UN NETWORKS ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಚಿ ವಲಯ ಸಮಿತಿ ವತಿಯಿಂದ ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಕುಕ್ಕಾಜೆ ಚೆಕ್ ಪೋಸ್ಟ್ ಬಳಿ ನಿರ್ಮಿಸಿದ ಸಾರ್ವಜನಿಕ ಬಸ್ಸು ತಂಗುದಾಣವನ್ನು ಎಸ್.ಡಿ.ಪಿ.ಐ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಾಹುಲ್ ಹಮೀದ್ ಉದ್ಘಾಟಿಸಿದರು. ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಮಂಚಿ ಪ್ರಸ್ತಾವಿಕ ಭಾಷಣ ಮಾಡಿದರು. ಶೈನ್ ಗೈಸ್ ಕುಕ್ಕಾಜೆ ಅಧ್ಯಕ್ಷ ಗಫ್ಫಾರ್ ಕುಕ್ಕಾಜೆ, ಸಾಮಾಜಿಕ ಕಾರ್ಯಕರ್ತ ನಝೀರ್ ಕುಕ್ಕಾಜೆ ಮಾಜಿ ತಾಲೂಕು ಪಂಚಾಯಿತ್ ಸದಸ್ಯ ಡಿ.ಕೆ. ಹಂಝ, ಮಂಚಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೋಹನ್ ದಾಸ್, ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ ಹಾಗೂ ಇರ್ಫಾದ್ ಕುಕ್ಕಾಜೆ (ಮೋನು) ಮತ್ತಿತರರು ಉಪಸ್ಥಿತರಿದ್ದರು. ಎಸ್.ಡಿ.ಪಿ.ಐ ಗ್ರಾಮ ಸಮಿತಿ ಅಧ್ಧಕ್ಷ ಡಿ.ಎನ್. ಫಾರೂಕ್ ಮಂಚಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
Author: UllalaVani
UN NETWORKS ಅಂಬ್ಲಮೊಗರು: ಬೈಕ್ ಮೂಲಕ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಕೊಣಾಜೆ ಪೊಲೀಸರು ಮಂಗಳವಾರ ಅಂಬ್ಲಮೊಗರು ಗ್ರಾಮದ ಮದಕ ಎಂಬಲ್ಲಿ ಬಂಧಿಸಿದ್ದಾರೆ. ಕುದ್ರೋಳಿಯ ಮಹಮ್ಮದ್ ಆಸೀಫ್ ಹಾಗೂ ಕುತ್ತಾರಿನ ಶೇಖ್ ಶಹಬಾಝ್ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಅಂಬ್ಲಮೊಗರು ಗ್ರಾಮದ ಮದಕ ಎಂಬಲ್ಲಿ ಬೈಕ್ ಮೂಲಕ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ಕೈಗೆ ಸಿಕ್ಕಿ ಬಿದ್ದಿದ್ದಾರೆ. ಪೊಲೀಸರು ಇವರ ಬಳಿ ಇದ್ದ ಐದು ಪ್ಯಾಕೆಟ್ ಗಾಂಜಾ ಹಾಗೂ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಇವರಿಬ್ಬರೂ ಗಾಂಜಾ ಸೇವನೆ ಮಾಡಿದ ಬಗ್ಗೆ ಪೊಲೀಸ್ ತನಿಖೆಯಿಂದ ದೃಡಪಟ್ಟಿದೆ. ಆರೋಪಿಗಳು ಗಾಂಜಾವನ್ನು ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಮಾರಾಟ ಮಾಡುತ್ತಿದ್ದರೆಂದು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
UN NETWORKS ಉಳ್ಳಾಲ : ಕೊಲ್ಯ ಬಳಿ ಸ್ಕೂಟರ್ ಬೈಕ್ ನಡುವೆ ನಡೆದ ಅಪಘಾತದ ಗಾಯಾಳು ರವೀಂದ್ರ(71) ಅವರಿಗೆ ಹರೀಶ್ ಸಾಂತ್ವಾನ ಯೋಜನೆಯಡಿ ಚಿಕಿತ್ಸೆ ನೀಡಲು ನಿರಾಕರಿಸಿದ ಘಟನೆ ಸೋಮವಾರ ತೊಕ್ಕೊಟ್ಟುವಿನಲ್ಲಿ ನಡೆದಿದೆ. ಉಳ್ಳಾಲಬೈಲು ನಿವಾಸಿ ರವೀಂದ್ರ ಅವರು ತಮ್ಮ ಮೊಮ್ಮಗನೊಂದಿಗೆ ಸ್ಕೂಟರ್‍ನಲ್ಲಿ ಕೊಲ್ಯ ಬೈಪಾಸ್ ಮಾರ್ಗವಾಗಿ ಉಚ್ಚಿಲ ಕಡೆ ತೆರಳುತ್ತಿದ್ದಾಗ ಅತೀ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರವೀಂದ್ರ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ತೊಕ್ಕೊಟ್ಟಿನ ನೇತಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ಆಸ್ಪತ್ರೆಯವರು 15 ಸಾವಿರ ಕಟ್ಟುವಂತೆ ಹೇಳಿದಾಗ ರವೀಂದ್ರ ಅವರ ಕುಟುಂಬದ ಸದಸ್ಯರು ಗಾಯಗೊಂಡ ತಕ್ಷಣ ರಾಜ್ಯ ಸರಕಾರದ ಹರೀಶ್ ಸಾಂತ್ವಾನ ಯೋಜನೆಯಡಿ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ಮುಖ್ಯಸ್ಥರಿಗೆ ತಿಳಿಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಈ ಹಿಂದೆ ಇಬ್ಬರಿಗೆ ಚಿಕಿತ್ಸೆ ನೀಡಿದ ಹಣ ಸರಕಾರ ನೀಡದೆ ಇದ್ದ ಕಾರಣ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದಾಗ ಕೆಲಕಾಲ ಗೊಂದಲವಾಯಿತು. ಮದ್ಯಪ್ರವೇಶಿಸಿದ ಬಿಜೆಪಿ ಮುಖಂಡರು…
UN NETWORKS ಉಳ್ಳಾಲ: ಯೇನೆಪೋಯ ಆಸ್ಪತ್ರೆಯಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಸ್ಥಾಪಿಸಿದ ಅತ್ಯಾಧುನಿಕ ರೊಬೊಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಬಳಸಿ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗವು ಮೂತ್ರಪಿಂಡದ ರೋಗಿಗಳಲ್ಲಿ ಶಸ್ತ್ರಚಿಕಿತ್ಸೆ ಸೇರಿದಂತೆ ಮೂತ್ರಪಿಂಡದ ಕ್ಯಾನ್ಸರ್‍ಗಳಿಗೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ನೀಡಿ ಯಶಸ್ವಿಯಾಗಿದ್ದು, ಸುಮಾರು 150ಕ್ಕೂ ಹೆಚ್ಚು ಪ್ರಕರಣಗಳಿಗೆ ಚಿಕಿತ್ಸೆ ನೀಡಿದೆ. ಮೂತ್ರಶಾಸ್ತ್ರ ವಿಭಾಗದ ರೊಬೊಟಿಕ್ ಮೂತ್ರಶಾಸ್ತ್ರಜ್ಞರಾದ ಡಾ| ಮುಜೀಬ್ ರಹಿಮಾನ್, ಡಾ| ಅಲ್ತಾಫ್ ಖಾನ್ ಮತ್ತು ಡಾ| ನಿಶ್ತ್ ಡಿ’ಸೋಜಾ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮೂತ್ರಪಿಂಡದ ಕ್ಯಾನ್ಸರ್ಸ್ ರೋಗಿಗಳಲ್ಲಿ 20ಕ್ಕೂ ಅಧಿಕ ರೋಗಿಗಳಿಗೆ ಮೂತ್ರಪಿಂಡದ ಸಂರಕ್ಷಣೆ ಮಾಡುವ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ. ಮೂತ್ರಪಿಂಡದ ಕ್ಯಾನ್ಸರ್‍ಗೆ ಸಾಂಪ್ರದಾಯಿಕ ಚಿಕಿತ್ಸೆಯು ಇಡೀ ಮೂತ್ರಪಿಂಡ ಮತ್ತು ಸುತ್ತಮುತ್ತಲಿನ ಅಂಗಾಂಶಗಳ ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲ್ಪಟ್ಟಿದೆ (ಇದನ್ನು ರಾಡಿಕಲ್ ನೆಫ್ರೆಕ್ಟೊಮಿ ಎಂದು ಕರೆಯಲಾಗುತ್ತದೆ). ಮೂತ್ರಪಿಂಡ ಸಂರಕ್ಷಿಸುವ ಶಸ್ತ್ರಚಿಕಿತ್ಸೆಗಳೊಂದಿಗೆ ನೆಫ್ರಾನ್ ಸೇವಿಂಗ್ ಸರ್ಜರಿ (ಎನ್‍ಎಸ್‍ಎಸ್) ಅಥವಾ ಪಾರ್ಟಿಯಲ್ ನೆಫ್ರೆಕ್ಟೊಮಿ ಎಂದು ಕೂಡ ಕರೆಯಲಾಗುತ್ತದೆ. ತಕ್ಷಣವೇ ಗೆಡ್ಡೆಯನ್ನು ಸುತ್ತುವರೆದಿರುವ ಗೆಡ್ಡೆ ಮತ್ತು ಅಂಗಾಂಶಗಳನ್ನು ತೆಗೆದುಹಾಕಲಾಗುತ್ತದೆ…
UN NETWORKS ಉಳ್ಳಾಲ : ಸನಾತನ ಸಂಸ್ಕೃತಿಯನ್ನು ಬಿಂಬಿಸುವಂತಹ ದೀಪಾವಳಿ ಉತ್ಸವವನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಹಬ್ಬ ಹರಿದಿನಗಳ ಮಹತ್ವ ತಿಳಿಸುವ ಕಾರ್ಯ ಆಗಬೇಕು ಎಂದು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ಅಭಿಪ್ರಾಯಪಟ್ಟರು. ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿ ವಿನಾಯಕ ದೇವಸ್ಥಾನ ಕುತ್ತಾರಿನಲ್ಲಿ ವೀರ ಸಾವರ್ಕರ್ ಪ್ರತಿಷ್ಠಾನ ಕುತ್ತಾರ್ ಇದರ ದ್ವಿತೀಯ ವರ್ಷದ ಗೂಡುದೀಪ ಸ್ಪರ್ಧಾ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ದೀಪಾವಳಿ ಉತ್ಸವದೊಂದಿಗೆ ಗೋಪೂಜೆಗೂ ಮಹತ್ವದ ಸ್ಥಾನವಿದೆ. ನಮ್ಮ ಗೋ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದರೊಂದಿಗೆ ಕೃಷಿ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ಆಗಬೇಕು ಎಂದರು. ಗೋಪೂಜೆ ನೆರವೇರಿಸಿ ಮಾತನಾಡಿದ ವಿಶ್ವಹಿಂದೂ ಪರಿಷತ್‍ನ ಮುಖಂಡ ಬಿ.ನಾರಾಯಣ ಕುಂಪಲ ಮಾತನಾಡಿ ಗೋವು ಕೇವಲ ಒಂದು ಪಶುವಾಗದೆ ಮುಕ್ಕೋಟಿ ದೇವತರಗಳ ಆವಾಸ ಸ್ಥಾನವಾಗಿದ್ದು,ಇದು ಧಾರ್ಮಿಕ ನೆಲೆಯಲ್ಲಿ ಮಾತ್ರವಲ್ಲದೆ, ವೈಜ್ಞಾನಿಕ, ಆರೋಗ್ಯ ದೃಷ್ಠಿಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಗೋವಿನ ಅರ್ಕದಿಂದ ಕ್ಯಾನ್ಸರ್ ಶಮನ ಮಾಡುವ ಶಕ್ತಿಯಿದ್ದು, ಬೆನ್ನುಮೂಳೆಯಲ್ಲಿರುವ…
UN NETWORKS ನರಿಂಗಾನ: ನರಿಂಗಾನ ಗ್ರಾಮದ ಕಲ್ಲರಕೋಡಿಯ ದ.ಕ.ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಸ್ವಚ್ಚತಾ ಕಾರ್ಯಕ್ರಮವು ಭಾನುವಾರ ನಡೆಯಿತು. ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನೆತ್ತಿಲ ಪದವುನಿಂದ ಮುರತಗುಂಡಿಯವರೆಗಿನ ರಸ್ತೆ ಬದಿಯಲ್ಲಿದ್ದ ಗಿಡಗಂಟಿಗಳನ್ನು ಸ್ವಚ್ಚಗೊಳಿಸಲಾಯಿತು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವಾಝ್, ಗೌರವಾಧ್ಯಕ್ಷ ಸಿದ್ದೀಕ್ ಪಾರೆ, ಉಪಾಧ್ಯಕ್ಷ ವಿವೇಕಾನಂದ ರೈ, ಗೌರವ ಸಲಹೆಗಾರ ಪ್ರೇಮಾನಂದ ರೈ, ನರಿಂಗಾನ ಪಂಚಾಯಿತಿ ಅಧ್ಯಕ್ಷರಾದ ಇಸ್ಮಾಯಿಲ್ ಮೀನಂಕೋಡಿ, ಉಪಾಧ್ಯಕ್ಷೆ ನಳಿನಾಕ್ಷಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಖಾದರ್, ಸುಜಾತ, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.
UN NETWORKS ತೊಕ್ಕೊಟ್ಟು : ಭಗತ್‍ಸಿಂಗ್ ಸೇವಾ ಪ್ರತಿಷ್ಠಾನದ ದಶಮಾನೋತ್ಸವ ಪ್ರಯುಕ್ತ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ನಡೆದ ಗೂಡುದೀಪ ಸಂಗಮ-ದೀಪಾವಳಿ ಸಂಭ್ರಮ ಗೂಡುದೀಪ ಸ್ಪರ್ಧೆಯ ಸಭಾ ಕಾರ್ಯಕ್ರಮ ಭಾನುವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಮುಡಿಪು ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್ ಮಾತನಾಡಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕ ಹೊಸ ಚಿಂತನೆಗಳೊಂದಿಗೆ ಯುವ ಸಮುದಾಯವನ್ನು ಪ್ರೇರೆಪಿಸುವ ಕಾರ್ಯ ಮಾಡುತ್ತಿದ್ದು, ದೇಶದ ಉಜ್ವಲ ಭವಿಷ್ಯದ ನಿಟ್ಟಿನಲ್ಲಿ ಅವರ ಕನಸನ್ನು ಸಾಕಾರ ಮಾಡಲು ಭಗತ್‍ಸಿಂಗ್‍ನಂತಹ ಸರಕಾರೇತರ ಸಂಘ ಸಂಸ್ಥೆಗಳು ಕಟಿಬದ್ಧರಾಗಿ ಮುಂದುವರೆಯಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಭಗತ್‍ಸಿಂಗ್ ಸೇವಾ ಪ್ರತಿಷ್ಠಾನದಲ್ಲಿ ಯುವಕರೇ ಸದಸ್ಯರಾಗಿದ್ದು ಅತ್ಯುತ್ಸಾಹದಿಂದ ಜವಾಬ್ದಾರಿ ನಿರ್ವಹಿಸುತ್ತಿರುವುದರ ಫಲವಾಗಿ ಸಂಘ ದಶಮ ಸಂಭ್ರಮ ಕಾಣುವಂತಾಗಿದೆ. ಆಂಬ್ಯುಲೆನ್ಸ್ ಮುಖಾಂತರ ಆರೋಗ್ಯ ಸೇವೆ, ಸಾಮಾಜಿಕ ಚಟುವಟಿಕೆಗಳ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಸಂಘದ ಜೊತೆ ಪ್ರತಿಯೊಬ್ಬರು ಕೈಜೋಡಿಸಿ ಇನ್ನಷ್ಟು ಬಲತುಂಬಬೇಕು…
UN NETWORKS ಬೋಳಿಯಾರು : ಬಸ್ಸು ಮಾಲೀಕರ ಜತೆಗೆ ಒಪ್ಪಂದ ಮಾಡಿಕೊಂಡೇ ಸರಕಾರಿ ಬಸ್ಸನ್ನು ಕಾಟಾಚಾರಕ್ಕೆ ಹಾಕಿರುವ ಸರಕಾರ, ಇದೀಗ ನ್ಯಾಯಾಲಯದಲ್ಲಿ ಕಲೆಕ್ಷನ್ ಬರುತ್ತಿಲ್ಲ ಎಂಬ ಕಾರಣ ನೀಡಿ ತಡೆಯಾಜ್ಞೆ ತಂದಿದ್ದಾರೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ. ಅವರು ಮುಡಿಪು-ಬೋಳಿಯಾರಿನ ಕೆಎಸ್ ಆರ್ ಟಿಸಿ ಬಸ್ಸು ಹೋರಾಟ ಸಮಿತಿ ಹಾಗೂ ಸಾರ್ವಜನಿಕರ ವತಿಯಿಂದ ಅಮ್ಮೆಂಬಳ ದರ್ಗಾದಿಂದ ಮಂಗಳೂರಿಗೆ ಹೋಗಲು ಪರ್ಯಾಯ ಸರಕಾರಿ ಬಸ್ಸು ವ್ಯವಸ್ಥೆಯನ್ನು ಮಾಡಲು ಒತ್ತಾಯಿಸಿ ಬೋಳಿಯಾರು ಗ್ರಾಮ ಪಂಚಾಯತ್ ಎದುರು ಸೋಮವಾರ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು. ಸಾರ್ವಜನಿಕರ ದೂರಿಗೆ ಸ್ಪಂಧಿಸಿ ಕಾಟಾಚಾರಕ್ಕೆ ಬೋಳಿಯಾರು ಕಡೆಗೆ ಸರಕಾರಿ ಬಸ್ಸು ಹಾಕಲಾಗಿತ್ತು. ಆದರೆ ಮೊದಲಿಗೆ ಬಸ್ಸು ಮಾಲೀಕರ ಜತೆಗೆ ಒಪ್ಪಂದ ಮಾಡಿಕೊಂಡ ಸಚಿವರು ನ್ಯಾಯಾಲಯದಿಂದ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು 72 ಗಂಟೆಗಳಲ್ಲಿ ಸರಕಾರಿ ಬಸ್ಸು ಬಾರದಿದ್ದಲ್ಲಿ ಉಗ್ರ ರೀತಿಯ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಅವರು ಈವರೆಗೆ…
UN NETWORKS ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ ಬದಿ ನಿಂತು ವಾಹನ ಸವಾರ ರನ್ನು ಬೆದರಿಸಿ ದರೋಡೆಗೆ ಯತ್ನಿಸುತ್ತಿದ್ದ ಅಲ್ಲದೆ ಯುವಕನೋರ್ವನ ಕೊಲೆಗೆ ಯತ್ನಿಸಿದ ಐದು ಮಂದಿಯ ತಂಡವನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ದರ್ಬೆಯ ರವಿಕುಮಾರ್ ಯಾನೆ ಅಣ್ಣು (24), ಕುಂಜತ್ತೂರಿನ ನಿವಾಸಿಗಳಾದ ಖಲೀಲ್ .ಕೆ. ಯಾನೆ ಕಲ್ಲು(27), ರಾಜೇಶ್ .ಕೆ (30), ಅಜೀಮ್ ಯಾನೆ ಮಹಮ್ಮದ್ ಅಜೀಮ್ (23), ಜಾಬೀರ್ ಅಬ್ಬಾಸ್ (24) ಬಂಧಿತರು. ಐವರ ತಂಡ ರಾ.ಹೆ.66 ರಲ್ಲಿ ರಾತ್ರಿ ಸಮಯ ನಿಂತು ಕೇರಳ ಕಡೆಯಿಂದ ಮಂಗಳೂರು ಕಡೆಗೆ ಹಾದುಹೋಗುವ ಮತ್ತು ಮಮಂಗಳೂರು ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರ ಕಾರುಗಳನ್ನು ತಡೆದು ದರೋಡೆ ನಡೆಸಲು, ಮಹಿಳೆಯರನ್ನು ನಿರ್ಜನ ಪ್ರದೇಶದಲ್ಲಿ ತಡೆದು ಚಿನ್ನಾಭರಣ ಲೂಟಿಗೈಯ್ಯುವ ಸಂಚು ರೂಪಿಸಿದ್ದರೆನ್ನಲಾಗಿದೆ. ಬಂಧಿತರಿಂದ ತಲವಾರು, ಕಬ್ಬಿಣದ ರಾಡ್, ಮೆಣಸಿನ ಹುಡಿ, ಚೂರಿ ಹಾಗೂ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳ ಪೈಕಿ ರಾಜೇಶ್, ಜಾವಿದ್, ಖಲೀಲ್ ಎಂಬವರುಗಳು ಕುಂಜತ್ತೂರು ಸಮೀಪ ಅ.19 ರಂದು ಪ್ರಜ್ವಲ್…
UN NETWORKS ತೊಕ್ಕೊಟ್ಟು : ಭಗತ್ ಸಿಂಗ್ ಸೇವಾ ಪ್ರತಿಷ್ಠಾನವೂ ಎಲ್ಲರಲ್ಲೂ ಸಮಾನತೆಯನ್ನು ತರುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಕ್ಷೇಮವನ್ನು ತರುವ ಪ್ರಯತ್ನ ಮಾಡಬೇಕಿದೆ ಎಂದು ಕೋಟೆಕಾರು ಶೃಂಗೇರಿ ಶಾಖಾ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಹೇಳಿದ್ದಾರೆ. ಅವರು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ದಶಮ ಸಂಭ್ರಮದ ಪ್ರಯುಕ್ತ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ದಶಮ ಸಂಭ್ರಮಾಚರಣೆ, ಗೂಡುದೀಪ ಸಂಗಮ-ದೀಪಾವಳಿ ಸಂಭ್ರಮ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಹುತಾತ್ಮರಾದ ಭಗತ್‍ಸಿಂಗ್ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ನಿರಂತರವಾಗಿ ಹತ್ತು ವರ್ಷಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿರುವ ಪ್ರತಿಷ್ಠಾನದ ಕಾರ್ಯ ಎಲ್ಲರಿಗೂ ಮಾದರಿ.ಪ್ರಸ್ತುತ ಸಮಾಜದಲ್ಲಿ ಯಾವುದು ಧರ್ಮವಲ್ಲ, ಅದನ್ನು ಆಚರಿಸಲಾಗುತ್ತಿದೆ. ಸಮಾನತೆ ಇಲ್ಲವೆಂದಾದಲ್ಲಿ ಅಂತಹ ವ್ಯವಸ್ಥೆಯಿಂದ ಹೊರಬರುವ ಮನಸ್ಥಿತಿ ಬೆಳೆಯಬೇಕಿದೆ. ಸಮಾಜದ ಮುಖಂಡರು ಅದನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕಿದೆ ಎಂದರು. ಈ ಸಂದರ್ಭ ಪೆರ್ಮನ್ನೂರು ಸಂತ ಸೆಬೆಸ್ತಿಯನ್ನರ ಚರ್ಚ್ ನ ಧರ್ಮಗುರು ಫಾ.ಜೆ.ಬಿ ಸಲ್ದಾನ್ಹ, ಇಂದಿನ ಯುವಪೀಳಿಗೆಗೆ ದೀಪಾವಳಿ ಆಚರಣೆಯ…

