Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಭೋಪಾಲ್: ಭಿಕ್ಷೆ ಬೇಡುತ್ತಿದ್ದ ಬಾಲಕನಿಗೆ ಮಧ್ಯ ಪ್ರದೇಶದ ಪಶುಸಂಗೋಪನೆ ಸಚಿವೆ ಕುಸುಮ್ ಮೆಹೆದೆಲೆ ಕಾಲಿನಿಂದ ಒದ್ದಿರುವ ಘಟನೆ ನಡೆದಿದೆ. ಪನ್ನಾ ಜಿಲ್ಲೆಯಲ್ಲಿ ೬೦ನೇ ರಾಜ್ಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸ್ವಚ್ಛ ಅಭಿಯಾನದಲ್ಲಿ ಭಾಗವಹಿಸಿದ್ದ ಸಚಿವೆ ಕಾರ್ಯಕ್ರಮದ ಮುಗಿದ ಬಳಿಕ ತನ್ನ ಕಾರಿನ ಬಳಿ ಬರುತ್ತಿದ್ದ ಸಂದರ್ಭದಲ್ಲಿ ೧೦ವರ್ಷ ಪ್ರಾಯದ ಬಾಲಕ ಭಿಕ್ಷೆ ನೀಡುವುದಾಗಿ ಕೇಳಿದ್ದಾನೆ ಈ ವೇಳೆ ಸಚಿವೆ ಬಾಲಕನನ್ನು ಕಾಲಿನಿಂದ ಒದ್ದು ತನ್ನ ಕಾರಿನಲ್ಲಿ ಕುಳಿತುಕೊಂಡು ಹೋದ ದೃಶ್ಯ ವೀಡಿಯೋ ಒಂದರಲ್ಲಿ ಬಹಿರಂಗವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಸಚಿವೆಯ ಈ ವರ್ತನೆಗೆ ದೇಶದ್ಯಾಂತ ಆಕ್ರೋಶ ವ್ಯಕ್ತವಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬೆಂಗಳೂರು: ಚಾಕು ಹಿಡಿದುಕೊಂಡು ಮುಖ್ಯಮಂತ್ರಿ ಮನೆಗೆ ಬಂದಿದ್ದ ವ್ಯಕ್ತಿಯೋರ್ವನನ್ನು ಸಿಎಂ ನಿವಾಸದ ಭದ್ರತಾ ಸಿಬ್ಬಂದಿಗಳು ಬಂಧಿಸಿರುವ ಘಟನೆ ಸೋಮವಾರ ನಡೆದಿದೆ. ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬ, ಸಿಎಂ ನಿವಾಸ ಪ್ರವೇಶಿಸಲು ಯತ್ನಿಸುತ್ತಿದ್ದು, ಈ ಸಂದರ್ಭದಲ್ಲಿ ಆತನು ತನ್ನ ಜೇಬಿನಲ್ಲಿ ಚೂರಿಯನ್ನು ಇರಿಸಿಕೊಂಡಿದ್ದನ್ನು ಗಮನಿಸಿದ ಸಿಬ್ಬಂದಿಗಳು ಕೂಡಲೇ ಆತನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಹೈಗ್ರೌಂಡ್ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈತನು ಯಾವ ಉದ್ದೇಶದಿಂದ ಚೂರಿಯನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿ ಮನೆಯನ್ನು ಪ್ರವೇಶಿಸಲು ಯತ್ನಿಸಿದ್ದ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ : ವ್ಯಕ್ತಿಗಿಂತ ಪಕ್ಷ ಶ್ರೇಷ್ಠ, ಪಕ್ಷಕ್ಕಿಂತ ದೇಶ ಶ್ರೇಷ್ಠ , ಪಕ್ಷದ ಸದಸ್ಯನಾಗಿ, ಸದಸ್ಯ ಕಾರ್ಯಕರ್ತನಾಗಿ, ಕಾರ್ಯಕರ್ತ ಆದರ್ಶ ನಾಯಕನಾಗಿ ರೂಪುಗೊಳ್ಳುವುದು ಪ್ರಶಿಕ್ಷಣ ವರ್ಗದ ಉದ್ದೇಶ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು. ಅವರು ಭಾರತೀಯ ಜನತಾ ಪಕ್ಷದ ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಶಿಕ್ಷಣ ವರ್ಗವನ್ನು ತಲಪಾಡಿ ಶಾರದಾ ವಿದ್ಯಾನಿಕೇತನದಲ್ಲಿ ಭಾನುವಾರ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಮಾಜಿ ಸದಸ್ಯೆ ಲಲಿತಾ ಸುಂದರ್ ವಹಿಸಿದ್ದರು. ಕ್ಷೇತ್ರದ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ದ.ಕ.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಕುಂಪಲ ಉಪಸ್ಧಿತರಿದ್ದರು. ಹರೀಶ್ ಅಂಬ್ಲಮೊಗರು ಹಾಗೂ ಯಶವಂತ್ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು. ಪ್ರವೀಣ್ ಸುಜೀರ್ ಸ್ವಾಗತಿಸಿದರು. ಹರಿಯಪ್ಪ ಸಾಲ್ಯಾನ್ ವಂದಿಸಿದರು

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು: ಕೋಟೆಕಾರು ಗ್ರಾಮ ಪಂಚಾಯತ್ ಪ್ರಥಮವಾಗಿ ತ್ಯಾಜ್ಯಮುಕ್ತ ಗ್ರಾಮ ಪಂಚಾಯತ್ ಆಗಬೇಕು. ತ್ಯಾಜ್ಯ ಮುಕ್ತ ಗ್ರಾಮ ಪಂಚಾಯತ್ ಆಗಿ ರೂಪಿಸಬೇಕಾದರೆ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮಸ್ಥರ ಸಹಕಾರ ಇದ್ದರೆ ತ್ಯಾಜ್ಯಮುಕ್ತ ಪಟ್ಟಣ ಪಂಚಾಯತ್ ಆಗುತ್ತದೆ. ಅದೇ ರೀತಿ ವ್ಯಾಜ್ಯ ಮುಕ್ತ ಗ್ರಾಮವಾಗಿ, ರುಣ ಮುಕ್ತ ಗ್ರಾಮ ಪಂಚಾಯತ್ ಆಗಲು ಎಲ್ಲರೂ ಪಣ ತೊಡಬೇಕು ಮಾತ್ರವಲ್ಲದೆ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಕೋಟೆಕಾರು ಬೀರಿಯ ಯುವಕ ಮಂಡಲ ವಠಾರದಲ್ಲಿ ಕೋಟೆಕಾರು ಗ್ರಾಮ ಪಂಚಾಯತ್ ಅನ್ನು ಕೋಟೆಕಾರು ಪಟ್ಟಣ ಪಂಚಾಯತ್ ಮೇಲ್ದರ್ಜೆಗೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಥಳೀಯ ಶಾಸಕರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರಿಗೆ ಕೋಟೆಕಾರ್ ಪಟ್ಣಣ ಪಂಚಾಯತ್‍ನ ನಾಗರಿಕ ಸಮಿತಿ ಕೋಟೆಕಾರು ಇದರ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕೋಟೆಕಾರು ಗ್ರಾಮವನ್ನು ಪಟ್ಟಣ ಪಂಚಾಯತ್…

Read More

ಬೀಜಿಂಗ್: ಸುಮಾರು 35 ವರ್ಷಗಳ ಬಳಿಕ `ದಂಪತಿಗೆ ಒಂದೆ ಮಗು` ಅನ್ನೋ ವಿವಾದಾತ್ಮಕ ನೀತಿಯನ್ನು ಚೀನಾ ಸರಕಾರ ರದ್ದುಗೊಳಿಸಿದೆ. ದಂಪತಿಗಳಿಬ್ಬರು ಎರಡು ಮಗುವನ್ನು ಹೊಂದಲು ಚೀನಾದ ಕಮ್ಯೂನಿಷ್ಟ್ ಸರಕಾರ ಅವಕಾಶ ಮಾಡಿಕೊಟ್ಟಿದೆ. ಜನಸಂಖ್ಯೆ ಸಮತೋಲನ ಹಾಗೂ ವೃದ್ಧರ ಸಂಖ್ಯೆ ಏರಿಕೆ ಸಮಸ್ಯೆಯನ್ನು ನಿಭಾಯಿಸುವ ಸಲುವಾಗಿ ಈ ನೀತಿಯನ್ನು ಹಿಂಪಡೆಯಲಾಗಿದೆ. 1979ರಲ್ಲಿ ದಂಪತಿಗೆ ಒಂದೆ ಮಗು ಎಂಬ ನೀತಿಯನ್ನು ಚೀನಾ ಸರಕಾರ ಜಾರಿಗೊಳಿಸಿತ್ತು. ಕಳೆದ ಮೂರು ದಶಕಗಳಿಂದ ಸರಕಾರದ ಈ ನೀತಿಯನ್ನು ಅಲ್ಲಿನ ಜನತೆ ಕಡ್ಡಾಯವಾಗಿ ಪಾಲಿಸಿಕೊಂಡು ಬರಲಾಗುತ್ತಿತ್ತು. ಎರಡು ಮಗುವನ್ನು ಪಡೆಯುವ ದಂಪತಿಗೆ ಭಾರಿ ಮೊತ್ತದ ದಂಡ ಹಾಗೂ ಉದ್ಯೋಗದಿಂದ ತೆಗೆಯುವ ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು. ಸರಕಾರದ ಈ ನೀತಿಯಿಂದ ಎಲ್ಲರೂ ಕೂಡ ಒಂದೇ ಮಗುವನ್ನು ಪಡೆಯುತ್ತಿದ್ದು, ಸುಮಾರು 40ಕೋಟಿ ಮಗುವಿನ ಜನನಕ್ಕೆ ಕಡಿವಾಣ ಬಿದ್ದಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಚೀನಾದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳ, ಉದ್ಯೋಗಕ್ಕೆ ಯುವಕರ ಸಂಖ್ಯೆ ಕಡಿಮೆಯಾದುದರ ಪರಿಣಾಮ ಅಭಿವೃದ್ಧಿ ದರ ಇಳಿಕೆಗೆ ಕಾರಣವಾಗಿತ್ತು. ಸರಕಾರದ ಈ ನೀತಿಯ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು:ತೊಕ್ಕೊಟ್ಟು ಜಂಕ್ಷನ್ ಬಳಿ ಗುರುವಾರ ಟಿಪ್ಪರ್ ಲಾರಿಯೊಂದಕ್ಕೆ ಆ್ಯಕ್ಟಿವಾ ಸ್ಕೂಟರ್ ಸಿಲುಕಿಕೊಂಡು ಸ್ಕೂಟರ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಸಂಶೋಧನಗೆಳಲ್ಲಿ ಬಲವಾದ ವೈಜ್ಞಾನಿಕ ಆಧಾರಗಳ ಅಭಿವೃದ್ಧಿ ಜತೆಗೆ ಮೂಲಭೂತ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ಲಂಡನ್ನಿನ ಯುನೈಟೆಡ್ ಕಿಂಗ್ಡಂ ನ ವೆಲ್‍ಕಂ ಟ್ರಸ್ಟ್‍ನ ಹಿರಿಯ ಸಲಹೆಗಾರ ಡಾ.ಶಿರ್ಷೇಂಧು ಮುಖರ್ಜಿ ಹೇಳಿದ್ದಾರೆ. ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್. ಮೆಡಿಕಲ್ ಅಕಾಡೆಮಿ ನೇತೃತ್ವದಲ್ಲಿ ನಿಟ್ಟೆ ವಿ.ವಿ.ಯ ಕೇಂದ್ರ ಸಂಶೋಧನಾ ಪ್ರಯೋಗಾಲಯ ಮತ್ತು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ` ವೈದ್ಯಕೀಯ ಸಂಶೋಧನಾ ವಿಧಾನ’ ಕುರಿತ ರಾಷ್ಟ್ರೀಯ ಮಟ್ಟದ ಎರಡು ದಿನಗಳ ಕಾರ್ಯಗಾರವನ್ನು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಉದ್ಘಾಟಿಸಿ ಮಾತನಾಡಿದರು. ವಿಶ್ವದಲ್ಲಿ ಎರಡನೇ ಅತಿ ದೊಡ್ಡ ಚಾರಿಟಿಯಾಗಿ ವೆಲ್‍ಕಂ ಟ್ರಸ್ಟ್ ಮಾನವ ಜೀವನದ ಸಂಪತ್ತು ಕುರಿತು ಕೆಲಸಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ. ಸಂಶೋಧನೆಗಳಲ್ಲಿ ಎಲ್ಲರೂ ಒಂದೇ ವಿಷಯದಲ್ಲಿ ಮುಂದುವರಿದಲ್ಲಿ ಪರಿಣಾಮಕಾರಿಯಾಗದು. ಒಂದೇ ವಿಷಯವನ್ನು ವಿಭಿನ್ನವಾಗಿ ಯೋಚಿಸಿ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಲ್ಲಿ ಯಶಸ್ವಿಯಾಗಬಹುದು ಎಂದರು. ಕ್ಷೇಮ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ತಜ್ಞೆ ಡಾ.ವಿಜಯಾ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2015ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಹೊಸ್ತೋಟ ಮಂಜುನಾಥ ಭಾಗವತ, ಮಾರ್ಗೋಳಿ ಗೋವಿಂದ ಶೇರೆಗಾರ, ಸಂಪಾಜೆ ಶೀನಪ್ಪ ರೈ ಮತ್ತು ಲೀಲಾವತಿ ಬೈಪಾಡಿತ್ತಾಯ ಆಯ್ಕೆಯಾಗಿದ್ದಾರೆ. ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಡಾ.ಮೋಹನ ಕುಂಟಾರ್ ಅವರ ಯಕ್ಷಗಾನ ಸ್ಥಿತ್ಯಂತರ ಕೃತಿಯು ಆಯ್ಕೆಯಾಗಿದೆ. ಯಕ್ಷಮಂಗಳ ಪ್ರಶಸ್ತಿಯು ರೂ.25,000/- ನಗದು, ಪ್ರಶಸ್ತಿಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನು ಒಳಗೊಂಡಿದ್ದು ಕೃತಿ ಪ್ರಶಸ್ತಿಯು ರೂ.10,000/-ನಗದು, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಗಳನ್ನು ಒಳಗೊಂಡಿದೆ. ಹಿರಿಯ ವಿದ್ವಾಂಸ ಪ್ರೊ.ಎಂ.ಎಲ್.ಸಾಮಗ ಅವರ ನೇತೃತ್ವದ ಆಯ್ಕೆ ಸಮಿತಿಯು ಯಕ್ಷಗಾನ ವಿದ್ವಾಂಸ ಪ್ರೊ.ಪಾದೆಕಲ್ಲು ವಿಷ್ಣುಭಟ್ಟ, ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಕೆ.ಚಿನ್ನಪ್ಪ ಗೌಡ ಅವರನ್ನು ಒಳಗೊಂಡಿದ್ದು ಈ ಹೆಸರುಗಳನ್ನು ಸರ್ವಾನುಮತದಿಂದ ಶಿಫಾರಸ್ಸು ಮಾಡಿದೆ. ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನ ಅಧ್ಯಯನ, ಸಂಶೋಧನೆ ಮತ್ತು ಪ್ರಸಂಗ ರಚನೆಯ ಮೂಲಕ ಯಕ್ಷಗಾನಕ್ಕೆ ಮಹತ್ವದ ಕೊಡುಗೆ ನೀಡಿದ ವಿದ್ವಾಂಸರಾಗಿದ್ದಾರೆ. ಮೂರು ದಶಕಗಳಿಗೂ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಭಾನುವಾರ ತಡರಾತ್ರಿ ನಡೆದ ವಿಕ್ಕಿ ಬೋಳಾರ್ ಕೊಲೆ ಪ್ರಕರಣಕ್ಕೆ ಸಂಬಂ„ಸಿದಂತೆ ಪ್ರಮುಖ ಅರೋಪಿ ಸೈಕೋ ವಿಕ್ಕಿ ಯಾನೆ ರವಿಚಂದ್ರ ಪೂಜಾರಿ ಸೇರಿದಂತೆ ಐವರನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸಾಂದರ್ಭಿಕ ಚಿತ್ರ ಕೋಡಿಕಲ್ ನಿವಾಸಿ ವಿಕ್ರಮ್ ಯಾನೆ ವಿಕ್ಕಿ ಬೋಳಾರ್‍ನನ್ನು ಸೈಕೋ ವಿಕ್ಕಿ ನೇತೃತ್ವದ ತಂಡ ತಲವಾರಿನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿತ್ತು. ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೋ ಕಾರನ್ನು ಎಲಿಯಾರ್ ಬಳಿ ತೊರೆದು ಹೋಗಿದ್ದರು. ಆರೋಪಿಗಳ ಪತ್ತೆಗಾಗಿ ಉಳ್ಳಾಲ ಪೊಲೀಸರು ಸೇರಿದಂತೆ ಸಿಸಿಬಿ ಪೊಲೀಸರುಬಲೆ ಬೀಸಿದ್ದ ಖಚಿತ ಮಾಹಿತಿ ಮೇರೆಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಐವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಉಳ್ಳಾಲ ಪೊಲೀಸ್  ಠಾಣೆಯಲ್ಲಿ ತನಿಖೆ ನಡೆಯುತ್ತಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಜಾತಿ ವೈಷಮ್ಯದ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಗಲಾಟೆ , ಗಲಭೆಗಳಿಗೆ ಹೆಸರು ಕೆಡಿಸುತ್ತಿದ್ದ ಉಳ್ಳಾಲದಲ್ಲಿ ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಮಂಗಳವಾರ ನಡೆದ ಪ್ರತಿಭಟನೆ ಸಾಮರಸ್ಯದ ವಾತಾವರಣವನ್ನು ಸೃಷ್ಟಿಸಿ ಇತಿಹಾಸವನ್ನು ಮರುಕಳಿಸಿತು. ನೇತ್ರಾವತಿ ಸೇತುವೆ ಇದಕ್ಕೆ ಸಾಕ್ಷಿಯಾಯಿತು. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ದೊರೆತ ಹಲವು ವರ್ಷಗಳವರೆಗೂ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರು ಜತೆಯಾಗಿಯೇ ವಾಸಿಸುತ್ತಿದ್ದ ಉಳ್ಳಾಲ ಪ್ರದೇಶ ಕ್ರಮೇಣ ರಾಜಕೀಯ ಪಕ್ಷಗಳು ಬಲವಾಗುತ್ತಿದ್ದಂತೆ ಸಾಮರಸ್ಯದ ವಾತಾವರಣವನ್ನು ಕೆಡಿಸಿತು. ಇದೀಗ ನೇತ್ರವಾತಿ ನದಿ ಹೆಸರಿನಲ್ಲಿ ನಡೆಯುತ್ತಿರುವ ಕ್ರಾಂತಿ ಜಾತಿ ವೈಷಮ್ಯದ ಕ್ರಾಂತಿಗೆ ಅಂತ್ಯದ ಸಂದೇಶ ಹಾಕುವುದರ ಮೂಲಕ ಇತಿಹಾಸವನ್ನು ಮರುಕಳಿಸಿದೆ ಅನ್ನುವ ಅಭಿಪ್ರಾಯ ಸಾರ್ವಜನಿಕ ವಲಯಗಳಿಂದ ಕೇಳಿಬಂದಿದೆ. ಉಳ್ಳಾಲ ವಲಯ ನೇತ್ರಾವತಿ ಸಂರಕ್ಷಣಾ ಸಮಿತಿ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಎತ್ತಿನಹೊಳೆ ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಹಮ್ಮಿಕೊಂಡ `ನೇತ್ರಾವತಿ ಸಂರಕ್ಷಣೆಗಾಗಿ ಸರ್ವಧರ್ಮ ಪ್ರಾರ್ಥನ ಕಾರ್ಯಕ್ರಮ’ದಲ್ಲಿ ಸಾವಿರಕ್ಕೂ ಮಿಕ್ಕಿ ಎಲ್ಲಾ ಜಾತಿಯ ಜನರು…

Read More