರೇಕಳದಿಂದ ಹೊರಟು ನ್ಯೂಪಡ್ಪು, ಗ್ರಾಮಚಾವಡಿ ಮಾರ್ಗವಾಗಿ ಹೊರಟು ಪುನಃ ಹರೇಕಳದಲ್ಲಿ ಪೂರ್ಣಗೊಳಿಸಲಾಯಿತು. ಪ್ರಾಸ್ತಾವಿಕವಾಗಿ ದಿನದ ಮಹತ್ವದ ಬಗ್ಗೆ ಸ್ಕೌಟ್ ಮಾಸ್ಟರ್ ತ್ಯಾಗಂ ಹರೇಕಳ ಅವರು ಮಾಹಿತಿ ನೀಡಿದರು ಹಾಗೂ ಶಿಕ್ಷಕರುಗಳಾದ ಉಷಾಲತ, ರವಿಶಂಕರ್, ಕೃಷ್ಣಶಾಸ್ತ್ರಿ, ವಸಂತ್, ಮೋಹಿನಿ, ಕುಮುದ, ಶಿವಕುಮಾರ್, ನೂತನ, ಮೋಹನ್ ಹಾಗೂ ದುರ್ಗಾಪ್ರಸಾದ್ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿಗಳಾದ ದಳದ ಲೀಡರ್‍ಳಾದ ನಿತೀಶ್ ಕುಮಾರ್ ಹಾಗೂ ಲಕ್ಷ್ಮೀತ ರವರು ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಟಿಪ್ಪು ಜಯಂತಿ ಆಚರಣೆಯ ಹಿನ್ನೆಲೆ ಯಲ್ಲಿ ಪರ ವಿರೋಧ ಗುಂಪುಗಳ ನಡುವೆ ನಡೆದಿರುವ ಘರ್ಷಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡನ ಸಹಿತ ಇಬ್ಬರು ಮೃತ ಪಟ್ಟಿದ್ದು, ಈ ಘಟನೆಯನ್ನು ಖಂಡಿಸಿ ಬಜರಂಗದಳ ನವೆಂಬರ್ 13ರಂದು ಶುಕ್ರವಾರ ದಕ್ಷಿಣ ಕರ್ನಾಟಕ ಬಂದ್‍ಗೆ ಕರೆ ನೀಡಿದೆ. ರಾಜ್ಯದ ಬಹು ಸಂಖ್ಯಾತರ ಮತ್ತು ಕ್ರೈಸ್ತರ ವಿರೋಧದ ನಡುವೆಯೂ ರಾಜ್ಯ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿದ್ದು, ಇದು ಹಿಂದೂ ವಿರೋಧಿ ನೀತಿಯಾಗಿದೆ. ಸರಕಾರದ ಈ ರೀತಿಯ ವರ್ತನೆಯಿಂ ದಲೇ ರಾಜ್ಯದಲ್ಲಿ ಸಾಮಾಜಿಕ ಅಸಮಾನತೆ ಮತ್ತು ಕೋಮುವಾದ ಸೃಷ್ಠಿಯಾಗಿದ್ದು, ಇದನ್ನು ಖಂಡಿಸಿ ಬಂದ್ ನಡೆಯಲಿದೆ ಎಂದು ಬಜರಂಗದಳ ರಾಜ್ಯ ಸಂಚಾಲಕ ಶರಣ್ ಪಂಪ್‍ವೆಲ್ ತಿಳಿಸಿದ್ದಾರೆ. ಬುಧವಾರವೇ ಬಂದ್‍ಗೆ ಚಿಂತನೆ ನಡೆಸಲಾಗಿತ್ತಾದರೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮತ್ತು ರಾಜ್ಯದ ಬೇರೆ ಭಾಗದಲ್ಲಿ ಹಬ್ಬದ ವಾತಾವರಣ ಇರುವ ಕಾರಣದಿಂದ ಪ್ರತಿಭಟನೆ ಶುಕ್ರವಾರ ನಡೆಯಲಿದೆ ಎಂದು ಶರಣ್ ತಿಳಿಸಿದ್ದಾರೆ. ಶುಕ್ರವಾರ ತುರ್ತು ಅಗತ್ಯಗಳನ್ನು ಹೊರತು…

Read More

ಅಮೃತಸರ: ಭಾರತದ ಪ್ರಧಾನ ಮಂತ್ರಿ ಮೋದಿಯವರು ಸತತ ಎರಡನೇಯ ಭಾರಿಗೆ ದೀಪಾವಳಿ ಹಬ್ಬವನ್ನು ಭಾರತೀಯ ಯೋಧರ ಜೊತೆಗೆ ಬುಧವಾರ ಆಚರಿಸಿಕೊಂಡರು. ಈ ಸಂಧರ್ಭದಲ್ಲಿ ಮಾತಾನಾಡಿ ಮೋದಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿಕೊಳ್ಳಲು ಅವಕಾಶ ದೊರಕಿರುವುದು ನನಗೆ ನಿಜಕ್ಕೂ ಸಂತಸ ತಂದಿದೆ. ಭಾರತವನ್ನು ವಿಶ್ವ ಇಂದು ಗೌರವಯುತವಾಗಿ ಕಾಣಲು ನಮ್ಮ ಯೋಧರ ತ್ಯಾಗ ಬಲಿದಾನಗಳು ಮುಖ್ಯ ಕಾರಣ ಎಂದು ತಿಳಿಸಿದರು. ಪಂಜಾಬ್‍ನ ಅಮೃತಸರದ ಖಾಸದಲ್ಲಿರುವ ಡೊಗ್ರೈ ಯುದ್ದ ಸ್ಮಾರಕಕ್ಕೆ ಭೇಟಿ ನೀಡಿ ಸೈನಿಕರೊಂದಿಗೆ ದೀಪಾವಳಿಯನ್ನು ನರೇಂದ್ರಮೋದಿ ಆಚರಿಸಿಕೊಂಡರು.

Read More

ಮಡಿಕೇರಿ: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಫೇಸ್‍ಬುಕ್‍ನಲ್ಲಿ ಅವಹೇಳನಕಾರಿಯಾಗಿ ನಿಂದಿಸಿದ್ದು, ಕೊಲೆ ಬೆದರಿಕೆ ಹಾಕಲಾಗಿದೆ. ಈ ಕುರಿತು ಸಂಸದರು ಮೈಸೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಒಂದು ಸಂಘಟನೆಯ ಫೇಸ್‍ಬುಕ್ ಖಾತೆಯಿಂದ ಜೀವಬೆದರಿಕೆ ಹಾಕಲಾಗಿದೆ. ಮಡಿಕೇರಿಯಲ್ಲಿ ಮಂಗಳವಾರ ಮೃತಪಟ್ಟ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ ಅವರ ಮೃತದೇಹದ ಫೋಟೊ ಜೊತೆಗೆ ಪ್ರತಾಪ್ ಸಿಂಹ ಅವರ ಫೋಟೊ ವಿಟ್ಟು ಅವಹೇಳನಕಾರಿಯಾಗಿ ನಿಂದನೆ ಮಾಡಲಾಗಿದೆ. `ಕುಟ್ಟಪ್ಪ ಅವರಂತೆಯೇ ನಿನಗೂ ಸಾವು ಬರುತ್ತದೆ ಎಂದು ಬೆದರಿಕೆ ಹಾಕಲಾಗಿದೆ’ ಎಂದು ಪ್ರತಾಪ್ ಸಿಂಹ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜೀವ ಬೆದರಿಕೆ ಕುರಿತು ವಿಜಯನಗರ ಪೊಲೀಸರಿಗೆ ಅವರು ದೂರು ನೀಡಿದ್ದಾರೆ ಹಾಗೂ ಮೈಸೂರು ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೂ ಈ ಕುರಿತು ಮಾಹಿತಿ ನೀಡಿದ್ದಾರೆ.

Read More