Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಂಬಯಿ: ರಾಷ್ಟ್ರದ ಮಾಧ್ಯಮ ಲೋಕದ ಹೆಸರಾಂತ ಸಂಸ್ಥೆ ಮಿಡ್‍ಡೇ ಸಮೂಹವು ಶಿಕ್ಷಣ ರಂಗದ ಅಪರಿಮಿತ ಸೇವಾ ಕೊಡುಗೆಗಾಗಿ ಶಿಕ್ಷಣ ರಂಗದ ಮೇರು ಸಾಧಕಿ ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರವರ್ತಕಿ, ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಅವರಿಗೆ `ಶೈಕ್ಷಣಿಕ ಜೀವಮಾನ ಸಾಧಕ ಪುರಸ್ಕಾರ’ಪ್ರದಾನಿಸಿ ಗೌರವಿಸಿತು. ಕಳೆದ ಮಂಗಳವಾರ ಅಂಧೇರಿ ಪೂರ್ವದ ಸಹಾರ ಇಲ್ಲಿನ ಹೈಯತ್ತ್ ರೀಜೆನ್ಸಿ ಪಂಚತಾರಾ ಹೊಟೇಲ್‍ನ ಸಭಾಗೃಹದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ, ಬಿಜೆಪಿ ಮಹಾರಾಷ್ಟ್ರ ಪ್ರದೇಶ ಸಮಿತಿಯ ಖಜಾಂಚಿ, ಮುಂಬಯಿಯ ವಕ್ತಾರೆ, ಫ್ಯಾಶನ್ ಡಿಸಾಯ್ನಾರ್ ಶೈನಾ ಎನ್.ಸಿ ಅವರು ಈ ಪುರಸ್ಕಾರವನ್ನು ಮೇಡಂ ಗ್ರೇಸ್ ಪಿಂಟೋ ಅವರಿಗೆ ಪ್ರದಾನಿಸಿ ಗೌರವಿಸಿದರು. ಶಿಕ್ಷಣ ರಂಗದ ಅಪರಿಮಿತ ಸೇವಾ ಕೊಡುಗೆಗಾಗಿ ಮಿಡ್‍ಡೇ ಸಮೂಹವು ಶೈಕ್ಷಣಿಕ ಜೀವಮಾನ ಸಾಧಕ ಪುರಸ್ಕಾರ ಪ್ರದಾನಿಸಿ ಗೌರವಿಸಿತು. ದಣಿಯದ ಪರಿಶ್ರಮ ಮತ್ತು ಗಮನಾರ್ಹ ಸೇವಾ ಕೊಡುಗೆಗಾಗಿ ಕೊಡಮಾಡಲಾಗಿದೆ. ಶಿಕ್ಷಣದ ದೂರದೃಷ್ಠಿತ್ವವುಳ್ಳ ಇವರ ಕಾಲ್ಪನಿಕತ್ವ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮಂಗಳೂರು:ಮುಂಬಯಿ-ಕರ್ನಾಟಕ ಸಂಘದ ಸಕ್ರಿಯ ಸದಸ್ಯರೂ, ಕಾನೂನು ತಜ್ಞ ಹಾಗೂ ಸಾಹಿತಿ ವಾಸುದೇವ ಕಾಣೆಮಾರ್ ಇವರು ಬರೆದಂತಹ ಶ್ರೀಕೃಷ್ಣ ಗೀತಾ ( ಮೂಲ ಶ್ಲೋಕಗಳ ಭಾಷಾಂತರ ಮತ್ತು ಅನುವಾದ ) ಪುಸ್ತಕವನ್ನು ಮಂಗಳೂರಿನ ಕಾರ್‍ಸ್ಟ್ರೀಟ್ ನ ಕಾಣೆಮಾರ್ ಕೌಂಪೌಂಡಿನ ಸ್ವಗೃಹದಲ್ಲಿ ಭಾನುವಾರ ಬಿಡುಗಡೆಗೊಂಡಿತು. ಕೆನಡಾದ ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಪಿಹೆಚ್ ಡಿ ಪಡೆದುಕೊಂಡಿರುವ ಡಾ. ವಿ. ವಿಠಲ್ ರಾವ್ ಹಾಗೂ ಪ್ರೊ. ಜ್ಯೋತಿ ರಾವ್ ದಂಪತಿ ಪುಸ್ತಕ ಬಿಡುಗಡೆಗೊಳಿಸಿದರು. ಈ ಸಂದರ್ಭ ಕ್ಯಾನ್ಸರ್ ತಜ್ಞ ಡಾ.ಕೃಷ್ಣಪ್ರಸಾದ್, ಇಎನ್ ಟಿ ಸ್ಪೆಷಲಿಸ್ಟ್ ರಾಘವೇಂದ್ರ ಅರೂರ್, ಮಾನಸಿಕ ತಜ್ಞೆ ಡಾ.ಸುಪ್ರಿಯ ಹೆಗ್ಡೆ, ಜನರಲ್ ಫಿಸಿಷಿಯನ್ ಡಾ.ಆಚಾರ್, ನgರೋಗಿತಜ್ಞ ಡಾ.ದಿವಾಕರ್ ರಾವ್, ಸರ್ಜನ್ ಡಾ.ದಿನೇಶ್ ರಾವ್, ಜಾನಕಿ ಕಾಣೆಮಾರ್ ಮುಖ್ಯ ಅತಿಥಿಗಳಾಗಿದ್ದರು. ಗಣೇಶ್ ರಾವ್ ಸ್ವಾಗತಿಸಿದರು. ಶೋಭಾ. ಜಿ.ರಾವ್ ಕಾರ್ಯಕ್ರಮ ನಿರ್ವಹಿಸಿದರು. ಸಂತೋಷ್ ಕಾಣೆಮಾರ್ ವಂದಿಸಿದರು.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೈರಂಗಳ: ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ದ ವತಿಯಿಂದ ಅರ್ಹ ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಕೈರಂಗಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾ.ಜ.ಪಾ ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಮಾತನಾಡಿ, ಅಲ್-ಅಮೀನ್ ಫ್ರೆಂಡ್ಸ್ ಜಾತಿ ಭೇಧ ಮರೆತು ಸಮಾಜ ಬಡವರ ಸೇವೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಸಂಘಟನೆ ದೇಶಕ್ಕೆ ಮಾದರಿಯಾಲಿ ಎಂದು ಹಾರೈಸಿದರು. ತೋಟಾಲ್ ಮುಹಿಯ್ಯದ್ದೀನ್ ಜುಮಾ ಮಸೀದಿ ಖತೀಬ್ ಮುಹಿಯ್ಯದ್ದೀನ್ ಸಅದಿ ತೋಟಾಲ್ ದುಆ ಮೂಲಕ ಚಾಲನೆ ನೀಡಿ ಮಾತನಾಡಿ ಪ್ರವಾದಿಯವರ ಮುಖ್ಯ ಧ್ಯೇಯವೇ ಸಮಾಜ ಸೇವೆ.ಅ ಪ್ರವಾದಿಯ ಹೆಸರಾಗಿ ಅಲ್-ಅಮೀನ್. ಯುವ ಜನತೆ ಸಮಾಜಸೇವೆಯ ಜೋತೆಗೆ ನಾಡಿನಲ್ಲಿ ಎಲ್ಲರೊಂದಿಗೆ ಶಾಂತಿ ವಾತಾವರಣ ಮಾಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮವನ್ನು ಕೈರಂಗಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವರಾಮ್ ಉಧ್ಘಾಟಿಸಿದರು.ಸಭಾಧ್ಯಕ್ಷತೆಯನ್ನು ಅಲ್-ಅಮೀನ್ ಫ್ರೆಂಡ್ಸ್ ನ ಗೌರವಾಧ್ಯಕ್ಷರಾದ ಅಹ್ಮದ್ ಕುಂಙ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಲ್-ಅಮೀನ್ ನಿರ್ದೇಶಕ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಅಸೈಗೋಳಿ: ಬಂಟರ ಸಂಘ ಉಳ್ಳಾಲ ವಲಯ ಇದರ ಆಶ್ರಯದಲ್ಲಿ ಅಸೈಗೋಳಿಯ ಅಭಯಾಶ್ರಮ ವಠಾರ ಮತ್ತು ಅಸೈಗೋಳಿಯ ಪರಿಸರದಲ್ಲಿ ಸ್ವಚ್ಚಥಾ ಕಾರ್ಯಕ್ರಮ ಭಾನುವಾರ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಂಟರ ಸಂಘ ಉಳ್ಳಾಲ ವಲಯಾಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು. ಸೀತಾರಾಮ ಶೆಟ್ಟಿ ದಡಸ್, ಮಾಜಿ ಅಧ್ಯಕ್ಷರಾದ ಚಂದ್ರಹಾಸ ಅಡ್ಯಂತಾಯ, ರವೀಂದ್ರ ಶೆಟ್ಟಿ ಉಳಿದೊಟ್ಟು, ಕಟ್ಟಡ ಸಮಿತಿ ಗೌರವಾಧ್ಯಕ್ಷ ರಘುರಾಮ ಕಾಜವ ಪಟ್ಟೋರಿ, ಪ್ರಧಾನ ಕಾರ್ಯದರ್ಶಿ ಮೋಹನ್‍ದಾಸ್ ಗಾಂಭೀರ್, ಯುವ ವಿಭಾಗದ ಅಧ್ಯಕ್ಷ ಅಶೋಕ್ ರೈ ಮಡ್ಯಾರ್, ಸಂಘಟನಾ ಕಾರ್ಯದರ್ಶಿ ಜಗದೀಶ್ ರೈ ಬೆಳ್ಮ, ಜೊತೆ ಕಾರ್ಯದರ್ಶಿ ನಾರಾಯಣ ರೈ ಕಕ್ಕೆಮಜಲ್, ಕಟ್ಟಡ ಸಮಿತಿ ಪ್ರ. ಕಾರ್ಯದರ್ಶಿ ರವೀಂದ್ರ ರೈ ಹರೇಕಳ, ಕೋಶಾ„ಕಾರಿ ಸಂಜೀವ ಶೆಟ್ಟಿ ಅಂಬ್ಲಮೊಗರು, ವಲಯ ಸಮಿತಿ ಕೋಶಾ„ಕಾರಿ ಪುರುಷೋತ್ತಮ ಮಾಣಾೈ, ಕ್ರೀಡಾ ಕಾರ್ಯದರ್ಶಿ ಸುರೇಶ್ ಶೆಟ್ಟಿ ಆಂಬ್ಲಮೊಗರು, ಮಾಜಿ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜ್‍ಮೋಹನ್ ಮುದ್ಯ,…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಇಂದು ಶಿಕ್ಷಣವಿದ್ದರೆ ಮಾತ್ರ ನಾವು ಸಮಾಜದಲ್ಲಿ ಉತ್ತಮ ಜೀವನವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇಂದು ವಿದ್ಯಾಭ್ಯಾಸದ ಮಹತ್ವವನ್ನು ಎಲ್ಲರೂ ಅರಿತುಕೊಂಡು ಮುನ್ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಬಬ್ಬುಕಟ್ಟೆಯ ಖೈರಿಯಾ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಬಡ ಹೆಣ್ಣುಮಕ್ಕಳ ವಿದ್ಯಾರ್ಥಿನಿನಿಲಯ(ಖೈರಿಯಾ ಶೆಲ್ಟರ್ಸ್) ದೀನ್ ವಿದ್ಯಾಭ್ಯಾಸದ ಜೊತೆಗೆ ಲೌಕಿಕ ಶಿಕ್ಷಣವನ್ನೂ ನೀಡುವ ಮೂಲಕ ಬಡ ಹೆಣ್ಣುಮಕ್ಕಳಿಗೆ ಆಸರೆಯಾಗಿ ನಿಂತು ಉತ್ತಮ ಭವಿಷ್ಯವನ್ನು ಕಟ್ಟಿಕೊಡುತ್ತಿದೆ ಎಂದು ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ವೈ.ಅಬ್ದುಲ್ಲಾ ಕುಂಞ ಅವರು ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಖೈರಿಯಾ ಟ್ರಸ್ಟ್ ವತಿಯಿಂದ ನಡೆಯುತ್ತಿರುವ `ಖೈರಿಯಾ ಶೆಲ್ಟರ್ಸ್’ ಬಡ ಹೆಣ್ಣುಮಕ್ಕಳ ವಿದ್ಯಾರ್ಥಿನಿಲಯದ 8ನೇ ವಾರ್ಷಿಕೋತ್ಸವ ಮತ್ತು ನೂತನವಾಗಿ ನಿರ್ಮಾಣವಾದ ಎರಡನೇ ಮಹಡಿ ಕಟ್ಟಡದದ ಉದ್ಘಾಟನೆಯನ್ನು ಭಾನುವಾರ ನೆರವೇರಿಸಿ ಮಾತನಾಡಿದರು. ಒಂದು ಯತಿಂಖಾನವನ್ನು ನಡೆಸುವುದು ಅದು ಸುಲಭವಾದ ಕೆಲಸವಲ್ಲ. ಎಸ್.ಎಂ.ರಶೀದ್ ಹಾಜಿ ಅವರು ಖೈರಿಯಾ ಟ್ರಸ್ಟ್ ಮೂಲಕ ಇಲ್ಲಿಯ ಮಕ್ಕಳಿಗೆ ಬಹಳಷ್ಟು ಅನುಕೂಲಕರ ವಾತಾವರಣದೊಂದಿಗೆ ಮುನ್ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ ಎಂದು…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ. ಬದ್ರಿಯಾ ಕೇಂದ್ರ ಜುಮಾ ಮಸೀದಿ ಹಾಗೂ ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆ ಇದರ ಜಂಟಿ ಅಶಯದಲ್ಲಿ ಮಜ್ಲಿಸುನ್ನೂರು ಹಾಗೂ ಶಂಸುಲ್ ಉಲಮಾ ಮೌಲಿದ್‍ದಿನ ವಾರ್ಷಿಕದ ಪ್ರಯುಕ್ತ ದೇರಳಕಟ್ಟೆ ಬದ್ರಿಯ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆದ ದ್ವಿದಿನ ಧಾರ್ಮಿಕ ಪ್ರವಚನ ಕಾರ್ಯಕ್ರಮ ಭಾನುವಾರ ಸಮಾಪ್ತಿಕೊಂಡಿತು. ಅಸ್ಸಯ್ಯದ್ ಹಾರಿಸ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಮಜ್ಲಿಸುನ್ನೂರು ನೇತೃತ್ವ ವಹಿಸಿದರು. ಅಸ್ಸಯ್ಯದ್ ಅಲ್-ಹಾದಿ ತಂಙಳ್ ಮೊಗ್ರಾಲ್ ಪುತ್ತೂರು ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೇಂದ್ರ ಜುಮಾ ಮಸೀದಿ ಬಂದರ್ ಖತೀಬ್ ವಿ.ಕೆ ಸ್ವದಕತುಲ್ಲಾ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ದೇರಳಕಟ್ಟೆ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಕೆ. ಅಬೂಬಕ್ಕರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು. ಯು.ಕೆ ಮಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್ ಮತ್ತು ಅಬೂಬಕ್ಕರ್ ಸಿದ್ದೀಕ್ ಅಝ್‍ಹರಿ ಪಯ್ಯನ್ನೂರು ಮುಖ್ಯ ಪ್ರಭಾಷಣಗೈದರು. ಅಸ್ಸಯ್ಯದ್ ತ್ವಹಾ ಜಿಫ್ರಿ ತಂಙಳ್ ಆಡ್ಯಾರ್ ಕಣ್ಣೂರು,ಬದ್ರಿಯಾ ಜುಮಾ ಮಸೀದಿ ದೇರಳಕಟ್ಟೆ ಗೌರವಾಧ್ಯಕ್ಷ ಹಾಜಿ ಡಿ, ಇಸ್ಮಾಲ್,…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಪೆರ್ಮನ್ನೂರು ನಿತ್ಯಾಧರ್‍ನಗರದ ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅನನ್ಯ ಬೊಳ್ಯ ಅಸೈಗೋಳಿ (616), ಗೆವಿನ್ ಪ್ರವೀಣ್ ಲೋಬೋ(612), ರಾಹುಲ್ ಡಿ.ಪೂಜಾರಿ(604), ಪೂಜಾ(598), ಪ್ರಿನ್ಸಿಟಾ ಡಿ.ಸೋಜಾ(585), ಡಾಲರಿನ್ ಡಿ.ಸೋಜ(581), ವಿನಿತಾ ವೀಕ್ಷಿತಾ ಡಿ.ಸೋಜಾ(580) ಅಂಕಗಳನ್ನು ಪಡೆದಿದ್ದಾರೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಉಳ್ಳಾಲ ಪೆರ್ಮನ್ನೂರಿನ ಸಂತ ಸೆಬಾಸ್ತಿಯನ್ನರ ಪದವಿಪೂರ್ವ ಕಾಲೇಜಿಗೆ ಶೇ. 85 ಪಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ವಿಶಿಷ್ಟ ದರ್ಜೆಯಲ್ಲಿ 107 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ  ವಿಭಾಗದ ವಿದ್ಯಾರ್ಥಿನಿ ದಿವ್ಯಾ ವಿ.ಸಿ.(581), ವಾಣಿಜ್ಯ ವಿಭಾಗದ ಸ್ನೇಹ ದಲಬಂಜನ್ (572), ಪೂಜಾ ಲಕ್ಷ್ಮಿ(558), ರಮ್ಯಕೃಷ್ಣ (533), ಜೋಯ್‍ಲಿಟಾ ಸಂಡ್ರಿಯಾ ಡಿ.ಸೋಜಾ (530), ಕಲಾ ವಿಭಾಗದ ಜಯಲಕ್ಷ್ಮೀ ಪರಶುರಾಮ ಮುಳಗುಂದ (509) ಅಂಕಗಳನ್ನು ಪಡೆದಿದ್ದಾರೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಉಳ್ಳಾಲ ಮಾಸ್ತಿಕಟ್ಟೆಯ ಅನುದಾನರಹಿತ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇಕಡ 89% ಫಲಿತಾಂಶವನ್ನು ಪಡೆದಿದ್ದು. ಅನುಷ್ ಕುಮಾರ್ (575), ಚೈತಾಲಿ ಕೃಷ್ಣ (571), ಶಿಫಾಲಿ (563), ಪೂಜಿತ್ ಕುಮಾರ್ (557), ಅಪೂರ್ವಚಂದ್ (554), ಅಹಮ್ಮದ್ ಶಾಹೀದ್ (552), ಫಾತೀಮ ನಿಶಾಮ(537), ನಮೃತಾ ಎಚ್. (537) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ : ಮಣಿಪಾಲ ತಾಂತ್ರಿಕ ವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮೋಹನ್ ದಾಸ್ ಅವರು ಎಮ್. ಐ. ಟಿ. ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ| ರಮೇಶ ಸಿ. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ ಆ ಸ್ಟಡಿ ಆನ್ ಇಂಟಗ್ರಲ್ ಆಪರೇಟರ್ಸ್ ಡಿಫೈನ್ಡ್ ಆನ್ ಯೂನಿವೇಲಂಟ್ ಫಂಕ್ಷನ್ಸ್ ಅಂಡ್ ರಿಲೇಟೆಡ್ ಕ್ಲಾಸಸ್’ ಸಂಶೋಧನ ಪ್ರಬಂಧಕ್ಕೆ ಮಣಿಪಾಲ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಮೋಹನ್ ದಾಸ್ ಇವರು ತಲಪಾಡಿ ಬಜಂಗ್ರೆ ಲಕ್ಷ್ಮೀ ಮತ್ತು ನಾರಾಯಣ ಮೂಲ್ಯ ದಂಪತಿಗಳ ಪುತ್ರರಾಗಿರುತ್ತಾರೆ.

Read More