Author: UllalaVani

Kannada News From Coastal Karnataka

UN NETWORKS ದೇರಳಕಟ್ಟೆ: ಮಂಗಳೂರಿನ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಉತ್ಸಾಹದಿಂದ ಆಚರಿಸಲಾಯಿತು. ಕನ್ನಡ ಧ್ವಜಾರೋಹಣಗೈದ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ, ಡಾ. ಶಿವಕುಮಾರ್ ಹಿರೇಮಠ್ ಮಾತನಾಡಿ, “ಕನ್ನಡವು ವಿಶ್ವದಲ್ಲೇ ಅತ್ಯಂತ ಶ್ರೀಮಂತ ಭಾಷೆಗಳಲ್ಲಿ ಒಂದಾಗಿದೆ ಮತ್ತು ಅಗ್ರ 30 ಭಾಷೆಗಳಲ್ಲಿ ಸ್ಥಾನ ಪಡೆದಿದೆ. ನಮ್ಮ ದೈನಂದಿನ ಜೀವನದಲ್ಲಿ ಇದನ್ನು ಬಳಸುವುದರ ಮೂಲಕ ಭಾಷೆಯನ್ನು ನಾವು ಜೀವಿಸೋಣ ” ಎಂದು ಕರೆಕೊಟ್ಟರು. ಆಲೂರು ವೆಂಕಟರಾಯರ ಮುಂದಾಳತ್ವದ ಸಮಿತಿಯ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯದ ರಚನೆ ಹಾಗು ಮರುನಾಮಕರಣದ ಕುರಿತು ಸಂಕ್ಷಿಪ್ತ ಪರಿಚಯದೊಂದಿಗೆ ಪ್ರಾಧ್ಯಾಪಕ ಮತ್ತು ಅರಿವಳಿಕೆ ಇಲಾಖೆಯ ಮುಖ್ಯಸ್ಥ ಡಾ. ಆನಂದ ಬಂಗೇರ ಸ್ವಾಗತಿಸುತ್ತಾ ‘ಗಣರಾಜ್ಯೋತ್ಸವ ಮತ್ತು ನವರಾಜ್ಯೋತ್ಸವದ’ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದರು. ಮನೋರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗು ಮುಖ್ಯಸ್ಥ ಡಾ ಸತೀಶ್ ರಾವ್ ನಿಟ್ಟೆ ವಿಶ್ವವಿದ್ಯಾಲಯ ಹಾಗು ಕೆ ಸ್ ಹೆಗ್ಡೆ ಆಸ್ಪತ್ರೆಯ ವತಿಯಿಂದ ವಂದನಾರ್ಪಣೆಗೈದರು. ನಿಟ್ಟೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ…

Read More

UN NETWORKS ಹರೇಕಳ: ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜ್ರಂಭಣೆಯೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದ ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈ ಯವರು ನಮ್ಮ ನಾಡಿನ ಬಗ್ಗೆ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಅರಿವಿದ್ದರೆ ಮಾತ್ರ ಸಾಲದು ಅಭಿಮಾನದೊಂದಿಗೆ ದೈನಂದಿನ ಜೀವನ ಶೈಲಿಯಲ್ಲಿಯೂ ಅಳವಡಿಸಿಕೊಳ್ಳುವುದು ಬಹಳ ಮುಖ್ಯವೆಂದರು. ಪ್ರಾಮುಖ್ಯವಾಗಿ ವಿಧ್ಯಾರ್ಥಿಗಳು ಕನ್ನಡವನ್ನು ಸ್ಪಷ್ಟವಾದ ಉಚ್ಚಾರದೊಂದಿಗೆ, ಇನ್ನಿತರ ಭಾಷೆಗಳನ್ನು ಬೆರೆಸದೇ ನಿರರ್ಗಳವಾಗಿ ಮಾತನಾಡಲು ಕಲಿಯಬೇಕು ಎಂದರು. ಕನ್ನಡ ಭಾಷಾ ಶಿಕ್ಷಕಿ  ಉಷಾಲತ ರವರು ಕರ್ನಾಟಕ ಇತಿಹಾಸ ಮತ್ತು ಬೆಳೆದು ಬಂದ ರೀತಿ ಅದರೊಂದಿಗೆ ಶ್ರೇಷ್ಟತೆಗಳ ಬಗ್ಗೆ ಮಾಹಿತಿ ನೀಡಿದರು. ಸೌಂದರ್ಯ ಮತ್ತು ಬಳಗ ನಿತ್ಯೋತ್ಸವ ಹಾಡನ್ನು ಹಾಡಿದರು. ವಿದ್ಯಾರ್ಥಿಗಳಾದ ಶರಣ್ಯ, ಕೃತಿಕಾ, ರಶ್ವೀನ ಭಾಷಣಗೈದರು. ನಿರೀಕ್ಷಾ ಮತ್ತು ಬಳಗ ದೇಶ ಭಕ್ತಿಗೀತೆಯನ್ನು ಹಾಡಿದರು. ಅಧ್ಯಾಪಕರದ ರವಿಶಂಕರ್‍ರವರು ಕನ್ನಡ ಹಿರಿಮೆಗೆ ಸಂಬಂಧಿಸಿದ ಭಾವಗೀತೆಯನ್ನು ಹಾಡಿದರು. ಶಿಕ್ಷಕರುಗಳಾದ ಕುಮುದ, ಕೃಷ್ಣಶಾಸ್ತ್ರಿ, ಶಿವಕುಮಾರ್, ನೂತನ, ಸ್ಮಿತಾಕುಮಾರಿ ಹಾಗೂ ವಿದ್ಯಾರ್ಥಿ ಸಂಘದ ನಾಯಕಿಯಾದ ತಸ್ಪಿಯ…

Read More

UN NETWORKS ಉಳ್ಳಾಲ: ಹತ್ತು ವರ್ಷಗಳ ಸುದೀರ್ಘ ಅವಧಿ ಹಿಡಿದರೂ ಒಳಚರಂಡಿ ಕಾಮಗಾರಿ ಅರೆಬರೆ ನಡೆದಿರುವ ಹಿನ್ನೆಲೆಯಲ್ಲಿ ಆಕ್ರೋಶಿತರಾದ ನಗರಸಭಾ ಸದಸ್ಯರು ಸೋಮವಾರ ನಡೆದ ಉಳ್ಳಾಲ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಆಕ್ರೋಶಿತರಾದರು. ಇದರ ಪರಿಣಾಮ ಸಂಬಂಧಪಟ್ಟ ಇಲಾಖೆ ಅಧಿಕಾರಿ ತೀವೃವಾಗಿ ತರಾಟೆಗೆ ಒಳಗಾದರು. ಕೌನ್ಸಿಲರ್ ಅಬ್ದುಲ್ ಫತಾಕ್ ಯುಜಿಡಿ ಕಾಮಗಾರಿ ಆರಂಭಗೊಂಡ ವರ್ಷ ಹತ್ತಾದರೂ ಇನ್ನೂ ಮುಗಿದಿಲ್ಲ, 65 ಕೋಟಿ ಯೋಜನೆಯಲ್ಲಿ ಆರಂಭಿಸಿರುವ ಕಾಮಗಾರಿ ಮುಗಿಯುವ ಹೊತ್ತಿಗೆ 300 ಕೋಟಿ ದಾಟುವ ಭೀತಿಯಿದೆ. ಪ್ರತೀ ಸಭೆಯಲ್ಲೂ ಅಧಿಕಾರಿ ಶೋಭಾ ಅವರು ಆಗಮಿಸಿ ಉಡಾಫೆಯ ಉತ್ತರ ನೀಡುತ್ತಾರೆ. ಮುಂದಕ್ಕೆ ಶೋಭಾ ಬದಲು ಇಲಾಖೆಯಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರೇ ಬರಬೇಕು ಎಂದು ಆಗ್ರಹಿಸಿದರು. ಇವರ ಮಾತಿಗೆ ಮುಸ್ತಫಾ ಅಬ್ದುಲ್ಲಾ ಬೆಂಬಲ ಸೂಚಿಸಿ 2014ರಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಶೋಭಾ ಅವರೇ ಹಿಂದೆ ತಿಳಿಸಿದ್ದರು. ಇದೀಗ 2017 ಆದರೂ ಕಾಮಗಾರಿ ಮುಗಿದಿಲ್ಲ. ಕಾಮಗಾರಿ ಆರಂಭಿಸುವಾಗಲೇ ಭೂಸ್ವಾಧೀನ ಮಾಡದ್ದು ಇಲಾಖೆಯ ತಪ್ಪು. ಅದನ್ನು ನಗರಸಭೆ ಮೇಲೆ ಹಾಕಬೇಡಿ.…

Read More

UN NETWORKS ಮಂಗಳೂರು: ದಿನಾಂಕ 27/10/2017 ನೇ ಶುಕ್ರವಾರದಂದು ಸೈಂಟ್ ಜೊಸೆಪ್ಸ್ ಹೈಸ್ಕೂಲ್, ಬಜಾಲ್ ಇಲ್ಲಿ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಮಾಹಿತಿ ಕಾರ್ಯಗಾರ ನಡೆಯಿತು. ಸ್ವಸ್ತಿಕ್ ಕಲಾಕೇಂದ್ರ ಜಲ್ಲಿಗುಡ್ಡೆ ಮಂಗಳೂರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ,ಮಂಗಳೂರು ಇವರುಗಳ ಜಂಟಿ ಆಶ್ರಯದಲ್ಲಿ ಈ ಮಾಹಿತಿ ಶಿಬಿರ ನಡೆಯಿತು. ಸ್ವಸ್ತಿಕ್ ಕಲಾಕೇಂದ್ರ ಇದರ ಅಧ್ಯಕ್ಷರಾದ ಹರಿಶ್ಚಂದ್ರ ರಾವ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲಾ ಶಾಲೆಗಳಲ್ಲಿ ಈ ಮಾಹಿತಿ ಶಿಬಿರ ನಡೆಯಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ|| ಮುರಲಿ ಮೋಹನ್ ಚೂಂತಾರು ಇವರು ವಹಿಸಿದ್ದರು. ಸೈಂಟ್ ಜೋಸೆಪ್ ಹೈಸ್ಕೂಲಿನ ಮುಖ್ಯೋಪಾಧ್ಯಯಿನಿ ಲವಿನ ಸೀಕ್ವೆರ ಮತ್ತು ಶಿಕ್ಷಕಿ ಸಿಸಿಲ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾರತ್ ಸೇವಾದಳದ ಆಲ್ಪೋನ್ ಪ್ರಾಂಕೋ ಇವರು ಭಾಗವಹಿಸಿದರು. ಪ್ರತಿಯೊಬ್ಬ ಭಾರತೀಯರು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಬಗ್ಗೆ ವಿಶೇಷ ಅಭಿಮಾನ ಮತ್ತು ಗೌರವ ಬೆಳಸಿಕೊಳ್ಳಬೇಕು. ರಾಷ್ಟ್ರ ಧ್ವಜ ನಮ್ಮ ಸ್ವಾಭಿಮಾನದ…

Read More

UN NETWORKS ಉಳ್ಳಾಲ: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಕುಂಠಿತಕ್ಕೆ ಕಾಂಗ್ರೆಸ್ ಸರಕಾರ ಕಾರಣವಾಗಿದ್ದು ಈ ಸರಕಾರವನ್ನು ಕಿತ್ತೊಗೆದು, ಆ ಮೂಲಕ ನವ ಕರ್ನಾಟಕ ನಿರ್ಮಾಣಕ್ಕೆ ಮುನ್ನುಡಿಯಾಗಬೇಕು ಎಂದು ಬಿ.ಜೆ.ಪಿ. ರಾಜ್ಯ ಹಿಂದುಳಿದ ವರ್ಗ ಮೋರ್ಛಾದ ಕಾರ್ಯದರ್ಶಿ, ನವಕರ್ನಾಟಕ ಪರಿವರ್ತನಾ ಯಾತ್ರೆಯ ಜಿಲ್ಲಾ ಸಂಚಾಲಕ ಸತ್ಯಜಿತ್ ಸುರತ್ಕಲ್ ತಿಳಿಸಿದರು. ಬಿ.ಜೆ.ಪಿ. ರಾಜ್ಯಾಧ್ಯಕ್ಷ. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನ.2 ರಂದು ಬೆಂಗಳೂರಿನ ನೆಲಮಂಗಲದಿಂದ ಹೊರಡಲಿರುವ ನವಕರ್ನಾಟಕ ಪರಿವರ್ತನಾ ಯಾತ್ರೆಯ ಕುರಿತು ಮಂಗಳೂರು ವಿಧಾನ ಸಭಾ ಕ್ಷೇತ್ರದ ಕಛೇರಿಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳನ್ನು 75 ದಿನಗಳ ಕಾಲ ಸಂಚರಿಸಲಿರುವ ಈ ಯಾತ್ರೆಯು ರಾಜ್ಯದ ಅತೀ ದೊಡ್ಡ ಯಾತ್ರೆಯಾಗಲಿದೆ ಎಂದ ಅವರು ಈ ಬಗ್ಗೆ ಕ್ಷೇತ್ರ ವ್ಯಾಪ್ತಿ ಯಾತ್ರೆ ಯಶಸ್ವಿಗೊಳಿಸುವ ಬಗ್ಗೆ ಶಕ್ತಿಕೇಂದ್ರವಾರು ವಿಶೇಷ ನಡೆಸಲು ಸೂಚಿಸಿದರು. ಕ್ಷೇತ್ರಧ್ಯಾಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ಕ್ಷೇತ್ರದ197 ಬೂತ್‍ನಿಂದ ತಲಾ ಮೂವರಂತೆ ಸುಮಾರು 600 ಯುವ ಕಾರ್ಯಕರ್ತರು ಬೆಂಗಳೂರಿನಲ್ಲಿ…

Read More

UN NETWORKS ಕೋಟೆಕಾರ್: ಅ.15ರೊಳಗೆ ಮುಗಿಯಬೇಕಿತ್ತಾದರೂ ಕೆಲವೊಂದು ಕಾರಣಗಳಿಂದ ಅಸಾಧ್ಯವಾಗಿದೆ, ಅ.30ರೊಳಗೆ ಮುಗಿಸುವಂತೆ ಕೆಪಿಸಿಸಿ ಸಮಯಾವಕಾಶ ನೀಡಿದ್ದರೂ ನ.10ರೊಳಗೆ ಕಾರ್ಯಕ್ರಮ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದರು. ಕೋಟೆಕಾರ್ ಗ್ರಾಮ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಚುನಾವಣೆ ಸಂದರ್ಭ ಕಾಂಗ್ರೆಸ್ ನೀಡಿದ್ದ ಭರವಸೆಗಳು, ಈಡೇರಿಕೆ ಹಾಗೂ ಬಾಕಿಯಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕೆಪಿಸಿಸಿ ನಿರ್ದೇಶನದಂತೆ ಕಾರ್ಯಕ್ರಮ ನಡೆಯುತ್ತಿದೆ. ದ.ಕ.ಜಿಲ್ಲೆಯಲ್ಲಿ ಹಲವು ಬೂತ್‍ಗಳಲ್ಲಿ ಪೂರ್ತಿಗೊಂಡಿದ್ದು, ಉಳಿದೆಡೆ ಪ್ರಗತಿಯಲ್ಲಿದೆ. ನ.10ರೊಳಗೆ 1766 ಬೂತ್‍ಗಳಲ್ಲೂ ಪ್ರತೀ ಮನೆಗೂ ಕಾರ್ಯಕರ್ತರು ತಲುಪಿ ಮಾಹಿತಿ ಕಾರ್ಯ ಪೂರ್ತಿಗೊಳಿಸಲಿದ್ದಾರೆ ಎಂದು ಹೇಳಿದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಉಪಾಧ್ಯಕ್ಷ ಮಹಮ್ಮದ್ ಮುಸ್ತಫಾ ಮಲಾರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಕೊಣಾಜೆ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಖಾದರ್ ಅಡ್ಕರೆ,…

Read More

UN NETWORKS ಕಲ್ಲಾಪು: ಮಂಗಳೂರು ವಿದಾನಸಭಾ ಕ್ಷೇತ್ರದ ಆರಂಭ ಕಲ್ಲಾಪುವಿನಿಂದಾಗಿದ್ದು, ಇಲ್ಲಿಂದಲೇ ಕಾಂಗ್ರೆಸ್ ವಿಜಯದ ಯಾತ್ರೆ ಆರಂಭಗೊಳ್ಳಲಿದೆ ಎಂದು ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು ಹೇಳಿದರು. ಗುರುವಾರ ಕಲ್ಲಾಪು ಖಾಸಗಿ ಹೊಟೇಲ್‍ನಲ್ಲಿ ನಡೆದ ಕಲ್ಲಾಪು, ಅಂಬಟ್ಟಾಡಿ ಸಹಿತ ನಾಲ್ಕು ವಾರ್ಡ್‍ಗಳ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಮಂಗಳೂರು ಕ್ಷೇತ್ರದಲ್ಲಿ ಎಂದಿಗೂ ಯು.ಟಿ.ಖಾದರ್ ಅವರದ್ದೇ ಗೆಲುವು, ಅವರನ್ನು ಸೋಲಿಸಬೇಕು ಎನ್ನುವ ನಿಟ್ಟಿನಲ್ಲಿ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದು, ಕಾಂಗ್ರೆಸ್ ಸೋಲಿಸಲು ಎಂತಹ ಕುತಂತ್ರದಿಂದಲೂ ಅಸಾಧ್ಯ. ಮುಕಚ್ಚೇರಿಯಲ್ಲಿ ಝುಬೇರ್ ಕೊಲೆಗೀಡಾಗಿರುವುದು ಎಲ್ಲರಿಗೂ ಬೇಸರದ ವಿಚಾರವಾಗಿತ್ತು. ಆದರೆ ಬಿಜೆಪಿ ಸೂತಕದ ಮನೆಯಲ್ಲೂ ರಾಜಕೀಯ ಬೇಳೆ ಬೇಯಿಸಲು ನೋಡಿದ್ದು ದುರದೃಷ್ಟಕರ. ಮುಂದಿನ ಚುನಾವಣೆಯಲ್ಲಿ ಕಲ್ಲಾಪುವಿನಲ್ಲಿ ಇತರ ಪಕ್ಷದ ಬೂತ್‍ಗಳೂ ಇರದಂತೆ ಮತದಾರರು ನೋಡಿಕೊಳ್ಳಲಿದ್ದಾರೆ ಎಂದರು. ಮುಖಂಡ ಅಯೂಬ್ ಮಂಚಿಲ ಮಾತನಾಡಿ, ಕಲ್ಲಾಪು ಎನ್ನುವುದು ಕಾಂಗ್ರೆಸ್ ಭದ್ರಕೋಟೆಯಾಗಿದೆ, ಇಲ್ಲಿನ ಯುವಜನತೆ ಪಕ್ಷಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಿದ್ದಾರೆ. ಉಳ್ಳಾಲದ ಇತರ ಭಾಗಗಳಲ್ಲಿ ಗಾಂಜಾ ವ್ಯಸನದ ಬಗ್ಗೆ…

Read More

UN NETWORKS ಹಳೆಕೋಟೆ: ಮದ್ರಸ ಕಾರ್ಯಕ್ಷೇತ್ರವನ್ನು ಅಭಿವ್ರದ್ಧಿಗೊಳಿಸುವ ನಿಟ್ಟಿನಲ್ಲಿ ಮತ್ತು ಧಾರ್ಮಿಕ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ಸಲುವಾಗಿ ಉಳ್ಳಾಲದ ಹಳೆಕೋಟೆಯಲ್ಲಿ ನೂತನ ಮದ್ರಸಕ್ಕೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ನೇತ್ರತ್ವದಲ್ಲಿ ಚಾಲನೆ ನೀಡಲಾಯಿತು. ಮದ್ರಸಕ್ಕೆ ತಾಜುಲ್ ಉಲಮಾ ಖ.ಸಿ ಮದ್ರಸ ಎಂಬ ನಾಮಕರಣ ಮಾಡಲಾಯಿತು. ಪ್ರಸ್ತುತ ಮದ್ರಸ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ಸಿಲೆಬಸ್ ಹಾಗು ಅಂಗೀಕಾರದೊಂದಿಗೆ ಕಾರ್ಯಾಚರಿಸಲಿದೆ. ಮುಸ್ತಫ ಮದನಿ ಉಳ್ಳಾಲ ಸಮಾರಂಭವನ್ನು ಉದ್ಘಾಟಿಸಿದರು. ಅಬ್ದುಲ್ ಹಮೀದ್ ಮುಸ್ಲಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ತಾಜುಲ್ ಉಲಮಾ ಖ.ಸಿ ಮದ್ರಸ ಇದರ ನೂತನ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಯು ಎಚ್ ಯೂಸುಫ್, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್, ಕೋಶಾಧಿಕಾರಿಯಾಗಿ ಅಬ್ಬಾಸ್ ರಫೀಖ್, ಸಂಚಾಲಕರಾಗಿ ಅಬ್ದುಲ್ ಸತ್ತಾರ್ ಹಳೆಕೋಟೆ, ಉಪಾಧ್ಯಕ್ಷರಾಗಿ ಅಬೂಸಾಲಿ, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಹಾಗು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ಹಮೀದ್, ಬಶೀರ್, ಅಬ್ದುರ್ರಹ್ಮಾನ್, ಹಂಝ, ಇಬ್ರಾಹಿಂ ಹಾಗು ಕಬೀರ್ ಇವರುಗಳನ್ನು…

Read More

UN NETWORKS ಉಳ್ಳಾಲ: ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿಯೂ ವಿದೇಶದಲ್ಲಿನ ಕಪ್ಪು ಹಣವನ್ನು ತರಿಸಿ ಪ್ರತಿಯೊಬ್ಬ ಭಾರತೀಯನ ಖಾತೆಗೆ ತಲಾ 15 ಲಕ್ಷ ರೂ. ಜಮಾ ಮಾಡುವುದಾಗಿಯೂ ಭರವಸೆ ನೀಡಿದ ನರೇಂದ್ರ ಮೋದಿಯವರು ಒಬ್ಬ ಸುಳ್ಳುಗಾರ ಎಂಬುದನ್ನು ಸಾಬೀತುಪಡಿಸಿದೆ ಎಂದು ಸಿಪಿಐಎಂನ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ. ಇತ್ತೀಚೆಗೆ ಸೋಮೇಶ್ವರ ಗ್ರಾಮದ ಪಿಲಾರು ಲಕ್ಷ್ಮಿಗುಡ್ಡೆ ಪ್ರದೇಶದಲ್ಲಿ ಸೇರಿದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೋದಿಯವರು ರೂ. 500, 1000 ದ ನೋಟುಗಳನ್ನು ರಾತ್ರೋರಾತ್ರಿ ಅಮಾನ್ಯ ಮಾಡಿದುದರ ಪರಿಣಾಮವಾಗಿ ಜನಸಾಮಾನ್ಯರಿಗೆ ಆದ ತೊಂದರೆ, ಇತ್ತೀಚೆಗೆ ಜಾರಿಗೊಳಿಸಿದ ಜಿ.ಎಸ್.ಟಿಯಿಂದಾಗಿ ಉಂಟಾದ ಸಮಸ್ಯೆ, ನಿರುದ್ಯೋಗದ ಸಮಸ್ಯೆ ಬೆಲೆ ಏರಿಕೆ ಇವೆಲ್ಲದಕ್ಕೂ ಮೋದಿಯವರ ತಲೆಬುಡವಿಲ್ಲದ ಆರ್ಥಿಕ ನೀತಿಯೇ ಕಾರಣವಾಗಿದೆ ಎಂದು ಟೀಕಿಸಿದರು. ರೈತ ಮುಂದಾಳು ಸಂಜೀವ ಪಿಲಾರ್ ಮಾತನಾಡಿ ಭೂ ಚಳುವಳಿ ನಡೆದು ಇದೀಗ 20 ವರ್ಷಗಳು ಸಂದು ಹೋಗಿದ್ದು, ನೂರಕ್ಕೂ ಅ„ಕ ಭೂರಹಿತ ಕುಟುಂಬಗಳಿಗೆ ಭೂಮಿ ಒದಗಿಸಿದ…

Read More

UN NETWORKS ಕೊಣಾಜೆ: ಸಸ್ಯಗಳ ಉಳಿವಿಗಾಗಿ ಮತ್ತು ಮಾನವಾಭಿವೃದ್ಧಿಗಾಗಿ ಬಳಸಿಕೊಳ್ಳಬಹುದಾದ ಸಸ್ಯ ಸಂಪನ್ಮೂಲಗಳ ಬಗ್ಗೆ ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಇಂದಿನದ್ದಾಗಿದ್ದು, ಸಸ್ಯಗಳಿದ್ದರೆ ಮಾತ್ರ ಜೀವರಾಶಿಗಳು ಉಳಿಯಬಹುದು. ಇಲ್ಲದಿದ್ದರೆ ಆಮ್ಲಜನಕದ ಕೊರೆತಯಿಂದಾಗಿ ಭೂಮಿಯ ಜೀವರಾಶಿಗಳೆಲ್ಲವೂ ನಶಿಸಿ ಹೋಗಬಹುದು ಎಂದು ಕ್ಯಾಲಿಕಟ್‍ನ ಭಾರತೀಯ ಸಂಬಾರ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಕೆ.ನಿರ್ಮಲ್ ಬಾಬು ಅವರು ಅಭಿಪ್ರಾಯ ಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಿಯಿಕ ಸಸ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕರ್ನಾಟಕ ತಂತ್ರಜ್ಞಾನ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಮಂಗಳೂರು ವಿವಿ ಹಳೆಸೆನೆಟ್ ಸಭಾಂಗಣದಲ್ಲಿ ಗುರುವಾರ ಸಸ್ಯ ವಿಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆಗಳು ಎಂಬ ವಿಷಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಿಂದಾಗಿ ಸಮಾಜವು ಹಲವಾರು ರೀತಿಯ ಪರಿವರ್ತನೆಗಳಿಗೆ ಕಾರಣವಾಗಿದೆ. ಅದರಲ್ಲೂ ಸಸ್ಯಶಾಸ್ತ್ರ ವಿಜ್ಞಾನ ಕ್ಷೇತ್ರವು ಇಂದಿನ ಆಧುನಿಕತೆಯಲ್ಲಿ ಬಹಳಷ್ಟು ಪರಿಣಾಮವನ್ನು ಬೀರುತ್ತಿದ್ದು ಈ ನಿಟ್ಟಿನಲ್ಲಿ ಯುವ ಸಮುದಾಯ, ವಿದ್ಯಾರ್ಥಿಗಳು ತಮ್ಮ ವಿಶೇಷ ಪರಿಶ್ರಮದೊಂದಿಗೆ ಹೊಸ ಹೊಸ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳಬೇಕು…

Read More