Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ದೇಶವ್ಯಾಪಿ ಬಂದ್‍ಗೆ ಉಳ್ಳಾಲ ನಗರ ಪ್ರದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಗ್ರಾಮೀಣ ಪ್ರದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ, ತೊಕ್ಕೊಟ್ಟು ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಹೆಚ್ಚಿನ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದರೆ, ತಲಪಾಡಿ, ದೇರಳಕಟ್ಟೆ ಕೋಟೆಕಾರು, ದೇರಳಕಟ್ಟೆ, ಕುತ್ತಾರು, ಅಸೈಗೋಳಿ, ಮುಡಿಪು, ಕೊಣಾಜೆ, ಗ್ರಾಮಚಾವಡಿ, ಪಾವೂರು, ಕೈರಂಗಳ, ಹರೇಕಳ, ನರಿಂಗಾನ ಸೇರಿದಂತೆ ಹೆಚ್ಚಿನ ಪ್ರದೇಶದಲ್ಲಿ ಕೆಲವೊಂದು ಅಂಗಡಿಗಳು ತೆರೆಯುವ ಮೂಲಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ಸಂಚಾರ ಸಂಪೂರ್ಣ ಬಂದ್ : ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಪಾವೂರು ಹರೇಕಳ, ಇನೋಳಿ, ಕೊಣಾಜೆ ಮಾರ್ಗವಾಗಿ ಸಂಚರಿಸುವ ಖಾಸಗಿ ಸಿಟಿ ಬಸ್ಸುಗಳು. ಬಿ.ಸಿ.ರೋಡ್, ವಿಟ್ಲ, ಪುತ್ತೂರು ಸೇರಿದಂತೆ ತೌಡುಗೋಳಿ, ಮುಡಿಪು ಮಾರ್ಗವಾಗಿ ಸಂಚರಿಸುವ ಸರ್ವಿಸ್ ಬಸ್‍ಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ ತೊಕ್ಕೊಟ್ಟು -ಕೊಣಾಜೆ ಮಂಗಳೂರು ವಿ.ವಿ. ಸಂಪರ್ಕಿಸುವ ರಸ್ತೆಯಲ್ಲಿ ಯಾವುದೇ ಬಸ್ಸುಗಳು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಅದು ಈ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಜ್ಞಾನ ದೇಗುಲ. ಆದ್ರೆ ಇದೀಗ ಇಂಥದ್ದೊಂದು ಪ್ರತಿಷ್ಠಿತ ವಿವಿಯಲ್ಲಿ ಆತಂಕಕಾರಿ ವಿದ್ಯಮಾನವೊಂದು ನಡೆದು ಹೋಗಿದೆ. ವಿದ್ಯಾರ್ಥಿನಿಯರ ಟಾಯ್ಲೆಟ್ ನಲ್ಲಿ ಮೊಬೈಲ್ ಕ್ಯಾಮಾರ ಇಟ್ಟು ರಹಸ್ಯ ಚಿತ್ರೀಕರಣಕ್ಕೆ ಮುಂದಾಗಿರೋದು ಬೆಳಕಿಗೆ ಬಂದಿದೆ. ಈ ಮೂಲಕ ವಿವಿ ಆವರಣದಲ್ಲೇ ಹೆಣ್ಮಕ್ಕಳ ಮರ್ಯಾದೆ ಹರಾಜು ಹಾಕೋ ಗಂಭೀರ ಪ್ರಕರಣಕ್ಕೆ ಮಂಗಳೂರು ವಿವಿ ಸಾಕ್ಷಿಯಾಗಿದೆ…… ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಸಾಲಿಗೆ ಸೇರೋ ವಿವಿಗಳಲ್ಲಿ ಮಂಗಳೂರು ವಿವಿ ಕೂಡ ಒಂದು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಹೆಗ್ಗಳಿಗೆ ಹೊಂದಿರೋ ಮಂಗಳೂರು ವಿವಿ ಇದೀಗ ಆತಂಕಕಾರಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ವಿವಿ ಅಂಗಳದಲ್ಲೇ ಹೆಣ್ಮಕ್ಕಳ ಮರ್ಯಾದೆಯನ್ನ ಹರಾಜು ಹಾಕೋ ಕೀಳು ಮಟ್ಟದ ಘಟನೆಯೊಂದು ನಡೆದಿರೋದು ಬೆಳಕಿಗೆ ಬಂದಿದೆ. ವಿವಿಯ ಬಯೋ ಸೈನ್ಸ್ ವಿಭಾಗದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮಾರ ಇಟ್ಟು ರಹಸ್ಯವಾಗಿ ಚಿತ್ರೀಕರಿಸ್ತಾ ಇರೋದು ಬಹಿರಂಗವಾಗಿದೆ. ಅಸಲಿಗೆ ಘಟನೆ ನಡೆದು ವಾರಗಳೇ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ಅದು ಭಾರತದ ದ್ವಾದಶ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಪವಿತ್ರ ಧಾರ್ಮಿಕ ಕ್ಷೇತ್ರ. ಸಾಕ್ಷಾತ್ ಶಿವನೇ ಲಿಂಗರೂಪದಲ್ಲಿ ನೆಲೆಸಿರೋ ಪುರಾಣ ಪ್ರಸಿದ್ದ ತಾಣ. ಇವತ್ತು ಈ ಇತಿಹಾಸ ಪ್ರಸಿದ್ದ ಕ್ಷೇತ್ರದಲ್ಲಿ ಪವಿತ್ರ ಸಮುದ್ರ ಸ್ನಾನದ ಸಂಭ್ರಮ ಮನೆಮಾಡಿತ್ತು. ಸಾವಿರಾರು ಭಕ್ತರು ಶ್ರಾವಣ ಮಾಸದ ಪ್ರಯುಕ್ತ ಸೋಮನಾಥನ ಕ್ಷೇತ್ರದಲ್ಲಿ ತೀರ್ಥಸ್ನಾನಗೈದು ಪುನೀತರಾದ್ರು…. ಸೋಮೇಶ್ವರ….ಭಾರತ ದೇಶದ ಇತಿಹಾಸ ಪ್ರಸಿದ್ದ ಪವಿತ್ರ ಪುಣ್ಯ ಕ್ಷೇತ್ರ. ಅಬ್ಬರಿಸೋ ಕಡಲಿನ ಮಧ್ಯೆಯೇ ಬಂಡೆಗಲ್ಲಿನ ಮೇಲೆ ಸಾಕ್ಷಾತ್ ಶಿವನೇ ನೆಲೆನಿಂತಿರೋ ನಂಬಿಕೆಯ ತಾಣ. ಶ್ರಾದ್ದ ಪ್ರಯೋಗಕ್ಕೆ ದೇಶದಲ್ಲಿರೋ ದ್ವಾದಶ ಪುಣ್ಯ ಕ್ಷೇತ್ರಗಳಲ್ಲಿ ಕಡಲತಡಿಯ ಸೋಮನಾಥೇಶ್ವರನ ಸನ್ನಿಧಾನವೂ ಒಂದು. ಹೀಗಾಗಿ ಸೋಮೇಶ್ವನ ಸನ್ನಿಧಾನದಲ್ಲಿ ನಡೆಯೋ ಶ್ರಾವಣ ಮಾಸದ ಅಮಾವಾಸ್ಯೆ ತೀರ್ಥ ಸ್ನಾನಕ್ಕೆ ಆದರದ್ದೇ ಆದ ಪ್ರಾಮುಖ್ಯತೆಯಿದೆ. ಹೀಗಾಗಿಯೇ ಶ್ರಾವಣ ಮಾಸದ ಇಂದು ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಸಮುದ್ರ ಸ್ನಾನ ಗೈದು ಪುನೀತರಾದ್ರು. ಅಮಾವಾಸ್ಯೆಯ ದಿನವಾದ ಇಂದು ಸಮುದ್ರಕ್ಕೆ ವೀಳ್ಯದೆಳೆ ಮತ್ತು ಅಡಿಕೆಯನ್ನ ಅರ್ಪಿಸಿ ಸಮುದ್ರಲ್ಲಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನ ಭಕ್ತರು ಕೊಲ್ಯ ಶ್ರೀ ಸೌಭಾಗ್ಯ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಕಟೀಲು ದೇವರ ಮೇಲೆ ಅವಹೇಳನ ಮಾಡಿರುವ ಬಗ್ಗೆ ಧಾರ್ಮಿಕ ಜಾಗೃತಿ ಮತ್ತು ಖಂಡನಾ ಸಭೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಅನಂತಪದ್ಮನಾಭ ಅಸ್ರಣ್ಣ ಬಾವುಕರಾಗಿ ಕಣ್ಣೀರಿಟ್ಟ ಘmನೆ ನಡೆಯಿತು. ದೇಶದ ಸಂಸ್ಕøತಿಯಲ್ಲಿ ಅನಾದಿ ಕಾಲದಿಂದಲೂ ತಾಯಿಗೆ ಅತ್ಯಂತ ಮಹತ್ತರತೆಯನ್ನು ಕೊಡಲಾಗಿದೆ. ಜಿಲ್ಲೆಯಲ್ಲಿ ಕಟೀಲಿನ ದೇವಿಗೆ ಸ್ವಂತ ಅಮ್ಮನಷ್ಟು ಪ್ರಾತಿನಿಧ್ಯ ಕೊಡಲಾಗುತ್ತಿದೆ. ಅಂತಹ ನಾಡಿನಲ್ಲೇ ಇದ್ದುಕೊಂಡು ಕ್ಷೇತ್ರದ ತಾಯಿಗೆ ಅವಹೇಳನಕಾರಿಯಾಗಿ ಬರೆಯುವ ಮೂಲಕ ಧರ್ಮವನ್ನು ಉರಿಸುವ ಕೆಲಸ ಆಗುತ್ತಿದೆ. ಇದರ ವಿರುದ್ಧ ಹೋರಾಡದೇ ಇದ್ದಲ್ಲಿ ಹುಟ್ಟಿರುವುದು ವ್ಯರ್ಥ. ತಪ್ಪು ಎಂದು ತಿಳಿದರೂ ಪ್ರತಿಭಟಿಸದೇ ಇದ್ದಲ್ಲಿ ಧರ್ಮ ಉಳಿಯಲು ಸಾಧ್ಯವಿಲ್ಲ. ತಪ್ಪಿನ ಅರಿವು ಲೋಕಕ್ಕೆ ತಿಳಿಸುವ ಕೆಲಸ ಆಗಬೇಕಿದೆ. ಶ್ರೀ ಕ್ಷೇತ್ರ ಕಟೀಲಿಗೆ ಮುಸ್ಲಿಂ, ಕ್ರಿಶ್ಚಿಯನ್ನರು ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಸಮಾರಸ್ಯದ ಕ್ಷೇತ್ರವೆನಿಸಿರುವ ಕಟೀಲಿನ ಹೆಸರಿಗೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಸಮಸ್ತ ಹಿಂದು ಬಾಂಧವರು ನಂಬಿಕೊಂಡು ಬಂದಿರುವ ಶ್ರೀ ಕ್ಷೇತ್ರ ಕಟೀಲಿನ ದೇವಿ ಹಾಗೂ ಹಿಂದೂ ದೇವರಿಗೆ ಅವಹೇಳನಕಾರಿಯಾಗಿ ಬರೆದಿರುವುದು ಆಘಾತವನ್ನು ಉಂಟುಮಾಡಿದೆ. ಇದು ಧರ್ಮಗಳ ನಡುವೆ ಕಲಹಕ್ಕೆ ನಡೆಸಿರುವ ಷಡ್ಯಂತ್ರವಾಗಿದೆ ಎಂದು ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಹೇಳಿದ್ದಾರೆ. ಅವರು ಕಟೀಲು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಜಬ್ಬಾರ್ ಬಿ.ಸಿ.ರೋಡು ಎಂಬಾತ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಹಾಗೂ ಅಶ್ಲೀಲವಾಗಿ ಬರೆದಿರುವುದನ್ನು ಖಂಡಿಸಿ ಉಳ್ಳಾಲ ಭಾಗದ ಹಿಂದೂ ಬಾಂಧವರು ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬುಧವಾರ ಸಾಮೂಹಿಕ ಪ್ರಾರ್ಥನೆ ನಡೆಸಿ ಶ್ರೀ ಕ್ಷೇತ್ರ ಕಟೀಲಿನಲ್ಲಿ ಪೂಜೆ ಸಲ್ಲಿಸಿ ತಪ್ಪಿತಸ್ಥನಿಗೆ ತಪ್ಪಿನ ಅರಿವಾಗುವಂತೆ ಪ್ರಾರ್ಥಿಸಿದರು. ತಾಯಿಗೆ ಅಶ್ಲೀಲ ಶಬ್ದಗಳಿಂದ ಬೈಯ್ದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸುತ್ತಿರುವುದು ತೀರಾ ಖಂಡನಾರ್ಹ. ಇಂತಹ ಮತಾಂಧ ಯುವಕರಿಗೆ ತಪ್ಪಿನ ಅರಿವಾಗುವಂತೆ ಅವರ ಧರ್ಮದ ಬಾಂಧವರೇ ಒಳ್ಳೆಯ ನುಡಿಗಳನ್ನು ಹೇಳಬೇಕು. ಅಂತಹ ಯುವಕರ ಮನಸ್ಸಿನಲ್ಲಿರುವ ದುಗುಡನ್ನು ದೂರವಾಗಿಸಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲದ ಯುವಕನೋರ್ವ ಬೆಂಗಳೂರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ವೇಳೆ ನಡೆದಿದ್ದು, ಮಂಗಳವಾರ ಮುಂಜಾನೆ ಮನೆಮಂದಿಗೆ ಮಾಹಿತಿ ಲಭಿಸಿದೆ. ಅಕ್ಕರಕೆರೆ ಮಸೀದಿ ಬಳಿ ನಿವಾಸಿ ಅಬ್ದುಲ್ ಲತೀಫ್ ಎಂಬವರ ಪುತ್ರ ನಶಾಲ್ ಇಸ್ಮಾಯಿಲ್(20)ನಿಗೂಢ ಸಾವನ್ನಪ್ಪಿದ್ದಾನೆ. ಮಂಗಳೂರಿನ ಪಿವಿಎಸ್‍ನಲ್ಲಿರುವ ಸಬ್‍ಡೀನ್ ಸಂಸ್ಥೆಯಲ್ಲಿ ಬಿಟೆಕ್ ಪದವಿ ಮುಗಿಸಿದ್ದ ಈತ ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಕಂಪೆನಿ ಒಂದಕ್ಕೆ ಸಂದರ್ಶನಕ್ಕಾಗಿ ತೆರಳಿದ್ದ. ಅಲ್ಲಿ ಇದೀಗ ನಿಗೂಢವಾಗಿ ಸಾನನ್ನಪ್ಪಿರುವ ಕುರಿತು ಬೆಂಗಳೂರಿನ ಪೊಲೀಸರಿಂದ ಸಂಬಂಧಿಕರಿಗೆ ತಿಳಿದುಬಂದಿದೆ. ಕೊಲೆ ಶಂಕೆ: ನಶಾಲ್ ಬೆಂಗಳೂರಿನ ಎಚ್‍ಏಎಲ್ ನ ಹಳೇ ವಿಮಾಣ ನಿಲ್ದಾಣದ ಸಮೀಪದ ಕಟ್ಟಡವೊಂದರಲ್ಲಿ ಗೆಳೆಯರೊಂದಿಗೆ ನೆಲೆಸಿದ್ದ. ಈತನ ಜೊತೆಗಿದ್ದ ಇಬ್ಬರು ಗೆಳೆಯರಿಗೆ ಅಲ್ಲಿಯದ್ದೇ ಆದ ಯುವಕರ ತಂಡದ ಜೊತೆಗೆ ವೈಷಮ್ಯವಿತ್ತು. ಸೋಮವಾರ ಸಂಜೆ ಇವರು ನೆಲೆಸಿದ್ದ ಕಟ್ಟಡದ ಸಮೀಪ ನಿರ್ಮಾಣ ಹಂತದ ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ನಶಾಲ್ ಸಹಿತ ಇಬ್ಬರು ಗೆಳೆಯರು ಕುಳಿತಿದ್ದರು. ಇದೇ ವೇಳೆ ಅಲ್ಲಿಗೆ ವೈಷಮ್ಯ ಹೊಂದಿದ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ತೊಕ್ಕೊಟ್ಟು ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆ ವತಿಯಿಂದ ಶ್ರೀ ಕೃಷ್ಣ ಜನಮಾಷ್ಠಮಿ ಪ್ರಯುಕ್ತ ನಡೆಯುವ ಮೊಸರುಕುಡಿಕೆ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಆಕರ್ಷಕ ಟ್ಯಾಬ್ಲೋಗಳು , ಹುಲಿ ವೇಷ ಧಾರಿಗಳು ಗಮನ ಸೆಳೆಯಿತು. ಎಬಿಸಿ ಕ್ಲಬ್ ( ಅಗ್ನಿ ಭಾಯ್ಸ್ ಸರ್ಕಲ್), ತೊಕ್ಕೊಟ್ಟು ಇವರಲ್ಲಿ ಸದಸ್ಯರೋರ್ವರ ಕಾರೊಂದಕ್ಕೆ ಹುಲಿಯ ಬಣ್ಣ ಅಂಟಿಸಿರುವುದು ಆಕರ್ಷಣೆಯ ಬಿಂದು ಆಗಿತ್ತು. ತುಂತುರು ಮಳೆಯ ನಡುವೆ ಆರಂಭಗೊಂಡ ಉತ್ಸವದಲ್ಲಿ ನಿರೀಕ್ಷೆಯಷ್ಟು ಜನ ಭಾಗವಹಿಸಿರಲಿಲ್ಲ. ಆದರೂ ಕಳೆದ ವರ್ಷಗಿಂತ ಅಧಿಕ ಜನ ಭಾಗವಹಿಸಿ ಉತ್ಸವವನ್ನು ಯಶಸ್ವಿಯನ್ನಾಗಿಸಿದ್ದಾರೆ ಅನ್ನುತ್ತಾರೆ ಸಂಘಟಕರು. ಟ್ಯಾಬ್ಲೋಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನವಾಗಿತ್ತು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಎರಡು  ವಾರಗಳ  ಹಿಂದೆ ಅಪಹರಣಕ್ಕೊಳಗಾಗಿದ್ದ ಮಂಜನಾಡಿ ಕಲ್ಕಟ್ಟ ನಿವಾಸಿ ಆರೀಫ್(೨೪)  ಪತ್ತೆಯಾಗಿದ್ದು,  ಅಪಹರಣಕಾರರೇ ಬಸ್ಸಿಗೆ ಹಣ ಕೊಟ್ಟು ಸುಳ್ಯ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆಂದು   ಕೊಣಾಜೆ ಪೊಲೀಸ್ ಠಾಣೆಗೆ ಗುರುವಾರ ಬಂದಿರುವ ಆರೀಫ್ ತಿಳಿಸಿದ್ದಾರೆ. ವಿದೇಶದಲ್ಲಿದ್ದ ಆರೀಫ್ ಕೆಲ ತಿಂಗಳುಗಳ ಹಿಂದೆ ಊರಿಗೆ ಮರಳಿದ್ದರು. ಬಳಿಕ‌ ಮೀನಿನ ವ್ಯಾಪಾರ ಆರಂಭಿಸಿದ್ದ ಅವರು ಚೆಂಬುಗುಡ್ಡೆ ಸಮೀಪ ಮೀನು ವ್ಯಾಪಾರ ನಡೆಸುತ್ತಿದ್ದರು.ವಾರದ ಹಿಂದೆ ಮೀನು ತರಲೆಂದು ಮಂಗಳೂರಿನ ಧಕ್ಕೆಗೆ ತೆರಳುವ ಸಂದಭ೯ ಸ್ಕಾಪಿ೯ಯೋ ವಾಹನದಲ್ಲಿ ಬಂದಿದ್ದ ತಂಡ ನಸುಕಿನ ಜಾವ ಕಲ್ಕಟ್ಟ ದಿಂದ ಅಪಹರಣ ನಡೆಸಿತ್ತು. ಬಳಿಕ ಮನೆ ಮಂದಿ ಗೆ  ವಿದೇಶದ ದೂರವಾಣಿ ಸಂಖ್ಯೆ ಮೂಲಕ ಬಂದ ಕರೆಯಲ್ಲಿ ರೂ.೧.೫ ಕೋಟಿ ಹಣದ  ಬೇಡಿಕೆ ಮುಂದಿಟ್ಟಿತ್ತು. ಇಲ್ಲವಾದಲ್ಲಿ ಕೊಲ್ಲುವ ಬೆದರಿಕೆಯನ್ನು ಹಾಕಿತ್ತು. ಅದರಂತೆ ಮನೆಮಂದಿ ಬೆದರಿ ರೂ.೨೫ ಲಕ್ಷ ರೂ ಹಣ ಕೊಡುವ ವಿಶ್ವಾಸ ನೀಡಿದರೂ ಅಪಹರಣಕಾರರು ಒಪ್ಪಿರಲಿಲ್ಲ. ಇದರಿಂದ ದ ಕುಟುಂಬ ತಡವಾಗಿ ಕೊಣಾಜೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಚಿತ್ರ: ತನುಂಜಯರಾವ್ ಕೊಲ್ಯ ಕುಂಪಲ: ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ 19ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಶೋಭಯಾತ್ರೆಯೊಂದಿಗೆ ವಿಜೃಂಭಣೆಯಿಂದ ಜರಗಿತು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಚಿತ್ರ: ಯಶು ಪಕ್ಕಳ ತೊಕ್ಕೊಟ್ಟು: ತುಳುನಾಡಿನ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯ ಯುವಸಮುದಾಯದಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನು ಆಯೋಜಿಸುವುದರಿಂದ ತುಳು ಜನರ ಆಚಾರ ವಿಚಾರಗಳನ್ನು ದೇಶದಾದ್ಯಂತ ಪರಿಚಯಿಸಲು ಸಹಕಾರಿ ಎಂದು ರಾಜ್ಯ ಸರಕಾರದ ಮುಖ್ಯ ಸಚೇತಕ ಹಾಗೂ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಬಸ್ ನಿಲ್ದಾಣದ ಭವ್ಯ ವೇದಿಕೆಯಲ್ಲಿ ಬುಧವಾರ ಟೀಮ್ ಜಿಮ್ ಆಯೋಜಿಸಿದ ಪಿಲಿಗೊಬ್ಬು 2016 ಹುಲಿವೇಷಧಾರಿಗಳ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ಸಂಸ್ಕøತಿಯನ್ನು ವೈಶಿಷ್ಟ್ಯತೆಯನ್ನು ಹೊಂದಿದೆ. ಆದರೆ ಆಧುನಿಕ ಯುಗದಲ್ಲಿ ಅದನ್ನು ಆಚರಿಸುವ , ಆರಾಧಿಸುವ ಕಾರ್ಯ ಯುವಸಮುದಾಯದಿಂದ ಸರಿಯಾಗಿ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಅಗತ್ಯ ಎಂದರು. ಮಾಜಿ ಸಚಿವ ಕೃಷ್ಣ.ಜೆ.ಪಾಲೇಮಾರ್ ಮಾತನಾಡಿ ತುಳುನಾಡಿನ ಸಂಸ್ಕøತಿಯನ್ನು ಪರಿಚಯಿಸಿ, ಅದರಲ್ಲಿ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಸಂಸ್ಕøತಿಯನ್ನು ಉಳಿಸಲು ವಿಶಿಷ್ಟ ರೀತಿಯ ಪ್ರಯತ್ನ ನಡೆಸುವ ಸಂಘಟಕರ ಕಾರ್ಯ ಶ್ಲಾಘನೀಯ ಎಂದರು. ಶ್ರೀ ದೇವಿ ಎಜ್ಯುಕೇಷನ್…

Read More