UN NETWORKS ದೇರಳಕಟ್ಟೆ : ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಬೆಂಗಳೂರು ಇವರು ಆಯೋಜಿಸಿದ್ದ ರಾಜ್ಯ ಮಟ್ಟದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ದೇರಳಕಟ್ಟೆ ಬಗಂಬಿಲ ಇಲ್ಲಿನ ಅಸ್ಸಿಸಿ ಸೆಂಟ್ರಲ್ ಶಾಲೆಯ 29 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, ಶೇ. 100 ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಪ್ರಿನ್ಸಿಯಾ ಡಿ.`ಸೋಜ, ಫಾತಿಮತುಲ್ ಶಾಹಿಮ, ದಿಥೀಮ್ ಸಾಜಿ, ಅನ್ಸಾಫ್ ಅಬ್ಬಾಸ್, ಸಿ.ಚಿರಾಗ್ ವಿಶಿಷ್ಟ ಶ್ರೇಣಿ, 10 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 14 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
Author: UllalaVani
UN NETWORKS ಮಂಗಳೂರು: ಸರಕಾರಿ ಕಾಲೇಜುಗಳು ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಂಸ್ಥೆಯಾಗಿದ್ದು, ಕಷ್ಟದಲ್ಲಿ ಕಲಿಯುವಾಗ ನಮಗೆ ಜೀವನದ ಪಾಠ ಕಲಿಯಲು ಸಹಕಾರಿಯಾಗಿದ್ದು, ಅಂತಹ ವಿದ್ಯಾರ್ಥಿಗಳು ಸಾಧನೆ ಮಾಡಿ ದೊಡ್ಡ ಸ್ಥಾನಕ್ಕೆ ತಲುಪಲು ಸಾದ್ಯವಾಗುತ್ತದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಜೆ.ಆರ್.ಲೋಬೋ ಅಭಿಪ್ರಾಯಪಟ್ಟರು. ಮಂಗಳೂರು ರಥಬೀದಿಯ ಡಾ| ಪಿ.ದಯಾನಂದ ಪೈ, ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಶಿಕ್ಷಕ – ರಕ್ಷಕ ಸಂಘದ ವಾರ್ಷಿಕೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.ಬಡತನ ಎಂಬುದು ಶಾಪವಲ್ಲ ಅದೊಂದು ವರ. ನಾನೂ ಕೂಡಾ ಬಡತನದ ಕುಟುಂಬದಿಂದ ಬಂದಿದ್ದು ಅದು ನನಗೆ ವರವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಇಂತಹ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕಾಲೇಜಿನೊಂದಿಗೆ ಅವಿನಾಭಾವ ಸಂಬಂಧ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತೆ. ಹೆತ್ತವರಿಗೆ ತಮ್ಮ ಮಕ್ಕಳು ಈ ಕಾಲೇಜಿನಲ್ಲಿ ಯಾವ ರೀತಿಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಯಾವ…
UN NETWORKS ವೇಣೂರು: ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಕೋಳಿ ಸಾಗಾಟದ ಲಾರಿ ವೇಣೂರು ಶ್ರೀರಾಮ ನಗರದ ಮೂಡಬಿದಿರೆ ತಿರುವಿನ ರಾಜ್ಯ ಹೆದ್ದಾರಿಯ ಬದಿ ನಿಲ್ಲಿಸಲಾಗಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿಯೊಡೆದು ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಸಂಚರಿಸಿ ಮಗುಚಿ ಬಿದ್ದಿದೆ. ಬೈಕ್ ಸವಾರ ವೇಣೂರು ಕರಿಮಣೇಲು ನಿವಾಸಿ ಉದಯ ಕುಮಾರ್ ಸೇಮಿತ ಅವರು ತೀವ್ರ ತರಹದ ಗಾಯಕ್ಕೊಳಗಾಗಿದ್ದು, ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಬೈಕ್‌ನಲ್ಲಿದ್ದ ಪುತ್ರಿ ಸೇರಿದಂತೆ ಮತ್ತೊಬ್ಬಳು ವಿದ್ಯಾರ್ಥಿನಿ ಅಲ್ಪ ಪ್ರಮಾಣದ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ. ಬೆಳಿಗ್ಗೆ 7.30ರ ಸುಮಾರಿಗೆ ಉದಯ ಕುಮಾರ್ ಸೇಮಿತರು ಕಾಲೇಜಿಗೆ ತೆರಳುವ ಇಬ್ಬರು ಮಕ್ಕಳನ್ನು ಬೈಕ್‌ನಲ್ಲಿ ಕುಳ್ಳಿರಿಸಿ ಕರಿಮಣೇಲುವಿನಿಂದ ವೇಣೂರು ಮುಖ್ಯಪೇಟೆಗೆ ತಲುಪುತ್ತಿದ್ದಂತೆ ಅಜಾಗರುಕತೆಯಿಂದ ಎದುರಿನಿಂದ ಬಂದ ಕೋಳಿ ಸಾಗಾಟದ ಲಾರಿ ಪೊಲೀಸ್ ವಾಹನಕ್ಕೆ ಡಿಕ್ಕಿಯೊಡೆದು ಬಳಿಕ ಇವರ ಬೈಕ್‌ಗೆ ಡಿಕ್ಕಿಯೊಡೆದಿದೆ. ಕೆಲವೇ ಕ್ಷಣಗಳಲ್ಲಿ ಹೆದ್ದಾರಿಯಲ್ಲಿ ಬಂದ ಅಂಬ್ಯುಲೆನ್ಸ್ ಮೂಲಕ ಇಬ್ಬರು ಮಕ್ಕಳನ್ನು…
UN NETWORKS ಉಳ್ಳಾಲ: ಯುವಸಮುದಾಯ ಧರ್ಮ ದ್ವೇಷ ಮಾಡಿಕೊಂಡು ಬಾಳುವ ವ್ಯವಸ್ಥೆಯನ್ನು ಕೆಲ ಶಕ್ತಿಗಳು ನಿರ್ಮಿಸುತ್ತಿದೆ. ಆದರೆ ದೇಶದಲ್ಲಿ ಬಹುದೊಡ್ಡ ಸಮಸ್ಯೆಯಾಗಿರುವ ಬಡತನ-ಶ್ರೀಮಂತ ತಾರತಮ್ಯದ ವಿರುದ್ಧ ಹೋರಾಟ ನಡೆಸುವಂತಹ ವಾತಾವರಣ ನಿರ್ಮಾಣವಾಗಬೇಕಿದ್ದು, ಈ ನಿಟ್ಟಿನಲ್ಲಿ ಡಿವೈಎಫ್ ಐ ಕಾರ್ಯಾಚರಿಸುತ್ತಿದೆ ಎಂದು ಡಿ ವೈ ಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಅವರು ಡಿವೈಎಫ್ ಐ ಮುನ್ನೂರು ಗ್ರಾಮ ಸಮಿತಿ ವತಿಯಿಂದ ಕುತ್ತಾರು ಜಂಕ್ಷನ್ನಿನಲ್ಲಿ ಬುಧವಾರ ಸಂಜೆ ನಡೆದ ಸದಸ್ಯತ್ವ ಅಭಿಯಾನ ಹಾಗೂ ಸಾರ್ವಜನಿಕ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ಧರ್ಮದಲ್ಲಿ ಶ್ರೀಮಂತರಿದ್ದಾರೆ. ಅದೇ ರೀತಿ ಊಟಕ್ಕೆ ಪರದಾಡುವಂತಹ ಬಡವರೂ ಕೂಡಾ ಇದ್ದಾರೆ. ಐಷಾರಾಮಿ ಜೀವನ ನಡೆಸುವ ಯುವಕರು ಒಂದೆಡೆಯಿದ್ದರೆ, ಇನ್ನೊಂದೆಡೆ ಕೆಲಸವಿಲ್ಲದೆ ರಸ್ತೆಬದಿಯಲ್ಲಿ ಜೀವನ ಕಳೆಯುವ ಯುವಕರು ದೇಶದಲ್ಲಿದ್ದಾರೆ. ಆದರೆ ಯುವಕರನ್ನು ಧರ್ಮ ದ್ವೇಷ ಮಾಡಿಕೊಂಡು ಬಾಳುವಂತಹ ಸ್ಥಿತಿಯನ್ನು ನಿರ್ಮಿಸಲಾಗುತ್ತಿದೆ. ವಾಸ್ತವವಾಗಿ ಬಡವ-ಶ್ರೀಮಂತ ತಾರತಮ್ಯವನ್ನು ದೂರವಾಗಿಸಿ ಸಮಾನತೆಯ ಜೀವನ ನಡೆಸುವ ಸಲುವಾಗಿ ಯುವಕರು ತಮ್ಮನ್ನು ತೊಡಗಿಸಿಕೊಳ್ಳುವ ಅನಿವಾರ್ಯತೆ ಇದೆ.…
UN NETWORKS ಉಳ್ಳಾಲ: ಗಂಟಲು ಕ್ಯಾನ್ಸರಿನ ಶುಶ್ರೂಷೆಯಲ್ಲಿ ವೈದ್ಯಕೀಯ ಕ್ಷೇತ್ರ ಮುಂಚೂಣಿಯಲ್ಲಿದ್ದು, ಆಧುನಿಕ ಚಿಕಿತ್ಸಾ ವಿಧಾನಗಳಿಂದ ರೋಗಿಗಳ ಆರೈಕೆ ಸರಳವಾಗುತ್ತಾ ಮುಂದುವರಿದಿದೆ ಎಂದು ದೇರಳಕಟ್ಟೆಯ ನಿಟ್ಟೆ ವಿವಿ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು. ದೇರಳಕಟ್ಟೆಯ ಕೆ. ಎಸ್. ಆಡಿಟೋರಿಯಂನಲ್ಲಿ ನವದೆಹಲಿಯ ರಿಹ್ಯಾಬಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ ಸಹಯೋಗದೊಂದಿಗೆ ನಿಟ್ಟೆ ವಿವಿ ವಾಕ್ ಶ್ರವಣ ವಿಭಾಗದ ಆಶ್ರಯದಲ್ಲಿ ಗುರುವಾರನಡೆದ ಎನ್ ಐ-ವ್ಯಾಟ್ ಮಂಗಳೂರು- 2018 ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ಗಂಟಲು ಕ್ಯಾನ್ಸರ್ ಹೊಂದಿದವರ ಚಿಕಿತ್ಸೆ ಅಸಾಧ್ಯವಾಗಿತ್ತು. ಕ್ರಮೇಣ ರೋಗಶಾಸ್ತ್ರಜ್ಞರು, ಅರಿವಳಿಕೆ ತಜ್ಞರ ಆರಂಭದಿಂದ ಗಂಟಲು ರೋಗಿಗಳ ಚಿಕಿತ್ಸೆಯಲ್ಲಿ ಮಹತ್ತರ ಬದಲಾವಣೆ ಕಂಡಿತ್ತು. ರೋಗಿಗಳಿಗೆ ಪುನರ್ವಸತಿ ನೀಡುವ ಸಲುವಾಗಿ ಲೆರಿಂಗಾಕ್ಟಮಿ ಕ್ಲಬ್‍ನ ಆರಂಭವಾಯಿತು. ನಿಟ್ಟೆ ವಿ.ವಿ ಪ್ರತಿವರ್ಷ ಕೂಡಾ ಗಂಟಲು ಸಂಬಂಧಿ ಚಿಕಿತ್ಸೆಗಳ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈ ಮೂಲಕ ನುರಿತ ವೈದ್ಯರು ಹೆಚ್ಚಿನ ಜ್ಞಾನ ಸಂಪಾದಿಸಲು ಸಾಧ್ಯವಾಗಿದೆ ಎಂದರು. ನಿಟ್ಟೆ ವಿವಿ ಸಹ ಕುಲಾಧಿಪತಿ ಪ್ರೊ…
UN NETWORKS ಇರಾ : ಇರಾ ಗ್ರಾಮದ ಹಿಂದು ಭಾಂದವರ ಬಹುಕಾಲದ ಬೇಡಿಕೆಯಾಗಿದ್ದು ಗ್ರಾಮಕ್ಕೊಂದು ಸುಸಜ್ಜಿತ ಸ್ಮಶಾನ ನಿರ್ಮಾಣದ ಕಲ್ಪನೆಯಂತೆ ಇರಾ ಸೈಟ್ ಎಂಬಲ್ಲಿ ಈಗಾಗಲೇ 3 ತಿಂಗಳ ಹಿಂದೆ ಅಧಿಕೃತವಾಗಿ ಸರಕಾರದಿಂದ ಹಿಂದು ರುದ್ರಭೂಮಿಗಾಗಿ ಮಂಜೂರುಗೊಂಡ ಜಮೀನಿನಲ್ಲಿ ಗ್ರಾಮ ಪಂಚಾಯತ್ ಮುಖಾಂತರ ನಿರ್ಮಾಣಗೊಳ್ಳಲಿರುವ ಹಿಂದು ರುದ್ರಭೂಮಿ ಕಾಮಗಾರಿಗೆ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕ ಸಚಿವರಾದ ಯು.ಟಿ.ಖಾದರವರ ಶಿಫಾರಸ್ಸಿನ ಮೇರೆಗೆ ಮಂಜೂರುಗೊಂಡ 4ಲಕ್ಷ ರೂಪಾಯಿ ಅನುದಾನದ ಆದೇಶ ಪತ್ರವನ್ನು ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಶಶಿಕಾಂತ್ ಸೆಂಥಿಲ್ ರವರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಯವರಿಗೆ ಹಸ್ತಾಂತರಿಸಿದರು. ಅನುದಾನ ಬಿಡುಗಡೆಗೊಳಿಸುವಲ್ಲಿ ಸಹಕರಿಸಿದ ಬಂಟ್ವಾಳ ತಹಶಿಲ್ದಾರ್ ಪುರಂದರ ಹೆಗ್ಡೆ, ,ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ,ಧಾರ್ಮಿಕ ದತ್ತಿ ತಹಶಿಲ್ದಾರ್ ಪ್ರಭಾಕರ್, ಕಂದಾಯ ನಿರೀಕ್ಷಕರಾದ ರಾಮ, ಇರಾ ಗ್ರಾಮ ಕರಣಿಕರರಾದ ಎ.ಪಿ.ಭಟ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಳಿನಿ ಎ.ಕೆ, ಹಾಗೂ ಕಂದಾಯ ಇಲಾಖೆಯ…
UN NETWORKS ಕೊಣಾಜೆ: ನಮ್ಮ ಗ್ರಾಮ, ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದರೊಂದಿಗೆ ಸಮಾಜದ ಅಭಿವೃದ್ಧಿಯಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು. ಗ್ರಾಮದ ಅಭಿವೃದ್ಧಿಯಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಎಷ್ಟು ಜವಾಬ್ಧಾರಿ ಇದೆಯೋ ಅಷ್ಟೇ ಜವಬ್ಧಾರಿ ಗ್ರಾಮದ ಪ್ರತಿಯೊಬ್ಬನಿಗೂ ಇದೆ. ಆದ್ದರಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ಕೊಣಾಜೆ ಪಂಚಾಯಿತಿಯ ಮಾಜಿ ಮಂಡಲ ಪ್ರಧಾನರು ಹಾಗೂ ಜಿಲ್ಲಾ ಕಾಂಗ್ರೆಸ್‍ನ ಉಪಾಧ್ಯಕ್ಷರಾದ ಟಿ.ಎಸ್.ಅಬ್ದುಲ್ಲಾ ಸಾಮಾಣಿಗೆ ಅವರು ಅಭಿಪ್ರಾಯಪಟ್ಟರು. ಅವರು ಕೊಣಾಜೆ ಗ್ರಾಮ ಪಂಚಾಯಿತಿ ಬಳಿ ನೆಹರೂ ಯುವ ಕೇಂದ್ರ ಮಂಗಳೂರು, ಮಂಗಳ ಗ್ರಾಮೀಣ ಯುವಕ ಸಂಘ ಕೊಣಾಜೆ, ಕೊಣಾಜೆ ಗ್ರಾಮ ಪಂಚಾಯಿತಿ, ಜನಶಿಕ್ಷಣ ಟ್ರಸ್ಟ್, ವಿಜಯಗ್ರಾಮಾಭಿವೃದ್ಧಿ ಪ್ರತಿಷ್ಠಾನ ಹಾಗೂ ಸಹ ಸಂಘಟನೆಗಳ ಆಶ್ರಯದಲ್ಲಿ ಮಂಗಳವಾರ ನಡೆದ `ನೆರೆಹೊರೆ-ಯುವಸಂಸತ್ತು’ ಕೇಂದ್ರ ಪುರಸ್ಕøತ ಯೋಜನೆಗಳು ಹಾಗೂ ಅನುಷ್ಠಾನದಲ್ಲಿ ಸಮುದಾಯ ಸಂಘಟನೆಗಳ ಪಾತ್ರಗಳ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೊಣಾಜೆ ಗ್ರಾಮ ಪಂಚಾಯಿತಿ ಗ್ರಾಮದ ಸ್ವಚ್ಚತೆ, ಶಿಕ್ಷಣ ಸೇರಿದಂತೆ ಹಲವಾರು ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಅಲ್ಲದೆ ಹಿಂದೆ ಮಂಡಲ…
UN NETWORKS ಉಳ್ಳಾಲ: ಎಳೆಯರಲ್ಲಿ ಭಾಷೆ ಕುರಿತು ಪ್ರೀತಿಯನ್ನು ಹುಟ್ಟಿಸುವ ಕಾರ್ಯ ಆಗಬೇಕಿದೆ. ಸುತ್ತಮುತ್ತಲಿನ ಸಂಪತ್ತನ್ನು ಹಾಡಿ ಹೊಗಳಿದರೆ ಸಾಲದು, ಮುಂದಿನ ಪೀಳಿಗೆಗೆ ಅದರ ಅರಿವು ಮೂಡದೇ ಇದ್ದಲ್ಲಿ ಪ್ರಯೋಜನವಿಲ್ಲ. ಎಂದು ತುಳು ಸಾಹಿತಿ ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಅವರು ನಿಟ್ಟೆ (ಸ್ವಾಯುತ್ತೆ ಆಗಲಿರುವ ವಿ.ವಿ) ವತಿಯಿಂದ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ಬುಧವಾರ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಾತೃಭಾಷಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಷೆಗಳ ಪ್ರಾಚೀನತೆ 1,000 ವರ್ಷಕ್ಕಿಂತಲೂ ಹಿಂದಿನದ್ದು, ತುಳುನಾಡ ಜನರ ಇಚ್ಛಾಶಕ್ತಿ ಕೊರತೆಯಿಂದ ಭಾಷೆಯ ಮೇಲಿನ ಮಮಕಾರ ಕಳೆದುಹೋಗಿದೆ. ಇದರಿಂದ ಶಾಸ್ತ್ರೀಯ ಭಾಷೆಯ ಸ್ಥಾನಮಾನ ತುಳು ಭಾಷೆಗೆ ಇನ್ನೂ ಬಂದಿಲ್ಲ. ಪಂಚದ್ರಾವಿಡ ಭಾಷೆಗಳಲ್ಲಿ ಇತರೆ ನಾಲ್ಕು ಭಾಷೆಗಳೂ ಸಾಂವಿಧಾನಿಕವಾಗಿ ಸೇರ್ಪಡೆಗೊಂಡಿದ್ದರೆ, ತುಳು ಸೇರ್ಪಡೆಯಾಗಿಲ್ಲ. ಇದರಿಂದ ಭಾಷೆ, ಭಾಷಿಗರಿಗೆ ಹಿನ್ನೆಡೆಯಾಗಿದೆ. ಕನ್ನಡದಷ್ಟೇ ಪ್ರಭಾವಿ ಭಾಷೆ ತುಳುವನ್ನು ಜಿಲ್ಲೆಯ ಭಾಷೆಯನ್ನಾಗಿ ಮಾಡಲು ಈವರೆಗೆ ಸಾಧ್ಯವಾಗಿಲ್ಲ. ಸಾಂವಿಧಾನಿಕವಾಗಿ ಸೇರ್ಪಡೆಗೊಳ್ಳದೇ ಇದ್ದಲ್ಲಿ ಅಧಿಕೃತವಾಗಿ ಭಾಷೆಯನ್ನು ಎಲ್ಲಿಯೂ…
UN NETWORKS ಇರಾ: ರಾಜ್ಯದ ಆಹಾರ ಮತ್ತು ನಾಗರೀಕ ಪೊರೈಕೆ ಸಚಿವರಾದ ಯು.ಟಿ.ಖಾದರ್ ರವರ ಅನುದಾನದಿಂದ ಇರಾ ಗ್ರಾಮದ ದರ್ಕಾಸ್ ಗ್ರಾಮ ಪಂಚಾಯತ್ ಸಂಪರ್ಕ ರಸ್ತೆ ಡಾಮರೀಕರಣ ಕಾಮಗಾರಿಗೆ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ ರವರು ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಪಂಚಾಯತ್ ಸದಸ್ಯರಾದ ಎಮ್.ಬಿ.ಉಮರ್, ಮೊಹಿದಿನ್ ಕುಂಞ ,ರಮೇಶ್ ಪೂಜಾರಿ ,ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮುರಲೀದರ್ ಭಂಡಾರಿ ,ಅನಿಲ್ ಸೂತ್ರಬೈಲ್ ,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಮುರಳಿ, ಗ್ರಾಮದ ಸ್ಥಳೀಯರಾದ ವಿಶ್ವನಾಥ್ ಕೊಟ್ಟಾರಿ, ಚಂದ್ರಶೇಖರ್ ,ಬಶೀರ್ ಇರಾ, ಶ್ರೀಧರ ಬೆಳ್ಚಡ ,ಹನೀಫ್ ಪರಪ್ಪು ,ಮುಂತಾದ ಗಣ್ಯರು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ತ್ರಿವಳಿ ತಲಾಖ್ ವಿರುದ್ಧ ಕಾನೂನು ಹೊರಡಿಸುವ ಹಿಂದೆ ಫ್ಯಾಸಿಸ್ಟ್ ಶಕ್ತಿಗಳ ಕುತಂತ್ರ, ಅಜೆಂಡಾ ಹಾಗೂ ಷಡ್ಯಂತ್ರವಿದೆ. ಇದನ್ನು ಮುಸ್ಲಿಂ ಸಮುದಾಯ ಒಕ್ಕೊರಲಿನಿಂದ ವಿರೋಧಿಸಬೇಕಿದೆ ಎಂದು ಎಸ್ ಡಿಪಿಐ ಜಿಲ್ಲಾ ಮುಖಂಡ ಅಶ್ರಫ್ ಎ.ಕೆ ಹೇಳಿದ್ದಾರೆ. ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ವಿಧಾನಸಭಾ ಕ್ಷೇತ್ರ ವತಿಯಿಂದ ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಗೊಳಿಸಿರುವುದನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ಪ್ರತಿಭಟನೆಯ ಪ್ರಯುಕ್ತ ದೇರಳಕಟ್ಟೆ ಜಂಕ್ಷನ್ನಿನಲ್ಲಿ ಮಂಗಳವಾರ ಆಯೋಜಿಸಲಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಮುಸ್ಲಿಂ ಸಹೋದರಿಯರನ್ನು ಹತ್ಯೆಗೈದು ಅಧಿಕಾರ ಸ್ವೀಕರಿಸಿಕೊಂಡ ಕೇಂದ್ರದ ಮೋದಿ ಸರಕಾರಕ್ಕೆ, ಮುಸ್ಲಿಂ ಮಹಿಳೆಯರ ಮೇಲೆ ಅತೀವ ಕಾಳಜಿಯನ್ನು ತೋರಿಸುತ್ತಿದೆ. ಕಾಳಜಿ ಪ್ರದರ್ಶಿಸುವ ಮುನ್ನ ಗುಜರಾತಿನಲ್ಲಿ ಹತ್ಯೆಗೀಡಾದ ಮುಸ್ಲಿಂ ಗರ್ಭಿಣಿ ಮಹಿಳೆ ಸೇರಿದಂತೆ ಇತರೆ ಮಹಿಳೆಯರು ಹಾಗೂ ವಿಧವೆಯರನ್ನಾಗಿ ಮಾಡಿದವರನ್ನು ಮುಂಚಿತವಾಗಿ ಸಹೋದರಿಯರನ್ನಾಗಿ ಸ್ವೀಕರಿಸಲಿ. ದೇಶದ ಸಂವಿಧಾನದಲ್ಲಿ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾದಲ್ಲಿ ಸೂಕ್ತ ಕಾನೂನುಗಳಿವೆ. ಆದರೆ ಏಕಾಏಕಿ ತ್ರಿವಳಿ ತಲಾಖ್ ವಿರುದ್ಧ ಕಾನೂನು ಹೊರಡಿಸುವ…

