ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ : ಇಲ್ಲಿನ ಮೊಗವೀರಪಟ್ಣದಲ್ಲಿ ಸಮುದ್ರ ಪಾಲಾಗಿ ಕಲ್ಲಿನೆಡೆಯಲ್ಲಿ ಸಿಲುಕಿದ್ದ ತುಮಕೂರು ಶಿರಾ ನಿವಾಸಿ ಹಯಾಝ್ ಮೃತದೇಹವನ್ನು ಸಾಮಾಜಿಕ ಕಾರ್ಯಕರ್ತ ರಾಝಿಕ್ ಉಳ್ಳಾಲ್ ಅವರ ಶ್ರಮದಿಂದ ಬೃಹತ್ ಹಿಟಾಚಿ ತರಿಸಿ ಮೃತದೇಹವನ್ನು ಮೇಲೆತ್ತುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದು, ಜಿಲ್ಲಾಡಳಿತ ವಿಫಲವಾಗಿದ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಕಾರ್ಯಾಚರಣೆ ನಡೆಸಿದರು. ಉಳ್ಳಾಲ ದರ್ಗಾಕ್ಕೆ ಬಂದಿದ್ದ ತುಮಕೂರು ಶಿರಾ ಮೂಲದ ಹತ್ತು ಮಂದಿಯ ತಂಡ ಬುಧವಾರ ಉಳ್ಳಾಲ ಮೊಗವೀರಪಟ್ಣ ಬಳಿಯ ಸಮುದ್ರದಲ್ಲಿ ಅಲೆಗಳೊದಿಗೆ ಆಟವಾಡುತ್ತಿದ್ದಾಗ ಇಬ್ಬರು ಸಮುದ್ರ ಪಾಲಾಗಿದ್ದರು. ಸಮದ್ರ ಪಾಲದ ಇಬ್ಬರು ಯುವಕರಲ್ಲಿ ಶಾರುಖ್ ಮೃತದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದ್ದರೆ, ಹಯಾಝ್ ಮೃತದೇಹವನ್ನು ತೆಗೆಯಲು ಎರಡು ದಿನಗಳಿಂದ ಜಿಲ್ಲಾಡಳಿತದ ನೇತೃತ್ವದಲ್ಲಿ ಮುಳುಗು ತಜ್ಞರು, ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ಶ್ರಮಿಸಿದ್ದರು. ಬುಧವಾರ ರಾತ್ರಿ ಶಿವಾಜಿ ಜೀವರಕ್ಷಕ ತಂಡದ ಯೋಗೀಶ್ ಅಮೀನ್ ಮತ್ತು ರಾಜೇಶ್ ಪುತ್ರನ್ ಕಲ್ಲಿನೆಡೆಯಲ್ಲಿ ಸಿಲುಕಿದ್ದ ಮೃತದೇಹದ ಕಾಲಿಗೆ ಹಗ್ಗ ಕಟ್ಟಿ ಬಂದಿದ್ದು, ಗುರುವಾರ ಬೆಳಗ್ಗೆ…
Author: UllalaVani
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ವೃದ್ಧ ದಂಪತಿಗೆ ಬೆದರಿಸಿದ ಕಳ್ಳನೋರ್ವ ಒಂದು ಲಕ್ಷ ಮೌಲ್ಯದ ಚಿನ್ನ ಹಾಗೂ ನಗದು ಕಳವುಗೈದಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಡುಪದವು ಎಂಬಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ. ಮಂಗಳೂರಿನಲ್ಲಿ ದಸ್ತಾವೇಜು ಬರಹಗಾರರಾಗಿರುವ ಸದಾಶಿವಯ್ಯ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಮನೆಯೊಳಗಿದ್ದ 30,000 ರೂ. ನಗದು ಮತ್ತು 22 ಪವನ್ ಚಿನ್ನಾಭರಣವನ್ನು ಓರ್ವನೇ ಕಳ್ಳ ದೋಚಿದ್ದಾನೆ. ಮನೆಯ ಹಿಂಬದಿಯ ಕಂಪೌಂಡ್ ಹಾರಿ , ಮುಂಬಾಗಿಲ ಚಿಲಕ ಒಡೆದು ಒಳನುಗ್ಗಿದ ಕಳ್ಳ ಸೂಟ್ ಕೇಸಿನಲ್ಲಿರಿಸಿದ್ದ ಚಿನ್ನ ಮತ್ತು ನಗದು ಕಳವುಗೈದಿದ್ದನು. ಶಬ್ದ ಕೇಳಿ ಸದಾಶಿವಯ್ಯ ಅವರ ಪತ್ನಿ ಎದ್ದು ನೋಡಿದಾಗ, ಕಳ್ಳನ ಕೃತ್ಯ ಬೆಳಕಿಗೆ ಬಂದಿತ್ತು. ಕೂಡಲೇ ಬೊಬ್ಬಿಟ್ಟಾಗ ಸದಾಶಿವಯ್ಯ ಅವರು ಕೂಡಾ ಎದ್ದಿದ್ದರು. ಆದರೆ ಕಳ್ಳ ಇಬ್ಬರಿಗೂ ಬೊಬ್ಬಿಟ್ಟಲ್ಲಿ ಕೊಲ್ಲುವುದಾಗಿ ಬೆದರಿಸಿ ಕಳವುಗೈದ ಸೊತ್ತುಗಳೊಂದಿಗೆ ಪರಾರಿಯಾಗಿದ್ದಾನೆ. ದಡೂತಿ ಶರೀರದವನಾಗಿದ್ದ ಕಳ್ಳ ಮುಖಕ್ಕೆ ಬಟ್ಟೆಯನ್ನು ಕಟ್ಟಿದ್ದನು ಎಂದು ಮನೆಮಂದಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿರುವ ಪುತ್ರಿ ಇಂದು ಮನೆಗೆ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯಪೇಟೆ ದೇರಳಕಟ್ಟೆಯಲ್ಲಿದ್ದಂತಹ ಕೋಳಿ ಮಾರಾಟದ ಅಂಗಡಿಯೊಂದು ಬರೋಬ್ಬರಿ ರೂ. 1,66,500 ನ ಮಾಸಿಕ ಬಾಡಿಗೆಗೆ ಏಲಂ ಮೂಲಕ ಹರಾಜಾಗಿದೆ. ಹಿಂದೆ ಪಂಚಾಯಿತಿಗೆ ಅಂಗಡಿಯಿಂದ 3,500 ರೂ. ಬಾಡಿಗೆ ಮಾತ್ರ ದೊರೆಯುತಿತ್ತು. ದೇರಳಕಟ್ಟೆ ಜಂಕ್ಷನ್ನಿನಲ್ಲಿ ಇರುವ ಬೆಳ್ಮ ಪಂಚಾಯಿತಿಗೆ ಸೇರಿದ 31 ಅಂಗಡಿಗಳ ಏಲಂ ಪ್ರಕ್ರಿಯೆ ಗುರುವಾರ ರತ್ನ ಸಭಾಂಗಣದಲ್ಲಿ ನಡೆಯಿತು. 31 ಅಂಗಡಿಗಳಲ್ಲಿ 21 ಅಂಗಡಿಗಳು ಏಲಂ ನಲ್ಲಿ ಹರಾಜಾಯಿತು. ಇದರಲ್ಲಿ ಸಾಮಾನ್ಯ ವರ್ಗದವರಿಗೆ 24 ಅಂಗಡಿಗಳು ಹಾಗೂ ಶೇ.25ರ ಮೀಸಲಾತಿಯಂತೆ ಪರಿಶಿಷ್ಟ ಪಂಗಡದವರಿಗೆ 2 ಹಾಗೂ ಪರಿಶಿಷ್ಟ ಜಾತಿಯವರಿಗೆ ಇದ್ದಂತಹ 5 ಅಂಗಡಿಗಳಲ್ಲಿ ಅಭ್ಯರ್ಥಿಗಳಿಲ್ಲದೆ ಒಂದು ಅಂಗಡಿ ಮಾತ್ರ ಹರಾಜಾಗಿದೆ. ಉಳಿದ 4 ಅಂಗಡಿಗಳು ಬಾಕಿ ಉಳಿದಿದ್ದು, ಅವುಗಳ ಮರು ಹರಾಜು ನಡೆಯಬೇಕಿದೆ. `ದುಬಾರಿ ಬೆಲೆಗೆ ಏಲಂ’ : ಅಂಗಡಿ ಸಂಖ್ಯೆ 10, ದೇರಳಕಟ್ಟೆ ಮಸೀದಿ ಎದುರುಗಡೆಯಿರುವ ಕೋಳಿ ಅಂಗಡಿಯ ಮಾಸಿಕ ಬಾಡಿಗೆ ಸಾವಿರದಿಂದ ಲಕ್ಷಕ್ಕೆ ತಲುಪಿತು. ಕಳೆದ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ : ಉಳ್ಳಾಲದಲ್ಲಿ ಸಮುದ್ರದ ಬಿರುಸು ಮುಂದುವರೆದಿದ್ದು, ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದ್ದು ಸ್ಥಳೀಯವಾಗಿ ತಾತ್ಕಾಲಿಕ ಕಾಮಗಾರಿ ನಡೆಯುತ್ತಿದ್ದು, ಇಂದಿನಿಂದ ಎರಡು ಗಂಜಿ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ. ಉಳ್ಳಾಲದ ಮೊಗವೀರಪಟ್ಣ, ಕೈಕೋ, ಕಿಲಿರಿಯಾ ನಗರ, ಸುಭಾಷ್‍ನಗರ, ಸೋಮೇಶ್ವರ ಉಚ್ಚಿಲದಲ್ಲಿ ಗುರುವಾರವೂ ಬಿರುಸುಗೊಂಡಿದ್ದು, ಸಮುದ್ರ ತೀರದ ಮನೆಗಳ ಕುಟುಂಬದ ಸದಸ್ಯರು ತಮ್ಮ ಸಂಬಂಧಿಕರ ಮನೆ ಸೇರಿದಂತೆ ನೆರೆಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಉಳ್ಳಾಲ ಮೊಗವೀರಪಟ್ಣ ಮತ್ತು ಕೈಕೋ, ಕಿಲಿರಿಯಾನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಕಡಲ್ಕೊರೆತ ಪೀಡಿತ ಮನೆಯ ಕುಟುಂಬಕ್ಕೆ ಎರಡು ಗಂಜಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಶುಕ್ರವಾರದಿಂದ ಕಾರ್ಯ ನಿರ್ವಹಿಸಲಿದೆ. ಮೊಗವೀರಪಟ್ಣ ಶಾಲೆಯಲ್ಲಿ ಗಂಜಿ ಕೇಂದ್ರಕ್ಕೆ ಸ್ಥಳ ಗುರುತಿಸಿದ್ದು, ಇನ್ನೊಂದು ಗಂಜಿ ಕೇಂದ್ರ ಒಂಭತ್ತುಕೆರೆ ಸರಕಾರಿ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ತಾತ್ಕಾಲಿಕ ತಡೆಗೋಡೆ : ಕಡಲ್ಕೊರೆತ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕ ಕ್ರಮವಾಗಿ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು, ಕಲ್ಲುಗಳನ್ನು ಹಾಕಲಾಗುತ್ತಿದೆ. ಸೋಮೇಶ್ವರ ಉಚ್ಚಿಲ, ಕೈಕೋ, ಕಿಲಿರಿಯಾನಗರದಲ್ಲಿ ಸಮುದ್ರ ತೀರದಲ್ಲಿ ಕಲ್ಲು ಹಾಕುವ ಕಾರ್ಯ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮಾಡೂರು : ಸರಕಾರಿ ಬಾವಿ ಕುಸಿತಗೊಂಡಿರುವ ಘಟನೆ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾಡೂರು ಕೊರಗಜ್ಜ ಕಟ್ಟೆ ಸಮೀಪ ಗುರುವಾರ ಸಂಭವಿಸಿದೆ. ಹಲವು ಮನೆಗಳಿಗೆ ನೀರು ಪೂರೈಸುತ್ತಿದ್ದ ಸುಮಾರು 10 ವರ್ಷಗಳ ಹಿಂದಿನ ಬಾವಿಯಲ್ಲಿ ಕುಸಿತ ಉಂಟಾಗಿದೆ. ಬಾವಿಯೊಳಗಡೆ ರಿಂಗ್‍ನ ಮೇಲೆ ಹಾಕಲಾಗಿದ್ದ ಕೆಂಪು ಕಲ್ಲು ಬಿರುಕುಬಿಟ್ಟಿದ್ದು, ಮಳೆಗೆ ಅದು ಇನ್ನಷ್ಟು ಬಿರುಕು ಬಿಟ್ಟಿ ಇಡೀ ಬಾವಿಯ ದಂಡೆಯೇ ಕುಸಿದಿದೆ. ಹಿಂದೆ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಲಾಗಿದ್ದ ಬಾವಿ, ಇದಾಗಿದ್ದು ಶಿಥಿಲಾವಸ್ಥೆಯಲ್ಲಿ ಇರುವ ಕುರಿತು ಸ್ಥಳೀಯ ಸದಸ್ಯರಿಗೆ ಸಾರ್ವಜನಿಕರು ಮೌಖಿಕವಾಗಿ ದೂರು ನೀಡಿದ್ದರು. ಬಾವಿ ಕುಸಿತದಿಂದ ಸುಮಾರು 2 ಲಕ್ಷದ ವರೆಗೆ ನಷ್ಟ ಉಂಟಾಗಿದೆ. ಹಿಂದೆ ಸ್ಥಳೀಯರು ನೀಡಿದ ದೂರಿನಂತೆ ಬೇಸಿಗೆ ಕಾಲದಲ್ಲಿ ಬಾವಿ ದಂಡೆಯನ್ನು ದುರಸ್ತಿಗೊಳಿಸಲಾಗಿತ್ತು. ಕುಡಿಯುವ ನೀರಿಗಾಗಿ ಬರುವ ಅನುದಾನದ ಮೂಲಕ ಅದನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗುತ್ತೇವೆ. ಸದ್ಯ ಬಾವಿಯೊಳಕ್ಕೆ ನೀರು ನುಗ್ಗದಂತೆ, ಹಾಗೂ ಮುಂಜಾಗ್ರತಾ ಕ್ರಮವಾಗಿ ತಡೆ ಬೇಲಿ ನಿರ್ಮಿಸಲಾಗುವುದು. ಉದಯ ಕುಮಾರ್…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಕೃಷ್ಣ ಮಠದಲ್ಲಿ ಪೇಜಾವರ ಮಠಾಧೀಶರಾದ ವಿಶ್ವೇಶ ತೀರ್ಥ ಶ್ರೀಗಳು ಇಫ್ತಾರ್ ಕೂಟ ನಡೆಸಿ ನವಾಜ್ ಮಾಡಲು ಅವಕಾಶ ನೀಡಿ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಅವರ ಧೋರಣೆಯನ್ನು ಖಂಡಿಸಿ ರಾಜಾದ್ಯಂತ ಜುಲೈ 2ರಂದು ಪ್ರತಿಭಟನೆಯನ್ನು ನಡೆಸಲಾಗುತ್ತಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುತಾಲಿಕ್ ಸ್ವಾಮೀಜಿ ಹಿಂದೂಗಳ ಕ್ಷೇತ್ರದಲ್ಲಿ ನಮಾಜ್ ಮಾಡಲು ಅನುಮತಿ ನೀಡಿದ್ದು ಸಮಂಜಸವಲ್ಲ. ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟಲು ಮಾತ್ರ ಬಿಡುತ್ತೇವೆ ಯಾವುದೇ ಕಾರಣಕ್ಕೂ ಬಾಬ್ರಿ ಮಸೀದಿ ಮರು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದ ಸ್ವಾಮೀಜಿಗೆ ಅಂದು ಇಲ್ಲದ ಸೌಹಾರ್ದತೆ ಸಾಮಾರಸ್ಯ ಇದೀಗ ಏಕೆ ನೆನಪಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಕಡಲ್ಕೊರೆತದಿಂದ ಅಪಾಯದಲ್ಲಿರುವ ಉಳ್ಳಾಲ ನಿವಾಸಿಗಳಿಗೆ ತಾತ್ಕಾಲಿಕವಾಗಿ ಗಂಜಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲ ಭಾಗದಲ್ಲಿನ ಅಪಾಯದಲ್ಲಿರುವ ಸುಮಾರು 40 ಮನೆಗಳನ್ನು ಗುರುತಿಸಲಾಗಿದೆ. ಉಳ್ಳಾಲದಲ್ಲಿ ಗಂಜಿ ಕೇಂದ್ರ ಸ್ಥಾಪನೆಗೆ ಸಹಾಯಕ ಕಮಿಷನರ್ ಸ್ಥಳಿಯಾಡಳಿತ ಸಂಸ್ಥೆಗೆ ಆದೇಶ ನೀಡಿದ್ದು, ಸ್ಥಳೀಯ ಅಂಗನವಾಡಿ ಕೇಂದ್ರ, ಖಾಲಿ ಇರುವ ಫ್ಲಾಟ್‍ಗಳು, ಮತ್ತು ಹಾಸ್ಟೆಲ್‍ಗಳಿಗೆ ಅಪಾಯದಲ್ಲಿರುವ ಕುಟುಂಬಗಳನ್ನು ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಕಾರ್ಯ ನಡೆಯುತ್ತಿದೆ ಎಂದು ಪೌರಾಯುಕ್ತೆ ವಾಣಿ ವಿ. ಆಳ್ವ ತಿಳಿಸಿದ್ದಾರೆ. ಸಮುದ್ರದ ಅಲೆಗಳು ಮನೆಗಳಿಗಪ್ಪಳಿಸುತ್ತಿದ್ದು, ಮೊಗವೀರಪಟ್ಣ, ಕಿಲಿರಿಯಾ ನಗರ ಮುಕ್ಕಚ್ಚೇರಿ, ಸುಭಾಷ್‍ನಗರ, ಕೈಕೋದಲ್ಲಿ ಮನೆಗಳ ಒಳಗೆ ಸಮುದ್ರದ ನೀರು ತುಂಬಿ ವಾಸಿಸಲು ಕಷ್ಟಕರವಾಗಿದೆ. ಈ ಪ್ರದೇಶದಲ್ಲಿ ಆಪಾಯದಲ್ಲಿರುವ ಮನೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಗುರುವಾರ ಸಹಾಯಕ ಕಮಿಷನರ್ ರೇಣುಕಾ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭೇಟಿ ಸಂದರ್ಭದಲ್ಲಿ ಕೈಕೋ ಬಳಿ ಸಹಾಯಕ ಕಮಿಷನರ್ ಅವರನ್ನು ಸ್ಥಳೀಯ ನಿವಾಸಿಗಳು ತರಾಟೆಗೆ ತೆಗೆದುಕೊಂಡರು. ಶಾಶ್ವತ ಕಾಮಗಾರಿಯಿಂದ ಕೈಕೋ ಕಿಲಿರಿಯಾ ನಗರದಲ್ಲಿ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಅಪರಿಚಿತ ಪಾದಚಾರಿಯೋರ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ. ಜೂ.23ರಂದು ರಾ.ಹೆ.66 ರ ತಲಪಾಡಿ ದಿವ್ಯಾಶ್ರೀ ಬಾರಿನ ಎದುರುಗಡೆ ಅಪಘಾತ ಸಂಭವಿಸಿತ್ತು. ಮಂಗಳೂರಿನಿಂದ ಕೇರಳ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಬಂದ ಚಾಲಕ ರಸ್ತೆ ಬದಿಯಲ್ಲಿ ನಿಂತಿದ್ದ ಸುಮಾರು 50ರ ಹರೆಯದ ಅಪರಿಚಿತ ವ್ಯಕ್ತಿಗೆ ಕಾರು ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಅವರನ್ನು ನವಯುಗ ಸಂಸ್ಥೆಗೆ ಸೇರಿದ ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಸಂಬಂಧ ಭಾಸ್ಕರ್ ಶೆಟ್ಟಿ ಎಂಬವರು ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಾರೀಸುದಾರರು ಇದ್ದಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸಂಪರ್ಕಿಸಲು ಕೋರಲಾಗಿದೆ.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ದರ್ಗಾ ಸಂದರ್ಶನೆಕ್ಕೆಂದು ಉಳ್ಳಾಲಕ್ಕೆ ಬಂದಿದ್ದ ತುಮಕೂರು ಶಿರಾ ಮೂಲದ ಹತ್ತು ಮಂದಿ ಯುವಕರಲ್ಲಿ ಐದು ಮಂದಿ ಮೊಗವೀರಪಟ್ಣ ಬೀಚ್ ಬಳಿ ಸಮುದ್ರದ ಅಲೆಗಳಿಗೆ ಸಿಲುಕಿದ್ದು, ಇಬ್ಬರು ಸಮುದ್ರ ಪಾಲಾದರೆ, ಮೂವರು ಅಪಾಯದಿಂದ ಪಾರಾಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ರಬ್‍ನಗರ ಮೊಹಲ್ಲಾದ ಮಗೀರ್ ರಸ್ತೆ ನಿವಾಸಿಗಳಾದ ಜಲೀಲ್ ಎಂಬವರ ಪುತ್ರ ಶಾರುಖ್ ಖಾನ್ (19) ಮತ್ತು ಸಿದ್ದೀಖ್ ಎಂಬವರ ಪುತ್ರ ಚೋಟು ಯಾನೆ ಹಯಾಝ್ (20) ಸಮುದ್ರಪಾಲಾದವರು. ಸಾದಿಕ್ ಹಬೀಬ್, ವಸೀಂ ಉಳ್ಳಾಲದ ಸರೋಜ್ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ. ತುಮಕೂರಿನಿಂದ ಮಂಗಳವಾರ ಹೊರಟಿದ್ದ ತಂಡ ಶಿವಮೊಗ್ಗದ ಬಳಿ ದರ್ಗಾ ಭೇಟಿ ನೀಡಿ ಬುಧವಾರ ಬೆಳಗ್ಗೆ ಉಳ್ಳಾಲ ದರ್ಗಾಕ್ಕೆ ಆಗಮಿಸಿದ್ದರು. ಬೆಳಗ್ಗೆ ದರ್ಗಾ ಸಂದರ್ಶನ ನಡೆಸಿ ಸುಮಾರು 10 ಗಂಟೆಗೆ ಉಳ್ಳಾಲ ಮೊಗವೀರಪಟ್ಣ ಬಳಿ ಇರುವ ಬೀಚ್‍ಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಉಳ್ಳಾಲ ಬೀಚ್‍ನ ಶಾಶ್ವತ ಕಾಮಗಾರಿಯ ಕಲ್ಲಿನ ಮೇಲೆ ನಿಂತು ಸೆಲ್ಪಿ ಫೋಟೋ ತೆಗೆದು ಬಳಿಕ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಪತಂಜಲಿಯ ಅಲೊ ವೀರಾ ಕಾಂತಿ ಸಾಬೂನಿನಲ್ಲಿ ರಬ್ಬರ್ ತುಂಡೊಂದು ಪತ್ತೆಯಾಗಿದೆ. ಸಮಾಜಸೇವಕ ಚಂದ್ರಹಾಸ್ ಮಾಡೂರು ಅವರು ಉಡುಪಿಯಿಂದ ಏಜೆಂಟರೋರ್ವರ ಮುಖೇನ ತರಿಸಿದ ಸಾಬೂನಿನಲ್ಲಿ ರಬ್ಬರ್ ತುಂಡು ಪತ್ತೆಯಾಗಿದೆ. ಈ ಬಗ್ಗೆ ಪತಂಜಲಿ ಕಂಪೆನಿಗೆ ಸಂಬಂಧಿಸಿದ ಮಂಗಳೂರಿನ ಅಧಿಕೃತರುಗಳಲ್ಲಿ ವಿಚಾರಿಸಿದಾಗ ಉಡಾಫೆಯಿಂದ ವರ್ತಿಸಿದ್ದಾರೆ. ಇದು ಕಂಪೆನಿಯಿಂದ ಆಗಿರುವ ತಪ್ಪು. ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು ಅನ್ನುವ ರೀತಿಯಲ್ಲಿ ಪ್ರಚಾರ ಮಾಡಿಕೊಂಡು, ಜನರನ್ನು ಮೋಸದ ದಾರಿಗೆ ಎಳೆದು ಕಂಪೆನಿಯನ್ನು ಬೆಳೆಸುತ್ತಿದ್ದಾರೆ. ಇದರ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲು ಹತ್ತುವುದಾಗಿ ಚಂದ್ರಹಾಸ್ ಮಾಡೂರು ತಿಳಿಸಿದ್ದಾರೆ.

