ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ತಲಪಾಡಿ ಟೋಲ್ ಗೇಟ್ ವಿರೋಧಿಸಿ ಕರ್ನಾಟಕ ಹಾಗೂ ಕೇರಳದ ವಿವಿಧ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಬಂದ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ತುರ್ತು ಸಭೆಯಿಂದಾಗಿ ರದ್ದುಗೊಂಡಿದ್ದು, ಸಾಂಕೇತಿಕ ಪ್ರತಿಭಟನೆ ಮಾತ್ರ ನಡೆಯುವ ಮೂಲಕ ಜನಜೀವನ, ಬಸ್ಸು ಸಂಚಾರ ಸಹಜ ಸ್ಥಿತಿಯಲ್ಲಿತ್ತು. ಮೂಲಭೂತ ಸೌಕರ್ಯಗಳ ಆಗ್ರಹಿಸಿ, ಸಿಬ್ಬಂದಿ ದೌರ್ಜನ್ಯ ವಿರೋಧಿಸಿ ಹಾಗೂ ಸ್ಥಳೀಯ ವಾಹನಗಳನ್ನು ಸುಂಕ ರಹಿತವಾಗಿ ಟೋಲ್ ಪ್ಲಾಝಾದಲ್ಲಿ ಬಿಡುವಂತೆ ಬೇಡಿಕೆಗಳನ್ನು ಮುಂದಿಟ್ಟು ಗಡಿನಾಡು ರಕ್ಷಣಾ ವೇದಿಕೆ, ಕನ್ನಡ ರಕ್ಷಣಾ ವೇದಿಕೆ, ಸ್ಥಳೀಯ ಸಂಘಟನೆಗಳು ಹಾಗೂ ಕಾಂಗ್ರೆಸ್ ಮುಖಂಡರು ತಲಪಾಡಿಯಿಂದ ತೊಕ್ಕೊಟ್ಟುವರೆಗೆ ರಾ.ಹೆ.66 ಬಂದ್ ಗೆ ಕರೆ ನೀಡಿದ್ದರು. ಈ ಬಗ್ಗೆ ಪೊಲೀಸ್ ಇಲಾಖೆ ಶುಕ್ರವಾರ ತಡರಾತ್ರಿಯೇ ಹೋರಾಟಗಾರರನ್ನು ಮತ್ತು ನವಯುಗ ಕಂಪೆನಿಯ ಅಧಿಕಾರಿಗಳನ್ನು ಉಳ್ಳಾಲ ಪೊಲೀಸ್ ಠಾಣೆಗೆ ಕರೆಸಿ ಸಭೆ ನಡೆಸಿತ್ತು. ಅಲ್ಲದೆ ಬಂದ್ ನಡೆಸದಂತೆ ಪೊಲೀಸರು ಹೋರಾಟಗಾರರಿಗೆ ಸೂಚಿಸಿದ್ದರು. ಆದರೆ ಹೋರಾಟಗಾರರು ಬೇಡಿಕೆ ಈಡೇರದಿದ್ದಲ್ಲಿ ಬಂದ್ ಆಚರಿಸಿಯೇ ಸಿದ್ಧ ಎಂದು ಪಟ್ಟು…
Author: UllalaVani
ತೊಕ್ಕೊಟ್ಟು: ಮೂಲಸೌಕರ್ಯವನ್ನು ಒದಗಿಸದೆ ಟೋಲ್ ಸಂಗ್ರಹಿಸುವ ನವಯುಗ್ ಕಂಪೆನಿ ವಿರುದ್ಧ ಪಕ್ಷಾತೀತವಾಗಿ ಹಲವು ಸಂಘಟನೆಗಳು ಸೇರಿಕೊಂಡು ಫೆ.11 ರಂದು ತೊಕ್ಕೊಟ್ಟುವಿನಿಂದ ತಲಪಾಡಿವರೆಗೆ ರಸ್ತೆ ತಡೆ ಮತ್ತು ಬಸ್ ಬಂದ್ ನಡೆಸಲಾಗುವುದು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಅವರು ತೊಕ್ಕೊಟ್ಟುವಿನಲ್ಲಿ ಇಂದು ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ತಲಪಾಡಿಯಲಿ ಈಗಾಗಲೇ ಟೋಲ್ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರ ಪರವಾಗಿ ಜನರ ಸಮಸ್ಯೆಗೆ ಸ್ಪಂಧಿಸುವ ನಿಟ್ಟಿನಲ್ಲಿ ಬಂದ್ ಕರೆಯಲಾಗಿದೆ. ಜಿಲ್ಲಾಧಿಕಾರಿ, ನವಯುಗ್ , ಹೆದ್ದಾರಿ ಪ್ರಾಧಿಕಾರದ ಸಮ್ಮುಖದಲ್ಲಿ ಸಭೆಯ ನಡೆಸಲಾಗಿದೆ. ಆದರೆ ಯಾವುದೇ ರೀತಿಯ ಸ್ಪಂಧನೆ ದೊರೆತಿಲ್ಲ. ಇದು ಸಂಘಟನೆಗಳಿಗೆ ಸಮಾಧಾನವಾಗಿದೆ. ಪಂಪ್ ವೆಲ್ ಮತ್ತು ತೊಕ್ಕೊಟ್ಟುವಿನ ಫ್ಲೈಒವರ್ ಕಾಮಗಾರಿ, ಸರ್ವಿಸ್ ರಸ್ತೆಯೂ ಆಗಿಲ್ಲ. ಸಾರ್ವಜನಿಕರಿಗೆ ವಂಚಿಸುವ ನಿಟ್ಟಿನಲ್ಲಿ ಟೋಲ್ ಆರಂಭಿಸಲಾಗಿದೆ. ಕೇಂದ್ರ ಸರಕಾರದ ಅಧೀನದಲ್ಲಿರುವುದರಿಂದ ಸರಕಾರ ಅನುಮತಿ ನೀಡಿರುವುದು ಖಂಡನೀಯ. ಸಂಸದರು ಇದಕ್ಕೆ ಕೂಡಲೇ ಸ್ಪಂಧಿಸಬೇಕಿದೆ. ನಾಳೆ ನಡೆಯುವ ಬಂದ್ ಗೆ ಟೂರಿಸ್ಟ್ ವಾಹನಗಳ, ರಿಕ್ಷಾ, ಖಾಸಗಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ಕೇರಳ -ಕರ್ನಾಟಕ ಗಡಿಪ್ರದೇಶ ತಲಪಾಡಿಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಎರಡನೇ ದಿನಕ್ಕೆ ಪ್ರತಿಭಟನೆ ಮುಂದುವರಿದಿದ್ದು, ಕೇರಳ ಮತ್ತು ಕರ್ನಾಟಕದ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಿಸಿತ್ತು. ಪೊಲೀಸರು ಲಘು ಲಾಠಿ ಚಾರ್ಜ್ ಮೂಲಕ ಪ್ರತಿಭಟನಾಕಾರರನ್ನು ಚದುರಿಸಿದರೂ ಜಗ್ಗದ ಉದ್ರಿಕ್ತರು ನವಯುಗ ಕಂಪೆನಿಯ ತಾತ್ಕಾಲಿಕ ಭರವಸೆಯಿಂದ ಪ್ರತಿಭಟನೆಯಿಂದ ಹಿಂದೆ ಸರಿದರು. ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ, ಸ್ಥಳೀಯರಿಂದ ಟೋಲ್ ಪಡೆಯದಂತೆ , ರಾ.ಹೆ.66ರ ಕಾಮಗಾರಿ ಪೂರ್ಣಗೊಳಿಸಿಯೇ ಟೋಲ್ ಪಡೆಯುವಂತೆ ಆಗ್ರಹಿಸಿ ಬುಧವಾರ ಗಡಿನಾಡು ರಕ್ಷಣಾ ವೇದಿಕೆ, ಕಾಂಗ್ರೆಸ್‍ನ ಮಂಜೇಶ್ವರ ಮತ್ತು ತಲಪಾಡಿಯ ಮುಖಂಡರು , ರಿಕ್ಷಾ, ಬಸ್ಸು ಚಾಲಕ ಮಾಲಕರು ಪ್ರತಿಭಟನೆ ನಡೆಸಿದ್ದರು. 12 ಮಂದಿಯ ಬಂಧನದಿಂದ ಪ್ರತಿಭಟನೆ ಅಲ್ಲಿಗೆ ನಿಂತಿತ್ತು. ಗುರುವಾರ ಮತ್ತೆ ಗಡಿನಾಡು ರಕ್ಷಣಾ ವೇದಿಕೆ, ಮಂಜೇಶ್ವರದ ಯುಡಿಎಫ್, ಎಸ್ ಡಿಪಿಐನ ಮಂಜೇಶ್ವರ ಮತ್ತು ಉಳ್ಳಾಲ ಬ್ಲಾಕ್ ಸೇರಿದಂತೆ ಗ್ರಾಮಸ್ಥರು ಟೋಲ್ ನ ಎರಡು ಕಡೆಗಳಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಬಿಜೆಪಿ ಸದಸ್ಯರನ್ನೇ ಗುರುತಿಸಿ ಏಕಾಏಕಿ ಅವರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದು ಆರೋಪಿಸಿ ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಕಾರ್ಯಕರ್ತರು ಉಳ್ಳಾಲ ನಗರಸಭೆಯ ಕಂದಾಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಉಳ್ಳಾಲ ನಗರಸಭೆಯಲ್ಲಿ ಗುರುವಾರ ಸಂಜೆ ವೇಳೆ ನಡೆದಿದೆ. ಉಳ್ಳಾಲ ನಗರಸಭೆಯ ಎರಡು ವಾರ್ಡುಗಳಿಗೆ ಫೆ.11 ರಂದು ಮತದಾನ ಘೋಷಿಸಲಾಗಿದೆ. ಈ ನಡುವೆ 2011ರಲ್ಲಿ ಇದ್ದಂತಹ ಮತದಾರರ ಪಟ್ಟಿಯನ್ನು ಚುನಾವಣೆಗೆ ಎರಡು ದಿನಗಳಿರುವ ಇರುವ ಸಂದರ್ಭದಲ್ಲೇ ಏಕಾಏಕಿ ವಿವಿಧ ಕಾರಣಗಳನ್ನು ಒಡ್ಡಿ ಅಳಿಸಲಾಗಿದೆ. 24 ನೇ ವಾರ್ಡಿನಲ್ಲಿ 176 ಮತ್ತು 26 ನೇ ವಾರ್ಡಿನಲ್ಲಿ 167 ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ಇವರಲ್ಲಿ ಬಹುತೇಕರು ಬಿಜೆಪಿ ಪರ ಮತದಾರರು ಅನ್ನುವ ಆರೋಪ ಬಿಜೆಪಿ ಕಾರ್ಯಕರ್ತರದ್ದಾಗಿದೆ. ಇದನ್ನು ಪ್ರಶ್ನಿಸಿ ಉಳ್ಳಾಲ ನಗರಸಭೆಯ ಕಂದಾಯ ಅಧಿಕಾರಿ ರಾಮಯ್ಯ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು. ನಿರಂತರ ಎರಡು ಗಂಟೆಯ ಕಾಲ ಅವರ ಕಚೇರಿಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ,…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ತಲಪಾಡಿ: ಕೇರಳ-ಕರ್ನಾಟಕ ಗಡಿಪ್ರದೇಶವಾದ ತಲಪಾಡಿ ಟೋಲ್ ಸಂಗ್ರಹ ಬುಧವಾರ ಬೆಳಗ್ಗಿನಿಂದ ಆರಂಭವಾಗಿದ್ದು, ಇದನ್ನು ಖಂಡಿಸಿ ಕಾಂಗ್ರೆಸ್ ಸ್ಥಳೀಯ ಮುಖಂಡರು, ಗಡಿನಾಡು ರಕ್ಷಣಾ ವೇದಿಕೆ , ಖಾಸಗಿ ಬಸ್ ಮಾಲೀಕರು, ರಿಕ್ಷಾ ಚಾಲಕರು ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಟೋಲ್ ಸಂಗ್ರಹಿಸದಂತೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಬಳಿಕ 12 ಮಂದಿಯ ಬಂಧನದ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿದೆ. ಸರ್ವಿಸ್ ರಸ್ತೆ, ಸ್ಥಳೀಯರಿಗೆ ಉದ್ಯೋಗ, ಸ್ತಳೀಯರಿಗೆ ಟೋಲ್ ಪಡೆಯದಂತೆ , ಕಾಮಗಾರಿ ಪೂರ್ಣಗೊಳಿಸದೆ ಟೋಲ್‍ಗೇಟ್ ಆರಂಭಿಸುವುದರ ವಿರುದ್ಧ ಹಿಂದೆ ಕಾಂಗ್ರೆಸ್ ನೇತೃತ್ವದಲ್ಲಿ ಎರಡು ಬಾರಿ ಪ್ರತಿಭಟನೆ ನಡೆದಿತ್ತು. ಆದರೂ ಬೇಡಿಕೆಗಳನ್ನು ಈಡೇರಿಸದೆ ನವಯುಗ ಕಂಪೆನಿ ಟೋಲ್ ಸಂಗ್ರಹವನ್ನು ಬುಧವಾರದಿಂದ ಆರಂಭಿಸಿದೆ. ಇದನ್ನು ಖಂಡಿಸಿದ ಕಾಂಗ್ರೆಸ್ಸಿನ ಸ್ಥಳೀಯ ಮುಖಂಡರು, ಗಡಿನಾಡು ರಕ್ಷಣಾ ವೇದಿಕೆ ಹಾಗೂ ಬಸ್, ರಿಕ್ಷಾ ಚಆಲಾಕ, ಮಾಲಕರು ವಾಹನಗಳಿಂದ ಟೋಲ್ ಪಡೆಯದಂತೆ ವಿರೋಧ ವ್ಯಕ್ತಪಡಿಸಿದರು. ವಾಹ£ಗಳು ಟೋಲ್ ಎದುರುಗಡೆ ಬಂದು ನಿಂತಾಗ ಟೋಲ್…
ಉಳ್ಳಾಲ: ಬೈಕಿನಲ್ಲಿ ಚಲಿಸುತ್ತಿದ್ದ ವಿದ್ಯಾರ್ಥಿ ಮೇಲೆ ಟಿಪ್ಪರ್ ಲಾರಿ ಹರಿದು ಬೀರಿ ಮಾಡೂರಿನ ಅಲೋಷಿಯಸ್ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಂಬಿಕಾರೋಡಿನಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಕುಂದಾಪುರ ತ್ರಾಸಿ ನಿವಾಸಿ ಫರ್ಮಿ ಕ್ರಾಸ್ತೊ ( 23) ಸಾವನ್ನಪ್ಪಿದ ವಿದ್ಯಾರ್ಥಿ. ಬೀರಿ ಮಾಡೂರಿನ ಸಂತ ಅಲೋಷಿಯಸ್ ಇನ್ಸ್ಟಿಟ್ಯೂಟ್ ಆಫ್ ಮೆನೇಜ್ ಮೆಂಟ್ ಎಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ ಇದರ ಎಂಬಿಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ಯಾಗಿದ್ದು, ಕಾಲೇಜು ಮುಗಿಸಿ ಬೆಂದೂರ್ ವೆಲ್ ನಲ್ಲಿರುವ ಸಂಬಂಧಿಕರ ಮನೆಗೆ ತೆರಳುವ ಸಂದರ್ಭ ಘಟನೆ ನಡೆದಿದೆ. ಬೈಕಿನಲ್ಲಿ ತೆರಳುವ ಸಂದರ್ಭ ಹಿಂಬದಿಯಿಂದ ಬರುತ್ತಿದ್ದ ಟಿಪ್ಪರ್ ಲಾರಿ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಉರುಳಿಬಿದ್ದ ವಿದ್ಯಾರ್ಥಿ ಮೇಲೆ ಟಿಪ್ಪರ್ ಲಾರಿಯ ಹಿಂಬದಿ ಟಯರ್ ಹರಿದು, ಫರ್ಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೆಲ್ಮೆಟ್ ಧರಿಸಿದ್ದರೂ , ಅದೂ ಮುರಿದು ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಟಿಪ್ಪರ್…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ತೊಕ್ಕೊಟ್ಟು: ವೆಸ್ಟ್ ಇಂಡಿಸ್‍ನ ಸ್ಟಾರ್ ಕ್ರಿಕೆಟರ್, ಸ್ಫೋಟಕ ಬ್ಯಾಟ್ಸ್‍ಮನ್ ಕ್ರಿಸ್ ಗೇಲ್ ತೊಕ್ಕೊಟ್ಟುವಿನಲ್ಲಿ ಭಾನುವಾರ ಅಚಾನಕ್ ಆಗಿ ಕಾಣಿಸಿಕೊಂಡಿದ್ದು, ಜನರಲ್ಲಿ ಅಚ್ಚರಿಯನ್ನು ಮೂಡಿಸಿತ್ತು.\ ದೈತ್ಯ ಕ್ರಿಕೆಟರ್ ತೊಕ್ಕೊಟ್ಟುವಿನ ಹೈ ಸ್ಪಿರಿಟ್ಸ್ ವೈನ್ಸ್ ಆಂಡ್ ಸ್ಪಿರಿಟ್ಸ್ ಮಾರಾಟ ಮಳಿಗೆಗೆ ಭೇಟಿ ನೀಡುತ್ತಿದ್ದಂತೆ ಜನ ಸ್ತೋಮ ಜಮಾಯಿಸಿತ್ತು. ಇದರಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ಸಂಚಾರಕ್ಕೂ ತಡೆಯುಂಟಾಯಿತು. ಅವರನ್ನು ಸಾಂಪ್ರದಾಯಿಕವಾಗಿ ಆರತಿ ಬೆಳಗಿ, ಹಣೆಗೆ ಕುಂಕುಮ ಇಟ್ಟು, ಹೂಹೂರ ಹಾಕಿ ಮಳಿಗೆಗೆ ಸ್ವಾಗತಿಸಲಾಯಿತು. ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಕ್ರಿಸ್ ಗೇಲ್, ` ತೊಕ್ಕೊಟ್ಟು ಸೂಪರ್ ‘ ಎಂದು ಹೇಳಿದರು. ಸ್ಮ್ರಿನ್ ಆಫ್ ಬ್ರಾಂಡ್ ಪ್ರಚಾರ ರಾಯಭಾರಿಯಾಗಿರುವ ಕ್ರಿಸ್ ಗೇಲ್ ಇದೇ ಉದ್ದೇಶದಿಂದ ಮಂಗಳೂರಿಗೆ ಆಗಮಿಸಿದವರು ತೊಕ್ಕೊಟ್ಟುವಿಗೆ ಭೇಟಿ ನೀಡಿದ್ದಾರೆ.
ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್ ಉಳ್ಳಾಲ; ಅಂದಿನ ಕಾಲದಲ್ಲಿ ತಂತ್ರಜ್ಞಾನದಂತಹ ವ್ಯವಸ್ಥೆ ಇಲ್ಲದಿದ್ದರೂ ಉಳ್ಳಾಲದ ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ದ ಒಗ್ಗಟ್ಟು ಹಾಗೂ ಸಾಹಸದಿಂದ ಹೋರಾಡಿದ ಮಹಿಳೆಯಾಗಿದ್ದಾರೆ. ಅವರ ಆದರ್ಶ, ಸಾಹಸ, ಮಾನವೀಯ ಮೌಲ್ಯಗಳು ನಮಗೆಲ್ಲರಿಗೂ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಹಂಪಿ, ಸಂಗೊಳ್ಳಿ ರಾಯಣ್ಣಸ ಸಹಿತ ರಾಜ್ಯದಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ಉತ್ಸವದಂತೆಯೇ ಅಬ್ಬಕ್ಕ ಉತ್ಸವ ನಡೆಯಲಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಅಸೈಗೋಳಿ ಕೇಂದ್ರ ಮೈದಾನದಲ್ಲಿ ನಡೆಯುತ್ತಿರುವ ವೀರರಾಣಿ ಅಬ್ಬಕ್ಕ ಉತ್ಸವ-2017 ಉದ್ಘಾಟಿಸಿ ಅವರು ಮಾತನಾಡಿದರು. ಅಬ್ಬಕ್ಕನ ಇತಿಹಾಸವನ್ನು ರಾಷ್ಟ್ರಮಟ್ಟದಲ್ಲಿ ಪ್ರಚುರಪಡಿಸಲು ಬೆಂಗಳೂರು ಮಾತ್ರವಲ್ಲದೆ ದೆಹಲಿಯಲ್ಲಿಯೂ ಕೂಡಾ ಕನ್ನಡ ಸಂಘ ಸಂಸ್ಥೆಗಳ ಸಹಕಾರದಿಂದಲೂ ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಭವನ ನಿರ್ಮಾಣಗೊಳ್ಳುತ್ತಿದ್ದು ಇದು ಎಂಟು ಕೋಟಿ ಅನುದಾನದಲ್ಲಿ ಸುಸಜ್ಜಿತ ಕಟ್ಟಡವಾಗಿ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು. ಅಬ್ಬಕ್ಕ ಎಲ್ಲರಿಗೂ ಪ್ರೇರಣಾ ಶಕ್ತಿಯಾಗಿರಬೇಕು, ಸಮಸ್ಯೆ ಬಂದಾಗ ಮುಂದೆ ನಿಂತು ನ್ಯಾಯ ಕೊಡುವ ಶಕ್ತಿ ಆಗಬೇಕು.…
ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್ ದೇರಳಕಟ್ಟೆ : ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮುಂಭಾಗದಲ್ಲಿ ಆಧುನಿಕ ಸೌಲಭ್ಯಗಳುಳ್ಳ, ಹವಾನಿಯಂತ್ರಿತ ` ದ ಕಂಫಟ್ರ್ಸ್ ಇನ್’ ವಸತಿಗೃಹ ಗುರುವಾರ ಶುಭಾರಂಭಗೊಂಡಿತು. ವಸತಿಗೃಹ ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮವನ್ನು ಮಂಗಳೂರಿನ ಶ್ರೀ ದೇವಿ ಎಜ್ಯುಕೇಷನ್ ಟ್ರಸ್ಟಿನ ಚೇರ್ ಮೆನ್ ಎ.ಸದಾನಂದ ಶೆಟ್ಟಿ ಮಾತನಾಡಿ ದೈವ ಬಲದೊಂದಿಗೆ ಮನಸ್ಥೈರ್ಯವೊಂದಿದ್ದರೆ ಉದ್ಯಮದಲ್ಲಿ ಯಶಸ್ಸು ಸಾಧ್ಯ. ವಸತಿಗೃಹಕ್ಕೆ ಬರುವ ಗ್ರಾಹಕರ ಸೇವೆ ಉತ್ತಮ ಜನಸಂಪರ್ಕ ನೀಡುವ ಮೂಲಕ ಈ ಸಂಸ್ಥೆ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದರು. ವಸತಿ ಗೃಹವನ್ನು ಉದ್ಘಾಟಿಸಿದ ನಿಟ್ಟೆ ವಿಶ್ವವಿದ್ಯಾಲಯದ ಎನ್.ವಿನಯ ಹೆಗ್ಡೆ ಮಾತನಾಡಿ ಯಶಸ್ಸಿನ ಹಿಂದೆ ದೇರಳಕಟ್ಟೆ ಪರಿಸರದ ಕೊಡುಗೆ ಅಪಾರವಿದ್ದು, ಅದಕ್ಕಾಗಿ ತನ್ನ ಯಶಸ್ಸನ್ನು ಪರಿಸರಕ್ಕೆ ಅರ್ಪಿಸುತ್ತೇನೆ. ಕಷ್ಟಪಟ್ಟಲ್ಲಿ ಪ್ರತಿ ಉದ್ಯಮದಲ್ಲಿ ಯಶಸ್ಸಿದೆ. ದೇರಳಕಟ್ಟೆ ಎಂಬ ಊರು ದೇವರ ಕಟ್ಟೆಯಾಗಿದೆ. ಪ್ರತಿಯೊಬ್ಬರು ಇಲ್ಲಿಗೆ ಬಂದವರು ಅವರವರ ಧರ್ಮದ ನಂಬಿಕೆಯಂತೆ ಯಶಸ್ಸು ಗಳಿಸಿದ್ದಾರೆ ಎಂದರು. ದ ಕಂಫಟ್ಸ್ ್ ಇನ್ ವಸತಿಗೃಹದ ಮಾಲೀಕ ಚಂದ್ರಹಾಸ್ ಶೆಟ್ಟಿ ಮಾತನಾಡಿ ಶೈಕ್ಷಣಿಕ ಕೇಂದ್ರವಾಗಿ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಫಿಸಿಯೋಥೆರಪಿಸ್ಟ್ಗಳಿಗೆ ಸ್ಫೂರ್ತಿ, ಹುರಿದುಂಬಿಸುವ ಸಲುವಾಗಿ ಆಯೋಜಿಸಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಎಲ್ಲರೂ ಜತೆಯಾಗುವುದರ ಮೂಲಕ ಕ್ಷೇತ್ರದಲ್ಲಿ ವೇಗದ ಬೆಳವಣಿಗೆ ಜತೆಗೆ ಬಲವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋಥೆರಫಿಸ್ಟ್ ಇದರ ಅಧ್ಯಕ್ಷ ಡಾ.ಉಮಾಶಂಖರ್ ಮೊಹಂತಿ ಅಭಿಪ್ರಾಯಪಟ್ಟರು. ಅವರು ನಿಟ್ಟೆ ವಿಶ್ವವಿದ್ಯಾಲಯದ ಫಿಸಿಯೋಥೆರಪಿ ವಿಭಾಗ ಆಯೋಜಿಸಿದ್ದ `ಫಿಸಿಯೋ-ಕಾನ್ -2017′ ಎರಡು ದಿನಗಳ ಅಂತಾರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನಕ್ಕೆ ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಆರೋಗ್ಯ ಕ್ಷೇತ್ರದಲ್ಲಿ ಫಿಸಿಯೋಥೆರಪಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಫಿಸಿಯೋಥೆರಪಿಗಳು ಎಲ್ಲರೂ ಜತೆಯಾದಾಗ ಕ್ಷೇತ್ರದ ಪ್ರಗತಿಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದಂತಾಗುತ್ತದೆ. ವೃತ್ತಿಯಲ್ಲಿ ವೇಗದ ಬದಲಾವಣೆಗೆ ದೇಶಾದ್ಯಂತ ಫಿಸಿಯೋಥೆರಪಿಗಳ ಚಿಂತನೆಗಳ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ದೇಶದ 7 ಲಕ್ಷ ಫಿಸಿಯೋಥೆರಪಿಗಳು ಸಂಪರ್ಕದಲ್ಲಿದ್ದು, ಅವರಲ್ಲಿ ಓರ್ವ ಯಶಸ್ಸು ಗಳಿಸಿದರೂ ಇಡೀ ಕ್ಷೇತ್ರದ ಕೀರ್ತಿ ಉಳಿಸಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಡಾ. ಎಸ್…

