UN NETWORKS ಉಳ್ಳಾಲ: ಮಾ. 3ರಿಂದ 6ರ ತನಕ ನಡೆಯಲಿರುವ ಮಂಗಳೂರು ಚಲೋ ನಾಡಜನರ ರಕ್ಷಣೆಗಾಗಿ ಜನಸುರಕ್ಷಾ ಯಾತ್ರೆಯಲ್ಲಿ ಮಂಗಳೂರು ಕ್ಷೇತ್ರದಿಂದ ಸುಮಾರು 10,000 ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಹೇಳಿದರು. ತೊಕ್ಕೊಟ್ಟಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಒಂದು ಕಡೆಯಿಂದ ಅಭಿವೃದ್ಧಿ ಮಂತ್ರ ಪಠಿಸುತ್ತಿದ್ದುಇನ್ನೊಂದೆಡೆ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ನಿರಂತರ ನಡೆಯುತ್ತಿದ್ದರೂ ಕೈಕಟ್ಟಿ ಕುಳಿತಿದೆ. ಕೇವಲ ಮಂಗಳೂರು ಕ್ಷೇತ್ರದಲ್ಲಿಈಗಾಗಲೇ ರಾಜೀವ ಕೋಟ್ಯಾನ್, ಝುಬೈರ್ ಅವರಂತಹ ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆದಿದೆ. ಕಾಂಗ್ರೆಸ್ ಸರಕಾರ ಆಡಳಿತ ಎಲ್ಲ ವಿಧದಲ್ಲಿ ವೈಫಲ್ಯ ಕಂಡಿದ್ದು ಆಡಳಿತವನ್ನು ವಿರೋಧಿಸಿ ಮಂಗಳೂರು ಚಲೋ ನಡೆಯಲಿದೆ. ಮಂಗಳೂರು ಚಲೋ ಕಾರ್ಯಕ್ರಮಕ್ಕೆ ಮುನ್ನ ಬೋಳಿಯಾರಿನಲ್ಲಿ ಕಾರ್ಯಕರ್ತರಿಗಾಗಿ ಮಾ. 2ರಂದು ಬೆಳಗ್ಗೆ 9.00ಗಂಟೆಗೆ ನವಶಕ್ತಿ ಕಾರ್ಯಕ್ರಮ ನಡೆಯಲಿದ್ದು ಸಂಸದ ನಳಿನ್ ಕುಮಾರ್ ಕಟೀಲು ಭಾಗವಹಿಸಲಿದ್ದಾರೆ.…
Author: UllalaVani
UN NETWORKS ಉಳ್ಳಾಲ: ಮಕ್ಕಳೊಡನೆ ಧೈರ್ಯದಿಂದ ಸ್ವಾಭಿಮಾನದಿಂದ ಸ್ವಂತ ಮನೆ ಎಂದು ಹೇಳುವ ಆತ್ಮವಿಶ್ವಾಸ ಬೆಳೆಸುವ ಕೆಲಸ ರಾಜ್ಯ ಸರಕಾರದಿಂದ ಹಕ್ಕುಪತ್ರ ನೀಡುವ ಮೂಲಕ ಆಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ಪಜೀರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಪಂಚಾಯತ್ ಸಭಾಭವನದಲ್ಲಿ ಜರಗಿದ 94 ಸಿ ಸಿ ಹಕ್ಕು ಪತ್ರಗಳ ವಿತರಣಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಹಿಂದಿನ ಸರಕಾರಗಳು ಯಾವುದೇ ರೀತಿಯ ಜನಪರ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಹಕ್ಕುಪತ್ರ ನೀಡಲು ಅನುದಾನದ ಅಗತ್ಯವಿದೆಯೇ? ವಿಳಂಬವಾಗಲು ಕಾರಣ ಏನು ಎಂಬುದನ್ನು ಆತ್ಮ ವಿಮರ್ಶೆ ಮಾಡಬೇಕಿದೆ. ಅಧಿಕಾರ ಹಂಚುವಲ್ಲಿಯೇ ಮಗ್ನರಾಗಿದ್ದರು. ಯೋಜನೆಯಲ್ಲಿ ತಾರತಮ್ಯ ಮಾಡಿಲ್ಲ. ಮನೆಗೆ ಕೆಲಸ ಕೇಳಿಕೊಂಡು ಬಂದವರಲ್ಲಿ ಧರ್ಮ, ಪಕ್ಷ ಕೇಳದ ಕೆಲಸ ನಿರ್ವಹಿಸಿ ಕೊಟ್ಟಿದ್ದೇನೆ. ಅನ್ನಭಾಗ್ಯ ಯೋಜನೆ ದೇಶದಲ್ಲಿ ಎಲ್ಲೂ ಇಲ್ಲ. ನಿರ್ಗತಿಕರು ಮೂರು ಹೊತ್ತು ಊಟ ಮಾಡಬೇಕು ಅನ್ನುವ ಉದ್ದೇಶದಿಂದ ಯೋಜನೆಯನ್ನು ಮುಖ್ಯಮಂತ್ರಿ ಜಾರಿ ಮಾಡಿದ್ದಾರೆ.…
UN NETWORKS ತೊಕ್ಕೊಟ್ಟು: ಬೀಡಿ ಕೈಗಾರಿಕೆ ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದು, ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳೇ ನೇರ ಹೊಣೆಯಾಗಿದೆ ಎಂದು ಜಿಲ್ಲಾ ಸೌತ್ ಕೆನರಾ ಬೀಡಿ ಫೆಡರೇಶನ್ನಿನ ಕಾರ್ಯದರ್ಶಿ ಬಿ.ಬಾಲಕೃಷ್ಣ ಶೆಟ್ಟಿ ಹೇಳಿದರು. ಕೋಟೆಕಾರು ಸರ್ಕಲ್ ಬೀಡಿ ಲೇಬರ್ಸ್ ಯೂನಿಯನ್ ಇದರ ವತಿಯಿಂದ ತೊಕ್ಕೊಟ್ಟು ಕ್ಲಿಕ್ ಸಭಾಂಗಣದಲ್ಲಿ ಮಂಗಳವಾರ ನಡೆದ ಬೀಡಿ ಕಾರ್ಮಿಕರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. 2000 ಇಸವಿಯಲ್ಲಿ ಬೀಡಿ ನಿಷೇಧ ಕಾನೂನು ಜಾರಿ ಮಾಡಿ ಲಕ್ಷಾಂತರ ಬೀಡಿ ಕಾರ್ಮಿಕರಿಗೆ ಅನ್ಯಾಯವೆಸಗಿದ್ದರುಯ. 2015ರಲ್ಲಿ ಬೀಡಿ ನಿಷೇಧ ಕಾನೂನು ಜಾರಿ ಮಾಡಿ ಲಕ್ಷಾಂತರ ಬೀಡಿ ಕಾರ್ಮಿಕರಿಗೆ ಅನ್ಯಾಯವೆಸಗಿದ್ದರು. 2015ರಲ್ಲಿ ಬಂದ ಮೋದಿ ಸರಕಾರ ಮತ್ತಷ್ಟು ಕಟ್ಟಿನ ಕೋಪ್ಟಾ ಕಾನೂನು ಜಾರಿಗೆ ತಂದು ಬೀಡಿ ಕಾರ್ಮಿಕರ ಉದ್ಯೋಗವನ್ನು ಕಸಿಯುವ ಹಂತಕ್ಕೆ ಹೋಗಿದೆ. ಈ ನಿಟ್ಟಿನಲ್ಲಿ ಬೀಡಿ ಕಾರ್ಮಿಕರು ಸಂಘಟಿತರಾಗಬೇಕಿದೆ. ಬೀಡಿ ಉದ್ಯಮ ಬಂದ್ ಆದಲ್ಲಿ ತಿಂಗಳಿಗೆ 3,000 ಪಿಂಚಣಿ ನೀಡಬೇಕಾಗಿದೆ . ಬೀಡಿ ಕಾರ್ಮಿಕರಿಗೆ ರೂ.1,000 ಬೀಡಿ ಸುತ್ತಿದರೆ, ರೂ.300 ಕನಿಷ್ಟ ಮಜೂರಿ…
UN NETWORKS ಕೊಣಾಜೆ: ಶಿಕ್ಷಣ, ತಂತ್ರಜ್ಞಾನ ವೈಯಕ್ತಿಕ ಮತ್ತು ಸಮಾಜದ ಅಭಿವೃದ್ದಿಯೊಂದಿಗೆ ದೇಶದ ಪ್ರಗತಿಗೆ ಬಳಕೆಯಾಗಲಿ ಎಂದು ಸಿಂಗಾಪುರ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾನಿಲಯದ ಅಧ್ಯಕ್ಷ ಪದ್ಮಶ್ರೀ ಪ್ರೊ.ಸುಬ್ರ ಸುರೇಶ್ ಎಂದು ಹೇಳಿದ್ದಾರೆ. ವಿವಿ ಆವರಣದಲ್ಲಿರುವ ಮಂಗಳ ಸಭಾಂಗಣದಲ್ಲಿ ಸೋಮವಾರ ಬೆಳಗ್ಗೆ ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯದ 36ನೆ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು. ದೇಶದಲ್ಲಿ ನಾಲ್ಕನೆ ಕೈಗಾರಿಕಾ ಕ್ರಾಂತಿ 4.0 ಜಾರಿಯಾಗುತ್ತಿರುವ ಸಂದರ್ಬದಲ್ಲಿ ತಂತ್ರಜ್ಞಾನ ಮತ್ತು ಮಾನವೀಯತೆಯ ನಡುವೆ ಸಮತೋಲನದ ಅಭಿವೃದ್ಧಿ ಸಾಧಿಸಬೇಕಾಗಿದೆ. ಈ ಹಿಂದಿನ ಮೂರು ಕೈಗಾರಿಕಾ ಕ್ರಾಂತಿ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಸಿದೆ. ಜೊತೆಗೆ ಸಾಕಷ್ಟು ಜನರ ವೃತ್ತಿಯನ್ನು ಕಿತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ನಕಾರಾತ್ಮಕ ರೀತಿಯ ಬೆಳವಣಿಗೆ ಆಗದಂತೆ ಎಚ್ಚರ ವಹಿಸಬೇಕು ಎಂದು ಅವರು ತಿಳಿಸಿದರು ಮಂಗಳೂರು ವಿವಿ ಕುಲಪತಿ ಡಾ.ಕೆ.ಭೈರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಡಾ.ಸುಬ್ರ ಸುರೇಶ್ ಅವರಿಗೆ ಗೌರವ ಡಾಕ್ಟರೇಟ್, ಮಂಗಳೂರು ವಿಶ್ವವಿದ್ಯಾನಿಲಯದಿಂದ 97 ಮಂದಿಗೆ ಡಾಕ್ಟರೇಟ್ ಪದವಿ (ಕಲೆ-17, ವಿಜ್ಞಾನ 74,…
UN NETWORKS ಕೋಟೆಕಾರು: ನಾದುರಸ್ತಿಯಲ್ಲಿರುವ ರಸ್ತೆ ದುರಸ್ತಿಗೆ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಯುವಕನೋರ್ವ ಪ್ರಧಾನಿ ಕಚೇರಿಗೆ ಬರೆದ ಪತ್ರಕ್ಕೆ ಸ್ಪಂಧನೆ ದೊರೆತಿದ್ದು, ಕಾಮಗಾರಿಗೆ ನಗರೋತ್ಥಾನ 3 ರಲ್ಲಿ ರೂ. 50 ಲಕ್ಷ ಅನುದಾನ ಮಂಜೂರಾಗಿದೆ. ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊಂಡಾಣ, ಮಾಡೂರು ಜಂಕ್ಷನ್ ಕೊಂಡಾಣ ದೈವಸ್ಥಾನ ಹಾಗೂ ಶ್ರೀ ಸಾಯಿ ಬಾಬಾ ಮಂದಿರಕ್ಕೆ ಸಂಪರ್ಕಿಸುವ ರಸ್ತೆಯ ನಾದುರಸ್ತಿಯಲ್ಲಿತ್ತು. ಈ ಬಗ್ಗೆ ಉದ್ಯಮಿ ಹಾಗೂ ಸಮಾಜ ಸೇವಕ ಮಾಡೂರು ಕೊಂಡಾಣದ ಸುರೇಶ್ ಕೆ.ಪಿ ಅವರ ಪುತ್ರ ಸಾಗರ್.ಎಸ್ ಅವರು 2017ರ ಮಾ. 17 ರಂದು ಪ್ರಧಾನ ಮಂತ್ರಿಯವರಿಗೆ ದುರಸ್ತಿಗೆ ಆಗ್ರಹಿಸಿ ದೂರು ಸಲ್ಲಿಸಿದ್ದರು. ಅದರಂತೆ ಪ್ರಧಾನಿ ಕಚೇರಿಯಿಂದ ಕೋಟೆಕಾರು ಪಟ್ಟಣ ಪಂಚಾಯಿತಿಗೆ ಬಂದ ಸೂಚನೆಯಂತೆ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಯವರು ಸ್ಪಂಧಿಸಿ ಮನವಿಯಂತೆ ಸ್ಥಳ ಪರಿಶೀಲನೆ ಮಾಡಲಾಗಿದೆ. ರಸ್ತೆ ಅಭಿವೃದ್ಧಿ ಕಾವiಗಾರಿಗೆ ನಗರೋತ್ಥಾನ 3ರ ಅಡಿ ರೂ. 50 ಲಕ್ಷ ಅನುದಾನ ಕಾದಿರಿಸಲಾಗಿದೆ. ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭದ…
UN NETWORKS ಉಳ್ಳಾಲ :ದೇಶಕ್ಕೊಂದು ಲಾಂಛನವಿದ್ದಂತೆ ಮನುಷ್ಯನ ದೇಹಕ್ಕೂ ಸುದರ್ಶನ,ಶಂಖವೆಂಬ ದೇವರ ಲಾಂಛನವಿದ್ದರೆ ಮಾಡಿರುವ ಪಾಪಕರ್ಮಗಳು ಪರಿಹಾರವಾಗಿ ಜೀವನ ನಿರ್ವಿಘ್ನವಾಗಿ ಸಾಗುತ್ತದೆ ಎಂದು ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ನುಡಿದರು. ಮಂಗಳೂರು ತಾ.ನ ಮುನ್ನೂರು ಗ್ರಾಮದ ಶ್ರೀ ಸೋಮೇಶ್ವರೀ ದೇವಳದ ಸಾನಿಧ್ಯದಲ್ಲಿ ಗಾಳದ ಕೊಂಕಣಿ ಸಮಾಜದ ಬಂಧುಗಳಿಗೆ ತಪ್ತ ಮುದ್ರಧಾರಣೆ ನೆರವೇರಿಸಿ, ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆಯ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡುತ್ತಿದ್ದರು. ದೇವಾಲಯಕ್ಕೆ ಬಂದಾಗ ನಾವು ದೇವರಿಗೆ ಕೈಮುಗಿಯು ವಂತೆ ಒಬ್ಬರನ್ನೊಬ್ಬರು ಎದುರಾದಾಗ ಪರಸ್ಪರ ಕೈ ಮುಗಿಯುವುದು ನಮ್ಮ ಸಂಸ್ಕಾರವಾಗಿದೆ ಎಂದ ಶ್ರೀಗಳು ಮಕ್ಕಳಿಗೆ ವಿದ್ಯೆಯ ಜೊತೆಗೆ ವಿನಯ,ಶಿಸ್ತು,ಸಂಸ್ಕಾರವನ್ನು ಹೆತ್ತವರು ಕಲಿಸಿಕೊಡಬೇಕು ಎಂದರು. ದೇವಳದಲ್ಲಿ ದೇವರು ನೆಲೆಯಾದಾಗ ನಮ್ಮ ಮನಸ್ಸು ಕೂಡ ಚಾಂಚಲ್ಯದಿಂದ ದೂರವಾಗಿ ಗಟ್ಟಿಯಾಗಿರುತ್ತದೆ.ಶಿಷ್ಯ ವರ್ಗದ ಸೇವೆಯಿಂದ ಶ್ರೀ ಸೋಮೇಶ್ವರೀ ಸಂತೃಪ್ತಳಾಗಿದ್ದಾಳೆ ಎಂದ ಅವರು ಭಜನೆಗೆ ಅತೀ ಶೀಘ್ರವಾಗಿ ದೇವರು ಕೂಡ ಶೀಘ್ರವಾಗಿ ಒಲಿಯುತ್ತಾಳೆ,ಈನಿಟ್ಟಿನಲ್ಲಿ ನಾಯಕ್ ಸಮುದಾಯದ ಸೇವಾ…
UN NETWORKS ಉಳ್ಳಾಲ: ಸಂಶೋಧನೆಯ ಗುಣಮಟ್ಟ ಕಾಪಾಡುವುದರ ಜತೆಗೆ ಬುದ್ಧಿವಂತಿಕೆಯ ಹಂತವನ್ನು ತಲುಪುವುದರೊಂದಿಗೆ ಶೇ.100 ರಷ್ಟು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಯಶಸ್ಸಿನ ಹಾದಿ ತಮ್ಮದಾಗಿಸಬಹುದು ಎಂದು ಪದ್ಮಭೂಷಣ ಪುರಸ್ಕೃತ , ಭಾರತೀಯ ಕೌನ್ಸಿಲ್ ವೈದ್ಯಕೀಯ ಸಂಶೋಧನೆಯ ವಿಶ್ರಾಂತ ನಿರ್ದೇಶಕ ಪ್ರೊ.ಡಾ| ನಿರ್ಮಲ್ ಕುಮಾರ್ ಗಂಗೂಲಿ ಅಭಿಪ್ರಾಯಪಟ್ಟರು. ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶನಾಲಯ ದೇರಳಕಟ್ಟೆ ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ವಿಂಶತಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ` ರಾಷ್ಟ್ರೀಯ ವಿಜ್ಞಾನ ದಿನ ಉಪನ್ಯಾಸ ‘ ವನ್ನು ಉದ್ಘಾಟಿಸಿ ಮಾತನಾಡಿದರು. ನಿಟ್ಟೆ ಸಂಸ್ಥೆ ಭವಿಷ್ಯದ ಚಿಂತನೆಗಳನ್ನು ಮುಂದಿಟ್ಟು ಕಾರ್ಯಾಚರಿಸುತ್ತಿರುವ ಬಗೆ ದೇಶದ ಇತರೆ ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಇಲ್ಲ. ಚೀನಾ ಬೆಳವಣಿಗೆಯನ್ನು ಹೋಲಿಸುತ್ತಾ ದೇಶದ ಸಂಪನ್ಮೂಲಗಳ ಅಭಿವೃದ್ಧಿಯನ್ನು ಮರೆಯಲಾಗುತ್ತಿದೆ. ದೇಶದ ಯುವಸಮುದಾಯ ಸಂವಹನ ಕೌಶಲ್ಯವನ್ನು ವೃದ್ಧಿಸಬೇಕಿದೆ. ಅತ್ಯುತ್ತಮ ನಿಯತಕಾಲಿಕಗಳ ಅಧ್ಯಯನದೊಂದಿಗೆ ಚಿಂತನೆ ಮತ್ತು ತರಬೇತಿಯ ಗುಣಮಟ್ಟವನ್ನು ಕಾಪಾಡುವುದರ ಮೂಲಕ ಸಂಸ್ಥೆಗಳು ಮುಂದುವರಿಯಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ|…
UN NETWORKS ಉಳ್ಳಾಲ: ಸೇವಾ ಭಾರತಿ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಉಳ್ಳಾಲ ವತಿಯಿಂದ ಹಮ್ಮಿಕೊಂಡಿದ್ದ ಕೆಸರು ಗದ್ದೆ ಕಾರ್ಯಕ್ರಮ ದ ನಂತರ ಕೃಷಿ ಮಾಡಿ ಬಂದ ಅಕ್ಕಿಯನ್ನು ಶ್ರೀ ಸೋಮನಾಥ ದೇವಸ್ಥಾನ ಸೋಮೇಶ್ವರ ಮತ್ತು ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಯ, ಬಾಲಸಂರಕ್ಷಣಾ ಕೇಂದ್ರ ಕುತ್ತಾರ್ ಇಲ್ಲಿ ಗೆ ಒಪ್ಪಿಸಲಾಯಿತು. ಹಾಗೂ ಬೈಹುಲ್ಲು ಗೋಶಾಲೆಗೆ ಒಪ್ಪಿಸಲಾಯಿತು.
UN NETWORKS ಉಳ್ಳಾಲ: ಪ್ರಾಮಾಣಿಕರಿಗೆ ಸಮಾಜದಲ್ಲಿ ಸದಾ ಗೌರವ ಇರುತ್ತದೆ. ಅದರಲ್ಲೂ ಸರಕಾರಿ ಅಧಿಕಾರಿಗಳು ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಇಡೀ ಜಗತ್ತೇ ಅವರಿಗೆ ಗೌರವ ಸಲ್ಲಿಸುತ್ತದೆ ಎನ್ನುವುದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರು ಮಾದರಿ ಎಂದು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮೊಹಮ್ಮದ್ ಮೋನು ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಂಗಳೂರು, ದಕ್ಷಿಣ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಂಗಳೂರು ದಕ್ಷಿಣ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ವತಿಯಿಂದ ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದು ವರ್ಗಾವಣೆಗೊಂಡ ಎಂ.ಪಿ ಜ್ಞಾನೇಶ್ ಅವರ ಬೀಳ್ಕೊಡುಗೆ ಹಾಗೂ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿರುವ ಲೋಕೇಶ್‍ರವರ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಸಂಘಗಳ ವತಿಯಿಂದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸ್ವಾಗತಿಸಿ, ವರ್ಗಾವಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ ಜ್ಞಾನೇಶ್‍ರ್‍ರವನ್ನು ಗೌರವಿಸಲಾಯಿತು. ಮಂಗಳೂರು ದಕ್ಷಿಣ ವಲಯದ ಸರ್ವ ಶಿಕ್ಷಣ ಅಭಿಯಾನದ ಕ್ಷೇತ್ರ…
UN NETWORKS ಉಳ್ಳಾಲ: ಲೇಸರ್ ತಂತ್ರಜ್ಞಾನದ ಚಿಕಿತ್ಸಾ ವಿಧಾನದಲ್ಲಿ ಪರಿಣತರಾಗಲು ಸಮಯ ತಗಲುವುದು, ಅದಕ್ಕಾಗಿ ಶ್ರಮದ ಅಗತ್ಯವಿದೆ ಎಂದು ಯುರೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಇದರ ಮಾಜಿ ಅಧ್ಯಕ್ಷ ಹಾಗೂ ಮಂಗಳೂರು ಕೆಎಂಸಿಯ ಪ್ರೊ. ಡಾ| ಪಿ.ವೇಣುಗೋಪಾಲ್ ಹೇಳಿದರು. ಅವರು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿ ಆಶ್ರಯದಲ್ಲಿ ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಲಾದ ಲೇಸರ್ ಡುಯೊ: ಥುಲಿಯಂ 120 ಡಬ್ಲ್ಯು ಮತ್ತು ಹೋಲ್ಮಿಯಂ 20 ಡಬ್ಲ್ಯು ಗೆ ಚಾಲನೆ ಮತ್ತು `ಲೇಸರ್ಸ್ ಇನ್ ಯುರೋಲಾಜಿ ಕುರಿತು ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರಕ್ಕೆ ಕ್ಷೇಮ ಆಸ್ಪತ್ರೆ ಸೆಮಿನಾರ್ ಹಾಲ್ ನಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿದರು. ತಂತ್ರಜ್ಞಾನಗಳು ಮುಂದುವರಿಯುತ್ತಿದ್ದಂತೆ ಮೂತ್ರಶಾಸ್ತ್ರ ಚಿಕಿತ್ಸೆ ವಿಧಾನದಲ್ಲೂ ಅನೇಕ ಬದಲಾವಣೆಗಳು ಆಗಿವೆ. 1965 ರಲ್ಲಿ ತೆರೆದ ಶಸ್ತ್ರಚಿಕಿತ್ಸೆ ವಿಧಾನದಲ್ಲಿ ಚಿಕಿತ್ಸೆ ತರಬೇತಿ ಪಡೆದುಕೊಂಡಿದ್ದಲ್ಲಿ, ಸೇವೆ ಆರಂಭದ ಬಳಿಕ ಚಿಕಿತ್ಸೆ ವಿಧಾನವೇ ಬದಲಾಗಿ, ಸೇವಾ ಅವಧಿಯಲ್ಲೇ ಅನುಭವದ ಮೂಲಕ ತರಬೇತಿ ಪಡೆಯಬೇಕಾಯಿತು. ಮೂತ್ರಶಾಸ್ತ್ರ ವಿಭಾಗದಲ್ಲಿ ತೆರೆದ ಶಸ್ತ್ರಚಿಕಿತ್ಸೆಯೇ ಉತ್ತಮ ವಿಧಾನವಾಗಿತ್ತು.…

