Author: UllalaVani

Kannada News From Coastal Karnataka

UN NETWORKS ಕೊಣಾಜೆ: ಯಕ್ಷಗಾನ ಕಲಾವಿದ ಕೊಣಾಜೆಯ ದೇವಪ್ಪ ಗೌಡ ಅವರ ಮನೆಯು ಕಳೆದ ಕೆಳತಿಂಗಳ ಹಿಂದೆ ಮಳೆಗಾಳಿಗೆ ಕುಸಿದು ಬಿದ್ದು ಅವರ ಬದುಕೇ ಅತಂತ್ರವಾಗಿತ್ತು. ಆ ಸಂದರ್ಭದಲ್ಲಿ ಬಡಕಲಾವಿದನ ನೆರವಿಗೆ ನಿಂತ ಯಕ್ಷಧ್ರುವ ಪಟ್ಲ ಫೌಂಡೇಶನ್, ಪಟ್ಲ ಯಕ್ಷ ಆಶ್ರಯ ಯೋಜನೆ ಮಂಗಳೂರು ಇದರ ವತಿಯಿಂದ ನೂತನ ಮನೆಯನ್ನು ನಿರ್ಮಿಸಿಕೊಡಲಾಗಿದೆ. ಸುಮಾರು ಐದು ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಮನೆಯ ಹಸ್ತಾಂತರ ಹಾಗೂ ಗೃಹ ಪ್ರವೇಶ ಕಾರ್ಯಕ್ರಮವು ಸೋಮವಾರ ನಡೆಯಿತು. ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಯಕ್ಷದ್ರುವ ಪಟ್ಲ ಫೌಂಡೇಶನ್‍ನ ಸತೀಶ್ ಶೆಟ್ಟಿ ಪಟ್ಲ ಅವರು ನೂತನ ಮನೆಯ ಕೀಲಿ ಕೈಯನ್ನು ಬಡ ಕಲಾವಿದ ದೇವಪ್ಪ ಗೌಡರಿಗೆ ಹಸ್ತಾಂತರಿಸಿದರು. ನೆರಳು ಕೊಡುವ ಮರವಾಗಬೇಕು: ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಅವರು ಮಾತನಾಡಿ, ನಮ್ಮ ಬದುಕು ಎಂಬುದು ಮತ್ತೊಬ್ಬರಿಗೆ ನೆರಳು ಆಶ್ರಯ ನೆರಳು ಕೊಡುವ ಮರದಂತೆ ಆಗಬೇಕು. ಆಗ ನೆಮ್ಮದಿಯೊಂದಿಗೆ ಪುಣ್ಯವೂ ಸಿಗುತ್ತದೆ. ಅಲ್ಲದೆ ಓರ್ವ ಕಲಾವಿದನ ಕಷ್ಟ ನಷ್ಟಗಳನ್ನು…

Read More

UN NETWORKS ಗುಜರಾತ್: 2ನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಪ್ರಮಾಣ ವಚನವನ್ನು ಸ್ವೀಕರಿಸಿದರು. ಉಪಮುಖ್ಯಮಂತ್ರಿಯಾಗಿ ನಿತಿನ್ ಪಟೀಲ್ ಪ್ರಮಾಣ ವಚನ ಸ್ವೀಕರಿಸಿದರು. ಗುಜರಾತ್ ರಾಜ್ಯಪಾಲ ಓಂ. ಪ್ರಕಾಶ್ ಕೊಹ್ಲಿ ಪ್ರತಿಜ್ಞಾನಿಧಿಯನ್ನು ಭೋದನೆ ಮಾಡಿದರು. ವಿಶೇಷವಾಗಿ ಪ್ರಮಾಣ ವಚನ ಕಾರ್ಯಕ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹಾಗೂ 18 ರಾಜ್ಯಗಳ ಮುಖ್ಯಮಂತ್ರಿಗಳು ವಿಶೇಷ ಕ್ಷಣಕ್ಕೆ ಸಾಕ್ಷಿಯಾದರು. ಇನ್ನು ಬಿಜೆಪಿಯ ಹಿರಿಯ ಎಲ್ ಕೆ. ಕೆ. ಅಡ್ವಾನಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗುಜರಾತ್ ನಲ್ಲಿ 6ನೇ ಭಾರಿಗೆ ಬಿಜೆಪಿ ಸರ್ಕಾರ ರಚನೆಯಾಗಿ ಅಧಿಕಾರಕ್ಕೆ ಬಂದಿದೆ.

Read More

UN NETWORKS ಮಂಗಳೂರು : ಅಯ್ಯಪ್ಪ ವೃತಧಾರಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಗಂಜಿಮಠದಲ್ಲಿ ಅಯ್ಯಪ್ಪ ವೃತಧಾರಿಗೆ ಖಾಸಗಿ ಬಸ್ ಒಂದು ಡಿಕ್ಕಿ ಹೊಡೆದಿತ್ತು. ಈ ಹಿನ್ನಲೆಯಲ್ಲಿ ಬಸ್ ನ ಚಾಲಕ ಮತ್ತು ಅಯ್ಯಪ್ಪ ವೃತಧಾರಿಗೆ ಮಾತುಕತೆ ನಡೆದು ಬಸ್ ಚಾಲಕ ಅಯ್ಯಪ್ಪ ವೃತಧಾರಿಗೆ ನಿಂದನೆ ಮಾಡಿದ್ದಾನೆ. ಈ ಹಿನ್ನಲೆಯಲ್ಲಿ ಅಯ್ಯಪ್ಪ ವೃತಧಾರಿಗಳು ಬಸ್ ಚಾಲಕ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಬಜ್ಪೆ ಪೊಲೀಸರು ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿದ ಹಿನ್ನಲೆಯಲ್ಲಿ ಪೊಲೀಸರು ಅಯ್ಯಪ್ಪ ವೃತಧಾರಿಗಳ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಯ್ಯಪ್ಪ ವೃತಧಾರಿಗಳು ಸೇರಿದಂತೆ ಹತ್ತು ವರ್ಷದ ಮಗುವಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಜ್ಪೆ ಪೊಲೀಸರ ಲಾಠಿ ಚಾರ್ಜ್ ವಿರುದ್ದ ಅಯ್ಯಪ್ಪ ವೃತಧಾರಿಗಳು ಪ್ರತಿಭಟನೆ ನಡೆಸಿದ್ದಾರೆ. `ಯಾರ ಮೇಲೂ ಹಲ್ಲೆ ನಡೆಸಿಲ್ಲ’ ಘಟನೆಯ ಬೆನ್ನಲ್ಲೇ “ಸಾಮಾಜಿಕ ಜಾಲತಾಣದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ” ಎಂಬ…

Read More

UN NETWORKS ಉಳ್ಳಾಲ: ಬಿ.ಜೆ.ಪಿ. ಮಂಗಳೂರು ಮಂಡಲದ ವತಿಯಿಂದ ಭಾರತ ರತ್ನ ,ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆಯನ್ನು ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಮಕ್ಕಳ ಜತೆ ನಡೆಸಲಾಯಿತು. ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಕೆ.ಜಯರಾಮ ಶೆಟ್ಟಿ, ಕ್ಷೇತ್ರ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ನಮಿತಾ ಶ್ಯಾಮ್,ಮಾಜಿ ಅಧ್ಯಕ್ಷ ರಾದ ಚಂದ್ರಶೇಖರ ಉಚ್ಚಿಲ , ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರವೀಂದ್ರ ಶೆಟ್ಟಿ, ಪ್ರಮುಖರಾದ ಸಂಜೀವ ಶೆಟ್ಟಿ, ಸೀತಾರಾಮ ಬಂಗೇರ, ಮುನೀರ್ ಭಾವ ಮನೊಜ್ ಆಚಾರ್ಯ, ಮೋಹನ್ ದಾಸ್ ಶೆಟ್ಟಿ, ಯಶವಂತ ಅಮೀನ್,ಪ್ರಕಾಶ್ ಸಿಂಫೋನಿ, ಹೇಮಂತ್ ಶೆಟ್ಟಿ, ಜೀವನ್ ಕುಮಾರ್ ತೊಕ್ಕೊಟು, ಅಶ್ರಪ್ ಹರೇಕಳ, ಹರಿಯಪ್ಪ ಸಾಲ್ಯಾನ್, ರವಿಶಂಕರ್ ,ಪ್ರೇಮನಾಥ ಪುತ್ರನ್, ಗಣೇಶ್ ಕಾಪಿಕಾಡ್,ಸುರೇಶ್ ಶೆಟ್ಟಿ,ಆನಂದ ಶೆಟ್ಟಿ, ಜೀತೆಂದ್ರ ಶೆಟ್ಟಿ, ದಯಾನಂದ ತೊಕ್ಕೊಟು,ಹರೀಶ್ ಅಂಬ್ಲಮೊಗರು,ರಾಜೇಶ್ ಪಿಲಾರ್,ರಂಜಿತ್,ತಾರನಾಥ, ನವೀನ್ ಮುಂತಾದವರು ಉಪಸ್ಥಿತರಿದ್ದರು . ಬಳಿಕ ಮಕ್ಕಳಿಗೆ ಸಿಹಿತಿಂಡಿ ಮತ್ತು ಉಪಹಾರ ವಿತರಿಸಲಾಯಿತು.

Read More

UN NETWORKS ಮಂಗಳೂರು : ಕುಖ್ಯಾತಿ ಮಂಕಿ ಸ್ಟ್ಯಾಂಡ್ ವಿಜಯ್ ಸಹಚರ ಗೋರಿಗುಡ್ಡೆಯ ರೌಡಿಶೀಟರ್ ಮೆರ್ಲಿಕ್ ಡಿಸೋಜಾ (21) ಎಂಬಾತನನ್ನು ತಂಡವೊಂದು ಬರ್ಬರವಾಗಿ ತಲವಾರಿನಿಂದ ಕಡಿದು ಕ್ರಿಸ್‍ಮಸ್ ದಿನದಂದೇ ಹತ್ಯೆ ನಡೆಸಿದೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯ ಗೋರಿಗುಡ್ಡೆಯ ಪರ್ಪಲ್ ಸ್ಟ್ರೀಟ್‍ನಲ್ಲಿರುವ ಅಜ್ಜಿ ಮನೆಯಲ್ಲಿ ಕ್ರಿಸ್ ಮಸ್ ಆಚರಣೆಗೆಂದು ತಲುಪಿದ್ದ ಮೆಲ್ರಿಕ್ ಡಿಸೋಜಾ ನನ್ನು ಐದು ಮಂದಿಯ ತಂಡ ಹತ್ಯೆ ನಡೆಸಿದೆ. ಸಮೀಪದಲ್ಲಿನ ತನ್ನ ಅಜ್ಜಿ ಮನೆಯ ಎದುರುಗಡೆಯ ಸ್ಥಳವೊಂದರಲ್ಲಿ ಮೆರ್ಲಿಕ್ ಡಿಸೋಜಾ ಕುಲಿತುಕೊಂಡಿದ್ದ ಸಮಯದಲ್ಲಿ ಅಲ್ಲಿಗೆ ಬಂದ ತಂಡವೊಂದು ಏಕಾಏಕಿ ಈತನ ಮೇಲೆ ಮಾರಕಾಯುಧಗಳಿಂದ ಗಂಭೀರವಾಗಿ ಹಲ್ಲೆ ನಡೆಸಿ, ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಈ ಘಟನೆಯೂ ಪೂರ್ವ ದ್ವೇಷದ ಹಿನ್ನಲೆಯಲ್ಲಿ ನಡೆದಿದೆ ಎನ್ನಲಾಗಿದೆ. 2016 ರಲ್ಲಿ ಹಿಂ.ಜಾ.ವೇ ಮುಖಂಡ ಸಂದೀಪ್ ಶೆಟ್ಟಿ ಹತ್ಯೆಗೆ ಮಂಕಿ ಸ್ಟ್ಯಾಂಡ್ ವಿಜಯ್ ನೇತೃತ್ವದ ತಂಡದಲ್ಲಿ ಮೆಲರಿಕ್ ಡಿಸೋಜಾ ಸಹಿತ 6 ಮಂದಿಯ ತಂಡ ಯತ್ನಿಸಿತ್ತು. ಇದೇ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಮೆಲ್ರಿಕ್ 8…

Read More

UN NETWORKS ಮಂಗಳೂರು : ಮಂಗಳೂರು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಸಹಾಯಕ ಪೊಲಿಸ್ ಆಯುಕ್ತರಿಗೆ ಈ ಮೊದಲು ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯಂತೆ ಈ ಮೊದಲು ನಿಖಿಲ್ ಕೆ.ಬಿ., ಶ್ರವಣ ಪೂಜಾರಿ, ರೋಶನ್ ವೇಗಸ್, ಬಾಶೀಂ ಬಶೀರ್ ಎಂಬವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣದಲ್ಲಿ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಂಪನಕಟ್ಟೆಯಕಾರ್ಲ್ ಡಿಕುನ್ಹ ಯಾನೆ ಆಸ್ಟಿನ್(29), ಕುಲಶೇಖರ ಸಿಲ್ವರ್‌ಗೇಟ್‌ನ ಅನೂಪ್ ಡಿ ಅಲ್ಮೇಡಾ (26) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಎಂ ಡಿ ಎಂ ಪೀಲ್ಸ್ -93, ಹುಂಡೈ ಇಯಾನ್ ಕಾರು-1, ಮೊಬೈಲ್ ಪೋನ್-3 ಹಾಗೂ 30,850 ನಗದು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಸೊತ್ತುಗಳ ಮೌಲ್ಯ 2,36,000ರೂ. ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿ ಕಾರ್ಲ್ ಎಂಬಾತನ ಮೇಲೆ 2014 ಮತ್ತು 2015ರಲ್ಲಿ ಎನ್.ಸಿ.ಬಿ. ಬೆಂಗಳೂರು ಇಲ್ಲಿ ಪ್ರಕರಣಗಳು ದಾಖಲಾಗಿವೆ. ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ…

Read More

UN NETWORKS ಮುಡಿಪು : ಮಂಗಳೂರು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಸಭೆಯು ಮಂಗಳವಾರ ಸಂಜೆ 06:00 ಗಂಟೆಗೆ ಸರಿಯಾಗಿ ಮುಡಿಪು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಲಿದೆ. ಅದ್ದರಿಂದ ಈ ಸಭೆಯಲ್ಲಿ ಮುಡಿಪು ಬ್ಲಾಕ್ ಸಮಿತಿಗೆ ಒಳಪಟ್ಟ ಎಲ್ಲಾ ವಲಯ ಮಟ್ಟದ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಹಾಜರಾಗಬೇಕಾಗಿ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರವೂಫ್ ಸಿ.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

UN NETWORKS ಮಂಗಳೂರು: ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಸೋಸಿಯಲ್ ಅಚೀವ್‍ಮೆಂಟ್ ಫಾರಂ ಇದರ ಸದಸ್ಯರು ವೆಲೆನ್ಸಿಯಾದಲ್ಲಿರುವ ಸೈಂಟ್ ಆಂಟನಿ ಪೂವರ್ ಹೋಂ ಎಂಬ ಕ್ರೈಸ್ತರ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಫಾದರ್ ಫ್ರಾನ್ಸಿಸ್‍ಡಿ ಸೋಜರವರಿಗೆ ಹೂಗುಚ್ಛ ನೀಡಿ ಕ್ರಿಸ್‍ಮಸ್ ಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭ ಸಂಸ್ಥೆಯ ಫಾದರ್ ಫ್ರಾನ್ಸಿಸ್‍ಡಿಸೋಜರವರು ಸೋಸಿಯಲ್ ಅಚೀವ್‍ಮೆಂಟ್‍ನ ಸದಸ್ಯರ ಕಾರ್ಯವನ್ನು ಮೆಚ್ಚಿಕೊಂಡರು. ಬಳಳಿಕ ಮಾತನಾಡಿದ ಅವರು ಹಬ್ಬ ಹರಿದಿನಗಳಲ್ಲಿ ಬೇರೆ ಬೇರೆ ಧರ್ಮದವರು ಪರಸ್ಪರ ಶುಭಾಶಯ ಕೋರುವಿಕೆ, ಸಿಹಿತಿಂಡಿ ವಿತರಣೆ ಮೋದಲಾದ ಕಾರ್ಯಕ್ರಮಗಳು ನಡೆಯುತ್ತವೆ. ಧರ್ಮಗಳ ಮಧ್ಯೆ ನಂಬಿಕೆ, ಪ್ರೀತಿ, ವಿಶ್ವಾಸ, ಸಹೋದರತೆ, ಸೌಹಾರ್ದತೆ ಕಡಿಮೆಯಾಗದಂತೆ ಸಮಾಜಿಕ ಮೌಲ್ಯಗಳನ್ನು ಕಾಪಾಡಬೇಕಾದ ಅವಶ್ಯಕತೆ ಇಂದಿನ ದಿನಗಳಲ್ಲಿ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನಾಸಿರ್ ಸಾಮಣಿಗೆ, ಸಂಚಾಲಕ, ನಿಯಾಝ್ ಸಾಮಣಿಗೆ, ಪತ್ರಕರ್ತ ಬಶೀರ್ ಕಲ್ಕಟ್ಟ, ಅಡ್ವೋಕೇಟ್ ಫೈಝಲ್, ಪ್ರ. ಕಾರ್ಯದರ್ಶಿ ಇಬ್ರಾಹಿಂ ಖಲೀಲ್, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಖಾದರ್ ಅಡ್ಕರೆ, ಉದ್ಯಮಿ ಅಜೀಂ ಕಂಕನಾಡಿ, ಮುಸ್ತಫಾ ಪಟ್ಲ,…

Read More

UN NETWORKS ತೊಕ್ಕೊಟ್ಟು: ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನಲ್ಲಿ ಸಂಭ್ರಮದ ಕ್ರಿಸ್‍ಮಸ್ ಹಬ್ಬವನ್ನು ಭಾನುವಾರ ರಾತ್ರಿ ಆಚರಿಸಲಾಯಿತು.                                              ಚಿತ್ರಗಳು: ಪಚ್ಚು ಪೆರ್ಮನ್ನೂರು

Read More

UN NETWORKS ಕೊಲ್ಯ: ಕಾರೊಂದು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಗಾಯಗೊಂಡ ಘಟನೆ ರಾ.ಹೆ.66 ರ ಕೋಟೆಕಾರು ಸಮೀಪ ಸಂಭವಿಸಿದೆ. ಮಂಗಳೂರಿನಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಕಾರು ರಸ್ತೆ ಬದಿಯಲ್ಲಿ ಸೈಕಲಿನಲ್ಲಿ ಬರುತ್ತಿದ್ದ ಬಾಲಕನಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸೈಕಲ್ ಛಿದ್ರವಾಗಿದ್ದು, ಬಾಲಕ ಕಾರಿನ ಗಾಜಿಗೆ ಎಸೆಯಲ್ಪಟ್ಟು ಅಲ್ಲಿಂದ ದೂರದ ಪೊದೆಯೊಂದಕ್ಕೆ ಎಸೆಯಲ್ಪಟ್ಟಿದ್ದಾನೆ. ಸಣ್ಣಪುಟ್ಟ ಗಾಯಗೊಂಡ ಬಾಲಕನನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More