ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ದರ್ಗಾ ಸಂದರ್ಶನಕ್ಕೆಂದು ಬಂದಿದ್ದ ಬೆಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರನ್ನು ಈಜುಗಾರರ ಸಂಘದ ಸದಸ್ಯರು ರಕ್ಷಿಸಿದ ಘಟನೆ ಉಳ್ಳಾಲದ ಮೊಗವೀರಪಟ್ನದಲ್ಲಿ ಇಂದು ಮದ್ಯಾಹ್ನ ವೇಳೆ ಸಂಭವಿಸಿದೆ.
ಬೆಂಗಳೂರು ಮೂಲದ ಅಬ್ದುಲ್ ರಹಿಮಾನ್ ಎಂಬವರು ಕುಟುಂಬ ಸಮೇತ ಉಳ್ಳಾಲದ ದರ್ಗಾ ಸಂದರ್ಶನಕ್ಕೆಂದು ನಸುಕಿನ ಜಾವ ಬಂದಿದ್ದರು. ಬಳಿಕ ಸಮುದ್ರ ವಿಹಾರಕ್ಕೆಂದು ತೆರಳಿದ್ದ ಕುಟುಂಬ ಸ್ನಾನಗೈಯ್ಯುವ ವೇಳೆ ಬೃಹತ್ ಗಾತ್ರದ ಅಲೆಗೆ ರಹಿಮಾನ್ ಸೇರಿದಂತೆ ಪತ್ನಿ ಹಾಗೂ ಇಬ್ಬರು ಮಕ್ಕಳು ಸಿಲುಕಿದ್ದರು. ಇದನ್ನು ಕಂಡ ಸ್ಥಳೀಯ ಮೊಗವೀರರ ತಂಡ ಕೂಡಲೇ ಸಮುದ್ರಕ್ಕೆ ಧುಮುಕಿ ನಾಲ್ವರನ್ನು ರಕ್ಷಿಸಿದ್ದಾರೆ. ಇದೀಗ ನಾಲ್ವರು ಉಳ್ಳಾಲದ ಸರೋಜ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಬ್ದುಲ್ ರಹಿಮಾನ್ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


