Author: UllalaVani

Kannada News From Coastal Karnataka

ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಪಿಎಫ್‍ಐನವರ ಯುನಿಟಿ ಮಾರ್ಚ್ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ವಿಧಿಸಿರುವ ಹಿನ್ನೆಲೆಯಲ್ಲಿ ಉಳ್ಳಾಲದ ವಿವಿದೆಡೆ ಕ್ಯಾಮರಾ ಕಣ್ಗಾವಲು ಇರಿಸುವ ಮೂಲಕ ಬಿಗಿಬಂದೋಬಸ್ತನ್ನು ಆಯೋಜಿಸಲಾಗಿದೆ. ಉಳ್ಳಾಲದಾದ್ಯಂತ 8 ಕ್ಯಾಮರಾಗಳನ್ನು ಕ್ಯಾಮರಾ ಮೆನ್ ಜತೆಗೆ ನಿಯೋಜಿಸಲಾಗಿದೆ. ತೊಕ್ಕೊಟ್ಟು, ಮಾಸ್ತಿಕಟ್ಟೆ, ಕೋಡಿ, ಕೋಟೆಪುರ, ದರ್ಗಾ ವಠಾರ, ಮುಕ್ಕಚ್ಚೇರಿ, ಅಬ್ಬಕ್ಕ ವೃತ್ತದ ಭಾಗಗಳಲ್ಲಿ ವೀಡಿಯೋ ಕ್ಯಾಮರಾಗಳನ್ನು ಇರಿಸಲಾಗಿದೆ. ಬೆಳಗ್ಗಿನಿಂದ ಸಂಜೆಯವರೆಗೆ ಕ್ಯಾಮರಾಗಳನ್ನು ರಸ್ತೆಬದಿಗಳಲ್ಲೇ ಇರಿಸಲಾಗಿದೆ. ಅಹಿತಕರ ಘಟನೆಗಳ ತಡೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಇಂತಹ ಕ್ರಮವನ್ನು ಪೊಲೀಸ್ ಕಮೀಷನರ್ ಅವರ ಆದೇಶದಂತೆ ಇರಿಸಲಾಗಿದೆ. ರದ್ದುಗೊಂಡ ಕಾರ್ಯಕ್ರಮ: ಉಳ್ಳಾಲದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪಿಎಫ್‍ಐ ವತಿಯಿಂದ ಯುನಿಟಿ ಮಾಚ್ ್ ಆಯೋಜಿಸಲಾಗಿತ್ತು. ಆದರೆ ಜಿಲ್ಲಾಡಳಿತದಿಂದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮಂಗಳೂರಿಗೆ ಸ್ಥಳಾಂತರಗೊಳಿಸಲಾಗಿತ್ತು. ಅಲ್ಲದೆ ತೊಕ್ಕೊಟ್ಟುವಿನಾದ್ಯಂತ ಕಾರ್ಯಕ್ರಮದ ಪ್ರಚಾರಕ್ಕಾಗಿ ಹಾಕಲಾಗಿದ್ದ ಬ್ಯಾನರ್, ಕಮಾನು ಧ್ವಜಗಳನ್ನು ಉಳ್ಳಾಲ ಪೊಲೀಸರು ತೆರವು ಕೂಡಾ ನಡೆಸಿದ್ದರು.

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅವರು ಉಳ್ಳಾಲದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ನೆಹರು ಮೈದಾನಕ್ಕೆ ಸ್ಥಳಾಂತರಗೊಂಡಿರುವುದಲ್ಲದೆ ಇಂದು ಸಂಜೆ 6 ಗಂಟೆಯಿಂದ ಫೆ.16ರ ವರೆಗೆ ಮುಂಜಾಗ್ರತಾ ಕ್ರಮವಾಗಿ ಉಳ್ಳಾಲದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪೊಲೀಸ್ ಕಮೀಷನರ್ ಚಂದ್ರಶೇಖರ್ ಆದೇಶದಂತೆ ಇಂದು ಸಂಜೆಯಿಂದ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ಅವಧಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಬೆಂಬಲಿತ ಸಂಘmನೆಗಳು ಉಳ್ಳಾಲದಾದ್ಯಂತ ಯಾವುದೇ ಸಭೆ, ಸಮಾರಂಭ, ರ್ಯಾಲಿಯನ್ನು ನಡೆಸುವಂತಿಲ್ಲ ಅನ್ನುವುದನ್ನು ಆದೇಶಿಸಲಾಗಿದೆ. ಮುಂಜಾಗ್ರತಾ ಕ್ರವiವಾಗಿ ಉಳ್ಳಾಲದಲ್ಲಿ ಉಳ್ಳಾಲ ಹಾಗೂ ಕೆಎಸ್ ಆರ್ ಪಿ ಪೊಲೀಸರು ಮಾಚ್ ್ ನಡೆಸಿದರು. ಮೊಗವೀರಪಟ್ನ, ಕೋಡಿ, ಕೋಟೆಪುರ, ದರ್ಗಾ ವಠಾರ, ಮಾಸ್ತಿಕಟ್ಟೆ ಯಾಗಿ ಪೊಲೀಸರು ಮಾಚ್ ್ ನಡೆಸಿದರು. ಎಸಿಪಿ ಶೃತಿ , ಠಾಣಾಧಿಕಾರಿ ಗೋಪಿಕೃಷ್ಣ ಹಾಗೂ ಎಸ್.ಐ ರಾಜೇಂದ್ರ ಅವರ ನೇತೃತ್ವದಲ್ಲಿ ಮಾರ್ಚ್ ನಡೆಯಿತು.

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಅನುಮತಿಯಿಲ್ಲದೆ ಫಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲದಲ್ಲಿ ಫೆ.17 ರಂದು ಹಮ್ಮಿಕೊಂಡಿರುವ ಕಾರ್ಯಕ್ರಮದ ಪ್ರಚಾರಕ್ಕಾಗಿ ಉಳ್ಳಾಲ, ತೊಕ್ಕೊಟ್ಟು, ಕಲ್ಲಾಪುವಿನಲ್ಲಿ ಹಾಕಿದ್ದ ಸ್ವಾಗತ ಕಮಾನುಗಳು, ಬ್ಯಾನರ್ , ಧ್ವಜಗಳನ್ನು ಪೊಲೀಸರು ತೆರವುಗೊಳಿಸಿ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಫೆ.17 ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವರ್ಷಾಚರಣೆ ಪ್ರಯುಕ್ತ ಉಳ್ಳಾಲದಲ್ಲಿ ಯುನಿಟಿ ಮಾರ್ಚ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅದಕ್ಕಾಗಿ ಬುಧವಾರ ತಡರಾತ್ರಿ ಆಯೋಜಕರು ಉಳ್ಳಾಲ, ಕಲ್ಲಾಪು, ತೊಕ್ಕೊಟ್ಟು, ಚೆಂಬುಗುಡ್ಡೆ ಭಾಗದಲ್ಲಿ ಸ್ವಾಗತ ಕಮಾನು , ಬ್ಯಾನರ್ ಗಳನ್ನು ಹಾಗೂ ಧ್ವಜಗಳನ್ನು ಪ್ರಚಾರಕ್ಕೆಂದು ಅಳವಡಿಸಿದ್ದರು. ಆದರೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಯಾವುದೇ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಜಿಲ್ಲಾ ಡಳಿತ ಹಾಗೂ ಪೊಲೀಸ್ ಕಮೀಷನರ್ ಅವರ ಆದೇಶದಂತೆ ಎಸಿಪಿ ಶೃತಿ ನೇತೃತ್ವದಲ್ಲಿ ಉಳ್ಳಾಲ ಪೊಲೀಸರು ಎಲ್ಲವನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಈ ಕುರಿತು ಆಯೋಜಕರ ವಿರುದ್ಧ ಪ್ರಕರಣವೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟೆಕಾರು, ಕಿನ್ಯಾ, ಬೆಳ್ಮ ಪ್ರದೇಶದಲ್ಲಿ ಪಡಿತರ ಸಾಮಾಗ್ರಿಗಳು ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ಪಡಿತರ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ನಿರ್ಣಯಕ್ಕೆ ಪಡಿತರ ಅಂಗಡಿಯ ಮಾಲೀಕರು ಮುಂದಾಗಿದ್ದಾರೆ. ಕೂಪನ್ ವ್ಯವಸ್ಥೆ ಜಾರಿಯಾದ ದಿನದಿಂದ ಈ ಸಮಸ್ಯೆಯನ್ನು ಪಡಿತರ ಅಂಗಡಿಯವರು ಅನುಭವಿಸುತ್ತಿದ್ದು ಯಾವುದೇ ರೇಷನ್ ಅಂಗಡಿಯವರಿಗೆ ಲಭ್ಯವಾಗುತ್ತಿಲ್ಲ. ಸರಿಯಾದ ಸಮಯದಲ್ಲಿ ಸಾಮಗ್ರಿಗಳು ಪೂರೈಕೆಯಾಗದ ಕಾರಣ ಕೂಪನ್ ಹಿಡಿದು ಬರುವ ಕಾರ್ಡುದಾರರಿಗೆ ರೇಷನ್ ಸಾಮಗ್ರಿಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಸರಿಪಡಿಸುವ ತನಕ ಪಡಿತರ ಅಂಗಡಿಗಳನ್ನು ತೆರೆಯಲು ಸಾಧ್ಯವಾಗುತ್ತಿಲ್ಲ ಅನ್ನುವುದು ಅಂಗಡಿ ಮಾಲೀಕರ ಅಳಲಾಗಿದೆ . ನೂತನ ವ್ಯವಸ್ಥೆಯಿಂದ ತೊಂದರೆ : ಆಹಾರ ಸಚಿವರು ನೂತನ ಕಾನೂನು ಜಾರಿಗೆ ಬಂದ ಬಳಿಕ ಜನ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಕೂಪನ್ ವ್ಯವಸ್ಥೆ ಸಾರ್ವಜನಿಕರಿಗೆ ಸಿಕ್ಕಿದ್ದರೂ, ಅದರಲ್ಲಿ ಉಲ್ಲೇಖಿಸಿದಂತೆ ಅಕ್ಕಿಯನ್ನು ವಿತರಿಸಬೇಕಾಗಿದೆ. ಆದರೆ ಕೂಪನ್ ಕುರಿತ ಸಂಖ್ಯೆಯನ್ನು ಅಂಗಡಿ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ :ಉಳ್ಳಾಲ ನಗರಸಭೆಯ ಅನರ್ಹಗೊಂಡ ಎರಡು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ 24ನೇ ಚೆಂಬುಗುಡ್ಡೆ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಅಭ್ಯರ್ಥಿ ಭಾಝಿಲ್ ಡಿ.ಸೋಜ ಮತ್ತು 26ನೇ ಕಲ್ಲಾಪು ವಾರ್ಡ್‍ನಿಂದ ಕಾಂಗ್ರೆಸ್‍ನ ಅಭ್ಯರ್ಥಿ ಉಸ್ಮಾನ್ ಕಲ್ಲಾಪು ಗೆಲುವು ಸಾಧಿಸಿದ್ದು, ಉಳ್ಳಾಲ ನಗರಸಭೆಯ ಈ ಎರಡೂ ಸ್ಥಾನಗಳನ್ನು ಕಾಂಗ್ರೆಸ್ ಉಳಿಸಿಕೊಂಡಂತಾಗಿದೆ. ಚೆಂಬುಗುಡ್ಡೆಯ 24ನೇ ವಾರ್ಡ್‍ನಲ್ಲಿ ಬಾಝಿಲ್ ಡಿ.ಸೋಜ ತನ್ನ ಪ್ರತಿಸ್ಪರ್ಧಿ ಬಿಜೆಪಿಯ ಸತೀಶ್ ಚೆಂಬುಗುಡ್ಡೆ ಅವರೆದುರು ಮತಗಳ ಅಂತರದಿಂದ ಜಯಶಾಲಿಯಾದರೆ, 26ನೇ ಕಲ್ಲಾಪು ವಾರ್ಡ್‍ನ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಉಸ್ಮಾನ್ ಕಲ್ಲಾಪು ತನ್ನ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ದಿನಕರ ಉಳ್ಳಾಲ್ ಅವರೆದುರು ಮತಗಳ ಅಂತರದಿಂದ ವಿಜಯಿಯಾದರು. ಉಳ್ಳಾಲ ಪುರಸಭೆಯಾಗಿದ್ದ ಉಳ್ಳಾಲಕ್ಕೆ 2013ರಲ್ಲಿ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನವನ್ನು ಪಡೆಯುವ ಮೂಲಕ ಆಡಳಿತಕ್ಕೇರಿದರೆ ಬಿಜೆಪಿ 7 ಸ್ಥಾನಗಳನ್ನು, ಪಕ್ಷೇತರ 2, ಎಸ್‍ಡಿಪಿಐ ಒಂದು ಸ್ಥಾನವನ್ನು ಪಡೆದಿತ್ತು. ಕಾಂಗ್ರೆಸ್‍ನ 24ನೇ ಚೆಂಬುಗುಡ್ಡೆ ವಾರ್ಡ್‍ನ ಸದಸ್ಯ ಬಾಝಿಲ್ ಡಿ.ಸೋಜ ಮತ್ತು 26ನೇ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಪ್ಪಳದ ಕುಖ್ಯಾತ ರೌಡಿ ಹಲವು ಪ್ರಕರಣಗಳ ಆರೋಪಿ ಖಾಲಿಯಾ ರಫೀಕ್ ನನ್ನು ಕೋಟೆಕಾರು ಪೆಟ್ರೋಲ್ ಪಂಪ್ ಎದುರುಗಡೆ ದುಷ್ಕರ್ಮಿಗಳು ಅಪಘಾತವೆಸಗಿ ಗುಂಡಿಕ್ಕಿ ಬಳಿಕ ತಲವಾರಿನಿಂದ ಕಡಿದು ಹತ್ಯೆ ನಡೆಸಿದ್ದಾರೆ. ಈ ಮೂಲಕ 2013ರಲ್ಲಿ ಖಾಲಿಯಾನಿಂದ ಹತ್ಯೆಗೀಡಾಗಿದ್ದ ಮುತಾಲಿಬ್ ಸಹೋದರರು ಸೇಡು ತೀರಿಸಿಕೊಂಡಿದ್ದಾರೆಂಬ ಮಾಹಿತಿ ಮಂಜೇಶ್ವರ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಆಗಿದ್ದೇನು : ನಿನ್ನೆ ತಡರಾತ್ರಿ 11.30ರ ವೇಳೆ ಖಾಲಿಯಾ ರಫೀಕ್, ಝಾಹಿರ್ ಮತ್ತು ಇನ್ನಿಬ್ಬರು ಗೆಳೆಯರು ಉಪ್ಪಳದಿಂದ ಮಂಗಳೂರಿಗೆ ರಿಟ್ಝ್ ಕಾರಿನಲ್ಲಿ ತೆರಳುತ್ತಿದ್ದರು. ಇವರನ್ನು ದುಷ್ಕರ್ಮಿಗಳ ಇಬ್ಬರ ತಂಡ ಸ್ವಿಫ್ಟ್ ಕಾರಿನಲ್ಲಿ ಫಾಲೋ ಮಾಡುತಿತ್ತು. ಖಾಲಿಯಾ ರಫೀಕನ ಕಾರು ಕೋಟೆಕಾರು ಪೆಟ್ರೋಲ್ ಪಂಪ್ ತಲುಪುತ್ತಿದ್ದಂತೆ, ದುಷ್ಕರ್ಮಿಗಳು ಹಿಂದೆಯೇ ನಿಗದಿಪಡಿಸಿದ್ದ ಲಾರಿಯೊಂದು ವಿರುದ್ಧ ಧಿಕ್ಕಿನಲ್ಲಿ ಬಂದು ಕಾರಿಗೆ ಢಿಕ್ಕಿ ಹೊಡೆದಿದೆ. ಅಷ್ಟರಲ್ಲಿ ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರು ಖಾಲಿಯಾ ರಫೀಕ್ ಮೇಲೆ ಗುಂಡು ಹಾರಿಸಿದ್ದಾರೆ. ಅದನ್ನು ತಡೆಯಲು ಬಂದ ಝಾಹಿರ್ ಎಂಬಾತನಿಗೆ ತಲವಾರಿನಿಂದ ಕಡಿದಿದ್ದಾರೆ. ಗುಂಡೇಟು ತಗಲಿದರೂ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ತಲಪಾಡಿ:ತಲಪಾಡಿ ಟೋಲ್‍ಗೇಟ್ ವಿರುದ್ಧ ಕಾಂಗ್ರೆಸ್ ಪ್ರೇರಿತ ಗಡಿನಾಡು ರಕ್ಷಣಾ ವೇದಿಕೆ ಪ್ರತಿಭಟನೆ ಕೈಬಿಡುತ್ತಿದ್ದಂತೆ ಇದೀಗ ತಲಪಾಡಿಯ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಕೇರಳದ ಎಲ್ ಡಿವೈಎಫ್ ಮಂಜೇಶ್ವರ ಹಾಗೂ ಉಳ್ಳಾ¯ ಬ್ಲಾಕ್ ಡಿವೈಎಫ್ ಐ ನೇತೃತ್ವದಲ್ಲಿ ಭಾನುವಾರ ಟೋಲ್ ಗೇಟಿನ ಎರಡು ಭಾಗಗಳಲ್ಲಿ ಪ್ರತಿಭಟನೆ ನಡೆದು, ಕಂಪೆನಿ ಬೇಡಿಕೆಗಳಿಗೆ ಸ್ಪಂಧಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಮುಂದಿಟ್ಟಿದ್ದಾರೆ. ತಲಪಾಡಿಯ ನಾಗರಿಕ ಹಿತರಕ್ಷಣಾ ಸಮಿತಿ, ಖಾಸಗಿ ಬಸ್ಸು ಮಾಲಕರ ಸಂಘ , ಎಸ್ ಎಸ್ ಎಫ್ ತಲಪಾಡಿ ಸೆಕ್ಟರ್, ತಲಪಾಡಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಮಹಿಳಾ ಸಂಘಟನೆಗಳು ಹಾಗೂ ಕೇರಳ ಭಾಗದ ಎಲ್ ಡಿವೈಎಫ್ ಮಂಜೇಶ್ವರ ಹಾಗೂ ಉಳ್ಳಾಲ ಬ್ಲಾಕ್ ಡಿವೈ ಎಫ್ ಐ ಎರಡು ಕಡೆಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಕೆ.ಸಿ.ರೋಡಿನಿಂದ ನಾಗರಿಕ ಹಿತರಕ್ಷಣಾ ಸಮಿತಿ ರ್ಯಾಲಿ ಮೂಲಕ ಟೋಲ್ ತಲುಪಿದರೆ, ಕೇರಳದ ಎಲ್ ಡಿವೈ ಎಫ್ ನೇತೃತ್ವದ ಪ್ರತಿಭಟನಾಕಾರರು ಮೇಲಿನ ತಲಪಾಡಿಯಿಂದ ಟೋಲ್ ವರೆಗೆ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ದೇರಳಕಟ್ಟೆ: ದೇಶದ ಅಭಿವೃದ್ದಿಯಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಜೀವನದ ಮೌಲ್ಯಗಳನ್ನು ಕಲಿಸಿಕೊಡುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕನ ಮೇಲಿದೆ ಎಂದು ಮಂಡ್ಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ. ಅವರು ನಿಟ್ಟೆ ಶಿಕ್ಷಣ ಸಂಸ್ಥೆ ಮತ್ತು ನಿಟ್ಟೆ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ಗ್ರಾಮೀಣ ಪ್ರದೇಶದ ಪ್ರೌಢಶಾಲೆಗಳಿಗೆ ನೀಡುವ `ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಅತ್ಯುತ್ತಮ ಶಾಲೆ ಪ್ರಶಸ್ತಿಯನ್ನು ಪಡೆದ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆ ಮತ್ತು ವೇಣೂರು ಸರಕಾರಿ ಪ್ರೌಢಶಾಲೆಗೆ 15 ಲಕ್ಷ ರೂ . ಮತ್ತು 10 ಲಕ್ಷ ರೂ. ಗಳ ಚೆಕ್ ವಿತರಿಸಿ ಆಶೀರ್ವಚನ ನೀಡಿದರು. 100 ವರ್ಷಗಳ ಹಿಂದೆ ಮೈಸೂರು ಪ್ರಾಂತ್ಯದಲ್ಲಿ ಸಾಕ್ಷರತಾ ಶೇ. 5 ರಷ್ಟಿತ್ತು. ಖಾಸಗಿ ಶಾಲೆಗಳ ಹಾಗೂ ಸರಕಾರಿ ವ್ಯವಸ್ಥೆಯಿಂದ ಸದ್ಯ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಉಳ್ಳಾಲ ನಗರಸಭೆಗೆ ನಡೆದ ಉಪಚುನಾವಣೆಯಲ್ಲಿ ಚೆಂಬುಗುಡ್ಡೆ ವಾರ್ಡ್‍ನಲ್ಲಿ ಶೇ. 58 ಮತದಾನವಾದರೆ, ಕಲ್ಲಾಪು ವಾರ್ಡ್‍ನಲ್ಲಿ ಅತ್ಯಧಿಕ ಶೇ. 72.9 ಮತದಾನವಾಗಿದೆ. ಎರಡು ವಾರ್ಡುಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಒಟ್ಟು ಶೇ. 65.2 ಮತದಾನವಾಗಿದ್ದು, ಎರಡೂ ವಾರ್ಡ್‍ಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಿದರು. ನಗರಸಭೆಯ 24ನೇ ಚೆಂಬುಗುಡ್ಡೆ ವಾರ್ಡ್‍ನಲ್ಲಿ ಬಬ್ಬುಕಟ್ಟೆ ಶಾಲೆಯಲ್ಲಿ ಶೇ. 58 ಮತದಾನ ನಡೆದಿದ್ದು, ಒಟ್ಟು 1520 ಮತದಾರರಿದ್ದು 728 ಪುರುಷ ಮತದಾರರು ಮತ್ತು 792 ಮಹಿಳಾ ಮತದಾರರಿದ್ದಾರೆ. ಚುನಾವಣೆಯಲ್ಲಿ 884 ಮತದಾರರು ಮತದಾನ ನಡೆಸಿದ್ದು, 339 ಪುರುಷರು,ಮತ್ತು 485 ಮಹಿಳೆಯರು ಮತದಾನ ಮಾಡಿದ್ದಾರೆ. ಈ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಹಾಲಿ ಸದಸ್ಯ ಭಾಝಿಲ್ ಡಿ.ಸೋಜ ಅವರು ಕಣದಲ್ಲಿದ್ದರೆ, ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಸತೀಶ್‍ಚೆಂಬುಗುಡ್ಡೆ, ಸಿಪಿಐಎಂನ ಹರೀಶ್ ಶೆಟ್ಟಿ ಮತ್ತು ಪಕ್ಷೇತರರಾಗಿ ಖಲಂದರ್ ಸ್ಪರ್ಧೆಯಲ್ಲಿದ್ದಾರೆ. 26ನೇ ಬಬ್ಬುಕಟ್ಟೆ ವಾರ್ಡ್‍ಗೆ ಕಲ್ಲಾಪು ಪಟ್ಲ ಶಾಲೆಯಲ್ಲಿ ಮತದಾನ ನಡೆದಿದ್ದು ಶೇ. 72.9 ಮತದಾನವಾಗಿದೆ. ಈ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಲಾಭದಾಯಕ ಕೃಷಿಯನ್ನು ಮಾಡುವ ಬಗ್ಗೆ ರೈತರು ಒಲವು ತೋರಿಸಬೇಕಿದ್ದು. ಕೇವಲ ಒಂದೇ ಕೃಷಿಯಲ್ಲದೇ ಸಮಗ್ರ ಕೃಷಿಪದ್ಧತಿಯನ್ನು ರೂಢಿಸಿಕೊಳ್ಳುವ ಮೂಲಕ ಉತ್ಪಾಧನೆಯನ್ನು ದ್ವಿಗುಣಗೊಳಿಸುವ ಬಗ್ಗೆ ಕೃಷಿಕರು ಚಿಂತಿಸಬೇಕಿದೆ ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ವಾಸುದೇವಪ್ಪ ಅಭಿಪ್ರಾಯಪಟ್ಟರು. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ,ಉಳ್ಳಾಲ ಕಾಪಿಕಾಡುವಿನ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಬ್ರಹ್ಮವಾರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನೆ ಕೇಂದ್ರ , ಕೊಚ್ಚಿನ್ ನ ಗೇರು ಮತ್ತು ಕೊಕ್ಕೋ ಅಭಿವೃದ್ಧಿ ನಿರ್ದೇಶನಾಲಯ ,ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯ,ದ.ಕ ಮತ್ತು ಉಡುಪಿ ಜಿಲ್ಲೆಗಳ ತೊಟಗಾರಿಕೆ ಇಲಾಖೆ , ನವದೆಹಲಿಯ ರಾಷ್ಟ್ರೀಯ ತೋಟಗಾರಿಕೆ ಮಿಷನ್, ಕೃಷಿ ಇಲಾಖೆ ಮತ್ತು ಆತ್ಮಯೋಜನೆ, ಮಂಗಳೂರು ಮತ್ತು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿಕ ಸಮಾಜ, ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮ ಮತ್ತು…

Read More