ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಬಿ.ಸಿ.ರೋಡ್: ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಶವ ಯಾತ್ರೆ ಮೆಲ್ಕಾರ್ ತಲುಪುತ್ತಿದ್ದಂತೆ ಕೈಕಂಬದಲ್ಲಿ ಕಲ್ಲುತೂರಾಟ ನಡೆದಿದ್ದು, ಯುವಕನೊರ್ವನ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಶವ ಯಾತ್ರೆ ಮೆಲ್ಕಾರ್ ತಲುಪುತ್ತಿದ್ದಂತೆ ಕೈಕಂಬ ಸಮೀಪ ಹಲವು ವಾಹನಗಳಿಗೆ ಕಲ್ಲುತೂರಾಟ ನಡೆದಿದ್ದು, ಘಟನೆಯಿಂದಾಗಿ ಯುವಕನೊರ್ವ ಗಂಭೀರ ಗಾಯಗೊಂಡು ಬಿ.ಸಿ.ರೋಡ್, ಮೆಲ್ಕಾರ್ ಪ್ರದೇಶದಾದ್ಯಂತ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿದೆ. ಗಲಭೆಗೆ ಸಂಬಂಧಿಸಿ ಹಲವರ ಮೇಲೆ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ. ಶರತ್ ಪಾರ್ಥೀವ ಶರೀರದ ಯಾತ್ರೆ ಬಿ.ಸಿ.ರೋಡ್ ತಲುಪುತ್ತಿದ್ದಂತೆಯೇ ದುಷ್ಕರ್ಮಿಗಳ ತಂಡವೊಂದು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿತ್ತು. ಇದರಿಂದ ಇತ್ತಂಡಗಳ ನಡುವೆ ಕಲ್ಲು ತೂರಾಟ ನಡೆದು, ಹಲವು ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳ ಗಾಜುಗಳು ಪುಡಿಯಾಗಿವೆ. ಘಟನೆಯಿಂದ ಸ್ಥಳದಲ್ಲಿ ಉದ್ರಿಕ್ತ ಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು. ಕಲ್ಲು ತೂರಾಟ ನಡೆದ ಜಾಗದಿಂದ 5 ಮಂದಿಯನ್ನು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪದ…
Author: UllalaVani
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಅಂತಿಮಯಾತ್ರೆ ಇದೀಗ ಎ.ಜೆ.ಆಸ್ಪತ್ರೆಯಿಂದ ಹೊರಟಿದ್ದು, ಗಣ್ಯರ ಸಮೇತ ಸಾವಿರಾರು ಕಾರ್ಯಕರ್ತರ ಜಮಾವಣೆಯೊಂದಿಗೆ ಅಂತಿಮ ಯಾತ್ರೆ ಪೊಲೀಸ್ ಬಿಗಿಬಂದೋಬಸ್ತಿನೊಂದಿಗೆ ಆರಂಭವಾಗಿದೆ. ನಂತೂರು, ಪಡೀಲ್, ಅಡ್ಯಾರ್, ಫರಂಗಿಪೇಟೆ ಮಾರ್ಗವಾಗಿ ತೆರಳಲಿರುವ ಅಂತಿಮ ಯಾತ್ರೆಯಲ್ಲಿ ಬಿಜೆಪಿಯ ರಾಜ್ಯ ಹಾಗೂ ಜಿಲ್ಲಾ ನಾಯಕರು ಪಾಲ್ಗೊಂಡಿದ್ದಾರೆ. ನಿನ್ನೆ ಸಾವು: ಎರಡು ದಿನಗಳ ಹಿಂದೆ ಅಪರಿಚಿತರ ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದ ಶರತ್ (28) ಮೃತಪಟ್ಟಿದ್ದಾರೆ .ಅವರು ಮೃತಪಟ್ಟಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಮೊನ್ನೆ ಸಂಜೆಯಿಂದ ಹರಿಯಲು ಆರಂಭಿಸಿತ್ತು. ಶರತ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಅಸ್ಪತ್ರೆಯಾಗಲಿ ಅಥವಾ ಶರತ್ ಅವರ ಕುಟುಂಬದವರಾಗಲಿ ಈ ಸುದ್ದಿಯನ್ನು ಖಚಿತ ಪಡಿಸಿರಲಿಲ್ಲ. ಅದರೆ ನಿನ್ನೆ ರಾತ್ರಿ 8.30ರ ಸುಮಾರಿಗೆ ಅವರು ಮೃತಪಟ್ಟಿರುವುದನ್ನು ಆಸ್ಪತ್ರೆ ಮೂಲಗಳು ಖಚಿತ ಪಡಿಸಿವೆ. ಹಲ್ಲೆಯಾದ ಸ್ಥಳದಿಂದ ತುಂಬೆ ಆಸ್ಫತ್ರೆಗೆ ಶರತ್ ಅವರನ್ನು ಕರೆದುಕೊಂಡು ಹೋಗುವಾಗಲೇ ಅವರ ಜೀವ ಹಾರಿ ಹೋಗಿತ್ತು ಎಂಬ ಆರೋಪವು ಈಗ ಕೇಳಿ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಬಿ.ಸಿ.ರೋಡು: ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಕೊಲೆಯತ್ನಕ್ಕೆ ಸಂಬಂಧಿಸಿದಂತೆ ಹಿಂದೂ ಹಿತರಕ್ಷಣಾ ಸಮಿತಿ ಬಿ.ಸಿರೋಡಿನಲ್ಲಿ ಕರೆ ನೀಡಿದ್ದ ಪ್ರತಿಭಟನೆಯು ನಿಷೇದಾಜ್ಞೆಯ ನಡುವೆಯೂ ಸಾವಿರಾರು ಕಾರ್ಯಕರ್ತರ ಒಗ್ಗೂಡುವಿಕೆಯಿಂದ ಶುಕ್ರವಾರ ನಡೆಯಿತು. ಈ ಸಂದರ್ಭ ಸಂಸದರಾದ ಶೋಭಾ ಕರಂದ್ಲಾಜೆ, ನಳೀನ್ ಕುಮಾರ್ ಕಟೀಲ್, ವಿದಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಶಾಸಕ ಸುನೀಲ್ ಕುಮಾರ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೆಕ್ಷನ್ 144 ಜಾರಿಯಲ್ಲಿದ್ದರು ಪ್ರತಿಭಟನೆಯನ್ನು ಕೈಗೊಂಡ ಹಿನ್ನಲೆಯಲ್ಲಿ 500 ಮಂದಿ ವಿರುದ್ಧ ಸೆಕ್ಷನ್ 143 ಹಾಗೂ 149 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರತಿಭಟನೆಗೂ ಮುನ್ನ ಸಂಸದೆ ಶೋಭಾ ಕರಂದ್ಲಾಜೆ, ಶರತ್ ಮೇಲೆ ದಾಳಿಯಾದ ಅವರ ಅಂಗಡಿಗೆ ಭೇಟಿ ನೀಡಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಸೇರಿದಂತೆ ಕೊಲೆಗಳು ನಡೆಯುತ್ತಿದ್ದು ಈ ಬಗ್ಗೆ ಸರಿಯಾಗಿ ತನಿಖೆ ಮಾಡಲು ರಾಜ್ಯ ಸರಕಾರ ಬಿಡುತ್ತಿಲ್ಲ ಎಂಬ ಆರೋಪವನ್ನು ಮಾಡಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಸ್ಥಾಪನೆಗಾಗಿ 50ಕೋಟಿ ರೂ ಬಿಡುಗಡೆಗೊಳಿಸಿದ್ದು ಜಪಾನಿನ ವಿವಿಗಳಲ್ಲಿ ಇರುವ ಮಾದರಿಯಲ್ಲಿ ಪ್ರಥಮವಾಗಿ ಕರ್ನಾಟಕದಲ್ಲಿ ಸುಧಾರಿತ ವಿಜ್ಞಾನ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ತಿಳಿಸಿದ್ದಾರೆ. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಹೊಸ ಸನೆಟ್ ಸಭಂಗಣದಲ್ಲಿ ಗುರುವಾರ ನಡೆದ ಶೈಕ್ಷಣಿಕ ಮಂಡಳಿಯ 2017-18ನೇ ಸಾಲಿನ ಪ್ರಥಮ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದರು. ಸುಧಾರಿತ ವಿಜ್ಞಾನ ಸಂಶೋಧನೆಗೆ ಸುಮಾರು 120 ಕೋಟಿಯಷ್ಟು ಖರ್ಚು ಅಂದಾಜಿಸಲಾಗಿದ್ದು ಈ ಬಗ್ಗೆ 120 ಕೋಟಿ ಅನುದಾನವನ್ನು ಬಿಡಗಡೆಗೊಳಿಸಬೇಕೆಂದು ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂಧಿಸಿದ ಸರಕಾರ 100 ಕೋಟಿ ಹಣವನ್ನು ಬಿಡುಗೆಗೊಳಿಸುವ ವಿಶ್ವಾಸ ನೀಡಿದೆ. ಈ ಪೈಕಿ 50 ಕೋಟಿಯನ್ನು ಬಿಡಗಡೆಮಾಡಿ ನಂತರ ಹಂತ ಹಂತವಾಗಿ 25ಕೋಟಿ ರೂ.ಗಳಂತೆ ಅನುದಾನವನ್ನು ಸರಕಾರ ಬಿಡುಗಡೆ ಮಾಡಲಿದೆ. ಸಂಶೋಧನ ಕೇಂದ್ರ ಸ್ಥಾಪನೆಗೆ ನೆಲ್ಯಾಡಿಯಲ್ಲಿ 26 ಎಕರೆ ಜಾಗವನ್ನು ನೀಡಿದೆ. ಬೆಳಪುವಿನಲ್ಲಿ 20ಎಕರೆ ಜಾಗದಲ್ಲಿ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಡಿಪು:ಮುಡಿಪು ಸಮೀಪದ ಇನ್‍ಫೋಸಿಸ್ ಬಳಿ ನಿರ್ಮಾಣಗೊಂಡಿರುವ ಚತುಷ್ಪಥ ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವ ಕಾರ್ಯಕ್ರಮವು ಗುರುವಾರ ನಡೆಯಿತು. ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಜಲೀಲ್ ಮೋಂಟುಗೋಳಿ, ನಾಸೀರ್ ನಡುಪದವು, ಇನ್‍ಫೋಸಿಸ್ ಅಧಿಕಾರಿಗಳಾದ ದೀರಜ್, ಹರೀಶ್ ಮುಂತಾದವರು ಉಪಸ್ಥಿತರಿದ್ದರು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ತೊಕ್ಕೊಟ್ಟು: ವೃತ್ತಿಯಲ್ಲಿ ಬಸ್ ಕಂಡೆಕ್ಟರ್ ಆಗಿದ್ದ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಪುರುಷೋತ್ತಮ ಉಳ್ಳಾಲ್(60) ಅಲ್ಪಕಾಲದ ಅಸೌಖ್ಯದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಮಂಗಳೂರು ವಿಶ್ವವಿದ್ಯಾಲಯವನ್ನು ಸಂಪರ್ಕಿಸುವ ಕೊಣಾಜೆಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಮಂಜನಾಡಿ ಬಸ್‍ನಲ್ಲಿ ಕಂಡೆಕ್ಟರ್ ಆಗಿದ್ದ ಪುರುಷೋತ್ತಮ ಉಳ್ಳಾಲ್ ವಿದ್ಯಾರ್ಥಿಗಳ ಜೊತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಇಂದಿಗೂ ಪುರುಷಣ್ಣ ಎಂದರೆ ಎಲ್ಲ ವಿದ್ಯಾರ್ಥಿಗಳಲ್ಲೂ ಆ ರೂಟಿನ ಮೆಚ್ಚಿನ ಕಂಡೆಕ್ಟರ್ ಆಗಿದ್ದರು. ಪದವಿ, ಸ್ನಾತಕೋತ್ತರ ಪದವಿ ಪಡೆದು ಉದ್ಯೋಗಕ್ಕೆ ಸೇರಿದರೂ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಯಂತೆಯೇ ಬೆರೆತುಹೋಗಿದ್ದ ಪುರುಷಣ್ಣನ ಜೊತೆಗೆ ತಮ್ಮ ನೆನಪುಗಳನ್ನು ಕಳೆಯಲು ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದರು. 80-90ರ ದಶಕದಲ್ಲಿ ಬಸ್‍ಗಳಲ್ಲಿ ಪುಂಡಾಟಿಕೆ ವಿಪರೀತ ಇದ್ದ ದಿನಗಳಲ್ಲೂ ಪುರುಷಣ್ಣ ಇದ್ದ ಬಸ್‍ನಲ್ಲಿ ವಿದ್ಯಾರ್ಥಿಗಳು ಗೌರವ ಕೊಡುತ್ತಿದ್ದರು. ಹವ್ಯಾಸಿ ಕಲಾವಿದರಾಗಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ ಬಹಳಷ್ಟು ನಾಟಕಗಳಲ್ಲಿ ಅಭಿನಯಿಸಿ ತುಳು ನಾಟಕ ರಂಗಭೂಮಿಯಲ್ಲಿ ಉತ್ತಮ ಹೆಸರು ಸಂಪಾದಿಸಿದ್ದರು. ಉತ್ತಮ ದೇಹರ್ದಾಢ್ರ್ಯತೆಯನ್ನು ಹೊಂದಿದ್ದ ಉಳ್ಲಾಲ್…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ತೊಕ್ಕೊಟ್ಟು : ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತದ ಚುಕ್ಕಾಣಿ ಹಿಡಿದ ದಿನದಿಂದ ಜಸಸಾಮಾನ್ಯರಿಂದ ಹಿಡಿದು ರೈತರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇನ್ನು ಎರಡು ವರ್ಷದಲ್ಲಿ ನರೇಂದ್ರ ಮೋದಿ ಸರಕಾರದ ಬದಲು ರಾಹುಲ್ ಗಾಂಧಿ ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಅಭಿಪ್ರಾಯಪಟ್ಟರು. ಮಂಗಳೂರು ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್‍ನ ಆಶ್ರಯದಲ್ಲಿ ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಲು ಒತ್ತಾಯಿಸಿ ತೊಕ್ಕೊಟ್ಟು ಎಸ್‍ಬಿಐ ಬ್ಯಾಂಕ್‍ನ ಎದುರು ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಬಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಸಿದ್ಧರಾಮಯ್ಯನವರು ಪ್ರತೀ ಜಿಲ್ಲೆಯಲ್ಲಿರುವ ರೈತರ ಬಗ್ಗೆ ಅಧ್ಯಯನ ನಡೆಸಿ ಇದೀಗ ಸಾಲ ಮನ್ನಾ ಮಾಡುವ ಮೂಲಕ ಬಿಜೆಪಿ ಸರಕಾರಕ್ಕೆ ತಕ್ಕ ಉತ್ತರ ನೀಡಿದ್ದು, ರೈತರ ಪರವಾಗಿ ಮೊಸಳೆ ಕಣ್ಣೀರು ಹಾಕುತ್ತಿದ್ದ ಬಿಜೆಪಿಗರು ಈಗ ತಲೆಮರೆಸಿಕೊಂಡಿದ್ದಾರೆ ಎಂದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ ಕೇಂದ್ರ ಸರಕಾರ ರೈತ ವಿರೋಧ ಸರಕಾರವಾಗಿದ್ದು ಇದರ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೋಟೆಕಾರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‍ನ ಕೆ.ಸಿರೋಡಿನಲ್ಲಿರುವ ತಲಪಾಡಿ ಶಾಖೆಯಿಂದ 30ಕೆ.ಜಿ ಚಿನ್ನಾಭರಣವನ್ನು ಡರೋಡೆಗೈಯಲು ವಿಫಲ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಅದೇ ಬ್ಯಾಂಕಿಗೆ ಸೇರಿದ ನಿರ್ದೇಶಕಿಯ ಪತಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಸೋಮವಾರ ತಡರಾತ್ರಿ ಪಿಲಾರು ಬಳಿಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಪಿಲಾರು ನಿವಾಸಿಗಳಾದ ಬೋಟ್ ರಾಮ ಯಾನೆ ರಾಮಚಂದ್ರ ಪೂಜಾರಿ (50) ಹಾಗೂ ನೆರೆಮನೆಯ ಮೋಹನ್ ಶೆಟ್ಟಿಗಾರ್(35) ಸಿಸಿಬಿ ಪೊಲೀಸರ ವಶದಲ್ಲಿರುವ ಆರೋಪಿಗಳು. ರಾಮ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕಿಯೋರ್ವರ ಪತಿಯಾಗಿದ್ದಾರೆ. ಜೂ. 23ರಂದು ಕೆ.ಸಿರೋಡಿನಲ್ಲಿರುವ ತಲಪಾಡಿ ಶಾಖೆಯಲ್ಲಿ ಡರೋಡೆಗೆ ವಿಫಲ ಯತ್ನ ನಡೆದಿತ್ತು. ಪಲ್ಸಾರ್ ಬೈಕಿನಲ್ಲಿ ಬಂದಿದ್ದ ಆಗಂತುಕರಿಬ್ಬರು ಬ್ಯಾಂಕಿನ ವಾಚ್‍ಮೆನ್‍ಗೆ ಹಲ್ಲೆ ನಡೆಸಿ ಬೆದರಿಸಿ ಒಳಕರೆದೊಯ್ದು ಶಟರನ್ನು ಹಾಕಿದ್ದರು. ಬಳಿಕ ಬ್ಯಾಂಕಿನಲ್ಲಿದ್ದ ಮೂವರು ಸಿಬ್ಬಂದಿಗೆ ಚೂರಿ ತೋರಿಸಿ ಅವರು ಶೌಚಾಲಯದೊಳಗೆ ಕೂಡಿ ಹಾಕಿದ್ದರು. ನಂತರ ಬ್ಯಾಂಕಿನೊಳಗೆ ಇದ್ದ ಲಾಕರಿನಿಂದ ಸುಮಾರು 30 ಕೆ.ಜಿ ಯಷ್ಟು ಚಿನ್ನವನ್ನು…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮಂಗಳೂರು: ದಂತ ವೈದ್ಯ ಮತ್ತು ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕ ಡಾ. ಮುರಲೀ ಮೋಹನ್ ಚೂಂತಾರು ಇವರ ಆರನೇ ವೈದ್ಯಕೀಯ ಕೃತಿ “ಸಂಜೀವಿನಿ ಆರೋಗ್ಯ ಮಾರ್ಗದರ್ಶಿ” ಭಾಗ 2 ಕೃತಿ ಸೋಮವಾರದಂದು ಓಷನ್‍ಪರ್ಲ್ ಹೋಟೆಲಿನ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ. ರಮಾನಾಥ ರೈ ಇವರು ಕೃತಿಯನ್ನು ಬಿಡುಗಡೆ ಮಾಡಿದರು. ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ ಇದರ ವಿಂಶತಿಯ ಸಂಭ್ರಮದ ಜೊತೆಗೆ ನಡೆದ ಈ ಕಾರ್ಯಕ್ರಮದಲ್ಲಿ ಕುಟುಂಬ ವೈದ್ಯ ಮತ್ತು ವೈದ್ಯ ಸಾಹಿತಿ ಡಾ. ರಮಾನಂದ ಬನರಿ ಮತ್ತು ಕಾಸರಗೋಡು ಜಿಲ್ಲಾ ಪಂಚಾಯತಿನ ಸ್ಥಾಯಿ ಸಮಿತಿ ಇದರ ಅಧ್ಯಕ್ಷರಾದ ಶ್ರೀ ಅರ್ಷದ್ ವರ್ಕಾಡಿ ಭಾಗವಹಿಸಿದ್ದರು. ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಉಸ್ತುವಾರಿ ಸಚಿವರಾದ ರಮಾನಾಥ ರೈ ವೈದ್ಯಕೀಯ ವಿಷಯಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯುವ ಕಲೆ ಡಾ. ಮುರಲೀಯವರಿಗೆ ಸಿದ್ದಿಸಿದೆ.…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕುತ್ತಾರು: ಶ್ರೀಕ್ಷೇತ್ರ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ದಿ ವಿನಾಯಕ ದೇವಸ್ಥಾನದ 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾಗಿ ರಾಜೇಶ್ ಗಟ್ಟಿ ಮುಂಡೋಳಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಯಾದವ ಗಟ್ಟಿ ಮುಂಡೋಳಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಆಚಾರ್ಯ ದೇರಳಕಟ್ಟೆ, ಕೋಶಾಧಿಕಾರಿಯಾಗಿ ರವಿ ಕುಕ್ಕುದಕಟ್ಟೆ, ಶೋಭಾ ಯಾತ್ರೆ ಸಂಚಾಲಕರಾಗಿ ಚಂದ್ರಹಾಸ್ ಕೊಟ್ಟಾರಿ ಪವಿತ್ರ ಕುಮಾರ ಗಟ್ಟಿ, ಜಗನ್ನಾಥ್ ಸಾಲಿಯಾನ್, ರಾಜೇಶ್ ಅತ್ತಾವರ, ಭವಾನಿ ಶಂಕರ್ ಸೇವಂತಿಗುತ್ತು, ನಂದಕುಮಾರ್ ಬಬ್ಬುಕಟ್ಟೆ, ಈಶ್ವರ್ ಬಡಾಜೆ, ದಿನೇಶ್ ಎಲ್ .ಎಸ್, ಸುಧಾಕರ್ ಅಮೀನ್ ಕುತ್ತಾರು, ಉಪಾಧ್ಯಕ್ಷರುಗಳಾಗಿ ಗೋಪಾಲ್ ಸರ್ವೇಯರ್ ಮುಂಡೋಳಿ, ಉದಯ ಬಾಕಿಮಾರ್, ಸುಹಾಸಿನಿ ಬಬ್ಬುಕಟ್ಟೆ, ವೇದ ಪವಿತ್ರ ಕುಮಾರ್ ಗಟ್ಟಿ, ಜಾನಕಿ ಗೋಕುಲ್ ದಾಸ್. ನವೀನ್ ಕುಮಾರ್ ಸಂತೋಷ್ ನಗರ, ಜಯಂತ್ ಪದ್ಮಾಶಾಲಿ, ಮನೋಜ್ ರೈ ಪಂಡಿತ್‍ಹೌಸ್, ಪುರಂದರ, ಜಯಪ್ರಕಾಶ್ ರೈ, ಸಂಘಟನಾ ಕಾರ್ಯದರ್ಶಿಯಾಗಿ ಚರಣ್ ಕುತ್ತಾರು, ಗೌರವ ಸಲಹೆಗಾರರಾಗಿ ಜಯರಾಮ್ ಚೆಂಬುಗುಡ್ಡೆ, ಚಂದ್ರಹಾಸ್ ಪಂಡಿತಹೌಸ್, ಪದ್ಮನಾಭ ಮರ್ಕೆದು, ನಿತೇಶ್…

