Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಬೆಳ್ಮ: ನಿರ್ಮಲ ಗ್ರಾಮ ಪುರಸ್ಕಾರ, ಸ್ವಚ್ಛ ಗ್ರಾಮ ಪುರಸ್ಕಾರ ಪಡೆದಿರುವ ಬೆಳ್ಮ ಗ್ರಾಮ ಪಂಚಾಯಿತಿನಲ್ಲೇ ಸ್ವಚ್ಛತೆಯೇ ಇಲ್ಲವಾಗಿದೆ.  ದೇರಳಕಟ್ಟೆ  ಜಂಕ್ಷನ್  ಸುತ್ತಮುತ್ತ  ತ್ಯಾಜ್ಯ ಕಾಣುತ್ತಿದೆ. ಇದರಿಂದ  ಸೊಳ್ಳೆ ಉತ್ಪತ್ತಿಯಾಗಿ  ಅನಾರೋಗ್ಯ ಉಂಟಾಗುವ ಭೀತಿಯಿದೆ. ಆರೋಗ್ಯ ಇಲಾಖೆಯೂ ಈ ಕುರಿತು ಮುತುವರ್ಜಿ ವಹಿಸುತ್ತಿಲ್ಲ ಎಂಬ ಆರೋಪ  ದೇರಳಕಟ್ಟೆಯ ಬೆಳ್ಮ ಪಂಚಾಯಿತಿ ವಠಾರದದಲ್ಲಿ ಮಂಗಳವಾರ ಜರಗಿದ 2017-18ನೇ ಸಾಲಿನ ಪ್ರಥಮ ಹಂತದ  ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ಕೇಳಿ ಬಂದಿತು. ಈ ಕುರಿತು ಪ್ರತಿಕ್ರಿಯಿಸಿದ  ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ` ಈ ಹಿಂದೆ ಬಡಕಬೈಲು ಸರ್ವೆ ನಂಬ್ರ 48ರಲ್ಲಿ  ಘನ ತ್ಯಾಜ್ಯ ವಿಲೇವಾರಿ ಘಟಕದ ಸ್ಥಾಪನೆಯಾಗಿತ್ತು. ಅಲ್ಲಿಗೆ ತ್ಯಾಜ್ಯವನ್ನು  ಕೊಂಡೊಯ್ಯುವ ವ್ಯವಸ್ಥೆಯೂ ಆಗಿತ್ತು, ಸಮರ್ಪಕವಾಗಿ  ಘಟಕ ಕಾರ್ಯಾಚರಿಸುತ್ತಿದ್ದು, ಇದರಿಂದಲೇ ಪುರಸ್ಕಾರವೂ ಒದಗಿಬಂದಿತ್ತು. ಆದರೆ  ಜಾಗದ ಕುರಿತು ಖಾಸಗಿಯವರು ನ್ಯಾಯಾಲಯದಲ್ಲಿ ದಾವೆ ಹೂಡಿರುವುದರಿಂದ  ಸದ್ಯ  ಘನ ತ್ಯಾಜ್ಯ ವಿಲೇವಾರಿ ಘಟಕ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.  ಜಾಗದ ಪರ ವಾದಿಸಲು  ಪಂಚಾಯಿತಿ ಮೂಲಕ ನ್ಯಾಯವಾದಿಗಳನ್ನು ನೇಮಿಸಲಾಗಿದೆ. ಇಂದು…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮಂಗಳೂರು: ಶರತ್ ಮಡಿವಾಳ ಅಂತಿವi ಯಾತ್ರೆಯ ವೇಳೆ ನಡೆದ  ಕಲ್ಲೆಸೆತದ ವಿದ್ಯಮಾನಕ್ಕೆ ದ.ಕ ಜಲ್ಲೆ ಸಂಪೂರ್ಣ ಭಯಪೀಡಿತವಾಗಿದ್ದು ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಹೊಣೆ ಎಂದು ಕೇಂದ್ರ ಸಚಿವ ಡಿ.ಸದಾನಂದ ಗೌಡ ತಿಳಿಸಿದ್ದಾರೆ. ದ.ಕ ಜಿಲ್ಲೆಯಾದ್ಯಂತ ನಡೆಯುತ್ತಿರುವ ಅಹಿತಕರ ಘಟನೆಗಳ ಕುರಿತು ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ  ಒಂದೂವರೆ ತಿಂಗಳಿನಿಂದ   ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ದೇಶಕ್ಕೆ ,ರಾಜ್ಯಕ್ಕೆ  ಕಪ್ಪು ಚುಕ್ಕೆ  ತಂದು ಕೊಟ್ಟಿದೆ. ಬಂಟ್ವಾಳ, ಉಳ್ಳಾಲ ಎರಡು ಪ್ರದೇಶದಲ್ಲಿ ಬಿಟ್ಟರೆ ಇನ್ನೂ ಯಾವುದೇ ಕಡೆ ಇಲ್ಲದ ಇಂತಹ ವಿದ್ಯಾಮಾನಕ್ಕೆ ಕಂಡು ಬಂದಿಲ್ಲವಾದರೂ ಸುಳ್ಯ,ಪುತ್ತೂರು,ಮಂಗಳೂರು,ಬೆಳ್ತಂಗಡಿ ಇವೆಲ್ಲಾ ತಾಲೂಕಿನಲ್ಲೂ ನಿಷೇಧ ಜಾರಿ ಮಾಡಿ ಜನರನ್ನು ಸಂಕಷ್ಟಕ್ಕೀಡು ಮಾಡಿದೆ.  ರಾಜ್ಯದ ಮುಖ್ಯಮಂತ್ರಿ ಮಂಗಳೂರಿಗೆ ಆಗಮಿಸಿದ ತಕ್ಷಣ ನಿಷೇಧವನ್ನು ಹಿಂತೆಗೆದು ನಂತರ ಕೊಲೆಗೀಡಾದ ಶರತ್ ಅವರ ಕೊಲೆಗಡುಕರನ್ನು ಹಿಡಿಯಲು ಒತ್ತಾಯ ಮಾಡುವ ಸಂಘಟನೆಯವರ ಪ್ರತಿಭಟನೆಗೆ ತಡೆಯೊಡ್ಡಿ  ನಾಯಕರನ್ನು ಬಂಧನ ಮಾಡುವ ಪ್ರಕ್ರಿಯೆ ನಿಜವಾಗಿಯೂ ದುರಂಕಾರದ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ:ಟೆಂಪೋ ಚಾಲಕನಿಗೆ ಕಾರಿನಲ್ಲಿ ಬಂದ ನಾಲ್ವರು ಆಗಂತುಕರ ತಂಡ ಚೂರಿಯಿಂದ ಇರಿದಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಆಝಾದ್ ನಗರದಲ್ಲಿ ಮಂಗಳವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಉಳ್ಳಾಲ ಉಳಿಯ ನಿವಾಸಿ ಲಾರೆನ್ಸ್ ಎಂಬವರ ಪುತ್ರ ಆಸ್ಟಿನ್ (28)  ಚೂರಿ ಇರಿತಕ್ಕೊಳಗಾದವರು. ಗೂಡ್ಸ್ ಟೆಂಪೋ ಚಾಲಕರಾಗಿದ್ದ ಇವರು ಟೆಂಪೋದಲ್ಲಿ ಮಣ್ಣು ಹೇರಿಕೊಂಡು ಆಝಾದ್ ನಗರದತ್ತ ಕೊಂಡೊಯ್ದಿದ್ದರು. ಅಲ್ಲಿ ಮಾರ್ಗ ಮಧ್ಯೆ  ಟೆಂಪೋದಿಂದ ಮಣ್ಣು ಖಾಲಿ ಮಾಡುವ ಸಂದರ್ಭ  , ಕಪ್ಪು ಬಣ್ಣದ ಫಾರ್ಡ್ ಕಾರಿನಲ್ಲಿ ಬಂದ ನಾಲ್ವರು ಟೆಂಪೋವನ್ನು ಬದಿಗೆ ಇಡುವಂತೆ ಹೇಳಿದ್ದರು. ಆದರೆ ಮಣ್ಣು ಖಾಲಿ ಮಾಡುತ್ತಿದ್ದು, ಮುಗಿದ ತಕ್ಷಣ   ಹೋಗುವುದಾಗಿ ಆಸ್ಟಿನ್  ಪ್ರತಿಕ್ರಿಯಿಸಿದ್ದರು. ಇದರಿಂದ ರೊಚ್ಚಿಗೆದ್ದ ತಂಡದಲ್ಲಿದ್ದ ಓರ್ವ  ಚೂರಿಯಿಂದ ಆಸ್ಟಿನ್ ಅವರ ಕುತ್ತಿಗೆ ಭಾಗಕ್ಕೆ ಇರಿಯಲು ಯತ್ನಿಸಿದ್ದು,  ಅದನ್ನು ತಡೆಯಲು  ಕೈ ಅಡ್ಡ ಹಿಡಿದಾಗ ಕೈಗೆ  ಚುಚ್ಚಿದ್ದಾರೆ.  ಬಳಿಕ ಕಾರಿನಲ್ಲಿ ನಾಲ್ವರು ಪರಾರಿಯಾಗಿದ್ದಾರೆ. ಕೂಡಲೇ ಗಾಯಾಳುವನ್ನು ಉಳ್ಳಾಲದ ಸರೋಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಮುಸ್ಲಿಂ ಮತದಾರರೇ ಇರುವ ಉಳ್ಳಾಲ ನಗರಸಭೆಯ ಒಂದನೇ ವಾರ್ಡಿನಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆಗಿಳಿದು ಬಹುಮತಗಳಿಂದ ಚುನಾಯಿತರಾಗಿದ್ದ ಉಳ್ಳಾಲ ಪುರಸಭೆ ಸದಸ್ಯ ಕೋಟೆಪುರ ನಿವಾಸಿ ಮಹಮ್ಮದ್ ಹನೀಫ್ (48) ತೀವ್ರ ರಕ್ತದೊತ್ತಡಕ್ಕೆ ಒಳಗಾಗಿ ಸೋಮವಾರ ಸಂಜೆ ನಿಧನಹೊಂದಿದ್ದಾರೆ. ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಹಿಂದೆ ಜೀವನೋಪಾಯಕ್ಕೆ ಒಣಮೀನು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಅವರು ಸದ್ಯ ನಗರಸಭೆ ಸದಸ್ಯರಾಗಿಯೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರಥಮ ಬಾರಿ ಚುನಾವಣೆಗೆ ನಿಂತಿದ್ದ ಹನೀಫ್ ಅವರು ಬಿಜೆಪಿ ಪಕ್ಷದಿಂದ ಕಣಕ್ಕಿಳಿದಿದ್ದರು. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರೇ ಇದ್ದು, ಬಹುಮತಗಳಿಂದ ಚುನಾಯಿತರಾಗಿ 2013 ರಿಂದ 2018ರ ಸಾಲಿನ ಪುರಸಭೆ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ : ಕಳೆದ ಒಂದು ವರ್ಷದಿಂದ ಗೂಡಂಗಡಿಗೆ ವಿದ್ಯುತ್ ಸಂಪರ್ಕವಿಲ್ಲದೇ ವ್ಯಾಪಾರ ನಡೆಸಲು ಅಸಾಧ್ಯವಾಗದೇ ಈ ಬಗ್ಗೆ ನಗರಸಭೆಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗದ ನಿಟ್ಟಿನಲ್ಲಿ ಅಂಗವಿಕರೋರ್ವರು ತಮ್ಮ ಗೂಡಂಗಡಿಗೆ ನಿರಕ್ಷೇಪಣಾ ಪತ್ರವನ್ನು ನೀಡುವಂತೆ ಒತ್ತಾಯಿಸಿ ಉಳ್ಳಾಲ ನಗರಸಭೆಯ ಎದುರುಗಡೆ ಧರಣಿ ಸತ್ಯಾಗ್ರಹ ಕುಳಿತಿರುವ ಘಟನೆ ಸೋಮವಾರ ನಡೆದಿದೆ. ಮಹಮ್ಮದ್ ನೂರುಲ್ ಹಕ್ ಎಂಬ ಅಂಗವಿಕಲ ವ್ಯಕ್ತಿಯೋರ್ವರು ಉಳ್ಳಾಲ ಪೊಲೀಸ್ ಠಾಣೆಯ ಸಮೀಪ ಗೂಡಂಗಡಿ ಹೊಂದಿದ್ದು, ಅದಕೆ ವಿದ್ಯುತ್ ಸಂಪರ್ಕ ಒದಗಿಸಲು ನಗರಸಭೆಯಿಂದ ನಿರಾಕ್ಷೇಪಣಾ ಪತ್ರವನ್ನು ಕೇಳಿದ್ದರು. ಆದರೆ ಒಂದು ವರ್ಷದಿಂದ ರಸ್ತೆ ಅಗಲೀಕರಣ ಸಂದರ್ಭ ಅಂಗಡಿ ತೆರವುಗೊಳಿಸಲಾಗುವುದು ಅನ್ನುವ ಕಾರಣ ನೀಡಿ ಪತ್ರವನ್ನು ನೀಡಿರಲಿಲ್ಲ. ಮೂರು ವರ್ಷದ ಅಂಗವಿಕಲರಿಗಾಗಿ ನೀಡುವ ಶೇ.3ರ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ, ಸಿಗಬೇಕಾದ ರೂ. 6,000 ಸಹಾಯಧನ ಇನ್ನೂ ಕೈ ಸೇರಿಲ್ಲ. ತನ್ನ ಬಳಿಕ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಹಣ ಬಂದಿದೆ. ಈ ಕುರಿತು ನಗರಸಭೆ ಅಧಿಕಾರಿಗಳು ಬಂದಿರುವ ಹಣವನ್ನು ಏನು ಮಾಡಿದ್ದಾರೆ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮೊಂಟೆಪದವು :ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವಲ್ಲಿ ನಿಟ್ಟಿನಲ್ಲಿ ರಾಜ್ಯ ಸರಕಾರವು ಹಲವಾರು ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರತಿಯೊಂದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಆಹಾರ ಸಚಿವ ಯು.ಟಿ.ಖಾದರ್ ಅವರು ಹೇಳಿದರು. ಮೊಂಟೆಪದವು ಸರಕಾರಿ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ಸೋಮವಾರ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಬೆಳೆಸಿ ಉತ್ತಮ ಶಿಕ್ಷಣವನ್ನು ನೀಡುವಲ್ಲಿ ಕರ್ನಾಟಕ ಸರಕಾರವು ಈಗಾಗಲೇ ಕ್ಷೀರ ಭಾಗ್ಯದಂತಹ ಹಲವಾರು ಉತ್ತಮ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು. ಮೊಂಟೆಪದವು ಶಾಲೆಯು ಇದೀಗ ಹಂತ ಹಂತವಾಗಿ ಅಭಿವೃದ್ಧಿಯಾಗುತ್ತಿದ್ದು ಇಲ್ಲಿಯ ಮೂಲಭೂತ ಸೌಲಭ್ಯಗಳು ವಿಸ್ತಾರಗೊಂಡಿದೆ. ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನೂತನ ಕಟ್ಟಡವು ನಿರ್ಮಾಣಗೊಳ್ಳಲಿದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಸೋಮೇಶ್ವರ: 300 ಮನೆಗಳಿಗೆ ಮೂರರಿಂದ ನಾಲ್ಕು ಗ್ರಾ.ಪಂ. ಸದಸ್ಯರಿದ್ದು ತಮ್ಮ ಜವಾಬ್ದಾರಿ ಸಮರ್ಪಕವಾಗಿ ನಿಭಾಯಿಸಿ ಜನರ ಪ್ರೀತಿ ಗಳಿಸಲು ಐದು ವರ್ಷ ಸಾಕಾಗುತ್ತದೆ, ಆದರೆ ಹೆಚ್ಚಿನವರು ಶಾಸಕರ ಕೆಲಸಕ್ಕೆ ಕೈ ಹಾಕುತ್ತಿರುವುದರಿಂದ ಗ್ರಾ.ಪಂ. ಸದಸ್ಯರ ಕೆಲಸ ಶಾಸಕರು ಮಾಡುವ ಪರಿಸ್ಥಿತಿ ಬಂದಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು. ಸೋಮೇಶ್ವರ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಲಾದ ನೂತನ ಸಭಾ ಭವನ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮಾಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಎನ್ನುವುದು ಗಾಂಧೀಜಿ ಕನಸಾಗಿತ್ತು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಆತ್ಮವಿಶ್ವಾಸ, ಸ್ವಾಭಿಮಾನದಿಂದ ಕೆಲಸ ನಿರ್ವಹಿಸುವಂತಾಗಬೇಕು ಎನ್ನುವ ನೆಲೆಯಲ್ಲಿ ಸರ್ಕಾರ ಗೌರವ ಧನ ಹೆಚ್ಚಳ ಜೊತೆ ವಿವಿಧ ಸವಲತ್ತು ನೀಡಿದೆ. ಗ್ರಾಮ ಪಂಚಾಯಿತಿ ಆಡಳಿತ ಸಮರ್ಪಕವಾಗಿ ಆಡಳಿತ ನಿರ್ವಹಿಸಿದಾಗ ಜನರೂ ಸಹಕಾರ ನೀಡುತ್ತಾರೆ ಎನ್ನುವುದಕ್ಕೆ ಸೋಮೇಶ್ವರ ಗ್ರಾ.ಪಂ. ಸಾಕ್ಷಿ ಎಂದು ತಿಳಿಸಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ವಿದಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗ್ರಾಮದ ಸರ್ಕಾರ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಚ್ಚಿಲ: ದೇವಸ್ಥಾನಗಳು ದೈವಸ್ಥಾನಗಳು ಒಂದೇ ಛತ್ರದಡಿ ಬರುವ ಮೂಲಕ ಏಕರೂಪ ನಿರ್ಣಯಗಳನ್ನು ತರುವ ಕಾರ್ಯ ಮಾಗಣೆಗಳ ಮಹಾ ಮಂಡಳಿಯಿಂದ ನಡೆದಾಗ ಹಿಂದೂ ಸಮಾಜಕ್ಕೆ ಸುಭದ್ರವಾದ ಬುನಾದಿ ಹಾಕಲು ಸಹಕಾರಿ ಎಂದು ಎಂದು ಶ್ರೀ ಕ್ಷೇತ್ರ ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು. ಸೋಮೇಶ್ವರ ಉಚ್ಚಿಲದ ಪದ್ಮ ವಿಹಾರದಲ್ಲಿ ಉಳ್ಳಾಲ ವ್ಯಾಪ್ತಿಯ 17 ಗ್ರಾಮಗಳನ್ನೊಳಗೊಂಡ ಐದು ಮಾಗಣೆಗಳ ಎಲ್ಲಾ ಹಿಂದೂ ಸಮುದಾಯಗಳ ಒಕ್ಕೂಟವಾದ `ಮಾಗಣೆಗಳ ಮಹಾ ಮಂಡಳಿ’ ಇದರ ನೂತನ ಕಚೇರಿಗೆ ಚಾಲನೆ ನೀಡಿ ಮಾತನಾಡಿದರು. ದೇವಸ್ಥಾನಗಳಲ್ಲಿ ಆರಾಧನೆ ಸಂಸ್ಕøತಿ ಅವರವರ ಭಾವಕ್ಕೆ ತಕ್ಕಂತೆ ಇರುವುದು ಸಹಜ ಆದರೆ ದೇವಸ್ಥಾನಗಳು ವ್ಯವಾಹಾರಿಕ ತಾಣವಾಗದೆ ಸಮಾಜದ ವಿಚಾರಗಳ ಕಡೆ ಹೆಚ್ಚಿನ ಒಲವು ನೀಡುವ ಕಾರ್ಯದೊಂದಿಗೆ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಒಲವು ನೀಡಬೇಕು ಎಂದರು. ಖ್ಯಾತ ಸಾಹಿತಿ ಹಿರಿಯ ಸಮಾಜಿಕ ಚಿಂತಕ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ ಮಾಗಣೆಗಳ ಮಹಾ ಮಂಡಳಿ ಯಾವಾಗಲೂ ಆಗಬೇಕಾದ ಕಾರ್ಯವಾಗಿತ್ತು. ಆದರೆ ತಡವಾಗಿಯಾದರೂ ಒಕ್ಕೂಟ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಉಳ್ಳಾಲ ಮಸ್ಜಿದುಲ್ ಜಾಮಿಯಾ ಅಲ್-ಮುನವ್ವರ್ ಮತ್ತು ಮಂಬವುಲ್ ಉಲೂಂ ಮದ್ರಸ ಮಂಚಿಲ ಇದರ ಜಂಟಿ ಅಶ್ರಯದಲ್ಲಿ ಮುನವ್ವರ್ ಮತ್ತು ಮಂಬವುಲ್ ಉಲೂಂ ಮದ್ರಸ ವಿದ್ಯಾರ್ಥಿಗಳಿಗೆ ಉಚಿತ ಮದ್ರಸ ಪಾಠ ಪುಸ್ತಕ ವಿತರಣೆ ಮಸ್ಜಿದುಲ್ ಜಾಮಿಯಾ ಅಲ್-ಮುನವ್ವರ್ ಹಾಲ್‍ನಲ್ಲಿ ನಡೆಯಿತು. ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜ್‍ನ ಪ್ರಿನ್ಸಿಪಾಲ್ ಅಹ್ಮದ್ ಬಾವಾ ಮುಸ್ಲಿಯಾರ್ ಮದ್ರಸ ವಿದ್ಯಾರ್ಥಿಗಳಿಗೆ ಉಚಿತ ಪಾಠ ಪುಸ್ತಕ ವಿತರಿಸಿ ಮಾತನಾಡಿ ಸಾವಿರ ವರ್ಷಗಳ ಹಿಂದೆ ಇಸ್ಲಾಮಿನ ಹಿರಿಯ ಪಂಡಿತರು ಬರೆದ ಗ್ರಂಥವನ್ನು ಇಂದು ಮದರಸಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವುದು. ಧಾರ್ಮಿಕ ವಿಧ್ಯೆ ಕಲಿಸಿದರೆ ಮಾತ್ರ ಇಸ್ಲಾಂ ಧರ್ಮ ಅಂತ್ಯ ದಿನದವರೆಗೆ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಮಂಚಿಲ ಜುಮಾ ಮಸೀದಿ ಖತೀಬ್ ಹಸನ್ ಮುಬಾರಕ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧಾರ್ಮಿಕ ವಿಧ್ಯೆ ಕಲಿಯುವ ವಿದ್ಯಾರ್ಥಿಗಳಿಗೆ ಉಚಿತ ಮದ್ರಸ ಗ್ರಂಥಗಳನ್ನು ನೀಡುವ ಮೂಲಕ ಪವಿತ್ರವಾದ ಇಸ್ಲಾಂ ಧರ್ಮವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಮುಸ್ಲಮಾನ ಕರ್ತವ್ಯವಾಗಿದೆ ಎಂದು ಹೇಳಿದರು.…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕುತ್ತಾರು: ಬೈಕಿನಲ್ಲಿ ಬಂದ  ಆಗಂತುಕರಿಬ್ಬರು ಯುವಕನ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದ ಘಟನೆ ಕುತ್ತಾರು ರಾಣಿಪುರದಲ್ಲಿ ಶನಿವಾರ ರಾತ್ರಿ ವೇಳೆ ಸಂಭವಿಸಿದೆ. ಚಿರಂಜೀವಿ(24) ಅಪರಿಚಿತರಿಂದ ಹಲ್ಲೆಗೊಳಗಾಗಿದ್ದು,  ಬೈಕಿನಲ್ಲಿ ಚಲಿಸುತ್ತಿದ್ದ ವೇಳೆ   ದುಷ್ಕರ್ಮಿಗಳು ಯುವಕನ ತಲೆಗೆ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಯುವಕನನ್ನು   ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More