Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಹರೇಕಳ : ಕಾಂಗ್ರೆಸ್ ಕಳೆದ 60 ವರ್ಷದ ಅಧಿಕಾರದಲ್ಲಿ ನಡೆಸಿದ ಸಾಧನೆಯನ್ನು ಕಳೆದ ಮೂರು ವರ್ಷದಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಯಶಸ್ವಿ ಆಡಳಿತದಲ್ಲಿ ಸಾಧಿಸಿ ತೋರಿಸಿದ್ದು, ಕೇಂದ್ರ ಸರಕಾರದ ಯೋಜನೆಗಳನ್ನು ಮತ್ತು ಸಾಧನೆಯನ್ನು ಮನೆ ಮನೆ ಮುಟ್ಟಿಸುವ ಕಾರ್ಯ ಬಿಜೆಪಿ ಕಾರ್ಯಕರ್ತರದ್ದು ಎಂದು ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಹರೇಕಳ ದೆಬ್ಬೇಲಿ ಬಾಕಿಮಾರ್ ಗದ್ದೆಯಲ್ಲಿ ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನ ಸಭಾ ಕ್ಷೇತ್ರ ಇದರ ಹರೇಕಳ ಗ್ರಾಮ ಸಮಿತಿಯಿಂದ ಪಂಡಿತ್ ದೀನ್ ದಯಾಳ್ ಉಒಆಧ್ಯಾಯರ ಜನ್ಮ ಶತಾಬ್ಧಿ ವರ್ಷ ಪ್ರಯುಕ್ತ `ವಿಜಯ ಸಂಕಲ್ಪ ಸಂಗಮ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮನಮೋಹನ್ ಸಿಂಗ್‍ವರೆಗಿನ ಅಧಿಕಾರದ ಸಂದರ್ಭದಲ್ಲಿ ಪಾಕಿಸ್ಥಾನ ಮತ್ತು ಚೀನಾದೊಂದಿಗೆ ಗಡಿ ತಂಟೆಗಳಾದ ಭಾರತ ವಿಶ್ವ ಸಂಸ್ಥೆಗೆ ದೂರು ನೀಡುತ್ತಿತ್ತು. ಆದರೆ ಕಳೆದ ಮೂರು ವರ್ಷದಲ್ಲಿ ಗಡಿ ತಂಟೆಗಳಾದಾಗ ಭಾರತ ವಿಶ್ವಸಂಸ್ಥೆಗೆ ದೂರು ನೀಡಿಲ್ಲ ಆದರೆ ಪಾಕಿಸ್ಥಾನ ಮತ್ತು ಚೀನ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ವಿದ್ಯಾನಗರ : ಗ್ರಾಮೀಣ ಪ್ರದೇಶದ ಒಳಪ್ರದೇಶಗಳ ಸಂಪರ್ಕದಿಂದ ಅಭಿವೃದ್ಧಿಗೆ ಪೂರಕವಾಗಿದ್ದು, ನೂತನವಾಗಿ ನಿರ್ಮಾಣಗೊಂಡಿರುವ ವಿದ್ಯಾನಗರ ಕಲ್ಮಿಂಜ ರಸ್ತೆ ಇಲ್ಲಿನ ಜನರೊಂದಿಗೆ ಕೃಷಿಕರಿಗೂ ಸಹಕಾರಿಯಾಗಲಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಡಾಮರೀಕರಣಕ್ಕೆ ಒತ್ತು ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಜಿಲ್ಲಾ ಪಂಚಾಯತ್ ಅನುದಾನದಲ್ಲಿ ವಿದ್ಯಾನಗರದಿಂದ ಅಂಬುಗ, ಮಟ್ಟೆಮಾರ್, ಕಂಬಳ, ದೋಸೆಮನೆಯಿಂದ ಕಲ್ಮಿಂಜ ಸಂಪರ್ಕಿಸುವ ನೂತನ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಕುರ್ನಾಡು ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿಯವರ ಶ್ರಮದಿಂದ ಈ ರಸ್ತೆ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಉತ್ತಮ ಕಾರ್ಯ ನಿರ್ವಹಿಸಿದಾಗ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಸಾಧ್ಯ ಎಂದರು. ಕುರ್ನಾಡು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಡಾ| ಎಂ. ಆರ್. ರವಿ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ,…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ನರಿಂಗಾನ : ಕಿಂಡಿ ಅಣೆಕಟ್ಟುಗಳ ಮೂಲಕ ಅಂತರ್ಜಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಾಂತ ಸುಮಾರು 1000 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಅಭಿಯಾನವನ್ನು ಜಿಲ್ಲಾ ಪಂಚಾಯತ್ ಹಾಕಿಕೊಂಡಿದ್ದು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯಡಿ 90 ಕೋಟಿ ರೂ.ವರೆಗೆ ಹಣಕಾಸು ಬಳಸುವ ಅವಕಾಶವಿದ್ದು ಇದರ ಸದುಪಯೋಗವನ್ನು ಪ್ರತೀ ಗ್ರಾಮ ಪಂಚಾಯತ್ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಹೇಳಿದ್ದಾರೆ. ಕುರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ನರಿಂಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನೆತ್ತಿಲ ಬಾಳಿಕೆ, ಮಟ್ಟೆಮಾರ್, ಪುಳಿಂಕೆತಡಿ, ದೋಸೆಮನೆ ಮತ್ತು ಮೋರ್ಲ ಬಂಡಸಾಲೆಯಲ್ಲಿ ನಿರ್ಮಿಸಿದ ಐದು ಕಿಂಡಿ ಅಣೆಕಟ್ಟುಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ತಿಂಗಳಿಂದ ಜಿಲ್ಲೆಯಾದ್ಯಂತ ಕಿಂಡಿ ಅಣೆಕಟ್ಟು ನಿರ್ಮಾಣ ಕಾರ್ಯ ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಸ್ಥಳೀಯರೇ ಕಿಂಡಿ ಅಣೆಕಟ್ಟು ನಿರ್ಮಾಣ ಕಾರ್ಯ ಮಾಡುತ್ತಿದ್ದು, ಈಗಾಗಲೇ 325 ಅಣೆಕಟ್ಟು ಕಾರ್ಯ ಮುಗಿದಿದ್ದು, ಮಳೆಗಾಲದ ಮೊದಲು 500 ಕಿಂಡಿ ಅಣೆಕಟ್ಟು ನಿರ್ಮಾಣದ ಗುರಿಯನ್ನು ಇಟ್ಟುಕೊಂಡಿದೆ.…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಶ್ರೀನಿವಾಸ ಮಲ್ಯ ರಸ್ತೆಯ ಕಾಂಕ್ರಟೀಕರಣದ ಕಾಮಗಾರಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು,ಟಿ.ಖಾದರ್ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಉಳ್ಳಾಲ ನಗರಸಭೆಯ ಅಧ್ಯಕ್ಷ ಕುಂಇಮೋನು, ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಸ್ಥಳೀಯ ಕೌನ್ಸಿಲರ್ ಪೊಡಿಮೋನು ಉಸ್ಮಾನ್, ಮುಸ್ತಾಫ ಅಬ್ದುಲ್ಲಾ, ಮಹಮ್ಮದ್ ಮುಕ್ಕಚ್ಚೇರಿ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ನಿತಿನ್ ಕುಮಾರ್, ಕಾಮಗಾರಿ ಮೇಲ್ವಿಚಾರಕ ನಾಗೇಶ್, ರವೀಂದ್ರರಾಜ್, ರಾಘವೇಂದ್ರ ಮಲ್ಯ,ನ್ಯಾವಾದಿ ರವಿಕುಮಾರ್, ವಿಶ್ವನಾಥ ಆಚಾರ್ಯ, ಪ್ರಿಯಕರ ಆಚಾರ್ಯ, ರಾಜೇಂದ್ರ ಬಂಡಸಾಲೆ, ಆನಂದ ಸಪಲ್ಯ ಉಳಿಯ, ಫಾರೂಕ್ ಬಸ್ತಿಪಡ್ಪು, ಯು.ಬಿ. ಅಝೀಝ್ ಬಸ್ತಿಪಡ್ಪು, ಹರೀಶ್ ಬಸ್ತಿಪಡ್ಪು, ಅಬ್ದುಲ್ಲಾ, ಗುತ್ತಿಗೆದಾರ ಇಬ್ರಾಹಿಂ ಹೆಜಮಾಡಿ, ಅಹಮ್ಮದ್ ಬಾವ ಕೊಟ್ಟಾರ ಉಪಸ್ಥಿತರಿದ್ದರು.

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಹಲವಾರು ಜನಪರ, ಯಶಸ್ವಿ ಯೋಜನೆಗಳ ಮೂಲಕ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಮಾತ್ರವಲ್ಲದೆ ಉತ್ತಮವಾದ ಆಡಳಿತ ಹಾಗೂ ವಿದೇಶ ನೀತಿಗಳ ಮೂಲಕ ಇಡೀ ವಿಶ್ವವೇ ಭಾರದತ್ತ ನೋಡುವಂತಾಗಿದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಅವರು ಹೇಳಿದರು. ಅವರು ಶುಕ್ರವಾರ ತೊಕ್ಕೊಟ್ಟಿನ  ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸರಕಾರವು ಮೂರು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನೋಟ್ ಬ್ಯಾನ್‍ನಂತಹ ಮಹೋನ್ನತ ಯೋಜನೆ, ಜನಧನ, ವಿಮಾ ಯೋಜನೆ ಸೇರಿದಂತೆ ದೇಶದ ಜನರಿಗೆ ರೈತರಿಗೆ,ಬಡವರ ಏಳಿಗೆಗಾಗಿ ನೂರಾರು ಯೋಜನೆಗಳು ಇಂದು ಮೋದಿ ಸರಕಾರವನ್ನು ಯಶಸ್ವಿನೆಡೆಗೆ ಕೊಂಡೊಯ್ಯವಂತೆ ಮಾಡಿದೆ. ಭ್ರಷ್ಟಾಚಾರರಹಿತವಾಗಿ ಮೂರು ವರ್ಷ ಪೂರೈಸಿರುವ ಮೋದಿ ನೇತೃತ್ವದ ಸರಕಾರ ಪ್ರಮುಖವಾಗಿ ದೇಶದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು. ಬಿಜೆಪಿ ಮುಖಂಡ ಚಂದ್ರಹಾಸ್ ಉಳ್ಳಾಲ್ ಅವರು ಮಾತನಾಡಿ, ನರೇಂದ್ರ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು:ಜಿಲ್ಲಾ ತಮಿಳ್ ಮರುತ್ತ್ವರ್ ಸಮೂಹಂ ವತಿಯಿಂದ ಬಡ ಹೆಣ್ಣಿನ ವಿವಾಹ ಸಮಾರಂಭಕ್ಕೆ ಧನಸಹಾಯ ವಿತರಣಾ ಕಾರ್ಯಕ್ರಮ ನಡೆಯಿತು. ತೊಕ್ಕೊಟ್ಟಿನ ಗಣೇಶ ಮಂದಿರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮರುತ್ತ್ವರ್ ಸಮುದಾಯದ ರಾಜೇಂದ್ರ ಉಳ್ಳಾಲ ಅವರ ಮಗಳ ಮದುವೆಗೆ 33,000 ರೂಪಾಯಿಯನ್ನು ಸಂಘದ ವತಿಯಿಂದ ನೀಡಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಕುಮಾರ್ ಸಾಲೆತ್ತೂರು, ಸಲಹೆಗಾರ ಅನ್.ಗುಣಶೇಖರ್ ತೊಕ್ಕೊಟ್ಟು, ಎ.ಅನ್ಬಲಗನ್ ಬಾಕ್ರಬೈಲ್, ಕಾಶಿ ಉಳ್ಳಾಲ, ಮಹಿಳಾ ಘಟಕದ ಅಧ್ಯಕ್ಷೆ ಮಾರಿಕಣ್ಣ್ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮುನ್ನೂರು :ತ್ಯಾಜ್ಯ ಮುಕ್ತ ಗ್ರಾಮದ ಕನಸು ನನಸಾಗಿಸಲು ಕೇವಲ ಜನಪ್ರತಿನಿಧಿಗಳಿಂದ ಹಾಗೂ ಅಧಿಕಾರಿಗಳಿಂದ ಸಾಧ್ಯವಿಲ್ಲ. ಇವರ ಜೊತೆಗೆ ಊರಿನ ನಾಗರಿಕರೆಲ್ಲರೂ ಒಂದಾಗಿ ತಮ್ಮ ಪರಿಸರ ತ್ಯಾಜ್ಯ ಮುಕ್ತ ಆಗಬೇಕೆಂದು ಸಂಕಲ್ಪ ಮಾಡಿದರೆ ಮಾತ್ರ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಅರ್.ಉಮೇಶ್ ಹೇಳಿದ್ದಾರೆ. ಅವರು ಪ್ರಜ್ಞಾ ಸಲಹಾ ಕೇಂದ್ರ, ಜನ ಶಿಕ್ಷಣ ಟ್ರಸ್ಟ್, ದುರ್ಗಾ ವಾಹಿನಿ ಮಹಿಳಾ ಮಂಡಲ ಕುತ್ತಾರು ಮತ್ತು ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ತ್ಯಾಜ್ಯ ಮುಕ್ತ ಗ್ರಾಮ ನಿರ್ಮಾಣ-ಸೌಹಾರ್ದ ಸಂಕಲ್ಪ ಕಾರ್ಯಕ್ರಮಕ್ಕೆ ಕುತ್ತಾರು ಮಹಿಳಾ ಮಂಡಲ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್, ತಾಲೂಕು ಪಂಚಾಯತ್ ಸದಸ್ಯೆ ವಿಲ್ಮಾ ಆಲ್ಫ್ರೆಡ್ ಡಿಸೋಜ,ಮುನ್ನೂರು ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುರ್ರಹ್ಮಾನ್,ಜನ ಶಿಕ್ಷಣ ಸೇವಾ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ, ಮುನ್ನೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧೀರ್ ಉಪಸ್ಥಿತರಿದ್ದರು. ಪ್ರಜ್ಞಾ…

Read More

ಉಳ್ಳಾಲ ನ್ಯೂಸ್ ನೆಟ್ ವಕ್೯ ಉಳ್ಳಾಲ: ರಂಝಾನ್ ತಿಂಗಳಲ್ಲಿ ಬಡ ಕುಟುಂಬಗಳಿಗೆ ದಾನ ಧರ್ಮ ಮಾಡುವ ಕೆಲಸಕ್ಕೆ ವಿಶೇಷವಾದ ಮಹತ್ವವನ್ನು ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಎಂದು ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಆಬ್ದುಲ್ ರಶೀದ್ ಹಾಜಿ ಅಭಿಪ್ರಾಯಪಟ್ಟರು. ಉಳ್ಳಾಲ ಅಳೇಕಲ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 160 ಕುಟುಂಬಕ್ಕೆ ಉಚಿತ ರಂಝಾನ್ ಕಿಟ್ಟನ್ನು ಟ್ರಸ್ಟ್ ಕಚೇರಿಯಲ್ಲಿ ವಿತರಿಸಿ ಅವರು ಮಾತನಾಡಿದರು. ಹಾಜಿ ಸಯ್ಯದ್ ಯಹ್ಯಾ ತಂಙಳ್ ದುಆ ನೆರವೇರಿಸಿದರು, ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಮುಹಮ್ಮದ್ ತ್ವಾಹಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಸಯ್ಯದ್ ಮದನಿ ಕೇಂದ್ರ ಜುಮಾ ಮಸೀದಿ ಖತೀಬರು ಶಮೀಮ್ ಸಖಾಫಿ,ಕೇಂದ್ರ ಜುಮಾ ಮಸೀದಿ ಸದಸ್ಯರಾದ ಮುಹಮ್ಮದ್ ಬಾವಾ,ಹಾಜಿ ಯು.ಎಚ್.ಮಹಮ್ಮದ್ ಹಳೆಕೋಟೆ, ಆಸೀಫ್ ಅಬ್ದುಲ್ಲಾ, ಎ.ಎ.ಖಾದರ್,ಮುಸ್ತಫ ಮಂಚಿಲ,ಹಮೀದ್ ಕೋಡಿ, ಇಬ್ರಾಹಿಂ ಖಾಸಿಮ್,ಯು.ಎಸ್.ಹನೀಫ್ ಹಾಜಿ, ಕೆ.ಎನ್.ಮುಹಮ್ಮದ್ ಕುಂಞ,ಅಹ್ಮದ್,ಸಿದ್ದೀಕ್,ರೆಹಮತುಲ್ಲಾ,ಯು.ಕೆ.ಇಬ್ರಾಹಿಮ್,ಯು.ಎಸ್.ಹಸನಬ್ಬ, ಉಳ್ಳಾಲ ನಗರ ಸಬೆ ಸದಸ್ಯ…

Read More

ಉಳ್ಳಾಲ ನ್ಯೂಸ್ ನೆಟ್ ವಕ್೯ ಬೆಂಗಳೂರು: ಕೇಂದ್ರ ಸರಕಾರವು ದೇಶಾದ್ಯಂತ ಗೋಹತ್ಯೆ ನಿಷೇಧ ಅದ್ಯಾದೇಶ ಹೊರಡಿಸಿರುವುದನ್ನು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು ಖಂಡಿಸಿದ್ದಾರೆ. ಸರಕಾರದ ಈ ನಡೆಯಿಂದ ದೇಶದ ಬಹುಸಂಖ್ಯಾತ ಬಡವರ್ಗದ ಪೌಷ್ಠಿಕ ಆಹಾರವೊಂದನ್ನು ತಡೆದಂತಾಗಿದೆ. ಜಾನುವಾರುಗಳ ಮಾರಾಟ ಹಾಗೂ ಖರೀದಿಗೂ ಕಠಿಣ ಶರತ್ತು ವಿಧಿಸಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ. ರಾಷ್ಟ್ರದಾದ್ಯಂತ ಕೋಮು ದ್ವೇಷಕ್ಕಾಗಿ ನಡೆಯುತ್ತಿರುವ ಅಮಾಯಕರ ಹತ್ಯೆಯ ವಿರುದ್ಧ ಮೌನವಾಗಿರುವ ಆಡಳಿತ ಪಕ್ಷದ ಫಾಶಿಸಂ ಮುಖವು ಬಣ್ಣ ಬಯಲಾಗಿದೆ‌. ಈ ಆದ್ಯಾದೇಶವು ಸಂವಿಧಾನ ವಿರೋಧಿಯಾಗಿದೆ. ಇದು ಅಪಾಯಕಾರಿ ಬೆಳವಣಿಗೆ. ಆದುದರಿಂದ ಈ ವಿಷಯದಲ್ಲಿ ರಾಷ್ಟ್ರಪತಿಯವರು ಮಧ್ಯಪ್ರವೇಶಿಸಬೇಕು ಎಂದು ಎಸ್ಸೆಸ್ಸೆಫ್ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದೆ.

Read More

ಉಳ್ಳಾಲ ನ್ಯೂಸ್ ನೆಟ್ ವಕ್೯ ಮುಡಿಪು: ದೇರಳಕಟ್ಟೆ ಸಮೀಪದ ಮುಡಿಪು ಬಳಿ ಎಕರೆ 89 ಸೆಂಟ್ಸ್ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ನೂತನ ಕೇಂದ್ರ ಕಾರಾಗೃಹದಲ್ಲಿ ಹೆಲಿಪ್ಯಾಟ್ ವ್ಯವಸ್ಧೆ ಕೂಡಾ ಇರಲಿದೆ.ಅತ್ಯಾಧುನಿಕ ಆಸ್ಪತ್ರೆ,ಗ್ರಾಂಥಾಲಯ,ಮಹಿಳಾ ಬ್ಯಾರಕ್,ಭದ್ರತಾ,ವ್ಯವಸ್ಥೆ ಜೊತೆಗೆ ಹೆಲಿಪ್ಯಾಡ್ ಕೂಡಾ ನಿರ್ಮಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. ಸುಮಾರು 200 ಕೋಟಿ ರೂ ವೆಚ್ಚದಲ್ಲಿ ಅತ್ಯಂತ ಭದ್ರತೆ ಹೊಂದಿರುವ ಕಾರಾಗೃಹದಲ್ಲಿ ನಿರ್ಮಿಸಲಾಗುತ್ತಿದ್ದು. ತುರ್ತು ಸಂದರ್ಭಗಳಲ್ಲಿ ಹೆಲಿಕಾಫ್ಟರ್ ಬಳಕೆ ಮಾಡಲು ಪೂರಕವಾಗಿ ಇದನ್ನು ನಿರ್ಮಿಸಲು ಕಾರಾಗೃಹ ಇಲಾಖೆ ನಿರ್ಧಾರ ಕೈಗೊಂಡಿದೆ.ಈ ಮೂಲಕ ರಾಜ್ಯದ ಅತ್ಯಾಧುನಿಕ ಕಾರಾಗೃಹವಾಗಲಿದೆ. ಪತ್ರಕರ್ತರ ಜೊತೆಗೆ ಮಾತನಾಡಿದ ಇಲಾಖೆ ಪೊಲೀಸ್ ಮಹಾನಿರ್ದೇಶಕ ಎಚ್ ಎನ್ ಸತ್ಯನಾರಾಯಣ ರಾವ್, ಈಗಾಗಲೇ 200ಕೋಟಿ ರೂ.ವೆಚ್ಚದ ಅತ್ಯಾಧುನಿಕ ಕಾರಾಗೃಹ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಿದ್ದಪಡಿಸಲಾಗಿದ್ದು.ಶೀಘ್ರದಲ್ಲೇ ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ ಸರ್ವ ಸುಸಜ್ಜಿತವಾದ ರಾಜ್ಯದ ಬಂದೀಖಾನೆ ಇದಾಗಿರಲಿದ್ದು,ಕಾರಾಗೃಹಕ್ಕೆ ಹೊಂದಿಕೊಂಡಂತೆ ಸಿಬ್ಬಂದಿಗಳಿಗಾಗಿ ಅತ್ಯಾಧುನಿಕ ಸೌಲಭ್ಯಗಳು ಇರುವ 270 ವಸತಿಗೃಹಗಳನ್ನು ಕೂಡಾ ನಿರ್ಮಿಸಲಾಗುವುದು ಎಂದು…

Read More