ಉಳ್ಳಾಲ್ ನ್ಯೂಶ್ ನೆಟ್ ವರ್ಕ್ ಮಾರಿಪಳ್ಳ: ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಯುವಕನನ್ನು ಬರ್ಬರವಾಗಿ ಹತ್ಯೆಗೈಯಲು ಪ್ರಯತ್ನಿಸಿ ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾರಿಪಳ್ಳ ಎಂಬಲ್ಲಿ ನಡೆದಿದೆ. ಮಾರಿಪಳ್ಳ ನಿವಾಸಿ ಮಾದ ಹನೀಫ್(೩೦) ಎಂಬಾತನನ್ನು ಕಾರು ಮತ್ತು ಬೈಕಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಇತನನ್ನು ನಗರದ ಆಸ್ಪತ್ರೆಗೆ ಸೇರಿಸಲಾಗಿದ್ದು ಇತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಹನೀಪ್ ಯಾನೆ ಮಾದ ಹನೀಪ್ ರೌಡಿ ಶೀಟರ್ ಆಗಿದ್ದು, 2014ರಲ್ಲಿ ನಡೆದ ಆಟೋ ಚಾಲಕ ರಿಫಾಯಿ ಹತ್ಯೆಯಲ್ಲಿ ಭಾಗಿಯಾಗಿದ್ದು ಈ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಇತ ಹತ್ತು ದಿನಗಳ್ ಹಿಂದೆಯಷ್ಟೆ ಜೈಲಿನಿಂದ ಬಂದಿದ್ದನೆಂದು ತಿಳಿದು ಬಂದಿದ್ದು, ರಿಫಾಯಿ ಹತ್ಯೆಗೆ ಪ್ರತಿಕಾರ ಈ ಕೃತ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಬಂಟ್ವಾಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಿ ಪ್ರಕರಣ ದಾಖಲಿಸಿಕೊಂಡು…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಲಯನ್ಸ್ ಕ್ಲಬ್ ಲಿಯೋ ಲಯನೆಸ್ ಕ್ಲಬ್ ಲಿಯೋ ಮಂಗಳೂರು, ದ.ಕ.ಜಿಲ್ಲಾ ಗೃಹರಕ್ಷಕದಳ, ಚೂಂತಾರು ಸರೋಜಿನಿ ಭಟ್ ಪ್ರತಿಸ್ಠಾನ (ರಿ) ಮಂಗಳೂರು ಮತ್ತು ಮುನೀಶ್ವರ ಮಹಾಗಣಪತಿ ದೇವಸ್ಥಾನ ಆಡಳಿತ ಮಂಡಳಿ ಇವರ ಪ್ರಾಯೋಜಕತ್ವದಲ್ಲಿ ತೇಜಸ್ವಿನಿ ಆಸ್ಪತ್ರೆ ರಕ್ತನಿಧಿ ಇವರ ಸಹಕಾರದೊಂದಿಗೆ ‘ಗೃಹರಕ್ಷಕರ ದಿನ’ ದ ಅಂಗವಾಗಿ ರಕ್ತದಾನ ಶಿಬಿರವು ಮಂಗಳೂರಿನ ಶ್ರಿ ಮುನೀಶ್ವರ ಮಹಾಗಣಪತಿ ದೇವಾಲಯದ ಸಭಾಂಗಣದಲ್ಲಿ ನಡೆಯಿತು. ಗೃಹರಕ್ಷಕದಳದ ಕಮಾಂಡೆಂಟ್ ಡಾ. ಮುರಲೀ ಮೋಹನ್ ಚೂಂತಾರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿಸ್ವಾರ್ಥ ಸೇವೆ ನೀಡುವ ಗೃಹರಕ್ಷಕರನ್ನು ಅಭಿನಂದಿಸಿ ರಕ್ತದಾನ ದಂತಹ ಮಹತ್ಕಾರ್ಯ ಮಾಡುವ ಗೃಹರಕ್ಷಕ ಬಳಗದ ಸಮಾದೇಷ್ಟರನ್ನು ಶ್ಲಾಘಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಅರವಿಂದ್ ಕಿಣಿ ಮತ್ತು ಕಾರ್ಯದರ್ಶಿ ಗಳಾದ ಮೋನಪ್ಪ ಶೆಟ್ಟಿ ಲಯನೆಸ್ ಅಧ್ಯಕ್ಷರಾದ ಹೇಮಾ ರಾವ್ ತೇಜಸ್ವಿನಿ ಆಸ್ಪತ್ರೆಯ ಸಂಯೋಜಕರಾದ ಕೆ ಪ್ರಬಾಕರ್ ರಾವ್ ಪೊಲೀಸ್ ಲೇನ್ ಮಹಾಗಣಪತಿ ದೇವಸ್ಥಾನದ ಆಡಳಿತ ಮಂಡಳಿಯ ಉಪಾದ್ಯಕ್ಷರಾದ ಹರಿಶ್ಚಂದ್ರ ಕುಂಬ್ಳೆ ಮತ್ತು ಕೋಶಾಧಿಕಾರಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಣಚೂರು: ಕಣಚೂರು ಮಹಿಳಾ ಪದವಿಪೂರ್ವ ಕಾಲೇಜು ದೇರಳಕಟ್ಟೆ ಇದರ 2015-16ನೇ ಸಾಲಿನ ವಾರ್ಷಿಕೋತ್ಸವವು ಸಮಾರಂಭವು ಕಾಲೇಜು ಸಭಾಂಗಣದಲ್ಲಿ ವಿಜೃಂಭಣೆಯೊಂದಿಗೆ ನೆರವೇರಿತು. ಕಾರ್ಯಕ್ರಮದಲ್ಲಿ ಕಣಚೂರು ವಿದ್ಯಾಸಂಸ್ಥೆಯ ಮುಖ್ಯಸ್ಥ ಯು.ಕೆ.ಮೋನುರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಣಚೂರು ಆಸ್ಪತ್ರೆಯ ಅನಾಟಮಿ ವಿಭಾಗದ ಮುಖ್ಯಸ್ಥ ಹಾಗೂ ಕಣಚೂರು ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ನ ಉಪಾಧ್ಯಕ್ಷರಾದ ಡಾ.ಅರುಣಾಚಲಂ ಕುಮಾರ್ , ಸಲಹಾ ಮಂಡಳಿಯ ಚೇರ್ ಮೆನ್ ಕಣಚೂರು ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಪ್ರೊ.ಡಾ.ಎಂ.ಅಬ್ದುಲ್ ರಹಿಮಾನ್ ಮುಖ್ಯ ಅತಿಥಿಗಳಾಗಿದ್ದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡು ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಹೇಮಲತಾರವರಿಂದ ವಾರ್ಷಿಕ ವರದಿ ಮಂಡಿಸಿದರು. ನಂತರ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ನೆರವೇರಿತು. ಕಾಲೇಜಿನ ವಿದ್ಯಾರ್ಥಿನಿಯರ ವಿಜ್ಞಾನ ವಸ್ತುಪ್ರದರ್ಶನ ಮತ್ತು ಆಹಾರಮೇಳ ಕಾರ್ಯಕ್ರಮವು ವಿಶೇಷ ಆಕರ್ಷಣೆಯಾಗಿತ್ತು. ವಿದ್ಯಾರ್ಥಿನಿಯರಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿದವು. ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಡಾ.ರೋಹನ್ ಮೊನಿಸ್, ಅಬ್ದುಲ್ ರಹಿಮಾನ್, ಕಣಚೂರು…
(ರಾಮಗಢ)ಜಾರ್ಖಂಡ್: ಕಾರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 13 ಮಂದಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ರಾಮಗಢ ಜಿಲ್ಲೆಯ ಬುರ್ಕುಂಡಾ ರೇಲ್ವೆ ಕ್ರಾಸಿಂಗ್ ಬಳಿ ಸಂಭವಿಸಿದೆ. ಹೌರಾ-ಭೂಪಾಲ್ ಎಕ್ಸ್‌ಪ್ರೆಸ್ ರೈಲಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಐವರು ಮಕ್ಕಳು ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ. ಪತ್ರತು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ ಎಸ್ಪಿ ಎಂ. ತಮಿಳವವನ್ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ನವದೆಹಲಿ:ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಲಘು ಭೂಕಂಪನ ಸಂಭವಿಸಿದ್ದು, ತಜಿಕಿಸ್ತಾನ್ ನಲ್ಲಿ 7.2ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದ ಬಗ್ಗೆ ವರದಿಯಾಗಿದೆ. ಹಿಂದುಖುಷ್ ಪರ್ವತ ಶ್ರೇಣಿಯಲ್ಲಿ ಭೂಕಂಪದ ಕೇಂದ್ರಬಿಂದುವಾಗಿದ್ದು, ರಿಕ್ಟರ್ ಮಾಪಕದಲ್ಲಿ 7.2ರಷ್ಟು ತೀವ್ರತೆಯಲ್ಲಿ ಕಂಪನ ಸಂಭವಿಸಿದೆ. ಭೂಕಂಪದಿಂದ ಇದುವರೆಗೂ ಯಾವುದೇ ರೀತಿಯ ಸಾವು ಸಂಭವಿಸಿಲ್ಲ. ನೆರೆಯ ಪಾಕಿಸ್ತಾನದ ಕೆಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಬಗ್ಗೆ ವರದಿಯಾಗಿದೆ. ದೆಹಲಿ, ಶ್ರೀನಗರ್,ಜಮ್ಮು-ಕಾಶ್ಮೀರ ಉತ್ತರಪ್ರದೇಶ್, ಪಂಜಾಬ್ ಸೇರಿದಂತೆ ಉತ್ತರ ಭಾರತಕ್ಕೂ ಭೂಕಂಪನದ ಬಿಸಿ ತಟ್ಟಿದೆ ಎಂದು ವರದಿ ವಿವರದಿಸಿದೆ.
ಮುಂಬೈ: ಮುಂಬೈನ ಕಂಡವಲಿ ಪ್ರದೇಶದ ಗೋದಾಮುವೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಘಟನೆಯಲ್ಲಿ 25-30 ಗ್ಯಾಸ್ ಸಿಲಿಂಡರ್‍ಗಳು ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದ್ದು, 2ಭಾರಿ ಸ್ಫೋಟದಿಂದ ಮುಂಬೈ ಜನತೆಯೇ ಬೆಚ್ಚಿಬಿದ್ದಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಘಟನಾ ಸ್ಥಳಕ್ಕೆ 12 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಭವ್ಯ ಭಾರತ ದೇಶಕ್ಕೆ ಸಂವಿಧಾನ ಬರೆದ ಡಾ.ಬಿ. ಆರ್ ಅಂಬೇಡ್ಕರ್ ರವರು ಮರಣ ಹೊಂದಿದ ದಿನದಂದೇ ಪ್ಯಾಸಿಸ್ಟ್ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದರು. ಬಾಬರಿ ಮಸೀದಿ ಕೇವಲ ಮುಸ್ಲಿಮರ ಪ್ರಾರ್ಥನ ಮಂದಿರವಾಗಿರಲಿಲ್ಲ , ಅದು ದೇಶದ ಸಂವಿಧಾನ ಹಾಗೂ ಜಾತ್ಯತೀತ ಮೌಲ್ಯಗಳ ಸಂಕೇತವಾಗಿತ್ತು . ಬಾಬರಿ ಮಸೀದಿ ದ್ವಂಸಗೊಂಡು ಇಂದಿಗೆ ಸುಮಾರು 23 ವರ್ಷ ಸಂದರೂ ಇದುವರೆಗೂ ಆರೋಪಿಗಳನ್ನು ಬಂಧಿಸದೇ ಇರುವುದು ನಿಜಕ್ಕೂ ಖೇದಕರ ಎಂದು ಅಲ್ ಇಂಡಿಯಾ ಇಮಾಮ್ ಕೌನ್ಸಿಲ್ ಕರ್ನಾಟಕ ಉಪಾಧ್ಯಕ್ಷ ಸಯ್ಯದ್ ಇಬ್ರಾಹೀಂ ಅಲ್ ಖಾಸಿಮಿ ತಂಙಲ್ ಅಭಿಪ್ರಾಯಪಟ್ಟರು. ಅವರು ಅಲ್ ಇಂಡಿಯಾ ಇಮಾಮ್ ಕೌನ್ಸಿಲ್ ದ.ಕ ಜಿಲ್ಲೆ ಇದರ ಆಶ್ರಯದಲ್ಲಿ ದೇರಳಕಟ್ಟೆ ಬಿ.ಸಿ.ಸಿ ಹಾಲ್ ನಲ್ಲಿ ನಡೆದ ಬಾಬರೀ ಮಸ್ಜಿದ್ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಬಾಬರಿ ಮಸ್ಜಿದ್ ವಿಚಾರದಲ್ಲಿ ಪಕ್ಷ ಭೇದ ಬಾವ ,ಅಭಿಪ್ರಾಯ ವ್ಯತಾಸವಿಲ್ಲದೇ ಇಮಾಮ್ ಕೌನ್ಸಿಲ್ ನಂತೆ ಸರ್ವ ಉಲಮಾ ಸಂಘಟನೆಗಳು ಹಾಗೂ ಮುಸ್ಲಿಂ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರದ ಶ್ರೀ ನಾಗಬ್ರಹ್ಮ ಸ್ಥಾನದಲ್ಲಿ ಜನವರಿಯಲ್ಲಿ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಭಾನುವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು. ನಾಗಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗ ಆಮಂತ್ರಣ ಬಿಡುಗಡೆಗೊಳಿಸಿ, ಯಾವುದೇ ಒಂದು ಸಾಧನೆ ಮಾಡಬೇಕಾದರೆ ಅದರ ಹಿಂದೆ ಸಾಕಷ್ಟು ತ್ಯಾಗ ಇರುತ್ತದೆ, ಕೊಲ್ಯದಲ್ಲಿ ನಾಗಮಂಡಲ ನಡೆಯಲು ತ್ಯಾಗವೇ ಕಾರಣ. ಹಿಂದೆ ರಾಜಾಡಳಿತದಲ್ಲಿ ಯಾವುದೇ ಕಾರ್ಯಗಳು ನಡೆಯಬೇಕಿದ್ದರೂ ರಾಜರ ನೆರವು ಕೇಳಲಾಗುತ್ತಿತ್ತು, ಇಂದು ಸರ್ಕಾರದ ನೆರವು ಅಗತ್ಯ ಎಂದು ತಿಳಿಸಿದರು. ನಾಗಮಂಡಲೋತ್ಸವಕ್ಕೆ ವರ್ಷಾನುಗಟ್ಟಲೆ ಯೋಜನೆ ರೂಪಿಸಿ ಮುಂದಿನ ಕಾರ್ಯದ ಬಗ್ಗೆ ಯೋಚಿಸಬೇಕಾಗುತ್ತದೆ. ಕೊಲ್ಯದಲ್ಲಿ ಇದೇ ರೀತಿ ಯೋಜನೆ ರೂಪಿಸಲಾಗಿದ್ದು ಈ ಮೂಲಕ ಕ್ಷೇತ್ರ, ನಾಡು ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು. ಆgರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಹರೇಕಳದಲ್ಲಿ ನಾಗಮಂಡಲೋತ್ಸವ ನಡೆಯುವ ಸಂದರ್ಭ ತಾನು ಶಾಸಕನಾಗಿ ಆಯ್ಕೆಯಾಗಿದ್ದು, ಕೊಲ್ಯದಲ್ಲಿ ನಾಗಮಂಡಲೋತ್ಸವ ಸಂದರ್ಭ ಸಚಿವನಾಗಿದ್ದೇನೆ. ಇದಕ್ಕೆ ದೇವರ ಕೃಪೆ, ಹಿರಿಯರ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲದ ಇತಿಹಾಸ ಪ್ರಸಿದ್ಧ ಸೈಯ್ಯಿದ್ ಮದನಿ ದರ್ಗಾ ಆಡಳಿತ ಸಮಿತಿಗಾಗಿ ಐದು ವರ್ಷಗಳಿಗೊಮ್ಮೆ ನಡೆಯುವ ಮಹಾಸಭೆಯ ಪ್ರಥಮ ಹಂತ ಶುಕ್ರವಾರ ಮಧ್ಯಾಹ್ನ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಜರಗಿತು. ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಮದನಿ ಇವರ ನೇತೃತ್ವದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಯು.ಎಸ್.ಹಂಝ ವಹಿಸಿದ್ದರು. ಉಪಾಧ್ಯಕ್ಷ ಅಶ್ರಫ್ ರೈಟ್ ವೇ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಳ್ಳಾಲದ ಖಾಝಿ ನೇಮಕ ವಿರುದ್ಧ ಉಳ್ಳಾಲದಲ್ಲಿ ಬಣಗಳು ಆರಂಭವಾಗಿತ್ತು. ಇದರಿಂದ ದರ್ಗಾ ಆಡಳಿತ ಮಂಡಳಿ ಮತ್ತು ಮೇಲಂಗಡಿ ಹೊಸಪಲ್ಲಿಯ ನಡುವೆ ವಿವಾದ ಏರ್ಪಟ್ಟಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ಹಿಂದೆ ಆಡಳಿತ ಸಮಿತಿ ರಚಿಸುವ ಸಂದರ್ಭ ಗಲಾಟೆ ನಡೆದು ಮೇಲಂಗಡಿಯ ಹೊಸಪಲ್ಲಿ ಆವರಣದಲ್ಲಿ ಹಿಂಸಾಚಾರ ನಡೆದಿತ್ತು. ಘಟನೆ ಮತ್ತೆ ಮರುಕಳಿಸದಂತೆ ದರ್ಗಾ ಸಮಿತಿ ಪೊಲೀಸ್ ಬಂದೋಬಸ್ತಿಗಾಗಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಪಿ ನಾಲ್ಕು ತುಕಡಿಗಳು, ಮಂಗಳೂರಿನಿಂದ ಹೆಚ್ಚುವರಿ ಠಾಣಾ ಪೊಲೀಸರು, ತಹಶೀಲ್ದಾರ್ , ಡಿಸಿಪಿ, ಎಸಿಪಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಸರಕಾರಕ್ಕೆ ವೈದ್ಯಕೀಯ ಕಾಲೇಜುಗಳ ಮತ್ತು ಆಸ್ಪತ್ರೆಗಳ ಸಲಹೆಯ ಅಗತ್ಯವಿದ್ದು, ಈ ಮೂಲಕ ಸರಕಾರಿ ಆಸ್ಪತ್ರೆಗಳ ಸುಧಾರಣೆ ಸಾಧ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಮಂಗಳೂರು ಮತ್ತು ಮಣಿಪಾಲದ ಆಸ್ಪತ್ರೆ ಆಡಳಿತ ಅಕಾಡೆಮಿ ವತಿಯಿಂದ ದೇರಳಕಟ್ಟೆಯ ಯೆನೆಪೋಯ ವಿ.ವಿ.ಯ ಯೆಂಡ್ಯುರೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾದ ಸುರಕ್ಷಿತ ಮತ್ತು ಸುಸ್ಥಿರ ಆಸ್ಪತ್ರೆಗಳು `ಸಾಷ್-2015′ ಕುರಿತ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿದರು. ಆಸ್ಪತ್ರೆಗಳಲ್ಲಿ ರೋಗಿಗಳನ್ನು ಶುಶ್ರೂಷೆ ಮಾಡುವಾಗ ಅತ್ಯಂತ ಜಾಗರೂಕತೆಯ ಅವಶ್ಯಕತೆ ಇದ್ದು, ಆಸ್ಪತ್ರೆಗೆ ಬರುವ ರೋಗಿಗಳನ್ನು ಉತ್ತಮವಾಗಿ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಆಸ್ಪತ್ರೆ ಯಿಂದ ಆಗಬೇಕಿದೆ. ತಪ್ಪುಗಳಾದಾಗ ಸರಿಪಡಿಸಿಕೊಂಡು ಮುಂದೆ ಅಂತಹ ತಪ್ಪುಗಳಾಗದಂತೆ ನೋಡಿಕೊಳ್ಳಬೇಕಿದೆ. ಆಸ್ಪತ್ರೆಯ ಆಡಳಿತವನ್ನು ವ್ಯವಹಾರ ಆಡಳಿತ ವಿಭಾಗದಲ್ಲಿ ಶಿಕ್ಷಣ ಪಡೆದುಕೊಂಡವರ ಕೈಯ್ಯಲ್ಲಿ ನೀಡಿದಲ್ಲಿ ಅವರು ಹಣದ ಕಡೆ ಮಾತ್ರ ಗಮನಹರಿಸುತ್ತಾರೆ. ಬದಲಾಗಿ ವೈದ್ಯರೇ ಆಡಳಿತ ನಡೆಸುವವರಾದರೇ ರೋಗಿಗಳ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ಹರಿಸುತ್ತಾರೆ. ಕರ್ನಾಟಕ ಸರಕಾರ ಯಾವುದೇ…

