UN NETWORKS
ಉಳ್ಳಾಲ: ಗ್ರಾಮೀಣ ಪ್ರದೇಶದ ಸೇವೆಯೊಂದಿಗೆ ನಾಯಕತ್ವ ಗುಣ ಬೆಳೆಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಪೂರಕ ಎಂದು ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಡೀನ್ ಡಾ| ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು.
ನಿಟ್ಟೆ ಉಷಾ ನರ್ಸಿಂಗ್ ಕಾಲೇಜು, ನಿಟ್ಟೆ ವಿಶ್ವ ವಿದ್ಯಾನಿಲಯದ ಎನ್ಎಸ್ಎಸ್ ಘಟಕದ ಆಶ್ರಯದಲ್ಲಿ ಪಜೀರುವಿನ ಅನುದಾನಿತ ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ನಿಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೋ| ಡಾ| ಫಾಟಿಮ ಡಿ’ಸಿಲ್ವಾ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷ ಎಂ. ಸೀತಾರಾಮ ಶೆಟ್ಟಿ, ನಿಟ್ಟೆ ವಿಶ್ವ ವಿದ್ಯಾನಿಲಯದ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ| ಸುಮಲತ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ಸಿ| ಇನೆಟ್ ಡಿ’ಸೋಜ, ಎಸ್ಡಿಎಮ್ಸಿ ಅಧ್ಯಕ್ಷೆ ಜ್ಯೋತಿ ಪ್ರೆಸಿಲ್ಲಾ ಕ್ತಾಸ್ತಾ, ಪಜೀರು ವಾರ್ಡ್ ಸದಸ್ಯೆ ಫ್ಲೋರಿನ್, ಶೇಖರ್, ವೀಣಾ, ಕ್ಷೇಮ ಮಾನಸಿಕ ವಿಭಾಗದ ಮುಖ್ಯಸ್ಥ ಡಾ| ಸತೀಶ್ ರಾವ್, ಉಪ ಪ್ರಾಂಶುಪಾಲೆ ಸಬಿತ ನಾಯಕ್, ಎನ್ಎಸ್ಎಸ್ ಅಧಿಕಾರಿ ಸುಚಿತ್ರಾ, ಕ್ಲೀಟಾ ಪಿಂಟೋ ಉಪಸ್ಥಿತರಿದ್ದರು.
ಶಿಬಿರ ಅ.28ರವರೆಗೆ ಪಜೀರುವಿನಲ್ಲಿ ನಡೆಯಲಿದೆ.



