Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ತಲಪಾಡಿ ಟೋಲ್‍ಗೇಟ್: ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

UllalaVaniBy UllalaVaniFebruary 10, 2017No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತಲಪಾಡಿ: ಕೇರಳ -ಕರ್ನಾಟಕ ಗಡಿಪ್ರದೇಶ ತಲಪಾಡಿಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಎರಡನೇ ದಿನಕ್ಕೆ ಪ್ರತಿಭಟನೆ ಮುಂದುವರಿದಿದ್ದು, ಕೇರಳ ಮತ್ತು ಕರ್ನಾಟಕದ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಿಸಿತ್ತು. ಪೊಲೀಸರು ಲಘು ಲಾಠಿ ಚಾರ್ಜ್ ಮೂಲಕ ಪ್ರತಿಭಟನಾಕಾರರನ್ನು ಚದುರಿಸಿದರೂ ಜಗ್ಗದ ಉದ್ರಿಕ್ತರು ನವಯುಗ ಕಂಪೆನಿಯ ತಾತ್ಕಾಲಿಕ ಭರವಸೆಯಿಂದ ಪ್ರತಿಭಟನೆಯಿಂದ ಹಿಂದೆ ಸರಿದರು.

DSC_0999 DSC_0990 DSC_0989 DSC_0983 DSC_0980 DSC_0969 DSC_0957 DSC_0943 DSC_0940 DSC_0922 DSC_0920 DSC_0916 DSC_0912 DSC_0895 DSC_0868 DSC_0866 DSC_0864 DSC_0860 DSC_0857 DSC_0851 DSC_0848 DSC_0051 DSC_0847 DSC_0048 DSC_0112

????????????????????????????????????
????????????????????????????????????

DSC_0065 DSC_0034 DSC_0063 DSC_0032 DSC_0025 DSC_0019
ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ, ಸ್ಥಳೀಯರಿಂದ ಟೋಲ್ ಪಡೆಯದಂತೆ , ರಾ.ಹೆ.66ರ ಕಾಮಗಾರಿ ಪೂರ್ಣಗೊಳಿಸಿಯೇ ಟೋಲ್ ಪಡೆಯುವಂತೆ ಆಗ್ರಹಿಸಿ ಬುಧವಾರ ಗಡಿನಾಡು ರಕ್ಷಣಾ ವೇದಿಕೆ, ಕಾಂಗ್ರೆಸ್‍ನ ಮಂಜೇಶ್ವರ ಮತ್ತು ತಲಪಾಡಿಯ ಮುಖಂಡರು , ರಿಕ್ಷಾ, ಬಸ್ಸು ಚಾಲಕ ಮಾಲಕರು ಪ್ರತಿಭಟನೆ ನಡೆಸಿದ್ದರು. 12 ಮಂದಿಯ ಬಂಧನದಿಂದ ಪ್ರತಿಭಟನೆ ಅಲ್ಲಿಗೆ ನಿಂತಿತ್ತು. ಗುರುವಾರ ಮತ್ತೆ ಗಡಿನಾಡು ರಕ್ಷಣಾ ವೇದಿಕೆ, ಮಂಜೇಶ್ವರದ ಯುಡಿಎಫ್, ಎಸ್ ಡಿಪಿಐನ ಮಂಜೇಶ್ವರ ಮತ್ತು ಉಳ್ಳಾಲ ಬ್ಲಾಕ್ ಸೇರಿದಂತೆ ಗ್ರಾಮಸ್ಥರು ಟೋಲ್ ನ ಎರಡು ಕಡೆಗಳಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಯುಡಿಎಫ್ ಬೆಂಬಲಿತರು ತಲಪಾಡಿಯಿಂದ ಮಾಚ್ ್ ನಡೆಸಿ ಟೋಲ್ ಎದುರುಗಡೆ ನಿಂತು ಟೋಲ್ ಸಂಗ್ರಹ ಕೊಠಡಿಗೆ ನುಗ್ಗಲು ಯತ್ನಿಸಿದರೆ, ಇನ್ನೊಂದೆಡೆ ಕರ್ನಾಟಕದ ವಿವಿಧ ಸಂಘಟನೆಗಳು ಟೋಲ್ ನ ಇನ್ನೊಂದು ಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಎರಡು ಕಡೆಗಳಲ್ಲಿ ಉಳ್ಳಾಲ , ಕೆಎಸ್‍ಆರ್‍ಪಿ ಹಾಗೂ ಮಂಗಳೂರು ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದರೆ, ಉದ್ರಿಕ್ತ ಗುಂಪುಗಳು ಟೋಲ್ ಸಂಗ್ರಹ ನಡೆಸದಂತೆ ಘೋಷಣೆಗಳನ್ನು ಕೂಗುತ್ತಾ ನುಗ್ಗಲು ಯತ್ನಿಸಿದರು. ಯುಡಿಎಫ್ ಕಡೆಯಲ್ಲಿ ಮಂಜೇಶ್ವರದ ಶಾಸಕ ಅಬ್ದುಲ್ ರಝಾಕ್ ಭಾಗವಹಿಸಿ ಕಾಮಗಾರಿ ಪೂರ್ಣಗೊಳಿಸದೆ ಮಂಗಳೂರಿಗೆ ತೆರಳಲು ತಡೆಯಾಗುತ್ತಿದೆ. ಆದರೆ ಇದೀಗ ಟೋಲ್ ಆರಂಭಗೊಂಡು ಇಲ್ಲಿಯೂ ಒಂದೆಡೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದ್ದರೆ, ಹಣವನ್ನು ಪಡೆದು ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದಾರೆ. ಕೂಡಲೇ ಸುಂಕ ವಸೂಲಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಮಂಜೇಶ್ವರದ ಕಾಂಗ್ರೆಸ್ ಮುಖಂಡ ಹರ್ಷಾದ್ ವರ್ಕಾಡಿ ಮಾತನಾಡಿ ಮೊದಲಿಗೆ ಕಾಮಗಾರಿಯನ್ನು ಮುಗಿಸಲಿ ಆನಂತರ ಸುಂಕ ಪಡೆದುಕೊಳ್ಳಲಿ ಎಂದು ಒತ್ತಾಯಿಸಿದರು. ಈವೇಳೆ ವಾಹನಗಳನ್ನು ತಡೆಯಲು ಮುಂದಾದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿ ಚದುರಿಸಿದರು. ಆ ಬಳಿಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿ ಒಂದು ಕಡೆಯ ಪ್ರತಿಭಟನಾಕಾರರು ಮಂಗಳೂರಿಗೆ ತೆರಳಿದರು. ಇನ್ನೊಂದೆಡೆ ಗಡಿನಾಡು ರಕ್ಷಣಾ ವೇದಿಕೆ ಹಾಗೂ ಎಸ್ ಡಿಪಿಐ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ಉದ್ರಿಕ್ತ ಸ್ಥಿತಿಗೆ ತಲುಪಿ, ಪೊಲೀಸರು ಮುಖಂಡರನ್ನು ಬಂಧನಕ್ಕೆ ಯತ್ನಿಸಿದರು. ಆದರೆ ಉದ್ರಿಕ್ತ ಗುಂಪು ಅವರನ್ನು ತಡೆದು ನಿಲ್ಲಿಸಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಅಲ್ಲದೆ ನವಯುಗ್ ಸಂಸ್ಥೆಯ ಅಧಿಕಾರಿ ಭರವಸೆ ನೀಡದೇ ಇದ್ದಲ್ಲಿ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಇದಕ್ಕೆ ಸ್ಪಂಧಿಸಿದ ನವಯುಗ್ ಕಂಪೆನಿಯ ಪ್ರಬಂಧಕ ಭಾನುಪ್ರಕಾಶ್ ಎಂಬವರು ಚರ್ಚೆ ನಡೆಸಿ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ಆದರೆ ಅದಕ್ಕೂ ಒಪ್ಪದ ಪ್ರತಿಭಟನಾಕಾರರು ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದರು.

ಹಲವರು ಟೋಲ್ ಸಂಗ್ರಹಕ್ಕೆ ಅಡ್ಡಿಯನ್ನೂ ವ್ಯಕ್ತಪಡಿಸಿದಾಗ ಪೊಲೀಸರು ಅವರ ಮೇಲೆ ಲಘು ಲಾಠಿ ಚಾರ್ಜನ್ನು ನಡೆಸಿದರು. ಬಳಿಕ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತಿದ್ದಂತೆ ಸಂಜೆ 6 ಗಂಟೆಯವರೆಗೆ ಸ್ಥಳೀಯ ವಾಹನಗಳಿಗೆ ಸುಂಕ ಪಡೆಯುವುದಿಲ್ಲ. ಆನಂತರ ಚರ್ಚೆ ನಡೆಸಿದ ಬಳಿಕದ ತೀರ್ಮಾನ ತಿಳಿಸಲಾಗುವುದು ಅನ್ನುವ ಭರವಸೆ ನೀಡಿದ ಕೂಡಲೇ ಪ್ರತಿಭಟನಾಕಾರರು ಸಮಾಧಾನಗೊಂಡರು.
ಪ್ರತಿಭಟನೆಯಲ್ಲಿ ಮಂಜೇಶ್ವರದ ಶಾಸಕ ಪಿ.ಬಿ.ಅಬ್ದುಲ್ ರಝಾಕ್, ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್, ಯುವ ಕಾಂಗ್ರೆಸ್ ಅಧ್ಯಕ್ಷ ನಾಸರ್ ಮೊಗ್ರಾಲ್, ಕೇಶವ ಪ್ರಸಾದ್ ನಾಣಿಹಿತ್ತಿಲು, ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಸೈಫುಲ್ಲಾ ತಂಗಳ್, ಪಂಚಾಯತ್ ಅಧ್ಯಕ್ಷ ಅಝೀಝ್, ಮುಖ್ತಾರ್, ಇರ್ಷಾದ್, ಗಡಿನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಸಿದ್ಧಿಕ್ ತಲಪಾಡಿ, ಅರುಣ್ ಭಂಡಾರಿ, ಅಶ್ಪಕ್ ಕೆ.ಸಿ.ರೋಡ್, ಸಂಶುದ್ದೀನ್, ಕಾಂಗ್ರೆಸ್ ಮುಖಂಡರಾದ ಗಣೇಶ್ ಶೆಟ್ಟಿ ತಲಪಾಡಿ ರಕ್ಷಾ, ಗೋಪಾಲ್ ತಲಪಾಡಿ, ಪಿಯೂಷ್ ಕಲ್ಲಾಪು, ತಾ. ಪಂ. ಸದಸ್ಯ ಸಿದ್ಧಿಕ್ ಕೊಳಂಗೆರೆ, ಎಸ್‍ಡಿಪಿಐನ ಹ್ಯಾರಿಸ್ ಮಲಾರ್, ಲತೀಫ ಕೋಡಿಜಾಲ್, ಮೊಯ್ದಿನ್ ತಲಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಸಂಧಾನ ವಿಫಲ
ಸಂಜೆ 6 ಗಂಟೆಗೆ ಸಂಧಾನಕ್ಕೆ ಪ್ರತಿಭಟನಾಕಾರರನ್ನು ಆಹ್ವಾನಿಸಿದ್ದ ನವಯುಗ ಕಂಪೆನಿಯ ಪ್ರಬಂಧಕರು ಹಿರಿಯ ಅಧಿಕಾರಿಗಳು ಬರುವ ಭರವಸೆ ನೀಡಿದ್ದರು. ಆದರೆ ಅಧಿಕಾರಿಗಳು ಯಾರೂ ಬಾರದೇ ಇದ್ದುದರಿಂದ ದೂರವಾಣಿ ಮೂಲಕ ಪ್ರತಿಭಟನಾಕಾರರಲ್ಲಿ ಅಲ್ಲಿನ ಸಿಬ್ಬಂದಿ ಮಾತನಾಡಲು ತಿಳಿಸಿದ್ದು, ಅದರಂತೆ ಶಂಕರ್ ಎಂಬವರ ಜತೆಗೆ ಮಾತನಾಡಿದ ವೇಳೆ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಅವರಿಂದ ಯಾವುದೇ ಬೇಡಿಕೆಗಳು ಈಡೇರುವುದಿಲ್ಲ ಅನ್ನುವ ಆರೋಪವನ್ನು ಮಾಡಿದ್ದಾರೆ.

ಏರಿದ ಬಸ್ಸಿನ ದರ
ಕೇರಳ ಮತ್ತು ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿ ತಲಪಾಡಿಯಲ್ಲಿ ಸುಂಕ ವಸೂಲಾತಿ ಆರಂಭದಿಂದಾಗಿ ಬಸ್ಸಿನ ಟಿಕೇಟ್ ದರದಲ್ಲಿಯೂ ಏರಿಸಲಾಗಿದೆ. ರೂ. 17 ರಿಂದ 18, 18 ರಿಂದ 21 ಏರಿಕೆಗೊಳಿಸಲಾಗಿದೆ. 2-3ರವರೆಗೆ ಟಿಕೇಟ್ ದರವನ್ನು ಏರಿಸಿರುವುದರಿಂದ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.

ಪಾಸ್ ಅವ್ಯವಸ್ಥೆ
ಟೋಲ್ ಪ್ಲಾಝಾದಲ್ಲಿರುವ ಪಾಸ್ ವಿತರಣೆ ಕೇಂದ್ರದಲ್ಲಿ ಪಾಸ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುವಂತಾಯಿತು. ಸರತಿ ಸಾಲಿನಲ್ಲಿ ಪಾಸ್ ವಿತರಣೆ ಕೆಂದ್ರದ ಎದುರುಗಡೆ ವಾಹನ ಸವಾರರು ನಿಂತರೂ ಪಾಸ್ ವ್ಯವಸ್ಥೆಯನ್ನು ಟೋಲ್ ಸಿಬ್ಬಂದಿ ಕಲ್ಪಿಸಿಲ್ಲ. ಒಟ್ಟು ಅವ್ಯವಸ್ಥೆಯಿಂದ ಸಾರ್ವಜನಿಕರು ಸಂಕಷ್ಟಕ್ಕೀಡಾಗುವಂತಾಯಿತು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಸಯ್ಯಿದ್ ಮದನಿ ಶರೀಅತ್ ಕಾಲೇಜು ಉದ್ಘಾಟನೆ , ಸನದುದಾನ ಮಹಾ ಸಮ್ಮೇಳನ

May 2, 2026

ಎಸ್ ವೈ ಎಸ್ ಹಿದಾಯತ್ ನಗರ ಶಾಖೆ ನೂತನ ಪಧಾಧಿಕಾರಿಗಳ ಆಯ್ಕೆ

May 1, 2026

ದೈಗೋಳಿ: ಸೇವಾಮನೋಭಾವ ಮೆರೆದ ವೀರಕೇಸರಿ ಫ್ರೆಂಡ್ಸ್ ತಂಡ

April 30, 2026
Leave A Reply

Advertise
ಸಂಪರ್ಕಿಸಿ

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025
suddi

ಬಗಂಬಿಲದಲ್ಲಿ “ವೀರಮ್ಮ ನಿಲಯ” ಗೃಹಪ್ರವೇಶ: ಮೇ 3ರಂದು ಪೂಜೆ ಹಾಗೂ ಸಮಾರಂಭ

By UllalaVaniMay 2, 20260

ಮಂಗಳೂರು ಸಮೀಪದ ಬಗಂಬಿಲ ಅಮೃತನಗರದಲ್ಲಿ ನೂತನವಾಗಿ ನಿರ್ಮಿಸಲಾದ “ವೀರಮ್ಮ ನಿಲಯ” ಮನೆಯ ಗೃಹಪ್ರವೇಶ ಕಾರ್ಯಕ್ರಮವು ಮೇ 3, 2026ರ ಆದಿತ್ಯವಾರ…

ಮಂಗಳೂರು: ವಿಶ್ವ ಕಾರ್ಮಿಕರ ದಿನದ ಅಂಗವಾಗಿ ಪೌರ ಕಾರ್ಮಿಕರಿಗೆ ಕಾಯಕ ಗೌರವ

May 2, 2026

ಕೇರಳದಲ್ಲಿ ಬಿಜೆಪಿ ಡಬಲ್ ಡಿಜಿಟ್ ಗೆಲುವು ಖಚಿತ: ಕೆ. ಸುರೇಂದ್ರನ್ ವಿಶ್ವಾಸ ವ್ಯಕ್ತ

May 2, 2026

ಸಯ್ಯಿದ್ ಮದನಿ ಶರೀಅತ್ ಕಾಲೇಜು ಉದ್ಘಾಟನೆ , ಸನದುದಾನ ಮಹಾ ಸಮ್ಮೇಳನ

May 2, 2026
1 2 3 … 1,893 Next
Automatic YouTube Gallery

||PUTTURU CASE: ಆರೋಪಿ ತಂದೆಗೂ ಬಿಜೆಪಿಗೂ ಸಂಬoಧವಿಲ್ಲ ;ಜಿಲ್ಲಾಧ್ಯಕ್ಷ ಸತೀಶ್ ಕುಂಪಲ||

||ಆರೋಪಿ ತಂದೆ ಜಗನ್ನಿವಾಸ್ ರಾವ್‌ವಿಗೂ ಬಿಜೆಪಿಗೂ ಸಂಬoಧವಿಲ್ಲ ಎಂದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

|| ULLALA TALUK HIGHLIGHTS || 02.05.2026

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
||PUTTURU CASE: ಆರೋಪಿ ತಂದೆಗೂ ಬಿಜೆಪಿಗೂ ಸಂಬoಧವಿಲ್ಲ ;ಜಿಲ್ಲಾಧ್ಯಕ್ಷ ಸತೀಶ್ ಕುಂಪಲ||
Now Playing
||PUTTURU CASE: ಆರೋಪಿ ತಂದೆಗೂ ಬಿಜೆಪಿಗೂ ಸಂಬoಧವಿಲ್ಲ ;ಜಿಲ್ಲಾಧ್ಯಕ್ಷ ಸತೀಶ್ ಕುಂಪಲ||
||ಆರೋಪಿ ತಂದೆ ಜಗನ್ನಿವಾಸ್ ರಾವ್‌ವಿಗೂ ಬಿಜೆಪಿಗೂ ಸಂಬoಧವಿಲ್ಲ ಎಂದ ಜಿಲ್ಲಾಧ್ಯಕ್ಷ ...
||ಆರೋಪಿ ತಂದೆ ಜಗನ್ನಿವಾಸ್ ರಾವ್‌ವಿಗೂ ಬಿಜೆಪಿಗೂ ಸಂಬoಧವಿಲ್ಲ ಎಂದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

|| ULLALA TALUK HIGHLIGHTS || 02.05.2026

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮಂಗಳೂರು-ಮುಡಿಪು-ಬಿ.ಸಿ.ರೋಡ್ ಶಾರದಾ ಬಸ್ ದುಸ್ಥಿತಿ ನೋಡಿ ಸ್ವಾಮಿ..?
Now Playing
ಮಂಗಳೂರು-ಮುಡಿಪು-ಬಿ.ಸಿ.ರೋಡ್ ಶಾರದಾ ಬಸ್ ದುಸ್ಥಿತಿ ನೋಡಿ ಸ್ವಾಮಿ..?
ಬಸ್ಸಿನ ಡೈಮಂಡ್ ಪ್ಲೇಟ್ ತುಂಡಾಗಿ ಅಪಾಯದ ಸ್ಥಿತಿ; ಫಿಟ್ನೆಸ್ ನೀಡಿದ ಆರ್‌ಟಿಒ ...
ಬಸ್ಸಿನ ಡೈಮಂಡ್ ಪ್ಲೇಟ್ ತುಂಡಾಗಿ ಅಪಾಯದ ಸ್ಥಿತಿ; ಫಿಟ್ನೆಸ್ ನೀಡಿದ ಆರ್‌ಟಿಒ ವಿರುದ್ಧ ಆಕ್ರೋಶ

ಮಂಗಳೂರು-ಮುಡಿಪು-ಬಿ.ಸಿ.ರೋಡ್ ಶಾರದಾ ಬಸ್ಸಿನ ಅವಸ್ಥೆ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version