ಉಳ್ಳಾಲ ನ್ಯೂಸ್ ನೆಟ್‍ವರ್ಕ್
ತೊಕ್ಕೊಟ್ಟು: ವೆಸ್ಟ್ ಇಂಡಿಸ್‍ನ ಸ್ಟಾರ್ ಕ್ರಿಕೆಟರ್, ಸ್ಫೋಟಕ ಬ್ಯಾಟ್ಸ್‍ಮನ್ ಕ್ರಿಸ್ ಗೇಲ್ ತೊಕ್ಕೊಟ್ಟುವಿನಲ್ಲಿ ಭಾನುವಾರ ಅಚಾನಕ್ ಆಗಿ ಕಾಣಿಸಿಕೊಂಡಿದ್ದು, ಜನರಲ್ಲಿ ಅಚ್ಚರಿಯನ್ನು ಮೂಡಿಸಿತ್ತು.\
















ದೈತ್ಯ ಕ್ರಿಕೆಟರ್ ತೊಕ್ಕೊಟ್ಟುವಿನ ಹೈ ಸ್ಪಿರಿಟ್ಸ್ ವೈನ್ಸ್ ಆಂಡ್ ಸ್ಪಿರಿಟ್ಸ್ ಮಾರಾಟ ಮಳಿಗೆಗೆ ಭೇಟಿ ನೀಡುತ್ತಿದ್ದಂತೆ ಜನ ಸ್ತೋಮ ಜಮಾಯಿಸಿತ್ತು. ಇದರಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ಸಂಚಾರಕ್ಕೂ ತಡೆಯುಂಟಾಯಿತು. ಅವರನ್ನು ಸಾಂಪ್ರದಾಯಿಕವಾಗಿ ಆರತಿ ಬೆಳಗಿ, ಹಣೆಗೆ ಕುಂಕುಮ ಇಟ್ಟು, ಹೂಹೂರ ಹಾಕಿ ಮಳಿಗೆಗೆ ಸ್ವಾಗತಿಸಲಾಯಿತು. ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಕ್ರಿಸ್ ಗೇಲ್, ` ತೊಕ್ಕೊಟ್ಟು ಸೂಪರ್ ‘ ಎಂದು ಹೇಳಿದರು. ಸ್ಮ್ರಿನ್ ಆಫ್ ಬ್ರಾಂಡ್ ಪ್ರಚಾರ ರಾಯಭಾರಿಯಾಗಿರುವ ಕ್ರಿಸ್ ಗೇಲ್ ಇದೇ ಉದ್ದೇಶದಿಂದ ಮಂಗಳೂರಿಗೆ ಆಗಮಿಸಿದವರು ತೊಕ್ಕೊಟ್ಟುವಿಗೆ ಭೇಟಿ ನೀಡಿದ್ದಾರೆ.


