ಉಳ್ಳಾಲ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಫಿಸಿಯೋಥೆರಪಿಸ್ಟ್ಗಳಿಗೆ ಸ್ಫೂರ್ತಿ, ಹುರಿದುಂಬಿಸುವ ಸಲುವಾಗಿ ಆಯೋಜಿಸಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಎಲ್ಲರೂ ಜತೆಯಾಗುವುದರ ಮೂಲಕ ಕ್ಷೇತ್ರದಲ್ಲಿ ವೇಗದ ಬೆಳವಣಿಗೆ ಜತೆಗೆ ಬಲವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋಥೆರಫಿಸ್ಟ್ ಇದರ ಅಧ್ಯಕ್ಷ ಡಾ.ಉಮಾಶಂಖರ್ ಮೊಹಂತಿ ಅಭಿಪ್ರಾಯಪಟ್ಟರು.

ಅವರು ನಿಟ್ಟೆ ವಿಶ್ವವಿದ್ಯಾಲಯದ ಫಿಸಿಯೋಥೆರಪಿ ವಿಭಾಗ ಆಯೋಜಿಸಿದ್ದ `ಫಿಸಿಯೋ-ಕಾನ್ -2017′ ಎರಡು ದಿನಗಳ ಅಂತಾರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನಕ್ಕೆ ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯ ಕ್ಷೇತ್ರದಲ್ಲಿ ಫಿಸಿಯೋಥೆರಪಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಫಿಸಿಯೋಥೆರಪಿಗಳು ಎಲ್ಲರೂ ಜತೆಯಾದಾಗ ಕ್ಷೇತ್ರದ ಪ್ರಗತಿಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದಂತಾಗುತ್ತದೆ. ವೃತ್ತಿಯಲ್ಲಿ ವೇಗದ ಬದಲಾವಣೆಗೆ ದೇಶಾದ್ಯಂತ ಫಿಸಿಯೋಥೆರಪಿಗಳ ಚಿಂತನೆಗಳ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ದೇಶದ 7 ಲಕ್ಷ ಫಿಸಿಯೋಥೆರಪಿಗಳು ಸಂಪರ್ಕದಲ್ಲಿದ್ದು, ಅವರಲ್ಲಿ ಓರ್ವ ಯಶಸ್ಸು ಗಳಿಸಿದರೂ ಇಡೀ ಕ್ಷೇತ್ರದ ಕೀರ್ತಿ ಉಳಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಡಾ. ಎಸ್ ರಮಾನಂದ ಶೆಟ್ಟಿ ಮಾತನಾಡಿ ವೈದ್ಯಕೀಯ, ದಂತ ವೈದ್ಯಕೀಯ ಕ್ಷೇತ್ರದಂತೆ ಫಿಸಿಯೋಥೆರಪಿ ಕ್ಷೇತ್ರವೂ ಬೆಳೆಯುತ್ತಿದೆ. ಕಾರ್ಯಗಾರಗಳು , ಸಮ್ಮೇಳನಗಳಿಂದ ಕ್ಷೇತ್ರದಲ್ಲಿ ಅರಿವು ಜತೆಗೆ ಜಾಗೃತಿಯನ್ನು ಮೂಡಿಸಲು ಸಾಧ್ಯ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಫಿಸಿಯೋಥೆರಪಿ ವಿಭಾಗ ದಿವ್ಯಾಂಗ, ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ಮಾನವೀಯತೆಯ ಸೇವೆಯೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಡಾ.ಎಂ.ಎಸ್.ಮೂಡಿತ್ತಾಯ ಮಾತನಾಡಿ ನಿಟ್ಟೆ ವಿ.ವಿ ಕುಲಸಚಿವ ಎಂ.ಎಸ್. ಮೂಡಿತ್ತಾಯ ಮಾತನಾಡಿ ದೇಶದಲ್ಲಿ ಹಿರಿಯರ ಸಂಖ್ಯೆ ಹೆಚ್ಚಾಗಬೇಕಿದೆ. ಜನರ ಆಯಸ್ಸನ್ನು ಹೆಚ್ಚಿಸುವಲ್ಲಿ ಆರೋಗ್ಯ ಕ್ಷೇತ್ರ ಪರಿಣಾಮಕಾರಿಯಾಗಿ ಕಾರ್ಯಚರಿಸಬೇಕಿದೆ. ಫಿಸಿಯೋಥೆರಪಿಗಳು ವಿಶೇಷ ಕೌಶಲ್ಯವನ್ನು ವೃದ್ಧಿಸುವ ಮೂಲಕ ಯಾರೂ ಸ್ಪರ್ಧೆಗೆ ಬಾರದಂತೆ ಮುನ್ನುಗ್ಗುವುದರಿಂದ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಡಾ.ಸ್ಟೀವ್ ಮಿಲಾನಿಸ್, ಸ್ವೀಡನ್ನಿನ ಕಲ್ಸ್ಟಾರ್ಡ್ ವಿಶ್ವವಿದ್ಯಾನಿಲಯದ ಡಾ.ಕ್ರಿಸ್ಟಿನಾ , ಪಿಲಿಪೈನ್ಸ್ನ ಡಾ.ವೆಲೆಂಟೈನ್ ಜಾನ್ಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಸಮ್ಮೇಳನದ ಸಂಘಟಕ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ.ಧನೇಶ್ ಕುಮಾರ್ ಕೆ.ಯು ಸ್ವಾಗತಿಸಿದರು. ಕಿರಣ್ ಕಾರ್ಯಕ್ರಮ ನಿರೂಪಿಸಿದರು. ಡಾ.ಅಜಿತ್.ಯಸ್ ವಂದಿಸಿದರು.





