ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಮುಂಬಯಿ: ರಾಷ್ಟ್ರದ ಮಾಧ್ಯಮ ಲೋಕದ ಹೆಸರಾಂತ ಸಂಸ್ಥೆ ಮಿಡ್‍ಡೇ ಸಮೂಹವು ಶಿಕ್ಷಣ ರಂಗದ ಅಪರಿಮಿತ ಸೇವಾ ಕೊಡುಗೆಗಾಗಿ ಶಿಕ್ಷಣ ರಂಗದ ಮೇರು ಸಾಧಕಿ ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರವರ್ತಕಿ, ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಅವರಿಗೆ `ಶೈಕ್ಷಣಿಕ ಜೀವಮಾನ ಸಾಧಕ ಪುರಸ್ಕಾರ’ಪ್ರದಾನಿಸಿ ಗೌರವಿಸಿತು.
ಕಳೆದ ಮಂಗಳವಾರ ಅಂಧೇರಿ ಪೂರ್ವದ ಸಹಾರ ಇಲ್ಲಿನ ಹೈಯತ್ತ್ ರೀಜೆನ್ಸಿ ಪಂಚತಾರಾ ಹೊಟೇಲ್‍ನ ಸಭಾಗೃಹದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ, ಬಿಜೆಪಿ ಮಹಾರಾಷ್ಟ್ರ ಪ್ರದೇಶ ಸಮಿತಿಯ ಖಜಾಂಚಿ, ಮುಂಬಯಿಯ ವಕ್ತಾರೆ, ಫ್ಯಾಶನ್ ಡಿಸಾಯ್ನಾರ್ ಶೈನಾ ಎನ್.ಸಿ ಅವರು ಈ ಪುರಸ್ಕಾರವನ್ನು ಮೇಡಂ ಗ್ರೇಸ್ ಪಿಂಟೋ ಅವರಿಗೆ ಪ್ರದಾನಿಸಿ ಗೌರವಿಸಿದರು.
ಶಿಕ್ಷಣ ರಂಗದ ಅಪರಿಮಿತ ಸೇವಾ ಕೊಡುಗೆಗಾಗಿ ಮಿಡ್‍ಡೇ ಸಮೂಹವು ಶೈಕ್ಷಣಿಕ ಜೀವಮಾನ ಸಾಧಕ ಪುರಸ್ಕಾರ ಪ್ರದಾನಿಸಿ ಗೌರವಿಸಿತು. ದಣಿಯದ ಪರಿಶ್ರಮ ಮತ್ತು ಗಮನಾರ್ಹ ಸೇವಾ ಕೊಡುಗೆಗಾಗಿ ಕೊಡಮಾಡಲಾಗಿದೆ. ಶಿಕ್ಷಣದ ದೂರದೃಷ್ಠಿತ್ವವುಳ್ಳ ಇವರ ಕಾಲ್ಪನಿಕತ್ವ ಗುರುತರವಾಗಿದೆ. ಹಲವಾರು ಶಾಲೆಗಳ ಸ್ಥಾಪಕಿಯಾಗಿ ವಿದ್ಯಾರ್ಜನೆಯನ್ನು ಅಧಿಕ ಸುಗಮವಾಗಿಸಿ ನಿಶ್ಚಯಿತವಾಗಿಸುವಲ್ಲಿನ ಇವರ ಪಾತ್ರವನ್ನು ಪರಿಗಣಿಸಿ ಈ ಪುರಸ್ಕಾರ ಪ್ರಾಪ್ತಿಸಲಾಗಿದೆ ಎಂದು ಮಿಡ್‍ಡೇ ಸಮೂಹವು ತಿಳಿಸಿದೆ.



