UN NETWORKS ಮುಡಿಪು: ಪರಂಪರೆಯೊಂದಿಗೆ ಹೊಸತನವನ್ನು ಯಕ್ಷಗಾನಕ್ಕೆ ಪರಿಚಯಿಸುವುದರೊಂದಿಗೆ, ಯಕ್ಷಗಾನದಲ್ಲಿ ಆರೋಗ್ಯಕರ ವಾತಾವರಣವನ್ನು ಸೃಷ್ಟಿ ಮಾಡಿದವರಲ್ಲಿ ಹಿರಿಯ ಬಲಿಪ ನಾರಾಯಣ ಭಾಗವತರು ಪ್ರಮುಖರಾಗಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಹಿರಿಯ ಬಲಿಪರ ಕೊಡುಗೆ ಅಪಾರವಾದುದು ಎಂದು ಮಂಗಳೂರು ಸರಕಾರಿ ರಥಬೀದಿ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ನಾಗವೇಣಿ ಮಂಚಿ ಅವರು ಅಭಿಪ್ರಾಯ ಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಯಕ್ಷಮಂಗಳ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ `ಹಿರಿಯ ಬಲಿಪ ನಾರಾಯಣ ಭಾಗವತ’ ವಿಷಯದ ಕುರಿತು ಮಾತನಾಡಿದರು. ಯಕ್ಷಗಾನವು ಪರಂಪರೆಯೊಂದಿಗೆ ಸಮರ್ಥವಾಗಿರಬೇಕು ಎಂಬುದು ಹಿರಿಯ ಬಲಿಪ ನಾರಾಯಣ ಭಾಗವತರ ಆಶಯವಾಗಿತ್ತು. ಇದಕ್ಕಾಗಿ ಅವರು ಯಾವುದೇ ನಿಷ್ಟುರತೆಯನ್ನು ಎದುರಿಸಲು ಸಿದ್ಧರಿದ್ದರು. ಯಕ್ಷಗಾನ ಪದ್ಯಕ್ಕಿಂತ ಹೆಚ್ಚಾಗಿ ದೀರ್ಘವಾಗಿ ಅರ್ಥ ಹೇಳುವುದನ್ನೂ ಅವರು ವಿರೋಧಿಸುತ್ತಿದ್ದರು. ಹಿಂದಿನ ಕಾಲದಲ್ಲಿ ಭಾಗತವರು ಸೇರಿ ಹಿಮ್ಮೇಳ ಕಲಾವಿದರು ಪ್ರದರ್ಶನ ಮುಗಿಯುವ ವರೆಗೆ ನಿಂತುಕೊಂಡೇ ಇರಬೇಕಿತ್ತು. ಆದರೆ…
Author: UllalaVani
UN NETWORKS ಉಳ್ಳಾಲ: ಇಸ್ಲಾಹಿ ಮಹಿಳಾ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವವು 20.12.2017 ರವರೆಗೆ ಜರಗಲಿದ್ದು,20.12.2017 ರಂದು ಸಮಯ ಪೂರ್ವಾಹ್ನ ಗಂಟೆ 10.00 ಕ್ಕೆ ಕರ್ನಾಟಕ ಸರ್ಕಾರದ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವರಾದ ಮಾನ್ಯ ಯು.ಟಿ.ಖಾದರ್ ರವರು ಧ್ವಜಾರೋಹಣ ನೆರವೇರಿಸಿ,ಕ್ರೀಡೋತ್ಸವ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತಾಡಿದರು. ಹಾಗೂ ಜಮ್ಮು ಕಾಶ್ಮೀರದಲ್ಲಿ ಜರಗಿದ ರಾಷ್ಟ್ರ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಸ್ಪರ್ಧಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಸಭಾಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರಾದ ಜಿ.ಅಬ್ದುಲ್ ರಜಾಕ್‍ರವರು ವಹಿಸಿದರು.ಶಾಲಾ ಆಡಳಿತಾಟ್ರಸ್ಟಿಯವರು ಉಪಸ್ಥಿತರಿದ್ದರು,ವಿದ್ಯಾರ್ಧಿಯಾದ ಅಲಿಮಾಶಾಝ್ಮ್ ರವರು ಅಭಿನಂದಿಸಿದರು.ವಿದ್ಯಾರ್ಥಿಯಾದ ಹಂಝೀನರವರು ವಂದಿಸಿದರು,ಶಿಕ್ಷಕಿಯಾದ ನಿತಾಶ ಹಾಗೂ ಜುಲ್ಫಿ ಕಾಸಿಮ್ ರವರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಕಾರ್ಯಕ್ರಮದ ನಂತರ ಸಂಸ್ಥೆಯ ಸಲ್ ಸಬೀಲ್ ಮಸೀದಿಯ ರಸ್ತೆಯನ್ನು ಕರ್ನಾಟಕ ಸರ್ಕಾರದ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವರಾದ ಮಾನ್ಯ ಯು.ಟಿ.ಖಾದರ್‍ರವರು ಉದ್ಘಾಟಿಸಿ ಮಾತಾನಾಡಿದರು.
UN NETWORKS ಕಿನ್ಯಾ: ಕಿನ್ಯಾ ಗ್ರಾಮದ ಯುವ ಕಾಂಗ್ರೆಸ್ ಸಮಿತಿಯ ರಚನೆಯು ದಿನಾಂಕ 20-12-2017 ರಂದು ರಾತ್ರಿ 7:30 ಕ್ಕೆ ಬೆಳರಿಂಗೆ ಜಂಕ್ಷನ್ನಲ್ಲಿ ಮಂಗಳೂರು ವಿಧಾನ ಕ್ಷೇತ್ರದ ಯುವ ಅಧ್ಯಕ್ಷರಾದ ರವುಫ್ ಸಿ.ಎಂ.ರವರ ಅದ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯ ಸ್ವಾಗತವನ್ನು ಮಂಗಳೂರು ವಿಧಾನ ಸಬಾ ಕ್ಷೇತ್ರದ ಕಾರ್ಯದರ್ಶಿ ಫಾರೂಕ್ ಕಿನ್ಯಾ ನೆರೆವೇರಿಸಿದರು ನಂತರ . ಯುವ ಕಾರ್ಯಕರ್ತರ ಬಗ್ಗೆ ಸವಿಸ್ತಾರವಾಗಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬುಸಮೀರ್ ಪಜೀರ್ ಮಾತನಾಡಿದರು.ಕಿನ್ಯಾ ಯುವ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾದ ಅನ್ಸಾರ್ ಕಿನ್ಯ ಸಭೆಯ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡು ಸಮಿತಿಯ ಪಧಾಧಿಕಾರಿಗಳನ್ನು ಆಯ್ಕೆಮಾಡಿ ಪಕ್ಷದ ಧ್ವಜ ಮತ್ತು ಆದೇಶ ಪತ್ರ ನೀಡಿ ಗೌರವಿಸಿದರು. ಮುಂದಿನ ದಿನಗಳಲ್ಲಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿ ವಾರ್ಡ್ ಸಮಿತಿಗಳನ್ನು ರಚಿಸಲು ಕರೆನೀಡಿದರು. ಮುಖ್ಯ ಅತಿಥಿಯಾಗಿ ಬೆಳರಿಂಗೆ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷರಾದ ಉಮರ್ ಕುಞ ಹಾಗೂ ಅಲ್ಪಸಂಖ್ಯಾತ ಸದಸ್ಯರಾದ ಅಬೂಬಕರ್ ಹಾಜಿ ಕಲ್ಲಾಂಡ ಉಪಸ್ತಿತಿದ್ದರು. ಕೊನೆಯಲ್ಲಿ ನೂತನವಾಗಿ ಆಯ್ಕೆಯಾದ ಕಿನ್ಯ ಯುವ…
UN NETWORKS ಉಳ್ಳಾಲ:ಭಗವಾನ್ ಶ್ರೀರಾಮನನ್ನು ವರ್ಷಗಳಿಂದ ಕಟಕಟೆಯಲ್ಲಿ ನಿಲ್ಲಿಸುತ್ತಿರುವುದು ಖೇದಕರ ಸಂಗತಿ, ಮತ್ತೆ ವಿಚಾರಣೆಯನ್ನು ಮುಂದೂಡಲು ಪ್ರೇರೇಪಿಸುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ನಂತಹ ಹಿಂದೂ ಜನರೇ ಇದರಲ್ಲಿ ತೊಡಗಿಕೊಂಡಿರುವುದು ಹಿಂದು ಸಮಾಜದ ದುರಾದೃಷ್ಟ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ. ಅವರು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ , ಕುಂಪಲ ಹಿಂದು ಜಾಗರಣಾ ವೇದಿಕೆ ಓಂ ಶಕ್ತಿ ಘಟಕದ ಆಶ್ರಯದಲ್ಲಿ ಅಯೋಧ್ಯೆ ಶ್ರೀ ರಾಮ ಜನ್ಮಸ್ಥಾನದ ಮುಕ್ತಿ ಆಂದೋಲನದ ವಿಜಯೋತ್ಸವ ಅಂಗವಾಗಿ ಬುಧವಾರ ನಡೆದ 8 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಅಯೋಧ್ಯೆ ಚಳವಳಿ ದೇಶದ ಇತಿಹಾಸಕ್ಕೆ ಬಹುದೊಡ್ಡ ಸವಾಲಾಗಿದೆ. ದೇಶದ ಹಿತ ಕಾಯುವ ಪಕ್ಷ ಆಡಳಿತಕ್ಕೆ ಬರಲು ಚಳವಳಿಯಿಂದ ಸಾಧ್ಯವಾಗಿದೆ. ಇದೀಗ ಆಡಳಿತ ಕೈಯಲ್ಲಿರುವ ಸಂದರ್ಭ ಅಯೋಧ್ಯೆಯಲ್ಲಿ ಪವಿತ್ರ ರಾಮಜನ್ಮಭೂಮಿ ರಚಿಸಿಯೇ ಸಿದ್ದ. ಅದಕ್ಕಾಗಿ ಹಿಂದು ಸಮಾಜ ಒಗ್ಗಟ್ಟಾಗುವ ನೆಲೆಯಲ್ಲಿ ಇಂತಹ ಕಾರ್ಯಕ್ರಮ…
UN NETWORKS ಉಳ್ಳಾಲ: ಓಖಿ ಚಂಡಾಮಾರುತದ ಹಿನ್ನೆಲೆಯಲ್ಲಿ ಉಳ್ಳಾಲದಲ್ಲಿ ಕಂಡುಬಂದ ಸಮುದ್ರದ ಅಲೆಗಳ ನರ್ತನಕ್ಕೆ ಎರಡು ಮನೆಗಳು ಸಮುದ್ರ ಪಾಲಾದರೆ, ರೆಸಾರ್ಟಿಗೆ ನೀರು ನುಗ್ಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಂದಿ ದಿಕ್ಕು ಪಾಲಾಗಿ ಓಡಿ ಪಾರಾಗಿ , ಉಳ್ಳಾಲ, ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಹಲವು ಮನೆಗಳಿಗೆ ಅಲೆಗಳು ಅಪ್ಪಳಿಸಿ ಹಾನಿಗೀಡಾದ ಘಟನೆ ಶನಿವಾರ ತಡರಾತ್ರಿಯಿಂದ ಭಾನುವಾರ ಬೆಳಗ್ಗಿನವರೆಗೆ ಸಂಭವಿಸಿದೆ. ಉಳ್ಳಾಲ ಒಂಭತ್ತುಕೆರೆಯ ಸೀಸೈಡ್ ನಿವಾಸಿ ಫಿಲೋಮಿನಾ ಫೆರ್ನಾಂಡಿಸ್ ಮತ್ತು ಎವರೆಸ್ಟ್ ಅಲ್ಫೋನ್ಸ್ ಎಂಬವರಿಗೆ ಸೇರಿದ 30 ವರ್ಷಗಳ ಹಳೇಯ ಮನೆ ಸಂಪೂರ್ಣವಾಗಿ ಸಮುದ್ರಪಾಲಾಗಿವೆ. ಉಳ್ಳಾಲದ ಮೊಗವೀರಪಟ್ನ ಸಮೀಪದ ಸಮ್ಮರ್ ಸ್ಯಾಂಡ್ ರೆಸಾರ್ಟ್‍ನಲ್ಲಿ ಶನಿವಾರ ತಡರಾತ್ರಿ ನಡೆಯುತ್ತಿದ್ದ ಸಮಾರಂಭಕ್ಕೆ ನೀರು ನುಗ್ಗಿ , ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂದಿ ಆತಂಕಗೊಂಡು ದಿಕ್ಕುಪಾಲಾಗಿ ಓಡಿರುವ ಘಟನೆಯೂ ನಡೆದಿದೆ. ಚರ್ಚಿನಿಂದ ಬರುವಷ್ಟರಲ್ಲಿ ಮನೆಯೇ ಇರಲಿಲ್ಲ : ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ವಿಶೇಷ ಪೂಜೆಯ ನಿಮಿತ್ತ ಶನಿವಾರ ಸಂಜೆ ಎರಡು ಮನೆಗಳ ಉರ್ಬನ್ ಫೆರ್ನಾಂಡಿಸ್, ಫಿಲೋಮಿನಾ…
UN NETWORKS ಉಳ್ಳಾಲ: ಗ್ರಾಮದ ಜನರೊಂದಿಗೆ ಬೆರೆಯುತ್ತಾ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಿದ ಅಭಿವೃದ್ಧಿ ಅಧಿಕಾರಿಯ ಕಾರ್ಯವೈಖರಿಯಲ್ಲಿ ಇದ್ದ ಗೌರವಕ್ಕಾಗಿ ಅವರಿಗೆ ಎರಡು ಬಾರಿ ಬಂದಿದ್ದ ವರ್ಗಾವಣೆ ಆದೇಶವನ್ನು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಆಡಳಿತ ತಡೆದಿತ್ತು ಎಂದು ಮಂಜನಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಅಸೈ ವಳಚ್ಚಿಲ್ ಹೇಳಿದ್ದಾರೆ. ಮಂಜನಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರಗಿದ ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್ವರ ಭಂಡಾರಿ ಇವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉನ್ನತ ವ್ಯಾಸಾಂಗಕ್ಕಾಗಿ ತೆರಳುತ್ತಿರುವ ಅಭಿವೃದ್ಧಿ ಅಧಿಕಾರಿಗಳೇ ಮುಂದೆ ಪಂಚಾಯಿತಿಗೆ ಇ.ಓ ಆಗಿ ಬರಬೇಕು ಅನ್ನುವ ಆಶಯ ಗ್ರಾಮಸ್ಥರದ್ದಾಗಿದೆ. ಕಳೆದ ಏಳೂವರೆ ವರ್ಷಗಳ ದೀರ್ಘಾವಧಿಯನ್ನು ಒಂದೇ ಪಂಚಾಯಿತಿನಲ್ಲಿ ಯಶಸ್ವಿಯಾಗಿ ಪೂರೈಸಿದ ಏಕೈಕ ಅಭಿವೃದ್ಧಿ ಅಧಿಕಾರಿ ಪರಮೇಶ್ವರ್ ಆಗಿದ್ದಾರೆ. ಅವರ ಕಾಲಾವಧಿಯಲ್ಲಿ ಅನೇಕ ಅಭಿವೃದ್ಧಿ ಚಟುವಟಿಕೆಗಳು ನಡೆದಿದ್ದು, ಇದು ಗ್ರಾಮದ ಏಳಿಗೆಗೆ ಪೂರಕವಾಗಿತ್ತು ಎಂದರು. ಬೀಳ್ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ ಅಧಿಕಾರಿ ಪರಮೇಶ್ವರ್ ಭಂಡಾರಿ ಇವರು ಗ್ರಾಮೀಣಾಭಿವೃದ್ಧಿ ಕುರಿತ…
UN NETWORKS ಉಳ್ಳಾಲ: ತೊಕ್ಕೊಟ್ಟು ಭಾಗದಲ್ಲಿ ಸುಸಜ್ಜಿತ ಕಬ್ಬಡ್ಡಿ ಕೋರ್ಟಿನ ಅಗತ್ಯವಿದ್ದು, ಅದಕ್ಕಾಗಿ ನೂತನ ಸಮಿತಿ ವತಿಯಿಂದ ಸಮಬಂಧಪಟ್ಟವರ ಗಮನ ಸೆಳೆಯಲಾಗುವುದು ಎಂದು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮಂಗಳೂರು ಹಾಗೂ ಮಂಗಳೂರು ಗ್ರಾಮಾಂತರ ಸಮಿತಿ ಉಸ್ತುವಾರಿ ಹಾಗು ಉಪಾಧ್ಯಕ್ಷ ಕೆ.ಟಿ.ಸುವರ್ಣ ಹೇಳಿದ್ದಾರೆ. ಅವರು ಮಂಗಳೂರು ಗ್ರಾಮಾಂತರ ಅಮೆಚೂರು ಕಬ್ಬಡಿ ಎಸೋಸಿಯೇಷನ್ ಉಳ್ಳಾಲ ಇದರ ತೊಕ್ಕೊಟ್ಟು ಒಳಪೇಟೆಯ ಸುವರ್ಣ ಕಾಂಪ್ಲೆಕ್ಸ್ ನ ಆಮಂತ್ರಣ ಸಭಾಭವನದಲ್ಲಿ ಸೋಮವಾರ ಜರಗಿದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ತೊಕ್ಕೊಟ್ಟು ಮತ್ತು ಉಳ್ಳಾಲ ಭಾಗದ ಕಬ್ಬಡ್ಡಿ ತಂಡಗಳಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಹೆಸರು ತಂದವರಿದ್ದಾರೆ. ತೊಕ್ಕೊಟ್ಟು ಭಾಗದ ಕಬ್ಬಡ್ಡಿ ತಂಡಗಳು ನಂ.1 ಅನಿಸಿಕೊಂಡಿದೆ. ಅದನ್ನು ಉಳಿಸಿ ಮತ್ತೆ ಯುವಪೀಳಿಗೆಯನ್ನು ಆಟದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ನೂತನ ಸಮಿತಿಯನ್ನು ರಚಿಸಲಾಗಿದೆ. ಈ ಭಾಗದಲ್ಲಿ ಕಬ್ಬಡ್ಡಿ ಮ್ಯಾಟ್ ಸರಕಾರದಿಂದ ದೊರಕಿಸಿಕೊಡಲು ಸಂಬಂಧಿಸಿದ ಇಲಾಖೆಗೆ ಹಾಗೂ ಸಚಿವರಿಗೆ ಮನವಿ ಮಾಡಲಾಗಿದೆ. ಅಲ್ಲದೆ ಕಬ್ಬಡ್ಡಿಗಾಗಿ ಜಾಗವನ್ನು ಗುರುತಿಸಿ ಸುಸಜ್ಜಿತ ಕೋರ್ಟಿನ ರಚನೆಯಾಗಬೇಕಿದ್ದು, ಅದಕ್ಕಾಗಿ ಸಮಿತಿ…
UN NETWORKS ಕೊಣಾಜೆ: ನಮ್ಮ ದೇಶದಲ್ಲಿರುವ ವಿವಿಧ ಜಾತಿ, ಧರ್ಮ, ಸಂಸ್ಕೃತಿಗಳಲ್ಲಿ ವೈವಿಧ್ಯತೆಗಳಿರುವುದನ್ನು ನಾವು ಗಮನಿಸಬಹುದು ಆದರೆ ಅದರಲ್ಲಿ ಏಕತೆಯನ್ನು ಕಾಣಲು ಸಫಲರಾಗಿಲ್ಲ. ದೇಶದಲ್ಲಿ ಭಕ್ತಿ ಪರಂಪರೆಯಲ್ಲಿ ಮಾತ್ರ ಏಕತೆಯನ್ನು ಕಾಣಲು ಸಾಧ್ಯವಾಗಿದೆ ಎಂದು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಡಾ.ಎಚ್.ಎಸ್.ಶಿವಪ್ರಕಾಶ್ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾಲಯದ ಕನದಾಸ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ವಿವಿಯ ಒಳಾಂಗಣ ಸಭಾಂಗಣದಲ್ಲಿ ಬುಧವಾರ ಕನಕ ಜಯಂತಿ ಪ್ರಯುಕ್ತ ಕನಕ ತತ್ವಚಿಂತನ ಮತ್ತು ಕನಕಗಂಗೋತ್ರಿ ಕಾರ್ಯಕ್ರಮದ ಭಕ್ತಿ ಪರಂಪರೆಯ ಲೋಕಯಾನ ಮತ್ತು ಕನಕದಾಸರು, ಸಮಕಾಲಿನ ಸಂವಾದ ವಿಷಯದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಈ ವರೆಗೆ ಭಕ್ತಿ ಪರಂಪರೆಯ ಅಧ್ಯಯನಗಳು ಕೇವಲ ಸಾಹಿತ್ಯದ ಕಡೆಗೆ ಹೆಚ್ಚು ಗಮನ ಹರಿಸಿವೆ. ಅದರ ಕಾವ್ಯ, ಸಂಗೀತದ ಕಡೆಗೆ ಹೆಚ್ಚಿನ ಗಮನಹರಿಸಲಾಗಿಲ್ಲ. ಈ ಬಗ್ಗೆಯೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ. ಭಕ್ತಿ ಪರಂಪರೆಯಲ್ಲಿ ಪುರುಷ ಕೇಂದ್ರಿತ ಮೌಲ್ಯಗಳ ಬದಲು ಸ್ತ್ರೀವಾದ ತತ್ವಗಳುಲ್ಲ ಮೌಲ್ಯಗಳು ಬಿಂಬಿತವಾಗುತ್ತದೆ. ಇದೊಂದು ಸಾಂಸ್ಕೃತಿಕ ಅನನ್ಯತೆಯೂ ಹೌದು ಎಂದು ಹೇಳಿದರು.…
UN NETWORKS ಕೊಣಾಜೆ:ಮೌಢ್ಯ ನಿಷೇಧ ಕಾಯಿದೆ ಜಾರಿಗೆ ತರುವ ಮೊದಲು ಅಂಧಾನುಕರಣೆಯನ್ನು ತಡೆಯುವ ಪ್ರಯತ್ನ ಆಗಬೇಕು. ಆಯಾ ಪ್ರದೇಶಕ್ಕೆ ಹೊಂದಿಕೆಯಾಗುವ ಉಡುಪು, ಆಹಾರ, ಸಂಸ್ಕೃತಿಯ ಪಾಲನೆ ಅತ್ಯಗತ್ಯ ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸವಾರಿಯಲ್ಲಿರುವ ಶ್ರೀಗಳು ಬುಧವಾರ ಕೋಳ್ಯೂರು ವಲಯದ ಕೊಣಾಜೆ ಶಂಕರ ಭಟ್ ಅವರ ಮನೆಯಲ್ಲಿ ಭಿಕ್ಷಾಸೇವೆ ಸ್ವೀಕರಿಸಿದ ಬಳಿಕ ಆಶೀರ್ವಚನ ನೀಡಿದರು. ಪ್ರಾಚೀನ ಕಾಲದ ಉಡುಗೆ ತೊಡುಗೆ, ಶೈಲಿಯನ್ನು ಗಮನಿಸಿದರೆ ಮಹಿಳೆಯರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪುರುಷರು ಸಾಂಸ್ಕøತಿಕ ಉಡುಪು ಧರಿಸುವುದರಿಂದ ವಿಮುಖರಾಗಿದ್ದಾರೆ. ಶಿಖೆ, ತಿಲಕ, ಪಂಚೆ ಇತ್ಯಾದಿಗಳನ್ನು ಧರಿಸುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಮಠ ಮಂದಿರಗಳಿಗೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮಗಳಲ್ಲಾದರೂ ಉಡುಗೆಯ ಶಿಷ್ಟಾಚಾರ ಉಳಿದುಕೊಂಡಿರುವುದು ಸಮಾಧಾನಕರ ಅಂಶ ಎಂದ ಅವರು, ಸಂಸ್ಕøತಿ ಉಳಿಸುವುದು, ಜಾಗೃತಿ ಮೂಡಿಸುವುದೇ ಗುರುಭಿಕ್ಷೆಯಂತಹ ಆಚರಣೆಗಳ ಉದ್ದೇಶ ಎಂದು ವಿವರಿಸಿದರು. ಅತ್ಯಂತ ನಿಖರವಾದ ವೈಜ್ಞಾನಿಕ ಹಿನ್ನೆಗಳನ್ನೊಳಗೊಂಡ ಭಾರತೀಯ ಸಂಸ್ಕೃತಿಯ ಎಲ್ಲಾ ಆಚರಣೆಗಳಿಗೆ ಸಕಾರಾಣಾತ್ಮಕವಾದ…
UN NETWORKS ಕೋಟೆಕಾರು: ಕೋಟೆಕಾರು ವ್ಯವಸಾಯ ಬ್ಯಾಂಕ್ ನ ಮೂವರು ಸೆಕ್ಯೂರಿಟಿ ಸಿಬ್ಬಂದಿಗಳು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಿಗ್ಗೆ ಕೋಟೆಕಾರು ವ್ಯವಸಾಯ ಬ್ಯಾಂಕಿನಲ್ಲಿ ನಡೆದಿದು, ಸಿಡಿಲು ಬಡಿದು ಮೂವರು ಮೃತ ಪಟ್ಟಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಉಮೇಶ್, ಸೋಮನಾಥ್, ಹಾಗೂ ಸಂತೋಷ್ ಮೃತ ದುರ್ದೈವಿಗಳು. ಸೋಮವಾರ ಡಿಢೀರನೇ ಸುರಿದ ಸಿಡಿಲು, ಮಿಂಚು ಗಾಳಿ ಮಳೆಯ ಪರಿಣಾಮ ವಿದ್ಯುತ್ ತಗಲಿ ಬ್ಯಾಂಕಿನ ಒಳಗಿದ್ದ ಸೆಕ್ಯೂರಿಟಿ ಸಿಬ್ಬಂದಿಗಳು ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದ್ದು ಮತ್ತಷ್ಟು ಮಾಹಿತಿಗಳು ಇನ್ನಷ್ಟೇ ತಿಳಿಯಬೇಕಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ

