Author: UllalaVani

Kannada News From Coastal Karnataka

UN NETWORKS ಬೆಂಗಳೂರು: ನನ್ನ ಆತ್ಮೀಯರೂ, ರಾಷ್ಟ್ರಮಟ್ಟದ ಪ್ರಗತಿಪರ ಚಿಂತಕರೂ, ಸಮಾಜದ ಶೋಷಿತ ವರ್ಗದ ಶಕ್ತಿಯಾಗಿದ್ದ ಗೌರಿ ಲಂಕೇಶ್ ಅವರ ಹತ್ಯೆ ಕನ್ನಡ ನಾಡಿಗೆ ಮಾಡಿದ ದ್ರೋಹವಾಗಿದೆ. ಇದು ಖಂಡನೀಯ. ಇದರ ಹಿಂದಿರುವ ದುಷ್ಟ ಶಕ್ತಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ. ಕಳೆದ ವಾರವಷ್ಟೇ ವಿಧಾನಸೌಧದಲ್ಲಿ ತನ್ನನ್ನು ಭೇಟಿಯಾಗಿ ಇಲಾಖೆಗೆ ಸಂಬಂಧಿಸಿದ ಮನವಿಯನ್ನು ನೀಡಿದ್ದರು. ರಾಜ್ಯದ ಕಟ್ಟಕಡೆಯ ಜನರ ಧ್ವನಿಯಾಗಿದ್ದ ಗೌರಿ ಲಂಕೇಶ್ ತನ್ನ ತಂದೆ ಲಂಕೇಶ್ ಹಾದಿಯಲ್ಲಿ ನಡೆಯುತ್ತಾ ಸಂಚಲನ ಮೂಡಿಸಿದ್ದರು. ಅವರ ಹತ್ಯೆ ದೊಡ್ಡ ದುರಂತ. ಕ್ರೂರ ಮನಸ್ಸಿನ ಉಗ್ರಗಾಮಿಗಳಾದ ತಪ್ಪಿತಸ್ಥ ಹಂತಕರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೊಳಪಡಿಸಲು ರಾಜ್ಯ ಸರಕಾರ ಸಿದ್ಧವಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.

Read More

UN NETWORKS ಉಳ್ಳಾಲ: ಶಾಂತಿ ಕದಡುವಂತಹ ಘಟನೆಗಳು ನಡೆಯುವ ಸಂದರ್ಭದಲ್ಲಿ ಉಳ್ಳಾಲ ದರ್ಗಾ ಸಮಿತಿ ಎಲ್ಲಾ ಜಾತಿ ಧರ್ಮದವರನ್ನು ಕರೆದು ಈದ್ ಸ್ನೇಹ ಸಮ್ಮಿಲನ ಹಮ್ಮಿಕೊಳ್ಳುತ್ತಿರುವುದು ಉತ್ತಮ ಕಾರ್ಯ. ಇಂತಹ ಕಾರ್ಯಕ್ರಮವು ಸೌಹಾರ್ದತೆಯನ್ನು ಉಳಿಸಲು ಪೂರಕವಾಗಲಿದೆ ಎಂದು ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದ್ದಾರೆ. ಉಳ್ಳಾಲ ಕೇಂದ್ರ ಜುಮಾ ಮಸೀದಿ ಹಾಗೂ ಸಯ್ಯದ್ ಮದನಿ ದರ್ಗಾ ಆಶ್ರಯದಲ್ಲಿ ಸೋಮವಾರ ದರ್ಗಾ ವಠಾರದಲ್ಲಿ ನಡೆದ ಈದ್ ಸ್ನೇಹ ಸಮ್ಮಿಲನ-2017 ಕಾರ್ಯಕ್ರಮದಲ್ಲಿ ಮಾತನಾಡಿದರು.ವಿವಿಧ ದರ್ಮಗಳು ಇರುವ ಈ ನೆಲದಲ್ಲಿ ವಿವಿಧ ಹಬ್ಬಗಳು ಆಚರಣೆಯಾಗುತ್ತವೆ. ಅವರವರ ವಿಶ್ವಾಸ, ನಂಬಿಕೆಯ ನೆಲೆಯಲ್ಲಿ ಆಚರಣೆಗಳು ನಡೆಯುತ್ತವೆ. ಇದನ್ನು ಅರ್ಥಮಾಡಿಕೊಳ್ಳಲು ಇಂತಹ ಸ್ನೇಹ ಕೂಟದಿಂದ ಮಾತ್ರ ಸಾಧ್ಯ ಎಂದರು. ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್ ಮಾತನಾಡಿ ದರ್ಗಾದಿಂದ ಕಳೆದ ಎರಡು ವರ್ಷಗಳಿಂದ ಉಳ್ಳಾಲದಲ್ಲಿ ಶಾಂತಿ, ಸೌಹಾರ್ದತೆ ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ, ಇದು ನಿರಂತರ ನಡೆದರೆ ಭಗವಂತ ಪ್ರತಿಫಲ ನೀಡುವುದನ್ನು…

Read More

UN NETWORKS ಮುಡಿಪು: ಕೋಮು ಗಲಭೆಯಲ್ಲಿ ಭಾಗಿಯಾಗುವವರನ್ನು ರಕ್ಷಿಸುವ ಜವಾಬ್ದಾರಿಯನ್ನು ರೈ ಮತ್ತು ಖಾದರ್ ಮಾಡುತ್ತಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೋಮುದಳ್ಳುರಿಯನ್ನು ನಡೆಸಲು ಕಾರಣರಾಗುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಕಾರರ್ಯಕಾರಿಣಿ ಸಮಿತಿ ಸದಸ್ಯ ರಾಜೇಶ್ ಶೆಟ್ಟಿ ಪಜೀರುಗುತ್ತು ಆರೋಪಿಸಿದ್ದಾರೆ. ಅವರು ಬಿಜೆಪಿ ಕುರ್ನಾಡು ಶಕ್ತಿಕೇಂದ್ರದ ವತಿಯಿಂದ ಪಿಎಫ್ ಐ ಎಸ್ ಡಿಪಿಐ ಸಂಘಟನೆಗಳ ನಿಷೇಧ ಮತ್ತು ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಮುಡಿಪು ಜಂಕ್ಷನ್, ಮತ್ತು ಕುರ್ನಾಡು ಗ್ರಾ.ಪಂ ಎದುರುಗಡೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಂಘಪರಿವಾರದ ಕಾರ್ಯಕರ್ತರುಗಳ ಹತ್ಯೆ ನಡೆಸಿರುವಂತಹ ಆರೋಪಿಗಳ ರಕ್ಷಣೆ ಸರಕಾರದಿಂದ ಆಗುತ್ತಿದೆ. ಉಸ್ತುವಾರಿ ಸಚಿವರ ಕೈಯಡಿಯಲ್ಲಿರುವ ಪುಢಾರಿಗಳೇ ಕರೋಪಾಡಿ ಹತ್ಯೆಯಿಂದ ಶರತ್ ಹತ್ಯೆಯನ್ನು ನಡೆಸಿದ್ದಾರೆ. ಇದರಿಂದ ಜಿಲ್ಲೆಯಾದ್ಯಂತ ಕೋಮು ದಳ್ಳುರಿ ನಡೆಸಿ, ಅಶಾಂತಿಯ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಸೌಹಾರ್ದತೆ, ಶಾಂತಿಯುತ ವಾತಾವರಣ ಜಿಲ್ಲೆಯಾದ್ಯಂತ ನೆಲೆಸಬೇಕಿದೆ. ಆದರೆ ಅದನ್ನು ಬಿಡದ ಜಿಲ್ಲೆಯ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕೂಡಲೇ ರಾಜೀನಾಮೆ ನೀಡಬೇಕು. ಅಲ್ಲದೆ ಹಿಂದುಗಳ ಹತ್ಯೆಯನ್ನು ನಿರಂತರವಾಗಿ ನಡೆಸುತ್ತಿರುವ…

Read More

UN NETWORKS ಉಳ್ಳಾಲ: ಶಿಕ್ಷಕರಿಗೆ ವೇತನ ಹೆಚ್ಚಳ ಮಾಡಿರುವ ಆದೇಶ ಶೀಘ್ರವೇ ಮುಖ್ಯಮಂತ್ರಿಯವರು 6ನೇ ಹಣಕಾಸು ಅಯೋಗಕ್ಕೆ ನೀಡುವ ನಿರೀಕ್ಷೆ ಇದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ದಕ್ಷಿಣ ವಲಯ ಶಿಕ್ಷಕರ ದಿನಾಚರಣೆ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಮಂಗಳೂರು ದಕ್ಷಿಣ ಬೋಳಾರ ವತಿಯಿಂದ ಜೆಪ್ಪಿನಮೊಗರು ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಶಾಲೆ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಜರಗಿದ ಗುರು ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಇಲ್ಲದಿದ್ದಲ್ಲಿ ಜೀವನ ದುಸ್ತರವಾಗುತ್ತದೆ, ಇಂದು ಹೆಚ್ಚು ಸುಶಿಕ್ಷಿತರೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದು, ಅವರಲ್ಲಿರುವ ಆತ್ಮ ವಿಶ್ವಾಸದ ಕೊರತೆ ಕಾರಣ ಎಂದರು. ಗುರುಚೇತನ ಪುಸ್ತಕ ಬಿಡುಗಡೆಗೊಳಿಸಿದ ಶಾಸಕ ಜೆ.ಆರ್.ಲೋಬೋ ಮಾತನಾಡಿ, ಸಮಾಜ, ದೇಶದ ಅಭಿವೃದ್ಧಿ, ರಕ್ಷಣೆಗೆ ಸೂಕ್ತ ಪ್ರಜೆಗಳು ಅಗತ್ಯ, ಅಂತಹ ಪ್ರಜೆಗಳನ್ನು ನಿರ್ಮಿಸುವ ಜವಾಬ್ದಾರಿ ಶಿಕ್ಷಕರು ಮಾಡುತ್ತಿದ್ದಾರೆ. ರಾಷ್ಟ್ರ ರಕ್ಷಣೆಯಲ್ಲಿ ತೊಡಗಿಕೊಂಡಿರುವ ಶಿಕ್ಷಕರಿಗಾಗಿ…

Read More

UN NETWORKS ಉಳ್ಳಾಲ; ಬೈಕ್ ರ್ಯಾಲಿಯಲ್ಲಿ ಮಂಗಳೂರು ಕ್ಷೇತ್ರದಿಂದ 4,000ದಷ್ಟು ಬೈಕಿನಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದು, ಎಷ್ಟು ತಡೆದರೂ ಸಾಂವಿಧಾನಿಕ ಹಕ್ಕಾದ ಪ್ರತಿಭಟನೆಯನ್ನು ಯುವ ಕಾರ್ಯಕರ್ತರು ಜಿಲ್ಲಾ ಮತ್ತು ರಾಜ್ಯ ಮುಖಂಡರುಗಳ ನೇತೃತ್ವದಲ್ಲಿ ಮಾಡಿಯೇ ಸಿದ್ಧ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದ್ದಾರೆ. ತೊಕ್ಕೊಟ್ಟು ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರದ ಎಷ್ಟು ಪೊಲೀಸರು ಕಾರ್ಯಚರಿಸಿದರೂ, ಎಷ್ಟೇ ಕಾರ್ಯಕರ್ತರ ಬಂಧನವಾದರೂ ಎದೆಗುಂದದೆ ಬೈಕ್ ರ್ಯಾಲಿಯನ್ನು ನಡೆಸಿಯೇ ನಡೆಸುತ್ತೇವೆ. ಉಳ್ಳಾಲದ 195 ಬೂತ್ ಗಳಿಂದ 2,200 ಬೈಕ್ ಸೇರಿದಂತೆ ಒಟ್ಟು 4,000 ಬೈಕ್ ಗಳಲ್ಲಿ ಕಾರ್ಯಕರ್ತರು ರ್ಯಾಲಿ ಮೂಲಕ ಭಾಗವಹಿಸಲಿದ್ದಾರೆ. ಹಿಂದು ವಿರೋಧಿ ಧೋರಣೆಯನ್ನು ತೋರಿಸುತ್ತಿರುವ ಸರಕಾರ ಮತ್ತು ಉಸ್ತುವಾರಿ ಸಚಿವ ರೈ ವಿರುದ್ಧದ ಹಾಗೂ ರಾಜೀನಾಮೆಗೆ ಒತ್ತಾಯಿಸಿದ ಪ್ರತಿಭಟನೆಯಾಗಿದೆ. ಅಲ್ಲದೆ ಹಿಂದು ಕಾರ್ಯಕರ್ತರ ಸರಣಿ ಹತ್ಯೆ ನಡೆಸುತ್ತಿರುವ ಪಿಎಫ್ ಐ , ಕೆಎಫ್ ಡಿ ನಿಷೇಧಕ್ಕೆ ಆಗ್ರಹಿಸಿ ರ್ಯಾಲಿಯನ್ನು…

Read More

UN NETWORKS ಕೊಣಾಜೆ: ಜಿಲ್ಲೆಯ ಸಚಿವರುಗಳು ಕೆಎಫ್‍ಡಿ , ಪಿಎಫ್‍ಐ ಜತೆಗೆ ಒಳ ಒಪ್ಪಂದ ಮಾಡಿಕೊಂಡು ಹಿಂದುಗಳ ಹಾಗೂ ಪಕ್ಷದ ಕಾರ್ಯಕರ್ತರ ಹತ್ಯೆ ನಡೆಸುತ್ತಾ ಬಂದಿದ್ದು, ಇಲ್ಲವಾದಲ್ಲಿ ಅಂತಹ ಸಂಘಟನೆಗಳನ್ನು ನಿಷೇಧಿಸಬೇಕಿತ್ತು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ ಹೇಳಿದ್ದಾರೆ. . ಅವರು ಕೊಣಾಜೆ ಗ್ರಾಮ ಪಂಚಾಯಿತಿ ಎದುರುಗಡೆ ಕೊಣಾಜೆ ವಲಯದ ಬಿಜೆಪಿ ಯುವಮೋರ್ಚಾ ವತಿಯಿಂದ ಕೆಎಫ್ ಡಿ , ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಯನ್ನೇ ನಿಲ್ಲಿಸಲು ರಾಜ್ಯ ಸರಕಾರ ಮುಂದಾಗಿದೆ. ಮೂರು ಹಕ್ಕೊತ್ತಾಯಗಳನ್ನು ಮುಂದಿಟ್ಟು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೆಎಫ್ ಡಿ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸಬೇಕು, ಹಿಂದುಗಳ ಹತ್ಯೆ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು, ನಾಲ್ಕೂವರೆ ವರ್ಷದಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡದ ಸರಕಾರ ಇಲ್ಲಿನ ಉಸ್ತುವಾರಿ ಸಚಿವರನ್ನು ರಾಜೀನಾಮೆ ಕೊಡಿಸಬೇಕಿದೆ. ಜಮ್ಮು ಕಾಶ್ಮೀರದಲ್ಲಿರುವ ಶಾಂತಿ ಜಿಲ್ಲೆಯಲ್ಲಿ ಇಲ್ಲದಂತಾಗಿದೆ. ಜೈಲಿನೊಳಗಡೆ ಪೊಲೀಸರ ಮೇಲೆ ಹಲ್ಲೆಯಾಗುತ್ತಿದೆ. ದೇರಳಕಟ್ಟೆ…

Read More

UN NETWORKS ಸೋಮೇಶ್ವರ: ಧಾರ್ಮಿಕ ಕ್ಷೇತ್ರಗಳಲ್ಲಿ ಸಂಬಂಧಿಸಿ ಕರ್ತವ್ಯ ನಿರ್ವಹಿಸುವ ಮಂದಿಗೆ ಹೆಚ್ಚಿನ ಪ್ರೋತ್ಸಾಹ ಒದಗಿಸುವ ನಿಟ್ಟಿನಲ್ಲಿ, ದೇವಸ್ಥಾನಗಳಲ್ಲಿರುವ ಅರ್ಚಕರ ವೇತನದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಸೋಮೇಶ್ವರದ ಸೋಮನಾಥ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಬ್ರಹ್ಮರಥಕ್ಕೆ ವೀಳ್ಯಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಹಿಂದೆ ಮಾಸಿಕ 7,000 ರೂ. ವೇತನ ಪಡೆಯುತ್ತಿದ್ದ ಅರ್ಚಕರಿಗೆ 14,000 ದಷ್ಟು ವೇತನ ಜಾಸ್ತಿ ಮಾಡಲಾಗಿದ್ದು, ಅಲ್ಲದೆ ವಾರ್ಷಿಕ ಭಡ್ತಿಯನ್ನು ರೂ. 28,000 ದಿಂದ ರೂ. 48,000 ಕ್ಕೆ ರಾಜ್ಯ ಸರಕಾರ ಏರಿಕೆ ಮಾಡಿದೆ. ಹಿಂದಿನ ಸರಕಾರ ನಡೆಸಿದ ಧಾರ್ಮಿಕ ದತ್ತಿ ತಿದ್ದುಪಡಿಯಿಂದಾಗಿ ರಾಜ್ಯಾದ್ಯಂತ ದೇವಸ್ಥಾನಗಳಿಗೆ ಒಂದೇ ಕಾನೂನು ಜಾರಿಯಾಗಿದೆ. ಇದರಿಂದಾಗಿ ವಿವಿದೆಡೆ ಇರುವ ಸ್ಥಳ ಹಾಗೂ ಆಚರಣೆಗಳಿಗೆ ಅನುಗುಣವಾಗಿ ಅನುದಾನ ಬಿಡುಗಡೆಗೊಳಿಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆದರೂ ಸರಕಾರ ಮುಂದೆ ನಿಂತು ಧಾರ್ಮಿಕ ಕ್ಷೇತ್ರಗಳ ಜತೆಗೆ ಅಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದ್ದು, ಅಧಿಕಾರಿಗಳು…

Read More

UN NETWORKS ತೊಕ್ಕೊಟ್ಟು : ದೇಶದ ಅಭಿವೃದ್ಧಿ, ನಿರುದ್ಯೋಗ ಸಮಸ್ಯೆ ನಿವಾರಣೆಯ ಮೂಲಕ ಕಾಂಗ್ರೆಸ್ ಪ್ರಾರಂಭಿಸಿದ ನವ ಉದಾರಿಕರಣ ನೀತಿಯನ್ನು ಬದಲಾಯಿಸುವ ಭರವಸೆಯೊಂದಿಗೆ ಅಧಿಕಾರಕ್ಕೇರಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಸಾಮಾನ್ಯ ಜನರ ಅಭಿವೃದ್ಧಿಗೆ ಮಾರಕವಾಗಿರುವ ಉದ್ಯಮಿಗಳಿಗೆ ಸಹಕಾರವಾಗಿರುವ ನವ ಉದಾರಿಕರಣ ನೀತಿಗೆ ಅತ್ಯಂತ ವೇಗ ನೀಡಿ ಜಾರಿಗೊಳಿಸಿರುವುದೇ ದೇಶದ ಜಿಡಿಪಿ ಇಳಿಯಲು ಕಾರಣ ಎಂದು ಸಿಪಿಐಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಅಭಿಪ್ರಾಯಪಟ್ಟರು. ಅವರು ಚುನಾವಣಾ ಭರವಸೆಗಳನ್ನು ಈಡೇರಿಸುವಂತೆ ಕೇಂದ್ರ ಸರಕಾರಕ್ಕೆ ಆಗ್ರಹಿಸಿ ದೇಶದಾದ್ಯಂತ ಜನ ಚಳವಳಿಯ ಅಂಗವಾಗಿ ಸಿಪಿಐಎಂ ಉಳ್ಳಾಲ ವಲಯ ಸಮಿತಿ ಆಶ್ರಯದಲ್ಲಿ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಏರ್ಪಡಿಸಲಾಗಿದ್ದ ಕಾಲ್ನಡಿಗೆ ಜಾಥಾ ಸಂಗಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುವ ಮೊದಲು ಇದ್ದ 7 ಶೇಖಡಾ ಜಿಡಿಪಿ 5.7ಕ್ಕೆ ಇಳಿದಿದ್ದು, ಕೋಟ್ಯಾಂತರ ಜನರ ಮೇಲೆ ಸಾಲದ ಹೊರೆ ಬಿದ್ದಿದೆ. ಜಿಡಿಪಿ ಇಳಿಕೆಯಿಂದ ದೇಶ ಅಭಿವೃದ್ಧಿಯಲ್ಲಿ ಹಿಂದೆ ಹೋಗಿದೆ. ಮೂರು ವರ್ಷದ ಹಿಂದೆ ಬಿಜೆಪಿಯ…

Read More

UN NETWORKS ಉಳ್ಳಾಲ:  15 ಮಂದಿ ರೌಡಿಗಳ  ತಂಡವೊಂದು ಕುಟುಂಬದ ಮಚ್ಚಿನಿಂದ ದಾಳಿ ನಡೆಸಿರುವ ಘಟನೆ ಉಳ್ಳಾಲ ದರ್ಗಾ ಸಮೀಪದ ಮನೆಯೊಂದರಲ್ಲಿ ನಿನ್ನೆ ತಡರಾತ್ರಿ 11.30 ರ ಸುಮಾರಿಗೆ ಸಂಭವಿಸಿದೆ ಮನೆ ಮಾಲೀಕ ಖಾಸಿಮ್, ಆತನ ಪತ್ನಿ ಮೈಮುನಾ ಮಕ್ಕಳಾದ ಸೋಯಲ್, ಅಮಿನ್ ಮೇಲೆ ಮಚ್ಚಿನಿಂದ ಹಲ್ಲೆಗೊಗಾದವರು. ಖಾಸಿಮ್  ಎಂಬವರ  ಮತ್ತೋರ್ವ ಮಗ ಹಂಝ್ ನನ್ನು ಕೊಲೆ ಮಾಡಲು ಬಂದಿದ್ದಾಗಿ ಹೇಳಿದ ಹಲ್ಲೆಕೋರರು ಮನೆಯ ಕಿಟಕಿ, ಬಾಗಿಲುಗಳನ್ನು ಪುಡಿಗೈದು ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಾಳುಗನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಒಂದು ಗುಂಪಿನೊಂದಿಗೆ ದಂಪತಿ ಪುತ್ರ ಹಂಝ್ ಜಗಳವಾಡಿಕೊಂಡಿದ್ದ ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ.

Read More

UN NETWORS ಕೊಣಾಜೆ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕೊಣಾಜೆಯಲ್ಲಿ ಬಡ ಯಕ್ಷ ಕಲಾವಿದನ ಮನೆ ಧರೆಗೆ ಉರುಳಿತ್ತು. ತಾನು ಹಾಗೂ ಸಹೋದರಿ ವಾಸವಾಗಿದ್ದ ಮನೆ ಕುಸಿದು ಬಿದ್ದ ಪರಿಣಾಮ ಕಲಾವಿದ ದೇವಪ್ಪ ಗೌಡ ಉಳಿದುಕೊಳ್ಳಲು ಸೂರು ಇಲ್ಲದೆ ಕಂಗೆಟ್ಟು ಹೋಗಿದ್ದರು. ಇದೀಗ ದೇವಪ್ಪ ಗೌಡರವರಿಗೆ ನೂತನ ಮನೆಯೊಂದನ್ನು ನಿರ್ಮಿಸಲು ಕಟೀಲು ಮೇಳದ ಖ್ಯಾತ ಭಾಗವತರಾದ ಸತೀಶ್ ಪಟ್ಲ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂದಾಗಿದ್ದು ನೂತನ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು. ಕೊಣಾಜೆಯ ಅಣ್ಣೆರೆಪಾಲು ಎಂಬಲ್ಲಿ ಪುಟ್ಟ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಕುಡುಂಬಿ ಜನಾಂಗದ ದೇವಪ್ಪ ಗೌಡರ ಹರಕಲು ಹಂಚಿನ ಮನೆಯು ಕಳೆದ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದ ಪರಿಣಾಮ ದೇವಪ್ಪ ಕುಟುಂಬಸ್ಥರು ಬೀದಿಗೆ ಬಿದ್ದಿದ್ದರು. ಕಟೀಲು ಯಕ್ಷಗಾನ ಮೇಳದಲ್ಲಿ ಚೌಕಿ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದ ಹಾಗೂ ಕೋಡಂಗಿಯ ವೇಷವನ್ನು ಧರಿಸುತ್ತಿದ್ದ ದೇವಪ್ಪರಿಗೆ ಮತ್ತೆ ಮನೆ ಕಟ್ಟಲು ಹಣವಿರಲಿಲ್ಲ. ವಿಷಯ ತಿಳಿದ ಮೇಳದ ಖ್ಯಾತ ಭಾಗವತರಾದ ಸತೀಶ್ ಪಟ್ಲರವರು…

Read More