Author: UllalaVani

Kannada News From Coastal Karnataka

UN NETWORKS ಕೊಣಾಜೆ: ಸಸ್ಯಗಳ ಉಳಿವಿಗಾಗಿ ಮತ್ತು ಮಾನವಾಭಿವೃದ್ಧಿಗಾಗಿ ಬಳಸಿಕೊಳ್ಳಬಹುದಾದ ಸಸ್ಯ ಸಂಪನ್ಮೂಲಗಳ ಬಗ್ಗೆ ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಇಂದಿನದ್ದಾಗಿದ್ದು, ಸಸ್ಯಗಳಿದ್ದರೆ ಮಾತ್ರ ಜೀವರಾಶಿಗಳು ಉಳಿಯಬಹುದು. ಇಲ್ಲದಿದ್ದರೆ ಆಮ್ಲಜನಕದ ಕೊರೆತಯಿಂದಾಗಿ ಭೂಮಿಯ ಜೀವರಾಶಿಗಳೆಲ್ಲವೂ ನಶಿಸಿ ಹೋಗಬಹುದು ಎಂದು ಕ್ಯಾಲಿಕಟ್‍ನ ಭಾರತೀಯ ಸಂಬಾರ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಕೆ.ನಿರ್ಮಲ್ ಬಾಬು ಅವರು ಅಭಿಪ್ರಾಯ ಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಿಯಿಕ ಸಸ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕರ್ನಾಟಕ ತಂತ್ರಜ್ಞಾನ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಮಂಗಳೂರು ವಿವಿ ಹಳೆಸೆನೆಟ್ ಸಭಾಂಗಣದಲ್ಲಿ ಗುರುವಾರ ಸಸ್ಯ ವಿಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆಗಳು ಎಂಬ ವಿಷಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಿಂದಾಗಿ ಸಮಾಜವು ಹಲವಾರು ರೀತಿಯ ಪರಿವರ್ತನೆಗಳಿಗೆ ಕಾರಣವಾಗಿದೆ. ಅದರಲ್ಲೂ ಸಸ್ಯಶಾಸ್ತ್ರ ವಿಜ್ಞಾನ ಕ್ಷೇತ್ರವು ಇಂದಿನ ಆಧುನಿಕತೆಯಲ್ಲಿ ಬಹಳಷ್ಟು ಪರಿಣಾಮವನ್ನು ಬೀರುತ್ತಿದ್ದು ಈ ನಿಟ್ಟಿನಲ್ಲಿ ಯುವ ಸಮುದಾಯ, ವಿದ್ಯಾರ್ಥಿಗಳು ತಮ್ಮ ವಿಶೇಷ ಪರಿಶ್ರಮದೊಂದಿಗೆ ಹೊಸ ಹೊಸ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳಬೇಕು…

Read More

UN NETWORKS ಉಳ್ಳಾಲ: ಸಮಾಜದಲ್ಲಿ ಪೈಶಾಚಿಕತೆ ತಾಂಡವವಾಡುತ್ತಿದ್ದು, ದೇವರನ್ನು ವಿಭಜಿಸುವ ಮೂಲಕ ಸಮಾಜವನ್ನು ಒಡೆಯುವ ಕಾರ್ಯ ನಡೆಯುತ್ತಿದೆ. ಈ ನಿಟ್ಟಿನಲ್ಲಿ ವಿಭಜನೆ ಸಿದ್ಧಾಂತಗಳನ್ನು ಸೋಲಿಸುವ ಕಾರ್ಯ ಆಗಬೇಕಿದೆ ಎಂದು ಮಂಗಳೂರು ಶಾಂತಿ ಪ್ರಕಾಶನದ ಮುಹಮ್ಮದ್ ಕುಂಞ ಹೇಳಿದ್ದಾರೆ. ಅವರು ಬೀರಿ ಸಂತ ಅಲೋಷಿಯಸ್ ಕಾಲೇಜು (ಎಐಎಂಐಟಿ) ಹಾಗೂ ಕೋಟೆಕಾರು ಧಾರ್ಮಿಕ ಸೌಹಾರ್ದ ವೇದಿಕೆ ವತಿಯಿಂದ ಬುಧವಾರ ಬೀರಿ ಸಂತ ಅಲೋಷಿಯಸ್ ಕಾಲೇಜು ವಠಾರದಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪೈಶಾಚಿಕತೆಯ ಕೃತ್ಯಗಳಿಂದ ಮನುಷ್ಯನನ್ನು ರಕ್ತಪಾತ ಮಾಡುವುದರ ಜತೆಗೆ ಪರಿಸರವನ್ನು ನಾಶ ಮಾಡುವ ಕೆಲಸ ಸಮಾಜದಲ್ಲಿ ಆಗುತ್ತಿದೆ. ಕುರ್‍ಆನ್‍ನಲ್ಲಿ ಪಿಶಾಚಿ ಅಂದರೆ ಶತ್ರು ಅನ್ನುವ ಉಲ್ಲೇಖ ಇದೆ. ಧಾರ್ಮಿಕ ಚಿಂತನೆಗಳಿಂದ ಪೈಶಾಚಿಕತೆಯನ್ನು ಹೋಗಲಾಡಿಸಲು ಸಾಧ್ಯ. ಇದು ವಿಭಜನೆಯ ಕಾಲವಾಗಿದ್ದು, ದೇವರನ್ನು ವಿಭಜಿಸುವ ಮೂಲಕ ಸಮಾಜವನ್ನು ಒಡೆಯುವ ಕಾರ್ಯ ನಡೆಯುತ್ತಿದೆ. ವಿಭಜನೆ ಅನ್ನುವುದೇ ಅನೈಸರ್ಗಿಕ, ವಿಭಜನೆ ಸಿದ್ಧಾಂತಗಳನ್ನೇ ಸೋಲಿಸುವ ಕಾರ್ಯ ಆಗಬೇಕಿದೆ . ಶಿಕ್ಷಿತರೇ ದೇಶದ್ರೋಹ ಕೆಲಸಗಳೊಂದಿಗೆ…

Read More

UN NETWORKS ಉಳ್ಳಾಲ: ಉತ್ಸಾಹ, ಜ್ಞಾನ, ಸಹಾನುಭೂತಿಯ ಜತೆಗೆ ಜನರೊಂದಿಗಿನ ಒಡನಾಟದ ಗುಣಗಳು ಬೆಳೆಸಿದಲ್ಲಿ ಪ್ರತಿಯೊಬ್ಬರು ಕಾರ್ಯಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿಯ ಕಣ್ಣು ದಾನಿಗಳ ಉಪಸಮಿತಿಯ ಸಂಚಾಲಕ ಹಾಗೂ ಕಣ್ಣಿನ ಬ್ಯಾಂಕ್ ಅಸೋಸಿಯೇಷನ್ ಸೌತ್ ಝೋನ್ ಇದರ ಮುಖ್ಯಸ್ಥ ಎಂ.ಕೆ.ಕೃಷ್ಣ ಹೇಳಿದರು. ಅವರು ದೇರಳಕಟ್ಟೆ ಪಾನೀರಿನ ನಿಟ್ಟೆ ಉಷಾ ನರ್ಸಿಂಗ್ ವಿದ್ಯಾ ಸಂಸ್ಥೆಯ ಯುವ ರೆಡ್‍ಕ್ರಾಸ್ ಘಟಕದ ವತಿಯಿಂದ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ಆಯೋಜಿಸಲಾದ ಓರಿಯೆಂಟೇಷನ್ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜನರೊಂದಿಗೆ ಉತ್ಸಾಹ ಹಾಗೂ ಸಹನೆಯಿಂದ ಜ್ಞಾನ ಗಳಿಸಿದಂತಹ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಮದರ್ ತೆರೆಸಾ ಹಾಗೂ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಿ ದೇಶದ ರತ್ನ ಆಗಿರುವ ಸರ್ ಎಂ.ವಿಶ್ವೇಶ್ವರೈಯ್ಯ ಯಶಸ್ವಿ ಜೀವನ ನಡೆಸಿದವರು. ಅವರನ್ನೇ ಆದರ್ಶವನ್ನಾಗಿ ತೆಗೆದುಕೊಂಡು ದೇಶದ ಬಹುದೊಡ್ಡ ಯುವಸಮುದಾಯ ಜೀವನದಲ್ಲಿ ಸಾಧಿಸುವ ಛಲ ಹೊಂದಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇಮ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗ ಮುಖ್ಯಸ್ಥ…

Read More

UN NETWORKS ಚೆಂಬುಗುಡ್ಡೆ: `ಗ್ರಾಮ ಪಂಚಾಯಿತಿ ನೀಡಿದ ಡೋರ್ ನಂಬ್ರ, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ ವಿದ್ಯುತ್ ಸಂಪರ್ಕ ಪಡೆಯಲು ಪಿಡಿಓ ಅವರಿಂದ ನಿರಪೇಕ್ಷಣಾ ಪತ್ರ ಪಡೆಯಬೇಕು ಎನ್ನುವುದು ಯಾವ ನಿಯಮ, ರಾಜ್ಯಪಾಲರೂ ಸಹಿ ಹಾಕದ ಇದು ತಲಪಾಡಿಯಲ್ಲಿ ಮಾತ್ರ ಇರುವುದೇಕೆ, ನಾವೂ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತೇವೆ’ ಇದು ವಿದ್ಯುತ್ ಗ್ರಾಹಕ ಅಬ್ಬಾಸ್ ಉಚ್ಚಿಲ್ ಅವರ ಪ್ರಶ್ನೆ. ಉಳ್ಳಾಲ ಉಪವಿಭಾಗ ಮೆಸ್ಕಾಂ ಜನಸಂಪರ್ಕ ಸಭೆ ಬುಧವಾರ ಚೆಂಬುಗುಡ್ಡೆಯಲ್ಲಿರುವ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ದಾಖಲೆಗಳೊಂದಿಗೆ ಭಾಗವಹಿಸಿದ್ದ ಅಬ್ಬಾಸ್ ಉಚ್ಚಿಲ್, ಮೇಲಿನ ಪ್ರಶ್ನೆ ಕೇಳಿ ಆಕ್ರೋಶ ವ್ಯಕ್ತಪಡಿಸಿದರು. ಮೆಸ್ಕಾಂ ಎಂಬುದು ಒಂದು ಕಂಪನಿ, ಇದಕ್ಕೂ ಗ್ರಾಮ ಪಂಚಾಯಿತಿ ಪಿಡಿಓಗೂ ಇರುವ ಸಂಬಂಧವಾದರೂ ಏನು? ವಿದ್ಯುತ್ ಸಂಪರ್ಕ ಪಡೆಯಲು ಡೋರ್ ನಂಬ್ರ ಸಹಿತ ದಾಖಲೆಗಳನ್ನು ಮಾತ್ರವೇ ನೀಡಬೇಕಾಗುತ್ತದೆ, ಆದರೆ ಪಿಡಿಓ ಅವರಿಂದ ನಿರಪೇಕ್ಷಣಾ ಪತ್ರವೂ ಪಡೆಯಬೇಕು ಎನ್ನುವ ನಿಯಮ ಎಲ್ಲೂ ಇಲ್ಲ. ಸುಖಾಸುಮ್ಮನೆ ಬಡವರನ್ನು ಅಲೆದಾಡಿಸುದೇಕೆ, ಈ ಬಗ್ಗೆ ತಿಳಿಯಬೇಕಾದರೆ ನಾಲ್ಕು ದಿನ ಪಂಚಾಯತ್‍ರಾಜ್ ಪುಸ್ತಕ…

Read More

UN NETWORKS ಮಂಜೇಶ್ವರ : ಡಾ| ಬಿ.ಆರ್ ಅಂಬೇಡ್ಕರ್ ದಲಿತ ಸಾಹಿತ್ಯ ಅಕಾಡಮೆ ಕೇರಳ ರಾಜ್ಯ ಸಮಿತಿಯ 21ನೇ ರಾಜ್ಯ ಸಮ್ಮೇಳನವು ಕೋಟ್ಟಯಂ ಜಿಲ್ಲೆಯ ಚೆರ್ತಲ ಕಲಾಭಮಣಿ ನಗರದ ಸೈಂಟ್ ಮಿನ್ನಾಲ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ಕಾಸರಗೋಡು ಜಿಲ್ಲೆಯಿಂದ ಪ್ರತಿನಿಧಿಕರಿಸಿದ ಸಾಮಾಜಿಕ ಕಾರ್ಯಕರ್ತ ತುಳಸೀದಾಸ್ ಮಂಜೇಶ್ವರ ಇವರ ಸಮಾಜಸೇವೆಯನ್ನು ಗುರುತಿಸಿ ಡಾ| ಬಿ,ಆರ್ ಅಂಬೇಡ್ಕರ್ ಜ್ಯೋತಿ ಪ್ರಶಸ್ತಿಯನ್ನ ಕೇರಳದ ಸಿವಿಲ್ ಸಪ್ಲೈ ಮಂತ್ರಿಗಳಾದ ತಿಲೋತ್ತಮನ್ ಪ್ರಧಾನಗೈದರು. ಮಂಜೇಶ್ವರ ಗ್ರಾಮ ಪಂಚಾಯತಿನ ಮಾಜಿ ಸದಸ್ಯರಾಗಿರುವ ತುಳಸೀದಾಸ್‍ರವರು ಪ್ರಸ್ತುತ ಮಂಗಳೂರಿನಲ್ಲಿ ರೈಲ್ವೇ ಉದ್ಯೋಗಿಯಾಗಿದ್ದು, ಶ್ರೀ ಧೂಮಾವತಿ ದೈವಸ್ಥಾನ ಕುಂಬಳೆಯ ಅಧ್ಯಕ್ಷರಾಗಿಯೂ, ಬ್ರೈಟ್ ಮಂಜೇಶ್ವರದ ಅಧ್ಯಕ್ಷರಾಗಿಯೂ, ಭಾರತೀಯ ಮಜ್ದೂರ್ ಸಂಘ (ಬಿ.ಎಂ.ಎಸ್) ಇದರ ಪ್ರಧಾನ ಕಾರ್ಯದರ್ಶಿಯಾಗಿಯೂ, ಬಾಕುಡ ಸಮಾಜದ ಕೇಂದ್ರೀಯ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ಸೇವೆಗಾಗಿ ದೊರೆತ ಡಾ| ಬಿ.ಆರ್ ಅಂಬೇಡ್ಕರ್ ಜ್ಯೋತಿ ಪ್ರಶಸ್ತಿ ಭಾಜನರಾದ ತುಳಸೀದಾಸ್‍ರವರನ್ನು ಮಂಜೇಶ್ವರದ ಜನತೆ ಅಭಿನಂದಿಸಿದೆ.

Read More

UN NETWORKS ತಲಪಾಡಿ: ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕಾರ್ಯವೇ ಶ್ರೀರಕ್ಷೆಯಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿಯೊಂದಿಗೆ ಅಧಿಕಾರ ನಡೆಸಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ತಲಪಾಡಿ ಸಮೀಪದ ಕೆ.ಸಿ.ರೊಡ್ ಜಂಕ್ಷನ್‍ನಲ್ಲಿ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮದ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಧ್ವಜ ನೀಡುವ ಮೂಲಕ ಚಾಲನೆ ನೀಡಿದರು. ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿಯ ಕಲ್ಪನೆಯಂತೆ ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವೈಫಲ್ಯವನ್ನು ಜನರಿಗೆ ಮುಟ್ಟಿಸುವ ಕಾರ್ಯವನ್ನು ಕಾಂಗ್ರೆಸ್‍ನ ಕಾರ್ಯಕರ್ತರು ನಡೆಸಲಿದ್ದು, ರಾಜ್ಯದ ಜನಪರ ಯೋಜನೆಗಳಿಂದ ಕಾಂಗ್ರೆಸ್‍ಗೆ ಜನರು ಬೆಂಬಲ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯರಾದ ಸುರೇಖಾ ಚಂದ್ರಹಾಸ್, ಸಿದ್ಧಿಕ್ ತಲಪಾಡಿ, ಮಾಜಿ ಸದಸ್ಯ ಮಹಮ್ಮದ್ ಮುಸ್ತಾಫ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್…

Read More

UN NETWORKS ಉಳ್ಳಾಲ: ನಿರಂತರ ಶಿಕ್ಷಣ ಕಾರ್ಯಾಗಾರಗಳು ವಿದ್ಯಾರ್ಥಿಗಳಲ್ಲಿ ಮತ್ತು ವೈದ್ಯರ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿದ್ದು, ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ವಿಜ್ಞಾನಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಸಚಿವ ಡಾ| ಎಂ.ಎಸ್. ಮೂಡಿತ್ತಾಯ ಅಭಿಪ್ರಾಯಪಟ್ಟರು. ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಎ.ಬಿ. ಶೆಟ್ಟಿ ಸ್ಮಾರಕ ದಂತವಿಜ್ಞಾನ ಮಹಾವಿದ್ಯಾಲಯದ ಕನ್ಸರ್ವೇಟಿವ್ ಡೆಂಟಿಸ್ಟ್ರಿ ಮತ್ತು ಎಂಡೋಡಾಂಟಿಕ್ಸ್ ವಿಭಾಗದ ಆಶ್ರಯದಲ್ಲಿ ಕಾಲೇಜಿನ ವಿಂಶತಿ ಭವನದಲ್ಲಿ `ಕರೆಂಟ್ ಅಪ್‍ಡೇಟ್ಸ್ ಆನ್ ಫಂಡಮೆಂಟಲ್ಸ್ ಆಫ್ ಎಂಡೋಡಾಂಟಿಕ್ಸ್’ ವಿಚಾರದ ಮೇಲೆ ನಡೆದ ನಿರಂತರ ದಂತ ವೈದ್ಯಕೀಯ ಶಿಕ್ಷಣ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಎ.ಬಿ. ಶೆಟ್ಟಿ ಸ್ಮಾರಕ ದಂತವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಕೃಷ್ಣ ನಾಯಕ್, ಸ್ನಾತಕೋತ್ತರ ಅಧ್ಯಯನ ವಿಭಾಗದ ನಿರ್ದೇಶಕ ಡಾ| ರಾಜೇಂದ್ರ ಪ್ರಸಾದ್, ಸಂಪನ್ಮೂಲ ವ್ಯಕ್ತಿಗಳಾಗಿ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್‍ನ ಕನ್ಸರ್ವೇಟಿವ್ ಡೆಂಟಿಸ್ಟ್ರಿ ಮತ್ತು ಎಂಡೋಡಾಂಟಿಕ್ಸ್ ವಿಭಾಗದ ಪ್ರಾಧ್ಯಾಪಕಿ ಡಾ| ಶಶಿ ರಶ್ಮಿ ಆಚಾರ್ಯ, ಜೈಪುರದ ಮಹಾತ್ಮಗಾಂಧಿ ದಂತ ವಿಜ್ಞಾನ ಕಾಲೇಜಿನ ಕನ್ಸರ್ವೇಟಿವ್…

Read More

UN NETWORKS ಉಳ್ಳಾಲ: ಗ್ರಾಮೀಣ ಪ್ರದೇಶದ ಸೇವೆಯೊಂದಿಗೆ ನಾಯಕತ್ವ ಗುಣ ಬೆಳೆಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಪೂರಕ ಎಂದು ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಡೀನ್ ಡಾ| ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು. ನಿಟ್ಟೆ ಉಷಾ ನರ್ಸಿಂಗ್ ಕಾಲೇಜು, ನಿಟ್ಟೆ ವಿಶ್ವ ವಿದ್ಯಾನಿಲಯದ ಎನ್‍ಎಸ್‍ಎಸ್ ಘಟಕದ ಆಶ್ರಯದಲ್ಲಿ ಪಜೀರುವಿನ ಅನುದಾನಿತ ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಎನ್‍ಎಸ್‍ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ನಿಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೋ| ಡಾ| ಫಾಟಿಮ ಡಿ’ಸಿಲ್ವಾ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷ ಎಂ. ಸೀತಾರಾಮ ಶೆಟ್ಟಿ, ನಿಟ್ಟೆ ವಿಶ್ವ ವಿದ್ಯಾನಿಲಯದ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ| ಸುಮಲತ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ಸಿ| ಇನೆಟ್ ಡಿ’ಸೋಜ, ಎಸ್‍ಡಿಎಮ್‍ಸಿ ಅಧ್ಯಕ್ಷೆ ಜ್ಯೋತಿ ಪ್ರೆಸಿಲ್ಲಾ ಕ್ತಾಸ್ತಾ, ಪಜೀರು ವಾರ್ಡ್ ಸದಸ್ಯೆ ಫ್ಲೋರಿನ್, ಶೇಖರ್, ವೀಣಾ, ಕ್ಷೇಮ ಮಾನಸಿಕ ವಿಭಾಗದ ಮುಖ್ಯಸ್ಥ ಡಾ| ಸತೀಶ್ ರಾವ್, ಉಪ…

Read More

UN NETWORKS ಉಳ್ಳಾಲ : ಸಾಮಾಜಿಕ ಜೀವನದಲ್ಲಿ ಕತ್ತಲೆಯನ್ನು ಹೋಗಲಾಡಿಸಿ ಬೆಳಕಿನಂತೆ ನಮಗೆ ಸಾಧ್ಯವಾದಷ್ಟು ಮಟ್ಟಿಗೆ ಇನ್ನೊಬ್ಬರ ಕಷ್ಟಗಳಲ್ಲಿ ಭಾಗಿಯಾಗುವ ರೀತಿಯಲ್ಲಿ ಕೆಲಸವನ್ನು ಮಾಡಿದಾಗ ಸುಂದರ ಸಮಾಜದ ನಿರ್ಮಾಣ ಸಾಧ್ಯ ಎಂದು ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯಪಟ್ಟರು. ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾದ್ಯಮ ಶಾಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕವಾಗಿ ಹಣತೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಜೆಸಿಐ ಮಂಗಳಗಂಗೂತ್ರಿಯ ಅಧ್ಯಕ್ಷ ಬಾದ್ ಷಾ ಸರ್ವಧರ್ಮ ಸಮನ್ವಯತೆಯನ್ನು ಸದಾ ಮೈಗೂಡಿಸಿ ವಿದ್ಯಾರತ್ನ ವಿದ್ಯಾ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮ ಶ್ಲ್ಲಾಘನೀಯ ಎಂದರಲ್ಲದೆ ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳಿಗೂ ಬೆಳಕಾಗಲಿ ಎಂದು ಶುಭಹಾರೈಸಿದರು. ರೋಟರಿ ಕ್ಲಬ್ ದೇರಳಕಟ್ಟೆಯ ಕಾರ್ಯದರ್ಶಿ ಜಯಪ್ರಕಾಶ್ ರೈ, ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಶೆಟ್ಟಿ , ಶಾಲಾ ಮುಖ್ಯೋಪಾಧ್ಯಾಯಿನಿ ನಹೀಮ್ ಹಮೀದ್, ಶಾಲಾ ವಿದಾರ್ಥಿ ನಾಯಕ ಶ್ರೇಯಶ್ ಉಪಸ್ಥಿತರಿದ್ದರು. ಶಿಕ್ಷಕಿ ಭಾರತಿ ಸ್ವಾಗತಿಸಿದರು, ಸಹ ಶಿಕ್ಷಕ ರಮೇಶ್…

Read More

UN NETWORKS ಉಳ್ಳಾಲ : ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಇದರ 35ನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಎಸ್ ಐ ಓ ಉಳ್ಳಾಲ ಶಾಖೆಯ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಇಂದು ಸುಮಯ್ಯಾ ಮಸೀದಿ ಹಿರಾ ನಗರ್ ಬಬ್ಬು ಕಟ್ಟೆಯಲ್ಲಿ ಬೆಳಗ್ಗೆ 7-30ಕ್ಕೆ ಸರಿಯಾಗಿ ಕಾರ್ಯಕ್ರಮ ನೆರೆವೇರಿತು. ಮುಖ್ಯ ಅಥಿತಿಯಾಗಿ ಆಗಮಿಸಿದ ಜಮಾಅತೇ ಇಸ್ಲಾಮಿ ವಲಯ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್ ಧ್ವಜಾರೋಹಣ ಮಾಡೂದರ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿದರು . “ಯುವಕರು ಸಮಾಜದ ಪುನರ್ನಿಮಾಣದ ಕಾರ್ಯದಲ್ಲಿರಬೇಕು ಯವ್ವನವನ್ನು ಹಾಳುಮಾಡಬಾರದು ಉತ್ತಮ ಸಮಾಜದ ವಕ್ತಾರರಾಗಬೇಕು ಎಂದರು ” . ಇನ್ನೋರ್ವ ಮುಖ್ಯ ಅತಿಥಿ ಎಸ್ ಐ ಓ ಉಳ್ಳಾಲ ಶಾಖೆಯ ಸ್ಥಾಪಕ ಅದ್ಯಕ್ಷರೂ ಸ್ಥಾನೀಯ ಜಮಾಅತ್ ಅಧ್ಯಕ್ಷರಾದ ಜನಾಬ್ ಅಬ್ದುಲ್ ಕರೀಂ ರವರು ಮಾತನಾಡುತ್ತಾ “ಎಸ್ ಐ ಓ ಧಾರ್ಮಿಕ ಜ್ಞಾನದೊಂದಿಗೆ ಸಾಮಾಜಿಕ ಕಳಕಳಿಯನನ್ನುಂಟು ಮಾಡುವ ಸಂಘಟನೆ ಇಂದು ದೇಶಾದ್ಯಂತ ಬೆಳೆದು 35 ವರ್ಷಗಳು ದಾಟಿದೆ ಇನ್ನೂ ಬೆಳೆಯಬೇಕು ಸಮಾಜದಲ್ಲಿ ಶಾಂತಿ ಸೌಹಾರ್ದತೆಗೆ…

Read More