ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕುತ್ತಾರು : ಸೇವೆ ಎನ್ನುವುದು ಅತ್ಯಂತ ಶ್ರೇಷ್ಠವಾಗಿದ್ದು, ಮೌಲ್ಯಾಧಾರಿತ ಮತ್ತು ಅಂತರ್ಗತವಾಗಿ ಬರುವಂತಹುದು ಇದು ನಿರಂತರವಾಗುವುದರೊಂದಿಗೆ ಬದ್ಧತೆಯೂ ಅಗತ್ಯ ಈ ನಿಟ್ಟಿನಲ್ಲಿ ಬಾಲಸಂರಕ್ಷಣಾ ಕೇಂದ್ರ ಕಳೆದ 37 ವರ್ಷಗಳಲ್ಲಿ ನಡೆಸುತ್ತಿರುವ ಸೇವೆ ನಿಜವಾದ ಸೇವೆಯಾಗಿದ್ದು, ಎಲ್ಲಾ ಸಂಸ್ಥೆಗಳಿಗೆ ಮಾದರಿ ಎಂದು ದ.ಕ. ಜಿಲ್ಲಾ ಪಂಚಾಯತ್ ಕಾಯೃನಿರ್ವಹಣಾಧಿಕಾರಿ ಡಾ. ಎಂ.ಆರ್ ರವಿ ಅಭಿಪ್ರಾಯಪಟ್ಟರು.
ಅವರು ಮಂಗಳೂರಿನ ಮಂಗಳಾ ಸೇವಾ ಟ್ರಸ್ಟ್ ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಸರಸ್ವತಿ ಪೂಜೆ ಕಾರ್ಯಕ್ರಮದ ಬಳಿಕ `ಸೇವೆ ಸುಂದರ ಬದುಕಿನ ಅವಿಭಾಜ್ಯ ಅಂಗ’ ಈ ವಿಚಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದರೂ ಕಲಿಯಲು ಅಸಾಧ್ಯವಾದುದದನ್ನು ಸಮಾಜದಿಂದ ಕಲಿಯಲು ಸಾಧ್ಯ. ನಾವು ಸಮಾಜದೊಂದಿಗೆ ಸೇರಿಕೊಂಡಾಗ ನಮ್ಮ ಕರ್ತವ್ಯದೊಂದಿಗೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಕಾರ್ಯ ಆಗಬೇಕು. ಇಂತಹ ಕಾರ್ಯ ಶುದ್ಧವಾದ ಮನಸ್ಸು ಇದ್ದಾಗ ಮಾತ್ರ ಸಾಧ್ಯವಿದ್ದು, ಅಂತರ್ಗತ ಪ್ರೇರಣೆಯಾಗಬೇಕು ಹೊರತು ಕೇವಲ ಪ್ರಚಾರಕ್ಕಾಗಿ, ಉದ್ಯೋಗದ ದೃಷ್ಠಿಯಲ್ಲಿ ನಡೆದರೆ ಅದು ಶಾಶ್ವತವಾಗಿರುವುದಿಲ್ಲ ಎಂದ ಆವರು ಸೇವೆಯ ಮೂಲಕ ಮಕ್ಕಳ ಬದುಕು ಕಟ್ಟಿಕೊಡುವ ಕಾರ್ಯ ಬಾಲಸಂರಕ್ಷಣಾ ಕೇಂದ್ರದಲ್ಲಿ ನಡೆಯುತ್ತಿದ್ದು ಭಾರತೀಯ ಸಂಸ್ಕ~ತಿಯ ಆಧಾರದಲ್ಲಿ ಸಂಸ್ಕಾರ ನೀಡುವ ಕಾರ್ಯ ಶ್ಲಾಘನೀಯ ಎಂದರು.
ಮಂಗಳಾ ಸೇವಾಟ್ರಸ್ಟ್ ಹಾಗೂ ಬಾಲಸಂರಕ್ಷಣಾ ಕೇಂದ್ರದ ಸಂಚಾಲಕ ಡಾ| ಅನಂತಕೃಷ್ಣ ಭಟ್ ಮಾತನಾಡಿ ಬಾಲಸಂರಕ್ಷಣಾ ಕೇಂದ್ರ ಕಳೆದ 37 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಸ್ಥಳೀಯ ಹಾಗೂ ದೇಶ ವಿದೇಶಗಳ ದಾನಿಗಳ ನೆರವಿನಿಂದ ಈ ಹಂತಕ್ಕೆ ಏರಲು ಸಾಧ್ಯವಾಗಿದೆ. ಕಳೆದ ಮೂರುವರೆ ದಶಕದ ಪ್ರಾಮಾಣಿಕ ದುಡಿಮೆ ಮತ್ತು ನಿರಂತರ ಅನ್ನಸಂತರ್ಪಣೆ ನಡೆಯುತ್ತಿದ್ದು ತಿಂಗಳ ಖರ್ಚು ಮೂರೂವರೆ ಲಕ್ಷವಿದ್ದು ಇನ್ನಷ್ಟು ದಾನಿಗಳ ಸಹಕಾರ ಅಗತ್ಯ ಎಂದರು.
ಕೆ.ಎಸ್.ಹೆಗ್ಡೆ ಮಾನಸಿಕ ವಿಭಾಗದ ಪ್ರಾಧ್ಯಾಪಕ ಹಾಗೂ ಮನೋರೋಗತಜ್ಞ ಡಾ| ಸತೀಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಮಂಗಳಾ ಸೇವಾ ಟ್ರಸ್ಟ್‍ನ ಟ್ರಸ್ಟಿ ಹಾಗೂ ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪೆÇ್ರ| ಎಂ ಬಿ. ಪುರಾಣಿಕ್, ಮಂಗಳಾ ಸೇವಾ ಟ್ರಸ್ಟ್‍ನ ಟ್ರಸ್ಟಿಗಳಾದ ಮನೋಹರ ತುಳಜಾರಾಂ, ಪ್ರೇಮಲತಾ ಆಚಾರ್, ಉದ್ಯಮಿ ಹಾಗೂ ಬಾಲ ಸಂರಕ್ಷಣಾ ಕೇಂದ್ರದ ಕೋಶಾ„ಕಾರಿ ಬಿಪಿನ್ ರಾಜ್, ಟ್ರಸ್ಟಿಗಳಾದ ಗೋಪಾಲ ಕುತ್ತಾರ್, ಗಾಯತ್ರಿ ಎ. ಭಟ್, ಜರ್ಮನ್ ಮೂಲದ ಸೇವಾ ಕಾರ್ಯಕರ್ತರಾದ ನೈರಾ, ಸಸ್ಕಿಯಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂತನ ಟ್ರಸ್ಟಿ ಬೈಕಾಡಿ ಜನಾರ್ಧನ ಆಚಾರ್ ಅವರನ್ನು ಸ್ವಾಗತಿಸಲಾಯಿತು. ಕಾರ್ಯಕ್ರಮದ ಪೂರ್ವಭಾವಿಯಾಗಿ ಬಾಲಸಂರಕ್ಷಣಾ ಕೇಂದ್ರದ ನೂತನ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕವಾಗಿ ಪ್ರಾರಂಬೋತ್ಸವದ ಹಿನ್ನಲೆಯಲ್ಲಿ ಗಣಹೋಮ, ಸರಸ್ವತಿ ಪೂಜೆ ನೆರವೇರಿಸಲಾಯಿತು.
ಬಾಲ ಸಂರಕ್ಷಣಾ ಕೇಂದ್ರ ಅಧ್ಯಕ್ಷ ಶ್ರೀಧರ್ ಭಟ್ ಸ್ವಾಗತಿಸಿದರು. ವಿದ್ಯಾರ್ಥಿನಿ ಅರ್ಪಿತಾ ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟಿ ಕೆರೆಮನೆ ನರಸಿಂಹ ಹೆಗ್ಡೆ ವಂದಿಸಿದರು.
ಸೀರೆಯಲ್ಲಿ ಗಮನ ಸೆಳೆದ ನೈರಾ, ಸಸ್ಕಿಯಾ :
ಜರ್ಮನ್ ಮೂಲದ ಸೇವಾ ಕಾರ್ಯಕರ್ತರಾದ ನೈರಾ, ಸಸ್ಕಿಯಾ ಕಳೆದ ಎರಡು ತಿಂಗಳಿನಿಂದ ಬಾಲ ಸಂರಕ್ಷಣಾ ಕೇಂದ್ರದಲ್ಲಿ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಮಕ್ಕಳಿಗೆ ಅಂಗ್ಲ ಭಾಷೆಯೊಂದಿಗೆ ಹಾಡು, ಕ್ರಾಫ್ಟ್ ವರ್ಕ್ ಕಲಿಸಿಕೊಡುತ್ತಿದ್ದು, ಭಾರತದ ಸಂಸ್ಕøತಿಯನ್ನು ಕಲಿಯುತ್ತಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಕನ್ನಡ ಭಾಷೆಯನ್ನು ಆಧ್ಯಯನ ನಡೆಸುತ್ತಿದ್ದು, ಕ್ರಾಫ್ಟ್ ವರ್ಕ್‍ನಲ್ಲಿ ಕನ್ನಡದಲ್ಲಿ ಜೈಶ್ರೀರಾಂ ಬರೆದು ಗಮನ ಸೆಳೆದಿದ್ದಾರೆ. ಜರ್ಮನಿಯಲ್ಲಿ ಪ್ರತಿಯೊಬ್ಬ ಯುವ ಜನಾಂಗ ಸ`ನ್ಯ ಆಥವಾ ಸೇವಾ ಚಟುವಟಿಕೆಯಲ್ಲಿ ಖಡ್ಡಾಯವಾಗಿ ಭಾಗವಹಿಸುವುದು ಆನಿವಾಯೃವಾಗಿದ್ದು ನೈರಾ ಮತ್ತು ಸಸ್ಕಿಯಾ ಸೇವಾ ಚಟುವಟಿಕೆಯನ್ನು ಆಯ್ದುಕೊಂಡು ಮಂಗಳೂರಿನ ಬಾಲಸರಕ್ಷಣಾ ಕೇಂದ್ರವನ್ನು ಆಯ್ಕೆ ಮಾಡಿ 2018ರ ಪೆಬ್ರವರಿವರೆಗೆ ಕಾರ್ಯ ನಿವೃಹಿಸಲಿದ್ದಾರೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ಸೀರೆ ಉಟ್ಟು ಗಮನ ಸೆಳೆದರೆ ಹಣೆಗೆ ಕುಂಕುಮ ಇಟ್ಟು ಭಾರತೀಯ ಸಂಸ್ಕøತಿಯ ಬಗ್ಗೆ ತಮ್ಮ ಒಲವು ಹರಿಸಿದರು.




